Tag: bs eyddyurappa

  • ವಿಶ್ವನಾಥ್ ಬಗ್ಗೆ ಮಾತನಾಡಲ್ಲ, ಶಿಸ್ತು ಕ್ರಮ ತೆಗೆದುಕೊಳ್ಳಬೇಕು – ಹೈಕಮಾಂಡ್‍ಗೆ ಸಿಎಂ ಮನವಿ

    ವಿಶ್ವನಾಥ್ ಬಗ್ಗೆ ಮಾತನಾಡಲ್ಲ, ಶಿಸ್ತು ಕ್ರಮ ತೆಗೆದುಕೊಳ್ಳಬೇಕು – ಹೈಕಮಾಂಡ್‍ಗೆ ಸಿಎಂ ಮನವಿ

    ಬೆಂಗಳೂರು: ವಿಶ್ವನಾಥ್ ಬಗ್ಗೆ ನಾನೇನು ಮಾತನಾಡುವುದಿಲ್ಲ. ಹೈಕಮಾಂಡ್‍ಗೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವನಾಥ್ ವಿರುದ್ಧವಾಗಿ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ – ವಿಶ್ವನಾಥ್ ಆರೋಪ

    ವಿಶ್ವನಾಥ್ ರಿಂದ ವಿಜಯೇಂದ್ರ ಹಸ್ತಕ್ಷೇಪ ಆರೋಪ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಆಧಾರ ರಹಿತವಾಗಿರುವ ಆರೋಪವಾಗಿದೆ. ಅನಾವಶ್ಯಕವಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಅಂತಹ ಯಾವುದೇ ಹಸ್ತಕ್ಷೇಪ ಆಗಿಲ್ಲ. ನೀರಾವರಿ ಕಿಕ್ ಬ್ಯಾಕ್ ಆರೋಪ ಅದಕ್ಕೆ ನೀರಾವರಿ ಎಂಡಿ ಪ್ರತಿಕ್ರಿಯೆ ಕೊಡ್ತಾರೆ. ಶಿಸ್ತು ಕ್ರಮದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಂಜೆ ಕೋರ್ ಕಮಿಟಿ ಇದೆ. ಕೋರ್ ಕಮಿಟಿಯಲ್ಲಿ ಚರ್ಚೆ ಮಾಡೋಕೆ ಅಜೆಂಡಾ ಫಿಕ್ಸ್ ಆಗಿಲ್ಲ. ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡ್ತೀವಿ. ಪ್ರವಾಹ, ರಾಜಕೀಯ ವಿಚಾರಗಳು ಸೇರಿದಂತೆ ಎಲ್ಲಾ ವಿಚಾರ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಬಗ್ಗೆ ಮಾತನಾಡಿದ್ರೆ ನನ್ನ ಬಾಯಿ ಹೊಲಸಾಗುತ್ತೆ: ರೇಣುಕಾಚಾರ್ಯ

    ವಿಶ್ವನಾಥ್ ಆರೋಪ ಏನು?
    ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಎಲ್ಲಾ ಸಚಿವರು ಮಾತನಾಡುತ್ತಿದ್ದಾರೆ. ಯಾವ ಸಚಿವರು ಸಮಾಧಾನದಿಂದ ಇದ್ದಾರೆ ಹೇಳಿ? ಯಡಿಯೂರಪ್ಪ ಮಕ್ಕಳಿಂದ ಮೊದಲು ಜೈಲಿಗೆ ಹೋಗಿದ್ದರು. ಎರಡನೇ ಬಾರಿಗೆ ಹೀಗಾಗಬಾರದು ಅನ್ನೋದು ನಮ್ಮ ಆಶಯ. ಯಡಿಯೂರಪ್ಪನವರದು ಇ.ಡಿಯಲ್ಲಿ ಕೇಸಿಲ್ವಾ ಎಂದು ಪ್ರಶ್ನಿಸಿದ್ದಾರೆ. ರೇಣುಕಾಚಾರ್ಯ ಜಯಲಕ್ಷ್ಮಿ ನರ್ಸ್ ಕಥೆ ಏನಾಯ್ತು? ಊಟಕ್ಕೆ ಕರೆದ ಸ್ನೇಹಿತನ ಹೆಂಡತಿಯನ್ನು ಅತ್ಯಾಚಾರ ಮಾಡಲು ಹೋಗಿ ಹಾಲಪ್ಪ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದಾನೆ ಎಂದು ಎಚ್.ವಿಶ್ವನಾಥ್ ಬಹಿರಂಗವಾಗಿ ಕಿಡಿಕಾರಿದ್ದಾರೆ.

    ನಾನು ನಿನ್ನೆ ಅರುಣ್ ಸಿಂಗ್ ಭೇಟಿ ಮಾಡಿ ರಾಜ್ಯದಲ್ಲಿ ಪಕ್ಷದ ರಾಜಕಾರಣ ಹಾಗೂ ಸರ್ಕಾರದ ಆಡಳಿತದ ಬಗ್ಗೆ ಹೇಳಿದ್ದೇನೆ. ಇನ್ನು 22 ತಿಂಗಳು ಮಾತ್ರ ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಹೀಗೆ ಹೋದರೆ ಹಿನ್ನಡೆ ಆಗುತ್ತೆ ಅಂತ ಹೇಳಿದ್ದೇನೆ. ಅಲ್ಲದೆ 2024 ರ ಲೋಕಸಭೆ ಚುನಾವಣೆಗೂ ಎಫೆಕ್ಟ್ ಆಗುತ್ತೆ ಅಂತ ಹೇಳಿದ್ದೇನೆ. ಇದಕ್ಕೆಲ್ಲ ನಾಯಕತ್ವವೇ ಕಾರಣ, 75 ವರ್ಷ ಮೀರಿದವರ ಬಗ್ಗೆ ನಮ್ಮ ಪಕ್ಷದಲ್ಲೇ ಲಕ್ಣ್ಮಣ ರೇಖೆ ಇದೆ. ಅದು ದಾಟಿದ ಮೇಲೆ ವಯಸ್ಸು ಸಹಕರಿಸಲ್ಲ. ಯಡಿಯೂರಪ್ಪ ನವರಿಗೆ ಮೊದಲು ಶಕ್ತಿ ಇತ್ತು ಈಗ ಇಲ್ಲ. ಶಕ್ತಿ ಪೀಠದ ಪ್ರಭಾವಳಿ ಕಡಿಮೆ ಆಗುತ್ತಿದೆ. ಪಕ್ಷದ ಸಿದ್ಧಾಂತ ಹಾಗೂ ಕಾರ್ಯಕ್ರಮದ ವಿರುದ್ದ ಮಾತನಾಡಿಲ್ಲ ಎಂದು ಎಚ್.ವಿಶ್ವನಾಥ್ ಗುಡುಗಿದ್ದಾರೆ.

     

  • ಕೊರೊನಾ ನಿಯಂತ್ರಣ ವೈಫಲ್ಯದ ಕಳಂಕ ಕಟ್ಟಬೇಡಿ – ಶ್ರೀರಾಮುಲು ಬೇಸರ

    ಕೊರೊನಾ ನಿಯಂತ್ರಣ ವೈಫಲ್ಯದ ಕಳಂಕ ಕಟ್ಟಬೇಡಿ – ಶ್ರೀರಾಮುಲು ಬೇಸರ

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯ ಪರಿಣಾಮ ಆರೋಗ್ಯ ಸಚಿವ ಶ್ರೀರಾಮುಲು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ತನ್ನ ಖಾತೆ ಬದಲಾವಣೆ ಸಂಬಂಧ ಶ್ರೀರಾಮುಲು ಅವರು ನಿನ್ನೆ ರಾತ್ರಿಯೇ ಮುಖ್ಯಮಂತ್ರಿಗೆ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ್ದಾರೆ. ಇಂದು ಬೆಳಗ್ಗೆ ಭೇಟಿ ಮಾಡುವಂತೆ ಶ್ರೀರಾಮುಲುಗೆ ಸಿಎಂ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ನಿನ್ನೆ ರಾತ್ರಿ ಸಿಎಂ ಜೊತೆಗಿನ ದೂರವಾಣಿ ಕರೆ ವೇಳೆ ಬೇಸರ ಹೊರಹಾಕಿರುವ ಸಚಿವ, ಕೊರೊನಾ ನಿರ್ವಹಣೆಯಲ್ಲಿ ವಿಫಲನಾಗಿದ್ದೇನೆಂಬ ಹಣೆ ಪಟ್ಟಿ ಬರೋದು ಬೇಡ. ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ. ಸ್ವಲ್ಪ ಸಮಯ ಕೊಡಿ, ನಾನೇ ಆರೋಗ್ಯ ಇಲಾಖೆ ಬಿಟ್ಟು ಕೊಡುತ್ತೇನೆ ಎಂದು ಸಿಎಂ ಬಳಿ ರಾಮುಲು ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ದಿಢೀರ್ ಬೆಳವಣಿಗೆ – ರಾಮುಲು ಬಳಿಯಿದ್ದ ಆರೋಗ್ಯ ಖಾತೆಗೆ ಕತ್ತರಿ?, ಯಾರಿಗೆ ಯಾವ ಖಾತೆ?

    ಇಂದು ಬೆಳಗ್ಗೆ ಸಿಎಂ ಬಿಎಸ್‍ವೈ ಅವರನ್ನು ಖುದ್ದು ಭೇಟಿ ಮಾಡಿ ಚರ್ಚೆ ನಡೆಸಲಿದ್ದು, ಶ್ರೀರಾಮುಲು ಮನವೊಲಿಕೆ ಮಾಡ್ತಾರಾ ಸಿಎಂ ಬಿಎಸ್‍ವೈ? ಅಥವಾ ತಮ್ಮ ನಿರ್ಧಾರದಂತೆ ಖಾತೆ ಬದಲಾವಣೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಶ್ರೀರಾಮುಲು ಹಾಗೂ ಸಿಎಂ ಅವರ ಇಂದಿನ ಭೇಟಿ ತೀವ್ರ ಕುತೂಹಲ ಹುಟ್ಟಿದೆ. ಇದನ್ನೂ ಓದಿ: ಖಾತೆ ಅದಲು, ಬದಲಿಗೆ ಅಸಮಾಧಾನ – ರಾತ್ರಿಯೇ ಬೆಂಗ್ಳೂರಿಗೆ ಧಾವಿಸಿದ ರಾಮುಲು

  • ಯಾರೂ ಬೆಂಗ್ಳೂರು ಬಿಟ್ಟು ಹೋಗಬೇಡಿ: ಬಿಎಸ್‍ವೈ ಮನವಿ

    ಯಾರೂ ಬೆಂಗ್ಳೂರು ಬಿಟ್ಟು ಹೋಗಬೇಡಿ: ಬಿಎಸ್‍ವೈ ಮನವಿ

    ಬೆಂಗಳೂರು: ಯಾರೂ ಕೂಡ ಬೆಂಗಳೂರು ಬಿಟ್ಟು ಹೋಗಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಬಿಟ್ಟು ಹೋಗುತ್ತಿರುವವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಯಾರೂ ಕೂಡ ಬೆಂಗಳೂರು ಬಿಟ್ಟು ಹೋಗಬೇಡಿ. ನಾವು ಕೊರೊನಾ ಜೊತೆಯೇ ಬದುಕಬೇಕಿದೆ. ಸರ್ಕಾರ ಕೊರೊನಾ ತಡೆಗೆ ಎಲ್ಲ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಕೊರೊನಾ ತಡೆಗೆ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ. ಜನ ಗಾಬರಿಯಾಗುವ ಅಗತ್ಯ ಇಲ್ಲ. ಹೀಗಾಗಿ ಬೆಂಗಳೂರು ಬಿಡದೇ ಸರ್ಕಾರದ ಜೊತೆ ಸಹಕರಿಸಿ. 450 ಹೆಚ್ಚು ಅಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಿದ್ದೇವೆ. ಇನ್ನು 10 ಸಾವಿರ ಬೆಡ್ ವ್ಯವಸ್ಥೆ ಕೂಡ ಮಾಡುತ್ತೇವೆ. ಈ ಮೂಲಕ ಬೆಂಗಳೂರಿನ ಮಹಾಜನತೆಗೆ ಯಾವುದಕ್ಕೂ ತೊಂದರೆ ಇಲ್ಲದಂತೆ ನೋಡಿಕೊಳ್ಳುತ್ತೇವೆ ಎಂದರು.

    ಈ ಪಿಡಿಗು ಜೊತೆ ನಾವು ಅನಿವಾರ್ಯವಾಗಿ ಬದುಕಬೇಕಿದೆ. ನಿಮ್ಮ ಬದುಕು ಬಹಳ ಮುಖ್ಯವಾದುದ್ದಾಗಿದೆ. ಜನ ಗಾಬರಿಯಾಗುವುದು ಬೇಡ. ಸರ್ಕಾರ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೀಗಾಗಿ ಜನ ನಮ್ಮೊಂದಿಗೆ ಸಹಕಸುವ ಮೂಲಕ ಕೊರೊನಾ ಜೊತೆ ಹೋರಡುವ ಎಂದು ಹೇಳಿದ್ದಾರೆ.

     

  • ವೈದ್ಯರು ಹೋಗಿ ಅಂದ್ರೆ ನನ್ನ ಕ್ಷೇತ್ರಕ್ಕೆ 2 ದಿನ ಹೋಗ್ತೇನೆ- ಸಿದ್ದರಾಮಯ್ಯ

    ವೈದ್ಯರು ಹೋಗಿ ಅಂದ್ರೆ ನನ್ನ ಕ್ಷೇತ್ರಕ್ಕೆ 2 ದಿನ ಹೋಗ್ತೇನೆ- ಸಿದ್ದರಾಮಯ್ಯ

    ಬೆಂಗಳೂರು: ನನ್ನ ಕಣ್ಣು ಆಪರೇಷನ್ ಆಗಿದೆ. ವೈದ್ಯರು ಧೂಳಿನಿಂದ 15 ದಿನ ದೂರ ಇರಿ ಎಂದಿದ್ದಾರೆ. ಹೀಗಾಗಿ ವೈದ್ಯರು ಹೋಗಿ ಅಂದ್ರೆ ಎರಡು ದಿನ ನನ್ನ ಕ್ಷೇತ್ರಕ್ಕೆ ಹೋಗುತ್ತೇನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾದಲ್ಲಿ ನಾನು ಕ್ಷೇತ್ರಕ್ಕೆ ಹೋಗಿಲ್ಲ ಎಂದು ಚರ್ಚೆಯಾಗುತ್ತಿದೆ. ಇಂತಹ ಸಮಯದಲ್ಲಿ ನಾನು ಯಾವತ್ತೂ ಜನರ ಜೊತೆ ಇರುವವನೇ. ಆದರೆ ಕಣ್ಣಿನ ಆಪರೇಷನ್ ನಿಂದ ಹೋಗಿಲ್ಲ ಎಂದರು.

    ನಾಳೆ ವೈದ್ಯರ ಭೇಟಿಯಾಗಿ ಅವರು ಹೋಗಿ ಅಂದರೆ ಎರಡು ದಿನ ನನ್ನ ಕ್ಷೇತ್ರಕ್ಕೆ ಹೋಗುತ್ತೇನೆ. ಬೇರೆ ಸ್ಥಳಗಳಿಗೂ ಹೋಗುತ್ತೇನೆ. ವರುಣಾ ಕ್ಷೇತ್ರದಲ್ಲೂ ಸಮಸ್ಯೆ ಆಗಿದೆ. ನಮ್ಮ ಹುಡುಗರನ್ನು ಕಳುಹಿಸುತ್ತಿದ್ದೇನೆ ಎಂದು ತಿಳಿಸಿದರು.

    ಜನ ಮನೆ-ಮಠ ಕಳೆದುಕೊಂಡಿದಿದ್ದಾರೆ. ಧಾರಾಳವಾಗಿ ಸಹಾಯ ಹಸ್ತ ಚಾಚಬೇಕು. ಜನರು, ಉದ್ಯಮಿಗಳು ಜನರ ಕಷ್ಟಕ್ಕೆ ಸಹಾಯ ಮಾಡಿ. ದೇವರಲ್ಲಿ ಪ್ರವಾಹ ಕಡಿಮೆ ಆಗಲು ಪ್ರಾರ್ಥನೆ ಮಾಡುತ್ತೇನೆ. ಕಾಂಗ್ರೆಸ್ ಶಾಸಕರ ಒಂದು ತಿಂಗಳ ಸಂಬಳ ಪರಿಹಾರ ಕಾರ್ಯಕ್ಕೆ ನೀಡುತ್ತಿದ್ದೇವೆ ಎಂದು ನುಡಿದರು.

    ವರ್ಗಾವಣೆ ಬಿಟ್ಟು ಈ ಸರ್ಕಾರ ಏನೂ ಕೆಲಸ ಮಾಡುತ್ತಿಲ್ಲ. ಯಡಿಯೂರಪ್ಪ ಒನ್ ಮ್ಯಾನ್ ಶೋ ಕೇವಲ ವರ್ಗಾವಣೆ ಮಾತ್ರ ಮಾಡುತ್ತಿರೋದು. ಅವರದ್ದೇ ಸರ್ಕಾರ ಇದ್ದು ಇನ್ನೂ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಇದನ್ನ ಜನ ವಿರೋಧ ಸರ್ಕಾರ ಅಂತ ಕರೆಯಬಹುದು. ಸರ್ಕಾರ ಇದೆ ಅಂತ ನನಗೆ ಅನ್ನಿಸುತ್ತಿಲ್ಲ. ಕೇಂದ್ರ, ರಾಜ್ಯ ಸರ್ಕಾರ ಎರಡೂ ಇಲ್ಲದಂತೆ ವರ್ತನೆ ಮಾಡುತ್ತಿವೆ. ಯಾವುದೇ ರಾಜ್ಯದಲ್ಲಿ ಪ್ರವಾಹ ಆದರೆ ಆದ್ಯತೆ ಮೇಲೆ ಕೆಲಸ ಮಾಡಬೇಕು ಎಂದರು.

    ನಮ್ಮ ಎಲ್ಲಾ ಶಾಸಕರಿಗೆ ಅವರ ಕ್ಷೇತ್ರಗಳು ಬಿಟ್ಟು ಬರದೇ ಇರಲು ಸೂಚನೆ ನೀಡಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸದೇ ಹೋದರೆ ಜನ ವಿರೋಧಿಗಳು ಆಗುತ್ತಾರೆ. ಜನರ ಕಷ್ಟ ಕೇಳಲು ಸರ್ಕಾರ ಇರೋದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.