Tag: BSY yeddyurappa

  • ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿದ್ದಾರೆ, ರಾಜೀನಾಮೆ ನೀಡಬೇಕು: ಶೋಭಾ ಕರಂದ್ಲಾಜೆ ಆಗ್ರಹ

    ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿದ್ದಾರೆ, ರಾಜೀನಾಮೆ ನೀಡಬೇಕು: ಶೋಭಾ ಕರಂದ್ಲಾಜೆ ಆಗ್ರಹ

    ನವದೆಹಲಿ: ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿದ್ದಾರೆ. ಅವರು ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆಗ್ರಹಿಸಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ನೋಟಿಸ್‌ಗೆ ಸಿಎಂ ಭಯಗೊಂಡಿದ್ದಾರೆ. ಇಂದು ಸಂಪುಟ ಸಭೆಯಲ್ಲಿ ಗವರ್ನರ್ ವಿರುದ್ಧ ನಿರ್ಣಯ ತೆಗೆದುಕೊಂಡಿದ್ದಾರೆ. ಕಾನೂನಿನ ವಿರುದ್ಧ, ಸಂವಿಧಾನದ ವಿರುದ್ಧ ರಾಜ್ಯ ಸರ್ಕಾರ ಕೆಲಸ ಮಾಡಿದೆ. ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಹೆದರುತ್ತಿದ್ದೀರಿ ಎಂದು ಸಚಿವೆ ಪ್ರಶ್ನಿಸಿದ್ದಾರೆ.

    ನೀವು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ. ನಿರಪರಾಧಿ ಎಂದಾದರೆ ಮತ್ತೆ ಅಧಿಕಾರ ಹಿಡಿಯಿರಿ. ಆದರೆ ರಾಜ್ಯಪಾಲರ ನೋಟಿಸ್‌ಗೆ ನೀವು ಉತ್ತರಿಸಬೇಕು. ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿದ್ದಾರೆ, ರಾಜೀನಾಮೆ ನೀಡಬೇಕು. ರಾಜ್ಯಪಾಲರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಇಂದಿನ ಕ್ಯಾಬಿನೆಟ್ ನಿರ್ಣಯದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಡಿಸಿದ್ದು ಯಾರು? ಇದೆ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರಿಂದ ಯಡಿಯೂರಪ್ಪಗೆ ನೋಟಿಸ್ ಕೊಡಿಸಿತ್ತು. ಅದರಿಂದ ಯಡಿಯೂರಪ್ಪನವರು ಸಂಕಷ್ಟ ಅನುಭವಿಸಿದ್ದರು ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

    ಬಿಜೆಪಿ ಪಾದಯಾತ್ರೆ ಮಾಡೇ ಮಾಡುತ್ತದೆ. ಜನರು ಬರದೆ ಇರುವಂತೆ ತಡೆಯಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಒಬ್ಬರಿರಬಹುದು, ಇಬ್ಬರಿರಬಹುದು ಪಾದಯಾತ್ರೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.

  • ತನ್ನ ಬಗೆಗಿನ ಸಿನಿಮಾ ನಿರ್ಮಾಣಕ್ಕೆ ಬಿಎಸ್‍ವೈ ಹೇಳಿದ್ದು ಹೀಗೆ

    ತನ್ನ ಬಗೆಗಿನ ಸಿನಿಮಾ ನಿರ್ಮಾಣಕ್ಕೆ ಬಿಎಸ್‍ವೈ ಹೇಳಿದ್ದು ಹೀಗೆ

    ಕಲಬುರಗಿ: ಹೆಚ್‍ಡಿಕೆ ಜೀವನ ಚಿತ್ರ ಬೆನ್ನಲ್ಲೇ ಬಿಎಸ್‍ವೈ ನೈಜಜೀವನ ಚಿತ್ರ ನಿರ್ಮಾಣವಾಗಲಿದೆ ಅನ್ನೋ ಮಾತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ, ನನ್ನ ಬಗ್ಗೆ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ. ಸಿನಿಮಾ ಮಾಡುವ ಬಗ್ಗೆ ನನ್ನನ್ನು ಅನೇಕರು ಒತ್ತಾಯಿಸಿದ್ದಾರೆ. ಆದ್ರೆ ಅವರಿಗೆ ನಾನು ಒಪ್ಪಿಗೆ ನೀಡಿಲ್ಲಾ. ಅದರ ಅವಶ್ಯಕತೆ ಕೂಡ ನನಗಿಲ್ಲಾ ಅಂತಾ ಸ್ಪಷ್ಟಪಡಿಸಿದ್ದಾರೆ.

    ರಾಜ್ಯದಲ್ಲಿ ಚುನಾವಣೆ ನಡೆಯುವ ಸಮಯ ಸಮೀಪಿಸುತ್ತಿದೆ. ಹೀಗಾಗಿ ಎಲ್ಲರೂ ಚುನಾವಣೆಯತ್ತ ಗಮನಹರಿಸೋಣ ಅಂತಾ ಹೇಳಿದ್ದಾರೆ.

    ಬಿಎಸ್ ಯಡಿಯೂರಪ್ಪ ಅವರು ಬೆಳ್ಳೆತೆರೆ ಮೇಲೆ ರಾರಾಜಿಸಲಿದ್ದಾರೆ. ಬಿಎಸ್ ಯಡಿಯೂರಪ್ಪ ಪಾತ್ರಕ್ಕೆ ನಟ ಉಪೇಂದ್ರ ಬಣ್ಣಹಚ್ಚೋ ಸಾಧ್ಯತೆಗಳಿವೆ. ರುದ್ರೇಶ್, ಜಿ. ಮರಿಸ್ವಾಮಿ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರಲಿದೆ. ಬಿಎಸ್‍ವೈ ಚಿತ್ರಕ್ಕೆ ನಿರ್ದೇಶಕ ಎಂಎಸ್ ರಮೇಶ್ ಆಕ್ಷನ್ ಕಟ್ ಹೇಳಲಿದ್ದಾರೆ. ಯಡಿಯೂರಪ್ಪ ಅವರ ಅನುಮತಿಗಾಗಿ ನಿರ್ಮಾಪಕರು ಕಾಯ್ತಾ ಇದ್ದಾರೆ. ಬಿಎಸ್ ವೈ ಅನುಮತಿ ನೀಡಿದ ತಕ್ಷಣವೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ರುದ್ರೇಶ್ ಹೇಳಿದ್ದರು. ಆದ್ರೆ ಇದೀಗ ಬಿಎಸ್ ವೈ ತನ್ನ ಜೀವನ ಚಿತ್ರಕ್ಕೆ ಅನುಮತಿಯಿಲ್ಲ ಅಂದಿದ್ದಾರೆ.