Tag: BSP leader

  • ಹಾಡಹಗಲೇ ಬಿಎಸ್‍ಪಿ ಮುಖಂಡ, ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ

    ಹಾಡಹಗಲೇ ಬಿಎಸ್‍ಪಿ ಮುಖಂಡ, ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಗನ್‍ಗಳು ಸದ್ದು ಮಾಡಿದ್ದು, ಈ ಬಾರಿ ಬಿಎಸ್‍ಪಿ ಮುಖಂಡ ಹಾಗೂ ಸೋದರಳಿಯ ಬಲಿಯಾಗಿದ್ದಾರೆ.

    ಬಿಎಸ್‍ಪಿ ಮುಖಂಡ ಹಜಿ ಅಹ್ಸಾನ್ ಹಾಗೂ ಸೋದರಳಿಯ ಶಾದಾಬ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾದವರು. ಬಿಜ್ನೋರ್ ಜಿಲ್ಲೆಯ ನಜಿಬಾಬಾದ್ ಪಟ್ಟಣದಲ್ಲಿ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದೆ.

    ಈ ಕುರಿತು ನಜಿಬಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಅಮೇಠಿಯ ನೂತನ ಸಂಸದೆ ಸ್ಮೃತಿ ಇರಾನಿ ಅವರ ಆಪ್ತ ಸುರೇಂದ್ರ ಸಿಂಗ್ ಅವರನ್ನು ಶನಿವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಸೋಮವಾರ ಪೊಲೀಸರು ಬಂಧಿಸಿದ್ದು, ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

    ಶನಿವಾರ ರಾತ್ರಿ ಸುರೇಂದ್ರ ಸಿಂಗ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು. ಸ್ಮೃತಿ ಇರಾನಿ ಅವರು ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರ ಮೆರವಣಿಗೆ ವೇಳೆ ಹೆಗಲು ನೀಡಿದ್ದರು.

  • ಪ್ರೇಯಸಿಗಾಗಿ ಬಿಎಸ್‍ಪಿ ಮುಖಂಡನಿಂದ ಪ್ರಶ್ನೆ ಪತ್ರಿಕೆ ಲೀಕ್

    ಪ್ರೇಯಸಿಗಾಗಿ ಬಿಎಸ್‍ಪಿ ಮುಖಂಡನಿಂದ ಪ್ರಶ್ನೆ ಪತ್ರಿಕೆ ಲೀಕ್

    ಲಕ್ನೋ: ಪ್ರೇಯಸಿಗಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ಬಹುಜನ ಸಮಾಜವಾದಿ ಪಕ್ಷದ(ಬಿಎಸ್‍ಪಿ) ನಾಯಕನೊಬ್ಬನು ಯತ್ನಿಸಿದ್ದು, ಆತನಿಗೆ ಸಹಾಯ ಮಾಡಿದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಉತ್ತರ ಪ್ರದೇಶದ ಬಿಎಸ್‍ಪಿ ನಾಯಕ ಫಿರೋಜ್ ಅಲಾಮ್ ಬಂಧಿತ ಆರೋಪಿ. ಈತ ಎಂಬಿಎ ಓದುತ್ತಿದ್ದ ತನ್ನ ಪ್ರೇಯಸಿಗಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ಪ್ರಯತ್ನ ನಡೆಸಿದ್ದನು. ಆಲಿಗಢ್ ಮುಸ್ಲಿಂ ವಿಶ್ವವಿದ್ಯಾನಿಲಯದ(ಎಎಂವಿ) ಸಿಬ್ಬಂದಿ ಸಹಾಯದಿಂದ ಎಂಬಿಎ ಪೇಪರ್ ಲೀಕ್ ಮಾಡುವ ತಯಾರಿ ನಡೆಸಿದ್ದನು. ಪ್ರಶ್ನೆ ಪತ್ರಿಕೆ ತಂದು ಕೊಟ್ಟರೆ ವಿಶ್ವವಿದ್ಯಾಲಯದಲ್ಲಿ ಕೆಲಸ ಖಾಯಂಗೊಳಿಸುತ್ತೇನೆ ಎಂದು ಆಫರ್ ನೀಡಿದ್ದನು.

    ಪ್ರೇಯಸಿಗೆ ಪರೀಕ್ಷೆ ಮೊದಲು ಪ್ರಶ್ನೆ ಪತ್ರಿಕೆ ನೀಡುವುದಾಗಿ ಫಿರೋಜ್ ಭರವಸೆ ನೀಡಿದ್ದನಂತೆ. ಆದರೆ ಮೊದಲು ಎಎಂವಿ ಸಿಬ್ಬಂದಿ ನಕಲಿ ಪ್ರಶ್ನೆ ಪತ್ರಿಕೆ ನೀಡಿದ್ದ ಎನ್ನಲಾಗಿದೆ. ಬಳಿಕ ಇದು ಪ್ರೇಯಸಿಗೆ ತಿಳಿದು ಗಲಾಟೆ ಮಾಡಿದ್ದಾಳೆ. ಹೀಗಾಗಿ ಸ್ನೇಹಿತ ಹೈದರ್ ಜೊತೆ ಸೇರಿ ಫಿರೋಜ್ ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ಪುನಃ ಪ್ರಶ್ನೆ ಪತ್ರಿಕೆ ತೆರಲು ಹೇಳಿದ್ದಾನೆ. ಅಲ್ಲದೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ವಾಟ್ಸಾಪ್ ಗ್ರೂಪ್ ಕೂಡ ಮಾಡಲಾಗಿತ್ತು.

    ಲೀಕ್ ಆದ ಒಂದು ಪ್ರಶ್ನೆ ಪತ್ರಿಕೆಗೆ 2 ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ಇನ್ನೇನು ಪ್ರಶ್ನೆ ಪತ್ರಿಕೆಗೆ ಲೀಕ್ ಮಾಡುವಷ್ಟರಲ್ಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಎಎಂವಿ ಸಿಬ್ಬಂದಿ ಹಾಗೂ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಫಿರೋಜ್ ಮಾತ್ರ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದಾನೆ.