Tag: bs yedddyurappa

  • ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ವಿಸ್ತರಣೆ: ಸಿಎಂ

    ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ವಿಸ್ತರಣೆ: ಸಿಎಂ

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋಂಕು ನಿವಾರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ತಜ್ಞರ ಸಲಹೆ ಮೇರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗುತ್ತದೆ. ಜೂನ್ 7 ರಿಂದ ಜೂನ್ 14 ರವರೆಗೆ ಅಂದರೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗುವುದು. ಈಗಿರುವ ನಿಯಮಗಳೇ ಮುಂದೆಯೂ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿದರು.

    ಸೋಂಕು ಶೇ.5 ಕ್ಕಿಂತ ಕಮ್ಮಿಯಾದ್ರೆ ವಾರದ ಬಳಿಕ ವಿನಾಯ್ತಿ ಕೊಡಲು ಸಿದ್ಧವಾಗಿದ್ದು, ಇದಕ್ಕೆ ಜನ ಸಹಕಾರ ಕೊಡಬೇಕು. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರಧಾನಿಯವರೇ ಸಂಪೂರ್ಣ ಅಧಿಕಾರ ಕೊಟ್ಟಿದ್ದಾರೆ. ಡಿಸಿಗಳು ಅವರ ಚೌಕಟ್ಟಿನಲ್ಲೇ ನಿರ್ಧಾರ ತಗೋತಾರೆ ಎಂದರು.

    ಇದೇ ವೇಳೆ ಸಿಎಂ, ಎರಡನೇ ಹಂತದ ಪ್ಯಾಕೇಜ್ ಘೋಷಣೆ ಮಾಡಿದರು. ಒಟ್ಟು 500 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ, ಪವರ್ ಲೂಂ ಕಾರ್ಮಿಕರಿಗೆ ತಲಾ 3 ಸಾವಿರ, ಮೀನುಗಾರರಿಗೆ 3 ಸಾವಿರ ರೂ., ಮುಜರಾಯಿ ದೇಗುಲಗಳ ಸಿ ವರ್ಗದ ಅರ್ಚಕರು, ಅಡುಗೆ ಕೆಲಸದವರು, ಸಿಬ್ಬಂದಿಗೆ ತಲಾ 3 ಸಾವಿರ, ಮಸೀದಿಗಳ ಪೇಶ್ ಇಮಾಮ್ ಮತ್ತು ಮೌಸಿನ್ ಗಳಿಗೆ 3 ಸಾವಿರ., 42 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದು, ಅವರಿಗೆ 3 ಸಾವಿರ ರೂ., 59 ಸಾವಿರ ಅಂಗನವಾಡಿ ಸಹಾಯಕರಿಗೆ ತಲಾ 2 ಸಾವಿರ ನೀಡಲಾಗುತ್ತದೆ ಎಂದರು.

    59 ಸಾವಿರ ಅಂಗನವಾಡಿ ಸಹಾಯಕರಿಗೆ ತಲಾ 2 ಸಾವಿರ, ಶಾಲಾ ಮಕ್ಕಳಿಗೆ ಅರ್ಧ ಕೇಜಿ ಹಾಲುಪುಡಿ ವಿತರಣೆ ಮಾಡಲಾಗುತ್ತದೆ. ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ 5 ಸಾವಿರ, ಪ್ರಾಥಮಿಕ ಮತ್ತು ಪ್ರೌಢಶಾಲಾ ಅನುದಾನ ರಹಿತ ಶಿಕ್ಷಕರಿಗೆ 5 ಸಾವಿರ ನೀಡಲಾಗುತ್ತದೆ ಎಂದು ವಿವರಿಸಿದರು. ಎಂಎಸ್‍ಎಂಇ ಹೊರತುಪಡಿಸಿ ಉಳಿದ ಕೈಗಾರಿಕೆಗಳ ಮೇ, ಜೂನ್ ಗಳಲ್ಲಿ ಮಾಸಿಕ ವಿದ್ಯುತ್ ಬಿಲ್ ಕಟ್ಟುವುದನ್ನು ಸರ್ಕಾರ ಮುಂದೂಡಿದೆ.

    ಪಸ್ತುತ ಇರುವ ಲಾಕ್ ಡೌನ್ ಜೂನ್ 7ಕ್ಕೆ ಕೊನೆಗೊಳ್ಳಲಿದ್ದು, ಇದೀಗ ಮತ್ತೆ ಒಂದು ವಾರ ಸರ್ಕಾರ ವಿಸ್ತರಣೆ ಮಾಡಿದೆ. ಸರ್ಕಾರದ ಲಾಕ್‍ಡೌನ್ ವಿಸ್ತರಣೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

  • ಕೋವಿಡ್‍ನಿಂದ ಮೃತರ ಅಂತ್ಯಸಂಸ್ಕಾರಕ್ಕೆ ಪ್ಯಾಕೇಜ್ – ಪಬ್ಲಿಕ್ ಟಿವಿ ವರದಿ ಪ್ರಸ್ತಾಪಿಸಿ ಸಿಎಂ ತರಾಟೆ

    ಕೋವಿಡ್‍ನಿಂದ ಮೃತರ ಅಂತ್ಯಸಂಸ್ಕಾರಕ್ಕೆ ಪ್ಯಾಕೇಜ್ – ಪಬ್ಲಿಕ್ ಟಿವಿ ವರದಿ ಪ್ರಸ್ತಾಪಿಸಿ ಸಿಎಂ ತರಾಟೆ

    ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ತುರ್ತು ಸಭೆಯಲ್ಲಿ ಪಬ್ಲಿಕ್ ಟಿವಿ ವರದಿ ಪ್ರತಿಧ್ವನಿಸಿದೆ. ಕೋವಿಡ್‍ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಲು ಪ್ಯಾಕೇಜ್ ಫಿಕ್ಸ್ ಮಾಡಿರುವ ಕುರಿತು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಅಧಿಕಾರಿಗಳನ್ನು ಇಂದು ತರಾಟೆಗೆ ತೆಗೆದುಕೊಂಡರು.

    ಸಭೆ ಆರಂಭವಾಗುತ್ತಿದ್ದಂತೆಯೇ ಸಿಎಂ ನಿನ್ನೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿದ್ದ ಅಂತ್ಯಸಂಸ್ಕಾರ ಪ್ಯಾಕೇಜ್ ವರದಿಯನ್ನು ಪ್ರಸ್ತಾಪ ಮಾಡಿದರು. ಅಲ್ಲದೆ ಸಭೆಯಲ್ಲಿ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಅವರ ಬಳಿ, ಏನ್ರೀ ಮಾಡ್ತಾ ಇದ್ದೀರಾ..? ಪಬ್ಲಿಕ್ ಟಿವಿಯಲ್ಲಿ ವರದಿ ನೋಡಿದ್ರಾ..? ಆ ಬಗ್ಗೆ ಕಠಿಣ ಕ್ರಮ ಆಗಬೇಕು. ಆ ವಿಚಾರದಲ್ಲಿ ಜನ ನಮ್ಮನ್ನ ಕ್ಷಮಿಸೋದಿಲ್ಲ. ನಾನು ನಿಮ್ಮನ್ನ ಕ್ಷಮಿಸೋದಿಲ್ಲ ಎಂದು ಗರಂ ಆದರು.

    ಇದೇ ವೇಳೆ ಆರೋಗ್ಯ ಸಚಿವ ಸುಧಾಕರ್‍ಗೂ ಸೂಚನೆ ಕೊಟ್ಟ ಸಿಎಂ ಯಡಿಯೂರಪ್ಪ, ಯಾವುದನ್ನಾದ್ರೂ ಸಹಿಸ್ಕೋಬಹುದು ಸುಧಾಕರ್. ಈ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿ ಎಂದು ತಾಕೀತು ಮಾಡಿದರು.

    ಏನಿದು ಪ್ಯಾಕೇಜ್..?
    ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ 35 ಸಾವಿರ ರೂಪಾಯಿ, ಆಸ್ಪತ್ರೆಯಿಂದ ಚಿತಾಗಾರಕ್ಕೆ 13,000 ರೂ., ಸಂಬಂಧಿಕರಿಗೆ ಪಿಪಿಇ ಕಿಟ್ ನೀಡಲು ತಲಾ 1 ಸಾವಿರ, ಶವಪೂಜೆ ಪ್ರಕ್ರಿಯೆಗೆ 10,000 ರೂ. ಹಾಗೂ ಶವಸಂಸ್ಕಾರ ಮಾಡಲು 6,500 ರೂ.ಕೊಡಬೇಕಾಗಿತ್ತು. ಈ ಬಗ್ಗೆ ಗುರುವಾರ ಮಧ್ಯಾಹ್ನದಿಂದಲೇ ಪಬ್ಲಿಕ್ ಟಿವಿ ವಿಸ್ತøತ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿ ವಿಶೇಷ ಆಯುಕ್ತ ಗೌರವ ಗುಪ್ತಾ, ಕೊರೊನಾ ಪೀಡತರ ಶವ ಸಂಸ್ಕಾರ ಸಂಪೂರ್ಣ ಉಚಿತ ಎಂದು ಸ್ಪಷ್ಟಪಡಿಸಿದ್ದರು.

    ಈ ಸಂಬಂಧ ನಿನ್ನೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅವರು, 7 ಸ್ಮಶಾನಗಳನ್ನು ಶವ ಸಂಸ್ಕಾರಕ್ಕೆ ಮೀಸಲಿಡಲಾಗಿದೆ. ಮೃತದೇಹವನ್ನು ಸ್ಮಶಾನಕ್ಕೆ ಅಂಬುಲೆನ್ಸ್ ನಲ್ಲಿ ಉಚಿತವಾಗಿ ಸಾಗಿಸಬೇಕು. ಒಂದು ವೇಳೆ ಹಣಕ್ಕೆ ಡಿಮಾಂಡ್ ಮಾಡಿದ್ರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಖಾಸಗಿ ಅಂಬುಲೆನ್ಸ್ ಗಳಿಗೆ ಎಚ್ಚರಿಕೆ ನೀಡಿದ್ದರು.