Tag: BSF

  • ಬಿಎಸ್‍ಎಫ್ ತರಬೇತಿ ಶಿಬಿರದಲ್ಲಿ ಪ್ಲೇ ಆಯ್ತು ಸೆಕ್ಸ್ ವಿಡಿಯೋ

    ಬಿಎಸ್‍ಎಫ್ ತರಬೇತಿ ಶಿಬಿರದಲ್ಲಿ ಪ್ಲೇ ಆಯ್ತು ಸೆಕ್ಸ್ ವಿಡಿಯೋ

    ಜಲಂಧರ್: ಬಿಎಸ್‍ಎಫ್ ಸೈನಿಕರ ತರಬೇತಿ ಶಿಬಿರದ ಸಭೆ ನಡೆಯುವ ವೇಳೆ ಸ್ಕ್ರೀನ್ ಮೇಲೆ ತರಬೇತಿ ಕುರಿತಾದ ಸಾಕ್ಷ್ಯಚಿತ್ರ ಕಾಣುವ ಬದಲು ಸೆಕ್ಸ್ ವಿಡಿಯೋ ಒಂದು ಪ್ರದರ್ಶನ ಕಂಡಿದ್ದು, ಸ್ಥಳದಲ್ಲಿದ್ದ ತರಬೇತಿದಾರರು ಮುಜುಗುರಕ್ಕೊಳಾಗದ ಸನ್ನಿವೇಶ ಉಂಟಾಗಿದೆ.

    ಪಂಜಾಬ್ ರಾಜ್ಯದ ಫಿರೋಜ್‍ಪುರ್‍ನ 77ನೇ ಬೆಟಾಲಿಯನ್‍ನಲ್ಲಿ ಈ ಘಟನೆ ನಡೆದಿದೆ. ಸೆಕ್ಸ್ ನ ವಿಡಿಯೋ ಸುಮಾರು ಒಂದು ನಿಮಿಷದವರೆಗೂ ಪ್ಲೇ ಆಗಿದೆ ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

    ಕ್ಲಿಪಿಂಗ್ ಪ್ಲೇ ಆಗುವ ವೇಳೆ ಶಿಬಿರದಲ್ಲಿ 12 ಜನ ಮಹಿಳೆಯರು ಹಾಗು 20 ಜನ ಪುರುಷರು ಭಾಗಿಯಾಗಿದ್ದರು. ತರಬೇತಿಯ ಕುರಿತಾದ ಸಾಕ್ಷ್ಯ ಚಿತ್ರದ ಬದಲು ಪೋರ್ನ್ ವಿಡಿಯೋ ಪ್ಲೇ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಬಿಎಸ್‍ಎಫ್‍ನ ಹಿರಿಯ ವಕ್ತಾರ ಡಿಐಜಿ ಆರ್.ಎಸ್.ಕಟರಿಯಾ ಹೇಳಿದ್ದಾರೆ.

     

  • ಸೇನೆ ಕಳಪೆ ಆಹಾರ ನೀಡುತ್ತಿದೆ ಎಂದಿದ್ದ ಬಿಎಸ್‍ಎಫ್ ಯೋಧ ವಜಾ

    ಸೇನೆ ಕಳಪೆ ಆಹಾರ ನೀಡುತ್ತಿದೆ ಎಂದಿದ್ದ ಬಿಎಸ್‍ಎಫ್ ಯೋಧ ವಜಾ

    ನವದೆಹಲಿ: ಭಾರತೀಯ ಸೇನೆ ಯೋಧರಿಗೆ ಕಳಪೆ ಆಹಾರ ನೀಡುತ್ತಿದೆ ಎಂದು ಆರೋಪಿಸಿದ್ದ ಬಿಎಸ್‍ಎಫ್ ಯೋಧ ತೇಜ್ ಬಹದ್ದೂರು ಯಾದವ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

    ತೇಜ್ ಬಹದ್ದೂರು ಯಾದವ್ ಅವರು ಆರೋಪ ಮಾಡಿದ ಬಳಿಕ ಪ್ರತ್ಯೇಕ ತನಿಖೆ ನಡೆಸಲಾಗಿತ್ತು. ಈಗ ಸ್ಟಾಫ್ ಕೋರ್ಟ್ ತನಿಖೆಯ ವರದಿ ಬಂದ ಬಳಿಕ ಬುಧವಾರ ವಜಾಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ತನಿಖೆಯಲ್ಲಿ ಯಾದವ್ ಸುಳ್ಳು ಆರೋಪ ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬಿಎಸ್‍ಎಫ್ ಕಾಯ್ದೆಯ ಪ್ರಕಾರ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ಯಾದವ್ ಮೂರು ತಿಂಗಳ ಒಳಗಡೆ ಮೇಲ್ಮನವಿ ಸಲ್ಲಿಸಬಹುದು ಎಂದು ಅಧಿಕಾರಿ ತಿಳಿಸಿದರು.

    ತೇಜ್ ಬಹದ್ದೂರು ಯಾದವ್ ಜನವರಿಯಲ್ಲಿ ಬಿಎಸ್‍ಎಫ್ ಯೋಧರಿಗೆ ನೀಡುವ ಆಹಾರ ಹೀಗಿದೆ ಎಂದು ಅರೆ ಬೆಂದ ಪರೋಟಾ, ಒಂದು ಲೋಟ ಚಹಾವನ್ನು ತೋರಿಸಿ, ಯೋಧರ ಕಷ್ಟಗಳನ್ನು ಹೇಳಿಕೊಂಡು ಫೇಸ್‍ಬುಕ್‍ನಲ್ಲಿ ವಿಡಿಯೋ ವನ್ನು ಅಪ್‍ಲೋಡ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರದ ಬಗ್ಗೆ ನನ್ನನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಗೂ ಅವರು ಮನವಿಯನ್ನು ಸಲ್ಲಿಸಿದ್ದರು.

    ಬಿಎಸ್‍ಎಫ್ ಐಜಿ ಡಿ.ಕೆ ಉಪಾಧ್ಯಾಯ್ ಯಾದವ್ ಅವರ ಈ ಆರೋಪಕ್ಕೆ ಈ ಹಿಂದೆ ಪ್ರತಿಕ್ರಿಯೆ ನೀಡಿ, 2010ರಲ್ಲಿ ಯೋಧ ತೇಜ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಆದರೆ ಅವರ ಕುಟುಂಬವನ್ನು ಪರಿಗಣಿಸಿ ಅವರನ್ನು ಸೇನೆಯಿಂದ ವಜಾ ಮಾಡಿರಲಿಲ್ಲ ಎಂದು ತಿಳಿಸಿದ್ದರು.