Tag: Brussels

  • ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ವಾರ ಯುರೋಪ್ ಪ್ರವಾಸ

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ವಾರ ಯುರೋಪ್ ಪ್ರವಾಸ

    ಬ್ರಸೆಲ್ಸ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಒಂದು ವಾರದ ಯುರೋಪ್ (Europe) ಪ್ರವಾಸಕ್ಕೆ ತೆರಳಿದ್ದು, ಯುರೋಪಿಯನ್ ಯೂನಿಯನ್ (EU) ವಕೀಲರು, ವಿದ್ಯಾರ್ಥಿಗಳು ಮತ್ತು ಭಾರತೀಯ ವಲಸಿಗರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸೆಪ್ಟೆಂಬರ್ 7ರಂದು ಬ್ರಸೆಲ್ಸ್‌ನಲ್ಲಿ ಇಯು ವಕೀಲರನ್ನು ರಾಹುಲ್ ಗಾಂಧಿ ಭೇಟಿ ಮಾಡಲಿದ್ದು, ಹೇಗ್‌ನಲ್ಲಿಯೂ ಇದೇ ರೀತಿಯ ಸಭೆಯನ್ನು ನಡೆಸಲಿದ್ದಾರೆ. ಮೂಲಗಳ ಪ್ರಕಾರ, ರಾಗಾ ಸೆಪ್ಟೆಂಬರ್ 8ರಂದು ಪ್ಯಾರಿಸ್‌ನ (Paris) ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ಜಿ20 ಶೃಂಗಸಭೆಗೆ ಅಮೆರಿಕ ಅಧ್ಯಕ್ಷರ ಪ್ರವಾಸ – ಬೈಡನ್ ಪ್ರವಾಸಕ್ಕೂ ಮುನ್ನ ಜಿಲ್ ಬೈಡನ್‍ಗೆ ಕೊರೊನಾ ಸೋಂಕು

    ಸೆಪ್ಟೆಂಬರ್ 9ರಂದು ರಾಹುಲ್ ಗಾಂಧಿ ಪ್ಯಾರಿಸ್‌ನಲ್ಲಿರುವ ಫ್ರಾನ್ಸ್‌ನ ಲೇಬರ್ ಯೂನಿಯನ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ನಾರ್ವೆಗೆ ಭೇಟಿ ನೀಡಲಿರುವ ಅವರು, ಸೆಪ್ಟೆಂಬರ್ 10ರಂದು ಓಸ್ಲೋದಲ್ಲಿ ಡಯಾಸ್ಪೋರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: 68ನೇ ವಯಸ್ಸಿನಲ್ಲಿ ಮೂರನೇ ಮದ್ವೆಯಾದ ಖ್ಯಾತ ವಕೀಲ ಹರೀಶ್ ಸಾಳ್ವೆ

    ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ರಾಹುಲ್ ಗಾಂಧಿ ಈ ಸಭೆ ಮುಕ್ತಾಯಗೊಂಡ ಬಳಿಕ ಅಂದರೆ ಸೆಪ್ಟೆಂಬರ್ 11ರಂದು ಹಿಂದಿರುಗುವ ಸಾಧ್ಯತೆಯಿದೆ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?

    ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?

    ಬ್ರಸೆಲ್ಸ್: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮ್ಮ ಯುರೋಪ್ ಪ್ರವಾಸದಲ್ಲಿ ಫಿನ್‍ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದರು.

    ಮೋದಿ ಅವರು ಟ್ವೀಟ್ ಮಾಡುವ ಮೂಲಕ ವಿಷಯವನ್ನು ತಿಳಿಸಿದ್ದು, ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದ ಫೋಟೋ ಮತ್ತು ಔತಣಕ್ಕೆ ಕುಳಿತುಕೊಂಡಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಮೋದಿ ಅವರು ಫಿನ್‍ಲ್ಯಾಂಡ್ ಪ್ರಧಾನಿ ಜೊತೆ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. ಈ ಕುರಿತು ಮೋದಿ ಅವರು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವತ್ಥ ನಾರಾಯಣ್ ಶಾಮೀಲು: ಸಿದ್ದು ಆರೋಪ 

    ಮೋದಿ ಅವರು ಟ್ವೀಟ್‍ನಲ್ಲಿ, ಇಂದು ಫಿನ್‍ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದ್ದು ತುಂಬಾ ಅನುಕೂಲವಾಯಿತು. ಭಾರತ-ಫಿನ್‍ಲ್ಯಾಂಡ್ ಡಿಜಿಟಲ್ ಪಾಲುದಾರಿಕೆ, ವ್ಯಾಪಾರ ಪಾಲುದಾರಿಕೆ ಮತ್ತು ಹೂಡಿಕೆ ಸಂಬಂಧಗಳನ್ನು ವಿಸ್ತರಿಸು ಕುರಿತು ಮಾತುಕತೆ ಮಾಡಿದ್ದು, ಅದಕ್ಕೆ ಅಪಾರ ಸಾಮರ್ಥ್ಯವಿದೆ. ನಮ್ಮ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಗಾಢವಾಗಿಸುವ ಮಾರ್ಗಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ ಎಂದು ಬರೆದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.

    ಮೋದಿ ಅವರು ನಾರ್ವೆ, ಸ್ವೀಡನ್ ಮತ್ತು ಐಸ್‍ಲ್ಯಾಂಡ್‍ನ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳ ಸರಣಿಯನ್ನು ನಡೆಸಿದರು. ಇದನ್ನೂ ಓದಿ: ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ 

  • ತರಗತಿಯಲ್ಲಿ ಅವಮಾನ – 30 ವರ್ಷದ ಬಳಿಕ ಶಿಕ್ಷಕಿಯನ್ನು 101 ಬಾರಿ ಇರಿದು ಹತ್ಯೆಗೈದ ವಿದ್ಯಾರ್ಥಿ

    ತರಗತಿಯಲ್ಲಿ ಅವಮಾನ – 30 ವರ್ಷದ ಬಳಿಕ ಶಿಕ್ಷಕಿಯನ್ನು 101 ಬಾರಿ ಇರಿದು ಹತ್ಯೆಗೈದ ವಿದ್ಯಾರ್ಥಿ

    ಬ್ರಸೆಲ್ಸ್: ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಶಿಕ್ಷಕಿ ಅವಮಾನಿಸಿದ್ದಕ್ಕಾಗಿ 101 ಬಾರಿ ಚೂರಿ ಇರಿದು ಕೊಲೆ ಮಾಡಿದ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.

    ಮಾರಿಯಾ ವೆಲಿರ್ಂಡೆನ್ ಕೊಲೆಯಾದ ಶಿಕ್ಷಕಿ. ಬೆಲ್ಜಿಯಂನಲ್ಲಿ 37 ವರ್ಷದ ವ್ಯಕ್ತಿಯೊಬ್ಬ 7 ವರ್ಷದವನಾಗಿದ್ದಾಗ ತನ್ನ ಶಿಕ್ಷಕರು ತರಗತಿಯಲ್ಲಿ ಅವಮಾನಿಸಿದ್ದಕ್ಕೆ 30 ವರ್ಷಗಳ ನಂತರ ಚೂರಿಯಿಂದ ಇರಿದು ಸೇಡು ತೀರಿಸಿಕೊಂಡಿದ್ದಾನೆ.

    ಗುಂಟರ್ ಉವೆಂಟ್ಸ್ ಹೆಸರಿನ ಆರೋಪಿಯು 1990 ರಲ್ಲಿ ಅಂದರೆ ಅವನು 7 ವರ್ಷದ ಬಾಲಕನಾಗಿದ್ದಾಗ ಅವನ ಬಗ್ಗೆ ಟೀಚರ್ ವರ್ಲಿನ್ಡೆನ್ ಮಾಡಿದ ಅವಹೇಳನಕಾರಿ ಕಾಮೆಂಟ್ ಮಾಡಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರೊಲ್ಸ್ ರಾಯಲ್ಸ್‌ಗಾಗಿ ಮತ್ತೊಂದು ವಿವಾದಕ್ಕೆ ಸಿಲುಕಿದ ವಿಜಯ್ ದಳಪತಿ

    ಗುಂಟರ್ 2020ರಲ್ಲಿ ಮನೆಯಲ್ಲಿ ಕೊಂದರೂ ಪೊಲೀಸರಿಗೆ ಸುಮಾರು ಎರಡು ವರ್ಷಗಳ ಕಾಲ ಪ್ರಕರಣವನ್ನು ಬೇಧಿಸುವುದು ಸಾಧ್ಯವಾಗಿರಲಿಲ್ಲ. ನೂರಾರು ಜನರ ವಿಚಾರಣೆ ನಡೆಸಿ ಡಿಎನ್‍ಎ ಪರೀಕ್ಷೆಗಳನ್ನು ನಡೆಸಿದ್ದರೂ ಹಂತಕನನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ. ವರ್ಲಿನ್ಡೆನ್‍ರ ಪತಿ ಸಾಕ್ಷ್ಯ ಒದಗಿಸಲು ಸಾರ್ವಜನಿಕ ಮನವಿಯನ್ನೂ ಮಾಡಿದ್ದರು.

    ವರ್ಲಿನ್ಡೆನ್ ರಕ್ತಸಿಕ್ತ ದೇಹ ಅವರ ಮನೆಯ ಡೈನಿಂಗ್ ಟೇಬಲ್ ಬಳಿ ಸಿಕ್ಕಿತ್ತು. ಆದರೆ ಟೇಬಲ್ ಮೇಲಿದ್ದ ಅವರ ಪರ್ಸ್‍ನಿಂದ ಹಣವಾಗಲೀ ಅಥವಾ ಇನ್ನಿತರ ವಸ್ತುಗಳಾಗಲೀ ನಾಪತ್ತೆಯಾಗಿರಲಿಲ್ಲ. ಹಾಗಾಗಿ ದರೋಡೆ ಮಾಡಲು ಕೊಲೆ ನಡೆದಿಲ್ಲ ಎಂಬ ಖಚಿತ ನಿರ್ಣಯಕ್ಕೆ ಪೊಲೀಸರು ಬಂದಿದ್ದರು.

    ವರ್ಲಿನ್ಡೆನ್ ಅವರನ್ನು ಗುಂಟರ್ ಕೊಂದಿದ್ದು ನವೆಂಬರ್ 20, 2020 ರಂದು. ಕೊಲೆ ಮಾಡಿದ 16 ತಿಂಗಳುಗಳ ಬಳಿಕ ಅವನು ತನ್ನ ಆಪ್ತ ಸ್ನೇಹಿತನೊಬ್ಬನ ಮುಂದೆ ಟೀಚರನ್ನು ಕೊಂದ ವಿಷಯದ ಬಗ್ಗೆ ಬಾಯಿ ಬಿಟ್ಟಿದ್ದ. ಈ ಆಪ್ತಮಿತ್ರ ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಈಗ ಸತ್ಯ ಬಯಲಾಗಿದೆ.

    ಹತ್ಯೆ ನಡೆದ ಸ್ಥಳದಲ್ಲಿ ದೊರೆತ ಕುರುಹುಗಳೊಂದಿಗೆ ತಾಳೆ ಮಾಡಲು ಗುಂಟರ್ ತನ್ನ ಡಿಎನ್‍ಎ ಪೊಲೀಸರಿಗೆ ನೀಡಿದಾಗ ಅದು ಮ್ಯಾಚ್ ಆಗಿದೆ. ಅವನು ಸ್ನೇಹಿತನ ಮುಂದೆ ಹತ್ಯೆ ನಡೆಸಿದನ್ನು ಹೇಳಿಕೊಂಡಿರದಿದ್ದರೂ ಪೊಲೀಸರಿಗೆ ಸಿಕ್ಕಿಬೀಳುತ್ತಿದ್ದ. ಯಾಕೆಂದರೆ, ವರ್ಲಿನ್ಡೆನ್ ಅವರಿಂದ ಶಿಕ್ಷಣ ಪಡೆದ ಎಲ್ಲ ವಿದ್ಯಾರ್ಥಿಗಳ ಜೆನೆಟಿಕ್-ಸ್ಯಾಂಪಲ್‍ಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಪೊಲೀಸರು ಆರಂಭಿಸಿದ್ದರು.

    ತಾನು ನಡೆಸಿದ ಕೃತ್ಯದ ಸಮಗ್ರ ವಿವರವನ್ನು ಗುಂಟರ್ ನ್ಯಾಯಮೂರ್ತಿಗಳ ಮುಂದೆ ಹೇಳಿಕೊಂಡಿದ್ದಾನೆ. ಅವನ ಹೇಳಿಕೆಯನ್ನು ತಪ್ಪೋಪ್ಪಿಗೆ ಎಂದು ಪರಿಗಣಿಸಲಾಗಿದೆ. ಪ್ರಾಥಮಿಕ ಶಿಕ್ಷಣ ಹಂತದಲ್ಲಿ ತಾನು ವರ್ಲಿನ್ಡೆನ್ ಮಾಡಿದ ಅವಮಾನದಿಂದ ಬಹಳ ಹಿಂಸೆ ಅನುಭವಿಸಿದೆ ಎಂದು ಅವನು ಹೇಳಿಕೊಂಡಿದ್ದಾನೆ. ಅವನ ಹೇಳಿಕೆ ಮತ್ತು ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಎಷ್ಟು ಸಾಮ್ಯತೆ ಇದೆ ಅಂತ ನಾವು ಪರಿಶೀಲಿಸಬೇಕಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದನ್ನೂ ಓದಿ: ವಿಷಪೂರಿತ ಮೇಕೆ ಮೃತದೇಹ ತಿಂದು 100 ರಣಹದ್ದುಗಳ ದಾರುಣ ಸಾವು

    ಮಂಗಳವಾರದಂದು ಗುಂಟರ್‌ನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಗುಂಟರ್ ಒಬ್ಬ ಧರ್ಮನಿಷ್ಠ ಕ್ರಿಶ್ಚಿಯನ್ ಆಗಿದ್ದು ನಿರಾಶ್ರಿತರಿಗೆ ತನ್ನ ಶಕ್ತಿಮೀರಿ ಸಹಾಯ ಮಾಡುತ್ತಿದ್ದ ಬೆಲ್ಜಿಯಂ ಮಾಧ್ಯಮಗಳು ವರದಿ ಮಾಡಿವೆ.

  • 11 ವರ್ಷಕ್ಕೆ ಡಿಗ್ರಿ ಮುಗಿಸಿದ ಬಾಲಕ

    11 ವರ್ಷಕ್ಕೆ ಡಿಗ್ರಿ ಮುಗಿಸಿದ ಬಾಲಕ

    ಬ್ರಸೆಲ್ಸ್: 11 ವರ್ಷಕ್ಕೆ ಭೌತಶಾಸ್ತ್ರ ವಿಷಯದಲ್ಲಿ ಡಿಗ್ರಿ ಮುಗಿಸುವ ಮೂಲಕವಾಗಿ ಬೆಲ್ಜಿಯಮ್ ಬಾಲಕನೋರ್ವ ಸುದ್ದಿಯಾಗಿದ್ದಾನೆ.  ಇದನ್ನೂ ಓದಿ:  ಗಂಡು ಮಗುವಿನ ತಂದೆಯಾದ ಹರ್ಭಜನ್ ಸಿಂಗ್

     20 ವರ್ಷಕ್ಕೆ ಮುಗಿಸಬೇಕಾದ ಡಿಗ್ರಿಯನ್ನು ಲೌರೆಂಟ್ ಸಿಮೋನ್ಸ್ ಕೇವಲ 11 ವರ್ಷಕ್ಕೆ ಪೂರ್ಣಗೊಳಿಸಿದ್ದಾನೆ. ಅತೀ ಸಣ್ಣ ವಯಸ್ಸಿನಲ್ಲೇ ಈ ಬಾಲಕ ಮಾಡಿದ ಸಾಧನೆಗೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಬೆಲ್ಜಿಯಂನ ಒಸ್ಟೆಂಡ್‍ನ ನಿವಾಸಿಯಾದ ಸಿಮೋನ್ಸ್ 11 ವರ್ಷಕ್ಕೆ ವಿಶ್ವವಿದ್ಯಾಲಯವೊಂದರಲ್ಲಿ ಡಿಗ್ರಿ ಸರ್ಟಿಫಿಕೇಟ್ ಪಡೆಯುವ ಮೂಲಕವಾಗಿ ಜಗತ್ತಿನ 2ನೇ ಅತೀ ಪುಟ್ಟ ಪದವೀಧರ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಸಿಮೋನ್ಸ್ ಆಂಟ್ವರ್ಪ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಗಲ್ಲಿ ಪದವಿ ಪ್ರಮಾಣ ಪತ್ರ ಪಡೆದಿದ್ದಾನೆ. ಸಾಮಾನ್ಯವಾಗಿ ಎಲ್ಲರೂ ಮೂರು ವರ್ಷ ಡಿಗ್ರಿ ಮುಗಿಸುತ್ತಾರೆ. ಆದರೆ, ಸಿಮೋನ್ಸ್ ಮಾತ್ರ ಕೇವಲ ಒಂದೇ ವರ್ಷದಲ್ಲಿ ಪದವಿ ಪೂರ್ಣಗೊಳಿಸಿ ಸಾಧನೆ ಮಾಡಿದ್ದಾನೆ.

    ಬಾಲಕ ಶೇ. 85 ಅಂಕ ಗಳಿಸಿದ್ದಾನೆ. ಈ ಬಾಲಕ ಸಣ್ಣ ವಯಸ್ಸಿನಲ್ಲೇ ಪದವಿಯನ್ನು ಪಡೆದ 2ನೇ ಅತೀ ಚಿಕ್ಕ ಪುಟ್ಟ ಬಾಲಕನಾಗಿದ್ದಾನೆ. ಈ ಹಿಂದೆ 1994ರಲ್ಲಿ ಮೈಕಲ್ ಕೀರ್ನಿ ಎಂಬವ 10ವರ್ಷದವನಿದ್ದಾಗಲೇ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗದಲ್ಲಿ ಪದವಿ ಸಂಪಾದಿಸಿದ್ದ. ಈ ದಾಖಲೆಯನ್ನು ಸಿಮೋನ್ಸ್ ಮರಿಯಬಹುದಿತ್ತು. ಆದರೆ 2019ರಲ್ಲಿ ನೆದರ್‍ಲೆಂಡ್‍ನ ಐಂಡ್‍ಹೋವನ್ ವಿಶ್ವವಿದ್ಯಾಲಯವು ಸಿಮೋನ್ಸ್ ಗೆ 10 ವರ್ಷ ವಯಸ್ಸಾಗದ ಹೊರತ ಡಿಗ್ರಿ ಓದಲು ಅವಕಾಶ ಇಲ್ಲ ಎಂದು ಹೇಳಿತ್ತು. ಬಾಲಕನ ಈ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಆರ್ಡರ್ ಮಾಡದಿದ್ರೂ 9 ವರ್ಷದಿಂದ ಮನೆಗೆ ಬರ್ತಿದೆ ಪಿಜ್ಜಾ

    ಆರ್ಡರ್ ಮಾಡದಿದ್ರೂ 9 ವರ್ಷದಿಂದ ಮನೆಗೆ ಬರ್ತಿದೆ ಪಿಜ್ಜಾ

    – ಒಮ್ಮೆ 14 ಪಿಜ್ಜಾ ಡೆಲಿವರಿ

    ಬ್ರಸೆಲ್ಸ್: ಸಾಮಾನ್ಯವಾಗಿ ಪಿಜ್ಜಾ ಆರ್ಡರ್ ಮಾಡಿದರೆ ಒಮ್ಮೆ ವಿಳಂಬವಾಗಿ ಬರುತ್ತದೆ. ಆದರೆ 65 ವರ್ಷದ ವೃದ್ಧರೊಬ್ಬರು ಆರ್ಡರ್ ಮಾಡದಿದ್ದರೂ ಸುಮಾರು ಒಂಬತ್ತು ವರ್ಷಗಳಿಂದ ಅವರ ಮನೆಗೆ ಪಿಜ್ಜಾ ಬರುತ್ತಿರುವ ಘಟನೆ ನಡೆದಿದೆ.

    ಬೆಲ್ಜಿಯಂನ ಆಂಟ್‍ವರ್ಪ್ ನ 65 ವರ್ಷದ ಜೆನ್ ವ್ಯಾನ್ ಲ್ಯಾಂಡೆಘೇಮ್ ಮನೆಗೆ ಪಿಜ್ಜಾ ಬರುತ್ತಿದೆ. ಒಂಬತ್ತು ವರ್ಷಗಳಿಂದ ನಮ್ಮ ಮನೆಗೆ ಡೆಲಿವರಿ ಬಾಯ್‍ಗಳು ಪಿಜ್ಜಾ ಹಿಡಿದುಕೊಂಡು ಬರುತ್ತಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಡೋರ್ ಬೆಲ್ ಬಾರಿಸಿದರು. ಬಾಗಿಲು ತೆಗೆದು ನೋಡಿದಾಗ ಪಿಜ್ಜಾ ಡೆಲಿವರಿ ಬಾಯ್ ನಿಂತಿದ್ದನು. ಆಗ ನಾನು ಯಾವುದೇ ಪಿಜ್ಜಾವನ್ನು ಆರ್ಡರ್ ಮಾಡಿಲ್ಲ ಅಂತ ಹೇಳಿದೆ. ಆದರೂ ಅವರು ಕೊಟ್ಟರು. ಅಂದಿನಿಂದ ನಿರಂತರವಾಗಿ ಪಿಜ್ಜಾ ಡೆಲಿವರಿ ಬರುತ್ತಿದೆ ಎಂದು ಜೆನ್ ಹೇಳಿದ್ದಾರೆ.

    ಸ್ಥಳೀಯ ಆಹಾರ ಮಳಿಗೆಯಿಂದ ರುಚಿ-ರುಚಿಯಾದ ಪಿಜ್ಜಾ ಬರುತ್ತಿದ್ದಾವೆ. ವಾರದ ದಿನದಂದು ಅಥವಾ ವಾರಾಂತ್ಯದಲ್ಲಿ ಪಿಜ್ಜಾ ಬರುತ್ತಿದೆ. ಅಲ್ಲದೇ ಒಂದೆರಡು ಬಾರಿ ರಾತ್ರಿ 2 ಗಂಟೆಗೂ ಪಿಜ್ಜಾ ಬಂದಿದೆ. ನಾನು ಒಮ್ಮೆಯೂ ಡೆಲಿವರಿ ಬಾಯ್‍ನನ್ನು ವಾಪಸ್ ಕಳುಹಿಸಲಿಲ್ಲ. ಎಲ್ಲವನ್ನು ಖರೀದಿಸುತ್ತಿದ್ದೆ. ಜನವರಿ 2019 ರಲ್ಲಿ ಒಮ್ಮೆಲೆ 14 ಪಿಜ್ಜಾಗಳು ಬಂದಿದ್ದವು. ಅನಿರೀಕ್ಷಿತವಾಗಿ ಬರುತ್ತಿದ್ದ ಪಿಜ್ಜಾದಿಂದ ತುಂಬಾ ಹಣ ಖರ್ಚಾಗಿದೆ. ಒಮ್ಮೆ 14 ಪಿಜ್ಜಾಗಳಿಗೆ ಸುಮಾರು 450 ಡಾಲರ್ (38 ಸಾವಿರ ರೂ.) ಅನ್ನು ನೀಡಿದ್ದೇನೆ. ಒಂದು ವೇಳೆ ನಾನು ಪಿಜ್ಜಾ ಖರೀದಿಸದಿದ್ದರೆ ತಂದ ಪಿಜ್ಜಾ ವ್ಯರ್ಥವಾಗಿ ಎಸೆಯಬೇಕಿತ್ತು. ಆದ್ದರಿಂದ ನಾನು ಪಿಜ್ಜಾ ಖರೀದಿಸುತ್ತಿದ್ದೆ ಎಂದಿದ್ದಾರೆ.

    ಈಗ ನಾನು ಮಲಗಲು ಭಯಪಡುತ್ತೇನೆ. ಯಾಕೆಂದರೆ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಹೋಗುವಾಗ ಯಾರಾದರೂ ಮತ್ತೆ ಬಿಸಿ ಪಿಜ್ಜಾ ಕೊಡಲು ಬಂದು ಬಿಟ್ಟರೆ ಎಂದು ಆತಂಕವಾಗುತ್ತದೆ. ನಾನು ಪೊಲೀಸರನ್ನು ಸಹ ಸಂಪರ್ಕಿಸಿ ಈ ಬಗ್ಗೆ ಮಾತನಾಡಿದ್ದೆ. ಆದರೆ ಪೊಲೀಸರು ಕೂಡ ಯಾವುದೇ ಸಹಾಯ ಮಾಡಲಿಲ್ಲ ಎಂದು ಜೆನ್ ಹೇಳಿದರು.

    ಜೆನ್ ಮಾತ್ರವಲ್ಲದೇ ಅವರ ನಿವಾಸದಿಂದ 15 ಮೈಲಿ ದೂರದಲ್ಲಿರುವ ಫ್ಲಾಂಡರ್ಸ್ ಪಟ್ಟಣದಲ್ಲಿ ವಾಸಿಸುವ ಅವರ ಸ್ನೇಹಿತರೊಬ್ಬರಿಗು ಇದೇ ರೀತಿ ಪಿಜ್ಜಾ ಬರುತ್ತಿಯಂತೆ. ಕೆಲವೊಮ್ಮೆ ನಮ್ಮಿಬ್ಬರಿಗೂ ಒಂದೇ ದಿನ ಪಿಜ್ಜಾ ಬಂದಿದ್ದವು. ಈ ಬಗ್ಗೆ ನಾವು ಚರ್ಚೆ ಕೂಡ ಮಾಡಿದ್ದೇವೆ ಎಂದು ಹೇಳಿದರು.