Tag: bsf jawan

  • ‘ಆಪರೇಷನ್‌ ಸಿಂಧೂರ’ದಲ್ಲಿ ಶೌರ್ಯ ಮೆರೆದ BSF ಯೋಧ – ಗೌರವಿಸಿದ ಸೇನಾ ಮುಖ್ಯಸ್ಥ

    ‘ಆಪರೇಷನ್‌ ಸಿಂಧೂರ’ದಲ್ಲಿ ಶೌರ್ಯ ಮೆರೆದ BSF ಯೋಧ – ಗೌರವಿಸಿದ ಸೇನಾ ಮುಖ್ಯಸ್ಥ

    ಶ್ರೀನಗರ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಬಿಎಸ್‌ಎಫ್‌ ಯೋಧ (BSF Jawan) ಹರ್ವಿಂದರ್‌ ಸಿಂಗ್‌ ಅವರನ್ನು ಚೀಫ್‌ ಆಫರ್‌ ಆರ್ಮಿ ಸ್ಟಾಫ್‌ ಜನರಲ್‌ ಅಭಿನಂದಿಸಿದ್ದಾರೆ.

    ಸಿಒಎಎಸ್‌ ಉಪೇಂದ್ರ ದ್ವಿವೇದಿ (Upendra Dwivedi) ಅವರು ಶ್ಲಾಘನೆ ಡಿಸ್ಕ್ ಅನ್ನು ಬಿಎಸ್ಎಫ್ ಸೈನಿಕನಿಗೆ ಪಿನ್ ಮಾಡಿ ಗೌರವಿಸುತ್ತಿರುವ ಚಿತ್ರವನ್ನು ಬಿಎಸ್‌ಎಫ್‌ ಜಮ್ಮು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಪಾಕ್‌ ವಿರುದ್ಧ ‘ಬ್ರಹ್ಮೋಸ್‌’ ಪರಾಕ್ರಮ – ಬ್ರಹ್ಮೋಸ್‌ ಕ್ಷಿಪಣಿಗಾಗಿ 18 ರಾಷ್ಟ್ರಗಳಿಂದ ಬೇಡಿಕೆ

    ಜನರಲ್ ದ್ವಿವೇದಿ ಅವರು ಶುಕ್ರವಾರ ಬಾರಾಮುಲ್ಲಾದಲ್ಲಿ ನಡೆದ ಫಾರ್ವರ್ಡ್ ಸ್ಥಳಗಳಿಗೆ ಭೇಟಿ ನೀಡಿದರು. ಸೈಂಡೂರ್‌ನಲ್ಲಿ ಶೌರ್ಯಕ್ಕಾಗಿ ಸೈನ್ಯ ಮತ್ತು ಬಿಎಸ್‌ಎಫ್ ಯೋಧರನ್ನು ಶ್ಲಾಘಿಸಿದರು.

    ಆಪರೇಷನ್ ಸಿಂಧೂರ ಸಮಯದಲ್ಲಿ ಧೀರ ಕ್ರಮಕ್ಕಾಗಿ 185 ಬಿಎನ್ ಬಿಎಸ್ಎಫ್, ಎಚ್‌ಸಿ (ಜಿಡಿ) ರಾಂಟಾನಾ ರಾಮ್‌ಗೆ ಸೇನಾ ಸಿಬ್ಬಂದಿ ಮೆಚ್ಚುಗೆಯ ಡಿಸ್ಕ್‌ನ್ನು ನೀಡಿದ್ದರು. ಇದನ್ನೂ ಓದಿ: ಪಾಕಿಸ್ತಾನ ಪರ ಬೇಹುಗಾರಿಕೆ – ಭಾರತದ ಯೂಟ್ಯೂಬರ್ ಬಂಧನ

    ಏಪ್ರಿಲ್ 22 ರ ಪಹಲ್ಗಮ್ ಭಯೋತ್ಪಾದಕ ದಾಳಿಗೆ ನಿರ್ಣಾಯಕ ಮಿಲಿಟರಿ ಪ್ರತಿಕ್ರಿಯೆಯಾಗಿ ಭಾರತ ಮೇ 7 ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಮೂಲಸೌಕರ್ಯಗಳನ್ನು ಭಾರತೀಯ ಸಶಸ್ತ್ರ ಪಡೆಗಳು ನಾಶಗೊಳಿಸಿದವು. ಭಾರತದ ದಾಳಿಯಿಂದ 100ಕ್ಕೂ ಹೆಚ್ಚು ಉಗ್ರರು ಹತರಾದರು. ಇದು ಪಾಕ್‌ ಮತ್ತು ಭಾರತದ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು.

    ಪಾಕಿಸ್ತಾನವು ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಭಾರತದ ಮೇಲೆ ದಾಳಿ ನಡೆಸಿತು. ಭಾರತದ ಎಸ್‌-400, ಆಕಾಶ್‌ ಕ್ಷಿಪಣಿಗಳು ಪಾಕ್‌ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದವು. ಪ್ರತಿಯಾಗಿ ಭಾರತ ನಡೆಸಿದ ದಾಳಿಗೆ ಪಾಕಿಸ್ತಾನದಲ್ಲಿ 11 ವಾಯುನೆಲೆಗಳು ನಾಶವಾದವು.

  • ಅಚಾನಕ್ ಗಡಿದಾಟಿದ BSF ಯೋಧನನ್ನು ಬಂಧಿಸಿದ ಪಾಕ್‌

    ಅಚಾನಕ್ ಗಡಿದಾಟಿದ BSF ಯೋಧನನ್ನು ಬಂಧಿಸಿದ ಪಾಕ್‌

    ಚಂಡೀಗಢ: ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಅಚಾನಕ್ಕಾಗಿ ಗಡಿರೇಖೆ ದಾಟಿದ ಬಿಎಸ್‌ಎಫ್ ಜವಾನ್‌ (BSF Jawan) ಒಬ್ಬರನ್ನ ಪಾಕಿಸ್ತಾನ ರೇಂಜರ್‌ಗಳು (Pakistani Rangers) ಬಂಧಿಸಿದ್ದಾರೆ.

    ಪಿ.ಕೆ ಸಿಂಗ್‌ ಬಂಧಿತ ಬಿಎಸ್‌ಎಫ್‌ ಯೋಧ. ಪಿಕೆ ಸಿಂಗ್ 182ನೇ ಬಿಎಸ್‌ಎಫ್ ಬೆಟಾಲಿಯನ್‌ನ ಕಾನ್‌ಸ್ಟೇಬಲ್ ಅಂತ ತಿಳಿದುಬಂದಿದೆ. ಯೋಧನ ಬಿಡುಗಡೆಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಬಿಎಸ್‌ಎಫ್‌ ಹಾಗೂ ಪಾಕ್‌ ರೇಂಜರ್‌ಗಳ ತುರ್ತು ಸಭೆ ಕರೆಯಲಾಗಿದೆ. ಇದನ್ನೂ ಓದಿ: ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್‌

    ಭಾರತದ (India) ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಪಾಕ್‌ಗೆ ಆತಂಕ ಶುರುವಾಗಿದೆ. ಭಾರತದ ದಾಳಿ ಮಾಡಿದರೆ ನಾವೂ ಪ್ರತಿದಾಳಿ ಮಾಡ್ತೇವೆ ಅಂತ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾನೆ. ಅಲ್ಲದೇ, ಪಹಲ್ಗಾಮ್ ಉಗ್ರದಾಳಿಯಲ್ಲಿ ನಮ್ಮ ಕೈವಾಡ ಇಲ್ಲ. ಆರೋಪಕ್ಕೆ ಸಾಕ್ಷಿ ಕೊಡಿ ಅಂತ ವಿದೇಶಾಂಗ ಸಚಿವ ಹೇಳಿದ್ದಾರೆ. ಆದರೂ, ಭಾರತದಿಂದ ದಾಳಿ ಭೀತಿಯಲ್ಲಿ ಎಲ್‌ಒಸಿ ಬಳಿ ಸೈನಿಕರ ಸಂಖ್ಯೆ ಹೆಚ್ಚಿಸಿಕೊಂಡಿದೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ

    ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ. ಸಿಂಧೂ ಜಲ ಒಪ್ಪಂದ ರದ್ದು ಯುದ್ಧಕ್ಕೆ ಸಮ. ನಾವೂ ಪ್ರತೀಕಾರಕ್ಕೆ ಸಿದ್ಧ ಅಂತ ಪಾಕಿಸ್ತಾನ ಹೇಳಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ ಅಂತ ತಿಳಿದು ಬಂದಿದೆ. ವ್ಯಕ್ತಿಯೋರ್ವ ಕೇಕ್ ಒಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.

    ಪಹಲ್ಗಾಮ್ ಪೈಶಾಚಿಕ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡ ಇದೆ ಅಂತ ಪಾಕ್ ಕ್ರಿಕೆಟಿಗ ದಾನಿಶ್ ಕನೇರಿಯಾ ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ, ನಾನೊಬ್ಬ ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗುತ್ತಿದೆ ಎಂದು ದಾಳಿಯನ್ನು ಬಾಲಿವುಡ್ ಗಾಯಕ ಸಲೀಂ ಮರ್ಚೆಂಟ್ ಖಂಡಿಸಿದ್ದಾರೆ. ಇದನ್ನೂ ಓದಿ: Pahalgam Terrorist Attack | ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಶುರು – ರಾಹುಲ್‌, ಖರ್ಗೆ ಭಾಗಿ

  • ಪಾಕ್ ಸೇನೆಯಿಂದ ಪುಂಡಾಟ – ಓರ್ವ ಬಿಎಸ್‍ಎಫ್ ಯೋಧ ಹುತಾತ್ಮ

    ಪಾಕ್ ಸೇನೆಯಿಂದ ಪುಂಡಾಟ – ಓರ್ವ ಬಿಎಸ್‍ಎಫ್ ಯೋಧ ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಮಗಢ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ (Pakistan) ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದ ಬಿಎಸ್‍ಎಫ್ ಸಿಬ್ಬಂದಿಯೊಬ್ಬರು (BSF jawan) ಸಾವನ್ನಪ್ಪಿದ್ದಾರೆ. ಈ ವೇಳೆ ಭಾರತೀಯ ಸೇನೆ (Indian Army) ಸಹ ತಕ್ಕ ಪ್ರತ್ಯುತ್ತರ ನೀಡಿದ್ದು, ಶತ್ರು ಸೇನೆಯನ್ನು ಹಿಮ್ಮೆಟ್ಟಿಸಿದೆ.

    ಪಾಕ್ ಸೇನೆ ನಡೆಸಿದ ದಾಳಿಯಿಂದ ಬಿಎಸ್‍ಎಫ್ (Border Security Force) ಸಿಬ್ಬಂದಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಪಾಕ್ ದಾಳಿಯಿಂದ ರಾಮಗಢ ಪ್ರದೇಶದ ಸುತ್ತಮುತ್ತ ಗ್ರಾಮಸ್ಥರು ಭಯಗೊಂಡು ಬಂಕರ್‍ಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದನ್ನೂ ಓದಿ: ಜಮ್ಮುವಿನಲ್ಲಿ ಉಗ್ರನ ಬೇಟೆಯಾಡಿದ ಭಾರತೀಯ ಸೇನೆ

    ಪಾಕಿಸ್ತಾನ ಹಾಗೂ ಭಾರತ 2021 ರ ಫೆ.25 ರಂದು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಜಮ್ಮು ಗಡಿಯಲ್ಲಿ 24 ದಿನಗಳಲ್ಲಿ ನಡೆದ ಮೂರನೇ ಕದನ ವಿರಾಮ ಉಲ್ಲಂಘನೆ ಇದಾಗಿದೆ. ಅಲ್ಲದೇ ಈ ಮೂಲಕ ಒಟ್ಟಾರೆ ಆರನೇ ಉಲ್ಲಂಘನೆ ಇದಾಗಿದೆ.

    ಅಕ್ಟೋಬರ್ 28 ರಂದು ಪಾಕಿಸ್ತಾನ ರೇಂಜರ್‍ಗಳು ಸುಮಾರು ಏಳು ಗಂಟೆಗಳ ಕಾಲ ಗುಂಡು ಹಾಗೂ ಶೆಲ್ ದಾಳಿ ನಡೆಸಿತ್ತು. ಈ ವೇಳೆ ಇಬ್ಬರು ಬಿಎಸ್‍ಎಫ್ ಯೋಧರು ಮತ್ತು ಓರ್ವ ಮಹಿಳೆ ಗಾಯಗೊಂಡಿದ್ದರು. ಅಕ್ಟೋಬರ್ 17 ರಂದು ಅರ್ನಿಯಾ ಸೆಕ್ಟರ್‍ನಲ್ಲಿ ಪಾಕಿಸ್ತಾನದ ರೇಂಜರ್‍ಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಬ್ಬರು ಬಿಎಸ್‍ಎಫ್ ಸಿಬ್ಬಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ಚೆಕ್‍ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ – ಅಧಿಕಾರಿ ಅರೆಸ್ಟ್

  • ಅಶ್ವಾರೋಹಣ ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿದ್ದ ಬಿಎಸ್‌ಎಫ್ ಯೋಧನಿಗೆ ಕುದುರೆ ತುಳಿದು ಸಾವು

    ಅಶ್ವಾರೋಹಣ ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿದ್ದ ಬಿಎಸ್‌ಎಫ್ ಯೋಧನಿಗೆ ಕುದುರೆ ತುಳಿದು ಸಾವು

    ಭೋಪಾಲ: ಅಶ್ವಾರೋಹಣ ಸ್ಪರ್ಧೆಗೆ (Equestrian Championship) ಅಭ್ಯಾಸ ನಡೆಸುತ್ತಿದ್ದ ವೇಳೆ ಬಿಎಸ್‌ಎಫ್ ಯೋಧನೊಬ್ಬ (BSF Jawan) ಕುದುರೆ (Horse)ತುಳಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ (Madhya Pradesh) ಗ್ವಾಲಿಯರ್ (Gwalior) ಜಿಲ್ಲೆಯ ತೇಕನ್‌ಪುರ (Tekanpur) ಬಿಎಸ್‌ಎಫ್ ಅಕಾಡೆಮಿಯಲ್ಲಿ ನಡೆದಿದೆ.

    ಮೃತಪಟ್ಟ ಬಿಎಸ್‌ಎಫ್ ಕಾನ್‌ಸ್ಟೆಬಲ್ ಜಿಡಿ ಥೋರಟ್ ಸುಧೀರ್ ಫಂಢರಿ ನಾಥ್ (33) ಮಹಾರಾಷ್ಟ್ರದ ಪುಣೆ ನಿವಾಸಿಯಾಗಿದ್ದು, ಬಿಎಸ್‌ಎಫ್‌ನ ಹಾರ್ಸ್ ವಿಂಗ್‌ನಲ್ಲಿ ನಿಯೋಜಿಸಲ್ಪಟ್ಟಿದ್ದರು. ಅಭ್ಯಾಸದ ವೇಳೆ ಅವರ ಹಣೆಗೆ ಕುದುರೆ ಒದ್ದಿದ್ದ ಪರಿಣಾಮ ನಾಥ್ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಬಿಎಸ್‌ಎಫ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಅಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ

    ವರದಿಗಳ ಪ್ರಕಾರ ಯೋಧನ ಸಾವಿನ ಬಳಿಕವೂ ಸ್ಥಳೀಯ 3 ಠಾಣೆಗಳ ನಡುವೆ ವಾಗ್ವಾದ ಏರ್ಪಟ್ಟಿತ್ತು. ಪಿಂಚೋರ್, ಬಿಲೌವಾ ಹಾಗೂ ದಾಬ್ರಾ ಪೊಲೀಸ್ ಠಾಣೆಗಳು ನ್ಯಾಯವ್ಯಾಪ್ತಿಯನ್ನು ನಿರ್ಧರಿಸುವಲ್ಲಿ ಜಗಳ ಏರ್ಪಟ್ಟಿದ್ದರಿಂದ ಮೃತದೇಹದ ಮರಣೋತ್ತರ ಪರೀಕ್ಷೆ ವಿಳಂಬವಾಗಿತ್ತು. ಬಳಿಕ ತೇಕನ್‌ಪುರ ಠಾಣೆಯ ಇನ್‌ಚಾರ್ಜ್ ದೇವೇಂದ್ರ ಲೋಧಿ ಅವರಿಗೆ ಮರಣೋತ್ತರ ಪರೀಕ್ಷೆಯ ಜವಾಬ್ದಾರಿ ನೀಡಲಾಯಿತು. ಇದನ್ನೂ ಓದಿ: ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

    41ನೇ ಅಖಿಲ ಭಾರತ ಪೊಲೀಸ್ ಕುದುರೆ ಸವಾರಿ ಸ್ಪರ್ಧೆಯನ್ನು (ಈಕ್ವೆಸ್ಟ್ರಿಯನ್ ಚಾಂಪಿಯನ್‌ಶಿಪ್) ನವೆಂಬರ್ 14ರಿಂದ 26ರ ವರೆಗೆ ಜಿಲ್ಲೆಯ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಅಕಾಡೆಮಿ ತೇಕನ್‌ಪುರದಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ಯೋಧ ಅಭ್ಯಾಸ ನಡೆಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಸಕಲ ಸರ್ಕಾರಿ ಗೌರವದೊಂದಿಗೆ ರಸ್ತೆ ಅಪಘಾತಲ್ಲಿ ಮೃತಪಟ್ಟ ಯೋಧನ ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವದೊಂದಿಗೆ ರಸ್ತೆ ಅಪಘಾತಲ್ಲಿ ಮೃತಪಟ್ಟ ಯೋಧನ ಅಂತ್ಯಕ್ರಿಯೆ

    ಚಿಕ್ಕೋಡಿ: ರಸ್ತೆ ಅಪಘಾತಲ್ಲಿ ಮೃತಪಟ್ಟ ಬಿಎಸ್‍ಎಫ್ ಯೋಧ ಸೂರಜ್ ಸುತಾರ್ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮದಲ್ಲಿ ನಡೆಯಿತು.

    ಪಶ್ಚಿಮಬಂಗಾಳದ ಪಂಜಿಪರಾದ ದಿನಾಜ್‌ಪುರ್‌ನ 152ನೇ ಬಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸೂರಜ್ ಸುತಾರ್ ನಿನ್ನೆ ಪಶ್ಚಿಮಬಂಗಾಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು. ಇಂದು ಅವರ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಹೋಟೆಲ್‍ನಲ್ಲಿ ಮತ್ತೆ ಪೂಜೆ

    ಕಳೆದ 10 ವರ್ಷಗಳಿಂದ ಸೂರಜ್ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ತಮ್ಮ ಕುಟುಂಬವನ್ನು ಕರೆತರಲು ರೈಲ್ವೇ ನಿಲ್ದಾಣಕ್ಕೆ ತೆರಲಿ ರಸ್ತೆ ಕ್ರಾಸ್ ಮಾಡುವ ಸಂದರ್ಭ ಲಾರಿ ಡಿಕ್ಕಿಯಾಗಿ ಸೂರಜ್ ಪಶ್ಚಿಮಬಂಗಾಳದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಯೋಧನ ಸ್ವಗ್ರಾಮ ಯಡೂರುವಾಡಿಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ಇಂದು ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ನಮ್ಮ ಪ್ರಧಾನಿ ತಾಯಿ ಹೃದಯದವರು: ಶೋಭಾ ಕರಂದ್ಲಾಜೆ

    ಯೋಧನ ಪಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಸಚಿವೆ ಶಶಿಕಲಾ ಜೊಲ್ಲೆ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ, ಚಿಕ್ಕೋಡಿ ಶಾಸಕ ಗಣೇಶ್‌ ಹುಕ್ಕೇರಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ್ ಮೃತ ಯೋಧನ ಪಾರ್ಥಿವ ಶರೀರದ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗ್ರಾಮದ ಸ್ಮಶಾನ ಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಸೂರಜ್ ಸುತಾರ್‌  ಅಂತ್ಯಸಂಸ್ಕಾರ ನೆರವೇರಿತು.

    Live Tv
    [brid partner=56869869 player=32851 video=960834 autoplay=true]

  • ಗುಂಡಿನ ದಾಳಿಗೆ ಇಬ್ಬರು ಯೋಧರು ಹುತಾತ್ಮ- ರೈಫಲ್ ದೋಚಿ ಉಗ್ರರು ಪರಾರಿ

    ಗುಂಡಿನ ದಾಳಿಗೆ ಇಬ್ಬರು ಯೋಧರು ಹುತಾತ್ಮ- ರೈಫಲ್ ದೋಚಿ ಉಗ್ರರು ಪರಾರಿ

    ಶ್ರೀನಗರ: ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯ ಪಾಂಡಚ್ ಪ್ರದೇಶದ ಬಳಿ ಬುಧವಾರ ಮಧ್ಯಾಹ್ನ ಅರೆಸೇನಾ ಪಡೆ 37ನೇ ಬೆಟಾಲಿಯನ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಬಿಎಸ್‍ಎಫ್ ಯೋಧರು ಹುತಾತ್ಮರಾಗಿದ್ದಾರೆ. ದಾಳಿ ವೇಳೆ ಉಗ್ರರು ಯೋಧರ ರೈಫಲ್ ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

    ಪಾಂಡಚ್ ಬಳಿಯ ಬಿಎಸ್‍ಎಫ್ ಪಡೆ ಮೇಲೆ ಉಗ್ರರು ನಿರಂತರವಾಗಿ ಗುಂಡು ಹಾರಿಸಿದ್ದಾರೆ. ಪರಿಣಾಮ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಯೋಧರನ್ನು ಸಮೀಪದ ಸ್ಕಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ಯೋಧರು ಸಾವನ್ನಪ್ಪಿದ್ದರು ಎಂದು ವೈದ್ಯರು ಪ್ರಕಟಿಸಿದರು.

    ಘಟನೆಯ ಬೆನ್ನಲ್ಲೇ ಶ್ರೀನಗರ, ಪಾಂಡಚ್ ಜಿಲ್ಲೆಯ ಗಡಿ ಪ್ರದೇಶವನ್ನು ಬಿಎಸ್‍ಎಫ್ ಯೋಧರು ವಶಕ್ಕೆ ಪಡೆದಿದ್ದು, ಉಗ್ರರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ತಯಾರಿ – 5ನೇ ಪ್ರಯತ್ನದಲ್ಲಿ ಐಎಎಸ್ ಆಫೀಸರ್

    ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ತಯಾರಿ – 5ನೇ ಪ್ರಯತ್ನದಲ್ಲಿ ಐಎಎಸ್ ಆಫೀಸರ್

    ಚಂಡೀಗಢ: ನಿರಂತರ ಪ್ರಯತ್ನ, ಕಠಿಣ ಪರಿಶ್ರಮದಿಂದ ಜನರು ಏನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಬಿಎಸ್‍ಎಫ್ ಯೋಧರೊಬ್ಬರು ಮಾದರಿಯಾಗಿದ್ದಾರೆ. ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿ 5ನೇ ಪ್ರಯತ್ನದಲ್ಲಿ ಬಿಎಸ್‍ಎಫ್ ಯೋಧ ಐಎಎಸ್ ಆಫೀಸರ್ ಆಗಿದ್ದಾರೆ.

    ಹರ್‌ಪ್ರೀತ್ ಸಿಂಗ್ ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಾ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಹರ್‌ಪ್ರೀತ್ ಅವರು ಗಡಿಯಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ ಬಳಿಕ ಬಿಡುವಿನ ಸಮಯದಲ್ಲಿ ಓದಿ 5ನೇ ಬಾರಿಗೆ ಐಎಎಸ್ ಪರೀಕ್ಷೆಯಲ್ಲಿ ಸಫಲರಾಗಿದ್ದಾರೆ. ಅಷ್ಟೇ ಅಲ್ಲದೆ ಹರ್‌ಪ್ರೀತ್ ಅವರು ದೇಶದ ಟಾಪ್ 20ಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

    2016ರಲ್ಲಿ ಯುಪಿಎಸ್‍ಸಿ ಮೂಲಕ ನಾನು ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಬಿಎಸ್‍ಎಫ್ ಸೇರಿದೆ. ಬಿಎಸ್‍ಎಫ್ ಸೇರಿದ ಬಳಿಕ ನನಗೆ ಭಾರತ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ಪೋಸ್ಟಿಂಗ್ ಆಯ್ತು. ಗಡಿಯಲ್ಲಿ ನನ್ನ ಡ್ಯೂಟಿ ನನಗೆ ಇಷ್ಟವಾಗುತಿತ್ತು. ನಾನು ಆ ಕಷ್ಟದ ಕೆಲಸವನ್ನು ಇಷ್ಟಪಡಲು ಶುರು ಮಾಡಿದೆ. ಆದರೆ ನಾನು ಐಎಎಸ್ ಆಫೀಸರ್ ಆಗಬೇಕು ಎಂದು ಕನಸು ಕಂಡಿದ್ದೆ. ಹಾಗಾಗಿ ಗಡಿಯಲ್ಲಿ ನನ್ನ ಕೆಲಸ ಮುಗಿದ ನಂತರ ಬಿಡುವಿನ ಸಮಯದಲ್ಲಿ ನನ್ನ ಗುರಿಯತ್ತ ಗಮನ ಹರಿಸಿದೆ ಎಂದು ಹರ್‌ಪ್ರೀತ್ ಹೇಳಿದ್ದಾರೆ.

    ನನ್ನ ಗುರಿ ನನ್ನ ತಲೆಯಲ್ಲಿ ಸ್ಪಷ್ಟವಾಗಿತ್ತು. ಹಾಗಾಗಿ ನನ್ನ ಗಮನ ಬೇರೆ ಕಡೆ ಹೋಗಲ್ಲ. ಕರ್ತವ್ಯ ಹೊರತಾಗಿ ನಾನು ನನ್ನ ಸಂಪೂರ್ಣ ಸಮಯವನ್ನು ನೋಟ್ಸ್ ಓದುತ್ತಿದ್ದೆ. ಹಾಗಾಗಿ ನಾನು 5ನೇ ಬಾರಿ ಯಶಸ್ಸು ಕಂಡಿದ್ದೇನೆ. ಪಬ್ಲಿಕ್ ಆಡ್ಮಿನಿಸ್ಟ್ರೇಷನ್ ನನ್ನ ಐಚ್ಚಿಕ ವಿಷಯವಾಗಿತ್ತು. ಬಲವಾದ ನಿರ್ಧಾರ ಹಾಗೂ ನನ್ನ ಕಠಿಣ ಪರಿಶ್ರಮ ಈ ಎರಡು ವಿಷಯಗಳನ್ನು ನನ್ನ ಯಶಸ್ಸಿನ ಮೂಲ ಮಂತ್ರ ಎಂದು ನಾನು ಪರಿಗಣಿಸುತ್ತೇನೆ. ನನ್ನ ಪ್ರಕಾರ ನಾವು ನಮ್ಮ ಕನಸ್ಸನ್ನು ಹಿಂದೆ ಬಿಡಬಾರದು. ಎಷ್ಟೇ ಕಷ್ಟ ಆದರೂ ನಾವು ಪ್ರಯತ್ನ ಪಡಬೇಕು ಎಂದರು.

    ನಾನು ಮೂಲತಃ ಪಂಜಾಬ್‍ನವನಾಗಿದ್ದು, ಐಟಿಎಸ್ (ಇಂಡಿಯನ್ ಟ್ರೆಂಡ್ ಸರ್ವೀಸ್) ನಲ್ಲಿ ತೇರ್ಗಡೆಯಾದೆ. ಬಳಿಕ 2007ರಲ್ಲಿ ಸಿವಿಲ್ ಸೇವಾ ಪರೀಕ್ಷೆ ಬರೆದೆ. ಆಗ ನನಗೆ 454 ರ್‍ಯಾಂಕ್ ದೊರೆತಿದ್ದು, ನನ್ನನ್ನು ಭಾರತೀಯ ಟ್ರೆಂಡ್ ಸರ್ವಿಸ್‍ಗೆ ಆಯ್ಕೆ ಮಾಡಲಾಯಿತು. ಆ ಸಂದರ್ಭದಲ್ಲಿ ನಾನು ಬಿಎಸ್‍ಎಫ್ ತೊರೆದು ಐಟಿಎಸ್ ಸೇರಿಕೊಂಡೆ. ಮತ್ತೆ 2018ರಲ್ಲಿ ನಾನು 5ನೇ ಬಾರಿ ಸಿವಿಲ್ ಪರೀಕ್ಷೆ ಬರೆದೆ. ಈ ಬಾರಿ ನನಗೆ 19ನೇ ರ್‍ಯಾಂಕ್ ಬಂತು ಹಾಗೂ ನನ್ನ ಕನಸು ನನಸಾಯಿತು ಎಂದು ಹರ್‌ಪ್ರೀತ್ ಸಂತಸ ವ್ಯಕ್ತಪಡಿಸಿದ್ದಾರೆ.

    ಹರ್‌ಪ್ರೀತ್ ಅವರಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಶನಲ್ ಆಕಾಡೆಮಿ ಆಫ್ ಆಡ್ಮಿನಿಸ್ಟ್ರೇಸನ್‍ನಲ್ಲಿ ಟ್ರೈನಿಂಗ್ ನಡೆಯಲಿದೆ. ಹರ್‌ಪ್ರೀತ್ ಗ್ರೀನ್ ಗ್ರೀವ್ ಪಬ್ಲಿಕ್ ಶಾಲೆಯಲ್ಲಿ ಓದಿದ ಬಳಿಕ ಎಲೆಕ್ಟ್ರಾನಿಕ್ಸ್ ನಲ್ಲಿ ಬಿಇ ಪದವಿ ಪಡೆದಿದ್ದಾರೆ. ಹರ್‌ಪ್ರೀತ್ ಅವರ ತಂದೆ ಉದ್ಯಮಿಯಾಗಿದ್ದು ತಾಯಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  • ನಕ್ಸಲರ ದಾಳಿಗೆ ಬೆಳಗಾವಿ ಯೋಧ ಹುತಾತ್ಮ

    ನಕ್ಸಲರ ದಾಳಿಗೆ ಬೆಳಗಾವಿ ಯೋಧ ಹುತಾತ್ಮ

    ಬೆಳಗಾವಿ: ಪಶ್ಚಿಮ ಬಂಗಾಳದಲ್ಲಿ ನಕ್ಸಲ ವಿರುದ್ಧ ಕಾರ್ಯಾಚರಣೆಯ ವೇಳೆ ನಕ್ಸಲರ ಗುಂಡು ತಾಗಿ ಗಂಭೀರವಾಗಿ ಗಾಯಗೊಂಡಿದ್ದ ಜಿಲ್ಲೆಯ ಬಿಎಸ್‍ಎಫ್ ಯೋಧ ಹುತಾತ್ಮರಾಗಿದ್ದಾರೆ.

    ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿ ನಾವಗ ಗ್ರಾಮದ ನಿವಾಸಿ ರಾಹುಲ್ ವಸಂತ ಶಿಂಧೆ (29) ಹುತಾತ್ಮರಾದ ಯೋಧ. ರಾಹುಲ್ ಅವರ ಪಾರ್ಥಿವ ಶರೀರವನ್ನು ಸೋಮವಾರ ಹುಟ್ಟೂರಿಗೆ ತರಲಾಗುತ್ತದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆಯೇ ಅಂತ್ಯಕ್ರಿಯೆ ನೆರವೇರಲಿಸಲು ಸಿದ್ಧತೆ ನಡೆದಿದೆ.

    ರಾಹುಲ್ ಅವರು ನಾಲ್ಕು ವರ್ಷಗಳ ಹಿಂದೆಯಷ್ಟೇ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‍ಎಫ್)ಗೆ ಸೇರಿಕೊಂಡಿದ್ದರು. ರಾಹುಲ್ ಅವರು ಇತ್ತೀಚೆಗಷ್ಟೇ ಹುಡುಗಿಯನ್ನು ನೋಡಿ ಮದುವೆಗೆ ಒಪ್ಪಿಕೊಂಡಿದ್ದರು. ಹೀಗಾಗಿ ನಿಶ್ಚಿತಾರ್ಥ ಮುಗಿಸಿಕೊಂಡು ಬಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಮನೆಯವರು ಮುಂದಿನ ತಿಂಗಳು ಮದುವೆ ನಿಶ್ಚಯ ಕೂಡ ಮಾಡಿದ್ದರು. ಆದರೆ ನಕ್ಸಲರ ಅಟ್ಟಹಾಸಕ್ಕೆ ರಾಹುಲ್ ಅವರು ಹುತಾತ್ಮರಾಗಿದ್ದಾರೆ.

    ಹುತಾತ್ಮ ರಾಹುಲ್ ಅವರ ಹಿರಿಯ ಸಹೋದರ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಗುಂಡಿನ ದಾಳಿಯಲ್ಲಿ ಕರ್ನಾಟಕ ಮೂಲದ ಬಿಎಸ್‍ಎಫ್ ಯೋಧ ವೀರಮರಣ

    ಗುಂಡಿನ ದಾಳಿಯಲ್ಲಿ ಕರ್ನಾಟಕ ಮೂಲದ ಬಿಎಸ್‍ಎಫ್ ಯೋಧ ವೀರಮರಣ

    ಚಿಕ್ಕಬಳ್ಳಾಪುರ: ಕರ್ನಾಟಕ ಮೂಲದ ಬಿಎಸ್‍ಎಫ್ ಯೋಧರೊಬ್ಬರು ಗುಂಡಿನ ದಾಳಿಯಲ್ಲಿ ವೀರಮರಣವನ್ನಪ್ಪಿದ್ದಾರೆ.

    ಯಣ್ಣಂಗೂರು ಗ್ರಾಮದ ಗಂಗಾಧರ್ ಹುತಾತ್ಮರಾದ ಯೋಧ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಯಣ್ಣಂಗೂರು ಗ್ರಾಮದವರಾಗಿದ್ದು, ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಗಡಿಭಾಗದಲ್ಲಿ ವೀರಮರಣ ಹೊಂದಿದ್ದಾರೆ.

    ಮುನಿಯಪ್ಪ ಲಕ್ಷಮ್ಮ ದಂಪತಿಯ ಹಿರಿಯ ಪುತ್ರರಾದ ಗಂಗಾಧರ್ ವೈದ್ಯೆ ಪತ್ನಿ ಶಿಲ್ಪಾ ಹಾಗೂ 10 ವರ್ಷದ ಪುತ್ರನನ್ನು ಆಗಲಿದ್ದಾರೆ. ಗಂಗಾಧರ್ ಅವರು ಕಳೆದ 20 ವರ್ಷಗಳಿಂದ ಬಿಎಸ್‍ಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು.

    ಬುಧವಾರ ಸಂಜೆ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಬಿಎಸ್‍ಎಫ್ ಅಧಿಕಾರಿಗಳಿಂದ ಕುಟುಂಬಸ್ಥರಿಗೆ ಮಾಹಿತಿ ಬಂದಿದೆ. ಇಂದು ಸಂಜೆ ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಬರುವ ಸಾಧ್ಯತೆ ಇದೆ ಎಂದು ಮೃತ ಗಂಗಾಧರ್ ಅವರ ಸಹೋದರ ಕುಮಾರ್ ಮಾಹಿತಿ ನೀಡಿದ್ದಾರೆ.