Tag: brothers

  • ಕಸ್ಟಡಿಯಲ್ಲಿ ಸಹೋದರರಿಬ್ಬರಿಗೆ ಚಿತ್ರಹಿಂಸೆ – ನಾಲ್ವರು ಪೊಲೀಸರು ಟ್ರಾನ್ಸ್‌ಫರ್

    ಕಸ್ಟಡಿಯಲ್ಲಿ ಸಹೋದರರಿಬ್ಬರಿಗೆ ಚಿತ್ರಹಿಂಸೆ – ನಾಲ್ವರು ಪೊಲೀಸರು ಟ್ರಾನ್ಸ್‌ಫರ್

    ತಿರುವನಂತರಂ: ಕಸ್ಟಡಿಯಲ್ಲಿ ಸಹೋದರರಿಬ್ಬರಿಗೆ ಚಿತ್ರಹಿಂಸೆ ನೀಡಿದ ಹಿನ್ನೆಲೆ ಕೇರಳದ (Kerala) ಕಿಲ್ಲಿಕೋಳೂರು ಪೊಲೀಸ್ ಠಾಣೆಯ (Killikolur police station) ನಾಲ್ವರು ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಇದೀಗ ಗಂಭೀರವಾಗಿ ಗಾಯಗೊಂಡ ಇಬ್ಬರು ಸಹೋದರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆಗಸ್ಟ್ 25ರಂದು ಈ ಘಟನೆ ನಡೆದಿದ್ದು, ಮಾದಕ ದ್ರವ್ಯ ದಂಧೆ ಪ್ರಕರಣದಡಿ ಬಂಧಿತನಾಗಿದ್ದ ಆರೋಪಿಗೆ ಜಾಮೀನು ನೀಡಲು ವಿಘ್ನೇಶ್ ಠಾಣೆಗೆ ಬಂದಿದ್ದನು. ಆದರೆ ಇದು ಮಾದಕ ದ್ರವ್ಯ ದಂಧೆ ಪ್ರಕರಣವಾಗಿರುವುದರಿಂದ ಆರೋಪಿಗೆ ಜಾಮೀನು ನೀಡಲು ಪೊಲೀಸರು ನಿರಾಕರಿಸಿದರು. ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಬೋರ್ಡ್‍ಗಳ ಕದನ – ಭಾರತ ಯಾರ ಮಾತನ್ನು ಕೇಳಲ್ಲ: ಅನುರಾಗ್ ಠಾಕೂರ್

    ಈ ವೇಳೆ ತನ್ನ ಕಿರಿಯ ಸಹೋದರ ವಿಘ್ನೇಶ್ ಅನ್ನು ಹುಡುಕಿಕೊಂಡು ವಿಷ್ಣು ಠಾಣೆಗೆ ಬಂದಿದ್ದಾರೆ. ನಂತರ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ಚೌಹಾಣ್ ಅವರು ಸಂಚಾರ ಉಲ್ಲಂಘನೆಯನ್ನು ಉಲ್ಲೇಖಿಸಿ ವಿಷ್ಣು ಅವರೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಚೌಹಾಣ್ ಇಬ್ಬರು ಸಹೋದರರನ್ನು ಎಳೆದೊಯ್ದು ಹಲವಾರು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಘಟನೆಯಿಂದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಮತ್ತೊಂದೆಡೆ ಪೊಲೀಸರು, ಮಾದಕ ದ್ರವ್ಯ ದಂಧೆಯ ಆರೋಪಿಗೆ ಜಾಮೀನು ನೀಡಲು ಆಗಮಿಸಿದ ಸಹೋದರರು ಠಾಣೆಯೊಳಗೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೈವಾರಾಧನೆ ಹಿಂದುತ್ವದ ಭಾಗವಲ್ಲವೆಂದ ಚೇತನ್ ವಿರುದ್ಧ ದೂರು ದಾಖಲು

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಸಿ ಎರಡನೇ ಮದುವೆಯಾದ ಜೋಡಿ – ಬಾವನ ಕಾಲಿಗೆ ಬಿದ್ದು ಕೊಲೆ ಮಾಡಿದ ಬಾಮೈದರು

    ಪ್ರೀತಿಸಿ ಎರಡನೇ ಮದುವೆಯಾದ ಜೋಡಿ – ಬಾವನ ಕಾಲಿಗೆ ಬಿದ್ದು ಕೊಲೆ ಮಾಡಿದ ಬಾಮೈದರು

    ಕಲಬುರಗಿ: ದಸರಾ (Dasara) ಹಬ್ಬದ ಪ್ರಯುಕ್ತ ಬನ್ನಿ ಬಂಗಾರ ಕೊಡಲು ಸಹೋದರಿಯ ಮನೆಗೆ ತೆರಳಿದ ಸಹೋದರರಿಬ್ಬರು ಬಾವನ (Sister Husband) ಕಾಲಿಗೆ ಬಿದ್ದು ಆ ಬಳಿಕ ಆತನನ್ನು ಕೊಚ್ಚಿ ಕೊಲೆ (Murder)  ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಕಲಬುರಗಿಯ (Kalaburagi) ಸಂತೋಷ್ ಕಾಲೋನಿಯ ನಿವಾಸಿ ಲಕ್ಷ್ಮೀಪುತ್ರ ಕೊಲೆಯಾದ ದುರ್ದೈವಿ. ಲಕ್ಷ್ಮೀಪುತ್ರ ಮತ್ತು ಪ್ರೀತಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿತ್ತು. ಆ ಬಳಿಕ ನೆಮ್ಮದಿಯಾಗಿಯೇ ಇದ್ದರು. ಲಕ್ಷ್ಮೀಪುತ್ರ ಇಬ್ಬರು ಪತ್ನಿಯರನ್ನು ಹೊಂದಿದ್ದ. ಮೊದಲನೆಯೇ ಪತ್ನಿ ಶಶಿಕಲಾಳನ್ನು ಬಿಟ್ಟು ಎರಡನೇ ಪತ್ನಿ ಪ್ರೀತಿ ಜೊತೆ ವಾಸವಿದ್ದ. ಲಕ್ಷ್ಮೀಪುತ್ರ ಜೀವನೋಪಾಯಕ್ಕಾಗಿ ಸಂತೋಷ್ ಕಾಲೋನಿಯಲ್ಲಿ ಟೆಂಟ್‍ಹೌಸ್ ನಡೆಸಿಕೊಂಡು ಹೋಗುತ್ತಿದ್ದ. ಇದೇ ವೇಳೆ ಎರಡನೇ ಪತ್ನಿ ಸಹೋದರರಾದ ಶಿವಕಾಂತ್ ಮತ್ತು ಪ್ರಶಾಂತ್‍ನಿಗೆ ಎಂಟು ಲಕ್ಷ ರೂಪಾಯಿ ಹಣವನ್ನು ಸಾಲ ನೀಡಿದ್ದ. ಇದನ್ನೂ ಓದಿ: PFI Ban – ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧಿಕರಣ ರಚಿಸಿದ ಕೇಂದ್ರ

    ಕೆಲದಿನಗಳ ನಂತರ ಸಾಲ ವಾಪಸ್ ಕೇಳಿದ್ದ ಈ ವೇಳೆ ಬಾಮೈದರು ಕೊಡುತ್ತೇವೆ ಎಂದಿದ್ದರು. ಅಂತೆಯೇ ಅಕ್ಟೋಬರ್ 2 ರಂದು ಹಣ ಕೊಡುತ್ತೇವೆ ಎಂದು ಶಿವಕಾಂತ್ ಮತ್ತು ಪ್ರಶಾಂತ್ ಒಪ್ಪಿಕೊಂಡಿದ್ದಾರೆ. ಆದರೆ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ, ನಿನ್ನೆ ದಸರಾ ಹಬ್ಬದ ನಿಮಿತ್ತ ಬಾವನಿಗೆ ಬನ್ನಿ ಕೊಡಲು ಅಂತಾ ಇಬ್ಬರು ಮನೆಗೆ ಬಂದಿದ್ದಾರೆ. ಬನ್ನಿ ಕೊಟ್ಟು ಕಾಲಿಗೆ ಬೀಳುವ ನೆಪದಲ್ಲಿ ತಮ್ಮೊಂದಿಗಿದ್ದ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಸ್ವಂತ ಟೆಂಟ್‍ಹೌಸ್ ನಡೆಸಿಕೊಂಡು ಲಕ್ಷ್ಮೀಪುತ್ರ ಜೀವನ ಸಾಗಿಸುತ್ತಿದ್ದ. ಮೊದಲ ಪತ್ನಿ ಶಶಿಕಲಾಳಿಗೆ ಮೂವರು ಮಕ್ಕಳಿದ್ದು, ಕೆಲವರ್ಷಗಳ ಹಿಂದೆ ಶಶಿಕಲಾಳನ್ನು ಬಿಟ್ಟು ಪ್ರೀತಿ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಇದರ ಮಧ್ಯೆ ಕಳೆದ ಎರಡು ದಿನಗಳ ಹಿಂದೆ ದಸರಾ ಹಬ್ಬದ ನಿಮಿತ್ತ ಮೊದಲ ಪತ್ನಿ ಶಶಿಕಲಾಳ ಮಕ್ಕಳಿಗೆ ಬಟ್ಟೆ ಕೊಡಿಸಲು ಮನೆಗೆ ಬಂದಿದ್ದ. ಟೆಂಟ್‍ಹೌಸ್ ನಡೆಸಿಕೊಂಡು ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದ್ದ ಲಕ್ಷ್ಮೀಪುತ್ರ ಪ್ರೀತಿಯ ಸಹೋದರರಿಗೆ ಹಣಕಾಸಿನ ಅವಶ್ಯಕತೆ ಇದ್ದ ಕಾರಣ ಎಂಟು ಲಕ್ಷ ರೂಪಾಯಿ ಹಣ ನೀಡಿದ್ದನು. ಆದರೆ ಹಣ ವಾಪಾಸ್ ಕೇಳಿದಾಗ ಬಾಮೈದರು ಕಾಲಹರಣ ಮಾಡಿ ದಿನ ನೂಕುತ್ತಿದ್ದರು. ಇದನ್ನೂ ಓದಿ: ಅಮೆರಿಕದಲ್ಲಿ ರೂಮ್‍ಮೇಟ್‍ನಿಂದ ಭಾರತೀಯ ವಿದ್ಯಾರ್ಥಿ ಮರ್ಡರ್

    ಹಣ ಹೊಂದಿಸಲಾಗದೇ ಒದ್ದಾಡುತ್ತಿದ್ದ ಶಿವಕಾಂತ್ ಮತ್ತು ಪ್ರಶಾಂತ್ ಸೇರಿಕೊಂಡು ಬಾವನಿಗೆ ಚಟ್ಟ ಕಟ್ಟಲು ಮುಹೂರ್ತ ಫಿಕ್ಸ್ ಮಾಡಿದ್ದರು. ಅದರಂತೆ ದಸರಾ ಹಬ್ಬದ ನೆಪದಲ್ಲಿ ಬನ್ನಿ ಕೊಡಲು ಮನೆಗೆ ಹೋಗಿ ಅಂದುಕೊಂಡಂತೆ ಬಾವನನ್ನು ಸಹೋದರಿಯ ಎದುರೇ ಕೊಚ್ಚಿ ಕೊಂದಿದ್ದಾರೆ. ಇದೀಗ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪರೀಕ್ಷೆಗೆ ಚೆನ್ನಾಗಿ ಓದಿಲ್ಲ ಅಂತ ಕಬ್ಬಿಣದ ರಾಡ್‌ನಿಂದ ಥಳಿಸಿದ ಅಣ್ಣ – ಸಹೋದರ ಸಾವು

    ಪರೀಕ್ಷೆಗೆ ಚೆನ್ನಾಗಿ ಓದಿಲ್ಲ ಅಂತ ಕಬ್ಬಿಣದ ರಾಡ್‌ನಿಂದ ಥಳಿಸಿದ ಅಣ್ಣ – ಸಹೋದರ ಸಾವು

    ಭುವನೇಶ್ವರ: ಕಾಲೇಜು ವಿದ್ಯಾರ್ಥಿಯೊಬ್ಬ (College Student) ಪರೀಕ್ಷೆಗೆ ಚೆನ್ನಾಗಿ ಓದಿಲ್ಲ ಅಂತ ಆತನ ಸಹೋದರ (Brother) ಮನಬಂದಂತೆ ಥಳಿಸಿ, ತಮ್ಮನ ಸಾವಿಗೆ ಕಾರಣವಾಗಿರುವ ಘಟನೆ ಒಡಿಶಾದ (Odisha) ಭುವನೇಶ್ವರದಲ್ಲಿ (Bhubaneswar) ನಡೆದಿದೆ. ಕಾಲೇಜು ವಿದ್ಯಾರ್ಥಿ ರಾಜ್‌ಮೋಹನ್ ಸೇನಾಪತಿ(21) ಅಣ್ಣನ ಹೊಡೆತಕ್ಕೆ ಸಾವನ್ನಪ್ಪಿದ ಯುವಕ.

    ರಾಜ್‌ಮೋಹನ್ ಬ್ಯಾಚುಲರ್ ಆಫ್ ಸೈನ್ಸ್(Zoology) ಹಾಗೂ ಬ್ಯಾಚುಲರ್ ಇನ್ ಎಜುಕೇಶನ್ ಕೋರ್ಸ್‌ನಲ್ಲಿ ಒಂದೇ ಸಮಯದಲ್ಲಿ ಪದವಿಯನ್ನು ಪಡೆಯುತ್ತಿದ್ದ. ಆತನ ಅಣ್ಣ ಬಿಸ್ವಮೋಹನ್(24), ತನ್ನ ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ಹರಿಸುತ್ತಿಲ್ಲ, ಕುಟುಂಬ ಕಷ್ಟಪಟ್ಟು ದುಡಿದ ಹಣವನ್ನು ಆತ ವ್ಯರ್ಥ ಮಾಡುತ್ತಿದ್ದಾನೆ ಎಂದುಕೊಂಡು ಮನಬಂದಂತೆ ಥಳಿಸಿದ್ದಾನೆ. ಇದನ್ನೂ ಓದಿ: ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    crime

     

    ಸೋಮವಾರ ಬಿಸ್ವಮೋಹನ್ ತನ್ನ ತಮ್ಮ ಅಧ್ಯಯನದಲ್ಲಿ ಹಿಂದೆ ಉಳಿಯುತ್ತಿರುವುದು ಹಾಗೂ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದ್ದುದನ್ನು ಕಂಡು ಛೀಮಾರಿ ಹಾಕಿದ್ದ. ತನ್ನ ಮಾತನ್ನು ಆತ ಕೇಳುತ್ತಿಲ್ಲ ಎಂದು ಸಿಟ್ಟುಗೊಂಡ ಬಿಸ್ವಾಮೋಹನ್ ಕಬ್ಬಿಣದ ರಾಡ್ ತೆಗೆದುಕೊಂಡು ತಮ್ಮನಿಗೆ ಮನಬಂದಂತೆ ಥಳಿಸಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ರಾಜ್‌ಮೋಹನ್‌ನನ್ನು ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವೃದ್ಧ ತಂದೆಯನ್ನು ಅಮಾನುಷವಾಗಿ ಹಲಗೆಯಿಂದ ಥಳಿಸಿದ ಪಾಪಿ ಮಗ- ಅರೆಸ್ಟ್

    ಘಟನೆಯ ಬಗ್ಗೆ ತಿಳಿದ ಪೊಲೀಸರು ಬಿಸ್ವಾಮೋಹನ್‌ನನ್ನು ಮಂಗಳವಾರ ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 302(Murder) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೃಷ್ಣಾನದಿಯಲ್ಲಿ ಬಾಲಕಿಯನ್ನು ಕಾಪಾಡಲು ಹೋಗಿ ಸಹೋದರರಿಬ್ಬರು ನಾಪತ್ತೆ

    ಕೃಷ್ಣಾನದಿಯಲ್ಲಿ ಬಾಲಕಿಯನ್ನು ಕಾಪಾಡಲು ಹೋಗಿ ಸಹೋದರರಿಬ್ಬರು ನಾಪತ್ತೆ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಬಳಿ ಕೃಷ್ಣಾ ನದಿಯಲ್ಲಿ (Krishna River) ಸ್ನಾನಕ್ಕೆ ತೆರಳಿದ್ದ ಸಹೋದರರಿಬ್ಬರು (Brothers) ನೀರುಪಾಲಾಗಿದ್ದಾರೆ. ಕೊಪ್ಪರ ಗ್ರಾಮದ ರಜಾಕ್ ಮುಲ್ಲಾ ಉಸ್ಮಾನ್(35), ಮೌಲಾಲಿ ಉಸ್ಮಾನ್ (32) ನಾಪತ್ತೆಯಾದ ಸಹೋದರರು.

    ನದಿಯಲ್ಲಿ ಸ್ನಾನ ಮಾಡುವ ವೇಳೆ ಬಾಲಕಿಯನ್ನು ಕಾಪಾಡಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ. ಸ್ನಾನ ಘಟ್ಟದಲ್ಲಿ ಮೆಟ್ಟಿಲುಗಳು ಇರುವ ಬಗ್ಗೆ ಮಾಹಿತಿಯಿಲ್ಲದೇ ಬಾಲಕಿಯನ್ನು ಕಾಪಾಡಲು ಹೋಗಿ ಇಬ್ಬರೂ ನೀರುಪಾಲಾಗಿದ್ದಾರೆ. ಈಜು ಬಾರದ ಹಿನ್ನೆಲೆ ನೀರಿನ ಸೆಳೆತಕ್ಕೆ ಸಹೋದರರು ಕೊಚ್ಚಿಹೋಗಿದ್ದಾರೆ. ಸ್ಥಳೀಯರಿಗೆ ಬಾಲಕಿಯನ್ನು ಮಾತ್ರವೇ ರಕ್ಷಿಸಲು ಸಾಧ್ಯವಾಗಿದೆ.

    ದೇವದುರ್ಗ ತಹಶೀಲ್ದಾರ್ ಶ್ರೀನಿವಾಸ್ ಚಾಪಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆದಿದ್ದು, ಎನ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯಾಚರಣೆ ಮುಂದುವರಿಸಲು ತಾಲೂಕು ಆಡಳಿತ ಚಿಂತನೆ ನಡೆಸಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ನೀರು ಕೇಳುವ ನೆಪದಲ್ಲಿ ಚಾಕು ತೋರಿಸಿ ಕಬ್ಬಿಣದ ವಸ್ತುಗಳ ದರೋಡೆ

    ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಸಹೋದರರು ಗ್ರಾಮದಲ್ಲಿ ನಡೆದ ಜಿಂದಾವಲಿ ಉರುಸ್‌ಗೆ ಬಂದಿದ್ದರು. 2 ದಿನಗಳಿಂದ ನದಿಯಲ್ಲೇ ಸ್ನಾನ ಮಾಡಿ ಉರುಸ್‌ನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಇಂದು ಸ್ನಾನಕ್ಕೆ ತೆರಳಿದ್ದಾಗ ಅವಘಡ ನಡೆದಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲೂ ಇದೆ ಐಸಿಸ್‌ ಗ್ಯಾಂಗ್‌ – ಮೂವರು ಶಂಕಿತ ಉಗ್ರರ ವಿರುದ್ಧ ಎಫ್‌ಐಆರ್

    Live Tv
    [brid partner=56869869 player=32851 video=960834 autoplay=true]

  • ಪರೀಕ್ಷೆ ಬರೆಯಲು ಈಜಿ ಚಂಪಾವತಿ ನದಿ ದಾಟಿದ ಯುವತಿ

    ಪರೀಕ್ಷೆ ಬರೆಯಲು ಈಜಿ ಚಂಪಾವತಿ ನದಿ ದಾಟಿದ ಯುವತಿ

    ಹೈದರಾಬಾದ್: ಪರೀಕ್ಷೆ ಬರೆಯುವ ಸಲುವಾಗಿ ಆಂಧ್ರಪ್ರದೇಶದ ವಿಜಯನಗರಂನಲ್ಲಿ 21 ವರ್ಷದ ಯುವತಿಯೊಬ್ಬಳು ಚಂಪಾವತಿ (Champavathi River) ನದಿಯನ್ನು ಈಜಿಕೊಂಡು ದಾಟಿದ್ದಾಳೆ.

    ಯುವತಿಯನ್ನು ತಡ್ಡಿ ಕಲಾವತಿ(Kalavathi) ಎಂದು ಗುರುತಿಸಲಾಗಿದ್ದು, ಈಕೆ ಗಜಪತಿನಗರ ಮಂಡಲದ (Gajapathinagaram Mandal) ಮರಿವಲಸ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಶನಿವಾರ ನಡೆಯಬೇಕಿದ್ದ ಪರೀಕ್ಷೆಗೆ ಹಾಜರಾಗಲೇ ಬೇಕೆಂದು ಜೀವವನ್ನೇ ಪಣಕ್ಕಿಟ್ಟು ಕಲಾವತಿ ತನ್ನ ಇಬ್ಬರು ಸಹೋದರರ ನೆರವಿನೊಂದಿಗೆ ಶುಕ್ರವಾರ ಪ್ರವಾಹಕ್ಕೆ ಪೀಡಿತ ಚಂಪಾವತಿ ನದಿಯನ್ನು ದಾಟಿದ್ದಾಳೆ.

    35 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಕಲಾವತಿಯ ಸಹೋದರರು ಅವಳನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ನದಿಯ ಇನ್ನೊಂದು ಬದಿಗೆ ಸ್ಥಳಾಂತರಿಸುವುದನ್ನು ಕಾಣಬಹುದು, ಆದರೆ ಆಕೆ ಹರಿಯುವ ನೀರಿನಲ್ಲಿ ಹೋಗಲು ಹೆಣಗಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಸಂಕಷ್ಟದಲ್ಲಿರೋ ಜನರಿಗೆ ಸ್ಪಂದಿಸೋದು ಬಿಟ್ಟು ಡಾನ್ಸ್ ಮಾಡ್ತಿದ್ದಾರೆ : ಸಿದ್ದರಾಮಯ್ಯ ಕಿಡಿ

    ಭಾರೀ ಮಳೆಯಿಂದಾಗಿ, ಉತ್ತರ ಕರಾವಳಿಯ ಹಲವಾರು ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಎಲ್ಲಾ ಸಾರಿಗೆ ವ್ಯವಸ್ಥೆಗಳನ್ನು ಕಡಿತಗೊಳಿಸಲಾಗಿದೆ. ಈ ಹಿನ್ನೆಲೆ ಯುವತಿಯನ್ನು ಆಕೆಯ ಸಹೋದರರು ಪರೀಕ್ಷೆ ಬರೆಯಲು ನದಿ ದಾಟಿಸಿ ಸಹಾಯ ಮಾಡಬೇಕೆಂದು ನಿರ್ಧರಿಸಿದರು. ಇದನ್ನೂ ಓದಿ: ಮೋದಿ ಪ್ರಧಾನಿಯಾಗಿ ಇರುವವರೆಗೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಬಿಡಲ್ಲ, ಇದು ನಮ್ಮ ಶಪಥ – ಬಿಎಸ್‌ವೈ

    Live Tv
    [brid partner=56869869 player=32851 video=960834 autoplay=true]

  • ಮನೆಯ ಟೆರೇಸ್‌ ಮೇಲಿಂದ ಅಣ್ಣನ ಮೇಲೆ ಬಿದ್ದ ತಮ್ಮ – ಮುಂದೇನಾಯ್ತು ನೋಡಿ? ವೀಡಿಯೋ ವೈರಲ್

    ಮನೆಯ ಟೆರೇಸ್‌ ಮೇಲಿಂದ ಅಣ್ಣನ ಮೇಲೆ ಬಿದ್ದ ತಮ್ಮ – ಮುಂದೇನಾಯ್ತು ನೋಡಿ? ವೀಡಿಯೋ ವೈರಲ್

    ತಿರುವನಂತಪುರಂ: ಮನೆಯ ಟೆರೇಸ್‌ ಕ್ಲೀನ್ ಮಾಡುತ್ತಿದ್ದ ತಮ್ಮ ಮೇಲಿಂದ ಕೆಳಗಿದ್ದ ಅಣ್ಣನ ಮೇಲೆ ಬಿದ್ದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅಣ್ಣ, ತಮ್ಮ ಸೇರಿ ಮನೆಯ ಟೆರೇಸ್‌ ಕ್ಲೀನ್ ಮಾಡುತ್ತಿದ್ದ ವೇಳೆ ಟೆರೇಸ್‌ ಮೇಲಿದ್ದ ತಮ್ಮ ಏಕಾಏಕಿ ಕಾಲು ಜಾರಿ ಬಿದ್ದಿದ್ದಾನೆ. ಬೀಳುತ್ತಿದ್ದಂತೆ ಕೆಳಗಿದ್ದ ಅಣ್ಣ ಹಿಡಿಯಲು ಪ್ರಯತ್ನಿಸುತ್ತಾನೆ. ಈ ವೇಳೆ ಇಬ್ಬರು ನೆಲಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ- ಮಗುವಿಗೆ ಜನ್ಮ ನೀಡಿದ 13ರ ಬಾಲಕಿ

    ಬಳಿಕ ತಮ್ಮ ತಕ್ಷಣ ಮೇಲೆದ್ದರೆ ಅಣ್ಣನಿಗೆ ಏಟು ಬಿದ್ದು ಕೆಲಕಾಲ ಮೇಲೇಳಾಗದೆ ಅಲ್ಲೇ ಕೂತಿದ್ದಾನೆ. ಬಳಿಕ ಚೇತರಿಕೆ ಕಂಡಿದ್ದು, ಪ್ರಾಣಾಪಾಯದಿಂದ‌ ಅಣ್ಣ-ತಮ್ಮ ಪಾರಾಗಿದ್ದಾರೆ. ಇದು ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಹರಿದ ಧ್ವಜಗಳನ್ನು ಹಾರಿಸಬೇಕಾ? ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ವಾ?: ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೂವರು ಸಹೋದರಿಯರು ಸಾವು

    ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೂವರು ಸಹೋದರಿಯರು ಸಾವು

    ಭೋಪಾಲ್: ಒಂದೇ ಮರಕ್ಕೆ ಮೂವರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

    ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ಸಹೋದರಿಯರ ಶವ ಪತ್ತೆಯಾಗಿದ್ದು, ಈ ಘಟನೆ ಖಾಂಡ್ವಾದ ಜವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಖೇಡಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಚೆಸ್ ಒಲಿಂಪಿಯಾಡ್‌ನಲ್ಲಿ ಮೋದಿ ಫೋಟೋ ಹಾಕದೇ ಜಾಹೀರಾತು – ಎಲ್ಲ ಬೋರ್ಡ್‍ಗಳಿಗೂ ಫೋಟೋ ಅಂಟಿಸಿದ ಬಿಜೆಪಿ

    crime

    ಮೃತ ಸಹೋದರಿಯರನ್ನು ಸೋನು, ಸಾವಿತ್ರಿ ಮತ್ತು ಲಲಿತಾ ಎಂದು ಗುರುತಿಸಲಾಗಿದ್ದು, ಮೂವರು ಕೂಡ ತಮ್ಮ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದರು. ಇದೀಗ ಮೂವರು ಸಹೋದರಿಯರು ಸಾವನ್ನಪ್ಪಿದ್ದು ತನ್ನ ತಾಯಿ, ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ. ಇದನ್ನೂ ಓದಿ: ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಯುವ ಮೋರ್ಚಾ ಘಟಕ ಸದಸ್ಯರು

    ಈ ಕುರಿತಂತೆ ಮಾಹಿತಿ ದೊರೆತ ಪೊಲೀಸರು ನಂತರ ಘಟನಾ ಸ್ಥಳಿಕ್ಕೆ ಆಗಮಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗದ ಹಿನ್ನೆಲೆ ಸಾವಿನ ಹಿಂದಿನ ಪ್ರಮುಖ ಕಾರಣವೇನು ಎಂಬುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮನ ಕಿರುಕುಳ ತಾಳಲಾರದೇ ಅಣ್ಣ ಆತ್ಮಹತ್ಯೆಗೆ ಶರಣು

    ತಮ್ಮನ ಕಿರುಕುಳ ತಾಳಲಾರದೇ ಅಣ್ಣ ಆತ್ಮಹತ್ಯೆಗೆ ಶರಣು

    ಬೆಳಗಾವಿ: ತಮ್ಮನ ಕಿರುಕುಳ ತಾಳಲಾರದೇ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಅಣ್ಣನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಚಗಾಂವ ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ಉಚಗಾಂವ ಗ್ರಾಮದ ಶ್ರೀಕಾಂತ ಅಪ್ಪಾಜಿ ಜಾಧವ್(56) ಆತ್ಮಹತ್ಯೆ ಮಾಡಿಕೊಂಡವ. ಮೃತ ಶ್ರೀಕಾಂತ್ ಮತ್ತು ಆತನ ತಮ್ಮ ಮಧುಕರ್ ಜಾಧವ್ ನಡುವೆ ಜಮೀನು ವಿವಾದವಿತ್ತು. ಪದೇ ಪದೇ ಮೃತ ಶ್ರೀಕಾಂತ್ ಜಾಧವ್‍ಗೆ ಅವರ ಸಹೋದರ ಮಧುಕರ್ ಜಾಧವ್ ಕಿರುಕುಳ ನೀಡುತ್ತಿದ್ದನಂತೆ ಇದರಿಂದ ಬೇಸತ್ತು ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಶ್ರೀಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಾಕತಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ:  ರಾಜ್ಯದ ಜನತೆಗೆ ಕರೆಂಟ್‌ ಶಾಕ್‌ – ಇಂದಿನಿಂದ ವಿದ್ಯುತ್‌ ದರ ಏರಿಕೆ

    ಪ್ರಕರಣ ಹಿನ್ನೆಲೆ:
    ಮಧುಕರ್ ಜಾಧವ್ ಮೃತ ಶ್ರೀಕಾಂತ್ ಹಾಗೂ ಅವರ ತಂದೆ ಅಪ್ಪಾಜಿಗೆ ತಿಳಿಸದೇ ನಾಲ್ಕು ವರ್ಷದ ಹಿಂದೆ ಸುಧೀರ್ ಗಡ್ಡೆ ಎಂಬ ಬಿಲ್ಡಪ್‍ಗೆ 28 ಲಕ್ಷ ರೂಪಾಯಿಗೆ 1 ಎಕರೆ 6 ಗುಂಟೆ ಜಮೀನು ಮಾರಾಟ ಮಾಡಿದ್ದನಂತೆ. ಇದು ಗೊತ್ತಾದ ಮೇಲೆ ಮಧುಕರ್ ಜಾಧವ್ ಮೇಲೆ ಶ್ರೀಕಾಂತ್ ಕೇಸ್ ಹಾಕಿದ್ದರು. ನಂತರ ರಾಜಿ ಪಂಚಾಯತಿ ಮಾಡಿ ಸಮಾಧಾನ ಪಡಿಸಲು ಮಧುಕರ್ ಮುಂದಾಗಿದ್ದನಂತೆ. ನಂತರ ಸಬ್ ರಿಜಿಸ್ಟರ್ ಕಡೆ ಹೋಗಿ ಸಹಿ ಮಾಡಿಸಿ ಶ್ರೀಕಾಂತ್‍ಗೆ 6 ಲಕ್ಷ ರೂಪಾಯಿ ಕೊಟ್ಟು ಮಧುಕರ್ ಕೈ ತೊಳೆದುಕೊಂಡು ಬಿಟ್ಟಿದ್ದನು. ಇದನ್ನೂ ಓದಿ:  ನಾಯಿಕಚ್ಚಿ ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಾವು

    ನಂತರ ತಮಗಾದ ಮೋಸಕ್ಕೆ ನ್ಯಾಯ ಕೊಡಿಸುವಂತೆ ಗ್ರಾಮದ ಹಿರಿಯರ ಬಳಿ ಶ್ರೀಕಾಂತ್ ಹೋದರೂ ಗ್ರಾಮದ ಹಿರಿಯರ ಮೇಲೆ ಮಧುಕರ್ ಮತ್ತು ಆತನ ಪತ್ನಿ ಗ್ರಾಮ ಪಂಚಾಯತಿ ಸದಸ್ಯೆ ಭಾರತಿ ಒತ್ತಡ ಹಾಕಿದ್ದರಂತೆ. ಇದರಿಂದ ಮನನೊಂದು ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶ್ರೀಕಾಂತ್ ಸುಪುತ್ರ ಸಂತೋಷ್ ಆರೋಪಿಸಿದ್ದಾನೆ. ಈ ಪ್ರಕರಣ ದಾಖಲಿಸಿಕೊಂಡ ಕಾಕತಿ ಪೊಲೀಸರು ತನಿಖೆ ನಡೆಸಿದ್ದಾರೆ.

    Live Tv

  • ಕ್ಷುಲ್ಲಕ ಕಾರಣಕ್ಕೆ ತಮ್ಮನನ್ನೇ ಚಾಕುವಿನಿಂದ ಇರಿದು ಕೊಂದ ಅಣ್ಣ

    ಕ್ಷುಲ್ಲಕ ಕಾರಣಕ್ಕೆ ತಮ್ಮನನ್ನೇ ಚಾಕುವಿನಿಂದ ಇರಿದು ಕೊಂದ ಅಣ್ಣ

    ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಸ್ವಂತ ತಮ್ಮನನ್ನೇ ಚಾಕುವಿನಿಂದ ಇರಿದು ಅಣ್ಣ ಕೊಲೆ ಮಾಡಿರುವ ಘಟನೆ ಗೋಕಾಕ್ ನಗರದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ನಿವಾಸಿ ಮುನಾಫ್ ದೇಸಾಯಿ(24) ದುರ್ದೈವಿ. 26 ವರ್ಷದ ರಮಜಾನ್ ದೇಸಾಯಿ ತಮ್ಮನನ್ನೇ ಕೊಲೆ ಮಾಡಿದ ಆರೋಪಿ ಅಣ್ಣ. ಭಾನುವಾರ ತಡರಾತ್ರಿ ಮುನಾಫ್ ದೇಸಾಯಿ ತನ್ನ ತಂದೆ-ತಾಯಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿರುವ ವೇಳೆ ಮಧ್ಯಪ್ರವೇಶಿಸಿ ರಮಜಾನ್ ತಂದೆ, ತಾಯಿಯನ್ನು ಯಾಕೆ ಬೈಯ್ಯುತ್ತಿದ್ಯಾ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ವಾಗ್ವಾದ ತಾರಕಕ್ಕೇರಿ ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಚಾಕುವಿನಿಂದ ಮುನಾಫ್ ಹೊಟ್ಟೆಗೆ ರಮಜಾನ್ ಇರಿದಿದ್ದಾನೆ. ಇದನ್ನೂ ಓದಿ: ಇಂದಿನಿಂದ ಶಾಲೆ ಆರಂಭ – ಈ ವರ್ಷವೂ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ

    ಇದರಿಂದ ತೀವ್ರವಾಗಿ ಗಾಯಗೊಂಡ ಮುನಾಫ್‍ನನ್ನು ಆತನ ಪೋಷಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮುನಾಫ್ ಸಾವನ್ನಪ್ಪಿದ್ದಾನೆ. ಸದ್ಯ ಆರೋಪಿ ರಮಜಾನ್‍ನನ್ನು ಗೋಕಾಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಘಟನಾ ಸ್ಥಳಕ್ಕೆ ಗೋಕಾಕ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೋಕಾಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್

  • ವಿದ್ಯುತ್ ತಗುಲಿ ಅಣ್ಣ, ತಮ್ಮ ಧಾರುಣ ಸಾವು

    ವಿದ್ಯುತ್ ತಗುಲಿ ಅಣ್ಣ, ತಮ್ಮ ಧಾರುಣ ಸಾವು

    ವಿಜಯಪುರ: ವಿದ್ಯುತ್ ತಗುಲಿ ಸಹೋದರರಿಬ್ಬರು ಸ್ಥಳದಲ್ಲೇ ಧಾರುಣ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ನಡೆದಿದೆ.

    ಮುದ್ದುಗೌಡ ಅಪ್ಪಾಸಾಹೇಬ್ ಪಾಟೀಲ್ ಹಾಗೂ ಶಿವರಾಜ್ ಅಪ್ಪಾಸಾಹೇಬ್ ಪಾಟೀಲ್ ಮೃತ ಸಹೋದರರು. ಅಣ್ಣ ಮುದ್ದುಗೌಡ ಮೋಟಾರ್ ಆನ್ ಮಾಡಲು ಹೋದಾಗ ಕರೆಂಟ್ ತಗುಲಿದೆ. ಈ ವೇಳೆ ಅಣ್ಣನನ್ನು ರಕ್ಷಿಸಲು ಹೋದಾಗ ತಮ್ಮ ಶಿವರಾಜ್‍ಗೂ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.

    ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.