Tag: BSF

  • ಉಗ್ರರ ಒಳನುಸುಳುವಿಕೆ ತಡೆಯಲು ಬಿಎಸ್‌ಎಫ್ ಕಟ್ಟೆಚ್ಚರ; ಕಾಶ್ಮೀರ ಕಣಿವೆಯಲ್ಲಿ ಭದ್ರತೆ ಹೆಚ್ಚಳ

    ಉಗ್ರರ ಒಳನುಸುಳುವಿಕೆ ತಡೆಯಲು ಬಿಎಸ್‌ಎಫ್ ಕಟ್ಟೆಚ್ಚರ; ಕಾಶ್ಮೀರ ಕಣಿವೆಯಲ್ಲಿ ಭದ್ರತೆ ಹೆಚ್ಚಳ

    – ಎಲ್‌ಒಸಿಯಲ್ಲಿ ಭಯೋತ್ಪಾದಕರ ಲಾಂಚ್‌ ಪ್ಯಾಡ್‌ಗಳು ಸಕ್ರಿಯ; ಗುಪ್ತಚರ ವರದಿ

    ಶ್ರೀನಗರ: ಚಳಿಗಾಲದ ಸಮಯದಲ್ಲಿ ಉಗ್ರರ ಒಳನುಸುಳುವಿಕೆ ತಡೆಯುವ ಸಲುವಾಗಿ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಎಲ್‌ಒಸಿಯಲ್ಲಿ (LoC ಗಡಿ ನಿಯಂತ್ರಣ ರೇಖೆ) ಉಗ್ರ ಲಾಂಚ್‌ಪ್ಯಾಡ್‌ಗಳು ಸಕ್ರಿಯಗೊಂಡಿರುವ ಹಿನ್ನೆಲೆ ಗಡಿಯುದ್ದಕ್ಕೂ BSF (ಗಡಿ ಭದ್ರತಾ ಪಡೆ) ಕಟ್ಟೆಚ್ಚರ ವಹಿಸಿದೆ.

    ಹೌದು. ಗುಪ್ತಚರ ವರದಿಗಳ ಪ್ರಕಾರ, ಎಲ್‌ಒಸಿ ಗಡಿಯುದ್ಧಕ್ಕೂ ಹಲವಾರು ಲಾಂಚ್‌ ಪ್ಯಾಡ್‌ಗಳಲ್ಲಿ ಭಯೋತ್ಪಾದಕರು (Terrorists) ಕಣಿವೆಯೊಳಗೆ ನುಸುಳಲು ಕಾಯುತ್ತಿದ್ದಾರೆ. ಚಳಿಗಾಲದ ಸಂದರ್ಭದಲ್ಲಿ ಇದು ನಡೆಯುತ್ತಿರುತ್ತದೆ. ಹಾಗಾಗಿ ಚಳಿಗಾಲಕ್ಕೂ ಮುನ್ನವೇ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬಿಎಸ್‌ಎಫ್‌ ಮೂಲಗಳು ತಿಳಿಸಿವೆ.

    ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದ ʻವುಲರ್ 2.0ʼ ಮ್ಯಾರಥಾನ್ ವೇಳೆ ಈ ಕುರಿತು ಬಿಎಸ್‌ಎಫ್ ಹೆಚ್ಚುವರಿ ಮಹಾನಿರ್ದೇಶಕ (ADG) ಸತೀಶ್ ಎಸ್. ಖಂಡ್ರೆ ಮಾತನಾಡಿದರು.

    ಚಳಿಗಾಲ ಶುರುವಾಗುತ್ತಿದ್ದಂತೆ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವು ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಹಾಗಾಗಿ ಗಡಿಯಲ್ಲಿ ಕಣ್ಗಾವಲು ಬಲಪಡಿಸಿದ್ದೇವೆ. ನಮ್ಮ ಸೈನಿಕರು, ಅಧಿಕಾರಿಗಳನ್ನ ಅಲರ್ಟ್‌ ಮಾಡಿದ್ದೇವೆ. ಗುಪ್ತಚರ ಮಾಹಿತಿಯ ಪ್ರಕಾರ, ಈಗಾಗಲೇ ಗಡಿಯಲ್ಲಿ ಹಲವಾರು ಭಯೋತ್ಪಾದಕ ಲಾಂಚ್‌ ಪ್ಯಾಡ್‌ಗಳನ್ನ ಸಕ್ರಿಯಗೊಳಿಸಿದೆ. ಅಲ್ಲಿಂದ ಭಯೋತ್ಪಾದಕರು ಒಳನುಸುಳಲು ತಯಾರಿ ನಡೆಸುತ್ತಿದ್ದಾರೆ. ಸದ್ಯಕ್ಕೆ ಎಷ್ಟು ಉಗ್ರರು ಇದ್ದಾರೆ ಅನ್ನೋದು ಅಂದಾಜು ಮಾಡುವುದು ಕಷ್ಟ. ಆದ್ರೆ ಕೆಲ ಚಟುವಟಿಕೆಗಳು ಸಕ್ರಿಯಗೊಂಡಿರುವ ಬಗ್ಗೆ ವರದಿ ಬಂದಿದೆ. ಹಾಗಾಗಿ ನಾವು ಗಡಿಯ ಎಲ್ಲಾ ಭಾಗದಲ್ಲು ಸಕ್ರಿಯವಾಗಿದ್ದೇವೆ ಎಂದು ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಸೇನೆ, ಬಿಎಸ್‌ಎಫ್‌ ಜಂಟಿ ಕಣ್ಗಾವಲು
    ಗುಪ್ತಚರ ವರದಿ ಬೆನ್ನಲ್ಲೇ ಗಡಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಬಿಎಸ್‌ಎಫ್‌ ಹಾಗೂ ಭಾರತೀಯ ಸೇನೆ ಸಂಪೂರ್ಣ ಸಿದ್ಧವಾಗಿದ್ದು, ಜಂಟಿಯಾಗಿ ಕಣ್ಗಾವಲು ನಿಯೋಜಿಸಲಾಗಿದೆ. ನಮ್ಮ ಸೈನಿಕರ ಕಣ್ತಪ್ಪಿಸಿ‌ ಬರಲು ಯಾರಿಂದಲೂ ಸಾಧ್ಯವಿಲ್ಲ ಎಂದಿದೆ ಬಿಎಸ್‌ಎಪ್.

    ಚಳಿಗಾಲದಲ್ಲಿ ಏಕೆ ನುಸುಳುವಿಕೆ ಹೆಚ್ಚಳ?
    ಚಳಿಗಾಲದಲ್ಲಿ ಹಿಮಪಾತದಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಅನೇಕ ಮಾರ್ಗಗಳು ಮುಚ್ಚಿಕೊಳ್ಳುತ್ತವೆ. ಇದರ ಉಪಯೋಗ ಪಡೆದುಕೊಳ್ಳುವ ಭಯೋತ್ಪಾದಕರು ಒಳಗೆ ನುಸುಳಲು ಯತ್ನಿಸುತ್ತಾರೆ. ಹೀಗಾಗಿ ಬಿಎಸ್‌ಎಫ್‌ ಹಗಲು ಮತ್ತು ರಾತ್ರಿ ಕಣ್ಗಾವಲು ಇರಿಸಿದೆ. ಡ್ರೋನ್‌ಗಳನ್ನು ಸಹ ನಿಯೋಜನೆ ಮಾಡಲಾಗಿದೆ.

  • ಆಪರೇಷನ್ ಸಿಂಧೂರದಲ್ಲಿ ಅಪ್ರತಿಮ ಸಾಹಸ ಪ್ರದರ್ಶನ – 16 BSF ಯೋಧರಿಗೆ ಶೌರ್ಯ ಪದಕ

    ಆಪರೇಷನ್ ಸಿಂಧೂರದಲ್ಲಿ ಅಪ್ರತಿಮ ಸಾಹಸ ಪ್ರದರ್ಶನ – 16 BSF ಯೋಧರಿಗೆ ಶೌರ್ಯ ಪದಕ

    ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಸಮಯದಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಗಡಿ ಭದ್ರತಾ ಪಡೆಯ (BSF) 16 ಸಿಬ್ಬಂದಿಗೆ ಕೇಂದ್ರ ಸರ್ಕಾರ ಶೌರ್ಯ ಪದಕ (Gallantry Medals) ಘೋಷಿಸಿದೆ.

    ಆಪರೇಷನ್ ಸಿಂಧೂರದ ವೇಳೆ ಅಚಲ ಪರಾಕ್ರಮ, ಅಪ್ರತಿಮ ಸಾಹಸ ತೋರಿದ್ದಕ್ಕಾಗಿ 16 ಬಿಎಸ್‌ಎಫ್ ಯೋಧರಿಗೆ ಸ್ವಾತಂತ್ರ್ಯೋತ್ಸವದಂದು (Independence Day) ಶೌರ್ಯ ಪದಕ ನೀಡಲಾಗುವುದು. ಈ ಪದಕಗಳು ಗಡಿ ಭದ್ರತಾ ಪಡೆಯ ಮೇಲೆ ದೇಶವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಬಿಎಸ್‌ಎಫ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಇದನ್ನೂ ಓದಿ: ದಾವಣಗೆರೆ | ಅಪ್ರಾಪ್ತನಿಂದ ಬೈಕ್ ರೈಡ್ – ಮಾಲೀಕನಿಗೆ 25,000 ದಂಡ

    ಪದಕ ವಿಜೇತರಲ್ಲಿ ಡೆಪ್ಯೂಟಿ ಕಮಾಂಡರ್, ಇಬ್ಬರು ಸಹಾಯಕ ಕಮಾಂಡರ್ ಮತ್ತು ಒಬ್ಬ ಇನ್ಸ್ಪೆಕ್ಟರ್ ಸೇರಿದ್ದಾರೆ. ಸ್ವಾತಂತ್ರ‍್ಯ ದಿನಾಚರಣೆಯ ಮುನ್ನಾದಿನದಂದು ಕೇಂದ್ರ ಮತ್ತು ರಾಜ್ಯ ಪಡೆಗಳ 1,090 ಪೊಲೀಸ್ ಸಿಬ್ಬಂದಿಗೆ ಸೇವಾ ಪದಕಗಳನ್ನು ಸರ್ಕಾರ ಪ್ರಕಟಿಸಿದೆ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಕೇಂದ್ರ ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, 233 ಸಿಬ್ಬಂದಿಗೆ ಶೌರ್ಯ ಪದಕ, 99 ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು 758 ಜನರಿಗೆ ಪ್ರತಿಭಾನ್ವಿತ ಸೇವಾ ಪದಕ ಘೋಷಿಸಲಾಗಿದೆ. ಇದರಲ್ಲಿ ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವಾ ಸಿಬ್ಬಂದಿಗೆ ಪದಕಗಳು ಸೇರಿವೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಧರ್ಮಸ್ಥಳ ಅಲ್ಲ ಈಗ ಕನ್ಯಾಡಿಯ ಕಾಡಿನಲ್ಲೂ ಸಿಗಲಿಲ್ಲ ಯಾವುದೇ ಮೂಳೆ!

  • ಚಿಕ್ಕಮಗಳೂರು | ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡಿದ್ದ ವೀರ ಯೋಧನಿಗೆ ಸನ್ಮಾನ

    ಚಿಕ್ಕಮಗಳೂರು | ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡಿದ್ದ ವೀರ ಯೋಧನಿಗೆ ಸನ್ಮಾನ

    ಚಿಕ್ಕಮಗಳೂರು: ಪಾಕ್ ವಿರುದ್ಧ ಭಾರತ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರದಲ್ಲಿ (Operation Sindoor) ಗಾಯಗೊಂಡು, ರಜೆಯ ಮೇಲೆ ಹುಟ್ಟೂರು ಕಳಸದ ಹಳ್ಳುವಳ್ಳಿಗೆ ಆಗಮಿಸಿದ ವೀರ ಯೋಧನನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

    ಕಳಸ (Kalasa) ತಾಲೂಕಿನ ಹಳ್ಳುವಳ್ಳಿಯ ಯೋಧ ರಾಜಪ್ಪ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ, ಗಾಯಗೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು (ಜೂ.11) ವೈದ್ಯಕೀಯ ರಜೆಯ ಮೇರೆಗೆ ಹುಟ್ಟೂರಿಗೆ ಆಗಮಿಸಿದ್ದಾರೆ. ಅವರು ಊರಿಗೆ ಬಂದಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅವರಿಗೆ ಅದ್ದೂರಿ ಸ್ವಾಗತಿಸಿ, ಸನ್ಮಾನ ಮಾಡಿದ್ದಾರೆ. ಇದನ್ನೂ ಓದಿ: ಎಸಿ ಬಳಕೆಗೆ ಹೊಸ ನಿಯಮ – ದೇಶಕ್ಕೆ 18,000 ಕೋಟಿ ಉಳಿತಾಯ

    ಸ್ಥಳೀಯರು ಕಳಸ ಪಟ್ಟಣದಲ್ಲಿ ಯೋಧನನ್ನ ಮೆರವಣಿಗೆಯಲ್ಲಿ ಕರೆದೊಯ್ದಿದ್ದಾರೆ. ರಾಜಪ್ಪ ಅವರು ಬಿಎಸ್‍ಎಫ್‍ನಲ್ಲಿ (BSF) ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಸನ ಮೂಲದ ಯುವಕ ಹೃದಯಾಘಾತಕ್ಕೆ ಬಲಿ

  • ಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್‌ ವ್ಯಕ್ತಿ ಬಂಧನ

    ಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್‌ ವ್ಯಕ್ತಿ ಬಂಧನ

    – ಭಾರತೀಯ ವಾಯುಪಡೆ, ಬಿಎಸ್‌ಎಫ್‌ ಸೂಕ್ಷ್ಮ ಮಾಹಿತಿ ನೀಡಿ 40,000 ಹಣ ಪಡೆದಿದ್ದ ಆರೋಪಿ

    ಗಾಂಧೀನಗರ: ಭಾರತೀಯ ವಾಯುಪಡೆ (IAF) ಮತ್ತು ಗಡಿ ಭದ್ರತಾ ಪಡೆಗೆ (BSF) ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್‌ ಜೊತೆ ಹಂಚಿಕೊಂಡ ಆರೋಪದ ಮೇಲೆ ಗುಜರಾತ್‌ನ (Gujarat Man) ವ್ಯಕ್ತಿಯನ್ನು ಬಂಧಿಸಲಾಗಿದೆ.

    ಕಛ್ ನಿವಾಸಿಯಾಗಿರುವ ಆರೋಪಿ ಸಹದೇವ್ ಸಿಂಗ್ ಗೋಹಿಲ್ ಆರೋಗ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಅಧಿಕಾರಿ ಕೆ. ಸಿದ್ಧಾರ್ಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ಅದಿತಿ ಭಾರದ್ವಾಜ್‌ (28) ಹೆಸರಿನ ಮಹಿಳೆ 2023ರಲ್ಲಿ ವಾಟ್ಸಪ್‌ ಮೂಲಕ ಏಜೆಂಟ್‌ ಜೊತೆ ಸಂಪರ್ಕಕ್ಕೆ ಬಂದಿದ್ದಳು. ಆರೋಪಿ ಸಹದೇವ್‌ ಆಕೆಗೆ ನಿರ್ಮಾಣ ಹಂತದಲ್ಲಿರುವ ಐಎಎಫ್‌ ಮತ್ತು ಬಿಎಸ್‌ಎಫ್‌ ತಾಣಗಳ ಫೋಟೊ, ವೀಡಿಯೋಗಳನ್ನು ಕಳುಹಿಸಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

    2025 ರ ಆರಂಭದಲ್ಲಿ ಆತ ಸಿಮ್ ಕಾರ್ಡ್ ಖರೀದಿಸಿದ್ದ. OTP ಸಹಾಯದಿಂದ ಅದಿತಿ ಭಾರದ್ವಾಜ್‌ಗಾಗಿ ಆ ಸಂಖ್ಯೆಯಲ್ಲಿ ವಾಟ್ಸಾಪ್ ಅನ್ನು ಸಕ್ರಿಯಗೊಳಿಸಿದ್ದ. ಅದಾದ ಬಳಿಕ BSF ಮತ್ತು IAFಗೆ ಸಂಬಂಧಿಸಿದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಆ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಗಡಿಯಲ್ಲಿ ಭಾರತಕ್ಕೆ ನುಸುಳಲು ಯತ್ನ – ಶಂಕಿತ ಪಾಕಿಸ್ತಾನಿ ಹೊಡೆದುರುಳಿಸಿದ ಬಿಎಸ್‌ಎಫ್‌

    ಗೋಹಿಲ್ ಮಾಹಿತಿ ಹಂಚಿಕೊಳ್ಳಲು ಬಳಸಿದ ಸಂಖ್ಯೆಗಳನ್ನು ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿತ್ತು ಎಂದು ವಿಧಿವಿಜ್ಞಾನ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಗೋಹಿಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು 40,000 ರೂ. ಹಣ ನೀಡಿರುವುದು ತನಿಖೆಯಿಂದ ಗೊತ್ತಾಗಿದೆ.

    ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು. ಪರಿಣಾಮವಾಗಿ ಎಲ್ಲೆಡೆ ತನಿಖೆ ಚುರುಕುಗೊಳಿಸಲಾಗಿದೆ. ಭಾರತದ ವಿರುದ್ಧ ಬೇಹುಗಾರಿಕೆಯ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್, ಉದ್ಯಮಿ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಹತ್ತುಕ್ಕೂ ಹೆಚ್ಚು ಜನರಲ್ಲಿ ಗೋಹಿಲ್ ಕೂಡ ಒಬ್ಬ. ಇದನ್ನೂ ಓದಿ: ಉಗ್ರರ ದಾಳಿಯಿಂದ 20,000 ಭಾರತೀಯರು ಸಾವು: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಭಾರತ ಕಿಡಿ

  • ಗಡಿಯಲ್ಲಿ ಭಾರತಕ್ಕೆ ನುಸುಳಲು ಯತ್ನ – ಶಂಕಿತ ಪಾಕಿಸ್ತಾನಿ ಹೊಡೆದುರುಳಿಸಿದ ಬಿಎಸ್‌ಎಫ್‌

    ಗಡಿಯಲ್ಲಿ ಭಾರತಕ್ಕೆ ನುಸುಳಲು ಯತ್ನ – ಶಂಕಿತ ಪಾಕಿಸ್ತಾನಿ ಹೊಡೆದುರುಳಿಸಿದ ಬಿಎಸ್‌ಎಫ್‌

    ಗಾಂಧೀನಗರ: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಬಳಿಕ ಗಡಿ ದಾಟಿ ಭಾರತಕ್ಕೆ ನುಸುಳಿದ್ದ ಶಂಕಿತ ಪಾಕಿಸ್ತಾನಿ ನುಸುಳುಕೋರನನ್ನು (Pakistani intruder) ಗಡಿ ಭದ್ರತಾ ಪಡೆ (BSF) ಹೊಡೆದುರುಳಿಸಿದೆ.

    ಅಂತರರಾಷ್ಟ್ರೀಯ ಗಡಿಯನ್ನು ದಾಟಿದ ನಂತರ ಗಡಿ ಬೇಲಿಯ ಕಡೆಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ನಡೆದುಕೊಂಡು ಬರುತ್ತಿದ್ದುದನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ ಎಂದು ಗುಜರಾತ್‌ನ ಬಿಎಸ್‌ಎಫ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಉಗ್ರರ ದಾಳಿಯಿಂದ 20,000 ಭಾರತೀಯರು ಸಾವು: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಭಾರತ ಕಿಡಿ

    ನುಸುಳುಕೋರನಿಗೆ ಒಳ ಬರದಂತೆ ಬಿಎಸ್‌ಎಫ್‌ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಆದರೆ, ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಮುಂದೆ ಸಾಗಿದ್ದ. ಆತನನ್ನು ತಡೆಯಲು ಬಿಎಸ್‌ಎಫ್‌ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಗುಂಡೇಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಭಾರತ-ಪಾಕಿಸ್ತಾನದ ಸೂಕ್ಷ್ಮ ಗಡಿಯಲ್ಲಿರುವ ಬನಸ್ಕಂತ ಪ್ರದೇಶವು ತನ್ನ ಕಾರ್ಯತಂತ್ರದ ಪ್ರಾಮುಖ್ಯತೆಯಿಂದಾಗಿ ಹೆಚ್ಚಿನ ಜಾಗರೂಕತೆಯ ಕೇಂದ್ರಬಿಂದುವಾಗಿದೆ.

    ಯಾವುದೇ ಉಗ್ರ ಕೃತ್ಯಗಳು ನಡೆಯದಂತೆ ತಡೆಯಲು ಬಿಎಸ್‌ಎಫ್ ಈ ಪ್ರದೇಶದಲ್ಲಿ ಗಸ್ತು ಮತ್ತು ಕಣ್ಗಾವಲು ಹೆಚ್ಚಿಸಿದೆ. ಇದನ್ನೂ ಓದಿ: ಜಾರ್ಖಂಡ್‌| ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಇಬ್ಬರು ನಕ್ಸಲ್‌ ನಾಯಕರ ಎನ್‌ಕೌಂಟರ್‌

  • ಬಿಎಸ್‌ಎಫ್‌ ಯೋಧನಿಗೆ 20 ದಿನವೂ ಇನ್ನಿಲ್ಲದ ಟಾರ್ಚರ್‌ ನೀಡಿದ್ದ ಪಾಕ್‌

    ಬಿಎಸ್‌ಎಫ್‌ ಯೋಧನಿಗೆ 20 ದಿನವೂ ಇನ್ನಿಲ್ಲದ ಟಾರ್ಚರ್‌ ನೀಡಿದ್ದ ಪಾಕ್‌

    ನವದೆಹಲಿ: ಪಾಕಿಸ್ತಾನದ (Pakistan) ನೀಚ ಕೃತ್ಯಗಳು ಒಂದೊದೇ ಬಯಲಾಗುತ್ತಿದೆ. ಪಾಕಿಸ್ತಾನ ಗಡಿಭಾಗಕ್ಕೆ ಆಕಸ್ಮಿಕವಾಗಿ ಪ್ರವೇಶಿಸಿದ್ದ ಬಿಎಸ್‌ಎಫ್ ಯೋಧ (BSF Soldier) ಪೂರ್ಣಂ ಕುಮಾರ್ ಶಾ (Purnam Kumar Shaw) ಅವರಿಗೆ ಇನ್ನಿಲ್ಲದ ಟಾರ್ಚರ್ ನೀಡಿದೆ.

    ಪತ್ನಿ ರಜನಿ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಅವರಿಗೆ ಸರಿಯಾಗಿ ನಿದ್ರೆ ಮಾಡಲು ಅವಕಾಶ ನೀಡಿರಲಿಲ್ಲ. ಗಡಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ಮತ್ತು ಅಧಿಕಾರಿಗಳ ನಿಯೋಜನೆಯ ಬಗ್ಗೆ ಬಹುತೇಕ ಪ್ರತಿ ರಾತ್ರಿಯೂ ಪ್ರಶ್ನಿಸುತ್ತಿದ್ದರು ಎಂದು ಹೇಳಿದರು.

    ದೈಹಿಕವಾಗಿ ಹಿಂಸಿಸದಿದ್ದರೂ ಸೈನಿಕನಂತೆ ನೋಡದೇ ಗೂಢಚಾರರಂತೆ ನಡೆಸಿಕೊಂಡಿಸಿದ್ದಾರೆ. ನಿಯಮಿತವಾಗಿ ಆಹಾರ ಕೊಟ್ಟಿದ್ದರೂ ಹಲ್ಲುಜ್ಜಲು ಅವಕಾಶ ನೀಡಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

    ಪತಿಯನ್ನು ಮೂರು ಬೇರೆ ಬೇರೆ ಸ್ಥಳಗಳಲ್ಲಿ ಇಟ್ಟಿದ್ದರು. ಒಂದು ಬಾರಿ ಅವರನ್ನು ವಾಯುನೆಲೆಯ ಬಳಿ ಇರಿಸಿದ್ದರು. ಯಾಕೆಂದರೆ ಆಗಾಗ ವಿಮಾನ ಹಾರುವ ಶಬ್ಧ ಕೇಳುತ್ತಿತ್ತು ಎಂದು ವಿವರಿಸಿದರು.

    ಈಗ ಸುರಕ್ಷಿತವಾಗಿ ಭಾರತಕ್ಕೆ ಮರಳಿರುವ ಶಾ ವೈದ್ಯಕೀಯ ತಪಾಸಣೆ ಮತ್ತು ವಿಚಾರಣೆಗೆ ಒಳಗಾಗಿದ್ದಾರೆ. ಅವರ ಸೇವೆಯ ಬದ್ಧತೆಯ ಬಗ್ಗೆ ಅವರ ಪತ್ನಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 17 ವರ್ಷಗಳಿಂದ ಅವರು ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಮತ್ತು ಅವರು ಅದನ್ನು ಮುಂದುವರಿಸುತ್ತಾರೆ. ನಮಗೆ ಅವರ ಬಗ್ಗೆ ಹೆಮ್ಮೆಯಿದೆ. ರಜೆ ನೀಡದಿದ್ದರೆ ಶೀಘ್ರದಲ್ಲೇ ಪಠಾಣ್‌ಕೋಟ್‌ನಲ್ಲಿ ಅವರನ್ನು ಭೇಟಿಯಾಗುವ ಭರವಸೆ ಇದೆ ಎಂದು ರಜನಿ ಹೇಳಿದರು.  ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಇನ್ನೂ ಮುಗಿದಿಲ್ಲ, ಇದು ಟ್ರೇಲರ್ ಅಷ್ಟೇ – ರಾಜನಾಥ್ ಸಿಂಗ್

    ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ನಡೆದ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ಏಪ್ರಿಲ್ 23 ರಂದು ಪಂಜಾಬ್‌ನ ಫಿರೋಜ್‌ಪುರ ವಲಯದಲ್ಲಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಪಾಕ್‌ ಗಡಿಯನ್ನು ದಾಟಿದ್ದರು. ಭಾರತ-ಪಾಕಿಸ್ತಾನದ ಮಧ್ಯೆ ಕದನ ವಿರಾಮ ಜಾರಿಯಾದ ನಂತರ 21 ದಿನಗಳ ನಂತರ ಪೂರ್ಣಂ ಕುಮಾರ್ ಶಾ ಅವರನ್ನು ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನ ಹಸ್ತಾಂತರ ಮಾಡಿತ್ತು.

  • ಜಮ್ಮು ಗಡಿಯಲ್ಲಿ ಪಾಕ್‌ ಗುಂಡಿನ ದಾಳಿ – ಗಂಭೀರ ಗಾಯಗೊಂಡಿದ್ದ BSF ಯೋಧ ಹುತಾತ್ಮ

    ಜಮ್ಮು ಗಡಿಯಲ್ಲಿ ಪಾಕ್‌ ಗುಂಡಿನ ದಾಳಿ – ಗಂಭೀರ ಗಾಯಗೊಂಡಿದ್ದ BSF ಯೋಧ ಹುತಾತ್ಮ

    ಶ್ರೀನಗರ: ಜಮ್ಮು ಕಾಶ್ಮೀರ ಗಡಿಭಾಗವಾದ ಆರ್‌ಎಸ್ ಪುರದಲ್ಲಿ (RS Pura) ಭಾರತದ ವಿರುದ್ಧ ಪಾಕಿಸ್ತಾನ (Pakistan) ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧ (BSF Soldier) ಹುತಾತ್ಮರಾಗಿದ್ದಾರೆ.

    ದೀಪಕ್ ಚಿಮಂಗ್‌ಖಾಮ್ (Deepak Chimngakham) ಹುತಾತ್ಮರಾದ ಯೋಧ. ಮೇ 10ರಂದು ಭಾರತದ ವಿರುದ್ಧ ಪಾಕ್ ಗುಂಡಿನ ದಾಳಿ ನಡೆಸಿತ್ತು. ಪಾಕ್ ವಿರುದ್ಧ ಪ್ರತಿದಾಳಿ ನಡೆಸುವ ಸಂದರ್ಭ ದೀಪಕ್ ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್‌ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್‌ ಆರ್ಮಿ

    ಬಿಎಸ್‌ಎಫ್ ಮಹಾನಿರ್ದೇಶಕರು ಸೇರಿದಂತೆ ಎಲ್ಲಾ ಸೈನಿಕರು ಹುತಾತ್ಮರಾದ ದೀಪಕ್‌ಗೆ ಸಂತಾಪ ಸೂಚಿಸಿದ್ದಾರೆ. ದೀಪಕ್ ಅಂತ್ಯಕ್ರಿಯೆಯನ್ನು ಸೋಮವಾರ ಪಲೌರಾದ ಫ್ರಂಟಿಯರ್ ಪ್ರಧಾನ ಕಛೇರಿ ಜಮ್ಮುವಿನಲ್ಲಿ ಸೇನಾ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಬಿಎಎಸ್‌ಎಫ್ ಡಿಜಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಜೊತೆಗಿನ ಸಂಘರ್ಷದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ: ಭಾರತೀಯ ಸೇನೆ

  • ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ

    ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ

    ನವದೆಹಲಿ: ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಜೈಶ್-ಎ-ಮೊಹಮ್ಮದ್‌ (Jaish-e-Mohammed) ಸಂಘಟನೆಯ 7 ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಸಾಂಭಾದಲ್ಲಿ (Samba) ಭಾರತದ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ.

    ಗುರುವಾರ ಹಲವು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ (BSF) ವಿಫಲಗೊಳಿಸಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

    ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಬಿಎಸ್‌ಎಫ್‌ ಯೋಧರು ಗುಂಡಿಕ್ಕಿ ಕೊಂದಿದ್ದಾರೆ ಈ ಮಾಹಿತಿಯನ್ನು ಬಿಎಸ್‌ಎಫ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

    ಜಮ್ಮು, ರಾಜಸ್ಥಾನ ಮತ್ತು ಪಂಜಾಬ್‌ನ ಅಮೃತಸರ ಸೇರಿ ಭಾರತದ 15 ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮಿಸೈಲ್‌, ಡ್ರೋನ್‌ ದಾಳಿ ನಡೆಸಿತು. ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್‌ನ ಎಲ್ಲಾ ಮಿಸೈಲ್‌ಗಳನ್ನು ಹೊಡೆದುರುಳಿಸಿದೆ. ಇದನ್ನೂ ಓದಿ: ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ರದ್ದಾಗುತ್ತಾ ಐಪಿಎಲ್‌?- ಅತ್ತ ಪಾಕ್‌ ಸೂಪರ್‌ ಲೀಗ್‌ ದುಬೈಗೆ ಶಿಫ್ಟ್‌

  • ಯುದ್ಧ ಕಾರ್ಮೋಡದ ನಡುವೆ BSFಗೆ ಇನ್ನಷ್ಟು ಬಲ – 16 ಹೊಸ ಬೆಟಾಲಿಯನ್ ಸೇರ್ಪಡೆ?

    ಯುದ್ಧ ಕಾರ್ಮೋಡದ ನಡುವೆ BSFಗೆ ಇನ್ನಷ್ಟು ಬಲ – 16 ಹೊಸ ಬೆಟಾಲಿಯನ್ ಸೇರ್ಪಡೆ?

    – ಪಾಕ್, ಬಾಂಗ್ಲಾ ಗಡಿಯಲ್ಲಿ ಪ್ರಾದೇಶಿಕ ಕಚೇರಿ

    ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದ್ದಂತೆ ಇದೀಗ ಭಾರತದ ಗಡಿ ಭದ್ರತಾ ಪಡೆಗೆ (BSF) ಇನ್ನುಷ್ಟು ಬಲ ಬಂದಿದ್ದು, 16 ಹೊಸ ಬೆಟಾಲಿಯನ್‌ಗಳು (battalions) ಸೇರ್ಪಡೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

    ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತಿದ್ದು, ಬಿಎಸ್‌ಎಫ್‌ಗೆ 16 ಹೊಸ ಬೆಟಾಲಿಯನ್‌ಗಳು ಮತ್ತು ಭಾರತ ಪಾಕ್ ಮತ್ತು ಭಾರತ ಬಾಂಗ್ಲಾ ಗಡಿಯಲ್ಲಿ ಒಂದೊಂದರಂತೆ ಎರಡು ಹೊಸ ಪ್ರಾದೇಶಿಕ ಪ್ರಧಾನ ಕಚೇರಿಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಶೀಘ್ರವೇ ಅನುಮೋದನೆ ನೀಡಲಿದೆ. ಜೊತೆಗೆ ಬೆಟಾಲಿಯನ್‌ಗಳಲ್ಲಿ ಸುಮಾರು 17,000 ಹೊಸ ಸೈನಿಕರನ್ನು ನೇಮಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಕುರಿತು 2020-21ರಲ್ಲಿ ಬಿಎಸ್‌ಎಫ್ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಇದನ್ನೂ ಓದಿ: 30 ನಿಮಿಷ ಲೈಟ್ ಆಫ್ – ಪಂಜಾಬ್ ಗಡಿಯಲ್ಲಿ ಸೇನೆಯಿಂದ ಮಾಕ್ ಡ್ರಿಲ್

    ಈ ಕುರಿತು ಭದ್ರತಾ ಪಡೆ ಮಾಹಿತಿ ನೀಡಿದ್ದು, ಪ್ರಸ್ತುತ ಈ ಅರೆಸೇನಾಪಡೆಯು 193 ಬೆಟಾಲಿಯನ್‌ಗಳನ್ನು ಹೊಂದಿದ್ದು, ಒಂದು ಬೆಟಾಲಿಯನ್ 1,000 ಮಂದಿಗೂ ಹೆಚ್ಚು ಯೋಧರನ್ನು ಒಳಗೊಂಡಿದೆ. ಕೇಂದ್ರ ಸರ್ಕಾರ (Central Government) ಅನುಮೋದನೆ ನೀಡುತ್ತಿದ್ದಂತೆ ಬಿಎಸ್‌ಎಫ್ ಮಹಿಳಾ ಹಾಗೂ ಪುರುಷ ಸಿಬ್ಬಂದಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದೆ.

    ಕಳೆದ ವರ್ಷ ಬಾಂಗ್ಲಾದೇಶದಲ್ಲಿ (Bangladesh) ಶೇಖ್ ಹಸೀನಾ ಸರ್ಕಾರದ ಪತನ ಹಾಗೂ ಏ.22ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭದ್ರತಾ ದೃಷ್ಟಿಯಿಂದ ಬಿಎಸ್‌ಎಫ್‌ಗೆ ಬಲ ಹೆಚ್ಚಿಸುತ್ತಿದೆ. ಕೇಂದ್ರ ಹಣಕಾಸು ಸಚಿವಾಲಯದ ಅನುಮೋದನೆ ಸೇರಿದಂತೆ ಕೆಲವು ಅಂತಿಮ ಅನುಮೋದನೆಗಳು ಬಾಕಿಯಿದ್ದು, ಶೀಘ್ರದಲ್ಲೇ ಮಂಜೂರಾಗುವ ನಿರೀಕ್ಷೆಯಿದೆ.

    ಜಮ್ಮು ಮತ್ತು ಪಂಜಾಬ್‌ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಲು ಜಮ್ಮುವಿನಲ್ಲಿ ಒಂದು ವಲಯ ಹಾಗೂ ಬಾಂಗ್ಲಾದೇಶ ಗಡಿಯ ಉತ್ತಮ ಕಣ್ಗಾವಲುಗಾಗಿ ಎರಡನೇ ವಲಯ ಮಿಜೋರಾಂನಲ್ಲಿ ಸ್ಥಾಪನೆಯಾಗಲಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಜೀವಂತ: ತಸ್ಲಿಮಾ ನಸ್ರೀನ್‌

  • ಪಾಪಿ ಪಾಕಿಸ್ತಾನ – ಗಡಿಯಲ್ಲಿ ಸುರಂಗ ಕುತಂತ್ರ ತನಿಖೆಗೆ ಬಿಎಸ್‌ಎಫ್‌ಗೆ ನಿರ್ದೇಶನ

    ಪಾಪಿ ಪಾಕಿಸ್ತಾನ – ಗಡಿಯಲ್ಲಿ ಸುರಂಗ ಕುತಂತ್ರ ತನಿಖೆಗೆ ಬಿಎಸ್‌ಎಫ್‌ಗೆ ನಿರ್ದೇಶನ

    ಶ್ರೀನಗರ: ಪಾಪಿ ಪಾಕಿಸ್ತಾನ (Pakistan) ಕುತಂತ್ರ ಬಿಡ್ತಿಲ್ಲ. ಸುರಂಗ ಮಾರ್ಗ ಬಳಕೆ ಮಾಡಿ ಭಾರತಕ್ಕೆ ಉಗ್ರರನ್ನ ಕಳುಹಿಸುವ ಕುತಂತ್ರ ಮಾಡ್ತಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.

    ಎಲ್‌ಓಸಿ (Line Of Control) ಬಳಿ ಟನಲ್ ಸುರಂಗಗಳನ್ನು ಅಗೆದು ಆಕ್ಸಿಜನ್ ಪೈಪ್ ಅಳವಡಿಸಿ ಉಗ್ರರನ್ನ ಭಾರತಕ್ಕೆ ನುಸುಳಿಸಲು ಕುತಂತ್ರ ಮಾಡ್ತಿದೆ. ಸಂಘರ್ಷದ ವೇಳೆ ಅದೇ ಸುರಂಗ ಮಾರ್ಗದಲ್ಲಿ ಸೈನ್ಯವನ್ನ ಕಳುಹಿಸಬಹುದೆಂಬ ಅನುಮಾನ ಇದೆ. ಹಾಗಾಗಿ ಆಳವಾದ ಭೂಗತ ಟನಲ್‌ಗಳನ್ನ ಕೃತ್ಯಕ್ಕೆ ಬಳಸುವ ಸಾಧ್ಯತೆ ಬಗ್ಗೆ ತನಿಖೆ ಮಾಡಲು ಬಿಎಸ್‌ಎಫ್‌ಗೆ (Border Security Force) ನಿರ್ದೇಶನ ನೀಡಲಾಗಿದೆ ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ನಾವು ಬಿರುಗಾಳಿ ಬೀಸಿದ್ರೂ ʻಅಲ್ಲಾಹು ಅಕ್ಬರ್ʼ ಅಂತೀವಿ – ಪಹಲ್ಗಾಮ್ ಜಿಪ್‌ಲೈನ್ ಆಪರೇಟರ್ ತಂದೆ

    ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terror Attack) ನಂತರ ಎಚ್ಚೆತ್ತ ಭಾರತ ಪಾಕಿಸ್ತಾನವು ಒಳನುಸುಳುವಿಕೆ ಬಗ್ಗೆ ರಹಸ್ಯ ತನಿಖೆ ನಡೆಸ್ತಿದ್ದು, ನುಸುಳುವಿಕೆಗೆ ಆಳವಾದ ಸುರಂಗಗಳನ್ನು ಅಗೆಯುವಲ್ಲಿ ಪಾಕಿಸ್ತಾನ ಕುತಂತ್ರ ಫಲಿಸಿದ್ಯಾ ಇಲ್ವಾ ಎಂಬುದನ್ನ ಕಂಡುಹಿಡಿಯಲು ನಿರ್ದೇಶಿಸಲಾಗಿದೆ. ಇದನ್ನೂ ಓದಿ: ಕುಡುಪು ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿ ಕೊಲೆ ಕೇಸ್ – 20 ಆರೋಪಿಗಳು ಬಂಧನ

    ಸುರಂಗ ಕೊರೆಯುವ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪಾಕಿಸ್ತಾನ ಗಡಿಯಲ್ಲಿ ಈಗಾಗಲೇ ಮಾಜಿ ಸೈನಿಕರ ನಿಯೋಜನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ನಿಗದಿಯಾಗಿದ್ದ ಮೋದಿ ರಷ್ಯಾ ಪ್ರವಾಸ ದಿಢೀರ್‌ ರದ್ದು!

    ಜನವರಿ ಆರಂಭದಲ್ಲೇ ಸುರಂಗ ನುಸುಳಿವಿಕೆ ಬಗ್ಗೆ ಗುಪ್ತಚರ ಮಾಹಿತಿ ಇತ್ತು ಎನ್ನಲಾಗಿದೆ. ಈಗ ಪಾಕಿಸ್ತಾನದ ಗಡಿಯಲ್ಲಿ 200 ಮೀ. ಸುರಂಗ ಕೊರೆದ ಅನುಮಾನ ಇದೆ. ಅಲ್ಲದೆ ಒಳನುಸುಳುವವರಿಗೆ ಉಸಿರಾಡಲು ಆಮ್ಲಜನಕ ಪೈಪ್ ಅಳವಡಿಕೆ ಶಂಕೆ ವ್ಯಕ್ತವಾಗಿದೆ. 2001ರಿಂದ ಇಲ್ಲಿ ತನಕ 22 ಸುರಂಗಗಳನ್ನ ಪತ್ತೆ ಹಚ್ಚಿರುವ ಭಾರತ, ಪಾಕಿಸ್ತಾನದಿಂದ ಭಾರತಕ್ಕೆ ನುಸುಳಲು ಬಳಸುವ ಸುರಂಗ ಮಾರ್ಗಗಳಲ್ಲಿ ಇಲ್ಲಿ ತನಕ 25 ಕಿ.ಮೀ ಭೂಗತ ಸುರಂಗಗಳನ್ನ ಅಗೆದಿರುವ ಮಾಹಿತಿ ಇದೆ. ಇದನ್ನೂ ಓದಿ: ಪಾಕ್‌ ವಿರುದ್ಧ ಜಲಯುದ್ಧ – ಚೆನಾಬ್‌ ನದಿಯ ನೀರಿನ ಮಟ್ಟ ಭಾರೀ ಇಳಿಕೆ

    2020ರಲ್ಲಿ 500 ಮೀ. ಉದ್ದ ಮತ್ತು 30 ಮೀ. ಆಳವಿದ್ದ ಸುರಂಗವನ್ನು ಭಾರತಉಡೀಸ್ ಮಾಡಲಾಗಿತ್ತು. ಪಾಕಿಸ್ತಾನ ಗಡಿಯಲ್ಲಿ ಹುಲ್ಲಿನಿಂದ ತುಂಬಿ ಉಗ್ರರನ್ನು ಮರೆಮಾಚುವ ಮೂಲಕ ಪಾಕ್ ಕುತಂತ್ರ ಬುದ್ಧಿ ತೋರಿಸಿತ್ತು.