Tag: BSF personnel

  • ಬಾಂಗ್ಲಾ, ಪಾಕ್ ಸೈನಿಕರಿಗೆ ಈದ್-ಉಲ್-ಫಿತರ್ ಶುಭ ಕೋರಿದ ಭಾರತೀಯ ಸೇನೆ

    ಬಾಂಗ್ಲಾ, ಪಾಕ್ ಸೈನಿಕರಿಗೆ ಈದ್-ಉಲ್-ಫಿತರ್ ಶುಭ ಕೋರಿದ ಭಾರತೀಯ ಸೇನೆ

    ನವದೆಹಲಿ: ರಂಜಾನ್ ಕೊನೆಯ ದಿನವಾದ ಈದ್-ಉಲ್-ಫಿತರ್ ನಿಮಿತ್ತ ಭಾರತೀಯ ಸೇನೆಯು ನೆರೆ ಮುಸ್ಲಿಂ ದೇಶಗಳಾದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಸೈನಿಕರಿಗೆ ಶುಭಕೋರಿದೆ.

    ಪಾಕಿಸ್ತಾನ-ಭಾರತದ ಗಡಿ ಪ್ರದೇಶ ಅಠಾರಿ ವಾಘಾದಲ್ಲಿ ಇಂದು ಬಿಎಸ್‍ಎಫ್ ಅಧಿಕಾರಿಗಳು ಪಾಕ್ ಸೈನಿಕರಿಗೆ ಸಿಹಿ ನೀಡಿ ಶುಭಾಶಯ ತಿಳಿಸಿದರು. ಬಾಂಗ್ಲಾದೇಶ-ಭಾರತದ ಗಡಿ ಪ್ರದೇಶ ಫುಬ್ಲಾರಿಯಲ್ಲಿ ಬಾಂಗ್ಲಾ ಸೈನಿಕರಿಗೆ ಬಿಎಸ್‍ಎಫ್ ಸೈನಿಕರು ಸಿಹಿ ನೀಡಿ ಹಸ್ತಾಲಾಘವ ಮಾಡಿ ಶುಭ ಕೋರಿದ್ದಾರೆ.

    ಶಾಂತಿ ಹಾಗೂ ಉತ್ತಮ ಸ್ನೇಹದ ಸಂದೇಶವಾಗಿ ನಮ್ಮ ನೆರೆಯ ಮುಸ್ಲಿಂ ದೇಶಗಳಾದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಸೈನಿಕರಿಗೆ ಶುಭಾಶಯ ತಿಳಿಸಲಾಗಿದೆ. ಯುದ್ಧ, ದಾಳಿ ಸಂದರ್ಭ ಹೊರತುಪಡಿಸಿ ಪ್ರತಿ ವರ್ಷವೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.

    ಮುಸ್ಲಿಂ ಬಾಂಧವರು ರಂಜಾನ್ ಪವಿತ್ರ ಮಾಸದಲ್ಲಿ 30 ದಿನಗಳ ಕಾಲ ಉಪವಾಸ (ರೋಜಾ) ಇರುತ್ತಾರೆ. ರಂಜಾನ್ ಕೊನೆಯ ದಿನವಾದ ಇಂದು ಈದ್-ಉಲ್-ಫಿತರ್ ಆಚರಣೆ ಮಾಡುತ್ತಾರೆ. ಜಗತ್ತಿನಾದ್ಯಂತ ಇಂದು ಈದ್-ಉಲ್-ಫಿತರ್ ಸಂಭ್ರಮ ಮನೆ ಮಾಡಿದೆ.

    ವಿಶ್ವ ಪರಿಸರ ದಿನದಂದೇ ರಂಜಾನ್ ಹಬ್ಬ ಬಂದಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಸಸಿಗಳನ್ನು ನೆಟ್ಟು ಹಬ್ಬವನ್ನು ಸಂಭ್ರಮಿಸಿ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.