Tag: bs Yedeyurappa

  • ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿ ನಾನಲ್ಲ: ಬಿವೈ ವಿಜಯೇಂದ್ರ

    ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿ ನಾನಲ್ಲ: ಬಿವೈ ವಿಜಯೇಂದ್ರ

    ಬೆಂಗಳೂರು: ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿ ನಾನಲ್ಲ ಅಂತಹ ಯಾವುದೇ ಪ್ರಯತ್ನವನ್ನು ನಾನು ನಡೆಸಿಲ್ಲ ಎಂದು ಬಿಎಸ್‍ವೈ ಪುತ್ರ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

    ಪರಿಷತ್ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂಬ ಅಪ್ಪಟ ಸುಳ್ಳು ಸುದ್ದಿ ಹರದಾಡುತ್ತಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಪಕ್ಷದಲ್ಲಿ ಅರ್ಹರಾಗಿರುವವರು ಅನೇಕ ಮಂದಿ ಹಿರಿಯರಿದ್ದಾರೆ. ಪಕ್ಷದಲ್ಲಿ ಸುಮ್ಮನೆ ಗೊಂದಲ ಮೂಡಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿ ಟ್ವೀಟ್ ಮಾಡಿದ್ದಾರೆ.

    ವರುಣ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಪುತ್ರ ವಿಜಯೇಂದ್ರನನ್ನು ಕಣಕ್ಕೆ ಇಳಿಸಲು ಬಿಎಸ್ ಯಡಿಯೂರಪ್ಪನವರು ಚಿಂತನೆ ನಡೆಸಿದ್ದಾರೆ. ಹಾಗಾಗಿ ಹೈಕಮಾಂಡ್ ಜೊತೆ ಬಿಎಸ್‍ವೈ ಚರ್ಚೆ ನಡೆಸಿದ್ದಾರೆ ಎನ್ನುವ ವಿಚಾರ ಮಾಧ್ಯಮಗಳಿಗೆ ಸಿಕ್ಕಿತ್ತು. ಆದರೆ ಈಗ ಈ ಸುದ್ದಿಗಳಿಗೆ ವಿಜಯೇಂದ್ರ ಅವರು ಫುಲ್ ಸ್ಟಾಪ್ ಹಾಕಿದ್ದಾರೆ.

     

  • ಪುತ್ರ ವಿಜಯೇಂದ್ರಗೆ ಟಿಕೆಟ್: ದೆಹಲಿಯಲ್ಲಿ ಬಿಎಸ್‍ವೈ ಲಾಬಿ!

    ಪುತ್ರ ವಿಜಯೇಂದ್ರಗೆ ಟಿಕೆಟ್: ದೆಹಲಿಯಲ್ಲಿ ಬಿಎಸ್‍ವೈ ಲಾಬಿ!

    ನವದೆಹಲಿ: ವರುಣಾ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಪರಿಷತ್ ಚುನಾವಣೆಗೆ ಅಖಾಡಕ್ಕೆ ಇಳಿಸಲು ಮುಂದಾಗಿದ್ದಾರೆ.

    ಪರಿಷತ್ ಚುನಾವಣೆಯಲ್ಲಿ ಪುತ್ರ ವಿಜಯೇಂದ್ರ ನನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿರುವ ಅವರು ಹೈಕಮಾಂಡ್ ಜೊತೆ ನೇರವಾಗಿ ಚರ್ಚೆ ನಡೆಸಲು ದೆಹಲಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.

    ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ವಿರುದ್ಧ ಬಿಎಸ್‍ವೈ ಪುತ್ರ ಕಣಕ್ಕೆ ಇಳಿಯುತ್ತಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಯತೀಂದ್ರ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ನಮಗೆ ಪಕ್ಷ ಮುಖ್ಯ. ತಂದೆ ಮಕ್ಕಳಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೈಕಮಾಂಡ್ ಬಿಎಸ್‍ವೈಗೆ ತಿಳಿಸಿತ್ತು. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ನನ್ನ ನಿರ್ಣಯ. ಇದರಲ್ಲಿ ಯಾರ ಪಾತ್ರವೂ ಇಲ್ಲ ಎಂದು ಹೇಳಿದ್ದರು.

    ಪುತ್ರನಿಗೆ ವಿಧಾನ ಪರಿಷತ್ ಟಿಕೆಟ್ ಚರ್ಚೆಯ ಜೊತೆಗೆ ಜಯನಗರ ಮತ್ತು ರಾಜರಾಜೇಶ್ವರಿ ನಗರ ಚುನಾವಣೆ ಬಗ್ಗೆ ಹೈಕಮಾಂಡ್ ಜೊತೆ ಬಿಎಸ್‍ವೈ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

  • ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇಲ್ಲ, ಬಿಜೆಪಿ ವರ್ಸಸ್ ಆಲ್ ಅದರ್ಸ್: ಶೆಟ್ಟರ್

    ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇಲ್ಲ, ಬಿಜೆಪಿ ವರ್ಸಸ್ ಆಲ್ ಅದರ್ಸ್: ಶೆಟ್ಟರ್

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಸೋಲಿನ ಪರಾಮರ್ಶೆ ಸಭೆ ನಡೆಸಿದ್ದಾರೆ.

    ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಚರ್ಚೆ ನಡೆಸಿದ್ದು ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಸಿ.ಟಿ.ರವಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ. ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಕ್ಕೆ ಬೇಷರತ್ ಬೆಂಬಲ ನೀಡುತ್ತಿದೆ. ಇಂತಹ ರಾಜಕಾರಣವನ್ನು ಎಲ್ಲೂ ನೋಡಿಲ್ಲ. ಕಾಂಗ್ರೆಸ್ ಹಂತ ಹಂತವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಕ್ಕೆ ಇದೇ ಉದಾಹರಣೆ ಎಂದು ಹೇಳಿದರು.

    ಜಯನಗರ, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ದೇಶದಲ್ಲಿ ಮೋದಿ ವರ್ಸಸ್ ಆಲ್ ಅದರ್ಸ್, ಬಿಜೆಪಿ ವರ್ಸಸ್ ಆಲ್ ಅದರ್ಸ್ ಎನ್ನುವ ರೀತಿಯಾಗಿದೆ. ಕರ್ನಾಟಕದಲ್ಲಿ ಕೂಡ ಅದೇ ವಾತಾವರಣ ಇದೆ ಎಂದರು.

    ಕಾಂಗ್ರೆಸ್ ಜೆಡಿಎಸ್ ಅದೇ ರೀತಿ ಇಲ್ಲೂ ಕುತಂತ್ರ ನಡೆಸುವುದಕ್ಕೆ ಹೊರಟಿದ್ದಾರೆ. ಜನ ಇಂತಹ ಕುತಂತ್ರಗಳಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

  • ಗುರುವಾರ ಬೆಳಿಗ್ಗೆ ಬಿಎಸ್‍ವೈ ಪ್ರಮಾಣವಚನ : ಬಿಜೆಪಿಗೆ ಗವರ್ನರ್ ಅನುಮತಿ

    ಗುರುವಾರ ಬೆಳಿಗ್ಗೆ ಬಿಎಸ್‍ವೈ ಪ್ರಮಾಣವಚನ : ಬಿಜೆಪಿಗೆ ಗವರ್ನರ್ ಅನುಮತಿ

    ಬೆಂಗಳೂರು: ಬಿಜೆಪಿ ರಾಜ್ಯಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಗುರುವಾರ ಬೆಳಿಗ್ಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ರಾಜ್ಯಪಾಲ ವಿ.ಆರ್. ವಾಲಾ  ಬಿಜೆಪಿ ಸರ್ಕಾರ ರಚನೆ ಮಾಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಎಲ್ಲ ಶಾಸಕರು ಬೆಳಗ್ಗೆ 8.30ಕ್ಕೆ ರಾಜಭವನದಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ. ಪ್ರಮಾಣ ವಚನ ಸ್ವೀಕರಿಸಿದರೂ ಸರ್ಕಾರ ರಚನೆಗೆ 15  ದಿನ ಕಾಲಾವಕಾಶವನ್ನು ರಾಜ್ಯಪಾಲರು ನೀಡಿದ್ದಾರೆ.

    ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿ, ಗುರುವಾರ ಬೆಳಗ್ಗೆ ರಾಜಭವನದಲ್ಲಿ ಬಿಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಂತಸ ಗಳಿಗೆಯಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಬೆಳಗ್ಗೆ ಸರ್ಕಾರ ರಚನೆ ಸಂಬಂಧ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯಿತು. ಶಾಸಕಾಂಗದ ನಾಯಕರಾಗಿ ಯಡಿಯೂರಪ್ಪನವರನ್ನು ಆಯ್ಕೆ ಮಾಡಿದ ಬಳಿಕ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

    ಸಂಜೆಯ ವೇಳೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದರು. ಹೀಗಾಗಿ ರಾಜ್ಯಪಾಲರು ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಹೆಚ್ಚಿತ್ತು. ಈಗ ರಾಜ್ಯಪಾಲರು ಬಿಜೆಪಿಗೆ ಅನುಮತಿ ನೀಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗುವ ಸಾಧ್ಯತೆಯಿದೆ.

    ಬಿಎಸ್ ಯಡಿಯೂರಪ್ಪ ಅವರು ನಾಳೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಗೆ ಈಗಾಗಲೇ ಅರ್ಚಕರು ಆಗಮಿಸಿದ್ದಾರೆ.

    https://twitter.com/nimmasuresh/status/996758894994182145

  • ಮಹದಾಯಿ ಬಗ್ಗೆ ಮೋದಿ ಸುಳ್ಳು ಹೇಳಿದ್ದಾರೆ: ಎಚ್‍ಕೆ ಪಾಟೀಲ್

    ಮಹದಾಯಿ ಬಗ್ಗೆ ಮೋದಿ ಸುಳ್ಳು ಹೇಳಿದ್ದಾರೆ: ಎಚ್‍ಕೆ ಪಾಟೀಲ್

    ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ಞಾವಂತಿಕೆ ನೆಲದಲ್ಲಿ ಜನರನ್ನು ತಪ್ಪುದಾರಿಗೆ ಎಳೆದಿದ್ದಾರೆ. ಅವರ ಹೇಳಿಕೆ ವಾಸ್ತವಾಂಶಕ್ಕೆ ಸಂಬಂಧವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‍ಕೆ ಪಾಟೀಲ್ ಹೇಳಿದ್ದಾರೆ.

    ಸಣ್ಣಮಟ್ಟದ ರಾಜಕೀಯ ಭಾಷಣದ ಮೂಲಕ ಸುಳ್ಳುಗಳ ಸರಮಾಲೆ ಮಾಡಿ ಪ್ರಜ್ಞಾವಂತ ಜನರಿಗೆ ಅವಮಾನಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಪ್ರಧಾನಿ ಘನತೆ ಕಡಿಮೆ ಮಾಡಬೇಕೆನ್ನುವ ದುರುದ್ದೇಶ ಅಥವಾ ಅಜ್ಞಾನದಿಂದಲೋ ಮೋದಿ ಅವರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ 2005-06ರಲ್ಲೆ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಎಲ್ಲರಿಗೂ ಗೊತ್ತಿದೆ. 2007ರಲ್ಲಿ ಗೋವಾದಲ್ಲಿ ಮಹದಾಯಿ ವಿಚಾರದಲ್ಲಿ ಸೋನಿಯಾಗಾಂಧಿ ಹೇಳಿಕೆ ನೀಡಿದಾಗ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲೆ ಇದ್ದರು. ಕರ್ನಾಟಕದ ರಾಜಕೀಯ ಘಟನೆ ಬಗ್ಗೆ ಮಾತನಾಡುವಾಗ ಇಲ್ಲಿನ ರಾಜಕೀಯದ ಬಗ್ಗೆ ಅರಿವು ಹೊಂದಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸುದೈವವೋ, ದುರ್ದೈವವೋ ಪ್ರಧಾನಿ ಪಟ್ಟದಲ್ಲಿದ್ದೀರಿ. ನಿಮಗಿರೋ ಶಿಷ್ಠಾಚಾರದ ಹಿನ್ನೆಲೆಯಲ್ಲಿ ಸುಳ್ಳನ್ನು ಜನರಿಗೆ ಬಿತ್ತರಿಸಬೇಡಿ. 2007ರಲ್ಲಿ ಸೋನಿಯಾಗಾಂಧಿ ಹೇಳಿಕೆಯನ್ನು ವಿವಾದಾತ್ಮಕವಾಗಿ ಪ್ರಕಟಿಸಿದ್ದು ಮಾಧ್ಯಮಗಳು. ಹೇಳಿಕೆ ಬಂದ ತಕ್ಷಣವೇ ಸೋನಿಯಾಗಾಂಧಿ ಪ್ರತಿಕ್ರಿಯಿಸಿದ್ದಾರೆ. ವಿವಾದಾತ್ಮ ಹೇಳಿಕೆ ಪ್ರಧಾನಿ ಗಮನಕ್ಕೆ ಬಂದಿದೆ. ಆದರೆ ಅದಕ್ಕೆ ಪ್ರತಿಕ್ರಿಯಿಸಿದ ಹೇಳಿಕೆ ಪ್ರಧಾನಿ ಗಮನಕ್ಕೆ ಬರಲಿಲ್ಲವೇ ಎಂದು ಅವರು ಪ್ರಶ್ನೆ ಮಾಡಿದರು.

    ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣದ ಮೊರೆ ಹೋದವರು ಬಿಎಸ್ ಯಡಿಯೂರಪ್ಪ. ಈ ಬಗ್ಗೆ ವಾಸ್ತವಿಕ ಸತ್ಯ ಕೂಡ ಪ್ರಧಾನಿಗೆ ಗೊತ್ತಿರಲಿಲ್ವಾ?. ಬಿಜೆಪಿಯವರು ಮಾಡಿದ ತಪ್ಪಿಗೆ ನಮ್ಮನ್ನು ಹೊಣೆಗಾರರನ್ನಾಗಿಸುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಕೂಡ ಹುಬ್ಬಳ್ಳಿಯಲ್ಲಿ ಪರಿಕ್ಕರ್ ಪತ್ರ ಓದಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದರು. ಅದೇ ಮಾದರಿಯಲ್ಲಿ ಪ್ರಧಾನಿ ಕೂಡ ಮತ್ತೊಂದು ತಪ್ಪು ಮಾಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಕಳಸಾ ಬಂಡೂರಿ ಯೋಜನೆ ಹುಟ್ಟು ಹಾಕಿದೆ. ನೀವು ಹೇಳಿದ್ದು ಕೇಳಿಕೊಂಡು ಸುಮ್ಮನಿರಲು ರಾಜ್ಯದ ಜನತೆ ಮೂರ್ಖರಲ್ಲ. ಈ ಪವಿತ್ರ ಭೂಮಿಯ ಮೇಲೆ ನೀವು ಕನ್ನಡಿಗರ ಕ್ಷಮೆ ಕೋರಬೇಕು. ಕ್ಷಮೆ ಕೋರದಿದ್ದರೆ ಕನ್ನಡಿಗರ ಶಾಪ ನಿಮಗೆ ತಟ್ಟುತ್ತೆ ಎಂದು ಕಿಡಿಕಾರಿದರು.

  • ಯಾವನ್ರೀ ಅವ್ನು ಸಿಎಂ, ಪ್ರಧಾನಿಯನ್ನು ಪ್ರಶ್ನಿಸಲು ಅವ್ನಿಗೆ ಏನು ಯೋಗ್ಯತೆ ಇದೆ: ಬಿಎಸ್‍ವೈ ಕಿಡಿ

    ಯಾವನ್ರೀ ಅವ್ನು ಸಿಎಂ, ಪ್ರಧಾನಿಯನ್ನು ಪ್ರಶ್ನಿಸಲು ಅವ್ನಿಗೆ ಏನು ಯೋಗ್ಯತೆ ಇದೆ: ಬಿಎಸ್‍ವೈ ಕಿಡಿ

    ಮೈಸೂರು: ಯ್ಯಾವನ್ರೀ ಅವ್ನು ಸಿಎಂ. ಪ್ರಧಾನಿ ಅವರನ್ನು ಪ್ರಶ್ನೆ ಮಾಡಲು ಅವನಿಗೆ ಏನು ಯೋಗ್ಯತೆ ಇದೆ. ಸೋಲಿನ ಭಯದಿಂದ ಚಾಮುಂಡೇಶ್ವರಿ ಮತಕ್ಷೇತ್ರದಿಂದ ಬದಾಮಿಗೆ ಹೋಗಿದ್ದಾನೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಂದು ಒಡೆದ ಮನೆಯಾಗಿದೆ. ನೀವು, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮೂವರು ಸೇರಿ ಪ್ರವಾಸ ಮಾಡಿ ನೋಡೊಣಾ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ಒಬ್ಬಂಟಿಯಾಗಿ ಅಲೆದಾಡುತ್ತಿದ್ದಾನೆ ಎಂದು ಏಕವಚನದಲ್ಲಿಯೇ ತರಾಟೆಗೆ ತಗೆದುಕೊಂಡರು.

    ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರಕ್ಕಾಗಿ ರಾಜ್ಯ ಭೇಟಿ ನೀಡುವುದು ಸಂತೋಷವೆ. ಅವರು ಹುಚ್ಚುಹುಚ್ಚಾಗಿ ಮಾತನಾಡುವುರರಿಂದ ನಮ್ಮ ಗೆಲುವು ಸುಲಭವಾಗುತ್ತದೆ. ಅವರು ಈ ಹಿಂದೆ ಪ್ರವಾಸ ಕೈಗೊಂಡು ಪ್ರಚಾರ ಮಾಡಿದ ಯಾವುದೇ ರಾಜ್ಯದಲ್ಲಿಯೂ ಗೆಲುವು ಸಾಧಿಸಲು ಆಗಲಿಲ್ಲ. ಆದ್ದರಿಂದ ಇದು ರಾಜ್ಯದಲ್ಲಿಯೂ ಮರುಕಳಿಸಲಿದೆ. ಅವರು ಕರ್ನಾಟಕಕ್ಕೆ ಬಂದು ಪ್ರಚಾರ ಮಾಡಿದರೂ ರಾಜ್ಯವು ಕಾಂಗ್ರೆಸ್ ಮುಕ್ತವಾಗುವುದು ಖಂಡಿತ ಎಂದು ಹೇಳಿದರು.

    ವಿಶೇಷ ಕಾರಣದಿಂದಾಗಿ ವರುಣಾ ಕ್ಷೇತ್ರದಿಂದ ಪುತ್ರ ವಿಜೇಂದ್ರ ಸ್ಪರ್ಧೆ ಮಾಡುತ್ತಿಲ್ಲ. ಆದರೆ, ಮತದಾರರು ಬಿಜೆಪಿಗೆ ಬೆಂಬಲ ನೀಡಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ನಾನು ಮುಖ್ಯಮಂತ್ರಿಯಾಗಿ ಮೇ 18 ರಂದು ಪ್ರಮಾಣ ವಚನ ಸ್ವೀಕರಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ವೋಲ್ಟೇಜ್ ಕಳೆದುಕೊಂಡ `ವರುಣಾ’ – ಬಿಜೆಪಿ ಸ್ಥಿತಿ ಅಯೋಮಯ..!

    ವೋಲ್ಟೇಜ್ ಕಳೆದುಕೊಂಡ `ವರುಣಾ’ – ಬಿಜೆಪಿ ಸ್ಥಿತಿ ಅಯೋಮಯ..!

    – ಕೆ.ಪಿ. ನಾಗರಾಜ್
    ಮೈಸೂರು: ರಾಜ್ಯ ರಾಜಕೀಯದ ಹೈವೋಲ್ಟೇಜ್ ಚುನಾವಣಾ ಕ್ಷೇತ್ರ ಅಂತಾ ಅನ್ನಿಸಿಕೊಂಡಿದ್ದ ವರುಣಾ ಕ್ಷೇತ್ರ ಈಗ ಹೈವೋಲ್ಟೇಜ್ ಇರಲಿ, ವೋಲ್ಟೇಜ್ ಕೂಡ ಇಲ್ಲದಂತಾಗಿ ಮಂಕಾಗಿದೆ. ಬಿಜೆಪಿಗೆ ಬಿಜೆಪಿಯೆ ಕೊಟ್ಟು ಕೊಂಡ ಸ್ಟ್ರೋಕ್ ಗೆ ವರುಣಾ ಚುನಾವಣಾ ಕದನ ಈಗ ಅಕ್ಷರಶಃ ಒನ್ ಸೈಡ್ ಮ್ಯಾಚ್. ಕಾಂಗ್ರೆಸ್ ಅಭ್ಯರ್ಥಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅತ್ಯಂತ ಸೇಫ್ ಆಗಿ ವಿಧಾನಸೌಧ ಪ್ರವೇಶಿಸುವುದು ಬಹುತೇಕ ನಿಶ್ಚಿತ. ಅಷ್ಟರಮಟ್ಟಿಗೆ ಕಾಂಗ್ರೆಸ್ ಪಾಲಿಗೆ ಈ ರಾಜ್ಯದ ಅತ್ಯಂತ ಸೇಫ್ ಕ್ಷೇತ್ರವಾಗಿ ವರುಣಾ ಮಾರ್ಪಟ್ಟಿದೆ.

    ವಿಜಯೇಂದ್ರ ಯಾವಾಗ ಕ್ಷೇತ್ರಕ್ಕೆ ಎಂಟ್ರಿಕೊಟ್ಟರೋ ಅವತ್ತಿನಿಂದಲೇ ವರುಣಾ ಕದನಕ್ಕೆ ಹೈವೋಲ್ಟೇಜ್ ಪಾಸ್ ಆಗಿದ್ದು ಸತ್ಯ. ವಿಜಯೇಂದ್ರ ಎಂಟ್ರಿ ಮೈಸೂರು ಭಾಗದ ಕೆಲವು ಬಿಜೆಪಿ ನಾಯಕರು ಹಾಗೂ ರಾಜ್ಯ ಬಿಜೆಪಿಯಲ್ಲಿದ್ದು ಮೈಸೂರಿನ ಮೇಲೆ ಸದಾ ಒಂದು ಕಣ್ಣು ಇಟ್ಟಿರುವ ನಾಯಕರ ಕಣ್ಣು ಕೆಂಪು ಮಾಡಿತ್ತು. ಆದರೆ, ಮೈಸೂರು ಭಾಗದ ವೀರಶೈವ – ಲಿಂಗಾಯತ ಸಮುದಾಯದ ಜನ ವಿಜಯೇಂದ್ರರನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿಬಿಟ್ಟರು. ವಿಜಯೇಂದ್ರ ತಮ್ಮ ಮುಂದಿನ ನಾಯಕ ಅನ್ನೋ ರೀತಿಯಲ್ಲಿ ಮಾತಾಡೋಕೆ ಶುರು ಮಾಡಿದರು.

    ಹೇಳಿ ಕೇಳಿ ಈಗ ಮೈಸೂರು ಭಾಗದಲ್ಲಿ ವೀರಶೈವ – ಲಿಂಗಾಯತ ಸಮುದಾಯಕ್ಕೆ ಒಬ್ಬ ದೃಢ ನಾಯಕನ ಕೊರತೆ ಇದೆ. ರಾಜಶೇಖರಮೂರ್ತಿ, ಗುರುಪಾದಸ್ವಾಮಿ, ಕೆ. ಮಹದೇವ್, ಮಹದೇವಪ್ರಸಾದ್ ಅವರ ನಂತರ ಒಬ್ಬ ಸಮರ್ಥ ನಾಯಕನ ಕೊರತೆ ಈ ಸಮುದಾಯಕ್ಕೆ ಇದೆ. ವಿಜಯೇಂದ್ರ ಮೂಲಕ ಈ ಕೊರತೆ ನೀಗುತ್ತೆ ಅನ್ನೋ ಲೆಕ್ಕಚಾರದಲ್ಲಿ ಸಮುದಾಯದ ಇದ್ದದ್ದು ಸ್ಪಷ್ಟ. ಹೀಗಾಗಿಯೆ ವಿಜಯೇಂದ್ರ ಹೋದ ಕಡೆಯಲೆಲ್ಲಾ ಅದರಲ್ಲೂ ವೀರಶೈವ – ಲಿಂಗಾಯತರ ಪ್ರಾಬಲ್ಯ ಇರೋ ಹಳ್ಳಿಗಳಲ್ಲಿ ಅದ್ಧೂರಿ ಸ್ವಾಗತವೇ ದೊರೆತಿತ್ತು.

    ಆದರೆ, ಸಿನಿಮಾಕ್ಕಿಂತಲೂ ರೋಚಕವಾದ ತಿರುವು ನೀಡಿದ ಬಿಜೆಪಿ ವಿಜಯೇಂದ್ರ ಅವರ ತಂದೆಯ ಬಾಯಲ್ಲೇ ಮಗನಿಗೆ ಟಿಕೆಟ್ ಇಲ್ಲ ಅಂತಾ ಹೇಳಿಸಿ ದೊಡ್ಡ ಸಿಡಿಲನ್ನೇ ಬಡಿಸಿತ್ತು. ಇದು ಈಗ ಮುಗಿದ ಅಧ್ಯಾಯ. ಆದರೆ, ಈ ಅಧ್ಯಾಯದಿಂದ ಉಂಟಾಗಿರುವ ಅಲೆಗಳು ಸುಳಿಗಳಾಗಿ ಮಾರ್ಪಡುತ್ತಿವೆ. ಈ ಸುಳಿಯಲ್ಲಿ ಸಿಲುಕುತ್ತಿರುವುದು ಬಿಜೆಪಿ ಅಭ್ಯರ್ಥಿಗಳು. ಈ ಸುಳಿಯ ಸೆಳೆತ ಕಡಮೆ ಆಗದೆ ಇದ್ದರೆ ಮೈಸೂರು – ಚಾಮರಾಜ ನಗರ ಭಾಗದಲ್ಲಿ ಮೂರ್ನಾಲ್ಕು ಸ್ಥಾನ ಗೆಲ್ಲುವ ಲೆಕ್ಕ ಹಾಕಿರೋ ಬಿಜೆಪಿಗೆ ಮರ್ಮಾಘಾತವಾಗುವುದು ನಿಶ್ಚಿತ. ಈ ಸುಳಿಯ ಸೆಳೆತ ಕಡಮೆ ಮಾಡೋ ಶಕ್ತಿ ಸ್ವತಃ ವಿಜಯೇಂದ್ರಗೂ ಇಲ್ಲ ಎಂಬುದು ವಾಸ್ತವ ಸತ್ಯ

    `ನೋಟಾ ಕಡೆಗೆ ನೋಟ…!’
    ವಿಜಯೇಂದ್ರಗೆ ಟಿಕೆಟ್ ತಪ್ಪಿ ಟಿ. ಬಸವರಾಜಪ್ಪ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ರೋ ಆ ಕ್ಷಣವೇ ವರುಣಾ ಬಿಜೆಪಿ ಕಾರ್ಯಕರ್ತರ ತಂತ್ರಗಳು ಬದಲಾದವು. ಇಷ್ಟು ದಿನ ಬಿಜೆಪಿಗೆ ಮತ ಹಾಕಿ ಅಂತಾ ಕೇಳುತ್ತಿದ್ದವರು ಈಗ ನೋಟಾ ಒತ್ತಿ ಅಂತಾ ಅಭಿಯಾನ ಆರಂಭಿಸಿದ್ದಾರೆ. ನೋಟಾ ಮತ ಹೆಚ್ಚಾದರೆ ಮರು ಚುನಾವಣೆ ನಡೆಯುತ್ತೆ ಅನ್ನೋದು ಈ ಕಾರ್ಯಕರ್ತರ ಕಲ್ಪನೆ. ಆದರೆ, ಕಾನೂನಾತ್ಮಕವಾಗಿ ಇದು ಸಾಧ್ಯವಿಲ್ಲ. ಆದರೂ, ತಮ್ಮ ಆಕ್ರೋಶವನ್ನು ಕಾರ್ಯಕರ್ತರು ಹೀಗೆ ವ್ಯಕ್ತಪಡಿಸುತ್ತಿರುವ ಕಾರಣ ಒನ್ಸ್ ಅಗೈನ್ ಇದು ಬಿಜೆಪಿ ಅಭ್ಯರ್ಥಿಗೆ ನಷ್ಟ ಉಂಟಾಗುತ್ತೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡಿಯೂ ಬಿಜೆಪಿ ಠೇವಣಿ ಕಳೆದುಕೊಂಡಿತ್ತು. ಅಂತಹದರಲ್ಲಿ ಈಗ ಬಿಜೆಪಿ ಕಾರ್ಯಕರ್ತರೇ ನೋಟಾ ಅಭಿಯಾನ ನಡೆಸುತ್ತಿರುವುದು ನೋಡಿದರೆ ವರುಣಾದಲ್ಲಿ ಬಿಜೆಪಿ ಸ್ಥಿತಿ ಏನಾಗಬಹುದು ಎಂಬುದು ಕಲ್ಪನೆಗೂ ನಿಲುಕುತ್ತಿಲ್ಲ.  ಇದನ್ನು ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

     

    `ಲಡ್ಡು ಬಂದು ಬಾಯಿಗೆ ಬಿತ್ತು..!’
    ಈ ಬಾರಿ ವರುಣಾ ಕ್ಷೇತ್ರ ಕಾಂಗ್ರೆಸ್ ಗೆ ಲಡ್ಡು ಬಂದು ಬಾಯಿಗೆ ಬಿತ್ತು ಅನ್ನೋ ರೀತಿ ಆಗಿದೆ. ವಿಜಯೇಂದ್ರ ಸ್ಪರ್ಧೆ ಹಿನ್ನೆಲೆಯಲ್ಲಿ ಎದುರಾಗಿದ್ದ ಫೈಟ್ ಈಗ ಠುಸ್ ಪಟಾಕಿ ಅಂತಾಗಿದ್ದು ಸಿಎಂ ಪುತ್ರ ಡಾ. ಯತೀಂದ್ರ ಬಾಯಿಗೆ ಲಡ್ಡು ಬಿದ್ದಂತಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಈಗ ತಾವು ಎಷ್ಟು ಮತಗಳ ಅಂತರದಿಂದ ಗೆಲುತ್ತೇವೆ ಎಂಬ ಲೆಕ್ಕ ಹಾಕುತ್ತಿದೆ. ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಕಳೆದ ಬಾರಿ 20 ಸಾವಿರ ಅಂತರದಿಂದ ಗೆದ್ದಿದ್ದರು. ಈ ಬಾರಿ ಅದರ ಎರಡು ಪಟ್ಟು ಅಂತರದಿಂದ ಗೆಲ್ತೀವಿ ಅನ್ನೋ ಮನ:ಸ್ಥಿತಿಯಲ್ಲಿ ಕಾಂಗ್ರೆಸ್ ಪಾಳಯವಿದೆ. ಇದನ್ನು ಓದಿ: ವಿಶೇಷ ಕಾರಣದಿಂದ ವಿಜಯೇಂದ್ರಗೆ ಟಿಕೆಟ್ ತಪ್ಪಿದೆ: ಬಿಎಸ್‍ವೈ

    ಅತಂತ್ರರಾದ ರೇವಣ್ಣ ಸಿದ್ದಯ್ಯ…!
    ಸಿದ್ದರಾಮಯ್ಯ ವಿರುದ್ಧ ರಣತಂತ್ರ ರೂಪಿಸಲು ಕಾಂಗ್ರೆಸ್ ಬಿಟ್ಟು ಬಂದ ನಿವೃತ್ತ ಐಪಿಎಸ್ ಅಧಿಕಾರಿ ರೇವಣ್ಣಸಿದ್ದಯ್ಯ ಈಗ ಅತಂತ್ರರಾದಂತೆ ಕಾಣುತ್ತಿದ್ದಾರೆ. ವಿಜಯೇಂದ್ರ ಟಿಕೆಟ್ ತಪ್ಪುವ ಒಂದು ದಿನ ಮುಂಚೆ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ರೇವಣ್ಣಸಿದ್ದಯ್ಯ, ವರುಣಾದಲ್ಲಿ ಸಿಎಂ ಮಗನನ್ನು ಸೋಲಿಸೋಕೆ ವಿಜಯೇಂದ್ರ ಬೆಂಬಲಿಸುತ್ತೇನೆ. ಚಾಮುಂಡೇಶ್ವರಿಯಲ್ಲಿ ಸಿಎಂ ಸೋಲಿಸೋಕೆ ಜೆಡಿಎಸ್‍ನ ಜಿ.ಟಿ. ದೇವೇಗೌಡರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ಆದರೆ, ರೇವಣ್ಣಸಿದ್ದಯ್ಯ ಮಾಡಿದ್ದ ಪ್ಲಾನ್ ಅನ್ನು ಬಿಜೆಪಿಯೇ ಉಲ್ಟಾ ಮಾಡಿದೆ. ಹೀಗಾಗಿ, ರೇವಣ್ಣಸಿದ್ದಯ್ಯ ಅತ್ತ, ಇತ್ತ, ಎತ್ತವೂ ಇಲ್ಲದಂತೆ ಅತಂತ್ರರಾಗಿಬಿಟ್ಟಿದ್ದಾರೆ.  ಇದನ್ನು ಓದಿ: ನಿಮ್ಮ ವಾತ್ಸಲ್ಯಕ್ಕೆ ನಾನು ಚಿರಋಣಿ, ನೋವಾಗಿದ್ದರೆ ಕ್ಷಮೆಯಿರಲಿ: ವಿಜಯೇಂದ್ರ

    https://www.facebook.com/publictv/videos/2208282452522828/?q=Public%20TV%20varuna%20

  • ಕೇಂದ್ರ ಸಚಿವ ಅನಂತ್ ಕುಮಾರ್ ಮೈಸೂರು ಪ್ರವಾಸ ದಿಢೀರ್ ರದ್ದು

    ಕೇಂದ್ರ ಸಚಿವ ಅನಂತ್ ಕುಮಾರ್ ಮೈಸೂರು ಪ್ರವಾಸ ದಿಢೀರ್ ರದ್ದು

    ಮೈಸೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್‍ಕುಮಾರ್ ಮೈಸೂರು ಪ್ರವಾಸ ದಿಢೀರ್ ರದ್ದಾಗಿದೆ.

    ಶನಿವಾರ ಮೈಸೂರಿನ ವರುಣಾ, ಕೃಷ್ಣರಾಜ, ಚಾಮರಾಜ ಕ್ಷೇತ್ರಗಳಿಗೆ ಭೇಟಿ ನೀಡಿ ಅನಂತ್‍ಕುಮಾರ್ ಪ್ರಚಾರ ನಡೆಸಬೇಕಿತ್ತು. ಅಷ್ಟೇ ಅಲ್ಲದೇ ಮಧ್ಯಾಹ್ನ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು.

    ಆದರೆ ಈಗ ನಾಳಿನ ಎಲ್ಲ ಕಾರ್ಯಕ್ರಮಗಳನ್ನ ರದ್ದು ಮಾಡುವಂತೆ ಅನಂತ್ ಕುಮಾರ್ ಸೂಚನೆ ನೀಡಿದ್ದಾರೆ. ಕಾರ್ಯಕ್ರಮ ರದ್ದಾಗಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.

    ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಲು ಅನಂತ್ ಕುಮಾರ್ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ವಿಜಯೇಂದ್ರ ಅಭಿಮಾನಿಗಳು ಅನಂತ್ ಕುಮಾರ್ ಅವರಿಂದಲೇ ಟಿಕೆಟ್ ಕೈ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಸ್ತುತ ಈಗ ವಿಜಯೇಂದ್ರ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಪ್ರಚಾರದ ಸಮಯದಲ್ಲಿ ಸ್ವಪಕ್ಷೀಯರಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವ ಕಾರಣ ಅನಂತ್ ಕುಮಾರ್ ತಮ್ಮ ಪ್ರವಾಸವನ್ನು ರದ್ದು ಮಾಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

  • ಕೈ ಹಿರಿಯ ನಾಯಕರು ಅಪ್ರಬುದ್ಧ ಅಧ್ಯಕ್ಷರಿಗೆ ಪಾಠಮಾಡಬೇಕಿದೆ: ಬಿಎಸ್‍ವೈ

    ಕೈ ಹಿರಿಯ ನಾಯಕರು ಅಪ್ರಬುದ್ಧ ಅಧ್ಯಕ್ಷರಿಗೆ ಪಾಠಮಾಡಬೇಕಿದೆ: ಬಿಎಸ್‍ವೈ

    ಬೆಂಗಳೂರು: ಕಾಂಗ್ರೆಸ್‍ನ ಹಿರಿಯ ಮುಖಂಡರು ತಮ್ಮ ಅಪ್ರಬುದ್ಧ ಅಧ್ಯಕ್ಷರಿಗೆ ಈ ಕುರಿತು ಪಾಠ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

    ರಾಹುಲ್ ಆರೋಪಗಳಿಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರು ತಮ್ಮ ಅಪ್ರಬುದ್ಧತೆಯನ್ನು ಪದೇಪದೆ ಸಾಬೀತು ಪಡಿಸುತ್ತಲೇ ಇದ್ದಾರೆ. ಬೇರೆ ರಾಜ್ಯಗಳಂತೆ ಕರ್ನಾಟಕವೂ ಕಾಂಗ್ರೆಸ್ ಮುಕ್ತವಾಗುವ ಭಯದಲ್ಲಿರುವ ಅವರು ಪೂರ್ವಾಪರ ತಿಳಿಯದೇ ಬಾಲಿಶವಾಗಿ ಹೇಳಿಕೆ ನೀಡಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ಅವರು ನನ್ನ ವಿರುದ್ಧ ಮನಬಂದಂತೆ ಮಾತನಾಡುತ್ತಿರುವುದು ವಿಪರ್ಯಾಸವೇ ಸರಿ ಎಂದು ಕಿಡಿಕಾರಿದ್ದಾರೆ.

    ನ್ಯಾಯಾಲಯವೇ ನನ್ನನ್ನು ದೋಷಮುಕ್ತಗೊಳಿಸಿದ್ದರೂ, ಸುಳ್ಳು ಮಾಹಿತಿಯೊಂದಿಗೆ ಹಗುರವಾಗಿ ಮಾತನಾಡುವುದು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಗೌರವ ತರುವಂಥದ್ದಲ್ಲ. ಅದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ರಾಹುಲ್ ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

    ರಾಜಕೀಯದ ಬಗ್ಗೆ ಏನೂ ತಿಳಿಯದೇ, ಯಾರೋ ಬರೆದುಕೊಟ್ಟಿದ್ದನ್ನು ಓದುವ ರಾಹುಲ್ ಮಾತುಗಳನ್ನು ಜನರು ಗಂಭೀರವಾಗಿ ಸ್ವೀಕರಿಸುವುದಿಲ್ಲ. ತಾವು ಮಾಡುವ ಸುಳ್ಳು ಆರೋಪಗಳನ್ನು ಕರ್ನಾಟಕದ ಜನ ನಂಬುತ್ತಾರೆಂಬ ಭ್ರಮೆಯಿಂದ ಅವರು ಹೊರಬರಲಿ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಪ್ರಜ್ಞಾವಂತರು ಕಾಂಗ್ರೆಸ್‍ಗೆ ಈ ಸಲ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದಿದ್ದಾರೆ.

    ತಮ್ಮ ಹುಳುಕನ್ನು ಮುಚ್ಚಿಡಲು ಇನ್ನೊಬ್ಬರತ್ತ ಬೆಟ್ಟು ತೋರಿಸುವ ಕಾಂಗ್ರೆಸ್ ನಾಯಕರ ಚಾಳಿಯನ್ನೇ ರಾಹುಲ್ ಗಾಂಧಿಯವರೂ ಅನುಸರಿಸುತ್ತಿದ್ದಾರೆ. ರಾಜ್ಯ ಸರಕಾರದ ವೈಫಲ್ಯಗಳನ್ನು ಮುಚ್ಚಿಡಲು ನ್ಯಾಯಾಲಯ ಇತ್ಯರ್ಥಗೊಳಿಸಿದ ವಿಚಾರವನ್ನು ಕೆದಕುತ್ತಿದ್ದಾರೆ. ರಾಹುಲ್ ಗಾಂಧಿಯವರು ಏನೇ ಮಾಡಿದರೂ ಕಾಂಗ್ರೆಸ್‍ನ ದುರಾಡಳಿತವನ್ನು ನಮ್ಮ ಜನ ಮರೆಯುವುದಿಲ್ಲ ಎಂದು ಬರೆದು ಬಿಎಸ್‍ವೈ ವಾಗ್ದಾಳಿ ನಡೆಸಿದ್ದಾರೆ.

     

  • ನಾನು ಪಕ್ಕ ಲೋಕಲ್, ಬಿಜೆಪಿಯಲ್ಲಿ ನಾಯಕರು ಇಲ್ವಾ: ಸಿಎಂ ಪ್ರಶ್ನೆ

    ನಾನು ಪಕ್ಕ ಲೋಕಲ್, ಬಿಜೆಪಿಯಲ್ಲಿ ನಾಯಕರು ಇಲ್ವಾ: ಸಿಎಂ ಪ್ರಶ್ನೆ

    ಬೆಂಗಳೂರು: ನಾನು ಪಕ್ಕ ಲೋಕಲ್ ಕರ್ನಾಟಕ ಬಿಜೆಪಿಯಲ್ಲಿ ನಾಯಕರು ಇಲ್ವಾ ಎಂದು ಸಿಎಂ ಸಿದ್ದರಾಮಯ್ಯನವರು ರಾಜ್ಯ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.

    ಪ್ರಚಾರಕ್ಕೆಂದು ಮೋದಿ, ಯೋಗಿ ಅವರನ್ನು ಆಮದು ಮಾಡುತ್ತಿದೆ. ಸಿಎಂ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಅವರನ್ನೇ ಬಿಜೆಪಿ ಡಮ್ಮಿ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಹೋಗುತ್ತಾರೆ. ಆದರೆ ಇಲ್ಲಿ ಸಿದ್ದರಾಮಯ್ಯ ವರ್ಸಸ್ ಬಿಎಸ್‍ವೈ ನಡುವೆ ಫೈಟ್ ಇದ್ದು ಯಾರು ಜಯಗಳಿಸುತ್ತಾರೆ ಎನ್ನುವುದು ನಿಮಗೆ ಗೊತ್ತಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    2008 ರಿಂದ 2012 ರ ವರೆಗೆ ಗಣಿ ಲೂಟಿ ಮಾಡಿದ ರೆಡ್ಡಿ ಬ್ರದರ್ಸ್ ಬಿಎಸ್‍ವೈರನ್ನ ಕೈಗೊಂಬೆ ಮಾಡಿಕೊಂಡಿದ್ದರು. ಬಳ್ಳಾರಿ ರಿಪಬ್ಲಿಕ್ ಮಾಡಿದ್ದರು. ಶಾಸಕರನ್ನ ಆಪರೇಷನ್ ಕಮಲದ ಮೂಲಕ ಖರೀದಿ ಮಾಡಿ ರೆಸಾರ್ಟ್‍ನಲ್ಲಿಟ್ಟಿದ್ದರು. ಇದರಿಂದಾಗಿ ಕರ್ನಾಟಕಕ್ಕೆ ಭ್ರಷ್ಟ ರಾಜ್ಯ ಎಂಬ ಹಣೆಪಟ್ಟಿ ಬಂದಿತ್ತು. ಈಗ ಮತ್ತೆ ಕರ್ನಾಟಕದಲ್ಲಿ ಲೂಟಿ ಮಾಡಲು ಬರುತ್ತಿದ್ದಾರೆಂದು ಆರೋಪಿಸಿ ಸಿಎಂ ಟ್ವೀಟ್ ಮಾಡಿದ್ದಾರೆ.