Tag: BSF

  • BSF ಯೋಧರನ್ನು ಬಲಿ ಪಡೆದಿದ್ದ ಉಗ್ರ ಪಾಕ್‌ನಲ್ಲಿ ಗುಂಡಿನ ದಾಳಿಗೆ ಬಲಿ- 2015ರಲ್ಲಿ ನಡೆದಿದ್ದೇನು?

    BSF ಯೋಧರನ್ನು ಬಲಿ ಪಡೆದಿದ್ದ ಉಗ್ರ ಪಾಕ್‌ನಲ್ಲಿ ಗುಂಡಿನ ದಾಳಿಗೆ ಬಲಿ- 2015ರಲ್ಲಿ ನಡೆದಿದ್ದೇನು?

    ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿಯಲ್ಲಿ (Pakistan Karachi) ಅಪರಿಚಿತ ಬಂದೂಕುದಾರಿಗಳಿಂದ ನಡೆದ ಗುಂಡಿನ ದಾಳಿಗೆ 2015ರ ಉಧಂಪುರ ದಾಳಿಯ ಮಾಸ್ಟರ್‌ ಮೈಂಡ್‌ ಲಷ್ಕರ್-ಎ-ತೊಯ್ಬಾ (LET) ಭಯೋತ್ಪಾದಕ ಹಂಜ್ಲಾ ಅದ್ನಾನ್ (Hanzla Adnan) ದುರ್ಮರಣಕ್ಕೀಡಾಗಿದ್ದಾನೆ.

    2015ರಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಧಂಪುರದಲ್ಲಿ BSF ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಯ ಮಾಸ್ಟರ್‌ ಮೈಂಡ್‌ ಇತನೇ ಆಗಿದ್ದ. 2008ರ ನವೆಂಬರ್‌ 26ರಂದು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಲ್ಇಟಿ ಮುಖ್ಯಸ್ಥ ಹಫೀಜ್ ಸಯೀದ್‌ನ ನಿಕಟವರ್ತಿಯೂ ಆಗಿದ್ದ ಎಂದು ಪರಿಗಣಿಸಲಾಗಿದೆ.

    ಇತ್ತೀಚೆಗೆ ಹಂಝ್ಲಾ ಅದ್ನಾನ್ ತನ್ನ ಕಾರ್ಯಾಚರಣೆಯ ನೆಲೆಯನ್ನು ರಾವಲ್ಪಿಂಡಿಯಿಂದ ಕರಾಚಿಗೆ ಬದಲಾಯಿಸಿದ್ದ. ಕಳೆದ ಎರಡು ದಿನಗಳ ಹಿಂದೆ ತಡರಾತ್ರಿಯಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ನಡೆದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಈಗ ವಿಶ್ವದ ಶಕ್ತಿಶಾಲಿ ಮಹಿಳೆ – ನಂ.1 ಸ್ಥಾನದಲ್ಲಿ ಯಾರಿದ್ದಾರೆ?

    ಅಪರಿಚಿತರು ಗುಂಡಿನ ದಾಳಿ ನಡೆಸಿದಾಗ ಹಂಜ್ಲಾ ಅದ್ನಾನ್‌ಗೆ ನಾಲ್ಕು ಬುಲೆಟ್‌ ತಗುಲಿತ್ತು, ಇದರಿಂದ ತೀವ್ರ ರಕ್ತಸ್ರಾವವಾಗಿತ್ತು. ಈ ಸುಳಿವನ್ನು ಬಿಟ್ಟುಕೊಡದ ಪಾಕಿಸ್ತಾನ ಸೇನೆ ರಹಸ್ಯವಾಗಿ ಕರಾಚಿಯ ಆಸ್ಪತ್ರೆಗೆ ಕರೆದೊಯ್ದಿತ್ತು. ಎರಡು ದಿನಗಳ ನಂತ್ರ ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್‌ 5ರಂದು ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.

    2015ರಲ್ಲಿ ಏನಾಗಿತ್ತು?
    ಉಗ್ರ ಹಂಝ್ಲಾ ಅದ್ನಾನ್ 2015ರಲ್ಲಿ ಉಧಂಪುರದಲ್ಲಿ ಭಾರತೀಯ ಬಿಎಸ್‌ಎಫ್‌ ಯೋಧರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದರು. 13 ಮಂದಿ ಗಾಯಗೊಂಡಿದ್ದರು. ಈ ಬಗ್ಗೆ ಎನ್‌ಐಎ, ಬಿಎಸ್‌ಎಫ್‌ ತನಿಖೆ ನಡೆಸಿ ಆರೋಪಪಟ್ಟಿಯನ್ನೂ ಸಲ್ಲಿಸಿತ್ತು. ಇದನ್ನೂ ಓದಿ: ಭಾರತದ ವಿರುದ್ಧ ಉಗ್ರ ಚಟುವಟಿಕೆಗಳಲ್ಲಿ ಭಾಗಿ – ಖಲಿಸ್ತಾನಿ ಭಯೋತ್ಪಾದಕ ಪಾಕ್‌ನಲ್ಲಿ ಸಾವು

    ಆ ನಂತರವೂ ಉಗ್ರನ ಆಕ್ರೋಶ ಮುಂದುವರಿದಿತ್ತು. 2016ರಲ್ಲಿಯೂ ಜಮ್ಮು ಮತ್ತು ಕಾಶ್ಮೀರದ ಪಾಂಪೋರ್‌ ಪ್ರದೇಶದಲ್ಲಿ ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಬೆಂಗಾವಲು ಪಡೆ ಮೇಲೆ ಎಲ್‌ಇಟಿ ಭಯೋತ್ಪಾದಕ ದಾಳಿ ನಡೆಸಿ, 8 ಸಿಆರ್‌ಪಿಎಫ್ ಯೋಧರನ್ನು ಹತ್ಯೆಗೈದಿದ್ದತ್ತು. 22 ಮಂದಿ ಗಾಯಗೊಂಡಿದ್ದರು. ಈ ದಾಳಿಯಲ್ಲೂ ಹಂಝ್ಲಾ ಅದ್ನಾನ್ ಪ್ರಮುಖ ಪಾತ್ರ ವಹಿಸಿದ್ದ ಎಂದು ಅಧಿಕಾರಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ನೈಜೀರಿಯಾದಲ್ಲಿ ಗುರಿ ತಪ್ಪಿದ ಸೇನಾ ಡ್ರೋನ್‌ ದಾಳಿ – 85 ಮಂದಿ ನಾಗರಿಕರು ಬಲಿ

  • ಅಕ್ರಮವಾಗಿ ಗಡಿ ನುಸುಳಿದ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ ಬಿಎಸ್‌ಎಫ್

    ಅಕ್ರಮವಾಗಿ ಗಡಿ ನುಸುಳಿದ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ ಬಿಎಸ್‌ಎಫ್

    ಗಾಂಧಿನಗರ: ಅಕ್ರಮವಾಗಿ ಗಡಿ ನುಸುಳಿದ ಪಾಕಿಸ್ತಾನಿ ಪ್ರಜೆಯನ್ನು (Pakistan Citizen) ಗಡಿ ಭದ್ರತಾ ಪಡೆ (BSF) ಗುಜರಾತ್‌ನಲ್ಲಿ (Gujarat) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಾದಿನ್ ಜಿಲ್ಲೆಯ ನಿವಾಸಿ ಮೆಹಬೂಬ್ ಅಲಿ (30) ಎಂಬಾತನನ್ನು ಬಂಧಿಸಲಾಗಿದೆ. ಬಿಎಸ್‌ಎಫ್ ಪ್ರಕಾರ, ಸೆಪ್ಟೆಂಬರ್ 23ರಂದು ಭದ್ರತಾ ಪಡೆ ಗಸ್ತು ತಿರುಗುತ್ತಿದ್ದ ವೇಳೆ ಭಾರತ-ಪಾಕಿಸ್ತಾನ ಗಡಿಯ ಬಳಿ ಅನುಮಾನಾಸ್ಪದ ಚಲನವಲನವನ್ನು ಗಮನಿಸಿತು. ಇದನ್ನೂ ಓದಿ: ಐಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರಿಂದ ಹಲ್ಲೆ

    ತಕ್ಷಣ ಭದ್ರತಾ ಪಡೆ ಗಡಿ ಬಳಿ ತೆರಳಿ ಪಾಕಿಸ್ತಾನದ ಪ್ರಜೆಯನ್ನು ಬಂಧಿಸಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ತಗೋ ನಿನ್ನ ಲವ್ವರ್ ತಲೆ ತಂದಿದ್ದೇನೆ- ಪತ್ನಿ ಮನೆ ಮುಂದೆ ರುಂಡ ಎಸೆದ ಪತಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಡಿದಾಟಿ ಬಂದ ಬಾಂಗ್ಲಾ ಯೋಧರನ್ನು ಓಡಿಸಿದ ಮೇಘಾಲಯ ಗ್ರಾಮಸ್ಥರು

    ಗಡಿದಾಟಿ ಬಂದ ಬಾಂಗ್ಲಾ ಯೋಧರನ್ನು ಓಡಿಸಿದ ಮೇಘಾಲಯ ಗ್ರಾಮಸ್ಥರು

    ಶಿಲ್ಲಾಂಗ್‌: ಗಡಿದಾಟಿ ಬಂದ ಬಾಂಗ್ಲಾ ದೇಶದ ಯೋಧರನ್ನು (Bangladesh Border Guards) ಮೇಘಾಲಯದ ಹಳ್ಳಿಯೊಂದರ (Meghalaya Villagers) ಜನ ಓಡಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶ (ಬಿಜಿಬಿ) ಪಡೆದ ಇಬ್ಬರು ಯೋಧರು ಮೇಘಾಲಯದ ಗಾರೋಹಿಲ್ಸ್‍ನ ರೋಂಗಾರ ಎಂಬ ಹಳ್ಳಿಗೆ ಬುಧವಾರ ಸಂಜೆ ರೈಫಲ್ ಹಿಡಿದು ನುಗ್ಗಿದ್ದಾರೆ. ಸೈನಿಕರನ್ನು ನೋಡಿದ ಗ್ರಾಮಸ್ಥರು ಆರಂಭದಲ್ಲಿ ಭಯ ಬಿದ್ದಿದ್ದಾರೆ. ಆದರೆ ತಡ ಮಾಡದೇ ಎಚ್ಚೆತ್ತ ನಿವಾಸಿಗಳು ಇಬ್ಬರು ಬಾಂಗ್ಲಾ ಯೋಧರನ್ನು ಓಡಿಸಿಕೊಂಡು ಹೋಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಂಗ್ಲಾ ಸೇನೆ, ಅಪರಾಧಿಗಳನ್ನು ಹಿಡಿಯುವ ಭರದಲ್ಲಿ ನಮ್ಮ ಯೋಧರು ಅವರಿಗೆ ಅರಿವಿಲ್ಲದೆಯೇ ಗಾಡಿ ದಾಟಿ ಹಳ್ಳಿಗೆ ಹೋಗಿದ್ದಾರೆ ಎಂದು ಸಮಜಾಯಿಷಿ ನೀಡಿದೆ.

     

    ಗ್ರಾಮವು ಗಡಿ ಭಾಗದಲ್ಲಿರುವುದರಿಂದ ಅಪರಾಧಿಗಳನ್ನು ಬೆನ್ನಟ್ಟುವ ಸಂದರ್ಭದಲ್ಲಿ ಅವರು ಭಾರತೀಯ ಭೂಪ್ರದೇಶವನ್ನು ದಾಟಿರುವುದು ಅವರಿಗೆ ತಿಳಿದಿರಲಿಲ್ಲ. ಗಡಿ ಉಲ್ಲಂಘನೆಗೆ ಸಂಬಂಧಿಸಿದಂತೆ ಧ್ವಜ ಸಭೆಯನ್ನು ನಡೆಸಲಾಗಿದೆ. ಆದರೆ ಅಲ್ಲಿ ಯಾವುದೇ ಭಾರತೀಯ ಪ್ರಜೆಗೆ ಕಿರುಕುಳ ನೀಡಿಲ್ಲ ಎಂದು ಬಿಎಸ್‌ಎಫ್‌ನ (BSF) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮಣಿಪುರದಲ್ಲಿ ಕುಕಿ ದಂಗೆಕೋರರೊಂದಿಗೆ ಬಿಎಸ್‌ಎಫ್ ಗುಂಡಿನ ಚಕಮಕಿ – ಓರ್ವ ಯೋಧ ಸಾವು, ಇಬ್ಬರಿಗೆ ಗಾಯ

    ಮಣಿಪುರದಲ್ಲಿ ಕುಕಿ ದಂಗೆಕೋರರೊಂದಿಗೆ ಬಿಎಸ್‌ಎಫ್ ಗುಂಡಿನ ಚಕಮಕಿ – ಓರ್ವ ಯೋಧ ಸಾವು, ಇಬ್ಬರಿಗೆ ಗಾಯ

    ಇಂಪಾಲ: ಮಣಿಪುರದ (Manipur) ಸೆರೌ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಕುಕಿ ದಂಗೆಕೋರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ (Encounter) ಗಡಿ ಭದ್ರತಾ ಪಡೆ (BSF) ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

    ಕಾಕ್ಚಿಂಗ್ (Kakching) ಜಿಲ್ಲೆಯ ಸುಗ್ನುವಿನ ಸೆರೌ (Serou) ಪ್ರದೇಶದ ಶಾಲೆಯೊಂದರಲ್ಲಿ ದಂಗೆಕೋರರು ಮತ್ತು ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕಾನ್‌ಸ್ಟೇಬಲ್ ರಂಜಿತ್ ಯಾದವ್ ಎಂಬ ಯೋಧನಿಗೆ ಗುಂಡು ತಗುಲಿತ್ತು. ತಕ್ಷಣ ಅವರನ್ನು ಕಾಕ್ಚಿಂಗ್ ಜೀವನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಭಯೋತ್ಪಾದಕರ ಭೀತಿ- ಭದ್ರತಾ ಪಡೆಗಳೇ ಟಾರ್ಗೆಟ್

    ಮಂಗಳವಾರ ಮುಂಜಾನೆ 4:15ರ ಸುಮಾರಿಗೆ ಸೆರೌ ಪ್ರಾಕ್ಟಿಕಲ್ ಹೈಸ್ಕೂಲ್‌ನಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಎಫ್ ಪಡೆಗಳನ್ನು ಗುರಿಯಾಗಿಸಿಕೊಂಡು ಕುಕಿ ದಂಗೆಕೋರರು (Kuki Miscreants) ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಲ್ಲದೇ ಗಾಯಗೊಂಡಿರುವ ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ಮಂತ್ರಿಪುಖ್ರಿಗೆ ವಾಯು ಸ್ಥಳಾಂತರಿಸಲಾಗಿದೆ. ಶೋಧ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ ಎಂದು ದಿಮಾಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಸೇನೆಯ ಸ್ಪಿಯರ್‌ಕಾರ್ಪ್ಸ್ ಟ್ವಿಟ್ಟರ್‌ನಲ್ಲಿ ಹೇಳಿದೆ. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ

    ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಯುನೈಟೆಡ್ ಕುಕಿ ಲಿಬರೇಶನ್ ಫ್ರಂಟ್ (UKLF) ದಂಗೆಕೋರರು ಮಣಿಪುರದ ಕಕ್ಚಿಂಗ್ ಜಿಲ್ಲೆಯ ಸುಗ್ನು ಎಂಬಲ್ಲಿ ತಂಗಿದ್ದರು. ಶನಿವಾರ ಮಧ್ಯರಾತ್ರಿ ಸೆರೌನಲ್ಲಿ ಕಾಂಗ್ರೆಸ್ ಶಾಸಕ ರಂಜಿತ್ ಮನೆ ಸೇರಿದಂತೆ 100ಕ್ಕೂ ಹೆಚ್ಚು ಮನೆಗಳನ್ನು ದಂಗೆಕೋರರು ಸುಟ್ಟುಹಾಕಿದ್ದರು. ಈ ಘಟನೆಯ ಬಳಿಕ ದಂಗೆಕೋರರು ತಂಗಿದ್ದ ಶಿಬಿರಕ್ಕೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!

    ಮಣಿಪುರ ರಾಜಧಾನಿ ಇಂಪಾಲ್‌ನಲ್ಲಿ ಭಾರತೀಯ ಸಂವಿಧಾನದಡಿಯಲ್ಲಿ ಮೀಟಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳಲ್ಲಿ ಸೇರಿಸುವ ಕುರಿತು ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಮೇ 3ರಂದು ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿದ್ದವು. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

  • ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಚಂಡೀಗಢ: ಡ್ರೋನ್ ಮೂಲಕ ಕಳ್ಳಸಾಗಾಣಿಕೆ (Smuggling) ಮಾಡುತ್ತಿದ್ದ ಪಾಕಿಸ್ತಾನದ (Pakistan) ಎರಡು ಡ್ರೋನ್‌ಗಳನ್ನು (Drone) ಪಂಜಾಬ್‌ನ (Punjab) ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆಯು ಹೊಡೆದುರುಳಿಸಿದೆ.

    ಮೇ 19ರಂದು ರಾತ್ರಿ 8:55ರ ಸುಮಾರಿಗೆ ಜಿಲ್ಲೆಯ ಅಮೃತಸರದ ಉದಾರ್ ಧರಿವಾಲ್ ಗ್ರಾಮದ ಬಳಿಯಿರುವ ಪ್ರದೇಶವೊಂದರಲ್ಲಿ ಡ್ರೋನ್ ಶಬ್ದ ಕೇಳಿಬರುತ್ತಿತ್ತು. ಅಲ್ಲಿದ್ದ ಗಡಿ ಭದ್ರತಾ ಪಡೆ (BSF) ತಕ್ಷಣವೇ ಗುಂಡುಗಳನ್ನು ಹಾರಿಸಿ ಡ್ರೋನ್ ಅನ್ನು ಹೊಡೆದುರುಳಿಸಿದರು. ಬಳಿಕ ಶೋಧ ನಡೆಸಿದ ಅವರು, ಮುರಿದ ಸ್ಥಿತಿಯಲ್ಲಿ ಪತ್ತೆಯಾದ ಕಪ್ಪು ಬಣ್ಣದ ಡ್ರೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿವಿ ಕ್ಯಾಂಪಸ್‌ನಲ್ಲೇ ಸ್ನೇಹಿತೆಯನ್ನು ಶೂಟ್ ಮಾಡಿ ಕೊಂದ ವಿದ್ಯಾರ್ಥಿ – ಬಳಿಕ ತಾನೂ ಆತ್ಮಹತ್ಯೆ

    ವಶಪಡಿಸಿಕೊಂಡ ಡ್ರೋನ್‌ನಲ್ಲಿ ಕಬ್ಬಿಣದ ಉಂಗುರದ ಜೊತೆಗೆ ಎರಡು ಪ್ಯಾಕೆಟ್ ಮಾದಕವಸ್ತುಗಳು (Drugs) ಪತ್ತೆಯಾಗಿವೆ. ಪತ್ತೆಯಾದ ಮಾದಕವಸ್ತುಗಳು ಸುಮಾರು 2.6 ಕೆಜಿ ತೂಕವನ್ನು ಹೊಂದಿತ್ತು. ವಶಪಡಿಸಿಕೊಂಡ ಮತ್ತೊಂದು ಡ್ರೋನ್‌ನಲ್ಲಿಯೂ ಸಹ ಮಾದಕ ವಸ್ತುಗಳಿರುವ ಬ್ಯಾಗ್ ಪತ್ತೆಯಾಗಿದ್ದು, ಭದ್ರತಾ ಪಡೆ ಜಪ್ತಿ ಮಾಡಿಕೊಂಡಿದೆ. ಇದನ್ನೂ ಓದಿ: ಮಗನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ ಪೋಷಕರು ಅರೆಸ್ಟ್

    ಭದ್ರತಾ ಪಡೆ ಹೊಡೆದುರುಳಿಸಿದ ಎರಡನೇ ಡ್ರೋನ್ ಇದಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬಿಎಸ್‌ಎಫ್ ಹೇಳಿದೆ. ಇದನ್ನೂ ಓದಿ: ಮಸ್ಕತ್‌ನಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – 2.28 ಕೋಟಿ ರೂ. ಮೌಲ್ಯದ ಚಿನ್ನದ ಧೂಳು ವಶ

  • ಬಾಂಗ್ಲಾದಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – 4.24 ಕೋಟಿ ರೂ. ಮೌಲ್ಯದ ಚಿನ್ನ ವಶ

    ಬಾಂಗ್ಲಾದಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – 4.24 ಕೋಟಿ ರೂ. ಮೌಲ್ಯದ ಚಿನ್ನ ವಶ

    (ಸಾಂದರ್ಭಿಕ ಚಿತ್ರ)

    ಕೋಲ್ಕತ್ತಾ: ಚಿನ್ನ ಕಳ್ಳಸಾಗಾಟ (Smuggling) ಮಾಡುತ್ತಿದ್ದ ಬಾಂಗ್ಲಾದೇಶದ (Bangladesh) ನಿವಾಸಿಗಳನ್ನು ಗಡಿ ಭದ್ರತಾ ಪಡೆ ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ಪೆಟ್ರಾಪೋಲ್‌ನಲ್ಲಿ ಬಂಧಿಸಿ 4.24 ಕೋಟಿ ರೂ. ಮೌಲ್ಯದ 52 ಚಿನ್ನದ ಬಿಸ್ಕತ್ತುಗಳನ್ನು (Gold Biscuit) ವಶಪಡಿಸಿಕೊಂಡಿದ್ದಾರೆ.

    ಬಿಎಸ್‌ಎಫ್ (BSF) ಅಧಿಕಾರಿಗಳ ಪ್ರಕಾರ ಆರೋಪಿ ಬಸ್ ಚಾಲಕನನ್ನು ಮುಸ್ತಫಾ ಎಂದು ಗುರುತಿಸಲಾಗಿದ್ದು, ಆತನ ಸಹಾಯಕನನ್ನು ಮತ್ತೂರ್ ರೆಹಮಾನ್ ಅಕಂಡಾ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬಾಂಗ್ಲಾದೇಶದ ನಿವಾಸಿಗಳಾಗಿದ್ದು, ರಾಯಲ್ ಫ್ರೆಂಡ್‌ಶಿಪ್ ಇಂಟರ್‌ನ್ಯಾಷನಲ್ ಪ್ಯಾಸೆಂಜರ್ ಬಸ್ ಮೂಲಕ ಬಾಂಗ್ಲಾದೇಶದಿಂದ ಭಾರತಕ್ಕೆ ಚಿನ್ನ ಸಾಗಾಟ ಮಾಡುತ್ತಿದ್ದರು. ಕಳ್ಳಸಾಗಾಣಿಕೆಯ ಸುಳಿವು ದೊರೆತ ಗಡಿ ಭದ್ರತಾ ಪಡೆಯು ಕಾರ್ಯಾಚರಣೆಗೆ ಇಳಿದಿದ್ದು, ಅಕ್ರಮ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಉಗ್ರರ ಜೊತೆ ಸ್ಥಳೀಯರ ಶಾಮೀಲು – ಜಮ್ಮು ಕಾಶ್ಮೀರದಲ್ಲಿ 15 ಕಡೆ ಎನ್‍ಐಎ ಶೋಧ

    ಬಸ್ ಅಗರ್ತಾಲದಿಂದ ಢಾಕಾ ಮೂಲಕ ಕೋಲ್ಕತ್ತಾಗೆ ತೆರಳುತ್ತಿತ್ತು. ಐಸಿಪಿ ಪೆಟ್ರಾಪೋಲ್ ತಲುಪಿದ ಸಂದರ್ಭ ಬಿಎಸ್‌ಎಫ್‌ನ ಭದ್ರತಾ ತಂಡ ಬಸ್ ಅನ್ನು ಕೂಲಂಕುಷವಾಗಿ ಪರೀಶೀಲಿಸಿದ್ದಾರೆ. ಈ ವೇಳೆ ಬಸ್‌ನ ಇಂಧನ ಟ್ಯಾಂಕ್‌ನ ಪಕ್ಕದಲ್ಲಿರುವ ಟೊಳ್ಳಾದ ಪೈಪ್‌ನಲ್ಲಿ 6,950 ಗ್ರಾಂ ತೂಕದ 52 ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಚಿನ್ನದ ಬಿಸ್ಕತ್‌ಗಳ ಅಂದಾಜು ಮೌಲ್ಯ 4 ಕೋಟಿ 24 ಲಕ್ಷ ರೂ.ಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್‌

    ಬಂಧಿತ ಆರೋಪಿಗಳು ಹಾಗೂ ವಶಪಡಿಸಿಕೊಂಡ ಚಿನ್ನದ ಬಿಸ್ಕತ್ತುಗಳನ್ನು ಕೋಲ್ಕತ್ತಾದ (Kolkata) ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (DRI) ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಎಸ್‌ಎಫ್‌ನ ಕಾರ್ಯಾಚರಣೆಯ ಕುರಿತು ಡಿಜಿ (DG) ಸಂತೋಷ ವ್ಯಕ್ತಪಡಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದವರಿಗೆ ನಗದು ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ಪಿಎಫ್‍ಐ ವಿರುದ್ಧದ ಪ್ರಕರಣ – ತಮಿಳುನಾಡಿನ ಹಲವೆಡೆ ಎನ್‍ಐಎ ದಾಳಿ

  • 2 ಸಾವಿರ ರೂ. ಹಣದಾಸೆಗೆ ಬಾಂಗ್ಲಾದಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – ಮಹಿಳೆ ಅರೆಸ್ಟ್

    2 ಸಾವಿರ ರೂ. ಹಣದಾಸೆಗೆ ಬಾಂಗ್ಲಾದಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – ಮಹಿಳೆ ಅರೆಸ್ಟ್

    ಕೋಲ್ಕತ್ತಾ: ಕೇವಲ 2 ಸಾವಿರ ರೂ. ಹಣದ ಆಸೆಗಾಗಿ ಸುಮಾರು 2 ಕೆಜಿಗೂ ಅಧಿಕ ತೂಕ ಹೊಂದಿದ್ದ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಬಾಂಗ್ಲಾದೇಶದಿಂದ (Bangladesh) ಭಾರತಕ್ಕೆ (India) ಸಾಗಿಸಲು ಯತ್ನಿಸಿದ ಮಹಿಳೆಯೊಬ್ಬರನ್ನು ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ (BSF) ಗುರುವಾರ ಬಂಧಿಸಿದೆ.

    ಮಾಣಿಕಾ ಧರ್ (34) ಬಂಧನಕ್ಕೊಳಗಾದ ಮಹಿಳೆ. ಈಕೆ ಬಾಂಗ್ಲಾದೇಶದ ಚಿತ್ತಗಾಂಗ್ ಜಿಲ್ಲೆಗೆ ಸೇರಿದವಳಾಗಿದ್ದು, ಅಕ್ರಮವಾಗಿ ಭಾರತಕ್ಕೆ ಚಿನ್ನದ ಗಟ್ಟಿ ಸಾಗಾಟ ಮಾಡುತ್ತಿದ್ದ ವೇಳೆ ಬಿಎಸ್‌ಎಫ್ ಕೈಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯಿಂದ ವಶಪಡಿಸಿಕೊಂಡ ಚಿನ್ನ ಸುಮಾರು 2 ಕೆಜಿ ತೂಕವಿದ್ದು, ಅಂದಾಜು 1.29 ಕೋಟಿ ರೂ. ಮೌಲ್ಯದ್ದಾಗಿದೆ. ಇದನ್ನೂ ಓದಿ: ಬಿಜೆಪಿ ಸಂಸದನ ವಿರುದ್ಧ ಪ್ರತಿಭಟನೆ – ಕುಸ್ತಿಪಟುಗಳ ಭೇಟಿಯಾದ ಪ್ರಿಯಾಂಕಾ ಗಾಂಧಿ

    ಮಹಿಳೆಯೊಬ್ಬರು ಚಿನ್ನದೊಂದಿಗೆ ಗಡಿ ದಾಟಲು ಹೊರಟಿರುವ ಬಗ್ಗೆ ಭಾರತೀಯ ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸಲಾಗಿದ್ದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಸಿಬ್ಬಂದಿಗಳು ತಪಾಸಣೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಮಣಿಕಾ ಧರ್ ತನ್ನ ಸೊಂಟದಲ್ಲಿ 27 ವಿವಿಧ ರೀತಿಯ ಚಿನ್ನದ ಗಟ್ಟಿಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಕಳ್ಳಸಾಗಾಣಿಕೆ (Smuggling) ಮಾಡುತ್ತಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಐವರು ಸೈನಿಕರ ದುರ್ಮರಣದ ಹಿಂದೆ ಪಾಕ್‌ ಕೈವಾಡ – ಡ್ರೋನ್‌ ಮೂಲಕ ಶಸ್ತ್ರಾಸ್ತ್ರ ಪೂರೈಕೆ

    ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ, ಪಶ್ಚಿಮ ಬಂಗಾಳದ ಬರಾಸತ್‌ನಲ್ಲಿರುವ ಅಪರಿಚಿತ ವ್ಯಕ್ತಿಗೆ ಚಿನ್ನದ ಗಟ್ಟಿಗಳನ್ನು ತಲುಪಿಸಲು ಸೂಚಿಸಲಾಗಿದೆ. ಈ ರೀತಿಯಾದ ಕಳ್ಳಸಾಗಾಣಿಕೆ ಇದೇ ಮೊದಲ ಬಾರಿಯಾಗಿದ್ದು, ಇದನ್ನು ತಲುಪಿಸಿದರೆ ತನಗೆ 2 ಸಾವಿರ ರೂ. ದೊರೆಯುತ್ತದೆ ಎಂದು ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಕೈ, ತಲೆ ಕತ್ತರಿಸಿ ಪತ್ನಿಯ ದೇಹವನ್ನು ಸುಟ್ಟು ಹಾಕಿದ ಪಾಪಿ ಗಂಡ

    ಆರೋಪಿ ಮಹಿಳೆಯನ್ನು ಹಾಗೂ ವಶಪಡಿಸಿಕೊಂಡ ಚಿನ್ನದ ಗಟ್ಟಿಗಳನ್ನು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಪೆಟ್ರಾಪೋಲ್‌ಗೆ ಒಪ್ಪಿಸಲಾಗಿದೆ. ಅಲ್ಲದೇ ಬಿಎಸ್‌ಎಫ್ ಯೋಧರ ಈ ಕಾರ್ಯವನ್ನು ದಕ್ಷಿಣ ಬಂಗಾಳ ಗಡಿ ಭಾಗದ ವಕ್ತಾರರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ – 1,700 ಮುಸ್ಲಿಂ ಮುಖಂಡರ ವಿರುದ್ಧ ಕೇಸ್‌

  • ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್‌ಎಫ್

    ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್‌ಎಫ್

    ಚಂಡೀಗಢ: ಭಾರತದ ಗಡಿ ಭದ್ರತಾ ಪಡೆ (BSF) ಭಯೋತ್ಪಾದನಾ ಚಟುವಟಿಕೆಗಳ ಮೇಲಿನ ತನ್ನ ದಮನವನ್ನು ಮುಂದುವರಿಸಿದೆ. ಪಾಕಿಸ್ತಾನದಿಂದ (Pakistan) ಭಾರತಕ್ಕೆ (India) ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಡ್ರೋನ್ (Drone) ಒಂದನ್ನು ಬಿಎಸ್‌ಎಫ್ ಅಧಿಕಾರಿಗಳು ಹೊಡೆದುರುಳಿಸಿದ್ದಾರೆ. ಕೇವಲ 2 ದಿನಗಳ ಹಿಂದೆಯೂ ಇಂತಹುದೇ ಘಟನೆ ನಡೆದಿತ್ತು.

    ಚಹರ್‌ಪುರ್ ಗ್ರಾಮದ ಬಳಿ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿದ್ದ ಡ್ರೋನ್ ಅನ್ನು ಗಮನಿಸಿದ ಸೈನಿಕರು ಅದರ ಮೇಲೆ ಗುಂಡು ಹಾರಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ಮತ್ತೊಂದು ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಡ್ರೋನ್‌ನ ಶಬ್ಧ ಕೇಳಿ ಬಿಎಸ್‌ಎಫ್ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ. ಗುಂಡು ಶಂಕಿತ ಡ್ರೋನ್‌ಗೆ ಬಡಿದು, ಅದು ನೆಲಕ್ಕೆ ಉರುಳಿದೆ. ತಕ್ಷಣ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದು, ಸಂಬAಧಪಟ್ಟ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ತಡರಾತ್ರಿ ಎಟಿಎಂಗೆ ಪೂಜೆ – ಕಳ್ಳತನಕ್ಕೆ ಯತ್ನವೋ, ವಾಮಾಚಾರವೋ!?

    ಸೈನಿಕರು ಹೊಡೆದುರುಳಿಸಿದ ಡ್ರೋನ್ ಚಹರ್‌ಪುರ್ ಗ್ರಾಮದಲ್ಲಿ ಗಡಿ ಬೇಲಿಯ ಬಳಿ ದೊರಕಿದೆ. ಡ್ರೋನ್ ಪತ್ತೆಯಾದಾಗ ಅದು ಭಾಗಶಃ ಹಾನಿಯಾದ ಸ್ಥಿತಿಯಲ್ಲಿತ್ತು. ಡ್ರೋನ್ ಕೆಳಗಡೆ ಬಿಳಿ ಬಣ್ಣದ ಪಾಲಿಥಿನ್‌ನಲ್ಲಿ ಶಂಕಿತ ವಸ್ತುವನ್ನು ಅಳವಡಿಸಲಾಗಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ನವೆಂಬರ್ 26ರಂದು ಪಂಜಾಬ್‌ನ ಅಮೃತಸದರದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್‌ಎಫ್ ಸೈನಿಕರು ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದೆ. ಅದೇ ದಿನ ಪಂಜಾಬ್‌ನ ಪಠಾಣ್‌ಕೋಟ್ ಗಡಿ ಬಳಿ ಭಾರತವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಇಬ್ಬರು ಶಂಕಿತರನ್ನು ತಡೆಹಿಡಿಯಲಾಗಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಫುಟ್‍ಬಾಲ್ ಫಿವರ್ – ಫಿಫಾ ಮಾದರಿ ಆ್ಯಂಥಮ್ ಸಾಂಗ್ ಮಾಡಿದ ವಿದ್ಯಾರ್ಥಿಗಳು

    Live Tv
    [brid partner=56869869 player=32851 video=960834 autoplay=true]

  • ಪ್ಲಾಗಾ ನದಿಯಲ್ಲಿ ತೇಲುತ್ತಿದ್ದ 317 ಮೊಬೈಲ್ ವಶ

    ಪ್ಲಾಗಾ ನದಿಯಲ್ಲಿ ತೇಲುತ್ತಿದ್ದ 317 ಮೊಬೈಲ್ ವಶ

    ಕೋಲ್ಕತ್ತಾ: ಪ್ಲಾಗಾ ನದಿಯಲ್ಲಿ ತೇಲುತ್ತಿದ್ದ 38 ಲಕ್ಷ ರೂ. ಮೌಲ್ಯದ 317 ಮೊಬೈಲ್‌ಗಳನ್ನು ಬಂಗಾಳದ ಗಡಿಭಾಗದ ಬಿಎಸ್‌ಎಫ್ (BSF) ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

    ಗುಪ್ತಚರ ಇಲಾಖೆಗಳ ಖಚಿತ ಮಾಹಿತಿಯನ್ನು ಆಧರಿಸಿ ಬಿಎಸ್‌ಎಫ್ ಸಿಬ್ಬಂದಿ ಎಲ್ಲಾ ಮೊಬೈಲ್‌ಗಳನ್ನು (Mobile) ವಶಪಡಿಸಿಕೊಂಡರು. ದಕ್ಷಿಣ ಬಂಗಾಳದ ಗಡಿಭಾಗದಲ್ಲಿರುವ ಬಹಾರ್ಡರ್ ಔಟ್ ಪೋಸ್ಟ್ ಲೋಧಿಯಾದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ

    ಪಾಗ್ಲಾ ನದಿಯಲ್ಲಿ ಬಾಳೆ ಕಾಂಡಗಳಿಗೆ ಕಟ್ಟಿದ ಕೆಲವು ಪ್ಲಾಸ್ಟಿಕ್ ಪಾತ್ರೆಗಳು ಬಾಂಗ್ಲಾದೇಶದ ಕಡೆಗೆ ತೇಲುತ್ತಿರುವುದನ್ನು ಬಿಎಸ್‌ಎಫ್ ತಂಡಗಳು ಗಮನಿಸಿದ್ದವು. ಈ ಹಿನ್ನೆಲೆಯಲ್ಲಿ ತಕ್ಷಣ ಜಾಗ್ರತರಾದ ಯೋಧರು ಕಂಟೇನರ್‌ಗಳನ್ನು ಹೊರತೆಗೆದರು. ಹಾಗೂ ಅದರಲ್ಲಿದ್ದ ವಿವಿಧ ಕಂಪನಿಯ 317 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಗೋವನ್ನು’ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಮನವಿ – ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

    Live Tv
    [brid partner=56869869 player=32851 video=960834 autoplay=true]

  • ಭಾರತದ ವೀಸಾ ನಿಯಮ ಉಲ್ಲಂಘನೆ – 17 ಬಾಂಗ್ಲಾ ಪ್ರಜೆಗಳು ಅರೆಸ್ಟ್

    ಭಾರತದ ವೀಸಾ ನಿಯಮ ಉಲ್ಲಂಘನೆ – 17 ಬಾಂಗ್ಲಾ ಪ್ರಜೆಗಳು ಅರೆಸ್ಟ್

    ದಿಸ್ಪುರ್: ಪ್ರವಾಸಿ ವೀಸಾ ನಿಯಮ (Indian Visa Rules) ಉಲ್ಲಂಘಿಸಿ, ಅನುಮತಿ ಪಡೆಯದೇ ಧಾರ್ಮಿಕ ಬೋಧನೆ ನಡೆಸುತ್ತಿದ್ದ ಆರೋಪದ ಮೇಲೆ 17 ಮಂದಿ ಬಾಂಗ್ಲಾದೇಶದ (Bangladesh) ಪ್ರಜೆಗಳನ್ನು ಅಸ್ಸಾಂನ ಬಿಸ್ವನಾಥ್ ಚರಿಯಾಲಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

    ಬಿಸ್ವನಾಥ್ ಜಿಲ್ಲೆಯ ಗಿಂಗಿಯಾ ಪ್ರದೇಶದ ದೂರದ ಬಾಗ್ಮರಿ ಪ್ರದೇಶದಲ್ಲಿ ಅವರನ್ನು ಬಂಧಿಸಲಾಗಿದೆ. ಅಸ್ಸಾಂಗೆ ಬರುವ ಮೊದಲು ಅವರು ರಾಜಸ್ಥಾನದ (Rajasthan) ಅಜ್ಮೀರ್ ಷರೀಫ್ ಮತ್ತು ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದು ಡಿಜಿಪಿ (DGP) ಭಾಸ್ಕರ್ ಜ್ಯೋತಿ ಮಹಾಂತ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ತನ್ನ ಖಾಸಗಿ ವೀಡಿಯೋ ಮಾತ್ರ ಬಾಯ್‌ಫ್ರೆಂಡ್‌ಗೆ ಹಂಚಿಕೊಂಡಿದ್ಲು – ವಿವಿ ಸ್ಪಷ್ಟನೆ

    ಸೈಯದ್ ಅಶ್ರಫುಲ್ ಆಲಂ ಈ ಬಾಂಗ್ಲಾದೇಶಿಗರ ತಂಡದ ನೇತೃತ್ವ ವಹಿಸಿದ್ದರು. ಪ್ರವಾಸಿ ವೀಸಾದಲ್ಲಿ (Tourist Visas) ಅನುಮತಿಯಿಲ್ಲದೇ ಧಾರ್ಮಿಕ ಬೋಧನೆ (Religious Teaching), ಸಮಾರಂಭ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು. ಇದಕ್ಕೂ ಮುನ್ನ ಐದು ಜನರ ಬಾಂಗ್ಲಾದೇಶಿಗರ ತಂಡ ಕಳೆದ ಆಗಸ್ಟ್ 28ರಂದು ಅಸ್ಸಾಂನ ದಕ್ಷಿಣ ಸಲ್ಮಾರ ಮಂಕಚಾರ್ ಜಿಲ್ಲೆಯ ಮೂಲಕ ಅಕ್ರಮವಾಗಿ ಗಡಿ ಪ್ರವೇಶಿಸಿತ್ತು. ಐವರನ್ನೂ ಬಿಎಸ್‌ಎಫ್ (BSF) ಬಂಧಿಸಿತ್ತು. ಇದನ್ನೂ ಓದಿ: ಸಿನಿಮಾ ರಂಗದ ಪ್ರತಿಭಾವಂತ ಯುವ ನಟಿ ದೀಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಅದಾದ ಬಳಿಕ ಪ್ರವಾಸಿ ನಿಯಮ ಉಲ್ಲಂಘಿಸಿ 17 ಮಂದಿ ಅಸ್ಸಾಂ ಪ್ರವೇಶಿಸಿದ್ದಾರೆ. ಬಾಗ್ಮರಿ ಪ್ರದೇಶದಲ್ಲಿ ಯಾವುದೇ ಪ್ರವಾಸಿ ಆಕರ್ಷಣೆ ಇಲ್ಲ. ಆದರೂ ಈ ವಿದೇಶಿಗರು ಏಕೆ ಇಲ್ಲಿಗೆ ಬಂದಿದ್ದಾರೆ ಎನ್ನುವ ರಹಸ್ಯ ಹುಡುಕಿ ಹೊರಟಾಗ ಅವರು ಧಾರ್ಮಿಕ ಉಪದೇಶ ಮತ್ತು ಧಾರ್ಮಿಕ ಚಟುವಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ವಿವಿಧ ದಿನಾಂಕಗಳಲ್ಲಿ ತಂಡೋಪತಂಡವಾಗಿ ಅಸ್ಸಾಂಗೆ ಪ್ರವೇಶಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಅವರನ್ನು ಬಂಧಿಸಲಾಗಿದೆ ಎಂದು ಭಾಸ್ಕರ್ ಜ್ಯೋತಿ ಮಹಾಂತ ತಿಳಿಸಿದ್ದಾರೆ.

    ಕಳೆದ ಶನಿವಾರ ಬಂಧಿಸಿದ ಐವರಲ್ಲಿ ಇಬ್ಬರನ್ನು ಅಪರಾಧಿಗಳೆಂದು ತೀರ್ಮಾನಿಸಿ ಕ್ಷಿಣ ಸಲ್ಮಾರಾ ಮಂಕಚಾರ್ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಬ್ಬರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ತಲಾ 10 ಸಾವಿರ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದಲ್ಲಿ ಇನ್ನೂ 6 ತಿಂಗಳಕಾಲ ಜೈಲು ಶಿಕ್ಷೆ ವಿಸ್ತರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

    Live Tv
    [brid partner=56869869 player=32851 video=960834 autoplay=true]