Tag: brothers

  • 8 ದಿನಗಳಿಂದ ಆಹಾರವಿಲ್ಲದೇ ಮೂವರು ಮುಗ್ಧ ಹೆಣ್ಣು ಮಕ್ಕಳ ದುರ್ಮರಣ!

    8 ದಿನಗಳಿಂದ ಆಹಾರವಿಲ್ಲದೇ ಮೂವರು ಮುಗ್ಧ ಹೆಣ್ಣು ಮಕ್ಕಳ ದುರ್ಮರಣ!

    ನವದೆಹಲಿ: ಮೂವರು ಮುಗ್ಧ ಹೆಣ್ಣು ಮಕ್ಕಳು 8 ದಿನಗಳಿಂದ ಆಹಾರವಿಲ್ಲದೇ ಮೃತಪಟ್ಟ ದಾರುಣ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಮಕ್ಕಳು 8, 4 ಹಾಗೂ ಎರಡು ವರ್ಷದವರಾಗಿದ್ದಾರೆ. ಮಕ್ಕಳು ಹೇಗೆ ಸಾವನ್ನಪ್ಪಿವೆ ಅಂತ ಪೊಲೀಸರು ಕೇಳಿದಾಗ `ನನಗೆ ಆಹಾರ ನೀಡಿ’ ಅಂತ ಮಕ್ಕಳ ತಾಯಿ ಹೇಳಿ ಕುಸಿದು ಬಿದ್ದಿದ್ದಾರೆ.

    ಮಂಗಳವಾರ ಬೆಳಗ್ಗೆ ತಾಯಿ ಮೂವರು ಮಕ್ಕಳೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಮಕ್ಕಳನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಕ್ಕಳ ತಾಯಿಯನ್ನು ಪ್ರಶ್ನಿಸಿದ್ದಾರೆ. ಮಕ್ಕಳು ಹೇಗೆ ಮೃತಪಟ್ಟಿದ್ದಾರೆ ಅಂದಾಗ `ನನಗೆ ಆಹಾರ ನೀಡಿ’ ಅಂತ ಹೇಳಿ ತಾಯಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.

    ಕಳೆದ 8 ದಿನಗಳಿಂದ ಮಕ್ಕಳು ಆಹಾರವನ್ನೇ ಸೇವಿಸಿಲ್ಲ. ಈ ವಿಚಾರ ತಿಳಿದ ವೈದ್ಯರೇ ಒಂದು ಬಾರಿ ಶಾಕ್ ಆಗಿದ್ದಾರೆ. ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ, ಅವುಗಳ ಹೊಟ್ಟೆ ಸಂಪೂರ್ಣವಾಗಿ ಖಾಲಿಯಾಗಿದ್ದು, ಅಪೌಷ್ಟಿಕತೆಯಿಂದ ಕೂಡಿತ್ತು ಅಂತ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಅಮಿತ್ ಸೆಕ್ಸೇನಾ ತಿಳಿಸಿದ್ದಾರೆ.

    15 ವರ್ಷದ ನನ್ನ ವೈದ್ಯಕೀಯ ಜೀವನದಲ್ಲಿ ಇಂತಹ ಪ್ರಕರಣವನ್ನು ನಾನು ಕಂಡಿಲ್ಲ ಅಂತ ಆಸ್ಪತ್ರೆಯ ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ದೇಶದ ಆದಾಯದಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಧಾನಿಯಲ್ಲಿ ಹಸಿವಿನಿಂದ ಸಾಯುತ್ತಿದ್ದಾರೆ ಅಂದ್ರೆ ಅಚ್ಚರಿಯ ಸಂಗತಿಯಾಗಿದೆ.

    ಬಂಗಾಳದ 5 ಮಂದಿಯ ಕುಟುಂಬ ಶನಿವಾರ ಪೂರ್ವ ದೆಹಲಿಯ ಮಂಡವಳಿಗೆ ತೆರಳಿತ್ತು. ಮಕ್ಕಳ ತಂದೆಯ ಗೆಳೆಯನ ಮನೆಗೆ ಬಂದಿದ್ದರು ಅಂತ ನೆರೆಮನೆಯವರು ತಿಳಿಸಿದ್ದಾರೆ. ಮಕ್ಕಳ ತಂದೆ ಕೈಗಾಡಿ ಎಳೆಯುತ್ತಿದ್ದು, ಘಟನೆಯ ಬಳಿಕ ನಾಪತ್ತೆಯಾಗಿದ್ದಾರೆ. ಆತ ಕೆಲಸ ಹುಡುಕಿಕೊಂಡು ಹೋಗಿದ್ದು, ಒಂದೆರೆಡು ದಿನಗಳಲ್ಲಿ ಹಿಂದಿರುಗಿ ಬರಬಹುದು. ಯಾಕಂದ್ರೆ ಅವರ ಕೈ ಗಾಡಿ ಇತ್ತೀಚೆಗೆ ಕಳೆದುಹೋಗಿದ್ದು, ಹೀಗಾಗಿ ಅವರು ಬೇರೆ ಕೆಲಸ ಹುಡುಕುತ್ತಿದ್ದಾರೆ ಅಂತ ನೆರೆಮನೆಯವರು ಹೇಳುತ್ತಿದ್ದಾರೆ. ಸದ್ಯ ಮೂವರು ಮಕ್ಕಳನ್ನು ಕಳೆದುಕೊಂಡಿರುವ ತಾಯಿ ಮಾತ್ರ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಟುಂಬ ಕಳೆದ ಮೂರು ದಿನಗಳಿಂದ ವಾಸಿಸುತ್ತಿದ್ದ ಕೊಠಡಿಯನ್ನು ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿದಾಗ ಕೆಲ ಔಷಧಿಗಳ ಬಾಟಲ್ ಗಳು ಮತ್ತು ಬೇರೆ ಸ್ವಲ್ಪ ಮಾತ್ರೆಗಳು ಇರುವುದು ಬೆಳಕಿಗೆ ಬಂದಿದೆ. ಮೂವರಲ್ಲಿ ಇಬ್ಬರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ರೆ ಇದರಲ್ಲಿ ಯಾರು ಅನಾರೋಗ್ಯದಲ್ಲಿದ್ದರು ಎಂಬುದಾಗಿ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಶಾಲೆಗೆ ಹೋಗುತ್ತಿದ್ದವರಲ್ಲಿ ಇಬ್ಬರು ಶಾಲೆಯಲ್ಲಿನ ಬಿಸಿಯೂಟ ತಿಂದು ಅನಾರೋಗ್ಯಕ್ಕೀಡಾಗಿದ್ದಾರೆ ಅಂತ ತಿಳಿಸಿದ್ದಾರೆ.

    ಘಟನೆಯ ಬಳಿಕ ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರು ಕುಟುಂಬಕ್ಕೆ ಭೇಟಿ ನೀಡಿ ಆಡಳಿತ ಪಕ್ಷ ಆಮ್ ಆದ್ಮಿ ವಿರುದ್ಧ ಕಿಡಿಕಾರಿದ್ದಾರೆ. ಇದೊಂದು ದೊಡ್ಡ ನಾಚಿಕೆಗೇಡಿನ ಸಂಗತಿಯಾಗಿದೆ. ಈ ವಿಚಾರದಲ್ಲಿ ರಾಜಕೀಯವನ್ನು ತರಲು ನಾನು ಇಷ್ಟಪಡುವುದಿಲ್ಲ. ಯಾಕಂದ್ರೆ ಉತ್ತಮ ಗುಣಮಟ್ಟದ ಆಹಾರವನ್ನು ಕಡಿಮೆ ಬೆಲೆಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿದೆ. ಇಂತಹ ಆಹಾರವನ್ನು ನಾಗರಿಕರಿಗೆ ನೀಡುವುದು ದೆಹಲಿ ಸರ್ಕಾರ ಜವಾಬ್ದಾರಿಯಾಗಿದೆ ಅಂತ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.

    ಕೆಲ ವರ್ಷದ ಹಿಂದೆ ಮನೆ ಬಾಗಿಲಿಗೆ ಹೋಗಿ ಪಡಿತರ ನೀಡಲಾಗುತ್ತಿತ್ತು, ಆದ್ರೆ ಇದೀಗ ಅದು ನಿಂತಿದೆ. ಇದನ್ನು ನಿಲ್ಲಿಸಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಅಂತ ಆಪ್ ಮುಖಂಡ ಸಂಜಯ್ ಶರ್ಮ ಆಗ್ರಹಿಸಿದ್ದಾರೆ.

  • ಕುಡಿದ ಮತ್ತಿನಲ್ಲಿ ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ

    ಕುಡಿದ ಮತ್ತಿನಲ್ಲಿ ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ

    ಅನೇಕಲ್: ಕುಡಿದ ಮತ್ತಿನಲ್ಲಿ ಸಹೋದರರ ನಡುವೆ ಜಗಳ ನಡೆದು ಅಣ್ಣ ತಮ್ಮನ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ತಮ್ಮ ಸ್ಥಳದಲ್ಲೇ ಸಾವನಪ್ಪಿದ ಘಟನೆ ಆನೇಕಲ್ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ದೇವರಬೆಟ್ಟ ಗ್ರಾಮದಲ್ಲಿ ನಡೆದಿದೆ.

    ದೇವರಬೆಟ್ಟ ಗ್ರಾಮದ ಗಣೇಶ್(32) ಅಣ್ಣ ಶಂಕರಪ್ಪನಿಂದ ಕೊಲೆಯಾದ ದುರ್ದೈವಿ. ಗಣೇಶ ಅನೇಕಲ್ ಸುತ್ತಮುತ್ತ ಕೂಲಿ ಕೆಲಸ ಮಾಡಿಕೊಂಡಿದ್ದು ಹಬ್ಬದ ಪ್ರಯುಕ್ತ ನಿನ್ನೆ ಸ್ವಗ್ರಾಮ ದೇವರಬೆಟ್ಟಕ್ಕೆ ತೆರಳಿದ್ದ. ಅಣ್ಣ, ತಮ್ಮ ಇಬ್ಬರು ಒಟ್ಟಿಗೆ ಸೇರಿ ಮದ್ಯಪಾನ ಪಾರ್ಟಿ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಶಂಕರಪ್ಪ ಮನೆಯಲ್ಲಿದ್ದ ಡಬ್ಬಲ್ ಬ್ಯಾರಲ್ ಗನ್ ನಿಂದ ತಮ್ಮನ ಮೇಲೆ ಗುಂಡು ಹರಿಸಿದ್ದಾನೆ. ಗುಂಡೇಟು ತಿಂದ ಗಣೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ.

    ಪ್ರಕರಣ ದಾಖಲಿಸಿಕೊಂಡ ತಮಿಳುನಾಡಿನ ಥಳಿ ಪೊಲೀಸರು ಆರೋಪಿ ಶಂಕರಪ್ಪನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

  • ಅಣ್ಣನ ಮೆಹೆಂದಿಯಂದೇ ಮದ್ವೆ ಮನೆಯಲ್ಲಿ ತಮ್ಮನ ಹೆಣ ಬಿತ್ತು!

    ಅಣ್ಣನ ಮೆಹೆಂದಿಯಂದೇ ಮದ್ವೆ ಮನೆಯಲ್ಲಿ ತಮ್ಮನ ಹೆಣ ಬಿತ್ತು!

    ಬೆಂಗಳೂರು: ಅಣ್ಣನ ಮದ್ವೆ ಇಂದು ಆಗ್ಬೇಕಿತ್ತು. ಆದ್ರೆ ಅತ್ತ ತಮ್ಮನ ಹೆಣ ಬಿದ್ದಿದೆ. ಮದುವೆ ಖುಷಿಯಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ನಗುನಗುತ್ತಾ ಓಡಾಡ್ತಿರಬೇಕಿದ್ದ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿದೆ.

    ಹೌದು. ಗುರುವಾರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿಯ ಉಮರ್ ಫಾರುಕ್ ಮಸ್ಜೀದ್ ಬಳಿ 22 ವರ್ಷದ ಶೇಖ್ ರಿಜ್ವಾನ್ ಅನ್ನೋ ಯುವಕನನ್ನು ದುಷ್ಕರ್ಮಿಗಳು ಡ್ರ್ಯಾಗರ್‍ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶಾಹಿದ್, ಚೆನ್ನೈ ಶಾಹಿದ್ ಹಾಗೂ ಇನ್ನೊಬ್ಬ ಅಪರಿಚಿತ ಸೇರಿ ಮೂವರಿಂದ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಇಂದು ರಿಜ್ವಾನ್ ಅಣ್ಣ ಇರ್ಫಾನ್ ಮದುವೆ ನಿಗದಿಯಾಗಿತ್ತು. ಹೀಗಾಗಿ ನಿನ್ನೆ ರಾತ್ರಿ ಮೆಹೆಂದಿ ಕಾರ್ಯಕ್ರಮವಿತ್ತು. ಅಂತೆಯೇ ಮನೆ ಮಂದಿಯೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಂದ ಚೋಟ ಶಾಹಿದ್ ಅತನ ಸಹಚರರು ಮಾತುಕತೆಯ ನೆಪದಲ್ಲಿ ಮಸೀದಿ ಬಳಿ ಕರೆದುಕೊಂಡು ಹೋಗಿ ಡ್ರ್ಯಾಗರ್‍ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ತಕ್ಷಣವೇ ರಿಜ್ವಾನನ್ನು ನಗರದ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣಕ್ಕೆ ಬೋರಿಂಗ್ ಆಸ್ಪತ್ರೆಗೆ ಸಾಗಿಸಲು ವೈದ್ಯರು ಸೂಚಿಸಿದ್ದರು. ಅಂತೆಯೇ ಬೌರಿಂಗ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

    ಸದ್ಯ ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿರುವ ಡಿಜೆ ಹಳ್ಳಿ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಜಮೀನಿಗಾಗಿ ದೊಡ್ಡಪ್ಪನ ಮಗನ ತಲೆಗೆ 7 ಬಾರಿ ಮಚ್ಚಿನಿಂದ ಹೊಡೆದು ಮಾರಣಾಂತಿಕ ಹಲ್ಲೆ!

    ಜಮೀನಿಗಾಗಿ ದೊಡ್ಡಪ್ಪನ ಮಗನ ತಲೆಗೆ 7 ಬಾರಿ ಮಚ್ಚಿನಿಂದ ಹೊಡೆದು ಮಾರಣಾಂತಿಕ ಹಲ್ಲೆ!

    ಬೆಂಗಳೂರು: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ದೊಡ್ಡಪ್ಪನ ಮಗನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಈಜೀಪುರದಲ್ಲಿ ನಡೆದಿದೆ.

    ಆಟೋ ಚಾಲಕನಾಗಿರೋ ಮುನಿರಾಜು ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆ ನಡೆಸಿರುವ ರಾಮಮೂರ್ತಿ ಮತ್ತು ಹಲ್ಲೆಗೊಳಗಾಗಿರೊ ಮುನಿರಾಜು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು. ಇಬ್ಬರ ನಡುವೆ ಜಮೀನು ಒಂದರ ವಿಚಾರವಾಗಿ ವಿವಾದವಿದ್ದು, ಅದು ಕೋರ್ಟ್‍ನಲ್ಲಿ ವಿಚಾರಣಾ ಹಂತದಲ್ಲಿದೆ.

    ಈ ಮಧ್ಯೆ ಮುನಿರಾಜು ಇತ್ತೀಚಿಗೆ ಜಮೀನನ್ನು ಮಾರಾಟ ಮಾಡಿದ್ದಾನೆ. ಇದನ್ನು ಪ್ರಶ್ನಿಸಿ ರಾಮಮೂರ್ತಿ ಮಂಗಳವಾರ ಸಂಜೆ ಮುನಿರಾಜು ಮನೆಗೆ ಬಂದಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಅದು ತಾರಕಕ್ಕೇರಿದೆ. ಆಗ ಕೋಪಗೊಂಡ ರಾಮಮೂರ್ತಿ ಮಚ್ಚಿನಿಂದ ಮುನಿರಾಜು ತಲೆಗೆ ಏಳು ಬಾರಿ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ, ಎಸ್ಕೇಪ್ ಆಗಿದ್ದಾನೆ.

    ಘಟನೆಯಿಂದ ಗಂಭೀರ ಗಾಯಗೊಂಡು ಮುನಿರಾಜುನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಬಳಿ ವಿವೇಕನಗರ ಪೊಲೀಸರು ಆರೋಪಿ ರಾಮಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಆಸ್ತಿಗಾಗಿ ಚಿಕ್ಕಪ್ಪನ ಮಗಳನ್ನೇ ದೊಡ್ಡಪ್ಪನ ಮಕ್ಕಳು ಕೊಲೆಗೈದ್ರು!

    ಆಸ್ತಿಗಾಗಿ ಚಿಕ್ಕಪ್ಪನ ಮಗಳನ್ನೇ ದೊಡ್ಡಪ್ಪನ ಮಕ್ಕಳು ಕೊಲೆಗೈದ್ರು!

    ಧಾರವಾಡ: ಹುಟ್ಟುತ್ತ ಅಣ್ಣ-ತಮ್ಮಂದಿರು, ಬೆಳೆಯುತ್ತ ದಾಯಾದಿಗಳು ಎನ್ನುತ್ತಾರೆ. ಅದು ನಿಜಾನೇ ಇರಬೇಕು. ಏಕೆಂದರೆ ಆಸ್ತಿಗಾಗಿ ದೊಡ್ಡಪ್ಪನ ಮಕ್ಕಳೇ, ತನ್ನ ಚಿಕ್ಕಪ್ಪನ ಮಗಳ ಕೊಲೆ ಮಾಡಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.

    ಕಳೆದ ಆಗಸ್ಟ್ ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮೃತ ಸಕ್ಕುಬಾಯಿ ಸಂಬಂಧಿಕರಾದ ಜಗದೀಶ್ ಜಗತಾಪ, ಶ್ರೀಕಾಂ ಜಗತಾಪ, ರುಕ್ಮವ್ವ ಜಗತಾಪ, ಸೀತವ್ವ ಜಗತಾಪ ಹಾಗೂ ತುಕಾರಾಂ ಕಣಕಿಕೊಪ್ಪ ಎಂಬವರನ್ನ ಬಂಧಿಸಿ ಜೈಲಿಗೆ ಕಳಿಸಲಾಗಿದೆ.

    ಏನಿದು ಪ್ರಕರಣ?: ಧಾರವಾಡ ತಾಲೂಕಿನ ಡೊರಿ ಗ್ರಾಮದ ಸಕ್ಕುಬಾಯಿ ಎಂಬ ಮಹಿಳೆಯ ಕುತ್ತಿಗೆಗೆ ಹಗ್ಗದಿಂದ ಜಗ್ಗಿ ಕೊಲೆ ಮಾಡಿ ನಂತರ ಸುಟ್ಟು ಹಾಕಿದ್ದರು. ಬಳಿಕ ಈ ಕೊಲೆಯನ್ನ ಅಸಹಜ ಸಾವು ಎಂದು ಆರೋಪಿಗಳು ತಾವೇ ನಿಂತು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.

    ಸಕ್ಕುಬಾಯಿಗೆ ಕೊಲೆಯಾಗುವ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು ಎಂದು ತಿಳಿದುಬಂದಿತ್ತು. ಆದ್ರೆ ಮೃತಳ ಶವದ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇದು ಕೊಲೆ ಎಂದು ಗೊತ್ತಾಗಿದೆ.

    ಇದರ ಜಾಡನ್ನು ಹಿಡಿದು ಬೆನ್ನಟ್ಟಿದ್ದ ಧಾರವಾಡ ಅಳ್ನಾವರ ಪೊಲೀಸರು, 5 ಜನರನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಆಕೆಗೆ ಗ್ರಾಮದ ಯುವಕನನ್ನ ಏಕೆ ಮದುವೆ ಮಾಡಿ ಕೊಟ್ಟಿರಿ ಎಂದು ದ್ವೇಷದಿಂದ ಹಾಗೂ ಆಕೆಯ ಆಸ್ತಿ ಹೊಡೆಯಲು ಈ ಕೊಲೆ ನಡೆದಿದೆ ಎಂಬ ಸಂಗತಿ ಹೊರ ಬಿದ್ದಿದೆ.

  • ಎರಡೇ ದಿನದ ಅಂತರದಲ್ಲಿ ಸಹೋದರರಿಬ್ಬರ ದಾರುಣ ಸಾವು!

    ಎರಡೇ ದಿನದ ಅಂತರದಲ್ಲಿ ಸಹೋದರರಿಬ್ಬರ ದಾರುಣ ಸಾವು!

    ಚಿತ್ರದುರ್ಗ: ಕೇವಲ ಎರಡು ದಿನದ ಅಂತರದಲ್ಲಿ ಅಣ್ಣ-ತಮ್ಮ ಸಾವನ್ನಪ್ಪಿದ ಘಟನೆ ಚಿತ್ರದುರ್ಗದ ಮಾನಂಗಿ ತಾಲೂಕು ಸಮೀಪದ ಕಳ್ಳಿಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಪರಶುರಾಮಪ್ಪ(55) ಹಾಗೂ ವೆಂಕಟಪ್ಪ(60) ಮೃತ ಸಹೋದರರು. ಎರಡು ದಿನಗಳ ಹಿಂದೆ ಪರಶುರಾಮಪ್ಪ ಸಾವನ್ನಪ್ಪಿದ್ದರು. ಆದರೆ ಗುರುವಾರ ರಾತ್ರಿ ಅಣ್ಣ ವೆಂಕಟಪ್ಪ ಕೂಡ ಸಾವನ್ನಪ್ಪಿದ್ದಾರೆ. ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ದೂರು ನೀಡಿದ್ರೂ ಕ್ರಮ ಕೈಗೊಳ್ಳದ ಪೊಲೀಸರು ಮತ್ತು ಅಬಕಾರಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮದಲ್ಲಿ ಎಗ್ಗಿಲ್ಲದೆ ನಕಲಿ ಮದ್ಯ ಮಾರಾಟ ನಡೆಯುತ್ತಿದೆ. ನಕಲಿ ಮದ್ಯ ಮಾರಾಟ ತಡೆಯುವಂತೆ ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ತಮ್ಮ

    ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ತಮ್ಮ

    ಬೆಂಗಳೂರು: ತಡ ರಾತ್ರಿ ಅಣ್ಣ-ತಮ್ಮನ ಜಗಳದಲ್ಲಿ ತಮ್ಮ ಅಣ್ಣನನ್ನೇ ಕೊಂದಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಆಸ್ಕರ್ ರೆಜಾರಿಯಾ(49) ಕೊಲೆಯಾದ ದುರ್ದೈವಿ. ತಮ್ಮ ರಾಯ್‍ಸನ್ ರೆಜಾರಿಯಾ ಮತ್ತು ಆಸ್ಕರ್ ರೆಜಾರಿಯಾ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಏರಿದಾಗ ರಾಯ್‍ಸನ್ ಆಸ್ಕರ್‍ಗೆ ಚಾಕುವಿನಿಂದ ಇರಿದಿದ್ದಾನೆ.

    ಆಸ್ಕರ್ ತನ್ನ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದ. ಮನೆಗೆ ಬಂದಾಗ ರಾಯ್‍ಸನ್ ಮನೆಯಲ್ಲಿ ಇರಲಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ರಾಯ್‍ಸನ್ ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಚಾಕುವಿನಿಂದ ತನ್ನ ಅಣ್ಣನನ್ನು ಇರಿದಿದ್ದಾನೆ. ಚಾಕು ಇರಿತದಿಂದ ಆಸ್ಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಆಸ್ಕರ್ ಕುಟುಂಬ ಮೂಲತಃ ಆಂಧ್ರಪ್ರದೇಶದವರು. ಕಳೆದ 17 ವರ್ಷದಿಂದ ಬಾಣಸವಾಡಿಯ ಕರಿಯಣ್ಣ ಲೇಔಟ್ ನಲ್ಲಿ ವಾಸವಿದ್ದರು. ರಾಯ್‍ಸನ್ ಪ್ಲಂಬರ್ ಕೆಲಸ ಮಾಡುತ್ತಿದ್ದ. ಸದ್ಯ ಆರೋಪಿ ಆಸ್ಕರ್‍ನನ್ನು ಬಾಣಸವಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ.

  • ಹಳೇ ವೈಷ್ಯಮ್ಯಕ್ಕೆ ಸಹೋದರರನ್ನು ಬರ್ಬರವಾಗಿ ಕೊಲೆಗೈದ ದುಷ್ಕರ್ಮಿಗಳು

    ಹಳೇ ವೈಷ್ಯಮ್ಯಕ್ಕೆ ಸಹೋದರರನ್ನು ಬರ್ಬರವಾಗಿ ಕೊಲೆಗೈದ ದುಷ್ಕರ್ಮಿಗಳು

    ಬೀದರ್: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಾಲ್ವರು ದುಷ್ಕರ್ಮಿಗಳು ಇಬ್ಬರು ಸಹೋದರರನ್ನು ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲಚ್ಚರ್ ಕಾಲೋನಿಯಲ್ಲಿ ನಡೆದಿದೆ.

    32 ವರ್ಷದ ಇಬ್ರಾಹಿಮ್ ಮತ್ತು 26 ವರ್ಷದ ಹುಸೇನ್ ಕೊಲೆಯಾದ ದುರ್ದೈವಿ ಸಹೋದರರು. 43 ವರ್ಷದ ಅಲಾಶ್, 30 ವರ್ಷದ ದಸ್ತಗೀರ್, 24 ವರ್ಷದ ತೌಫಿಕ್ ಮತ್ತು 37 ವರ್ಷದ ಸದ್ದಾಂ ಕೊಲೆ ಮಾಡಿದ ಆರೋಪಿಗಳು. ಈ ನಾಲ್ವರು ಆರೋಪಿಗಳು ಭಾಲ್ಕಿ ನಗರ ಠಾಣೆಯಲ್ಲಿ ಶರಣಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

    2013ರಲ್ಲಿ ಆರೋಪಿಗಳ ಮೇಲೆ ಇಂದು ಕೊಲೆಯಾದ ಸಹೋದರರು ಹಲ್ಲೆ ನಡೆಸಿದ್ರು. ಇದೇ ವೈಷಮ್ಯಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಸ್ಥಳಕ್ಕೆ ಎಸ್.ಪಿ ಪ್ರಕಾಶ್ ನಿಕ್ಕಂ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ಭಾಲ್ಕಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.