Tag: bs yedyurappa

  • ಬಿಎಸ್‍ವೈ ಗಂಡಸಾಗಿದ್ರೆ ಇಲ್ಲಿ ಬಂದು ಮಾತಾಡ್ಲಿ: ಮಧು ಬಂಗಾರಪ್ಪ ವಾಗ್ದಾಳಿ

    ಬಿಎಸ್‍ವೈ ಗಂಡಸಾಗಿದ್ರೆ ಇಲ್ಲಿ ಬಂದು ಮಾತಾಡ್ಲಿ: ಮಧು ಬಂಗಾರಪ್ಪ ವಾಗ್ದಾಳಿ

    ಧಾರವಾಡ: ಶಿವಮೊಗ್ಗ ಜಿಲ್ಲೆಯಿಂದ ಮೂರು ಜನ ಮುಖ್ಯಮಂತ್ರಿಗಳು ಆಗಿದ್ದಾರೆ. ಅದರಲ್ಲಿ ಅತ್ಯಂತ ಕಚಡಾ ಮುಖ್ಯಮಂತ್ರಿ ಅಂದ್ರೆ ಅದು ಬಿಎಸ್ ಯಡಿಯೂರಪ್ಪ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜೆಡಿಎಸ್ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಮೂಗನ್ನ ಹಿಡಿದು ರೈತರ ಸಾಲ ಮನ್ನಾ ಮಾಡಿಸುವದಾಗಿ ಹೇಳುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಪ್ರಧಾನಿ ಮೋದಿ ಮೂಗನ್ನ ಹಿಡಿದು ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು. ರೈತರ ಸಾಲವನ್ನ ಮನ್ನಾ ಮಾಡದೇ ಇದ್ರೆ ರೈತರು ನಿಮ್ಮ ಮನೆಗೆ ಬರ್ತಾರೆ ಅಂದ್ರು.

    ಕಲ್ಲಡ್ಕ ಪ್ರಭಾಕರ ಅವರನ್ನ ಬಂಧಿಸಿದರೆ ಇಡೀ ಮಂಗಳೂರಿಗೆ ಬೆಂಕಿ ಹಾಕ್ತೀನಿ ಅಂತಾರೆ ಬಿಎಸ್‍ವೈ. ಗಂಡಸುತನ ಇದ್ರೆ ಅದೇ ಮಾತನ್ನ ಇಲ್ಲೇ ಬಂದು ಹೇಳಲಿ ಎಂದು ಮಧು ಬಂಗಾರಪ್ಪ ಸವಾಲು ಹಾಕಿದ್ರು. ಯಡಿಯೂರಪ್ಪನವರ ರಕ್ತ ಒಳ್ಳೆ ರಕ್ತ ಅಲ್ಲ. ಅದು ರಾಜ್ಯದ ರೈತರ ವಿರೋಧಿ ರಕ್ತ ಎಂದು ಬಿಎಸ್‍ವೈ ಮೇಲೆ ಕಿಡಿ ಕಾರಿದರು.

  • ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಎಸ್‍ವೈ ಮನೆಗೆ ಮುತ್ತಿಗೆ

    ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಎಸ್‍ವೈ ಮನೆಗೆ ಮುತ್ತಿಗೆ

    ಶಿವಮೊಗ್ಗ: ಭಾನುವಾರದಂದು ಬಳ್ಳಾರಿಯಲ್ಲಿ ಶ್ರೀರಾಮುಲು ನಿವಾಸಕ್ಕೆ ಮುತ್ತಿಗೆ ಹಾಕಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಇವತ್ತು ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಿದ್ದಾರೆ.

    ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡಿಸಲು ಆಗ್ರಹಿಸಿದ ಕಾರ್ಯಕರ್ತರು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲು ಸಂಸದರು ವಿಫಲರಾಗಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ಮುತ್ತಿಗೆ ಹಾಕ್ತಿದ್ದಂತೆ ಪೊಲೀಸರು ಸುಮಾರು 25ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಬಂಧಿಸಿ ಬಿಡುಗಡೆ ಮಾಡಿದ್ರು.

    ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ವೇಳೆ ಯಡಿಯೂರಪ್ಪ ಬೆಂಗಳೂರಿನ ಮನೆಯಲ್ಲಿದ್ದರು.

  • ವಿಧಾನಸೌಧ ಆವರಣದಲ್ಲಿ ಸಿಕ್ಕಿದ್ದ ಕೋಟಿ ರೂಪಾಯಿ ಪ್ರಕರಣಕ್ಕೆ ಹೊಸ ಟ್ವಿಸ್ಟ್

    ವಿಧಾನಸೌಧ ಆವರಣದಲ್ಲಿ ಸಿಕ್ಕಿದ್ದ ಕೋಟಿ ರೂಪಾಯಿ ಪ್ರಕರಣಕ್ಕೆ ಹೊಸ ಟ್ವಿಸ್ಟ್

    ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಸಿಕ್ಕಿದ್ದ ಒಂದೂ ಮುಕ್ಕಾಲು ಕೋಟಿ ರೂಪಾಯಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎದುರಾಳಿಗಳನ್ನು ಮಟ್ಟ ಹಾಕೋ ಸಲುವಾಗಿ ಸಿಎಂ ಸಿದ್ದರಾಮಯ್ಯ ಹೊಸ ಅಸ್ತ್ರವನ್ನ ರಡಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

    ಹೌದು. ಇನ್ನೇನು ಚಾರ್ಜ್‍ಶೀಟ್ ದಾಖಲಾಗಿದೆ, ಈ ಪ್ರಕರಣದ ಕಥೆ ಮುಗಿದೇ ಹೋಯ್ತು ಅನ್ನುವಾಗ ಉಳಿದಿರೋ ತನಿಖೆ ಪಕ್ಕಾ ನಡೆಸಿ ಅಂತ ಹೊಸ ಪೊಲೀಸ್ ಟೀಂ ಅಖಾಡಕ್ಕೆ ಇಳಿಸಿದ್ದಾರೆ. ಐದಾರು ತಿಂಗಳ ಬಳಿಕ ಎಸಿಪಿಯೊಬ್ಬರ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿದೆ.

    ಅಖಾಡದಲ್ಲಿರೋ ಎಂಟತ್ತು ಮಂದಿ ಅಧಿಕಾರಿಗಳ ತಂಡ ಲಾಯರ್ ಬಳಿ ಇದ್ದ ಕೋಟ್ಯಂತರ ರುಪಾಯಿ ದುಡ್ಡು ಯಾರದ್ದು ಎಂಬ ಬಗ್ಗೆ ಪತ್ತೆ ಹಚ್ಚುತ್ತಿದೆ. ಕಾರಿನಲ್ಲಿ ಸಿಕ್ಕಿದ್ದ ಕರೆನ್ಸಿ ನಂಬರ್ ಹಿಡಿದುಕೊಂಡು ಪೊಲೀಸ್ ಅಧಿಕಾರಿಗಳು ಬ್ಯಾಂಕ್‍ಗಳಿಗೆ ಸುತ್ತುತ್ತಿದ್ದಾರೆ.

    ಹೆಚ್ಚು ಕಮ್ಮಿ 100 ಬ್ಯಾಂಕ್‍ಗಳ ಪಟ್ಟಿ ಸಿದ್ಧಪಡಿಸಿರೋ ಪೊಲೀಸರ ತಂಡ ಈಗಾಗಲೇ 50ಕ್ಕೂ ಹೆಚ್ಚು ಬ್ಯಾಂಕ್‍ಗಳಿಂದ ಮಾಹಿತಿ ಸಂಗ್ರಹಿಸಿದೆ. ಆರೋಪಿ ವಕೀಲ ಸಿದ್ಧಾರ್ಥ್ ಹೈಕೋರ್ಟ್ ನಲ್ಲಿ ಪಡೆದುಕೊಂಡಿರೋ ಸ್ಟೇ ತೆರವಿಗೆ ವಿಶೇಷ ಪೊಲೀಸ್ ಟೀಂ ಮುಂದಾಗಿದೆ.

    ಇನ್ನು ದುಡ್ಡು ಸಿಕ್ಕಿದ್ದಾಗ ಕಾಂಗ್ರೆಸ್ಸಿಗರು ಬಿಜೆಪಿ ಕಡೆ ಬೊಟ್ಟು ಮಾಡಿದ್ರು. ಆದರೆ ಆ ದುಡ್ಡಿನ ಬಗ್ಗೆ ಬಿಎಸ್‍ವೈ ಅವರನ್ನು ಕೇಳಿದ್ರೆ ಹೆಚ್ಚಿನ ಮಾಹಿತಿ ಸಿಗುತ್ತೆ ಅಂತ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ರು.

    ಇದು ಎದುರಾಳಿಗಳನ್ನು ಹೆಣೆಯಲು ಸಿಎಂ ಅಂಡ್ ಟೀಂ ಹೂಡಿರೋ ಹೊಸ ಅಸ್ತ್ರ ಎನ್ನಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಈ ಅಸ್ತ್ರ ಬಳಸಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.

    ಏನಿದು ಪ್ರಕರಣ?: 2016ರ ಅಕ್ಟೋಬರ್‍ನಲ್ಲಿ ವಿಧಾನಸೌಧದ ಗೇಟ್ ಬಳಿ ತಪಾಸಣೆ ಮಡುವ ವೇಳೆ ವಕೀಲ ಸಿದ್ಧಾರ್ಥ್ ಅವರ ವೋಕ್ಸ್ ವೇಗನ್ ಕಾರಿನಲ್ಲಿ ಸಾಗಿಸಲಾಗ್ತಿದ್ದ ದಾಖಲೆಯಿಲ್ಲದ ಸುಮಾರು 1.97 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ಹಣವನ್ನು ಪೊಲೀಸರು ಜಪ್ತಿ ಮಾಡಿ ಸಿದ್ಧಾರ್ಥ್‍ರನ್ನು ವಿಚಾರಣೆಗೆ ಒಳಪಡಿಸಿದ್ದರು.

     

  • ಮಂಡ್ಯ: ಪಕ್ಷದವ್ರಿಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಅಧಿಕಾರಕ್ಕೆ ಬಂದ್ಮೇಲೆ ಜಾಗ ತೋರಿಸ್ತೀವಿ- ಪೊಲೀಸರಿಗೆ ಬಿಎಸ್‍ವೈ ಧಮ್ಕಿ

    ಮಂಡ್ಯ: ಪಕ್ಷದವ್ರಿಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಅಧಿಕಾರಕ್ಕೆ ಬಂದ್ಮೇಲೆ ಜಾಗ ತೋರಿಸ್ತೀವಿ- ಪೊಲೀಸರಿಗೆ ಬಿಎಸ್‍ವೈ ಧಮ್ಕಿ

    ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪೊಲೀಸ್ ಅಧಿಕಾರಿಗಳಿಗೆ ಮುಂದೆ ಅಧಿಕಾರಕ್ಕೆ ಬಂದಾಗ ನೋಡ್ಕೊತೀವಿ ಅಂತಾ ಅವಾಜ್ ಹಾಕಿದ್ದಾರೆ.

    ಗುರುವಾರದಂದು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಬಿಜೆಪಿಯ ಜನ ಸಂಪರ್ಕ ಅಭಿಯಾನ-ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಬಿಎಸ್‍ವೈ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಬಿಜೆಪಿ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ನೀಡಲು ನಿರಾಕರಿಸಿದ್ದಲ್ಲದೇ ಬಿಜೆಪಿ ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ. ಸಾರ್ವಜನಿಕ ಸಭೆಗೆ ಸಬ್ ಇನ್ಸ್ ಪೆಕ್ಟರ್ ಯೋಗಾನಂಜಪ್ಪ ಅನುಮತಿ ನೀಡದೇ ಕಿರುಕುಳ ನೀಡಿದ್ದಾರೆ. ಅಂತಹ ಅಧಿಕಾರಿಗಳ ಪಟ್ಟಿಯನ್ನು ನಾವು ಸಿದ್ಧಪಡಿಸ್ತೇವೆ. ಕಾಲ ಬಂದಾಗ ತೋರಿಸಬೇಕಾದ ಜಾಗ ತೋರಿಸ್ತೇವೆ. ಅದಕ್ಕೆ ಅವಕಾಶ ಕೊಡದೆ ನಿಮ್ಮ ನಡವಳಿಕೆ ತಿದ್ದುಕೊಳ್ಳಿ ಎಂದು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರಗಳು ಬರುತ್ತೆ, ಹೋಗುತ್ತೆ. ಆದ್ರೆ ಪೊಲೀಸರು ಎಲ್ಲರಿಗೂ ಒಂದೇ ರೀತಿ ನಡೆದುಕೊಳ್ಳಬೇಕು. ಬಿಜೆಪಿಗರನ್ನ ಲಘುವಾಗಿ ಕಾಣೋದು ತರವಲ್ಲ. ಅದು ಖಾಕಿ ಬಟ್ಟೆ ತೊಟ್ಟವರಿಗೆ ಶೋಭೆ ತರುವಂತದ್ದಲ್ಲ ಅಂದ್ರು. ಎಲ್ಲರನ್ನ ಸಮಾನವಾಗಿ ಪರಿಗಣಿಸಬೇಕು ಎಂದು ಪೊಲೀಸರಿಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದ್ರು.

  • ಬಿಎಸ್‍ವೈಗೆ ಮತ್ತೆ ಸಂಕಷ್ಟ – 257 ಎಕರೆ ಅಕ್ರಮ ಡಿನೋಟಿಫಿಕೇಷನ್ ಆರೋಪ, ಎಸಿಬಿಗೆ ದೂರು ದಾಖಲು

    ಬಿಎಸ್‍ವೈಗೆ ಮತ್ತೆ ಸಂಕಷ್ಟ – 257 ಎಕರೆ ಅಕ್ರಮ ಡಿನೋಟಿಫಿಕೇಷನ್ ಆರೋಪ, ಎಸಿಬಿಗೆ ದೂರು ದಾಖಲು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ.

    ಬೆಂಗಳೂರು ಉತ್ತರ ತಾಲೂಕಿನ ಶಿವರಾಮಕಾರಂತ ಬಡಾವಣೆಯಲ್ಲಿ ಅಕ್ರಮವಾಗಿ 257 ಎಕರೆ ವಿಸ್ತೀರ್ಣದ ಜಮೀನು ಡಿನೋಟಿಫಿಕೇಷನ್ ಮಾಡಿದ್ದಾರೆ ಅಂತ ಆರೋಪಿಸಿ ಎಸಿಬಿ ಎಡಿಜಿಪಿಗೆ ದೂರು ನೀಡಲಾಗಿದೆ.

    ಜನಸಾಮಾನ್ಯರ ವೇದಿಕೆ ಸಂಚಾಲಕರಾದ ಅಯ್ಯಪ್ಪ ಎಂಬವರು ಬಿಎಸ್‍ವೈ ವಿರುದ್ಧ ದೂರು ದಾಖಲಿಸಿದ್ದಾರೆ. ಯಡಿಯೂರಪ್ಪನವರ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮಕೈಗೊಳ್ಳಬೇಕು ಅಂತ ಅಯ್ಯಪ್ಪ ಹೇಳಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮೌರ್ಯ ಸರ್ಕಲ್ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಜನಸಾಮಾನ್ಯರ ವೇದಿಕೆ ಪ್ರತಿಭಟನೆ ನಡೆಸಿತು. ಯಡಿಯೂರಪ್ಪ ಕರಪ್ಶನ್ ಕಾ ಕಿಂಗ್ ಅಂತಾ ಘೋಷಣೆ ಕೂಗಿದ್ರು.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಯಡಿಯೂರಪ್ಪ, ದೂರುದ್ದೇಶದಿಂದ ಈ ರೀತಿ ಆರೋಪ ಮಾಡ್ತಿದ್ದಾರೆ. ಅದ್ಯಾವುದೇ ಇದ್ರೂ ಸರ್ಕಾರ ವಾಪಸ್ ತೆಗೆದುಕೊಳ್ಳಬಹುದು. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದಿದ್ದಾರೆ.

  • 75 ವರ್ಷ ತುಂಬಿದವರಿಗೆ ಬಿಜೆಪಿಯಲ್ಲಿ ಅಧಿಕಾರವಿಲ್ಲವೆಂಬ ಪ್ರಶ್ನೆಗೆ ಬಿಎಸ್‍ವೈ ಉತ್ತರಿಸಿದ್ದು ಹೀಗೆ

    75 ವರ್ಷ ತುಂಬಿದವರಿಗೆ ಬಿಜೆಪಿಯಲ್ಲಿ ಅಧಿಕಾರವಿಲ್ಲವೆಂಬ ಪ್ರಶ್ನೆಗೆ ಬಿಎಸ್‍ವೈ ಉತ್ತರಿಸಿದ್ದು ಹೀಗೆ

    ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರೇ ಕರ್ನಾಟಕದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆದ್ರೆ ಬಿಜೆಪಿಯಲ್ಲಿ 75 ವರ್ಷ ವಯಸ್ಸು ತುಂಬಿದವರಿಗೆ ಅಧಿಕಾರವಿಲ್ಲವೆಂಬ ಪ್ರಶ್ನೆಗೆ ಬಿಎಸ್ ಯಡಿಯೂರಪ್ಪ ಇಂದು ಉತ್ತರಿಸಿದ್ದಾರೆ.

    ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಬಿಎಸ್‍ವೈ, ನನಗೆ ಈಗ 73 ವರ್ಷ ತುಂಬಿ 74 ವರ್ಷಕ್ಕೆ ಕಾಲಿಡುತ್ತಿದ್ದೇನೆ. ನಾವು ಅಧಿಕಾರಕ್ಕೆ ಬರುವಾಗ 75ನೇ ವರ್ಷಕ್ಕೆ ಕಾಲಿಡುತ್ತೇನೆ. ಯಾವ ಸಮಸ್ಯೆ, ಗೊಂದಲ ನಮ್ಮಲ್ಲಿ ಇಲ್ಲ. 2018ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಹೆಸರು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ರು.

    ನಾನು ಶಿಕಾರಿಪುರದಿಂದಲೇ ಸ್ಪರ್ಧಿಸುತ್ತೇನೆ. ಎಲ್ಲರ ಆಪೇಕ್ಷೆಯೂ ಅದೇ ಇದೆ. 150 ಸ್ಥಾನ ಗೆಲ್ಲುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ಹಾಗಾಗಿ ಯಾರೊಂದಿಗೂ ಹೊಂದಾಣಿಕೆ ಪ್ರಶ್ನೆ ಉದ್ಭವಿಸಲ್ಲ. ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

    ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಾತನಾಡಿ, ಅಮಿತ್ ಶಾ ಅವರ ಸ್ಟ್ರ್ಯಾಟಜಿಯಿಂದಲೇ ಉತ್ತರಪ್ರದೇಶದಲ್ಲಿ ಜಯ ಗಳಿಸಿದ್ದು. ಇಲ್ಲಿಯೂ ಅದೇ ಸ್ಟ್ರಾಟಜಿ ಮಾಡುತ್ತಿದ್ದಾರೆ. ಇಬ್ಬರೂ ಕುಳಿತೇ ಅಭ್ಯರ್ಥಿಗಳನ್ನ ಫೈನಲ್ ಮಾಡ್ತೇವೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಲ್ಲರ ಸಲಹೆ ಪಡೆಯುತ್ತೇನೆ. ಮೂರ್ನಾಲ್ಕು ಮಂದಿಯಿದ್ದರೆ ಸರ್ವೆ ಮಾಡಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಈಗಾಗಲೇ 150 ಅಭ್ಯರ್ಥಿಗಳನ್ನ ಗುರುತಿಸಿದ್ದೇವೆ. ಉಳಿದ ಕಡೆ ಜಿಲ್ಲಾ ನಾಯಕರ ಸಲಹೆ ಪಡೆದು ಅಭ್ಯರ್ಥಿ ಹಾಕುತ್ತೇವೆ. ಮಿಷನ್ 150 ಗುರಿ ನಮ್ಮದು. ಆ ಗುರಿಯನ್ನ ನಾವು ತಲುಪುತ್ತೇವೆ. ನಾವು ಅಧಿಕಾರಕ್ಕೆ ಬಂದ ನಂತರ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಬಿಎಸ್‍ವೈ ಹೇಳಿದ್ರು.

    ಇದೇ ವೇಳೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸರ್ಕಾರಕ್ಕೆ ನಾಲ್ಕು ವರ್ಷ. ನಾಲ್ಕು ವರ್ಷದ ಸಾಧನೆ ಭ್ರಷ್ಟಾಚಾರದಲ್ಲಿ ನಂ.1. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಲ್ಲಿ 2ನೇ ಸ್ಥಾನ. ಲೋಕಾಯುಕ್ತ ನಿಷ್ಕ್ರಿಯ ಮಾಡಿದ್ದೊಂದು ಸಾಧನೆ. ಸೇಡು ತೀರಿಸಿಕೊಳ್ಳಲು ಎಸಿಬಿ ರಚನೆ ಮಾಡಿದ್ರು. ಪ್ರಾಮಾಣಿಕ ಅಧಿಕಾರಿಗಳಿಗೆ ಉಸಿರುಗಟ್ಟುವ ಸ್ಥಿತಿ ಇದೆ. ಐಎಎಸ್ ಅಧಿಕಾರಿಗಳ ಸಾವಿನ ಪ್ರಕರಣಗಳು ನಡೆದಿವೆ. ಆಹಾರ ಇಲಾಖೆಯಲ್ಲಿ ಅಕ್ಕಿ ಖರೀದಿಯಲ್ಲಿ ದುರ್ಬಳಕೆಯಾಗಿ ಕೋಟ್ಯಾಂತರ ರೂ. ಲೂಟಿಯಾಗಿದೆ ಅಂತ ಆರೋಪಿಸಿದ್ರು.

    ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡ್ರು. ಪುತ್ರನಿಗೆ ವಿಕ್ಟೋರಿಯಾ ಆವರಣದಲ್ಲಿ ಪಾಲುದಾರಿಕೆ ಸಂಸ್ಥೆಗೆ ಲ್ಯಾಬ್ ಸ್ಥಾಪನೆಗೆ ಅವಕಾಶ ಕೊಟ್ಟರು. ವಿಧಾನಸೌಧದಲ್ಲಿ ಕಡತಗಳು ನಾಪತ್ತೆಯಾದ್ವು
    ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದಲ್ಲಿ ಅಕ್ರಮ ನಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಅಂದ್ರು.

    ನಾನು ಸದ್ಯ 6 ಜಿಲ್ಲೆಯ ಪ್ರವಾಸ ಮುಗಿಸಿದ್ದೇನೆ. ಮತ್ತೆ ನಾಳೆಯಿಂದ ಪ್ರವಾಸ ಮುಂದುವರಿಸುತ್ತೇನೆ. ನಿತ್ಯ ಬೆಳಿಗ್ಗೆ ದಲಿತರ ಮನೆ ಕಾಲೋನಿಗೆ ಹೋಗ್ತಿದ್ದೇನೆ. ಬಹಳ ದಯನೀಯ ಸ್ಥಿತಿಯಲ್ಲಿ ಕಾಲೋನಿಗಳು ಇವೆ. ಸಿಎಂ ಹೆಲಿಕಾಪ್ಟರ್ ಬಿಟ್ಟು ಕೆಳಗೆ ಇಳಿದು ಅಲ್ಲಿಗೆ ಹೋಗಿ ಬನ್ನಿ. ಗೋಶಾಲೆಗಳಿಗೆ ಹೋದ್ರೆ ಸಾಕಷ್ಟು ಮೇವಿಲ್ಲ. ಏನು ಬಂದಿದೆ ನಿಮಗೆ ದರಿದ್ರ? ಎಂದು ಸಿದ್ದರಾಮಯ್ಯ ವಿರುದ್ಧ ಬಿಎಸ್ ವೈ ವಾಗ್ದಾಳಿ ನಡೆಸಿದ್ರು.

    ಬರಗಾಲದ ವಿಚಾರದಲ್ಲಿ ರಾಜಕೀಯ ಮಾಡ್ತಾರೆ. ಪ್ರತಿಯೊಂದಕ್ಕೂ ಕೇಂದ್ರದ ಕಡೆ ಬೆರಳು ತೋರಿಸುತ್ತಾರೆ. 5,224 ಕೋಟಿ ರೂ. ಹಣ ಇಲ್ಲಿಯವರೆಗೆ ಕೇಂದ್ರದಿಂದ ಬಿಡುಗಡೆಯಾಗಿದೆ.
    ಆದರೂ ಕೇಂದ್ರದ ವಿರುದ್ಧ ಹಗುರವಾಗಿ ಟೀಕೆ ಮಾಡುತ್ತಿದ್ದಾರೆ. ದಲಿತ ಕಾಲೋನಿಗೆ ಹೋಗಿದ್ದನ್ನೇ ರಾಜಕಾರಣ ಮಾಡುತ್ತಿದ್ದಾರೆ. ದಲಿತ ಸಮುದಾಯದ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್ ನವರಿಗೆ ಇಲ್ಲ. ಹಿಂದೆ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಏನು ಮಾಡ್ತು ಅನ್ನೋದು ಗೊತ್ತು. ಜಗಜೀವನ್ ರಾಂ ಅವರಿಗೆ ಏನ್ ಮಾಡಿದ್ರು ಅನ್ನೋದು ಗೊತ್ತು. ಅದನ್ನೆಲ್ಲ ಜನರಿಗೆ ಹೇಳುತ್ತಿದ್ದೇನೆ ಅಂದ್ರು.

    ರೈತರ ಸಾಲ ಮನ್ನಾ ಮಾಡಬೇಕು. ಜುಲೈ ವೇಳೆಗೆ ರೈತರ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ 4 ಲಕ್ಷ ರೈತರನ್ನ ಕರೆಸಿ ಪ್ರತಿಭಟನೆ ಮಾಡುತ್ತೇನೆ ಅಂತ ಎಚ್ಚರಿಕೆ ನೀಡಿದ್ರು. ಇನ್ನು ಕಸಾಯಿಖಾನೆಗಳಿಗೆ ಗೋವುಗಳ ಮಾರಾಟ ನಿಷೇಧ ವಿಚಾರದಲ್ಲಿ ಮೋದಿಯವರ ನಿರ್ಧಾರ ಸ್ವಾಗತಿಸುತ್ತೇನೆ ಅಂದ್ರು.

    ಜಂತಕಲ್ ಮೈನಿಂಗ್ ಹಗರಣ ಪ್ರಕರಣದಲ್ಲಿ ಬಿಎಸ್‍ವೈ ನನ್ನ ಮೇಲೆ ಕೇಸ್ ಹಾಕಿಸಿದ್ದು ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಎಸ್‍ವೈ, ನಾನು ಸಿಎಂ ಆಗಿದ್ದಾಗಲೇ ಹಗರಣದ ಬಗ್ಗೆ ಪುಸ್ತಕ ಮಾಡಿ ಹಂಚಿದ್ದೆ. ಅದು ಈಗ ಮಾಡಿದ್ದಲ್ಲ. ಕುಮಾರಸ್ವಾಮಿ ಆರೋಪಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರ ಮೇಲೆ ಆರೋಪದ ಪ್ರತಿ ನಮ್ಮ ಆಫೀಸ್‍ನಲ್ಲಿ ರೆಡಿ ಆಗಿದೆ ಅನ್ನೋದು ಸುಳ್ಳು. ಅಂದು ರೈತರ ಸಾಲ ಮನ್ನಾಕ್ಕೆ ವಿರೋಧಿಸಿದ್ದು ನಿಜ. ಆಗ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಆ ಬಳಿಕ ಎರಡೆರಡು ಬಾರಿ ರೈತರ ಸಾಲ ಮನ್ನಾ ಮಾಡಿದ್ದೇವೆ ಅಂದ್ರು.

  • ಬಿಜೆಪಿ ಕಚೇರಿ ಸಿಬ್ಬಂದಿಗೆ ಬಿಎಸ್‍ವೈ ವಾರ್ನಿಂಗ್ ನೀಡಿದ್ದು ಹೀಗೆ

    ಬಿಜೆಪಿ ಕಚೇರಿ ಸಿಬ್ಬಂದಿಗೆ ಬಿಎಸ್‍ವೈ ವಾರ್ನಿಂಗ್ ನೀಡಿದ್ದು ಹೀಗೆ

    ಬೆಂಗಳೂರು: ಪಕ್ಷದ ಒಳಗಿನ ಭಿನ್ನಮತದ ವಿಚಾರಗಳು ಹೊರಗಡೆ ಸೋರಿಕೆ ಆಗಲು ಪಕ್ಷದ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳೇ ಕಾರಣ ಎನ್ನುವ ನಿರ್ಧಾರಕ್ಕೆ ಬಂದಿರುವ ಬಿಎಸ್ ಯಡಿಯೂರಪ್ಪ ಈಗ ಎಲ್ಲ ಸಿಬ್ಬಂದಿಗೆ ವಾರ್ನಿಂಗ್ ನೀಡಿದ್ದಾರೆ.

    ಪಕ್ಷದ ಮಾಹಿತಿ ಸೋರಿಕೆ ಮತ್ತು ಕಚೇರಿಯಲ್ಲಿದ್ದುಕೊಂಡು ಪಕ್ಷದ ವಿರುದ್ಧ ಕೆಲಸ ಮಾಡುವವರ ಬಗ್ಗೆ ನಿಗಾವಹಿಸಲಾಗುವುದು. ತಪ್ಪಿತಸ್ಥ ಎಂದು ಕಂಡುಬಂದರೆ 24 ಗಂಟೆಯೊಳಗಾಗಿ ಕಚೇರಿಯಿಂದಲೇ ಗೇಟ್ ಪಾಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

    ಸಲಹೆ, ಸೂಚನೆ, ಏನೇ ಮಾಹಿತಿ ಸೋರಿಕೆ ಆದರೂ ರಾಜ್ಯಾಧ್ಯಕ್ಷನಾದ ನಾನೇ ಅದಕ್ಕೆ ಉತ್ತರದಾಯಿತ್ವನಾಗಿರಬೇಕಾಗುತ್ತದೆ. ಚುನಾವಣೆ ಸಮಯದಲ್ಲಿ ಪಕ್ಷದ ಕಾರ್ಯತಂತ್ರಗಳು ಇತರರ ಕೈಸೇರಿದರೆ ಭಾರೀ ಅಪಾಯವಿದೆ. ಈ ಎಲ್ಲ ವಿಚಾರಗಳನ್ನು ತಿಳಿದುಕೊಂಡು ಜಾಗೃತರಾಗಿ ಕೆಲಸ ಮಾಡಬೇಕೆಂದು ಬಿ.ಎಸ್. ಯಡಿಯೂರಪ್ಪ ಬಿಜೆಪಿ ಕಚೇರಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

    ಚಿತ್ರದುರ್ಗ ಬರ ಪ್ರವಾಸ ಬಳಿಕ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮೇ 20 ಶನಿವಾರ ರಾತ್ರಿ ಬಿಎಸ್‍ವೈ ಸಭೆ ನಡೆಸಿ ಈ ಎಚ್ಚರಿಕೆ ನೀಡಿದ್ದಾರೆ. ಕಚೇರಿ ಸಿಬ್ಬಂದಿಗೆ ಯಾರಿಗೂ ಯಾವುದೇ ಮಾಹಿತಿ ನೀಡದಂತೆ ತಾಕೀತು ಮಾಡಿದ್ದಾರೆ.

    ಈ ಹಿಂದೆ ಬಿಜೆಪಿ ಕಚೇರಿ ಸಿಬ್ಬಂದಿಯಿಂದಲೇ ಮಾಹಿತಿ ಸೋರಿಕೆಯಾಗುತ್ತದೆ ಎಂದು ಸುದ್ದಿ ಹಬ್ಬಿತ್ತು. ಮಾಹಿತಿ ಸೋರಿಕೆ ಆಧಾರದ ಮೇಲೆ ಕಚೇರಿಯ ಟೈಪಿಸ್ಟ್ ಆಗಿದ್ದ ಮಲ್ಲಿಕಾರ್ಜುನ ಎಂಬ ವ್ಯಕ್ತಿಯನ್ನು ಈ ಹಿಂದೆ ಮನೆಗೆ ಕಳುಹಿಸಲಾಗಿತ್ತು.

    ಕೆಲ ದಿನಗಳ ಹಿಂದೆ 14 ವರ್ಷಗಳ ಕಾಲ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್ ಅವರು ತಮ್ಮ ಸ್ಥಾನಕ್ಕೆ ದಿಢೀರ್ ಆಗಿ ರಾಜೀನಾಮೆ ನೀಡಿದ್ದರು. ಕೇಶವ ಪ್ರಸಾದ್ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದರು.

  • ಬಿಜೆಪಿಯಲ್ಲಿ ನಿಲ್ಲದ ಕಚ್ಚಾಟ- ಸಮಾವೇಶದ ಸಿಡಿ ಸಮೇತ ಇಂದು ಬಿಎಸ್‍ವೈ ದೆಹಲಿಗೆ

    ಬಿಜೆಪಿಯಲ್ಲಿ ನಿಲ್ಲದ ಕಚ್ಚಾಟ- ಸಮಾವೇಶದ ಸಿಡಿ ಸಮೇತ ಇಂದು ಬಿಎಸ್‍ವೈ ದೆಹಲಿಗೆ

    ಬೆಂಗಳೂರು: ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಬಿಕ್ಕಟ್ಟು ಜೋರಾಗಿದೆ. ಈ ಮಧ್ಯೆ, ಸಮಾವೇಶದ ಸಿಡಿ ಸಮೇತ ಇವತ್ತು ಬಿಎಸ್‍ವೈ ದೆಹಲಿಗೆ ತೆರಳಲಿದ್ದಾರೆ. ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್‍ಗೆ ಮಾಹಿತಿ ಕೊಟ್ಟಿದ್ದು, ಇವತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ದೂರು ನೀಡಲಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಗ್ಗೆ ಮಾತನಾಡಿರುವ ಯಡಿಯೂರಪ್ಪನವರು ಕ್ಷಮೆ ಯಾಚಿಸಬೇಕು ಅಂತಾ ಈಶ್ವರಪ್ಪ ಆಗ್ರಹಿಸಿದ್ದಾರೆ. ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಸಂತೋಷ್ ಬಗ್ಗೆ ಮಾತನಾಡಲು ಯಡಿಯೂರಪ್ಪನವರಿಗೆ ಅಧಿಕಾರ ಕೊಟ್ಟವರು ಯಾರು ಅಂತಾ ಕಿಡಿಕಾರಿದ್ರು. ಹೈಕಮಾಂಡ್‍ನ ಮಾತು ಕೇಳದ, ಸಂತೋಷ್ ವಿರುದ್ಧ ಮಾತನಾಡಿರುವ ಯಡಿಯೂರಪ್ಪ ವಿರುದ್ಧ ಶಿಸ್ತು ಕ್ರಮವಾಗಬೇಕು. ನನ್ನ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಅಂತಾ ಯಡಿಯೂರಪ್ಪಗೆ ಮತ್ತೆ ಟಾಂಗ್ ಕೊಟ್ರು.

    ಇದನ್ನೂ ಓದಿ: ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ: ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ಅಶ್ವಥ್ ನಾರಾಯಣ ವಾಗ್ದಾಳಿ

    ನನ್ನ ತಂದೆ ತಾಯಿ ಮೇಲಾಣೆ ನಾನು ಕಾಂಗ್ರೆಸ್ ಸಹವಾಸ ಮಾಡಿಲ್ಲ. ನನ್ನ ಕಡಿದರೂ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ ಅಂತಾ ಯಡಿಯೂರಪ್ಪಗೆ ತಿರುಗೇಟು ನೀಡಿದ್ರು. ನಾವ್ಯಾರೂ ಇನ್ನು ಹೈಕಮಾಂಡ್ ಬಳಿ ಹೋಗಲ್ಲ, ಮೇ 10 ರೊಳಗೆ ಎಲ್ಲವನ್ನು ಸರಿಪಡಿಸಬೇಕು. ಹೈಕಮಾಂಡ್ ಮತ್ತೆ ಯಡಿಯೂರಪ್ಪ ಇಬ್ಬರಿಗೂ ಇದು ಡೆಡ್ ಲೈನ್ ಅಂದ್ರು.

    https://www.youtube.com/watch?v=Z61LNlYeEl8

    https://www.youtube.com/watch?v=WKL1FcLuAyM

    https://www.youtube.com/watch?v=FnDvcFgKDoQ

  • ಈಶ್ವರಪ್ಪ ಬಣದ ಬಂಡಾಯಕ್ಕೆ ಯಡಿಯೂರಪ್ಪ ಥಂಡಾ!

    ಈಶ್ವರಪ್ಪ ಬಣದ ಬಂಡಾಯಕ್ಕೆ ಯಡಿಯೂರಪ್ಪ ಥಂಡಾ!

    ಬೆಂಗಳೂರು: ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಅವರ ಬಣದ ಬಂಡಾಯವನ್ನು ಶಮನ ಮಾಡಲು ಬಿಎಸ್‍ವೈ ಮುಂದಾಗಿದ್ದು ಬೆಂಗಳೂರಿನ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಅವರ ಅಮಾನತು ಆದೇಶ ನಾಲ್ಕೇ ತಿಂಗಳಿನಲ್ಲಿ ರದ್ದಾಗಿದೆ.

    ಬಿಎಸ್ ಯಡಿಯೂರಪ್ಪ ಅವರ ಸೂಚನೆ ಹಿನ್ನಲೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಪಿಎನ್ ಸದಾಶಿವ ಅಮಾನತು ಆದೇಶ ವಾಪಸ್ ಪಡೆದಿದ್ದಾರೆ. ವೆಂಕಟೇಶ್ ಮೂರ್ತಿ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುತ್ತಾರೆ ಎಂಬ ಭರವಸೆಯಿಂದ ಅಮಾನತು ಆದೇಶ ವಾಪಸ್ ಪಡೆಯಲಾಗಿದೆ ಎಂದು ಹೇಳಲಾಗಿದೆ.

    ಪರಿಷತ್ ಸದಸ್ಯ ಈಶ್ವರಪ್ಪ ನೇತೃತ್ವದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡ ಕಾರಣಕ್ಕೆ ಜನವರಿ 9ರಂದು ವೆಂಕಟೇಶ್ ಮೂರ್ತಿ ಅವರನ್ನ ಅಮಾನತು ಮಾಡಲಾಗಿತ್ತು. ಆದ್ರೆ ಅಸಮಾಧಾನಿತರ ಬಂಡಾಯಕ್ಕೆ ಮಣಿದ ಬಿಎಸ್‍ವೈ ನಾಲ್ಕೇ ತಿಂಗಳಿಗೆ ವೆಂಕಟೇಶ್ ಅವರ ಅಮಾನತು ಆದೇಶ ವಾಪಸ್ ಪಡೆದಿದ್ದಾರೆ ಅಂತ ಹೇಳಲಾಗಿದೆ.

    ವೆಂಕಟೇಶ್ ಮೂರ್ತಿ ಅಮಾನತುಗೊಂಡಾಗ ಇದು ಬಿಜೆಪಿಯ ಟೆಸ್ಟ್ ಡೋಸ್. ಮುಂದಿನ ದಿನಗಳಲ್ಲಿ ರಾಯಣ್ಣ ಬ್ರಿಗೇಡ್ ಜೊತೆ ಗುರುತಿಸಿಕೊಂಡಿರುವ ಮತ್ತಷ್ಟು ನಾಯಕರ ಮೇಲೆ ಬಿಜೆಪಿ ಕ್ರಮ ಕೈಗೊಳ್ಳಲಿದೆ ಎನ್ನುವ ಮಾತುಗಳು ಅಂದು ಕೇಳಿ ಬಂದಿತ್ತು.

  • ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ

    ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ

    ಬೆಂಗಳೂರು: ವಿವಾದಿತ ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಯೋಜನೆಯನ್ನು ಕೈಬಿಡಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿದೆ.

    ಕಪ್ಪ ಡೈರಿಯ ವಿಚಾರವಾಗಿ ಆರೋಪ ಮಾಡಿದ್ದ ಬಿಜೆಪಿಗೆ ತಿರುಗೇಟು ನೀಡಲು ಸಿದ್ದು ಮಾಸ್ಟರ್‍ಪ್ಲಾನ್ ಮಾಡಿದ್ದು, ಅಚ್ಚರಿಯ ತೀರ್ಮಾನ ಪ್ರಕಟಿಸಲು ಸಜ್ಜಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ ಎಂದು ಹೇಳಲಾಗಿದೆ.

    ಸ್ಟೀಲ್ ಬ್ರಿಡ್ಜ್ ಸಂಬಂಧ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂ. ಕಿಕ್‍ಬ್ಯಾಕ್ ಹೋಗಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪ ಮಾಡಿದ್ರು. ಗೋವಿಂದರಾಜು ಡೈರಿಯಲ್ಲಿ 65 ಕೋಟಿ ರೂ. ಕಪ್ಪದ ಬಗ್ಗೆ ಬರವಣಿಗೆ ಸಾಕ್ಷಿ ಇದೆ ಅಂತಾ ಬಿಎಸ್‍ವೈ ಆರೋಪಿಸಿದ್ದರು.

    ಈ ಹಿನ್ನೆಲೆಯಲ್ಲಿ ವಿವಾದಕ್ಕೆ ಸಿಲುಕ್ಕಿದ್ದ ಸಿಎಂ ಸಿದ್ದರಾಮಯ್ಯ ಆಂಡ್ ಟೀಂ ಸ್ಟೀಲ್‍ ಬ್ರಿಡ್ಜ್ ನಿರ್ಮಾಣವನ್ನೇ ಕೈಬಿಡಲು ತೀರ್ಮಾನ ಮಾಡಿದ್ದು, ಆರೋಪ ಮಾಡಿದ್ದ ಬಿಜೆಪಿಗೆ ಟಾಂಗ್ ಕೊಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

    ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ ?: ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1856 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು ಪರಿಸರಕ್ಕೆ ಹಾನಿಯಾಗುತ್ತೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪ್ರತಿಪಕ್ಷ ಬಿಜೆಪಿ ಕೂಡ ಈ ಯೋಜನೆಯನ್ನು ವಿರೋಧಿಸಿತ್ತು. ಬಳಿಕ ಈ ಯೋಜನೆಯಲ್ಲಿ ಡೀಲ್ ಆಗಿದೆ ಅಂತಾ ಬಿಜೆಪಿ ಆರೋಪಿಸಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಹಿನ್ನೆಲೆಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಳಂಬವಾಗಿತ್ತು. ಈ ನಡುವೆ ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ ಬ್ರಿಡ್ಜ್ ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು.