Tag: BSY Canteen

  • ನಿರ್ಧಾರದ ವೇಳೆ ಸ್ವಲ್ಪ ಕನ್‍ಫ್ಯೂಸ್ ಆಯ್ತು – ಕರಂದ್ಲಾಜೆ

    ನಿರ್ಧಾರದ ವೇಳೆ ಸ್ವಲ್ಪ ಕನ್‍ಫ್ಯೂಸ್ ಆಯ್ತು – ಕರಂದ್ಲಾಜೆ

    ಬೆಂಗಳೂರು: ಏಪ್ರಿಲ್ 20ರ ನಂತರ ಬೈಕ್ ಸವಾರರಿಗೆ ಓಡಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ತಕ್ಷಣ ಎಚ್ಚೆತ್ತ ಸರ್ಕಾರ ಮತ್ತೆ ಬೈಕ್‍ಗಳ ಓಡಾಟಕ್ಕೆ ಬ್ರೇಕ್ ಹಾಕಿ ಆದೇಶ ಹೊರಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ ಸ್ವಲ್ಪ ಕನ್‍ಫ್ಯೂಸ್ ಆಗಿದೆ ಎಂದರು. ಇದನ್ನೂ ಓದಿ: ‘ಪಬ್ಲಿಕ್’ ಬಿಗ್ ಇಂಪ್ಯಾಕ್ಟ್-ಏ.20ರಿಂದ ಬೈಕ್ ಸಂಚಾರ ಆದೇಶ ವಾಪಸ್

    ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಚೊಕ್ಕಸಂದ್ರ ಹಾಗೂ ಮಲ್ಲಸಂದ್ರ ವಾರ್ಡಿನಲ್ಲಿ ಬಿಎಸ್‍ವೈ ಕ್ಯಾಂಟೀನ್‍ಗೆ ಸಂಸದೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಜನರಿಗೆ ಔಷಧಿ ಹಾಗೂ ಊಟ ನೀಡುವ ನಿಟ್ಟಿನಲ್ಲಿ ನಮ್ಮ ಜನರು ಮುಂದಾಗಿದ್ದಾರೆ. ಮುಂದುವರಿದ ಅಮೆರಿಕ, ಫ್ರಾನ್ಸ್, ಜರ್ಮನಿ ಮುಂತಾದ ದೇಶದಲ್ಲಿ ಕೊರೊನಾ ರೋಗದಿಂದ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ನಮ್ಮ ದೇಶದಲ್ಲಿ ಬಹಳಷ್ಟು ಜನಸಂಖ್ಯೆ ಹಾಗೂ ಬಡತನ ಇದೆ. ಆದರೂ ನಮ್ಮ ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಕೇವಲ ತಬ್ಲಿಘಿ ಜಮಾತ್‍ನಿಂದ ನಮ್ಮ ದೇಶಕ್ಕೆ ಸಮಸ್ಯೆಯಾಗಿದೆ ಎಂದರು.

    ಲಾಕ್‍ಡೌನ್ ವಿಚಾರದಲ್ಲಿ ಸರ್ಕಾರದ ಗೊಂದಲ ಹೇಳಿಕೆ ವಿಚಾರ ಮಾತನಾಡಿದ ಸಂಸದೆ ಶೋಭಾ, ಸ್ವಲ್ಪ ಕನ್‍ಫ್ಯೂಸ್ ನಿಂದ ಆಗಿದೆ. ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡುವವರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಗೊಂದಲ ಆಯ್ತು. ಎಲ್ಲರೂ ಮಾಸ್ಕ್ ಧರಿಸಬೇಕು, ಸುಮ್ಮನೆ ಹೊರಗೆ ಬರಬಾರದು. ಲಾಕ್‍ಡೌನ್ ಉಲ್ಲಂಘನೆ ಮಾಡಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದ ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

    ಈ ವೇಳೆ ಸ್ವತಃ ತಾವೇ ಹಸಿದ ಕೂಲಿ ಕಾರ್ಮಿಕರಿಗೆ ಊಟ ವಿತರಣೆ ಮಾಡಿದರು. ಮಾಜಿ ಶಾಸಕ ಎಸ್, ಮುನಿರಾಜು, ಬಿಬಿಎಂಪಿ ಸದಸ್ಯ, ಲೋಕೇಶ್, ಸರ್ವಮಂಗಳ ಸಿಎಂ ನಾಹರಾಜು, ಚಂದ್ರಶೇಖರ್, ಮುಖಂಡ ಸಿಎಂ ನಾಗರಾಜು, ವಿಜಯ್ ಕುಮಾರ್, ಕೃಷ್ಣ, ಎಂ.ಸಿ ಮುನಿರಾಜು, ಗಂಗರಾಜು ಮತ್ತಿತರರು ಭಾಗಿಯಾಗಿದ್ದರು.