Tag: Brunei

  • 1,788 ಕೊಠಡಿ, 257 ಸ್ನಾನಗೃಹ, ಅಮೃತಶಿಲೆಯಿಂದ ಮಾಡಿದ ಮೆಟ್ಟಿಲು – ವಿಶ್ವದ ಅತಿದೊಡ್ಡ ಐಷಾರಾಮಿ ಅರಮನೆಯಲ್ಲಿ ಮೋದಿಗೆ ಆತಿಥ್ಯ

    1,788 ಕೊಠಡಿ, 257 ಸ್ನಾನಗೃಹ, ಅಮೃತಶಿಲೆಯಿಂದ ಮಾಡಿದ ಮೆಟ್ಟಿಲು – ವಿಶ್ವದ ಅತಿದೊಡ್ಡ ಐಷಾರಾಮಿ ಅರಮನೆಯಲ್ಲಿ ಮೋದಿಗೆ ಆತಿಥ್ಯ

    – ಬ್ರೂನೈ ಪ್ರವಾಸದಲ್ಲಿ ಪ್ರಧಾನಿ ಮೋದಿ; ಭವ್ಯ ಸ್ವಾಗತ ಕೋರಿದ ವಿಶ್ವದ ಶ್ರೀಮಂತ ದೊರೆ

    ಬ್ರೂನೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬ್ರೂನೈಗೆ (Brunei) ಐತಿಹಾಸಿಕ ಪ್ರವಾಸ ಕೈಗೊಂಡಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಪ್ರವಾಸ ಇದಾಗಿದೆ. ಬ್ರೂನೈ ಸುಲ್ತಾನನಿಂದ ಮೋದಿಗೆ ಭವ್ಯ ಸ್ವಾಗತ ಕೂಡ ಸಿಕ್ಕಿದೆ.

    ಬ್ರೂನೈನಲ್ಲಿ ಪ್ರಧಾನಿ ಮೋದಿ 2 ದಿನದ ಪ್ರವಾಸದಲ್ಲಿದ್ದಾರೆ. ಬ್ರೂನೈ ಸುಲ್ತಾನನ ಐಷಾರಾಮಿ ಮನೆಯಲ್ಲಿ ಮೋದಿ ಊಟ ಸವಿಯಲಿದ್ದಾರೆ. ಪ್ರವಾಸದ 2 ನೇ ದಿನದಂದು, ಪ್ರಧಾನಿ ಮೋದಿ ಅವರು ಬ್ರೂನೈ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರನ್ನು ಅವರ ಅಧಿಕೃತ ನಿವಾಸ, ವಿಶ್ವದ ಅತಿದೊಡ್ಡ ಇಸ್ತಾನಾ ನೂರುಲ್ ಇಮಾನ್ ಅರಮನೆಯಲ್ಲಿ ಭೇಟಿಯಾಗಲಿದ್ದಾರೆ. ಇದನ್ನೂ ಓದಿ: ಇಂದು ಬ್ರೂನೈಗೆ ಪ್ರಧಾನಿ ಮೋದಿ ಭೇಟಿ – 7 ಸಾವಿರ ಕಾರುಗಳ ಒಡೆಯ ಬ್ರೂನಿ ಸುಲ್ತಾನನಿಂದ ಸ್ವಾಗತ

    ಅರಮನೆಯು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ತನ್ನ ಹೆಸರನ್ನು ನೋಂದಾಯಿಸಿದೆ. 1,788 ಕೊಠಡಿಗಳು, 257 ಸ್ನಾನಗೃಹಗಳು ಮತ್ತು 38 ರೀತಿಯ ಅಮೃತಶಿಲೆಯಿಂದ ಮಾಡಿದ 44 ಮೆಟ್ಟಿಲುಗಳನ್ನು ಹೊಂದಿದೆ. ಈ ಅರಮನೆಯಲ್ಲಿ ಪ್ರಧಾನಿ ಮೋದಿಗೆ ವಿಶೇಷ ಆತಿಥ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ದಿವಂಗತ ರಾಣಿ ಎಲಿಜಬೆತ್ II ಅವರನ್ನು ಬಿಟ್ಟರೆ, ವಿಶ್ವದಲ್ಲೇ ಅತ್ಯಂತ ದೀರ್ಘಾವಧಿಯ ದೊರೆಯಾಗಿರುವ ಎರಡನೇ ಸುಲ್ತಾನ ಇವರಾಗಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು ಕೂಡ. ಇದನ್ನೂ ಓದಿ: ಚೀನಾ, ಫಿಲಿಪೈನ್ಸ್‌ ಗಡಿ ವಿವಾದ – ಶಮನವಾಗದ ದಶಕಗಳ ಉದ್ವಿಗ್ನತೆಗೆ ಕಾರಣವೇನು ಗೊತ್ತಾ? 

    ಪ್ರಧಾನಿ ಮೋದಿ ಮತ್ತು ಬ್ರೂನೈ ಸುಲ್ತಾನ್ ಅವರು 2014 ನವೆಂಬರ್‌ನಲ್ಲಿ ನೇ ಪೈ ತಾವ್‌ನಲ್ಲಿ ನಡೆದಿದ್ದ 25 ನೇ ಆಸಿಯಾನ್ ಶೃಂಗಸಭೆ ಮತ್ತು ಮನಿಲಾದಲ್ಲಿ ನಡೆದ 2017 ರ ಪೂರ್ವ ಏಷ್ಯಾ ಶೃಂಗಸಭೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು.

    ಭಾರತ ಮತ್ತು ಬ್ರೂನೈ ನಡುವಿನ ರಾಜತಾಂತ್ರಿಕ ಸಂಬಂಧಗಳ 40 ನೇ ವಾರ್ಷಿಕೋತ್ಸವದ ಹಿನ್ನೆಲೆ ಮೋದಿ ಐತಿಹಾಸಿಕ ಪ್ರವಾಸ ಕೈಗೊಂಡಿದ್ದಾರೆ. ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಆರೋಗ್ಯದಂತಹ ಸಹಕಾರದ ಕ್ಷೇತ್ರಗಳ ಮೇಲೆ ದ್ವಿಪಕ್ಷೀಯ ಚರ್ಚೆಗಳಲ್ಲಿ ಪ್ರಧಾನಮಂತ್ರಿ ತೊಡಗುತ್ತಾರೆ. ಉಭಯ ರಾಷ್ಟ್ರಗಳು ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.

  • ಇಂದು ಬ್ರೂನೈಗೆ ಪ್ರಧಾನಿ ಮೋದಿ ಭೇಟಿ – 7 ಸಾವಿರ ಕಾರುಗಳ ಒಡೆಯ ಬ್ರೂನಿ ಸುಲ್ತಾನನಿಂದ ಸ್ವಾಗತ

    ಇಂದು ಬ್ರೂನೈಗೆ ಪ್ರಧಾನಿ ಮೋದಿ ಭೇಟಿ – 7 ಸಾವಿರ ಕಾರುಗಳ ಒಡೆಯ ಬ್ರೂನಿ ಸುಲ್ತಾನನಿಂದ ಸ್ವಾಗತ

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು ಬ್ರೂನೈ (Brunei) ದೇಶಕ್ಕೆ ಭೇಟಿ ನೀಡಲಿದ್ದಾರೆ. ಬ್ರೂನಿ ದೇಶದ ಸುಲ್ತಾನ, 7 ಸಾವಿರ ಕಾರುಗಳ ಒಡೆಯ ಹಾಜಿ ಹಸನಲ್ ಬೊಲ್ಕಿಯಾ (Hassanal Bolkiah) ಅವರು ಮೋದಿಯವರನ್ನು ಸ್ವಾಗತಿಸಲಿದ್ದಾರೆ.

    ಸುಲ್ತಾನ್ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಬ್ರೂನೈ ದೇಶಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ಇತಿಹಾಸದಲ್ಲಿ ಏಷ್ಯಾದ (Asia) ಆಗ್ನೇಯ ದೇಶಕ್ಕೆ ಭೇಟಿ ನೀಡುವ ಪ್ರಧಾನಿಯಲ್ಲಿ ಮೋದಿ ಮೊದಲಿಗರಾಗಲಿದ್ದಾರೆ. ಬ್ರೂನಿ ದೇಶಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಲಿರುವ ಅವರು ಉಭಯ ದೇಶಗಳ 40 ವರ್ಷಗಳ ರಾಜತಾಂತ್ರಿಕತೆ ಬಗ್ಗೆ ಚರ್ಚಿಸಲಿದ್ದಾರೆ.  ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – 9 ನಕ್ಸಲರನ್ನು ಬೇಟೆಯಾಡಿದ ಭದ್ರತಾ ಪಡೆ

    ಹಸನಲ್ ಬೊಲ್ಕಿಯಾ ಅವರು ಇಂಗ್ಲೆಂಡ್‌ನ ರಾಣಿ 2ನೇ ಎಲಿಜಬೆತ್ ಅವರ ನಂತರ ವಿಶ್ವದಲ್ಲಿಯೇ ಅತೀ ಹೆಚ್ಚು ಆಳ್ವಿಕೆ ಮಾಡಿದ ದೊರೆಯಾಗಿದ್ದಾರೆ. ಅವರು ಜಗತ್ತಿನಲ್ಲಿಯೇ ಅತಿ ಹೆಚ್ಚು ಖಾಸಗಿ ಕಾರುಗಳನ್ನು ಹೊಂದಿದವರಾಗಿದ್ದು, ಆ ಎಲ್ಲ ಕಾರುಗಳ ಒಟ್ಟು ಬೆಲೆ 4,197 ಕೋಟಿ (5 ಬಿಲಿಯನ್ ಡಾಲರ್) ಇದೆ. ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ | ಸೊಳ್ಳೆ ಉತ್ಪತ್ತಿಯಾದ್ರೆ ಬೀಳುತ್ತೆ ದಂಡ – ಮನೆ, ಹೋಟೆಲ್ ಮಾಲೀಕರಿಗೆ ಎಷ್ಟು?

    ಬೊಲ್ಕಿಯಾ ಅವರ ಹತ್ತಿರ 7 ಸಾವಿರಕ್ಕಿಂತ ಹೆಚ್ಚು ಐಷರಾಮಿ ಕಾರುಗಳಿದ್ದು, ಅದರಲ್ಲಿ 6 ಸಾವಿರ ಕಾರುಗಳು ರೋಲ್ಸ್ ರಾಯ್ಸ್ ಕಾರುಗಳಾಗಿವೆ. ಇದು ಅಧಿಕೃತವಾಗಿ ಗಿನ್ನಿಸ್ ದಾಖಲೆ ಸೇರಿದೆ. ಅವರು 450 ಫೇರಾರಿ ಮತ್ತು 380 ಬೆಂಟ್ಲಿ ಹಾಗೆಯೇ ಲ್ಯಾಂಬೋರ್ಗಿನಿ, ಜಾಗ್ವಾರ್ಸ್, ಬಿಎಂಡಬ್ಯೂ, ಪೊರ್ಷಸ್, ಮೇಬ್ಯಾಕ್ಸ್, ಮೆಕ್‌ಲಾರೆನ್ಸ್ ಒಳಗೊಂಡಂತೆ ಹಲವಾರು ಕಾರುಗಳು ಹೊಂದಿದ್ದಾರೆ. ಅವರಲ್ಲಿದ್ದ ಬೆಂಟ್ಲಿ ಡೊಮಿನರ್ ಎಸ್‌ಯುವಿ ಎನ್ನುವ ಒಂದೇ ಕಾರು ಸುಮಾರು 67 ಕೋಟಿ (80 ಮಿಲಿಯನ್ ಡಾಲರ್) ಬೆಲೆಯುಳ್ಳದ್ದಾಗಿದೆ. 2007ರಲ್ಲಿ ತಮ್ಮ ಮಗಳ ಮದುವೆಯಲ್ಲಿ ರೋಲ್ಸ್ ರಾಯ್ಸ್ ಕಾರ್ ಒಂದಕ್ಕೆ ಸಂಪೂರ್ಣವಾಗಿ ಚಿನ್ನದ ಲೇಪನ ಮಾಡಿದ್ದರು. ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ಟಿವಿಗಾಗಿ ದರ್ಶನ್ ಮೊರೆ

    ಸುಲ್ತಾನರ ವಾಸಸ್ಥಾನದ ಅರಮನೆ ನೈಸರ್ಗಿಕದಿಂದ ಕೂಡಿದ ವಿಶ್ವದ ಅತೀ ದೊಡ್ಡ ಅರಮನೆ ಎಂದು ಗಿನ್ನಿಸ್ ದಾಖಲೆ ಮಾಡಿದೆ. ಅವರ ವಾಸಸ್ಥಾನದ ಅರಮನೆಯಲ್ಲಿ 2 ಮಿಲಿಯನ್ ಚದರ ಅಡಿ ಪ್ರದೇಶದಲ್ಲಿ 22 ಕ್ಯಾರೆಟ್ ಚಿನ್ನವನ್ನು ಲೇಪಿಸಲಾಗಿದೆ. ಅರಮನೆಯು 5 ಸ್ನಾನದ ಕೊಳ, 1,700 ಮಲಗುವ ಕೋಣೆಗಳು, 257 ಶೌಚಾಲಯ ಮತ್ತು 110 ಗ್ಯಾರೇಜ್‌ಗಳನ್ನು ಹೊಂದಿದೆ.

    ಸುಲ್ತಾನ್ ತನ್ನ ಸ್ವಂತದ ಖಾಸಗಿ ಮೃಗಾಲಯ ಹೊಂದಿದ್ದಾರೆ. ಅದರಲ್ಲಿ 30 ಬಂಗಾಳದ ಹುಲಿಗಳು, ವಿವಿಧ ಬಗೆಯ ಹಕ್ಕಿಗಳಿವೆ. ಇವರು 747 ಬೋಯಿಂಗ್ ವಿಮಾನಗಳು ಕೂಡ ಹೊಂದಿದ್ದಾರೆ. ಇದನ್ನೂ ಓದಿ: ದರ್ಶನ್‌ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ: ಜಮೀರ್‌