Tag: brothers

  • ಅಣ್ಣಂದಿರ ಕೈ ಮೇಲೆ ಪಾದವಿಟ್ಟು ಮದುವೆ ಮಂಟಪಕ್ಕೆ ನಡೆದುಕೊಂಡು ಬಂದ ವಧು!

    ಅಣ್ಣಂದಿರ ಕೈ ಮೇಲೆ ಪಾದವಿಟ್ಟು ಮದುವೆ ಮಂಟಪಕ್ಕೆ ನಡೆದುಕೊಂಡು ಬಂದ ವಧು!

    ನವದೆಹಲಿ: ಮದುವೆ ಮಂಟಪಕ್ಕೆ ಅಣ್ಣಂದಿರ ಕೈ ಮೇಲೆ ಪಾದವಿಟ್ಟು ವಧು ನಡೆದುಕೊಂಡು ಬರುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಹೃದಯಸ್ಪರ್ಶಿ ವೀಡಿಯೋ ನೋಡಿ ನೆಟ್ಟಿಗರು ಸಂತೋಷಗೊಂಡಿದ್ದಾರೆ.

    ಮದುವೆ ಎಂದರೆ ಎಲ್ಲ ವಧು-ವರರಿಗೂ ಸಂಭ್ರಮದ ದಿನ. ಈ ದಿನ ತುಂಬಾ ವಿಶೇಷವಾಗಿರಬೇಕು ಎಂದು ಅವರ ಮನೆಯರು ಕಷ್ಟ ಪಡುತ್ತಿರುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಮದುವೆಯ ದಿನದಂದು ವಧುವನ್ನು ತನ್ನ ಸಹೋದರರು ಅತ್ಯಂತ ಪ್ರೀತಿಯಿಂದ ಭಿನ್ನವಾಗಿ ಸ್ವಾಗತಿಸುತ್ತಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

    ಈ ವೀಡಿಯೊವನ್ನು ಇನ್‍ಸ್ಟಾಗ್ರಾಮ್‍ನ ‘ವಿಟ್ಟಿ_ವೆಡ್ಡಿಂಗ್’ ನಲ್ಲಿ, ಚಿಕ್ಕ ಹುಡುಗಿ ನಮ್ಮ ತಂಗಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ವಧು ತನ್ನ ಅಣ್ಣಂದಿರ ಕೈ ಮೇಲೆ ಪಾದವನ್ನು ಇಟ್ಟುಕೊಂಡು ಮದುವೆ ಮಂಟಪಕ್ಕೆ ನಡೆದುಕೊಂಡು ಬರುವುದು ಸಖತ್ ವೈರಲ್ ಆಗಿದೆ. ವಧು ಕೆಂಪು ಲೆಹೆಂಗಾ ಧರಿಸಿದ್ದು, ವಧು ಅಣ್ಣಂದಿರ ಕೈ ಮೇಲೆ ನಡೆದುಕೊಂಡು ಬರುವಾಗ ‘ಮೇರಾ ಭಾಯ್ ತು’ ಸಾಂಗ್ ಪ್ಲೇ ಆಗುತ್ತದೆ.

    ವಧು ಹೂವಿನಿಂದ ಮಾಡಿದ ದಾರಿಯಲ್ಲಿ ಬರುತ್ತಿದ್ದು, ವಧುವಿನ ಸಹೋದರರು ದಾರಿಯುದ್ದಕ್ಕೂ ಮೊಣಕಾಲುಗಳ ಮೇಲೆ ಕುಳಿತಿರುವುದನ್ನು ಕಾಣಬಹುದು. ಜನರು ವಧುವಿನ ಮೇಲೆ ಹೂವು ಹಾಕುತ್ತಿದ್ದು, ಅವರ ಸಹೋದರರು ತಮ್ಮ ಚಿಕ್ಕ ಸಹೋದರಿ ನಡೆಯುವ ದಾರಿಯಲ್ಲಿ ತಮ್ಮ ಅಂಗೈಯನ್ನು ಇಟ್ಟಿರುತ್ತಾರೆ. ಆಗ ಆಕೆ ಅವರ ಕೈ ಮೇಲೆ ನಡೆದುಕೊಂಡು ಬಂದಿದ್ದು, ನೆಟ್ಟಿಗರು ಈ ದೃಶ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ: ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್

    ನೆಟ್ಟಿಗರು ಇಂತಹ ಒಡಹುಟ್ಟಿದವರನ್ನು ಪಡೆಯಲು ನೀನು ತುಂಬಾ ಅದೃಷ್ಟಶಾಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • 74 ವರ್ಷಗಳ ಬಳಿಕ ಮತ್ತೆ ಒಂದಾದ ಸಹೋದರರು – ಭಾವನಾತ್ಮಕ ವೀಡಿಯೋ ವೈರಲ್

    74 ವರ್ಷಗಳ ಬಳಿಕ ಮತ್ತೆ ಒಂದಾದ ಸಹೋದರರು – ಭಾವನಾತ್ಮಕ ವೀಡಿಯೋ ವೈರಲ್

    ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರ ಆಗಿದ್ದ ಸಹೋದರರು ಮತ್ತೆ 74 ವರ್ಷಗಳ ಬಳಿಕ ಒಂದಾದ ಭಾವನಾತ್ಮಕವಾದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಿಕ್ ಮತ್ತು ಅವರ ಹಿರಿಯ ಸಹೋದರ ಹಬೀಬ್ ಬೇರೆ ಆಗಿದ್ದರು. ಈ ವೇಳೆ ಇನ್ನೂ ಮಗುವಾಗಿದ್ದ ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದಲ್ಲಿಯೇ ಉಳಿದುಕೊಂಡರು. ಆದರೆ ಹಬೀಬ್ ಅವರು ಭಾರತದಲ್ಲಿಯೇ ವಾಸಿಸುತ್ತಾ ಬೆಳೆದರು. ಇದನ್ನೂ ಓದಿ: ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು: ಯೋಗಿ ಆದಿತ್ಯನಾಥ್

    ಎರಡು ದೇಶಗಳ ಮಧ್ಯೆ ಹಂಚಿ ಹೋಗಿದ್ದ ಈ ಇಬ್ಬರು ಸಹೋದರರು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‍ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್‌ ನಲ್ಲಿ ಮತ್ತೆ ಒಂದಾಗಿದ್ದಾರೆ. 74 ವರ್ಷಗಳ ಬಳಿ ಒಬ್ಬರನ್ನೊಬ್ಬರು ನೋಡಿದ ಸಹೋದರರು ಬಿಗಿದಪ್ಪಿಕೊಂಡು ಆನಂದದಿಂದ ಕಣ್ಣೀರು ಸುರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ನಾನು ಖುಷಿಯಾಗಿದ್ದೇನೆ, ಅವರಿಗೆ ದೇವರು ಒಳ್ಳೆಯದು ಮಾಡಲಿ: ಸೈನಾ ನೆಹ್ವಾಲ್

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಹೃದಯಸ್ಪರ್ಶಿ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಹೆತ್ತವರ ವಿರುದ್ಧ ದೂರು ನೀಡಿ ತಾನೇ ಜೈಲು ಪಾಲಾದ ಮಗ!

    ಹೆತ್ತವರ ವಿರುದ್ಧ ದೂರು ನೀಡಿ ತಾನೇ ಜೈಲು ಪಾಲಾದ ಮಗ!

    ಹೈದರಾಬಾದ್: ನನ್ನ ಹೆತ್ತವರೇ ನನ್ನ ಸಹೋದರನನ್ನು ಕೊಂದಿದ್ದಾರೆ ಎಂದು ಸುಳ್ಳು ದೂರನ್ನು ನೀಡಿರುವ ವ್ಯಕ್ತಿ ತಾನೇ ಜೈಲು ಪಾಲಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಆರೋಪಿಯನ್ನು ಬಂಜಾರಾ ಹಿಲ್ಸ್‌ನ ನಂದಿನಗರ ನಿವಾಸಿ ಬಾನೋತ್ ಲಾಲು ಎಂದು ಗುರುತಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಲಾಲು ಪೋಷಕರ ವಿರುದ್ಧ ಮಾಡಿರುವ ದೂರು ಸುಳ್ಳು ಎಂದು ಗೊತ್ತಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

    ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಲಾಲು ಡಿಸೆಂಬರ್ 17 ರಂದು ರಾತ್ರಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾನೆ. ಆಗ ತನ್ನ ಸಹೋದರನನ್ನು ಹೆತ್ತವರು ಕೊಂದಿದ್ದಾರೆ ಎಂದು ಹೇಳಿ ಪೋಷಕರ ವಿರುದ್ಧ ಆರೋಪ ಮಾಡಿದ್ದಾನೆ. ಮಾಹಿತಿ ಪಡೆದಿರುವ ಪೊಲೀಸರು ತಕ್ಷಣವೇ ಸ್ಥಳಕ್ಕೆ ಹೋಗಿ ತನಿಖೆ ಮಾಡಿದ್ದಾರೆ. ಯಾವುದೇ ಕೊಲೆ ನಡೆದಿಲ್ಲ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಆದರೆ ಲಾಲು ಯಾಕೆ ಇಂಥಹ ಆರೋಪನ್ನು ಮಾಡಿದ್ದಾನೆ ಎಂದು ವಿಚಾರಿಸಿದಾಗ ಸತ್ಯ ಹೊರ ಬಿದ್ದಿದೆ. ಇದನ್ನೂ ಓದಿ: YouTube ನೋಡ್ಕೊಂಡು ಪತ್ನಿಗೆ ಡೆಲಿವರಿ ಮಾಡಿಸಿದ- ಮುಂದೆ ಆಗಿದ್ದೇನು ಗೊತ್ತಾ?

    POLICE JEEP

    ಲಾಲು ಸಹೋದರ ಅನಾರೋಗ್ಯದಿಂದ ಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದನು. ಆದರೆ ಲಾಲು ತಮಾಷೆ ಮತ್ತು ಪೊಲೀಸರು ಅಲರ್ಟ್ ಆಗಿದ್ದಾರ ಎಂದು ಪರೀಕ್ಷೆ ಮಾಡಲು ನಕಲಿ ದೂರು ನೀಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ದೂರನ್ನು ಪರಿಶೀಲಿಸಿದೆ. ಪೊಲೀಸರನ್ನು ತಪ್ಪುದಾರಿಗೆಳೆಯುವ ಮತ್ತು ಗಾಬರಿಯನ್ನುಂಟುಮಾಡುವ ತಪ್ಪು ಮಾಹಿತಿ ನೀಡಿರುವ ಲಾಲುಗೆ ಮೂರು ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

  • ಅಣ್ಣನೊಂದಿಗೆ ಕೆರೆ ಸ್ನಾನಕ್ಕೆ ಹೋಗಿದ್ದ ತಮ್ಮ ವಾಪಸ್ ಬರಲೇ ಇಲ್ಲ!

    ಅಣ್ಣನೊಂದಿಗೆ ಕೆರೆ ಸ್ನಾನಕ್ಕೆ ಹೋಗಿದ್ದ ತಮ್ಮ ವಾಪಸ್ ಬರಲೇ ಇಲ್ಲ!

    ಮಡಿಕೇರಿ: ಸ್ನಾನಕ್ಕೆಂದು ಅಣ್ಣನೊಂದಿಗೆ ಕೆರೆಗೆ ತೆರಳಿದ್ದ ತಮ್ಮ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

    ವಿರಾಜಪೇಟೆ ನಗರದ ಶಾಂತಿ ನಗರದ ನಿವಾಸಿ ಬಿಎಸ್‍ಎಫ್ ನಿವೃತ್ತ ಯೋಧ ದಿವಂಗತ ಮಜೀದ್ ಡಿ.ಎ ಅವರ ಪುತ್ರ ವಿದ್ಯಾರ್ಥಿ ಮೊಹಮ್ಮದ್ ಜೀಯಾನ್ (19) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ. ಜೀಯಾನ್ ತನ್ನ ಅಣ್ಣನೊಂದಿಗೆ ಬುಧವಾರ ಬೆಳಗ್ಗೆ ತೋಟಕ್ಕೆ ಹೋಗಿದ್ದ. ತೋಟದ ಅಂಚಿನಲ್ಲಿರುವ ಕೆರೆಗೆ ಸ್ನಾನ ಮಾಡಲೆಂದು ತೆರಳಿದ್ದಾರೆ. ಈ ವೇಳೆ ನೀರಿನ ಆಳಕ್ಕೆ ಹೋದ ಜೀಯಾನ್ ಮುಳುಗಿದ್ದಾನೆ. ಅಣ್ಣ ನೆರೆಹೊರೆಯವರ ಸಹಾಯದಿಂದ ಪಾರಾಗಿದ್ದು, ಜೀಯಾನ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ

    ಯುವಕ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದೆ.

  • ವಿದ್ಯುತ್ ಸ್ಪರ್ಶಿಸಿ ಸಹೋದರರಿಬ್ಬರ ದಾರುಣ ಸಾವು

    ವಿದ್ಯುತ್ ಸ್ಪರ್ಶಿಸಿ ಸಹೋದರರಿಬ್ಬರ ದಾರುಣ ಸಾವು

    ಚಿಕ್ಕೋಡಿ/ಬೆಳಗಾವಿ: ನೀರು ಹಾಯಿಸಲು ಬಾವಿಯ ಮೋಟರ್ ಸ್ಟಾರ್ಟ್ ಮಾಡಲು ಹೋಗಿ ಸಹೋದರಿಬ್ಬರು ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ ಗ್ರಾಮದ ಬಡಿಗೇರ ತೋಟದಲ್ಲಿ ನಡೆದಿದೆ.

    ಬಾವಿಗೆ ಅಳವಡಿಸಲಾಗಿದ್ದ ನೀರೆತ್ತುವ ಮೋಟರ್ ನ್ನು ಬೆಳಗ್ಗೆ ಸ್ಟಾರ್ಟ್ ಮಾಡಲು ಹೋಗಿ ರಾಜು ಬಾಳಪ್ಪ ಬಡಿಗೇರ ಹಾಗೂ ಸಹೋದರ ಶಂಕರ್ ರಾಮಪ್ಪ ಬಡಿಗೇರ ಸಾವೀಗಿಡಾಗಿದ್ದಾರೆ. ಮದುವೆ ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಎಎಸ್‍ಐ ಗರಂ

    ಮಳೆ, ಗಾಳಿಗೆ ವಿದ್ಯುತ್ ತಂತಿಗಳು ಕೆಳಗೆ ನೇತಾಡುತ್ತಿದ್ದು, ಆಕಸ್ಮಿಕವಾಗಿ ವಿದ್ಯುತ್ ಮೋಟರ್ ಗೆ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಹಾಗೂ ಮೃತ ಸಹೋದರರ ಸಂಬಂಧಿಕರು ತಿಳಿಸಿದ್ದಾರೆ. ರಾಮ-ಲಕ್ಷ್ಮಣರಂತೆ ಒಂದಾಗೇ ಇರುತ್ತಿದ್ದ ಅಣ್ಣ, ತಮ್ಮನ ಏಕಾಏಕಿ ಅಕಾಲಿಕ ನಿಧನದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಕುರಿತು ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾಕ್‍ಡೌನ್‍ನಿಂದ ಸರಗಳ್ಳತನಕ್ಕಿಳಿದ ಸಹೋದರರು- ಸರ ಕಿತ್ತು ಜೈಲು ಸೇರಿದ್ರು

    ಲಾಕ್‍ಡೌನ್‍ನಿಂದ ಸರಗಳ್ಳತನಕ್ಕಿಳಿದ ಸಹೋದರರು- ಸರ ಕಿತ್ತು ಜೈಲು ಸೇರಿದ್ರು

    ಬೆಂಗಳೂರು: ಕೊರೊನಾ, ಲಾಕ್‍ಡೌನ್‍ನಿಂದ ಬಹುತೇಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಕೆಲಸವಿಲ್ಲದ ಕೆಲ ನಿರುದ್ಯೋಗಿಗಳು ಜೀವನಕ್ಕಾಗಿ ಅಡ್ಡದಾರಿ ಹಿಡಿದುಬಿಟ್ಟಿದ್ದಾರೆ. ಅದೇ ರೀತಿ ಈ ಸಹೋದರರು ಸರಗಳ್ಳತನಕ್ಕೆ ಇಳಿದು ಜೈಲು ಪಾಲಾಗಿದ್ದಾರೆ.

    ಜುಲೈ 6ರಂದು ವಿದ್ಯಾರಣ್ಯಪುರದ ಎಂಪಿಎ ಲೇಔಟಿನಲ್ಲಿ ಆರೋಪಿಗಳು ಸರಗಳ್ಳತನ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಮಾಕ್ಷಿಪಾಳ್ಯ ನಿವಾಸಿಗಳಾದ ಸುದೀಪ್ ಹಾಗೂ ರಜತ್ ಬಂಧಿತ ಆರೋಪಿಗಳು.

    62 ವರ್ಷದ ವೃದ್ಧೆಯ ಸರಗಳ್ಳತನ ಮಾಡಿ, ಪರಾರಿಯಾಗಿದ್ದರು. ಆರೋಪಿಗಳ ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ಬಂಧನದಿಂದ 2 ಸರ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.

    ಈ ಇಬ್ಬರು ಕಳ್ಳರು ಸಹ ಸಹೋದರರು. ಲಾಕ್‍ಡೌನ್ ನಲ್ಲಿ ಕೆಲಸವಿಲ್ಲದೆ ಸರಗಳ್ಳತನಕ್ಕಿಳಿದಿದ್ದರು. ಪದವಿ ವ್ಯಾಸಂಗ ಮುಗಿಸಿದ್ದ ಸುದೀಪ್ ಹಾಗೂ ರಜತ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಲಾಕ್‍ಡೌನ್ ನಲ್ಲಿ ಕೆಲಸವಿಲ್ಲದೆ ಪರಿತಪಿಸಿದ್ದರು. ಕೆಲಸ ಸಿಗದ್ದರಿಂದ ಹಣಕ್ಕಾಗಿ ಸರಗಳ್ಳತನ ಮಾಡಲು ಮುಂದಾಗಿ ಜುಲೈ 6ರಂದು ವೃದ್ಧೆಯ ಸರಗಳ್ಳತನ ಮಾಡಿ ಇದೀಗ ಜೈಲು ಸೇರಿದ್ದಾರೆ.

  • ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಸಹೋದರಿಯ ಮೇಲೆಯೇ ಹಲ್ಲೆಗೈದ ಅಣ್ಣ-ತಮ್ಮ..!

    ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಸಹೋದರಿಯ ಮೇಲೆಯೇ ಹಲ್ಲೆಗೈದ ಅಣ್ಣ-ತಮ್ಮ..!

    ಇಸ್ಲಾಮಾಬಾದ್: ತಂದೆಯ ಆಸ್ತಿಯಲ್ಲಿ ಪಾಲು ಕೇಳಿದಳೆಂದು ಸಹೋದರಿಯ ಮೇಲೆ ಆಕೆಯ ಸಹೋದರರೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಹಲ್ಲೆಗೈದವರನ್ನು ಅಫ್ತಾಬ್ ಹಾಗೂ ಹರ್ಷದ್ ಹನ್ನನ್ ಎಂದು ಗುರುತಿಸಲಾಗಿದೆ. ಇವರಿಬ್ಬರು ತಮ್ಮ ಸಹೊದರಿಯ ಮೇಲೆ ಸುತ್ತಿಗೆ ಹಾಗೂ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ.

    ಸಹೋದರಿಯ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಪೇಶಾವರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಳಿಕ ತನಿಖೆ ನಡೆಸಿದಾಗ ಆರೋಪಿಗಳು ಪೊಲೀಸರ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಇತ್ತ ಸಹೋದರರಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿರುವ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಹಿಳೆಯ ವೈದ್ಯಕೀಯ ವರದಿ ಬಂದ ಬಳಿಕ ಇಬ್ಬರು ಸಹೋದರರ ಮೇಲೆ ಭಾನ ಮಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವೀಡಿಯೋದಲ್ಲೇನಿದೆ..?
    ಮಹಿಳೆಯನ್ನು ನೆಲಕ್ಕುರುಳಿಸಿ ಇಬ್ಬರು ಸಹೋದರರು ಸುತ್ತಿಗೆ ಹಾಗೂ ಹೆಲ್ಮೆಟ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಇಬ್ಬರಲ್ಲಿ ಓರ್ವ ಹೆಲ್ಮೆಟ್ ಅನ್ನು ಮಹಿಳೆಯ ಮೇಲೆ ಎಸೆಯುತ್ತಾನೆ. ಈ ವೇಳೆ ಮಹಿಳೆ ನೋವಿನಿಂದ ಜೋರಾಗಿ ಕಿರುಚುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಬೈಕ್ ಅಡ್ಡ ಬಂದಿದ್ದಕ್ಕೆ ಕಾರ್ ಡಿಕ್ಕಿ ಆಯ್ತು: ಚಿದಾನಂದ್ ಸವದಿ

    ಸಹೋದರರು ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆಯೊಬ್ಬರು ಜಗಳ ಬಿಡಿಸಲೆಮದು ಬರುತ್ತಾರೆ. ಈ ವೇಳೆ ಆರೋಪಿಗಳು ಆ ಮಹಿಲೆಯ ಕತ್ತು ಹಿಡಿದು ತಳ್ಳುವುದು ವೀಡಿಯೋದಲ್ಲಿ ಸೆರೆಯಾಗಿದೆ.

    ತಂದೆಯ ಆಸ್ತಿಯಲ್ಲಿ ತನಗೂ ಪಾಲಿದೆ. ಆ ಪಾಲನ್ನು ನೀಡುವಂತೆ ಕೇಳಿದ್ದಕ್ಕಾಗಿ ಈ ಹಲ್ಲೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

  • ಕೃಷ್ಣಾ ನದಿ ಪಾಲಾಗಿದ್ದ ನಾಲ್ವರು ಸಹೋದರರ ಶವ ಪತ್ತೆ

    ಕೃಷ್ಣಾ ನದಿ ಪಾಲಾಗಿದ್ದ ನಾಲ್ವರು ಸಹೋದರರ ಶವ ಪತ್ತೆ

    ಚಿಕ್ಕೋಡಿ: ಹಾಸಿಗೆ ತೊಳೆಯಲು ಹೋಗಿ ಕೃಷ್ಣಾ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಸಹೋದರರ ಶವಗಳನ್ನು ಎನ್‍ಡಿಆರ್‍ಎಫ್ ತಂಡ ಹಾಗೂ ಸ್ಥಳೀಯರು ಪತ್ತೆ ಹಚ್ಚಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿ ನಾಲ್ಕು ಜನ ಸಹೋದರರು ನೀರು ಪಾಲಾಗಿದ್ದರು. ಇದೀಗ ನಾಲ್ವರ ಮೃತದೇಹವು ಪತ್ತೆಯಾಗಿದೆ. ನಿನ್ನೆ ಒಬ್ಬ ಹಾಗೂ ಇಂದು ಮೂವರ ಶವಗಳನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಸ್ಥಳೀಯರು ನೀರಿನಲ್ಲಿ ಕಾರ್ಯಚರಣೆ ನಡೆಸಿ ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿ ಪಾಲು

    ನಿನ್ನೆ ಪರಶುರಾಮ ಬನಸೊಡೆ ಎಂಬವರ ಶವ ಪತ್ತೆಯಾಗಿತ್ತು. ಬಳಿಕ ಇಂದು ಸಹೋದರರಾದ ಶಂಕರ್, ಸದಾಶಿವ, ಹಾಗೂ ಧರೆಪ್ಪರವರ ಶವ ಹೊರಕ್ಕೆ ತೆಗೆಯಲಾಗಿದೆ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಸಹೋದರರಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಮೂರು ದಿನಗಳ ಹಿಂದೆ ಹಾಸಿಗೆ ತೊಳೆಯಲು ಕೃಷ್ಣಾ ನದಿಗೆ ಹೋಗಿದ್ದಾಗ ಅಚಾನಕ್ಕಾಗಿ ಒಬ್ಬರನ್ನು ಕಾಪಾಡಲು ಹೋಗಿ ಮತ್ತೊಬ್ಬರಂತೆ ನಾಲ್ವರು ಸಹೋದರರು ನದಿ ನೀರು ಪಾಲಾಗಿದ್ದರು. ಇವರ ಶವ ಹೊರತೆಗೆಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್ ರೈಡರ್ಸ್ ಸಹೋದರರು ಇದೀಗ ಅಂಬುಲೆನ್ಸ್ ಡ್ರೈವರ್ಸ್

    ಬೈಕ್ ರೈಡರ್ಸ್ ಸಹೋದರರು ಇದೀಗ ಅಂಬುಲೆನ್ಸ್ ಡ್ರೈವರ್ಸ್

    ಬೆಂಗಳೂರು: ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಜನ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರ ಕಷ್ಟವನ್ನು ನೋಡಲಾಗದೆ ನಗರದ ಇಬ್ಬರು ಹವ್ಯಾಸಿ ಬೈಕ್ ರೈಡರ್ಸ್ ಸಹೋದರರು ಅಂಬುಲೆನ್ಸ್ ಡ್ರೈವರ್‍ ಗಳಾಗಿ ಜನರ ಸಹಾಯಕ್ಕೆ ಮುಂದಾಗಿದ್ದಾರೆ.

    ಬೆಂಗಳೂರಿನ ಸಹೋದರರಾದ ಮುರ್ತಾಜಾ ಜುನೈದ್ ಮತ್ತು ಮುತೀಬ್ ಜೊಹೆಬ್ ಹವ್ಯಾಸಿ ಬೈಕ್ ರೈಡರ್ಸ್ ಆಗಿ ಹಲವು ಊರುಗಳನ್ನು ಸುತ್ತಿದ್ದಾರೆ. ಆದರೆ ಇದೀಗ ಕೊರೊನಾ ಎರಡನೇ ಅಲೆಯಿಂದ ಜನ ಅನುಭವಿಸುತ್ತಿರುವ ಕಷ್ಟವನ್ನು ನೋಡಿ ಜನರ ಸೇವೆ ಮಾಡಲು ಅಂಬುಲೆನ್ಸ್ ಒಂದರಲ್ಲಿ ಡ್ರೈವರ್‍ಗಳಾಗಿ ಕೊರೊನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ.

    ಈ ಕುರಿತು ಸ್ಥಳೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಮುರ್ತಾಜಾ ಜುನೈದ್, ಕೊರೊನಾ ಎರಡನೇ ಅಲೆಯಿಂದಾಗಿ ಜನ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ನಾನು ನೋಡಿದಂತೆ ಜನ ಆಕ್ಸಿಜನ್, ಬೆಡ್ ಮತ್ತು ಅಂಬುಲೆನ್ಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಲವು ಜನ ಆಟೋ, ಬೈಕ್‍ಗಳಲ್ಲಿ ಆಸ್ಪತ್ರೆಗೆ ಹೋಗುವುದನ್ನು ನೋಡೊದ್ದೇನೆ. ಹಾಗಾಗಿ ಅಂತವರ ನೆರವಿಗೆ ಬರಲು ಕಳೆದ ಮೂರು ವಾರಗಳಿಂದ ಅಂಬುಲೆನ್ಸ್ ಒಂದರಲ್ಲಿ ಡ್ರೈವರ್‍ ಗಳಾಗಿ ಸೇವೆ ಮಾಡುತ್ತಿದ್ದೇವೆ ಎಂದಿದ್ದಾರೆ.

    ಜನರ ಕಷ್ಟ ಕಾಲದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯು ಇತರರಿಗೆ ನೆರವಾಗಬೇಕು. ಇದೀಗ ನಾವು ಅಂಬುಲೆನ್ಸ್ ಡ್ರೈವರ್ಸ್ ಆಗುವ ಮೂಲಕ ಜನರ ನೆರವಿಗೆ ಮುಂದಾಗಿರುವುದು ಖುಷಿ ಕೊಡುತ್ತಿದೆ ಎಂದು ತಿಳಿಸಿದ್ದಾರೆ.

    ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 2,67,334 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,54,96,330ಕ್ಕೆ ಏರಿಕೆ ಕಂಡಿದೆ.

  • ಕೊರೊನಾದಿಂದ ಗುಣಮುಖವಾಗಿ ಪ್ರಾಣಬಿಟ್ಟ ಅವಳಿ ಸಹೋದರರು

    ಕೊರೊನಾದಿಂದ ಗುಣಮುಖವಾಗಿ ಪ್ರಾಣಬಿಟ್ಟ ಅವಳಿ ಸಹೋದರರು

    ಲಕ್ನೋ: ಕೊರೊನಾ ಸೋಂಕಿನಿಂದ ವಾಸಿಯಾದ ಅವಳಿ ಸಹೋದದರು ಒಂದೇ ದಿನ ಪ್ರಾಣ ಬಿಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಜೋಫ್ರೆಡ್ ವರ್ಘಿಸ್ ಗ್ರೆಗೊರಿ ಮತ್ತು ರಾಲ್ಫೆಡ್ ಜಾರ್ಜ್ ಗ್ರೆಗೊರಿ ಮೃತರಾಗಿದ್ದಾರೆ. ಇಬ್ಬರು ಮನೆಯಿಂದಲೇ ಕೆಲಸವನ್ನು ಮಾಡುತ್ತಿದ್ದರು. ಆದರೂ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಇಬ್ಬರು ಸಹೋದರರನ್ನು ಮೇ 1ರಂದು ಆನಂದ್ ಆಸ್ಪತ್ರೆಗೆ ದಾಖಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮೆ 10 ರಂದು ನೆಗಿಟಿವ್ ವರದಿ ಬಂದಿತ್ತು. ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದರು.

    ಮೇ 13 ರಂದು ಇಬ್ಬರಲ್ಲಿಯೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅದೇ ದಿನ ರಾತ್ರಿ 11 ಗಂಟೆ ಸುಮಾರಿಗೆ ಒಬ್ಬನು ಪ್ರಾಣ ಬಿಟ್ಟನು. ಮರುದಿನ ಇನ್ನೋಬ್ಬ ಮಗ ಕೊನೆಯುಸಿರೆಳೆದಿದ್ದಾನೆ. ಕೊರೊನಾ ದಿಂದ ಗುಣಮುಖರಾಗಿದ್ದರು ಸೋಂಕು ಶ್ವಾಸಕೋಶಕ್ಕೆ ಹರಡಿತ್ತು. ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದೇವೆ. ನಮ್ಮ ಕುಟುಂಬವೇ ನಾಶವಾಯಿತ್ತು. ಸದ್ಯ ನಮ್ಮ ಕುಟುಂಬದಲ್ಲಿ ಉಳಿದಿರುವುದು ಮೂವರೇ. ನನ್ನ ಮಕ್ಕಳು ಕೊರೊನಾಗೆ ಬಲಿಯಾದರು ಎಂದು ಹೇಳುತ್ತಾ ಹೆತ್ತವರು ಕಣ್ಣೀರು ಹಾಕಿದ್ದಾರೆ.