Tag: brothers

  • ಮೈಸೂರು| ನಾಲೆಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಿಸಿ ತಾವೇ ಜಲಸಮಾಧಿಯಾದ ಇಬ್ಬರು ಸಹೋದರರು

    ಮೈಸೂರು| ನಾಲೆಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಿಸಿ ತಾವೇ ಜಲಸಮಾಧಿಯಾದ ಇಬ್ಬರು ಸಹೋದರರು

    – ಮೃತರಲ್ಲಿ ಒಬ್ಬ 15 ದಿನಗಳ ಹಿಂದೆಯಷ್ಟೇ ಪ್ರೀತಿಸಿದ ಯುವತಿ ಜೊತೆ ಮದುವೆಯಾಗಿದ್ದ

    ಮೈಸೂರು: ನೀರಿನಲ್ಲಿ ಜಲ ಸಮಾಧಿ ಆಗ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ನೀರಿಗೆ ಇಳಿದ ಸಹೋದರರು ಬಾಲಕನನ್ನು ಬದುಕಿಸಿ ತಾವೇ ಜಲಸಮಾಧಿ ಆಗಿರುವ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ವರುಣಾ ನಾಲೆಯಲ್ಲಿ ಈ ದುರಂತ ಘಟನೆ ನಡೆದಿದೆ. ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ಮುಳುಗ ತೊಡಗಿದ್ದಾನೆ. ಇದೇ ವೇಳೆಗೆ ನಾಲೆಯ ಮೇಲ್ಗಡೆ ನಡೆದುಕೊಂಡು ಬರುತ್ತಿದ್ದ ಸಹೋದರರು ಬಾಲಕ ಮುಳುಗುವುದನ್ನು ನೋಡಿ ಆತನ ರಕ್ಷಣೆಗೆ ನಾಲೆಗೆ ಹಾರಿದ್ದಾರೆ. ಮುಳುಗುತ್ತಿದ್ದ ಬಾಲಕನನ್ನು ನೀರಿನಿಂದ ಮೇಲೆತ್ತಿದ್ದಾರೆ. ಆದರೆ, ಈ ಸಹೋದರರು ಅಷ್ಟರಲ್ಲಿ ಸುಸ್ತಾಗಿ ನೀರಿನಿಂದ ಮೇಲೆ ಬರಲು ಆಗದೆ ಜಲಸಮಾಧಿ ಆಗಿದ್ದಾರೆ.

    ಬಡಗಲಹುಂಡಿ ಗ್ರಾಮದ ರಮೇಶ್ ಪುತ್ರ ನವ ವಿವಾಹಿತ (25) ನಂದನ್ ಹಾಗೂ ಅವರ ಸಹೋದರನ ಪುತ್ರ ರಾಕೇಶ್ (20) ಮೃತಪಟ್ಟ ಸಹೋದರರು. ನಿನ್ನೆ ಸಂಜೆ ವರಣಾ ನಾಲೆಯಲ್ಲಿ ಈ ಘಟನೆ ನಡೆದಿದೆ. ನಾಲೆಯಲ್ಲಿ ಈಜಲು ತೆರೆಳಿದ್ದ ಬಾಲಕ ಮಂಜು, ನೀರಿನಲ್ಲಿ ಮುಳುಗುತ್ತಿದ್ದ. ಈ ವೇಳೆ ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ಈ ಸಹೋದರರು ನೀರಿನಲ್ಲಿ ಮುಳುಗಿದ್ದವನನ್ನು ರಕ್ಷಿಸಲು ಮುಂದಾಗಿ ಬಾಲಕನನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಿ ಸುಸ್ತಾಗಿ ನೀರಿನಿಂದ ಮೇಲೆ ಬರಲಾಗದೆ ನಂದನ್, ರಾಕೇಶ್ ನೀರುಪಾಲಾಗಿದ್ದಾರೆ.

    ಮೃತ ನಂದನ್, ರಾಕೇಶ್ ಇಬ್ಬರೂ ಸಹೋದರರ ಮಕ್ಕಳು. ಹದಿನೈದು ದಿನಗಳ ಹಿಂದೆಯಷ್ಟೆ ನಂದನ್ ತಾನು ಪ್ರೀತಿಸುತ್ತಿದ್ದ ಚನ್ನಪಟ್ಟಣದ ಯುವತಿ ಜೊತೆ ಪೋಷಕರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದ.

  • ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಸಾವು

    ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಸಾವು

    ಬೆಳಗಾವಿ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಹೃದಯಾಘಾತದಿಂದ (Heartattack) ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಗೋಕಾಕ (Gokaka) ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದಿದೆ.

    ತಮ್ಮ ಸತೀಶ್ ಬಾಗನ್ನವರ (16), ಅಣ್ಣ ಬಸವರಾಜ್ ಬಾಗನ್ನವರ (24) ಮೃತ ದುರ್ದೈವಿಗಳು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸತೀಶ್ ಶನಿವಾರ ಮುಂಜಾನೆ ಅನಾರೋಗ್ಯದಿಂದ ಮೃತಪಟ್ಟಿದ್ದ. ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಬಸವರಾಜ್ ಅಲ್ಲೇ ಕುಸಿದು ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಅಮೆರಿಕದಲ್ಲಿ ಹೈದರಾಬಾದ್ ಮೂಲದ ದಂತ ವೈದ್ಯನ ಗುಂಡಿಕ್ಕಿ ಹತ್ಯೆ

    ತುಂಬು ಗರ್ಭಿಣಿಯಾಗಿದ್ದ ಬಸವರಾಜ್ ಪತ್ನಿ ಪವಿತ್ರಾ, ಪತಿಯ ಸಾವಿನ ಸುದ್ದಿ ತಿಳಿದು ಕುಸಿದ್ದಿದ್ದರು. ತಕ್ಷಣವೇ ಆಕೆಯನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಸವರಾಜ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಇದೀಗ ಮನೆಗೆ ಆಧಾರವಾಗಿದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

  • Kolar | ಜಮೀನು ವಿವಾದ – ತಲ್ವಾರ್‌ನಿಂದ ಹೊಡೆದು ತಮ್ಮನಿಂದಲೇ ಅಣ್ಣನ ಕೊಲೆ

    Kolar | ಜಮೀನು ವಿವಾದ – ತಲ್ವಾರ್‌ನಿಂದ ಹೊಡೆದು ತಮ್ಮನಿಂದಲೇ ಅಣ್ಣನ ಕೊಲೆ

    ಕೋಲಾರ: ಜಮೀನು ವಿವಾದದ (Land Dispute) ಹಿನ್ನೆಲೆಯಲ್ಲಿ ತಲ್ವಾರ್‌ನಿಂದ ತಲೆಗೆ ಹೊಡೆದು ತಮ್ಮನೇ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಚಲಪತಿ ಅಲಿಯಾಸ್ ವೆಂಕಟಾಚಲಪತಿ (50) ಕೊಲೆಯಾದ ಅಣ್ಣ. ಪಕ್ಕದ ಮನೆಯಲ್ಲೇ ವಾಸ ಮಾಡುವ ತಮ್ಮ ಮುನಿರಾಜು (40) ಕೊಲೆ ಮಾಡಿ ಬಳಿಕ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಬೆಳಗ್ಗೆ 6:30ರ ಸುಮಾರಿಗೆ ಕುರಿಗಳಿಗೆ ಮೇವು ನೀಡಲು ಹೋದ ಅಣ್ಣನನ್ನು ತಲ್ವಾರ್‌ನಿಂದ ಕೊಚ್ಚಿ ತಮ್ಮ ಕೊಲೆ ಮಾಡಿದ್ದಾನೆ. ಕೋಲಾರ ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ರಾಮಾಪುರದಲ್ಲಿ (Ramapura) ಇಂದು ಮುಂಜಾನೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಅನಾಮಿಕನ ಮಂಪರು ಪರೀಕ್ಷೆ ಮಾಡಿ: ಕಿಶೋರ್ ಕುಮಾರ್ ಪುತ್ತೂರು

    ಅಣ್ಣ ಚಲಪತಿ ಜಮೀನಿನಲ್ಲಿ ಸರಿಯಾಗಿ ಭಾಗ ಕೊಡದ ಹಿನ್ನೆಲೆ ಹಲವು ಬಾರಿ ನ್ಯಾಯ ಪಂಚಾಯ್ತಿಗಳನ್ನು ಮಾಡಲಾಗಿದೆ. ಜೊತೆಗೆ ಜಮೀನು ವಿವಾದ ನ್ಯಾಯಾಲಯದಲ್ಲೂ ಇದ್ದು, ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ 35 ಲಕ್ಷ ಹಣ ಕೊಟ್ಟು ತೀರ್ಮಾನ ಸಹ ಮಾಡಿಕೊಂಡಿದ್ದಾನೆ. ಆದರೆ ಇಂದು ಮುಂಜಾನೆ ಕುರಿ ಶೆಡ್‌ಗೆ ತೆರಳಿದ ಅಣ್ಣನನ್ನ ಹಿಂಬಾಲಿಸಿದ ತಮ್ಮ ಮುನಿರಾಜು ಶೆಡ್‌ನಲ್ಲಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಶಕ್ತಿ ಯೋಜನೆ ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆ; Golden Book of World Records ನಲ್ಲಿ ದಾಖಲು

    ಇನ್ನೂ ಮನೆಯಿಂದ ಶೆಡ್‌ಗೆ ಚಲಪತಿ ತೆರಳುವ ಹಾಗೂ ನಂತರ ತಮ್ಮ ಮುನಿರಾಜು ಶೆಡ್‌ಗೆ ತೆರಳಿ ಬಾಗಿಲು ಹಾಕಿಕೊಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿರುವ ಕೊಲೆ ಆರೋಪಿ ಮುನಿರಾಜು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನೂ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಹಾಗೂ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜಮ್ಮುಕಾಶ್ಮೀರದ ಕುಪ್ವಾರಾದಲ್ಲಿ ಮೇಘಸ್ಫೋಟ – 5 ದಿನಗಳಲ್ಲಿ 3ನೇ ದುರಂತ

    ಇನ್ನೂ ಚಲಪತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತನ್ನ ಪತಿಯನ್ನ ತಲ್ವಾರ್‌ನಿಂದ ಕೊಚ್ಚಿ ಚುಚ್ಚಿಕೊಲೆ ಮಾಡಿದ್ದಾರೆ. ಇದರಲ್ಲಿ ಮುನಿರಾಜು ಮಾತ್ರವಲ್ಲದೇ ಸಾಕಷ್ಟು ಜನರ ಕುತಂತ್ರ ಸಹ ಇದೆ. ಅಲ್ಲದೆ ಕೊಲೆ ಮಾಡಿದ ಬಳಿಕ ಮತ್ತಷ್ಟು ತಲೆಗಳನ್ನ ಬಲಿ ಪಡೆಯುವುದಾಗಿಯೂ ಅವರೇ ಹೇಳಿದ್ದಾರೆ ಎಂದು ಪತ್ನಿ ನಾರಾಯಣಮ್ಮ ಹಾಗೂ ತಂಗಿ ಸುನಂದಮ್ಮ ಆರೋಪಿಸಿದ್ದಾರೆ. ಇದನ್ನೂ ಓದಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ – ಪ್ರವಾಹ ಭೀತಿ

  • ಒಂದೇ ವಧುವನ್ನು ಮದುವೆಯಾದ ಸಹೋದರರು!

    ಒಂದೇ ವಧುವನ್ನು ಮದುವೆಯಾದ ಸಹೋದರರು!

    ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಶಿಲೈ ಗ್ರಾಮದಲ್ಲಿ ಒಂದೇ ಯುವತಿಯನ್ನು ಇಬ್ಬರು (Brothers) ಸಹೋದರರು (Marriage) ಮದುವೆಯಾಗಿದ್ದಾರೆ.

    ಹಟ್ಟಿ ಬುಡಕಟ್ಟಿನ ಇಬ್ಬರು ಸಹೋದರ ಮದುವೆಗೆ ನೂರಾರು ಜನ ಸಾಕ್ಷಿಯಾಗಿದ್ದಾರೆ. ವಧು (Bride) ಸುನೀತಾ ಚೌಹಾಣ್ ಮತ್ತು ವರ ಪ್ರದೀಪ್ ಮತ್ತು ಕಪಿಲ್ ನೇಗಿ ಪರಸ್ಪರ ಒಪ್ಪಿಗೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ವಿವಾಹ ಸಮಾರಂಭದ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ಲಿವ್-ಇನ್-ಪಾರ್ಟ್ನರ್‌ನ ಕೊಂದು ಆಕೆ ಕೆಲಸ ಮಾಡ್ತಿದ್ದ ಠಾಣೆಗೆ ಹೋಗಿ ಶರಣಾದ ಯೋಧ

    ಕುನ್ಹತ್ ಗ್ರಾಮದ ವಧು ಸುನೀತಾ ಈ ಬಗ್ಗೆ ಮಾತನಾಡಿ, ಸಂಪ್ರದಾಯದ ಬಗ್ಗೆ ನನಗೆ ಅರಿವಿತ್ತು. ಯಾವುದೇ ಒತ್ತಡವಿಲ್ಲದೆ ನಾನು ಈ ಮದುವೆಗೆ ಒಪ್ಪಿಕೊಂಡಿದ್ದೇನೆ. ಪ್ರದೀಪ್ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕಿರಿಯ ಸಹೋದರ ಕಪಿಲ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

    ನಾವು ಈ ಸಂಪ್ರದಾಯವನ್ನು ಒಪ್ಪಿಕೊಂಡಿದ್ದೇವೆ. ನಮಗೆ ಈ ಬಗ್ಗೆ ಹೆಮ್ಮೆಯಿದೆ ಎಂದು ಪ್ರದೀಪ್ ಹೇಳಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಇಂತಹ ಸಂಪ್ರದಾಯ ಇದೆ. ಟ್ರಾನ್ಸ್-ಗಿರಿಯ ಬಧಾನಾ ಗ್ರಾಮದಲ್ಲಿ ಕಳೆದ 6 ವರ್ಷಗಳಲ್ಲಿ ಇಂತಹ ಐದು ಮದುವೆಗಳು ನಡೆದಿವೆ. ಇದನ್ನೂ ಓದಿ: Chitradurga | ಮದುವೆಯಾಗಲು ಹೆಣ್ಣು ಸಿಕ್ಕಿಲ್ಲವೆಂದು ಹೋಂ ಗಾರ್ಡ್ ನೇಣಿಗೆ ಶರಣು

  • Kolar | ಜಮೀನು ವಿವಾದ – ಅಣ್ಣಂದಿರಿಂದಲೇ ತಮ್ಮನ ಕೊಲೆ

    Kolar | ಜಮೀನು ವಿವಾದ – ಅಣ್ಣಂದಿರಿಂದಲೇ ತಮ್ಮನ ಕೊಲೆ

    ಕೋಲಾರ: ಜಮೀನು ವಿವಾದ (Land Dispute) ಹಿನ್ನೆಲೆ ಅಣ್ಣ ತಮ್ಮನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕು ಎನ್‌ಜಿ ಹುಲ್ಕರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಂದೆ ಆಸ್ತಿಯಲ್ಲಿ ನಾಲ್ಕು ಗುಂಟೆ ಪಾಲು ಬೇಕೆಂದು ಮೂವರು ಅಣ್ಣ ತಮ್ಮಂದಿರು ನ್ಯಾಯಾಲಯದ ಮೊರೆ ಹೋಗಿದ್ದರು. ಜಮೀನು ವಿವಾದ ಸದ್ಯ ನ್ಯಾಯಾಲಯದಲ್ಲಿ ಬಾಕಿ ಇದ್ದು, ಸದರಿ ಜಮೀನಿನಲ್ಲಿ ತಮ್ಮ ರಮೇಶ್ ಶೆಡ್ ನಿರ್ಮಿಸಲು ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಹೊತ್ತೊಯ್ದ ಪೋಷಕರು

    ಈ ಬಗ್ಗೆ ವಿಚಾರ ತಿಳಿದ ಸೀನಪ್ಪ (ಶ್ರೀನಿವಾಸ್) ಮತ್ತು ಸಂಪಂಗಿ ಇಬ್ಬರೂ ರಮೇಶ್ ಬಳಿ ತಕರಾರು ತೆಗೆದಿದ್ದಾರೆ. ಸೀನಪ್ಪ ಮತ್ತು ರಮೇಶ್ ನಡುವೆ ಮಾತಿನ ಚಕಮಕಿ ನಡೆದು ಕೋಪಾವೇಶದಲ್ಲಿ ಸೀನಪ್ಪ ಪಕ್ಕದಲ್ಲಿದ್ದ ದೊಣ್ಣೆಯನ್ನು ತೆಗೆದು ರಮೇಶ್‌ಗೆ ಬಲವಾಗಿ ಹೊಡೆದ ಪರಿಣಾಮ ರಮೇಶ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಘಟನೆ ನಡೆಯುವಾಗ ಅಕ್ಕಪಕ್ಕದ ಜನರೂ ಗುಂಪುಗೂಡಿದ್ದು, ತಮ್ಮ ಮೃತನಾದ ಎಂದು ತಿಳಿಯುತ್ತಿದ್ದಂತೆ ಭಯದಿಂದ ಸೀನಪ್ಪ ಮತ್ತು ಸಂಪಂಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

    ವಿಷಯ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿ ಸೀನಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಪಂಗಿ ಪರಾರಿಯಾಗಿದ್ದು, ಬೇತಮಂಗಳ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನ F-35 ಫೈಟರ್‌ ಜೆಟ್‌ ಕೇರಳದಲ್ಲಿ ತುರ್ತು ಭೂಸ್ಪರ್ಶ – ಕಾರಣ ಏನು?

  • Bidar | ತಂಗಿಯನ್ನ ಪ್ರೀತಿಸಿದ್ದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದ ಸಹೋದರರು

    Bidar | ತಂಗಿಯನ್ನ ಪ್ರೀತಿಸಿದ್ದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದ ಸಹೋದರರು

    ಬೀದರ್: ತಂಗಿಯನ್ನ (Sister) ಪ್ರೀತಿಸಿದ್ದಕ್ಕೆ ಯುವಕನನ್ನ ಸಹೋದರರು ಬರ್ಬರವಾಗಿ ಹತ್ಯೆಗೈದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಿರಗೂಡಿ ಗ್ರಾಮದಲ್ಲಿ ನಡೆದಿದೆ.

    ಪ್ರಶಾಂತ ಬಿರಾದರ್ (25) ಬರ್ಬರವಾಗಿ ಕೊಲೆಯಾದ ಮೃತ ಯುವಕ. ಮೃತ ಯುವಕ ಹಾಗೂ ಆರೋಪಿಗಳ ಸಹೋದರಿ ನಡುವೆ ಕೆಲ ವರ್ಷಗಳಿಂದ ಪ್ರೇಮಾಂಕುರವಾಗಿತ್ತು. ಇದನ್ನೂ ಓದಿ: ಯುಗಾದಿ, ರಾಮನವಮಿ ಹಲಾಲ್ ಮುಕ್ತ ಆಗಲಿ: ಪ್ರಮೋದ್ ಮುತಾಲಿಕ್

    ಶುಕ್ರವಾರ ರಾತ್ರಿ ನಿರಗುಡಿ ಗ್ರಾಮದಲ್ಲಿ ಮೃತ ಪ್ರಶಾಂತ ಹಾಗೂ ಯುವತಿ ಸಹೋದರರ ನಡುವೆ ಗಲಾಟೆಯಾಗಿದ್ದು, ಗಲಾಟೆ ವೇಳೆ ಪ್ರಶಾಂತ್ ತಲೆ ಮೇಲೆ ಕಲ್ಲು ಹಾಕಿ ಸಹೋದರರು ಬರ್ಬರವಾಗಿ ಹತ್ಯೆಗೈದಿದ್ದಾರೆ. ಕೊಲೆಯಾದ ಯುವಕನ ಮೃತದೇಹವನ್ನು ಬಸವಕಲ್ಯಾಣ ಶವಗಾರಕ್ಕೆ ತಂದಿದ್ದು, ಶವಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಬಿಬಿಎಂಪಿ ಬಜೆಟ್ ಮಂಡನೆ – 19,927 ಕೋಟಿ ಬೃಹತ್ ಯೋಜನೆಗಳ ಘೋಷಣೆ 

    ಸ್ಥಳಕ್ಕೆ ಡಿವೈಎಸ್‌ಪಿ ನ್ಯಾಮೇಗೌಡ, ಸಿಪಿಐ ಅಲಿಸಾಬ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ಯಲ್ಲಾಲಿಂಗ ಮೇತ್ರೆ, ಪ್ರಶಾಂತ್ ಮೇತ್ರೆ ಎಂಬ ಇಬ್ಬರು ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಇದನ್ನೂ ಓದಿ: ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ – ಮೊಸಳೆಗಳಿರುವ ನದಿಯಲ್ಲಿ 2 ದಿನ ಕಾರ್ಯಾಚರಣೆ ನಡೆಸಿ ವಿದ್ಯುತ್ ಪೂರೈಸಿದ ಹೆಸ್ಕಾಂ ಸಿಬ್ಬಂದಿ

  • ಅಣ್ಣನ ಲವ್‌ಸ್ಟೋರಿಗೆ ತಮ್ಮನ ಕೊಲೆ ಪ್ರಕರಣ- 6 ಆರೋಪಿಗಳ ಬಂಧನ

    ಅಣ್ಣನ ಲವ್‌ಸ್ಟೋರಿಗೆ ತಮ್ಮನ ಕೊಲೆ ಪ್ರಕರಣ- 6 ಆರೋಪಿಗಳ ಬಂಧನ

    ಕಲಬುರಗಿ: ಅಣ್ಣನ ಪ್ರೇಮ ಪ್ರಕರಣಕ್ಕೆ ತಮ್ಮನನ್ನು ಕಲಬುರಗಿಯಲ್ಲಿ (Kalaburagi) ಬರ್ಬರ ಕೊಲೆ ಮಾಡಿರುವ ಪ್ರಕರಣ ಸಂಬಂಧ ವಿಶ್ವವಿದ್ಯಾಲಯ ಪೊಲೀಸರು ಯುವತಿ ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಕಲಬುರಗಿ ಹೊರವಲಯದ ನಾಗನಹಳ್ಳಿ (Naganahalli) ಗ್ರಾಮದಲ್ಲಿ ಸುಮಿತ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಕುರಿತು ವಿಶ್ವವಿದ್ಯಾಲಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಅದೇ ಗ್ರಾಮದ ರಾಜಕುಮಾರ್, ವರುಣ್ ಕುಮಾರ್, ಸಿದ್ದು, ಪ್ರಜ್ವಲ್, ಜಯಮ್ಮ, ಆಕೆಯ ಮಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಓಣಂ ರಂಗೋಲಿ ಹಾಕಿದ್ದಕ್ಕೆ ಕಾಲಿನಿಂದ ಅಳಿಸಿ ನೃತ್ಯ ಮಾಡಿ ಕಿರಿಕ್‌

    ಆರೋಪಿಗಳಾದ ರಾಜಕುಮಾರ್, ಜಯಮ್ಮ ದಂಪತಿ ಮಗಳನ್ನು ಕೊಲೆಯಾದ ಸುಮೀತ್ ಸಹೋದರ ಸಚಿನ್ ಲವ್ ಮಾಡುತ್ತಿದ್ದ. ಹೀಗಾಗಿ ಸಚಿನ್‌ಗೆ ಬೆದರಿಕೆ ಹಾಕಲು ಪ್ಲ್ಯಾನ್ ಮಾಡಿ ಸಚಿನ್ ಸಹೋದರ ಸಮೀತ್ ಜೊತೆ ನಾಗನಹಳ್ಳಿ ಗ್ರಾಮದಲ್ಲಿ ಯುವತಿಯ ಕುಟುಂಬಸ್ಥರು ಜಗಳವಾಡಿದ್ದರು. ಈ ವೇಳೆ ಸುಮಿತ್‌ಗೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಸದ್ಯ ಎಲ್ಲಾ ಆರೋಪಿಗಳನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ತಿರುಪತಿ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಹಾಕುವ ಕುಕೃತ್ಯವನ್ನ ಒಬ್ಬ ಕ್ರೈಸ್ತ ಮಾಡಿದ್ದಾನೆ: ಪ್ರತಾಪ್‌ ಸಿಂಹ

  • ಟಿವಿ ರಿಮೋಟ್‌ಗಾಗಿ ಅಣ್ಣ-ತಮ್ಮಂದಿರ ಕಿತ್ತಾಟ; ತಂದೆಯಿಂದ ಮಗನ ಹತ್ಯೆ

    ಟಿವಿ ರಿಮೋಟ್‌ಗಾಗಿ ಅಣ್ಣ-ತಮ್ಮಂದಿರ ಕಿತ್ತಾಟ; ತಂದೆಯಿಂದ ಮಗನ ಹತ್ಯೆ

    ಚಿತ್ರದುರ್ಗ: ಟಿವಿ ರಿಮೋಟ್‌ಗಾಗಿ (Tv Remote) ಅಣ್ಣ-ತಮ್ಮಂದಿರ (Brothers) ನಡುವೆ ಗಲಾಟೆ ನಡೆದ ಹಿನ್ನೆಲೆ ಸಿಟ್ಟಿಗೆದ್ದ ತಂದೆ (Father) ಹಿರಿಮಗನ ಮೇಲೆ ಕತ್ತರಿ (Scissors) ಎಸೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಹಿರಿಮಗ ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

    ಜಿಲ್ಲೆಯ ಮೊಳಕಾಲ್ಮೂರು (Molakalmuru) ಪಟ್ಟಣದಲ್ಲಿ ಘಟನೆ ನಡೆದಿದ್ದು, ಹಿರಿಮಗ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೃತ ಚಂದ್ರಶೇಖರ್ ಹಾಗೂ ತಮ್ಮ ಪವನ್ (14) ರಿಮೋಟ್‌ಗಾಗಿ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ತಂದೆ ಲಕ್ಷ್ಮಣ್‌ಬಾಬು ತನ್ನ ಹಿರಿಮಗನಾದ ಚಂದ್ರಶೇಖರ್ ಮೇಲೆ ಕತ್ತರಿ ಎಸೆದು ಹೆದರಿಸಲು ಮುಂದಾಗಿದ್ದಾರೆ. ಹಲವು ದಿನಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಲಕ್ಷ್ಮಣ್‌ಬಾಬು ಮಕ್ಕಳ ಜಗಳದಿಂದ ಸಿಟ್ಟಿಗೆದ್ದು ಹಿರಿಮಗನ ಕಡೆಗೆ ಕತ್ತರಿ ಎಸೆದಿದ್ದಾರೆ. ಇದನ್ನೂ ಓದಿ: ಕಾರು, ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ – 8 ಮಂದಿ ದುರ್ಮರಣ

    ದುರಾದೃಷ್ಟವಶಾತ್ ಕತ್ತರಿ ಏಟು ಬಾಲಕನ ಕಿವಿಯ ಹಿಂಭಾಗಕ್ಕೆ ಜೋರಾಗಿ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: 15 ವರ್ಷದಲ್ಲಿ ಒಮ್ಮೆಯೂ ತವರಿಗೆ ಕಳುಹಿಸದೆ ಕಿರುಕುಳ – ವಿಷ ಕುಡಿಸಿ ಪತ್ನಿಯ ಕೊಂದ ದುರುಳ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ರಾಪ್ತೆಯ ಮೇಲೆ ಅಪ್ರಾಪ್ತ ಸಹೋದರರಿಂದ ಸಾಮೂಹಿಕ ಅತ್ಯಾಚಾರ- ಇಬ್ಬರು ಅರೆಸ್ಟ್

    ಜೈಪುರ್: 11 ವರ್ಷದ ಬಾಲಕಿಯ ಮೇಲೆ ಆಕೆಯ ಇಬ್ಬರು ಸೋದರ ಸಂಬಂಧಿಗಳೇ ಅತ್ಯಾಚಾರ ಮಾಡಿರುವ ಘಟನೆ ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆದಿದೆ. ಇಬ್ಬರು ಸೋದರ ಸಂಬಂಧಿಗಳೂ ಅಪ್ರಾಪ್ತರಾಗಿದ್ದು 13 ಮತ್ತು 15 ವರ್ಷದವರಾಗಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಉದಯಪುರದ ಅಂಬಾಮಾತಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃತ್ಯ ಎಸಗಿದ ಇಬ್ಬರನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆವರೆಗೂ ಬಾಲಾಪರಾಧಿ ಕೇಂದ್ರಕ್ಕೆ ವರ್ಗಾಯಿಸಲು ನಿರ್ಧಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿಸಿ ಪ್ರತಿಭಟನೆಗೆ ತೆರಳುತ್ತಿದ್ದ ಸ್ವಾಮೀಜಿ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

    ಸಂತ್ರಸ್ತ ಬಾಲಕಿ ತನ್ನ ತಂದೆಯ ಚಿಕ್ಕಮ್ಮನ ನಿವಾಸಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಆಕೆಯ 13 ಮತ್ತು 15 ವರ್ಷ ವಯಸ್ಸಿನ ಇಬ್ಬರು ಸೋದರ ಸಂಬಂಧಿಗಳು ಅತ್ಯಾಚಾರ ಎಸಗಿದ್ದಾರೆ. ಸ್ವಲ್ಪ ಸಮಯದ ನಂತರ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ಕೂಡಲೇ ಆಕೆಯ ಸಂಬಂಧಿಕರು ಅವಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಡಿಎಸ್‍ಪಿ ಚೇತನಾ ಭಾಟಿ ಅವರು ಘಟನೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಸಾವರ್ಕರ್ ವಿಚಾರ ಕಡಿತದಿಂದ ವಿದ್ಯಾರ್ಥಿಗಳಿಗೆ ವಂಚನೆ: ರಂಜಿತ್ ಸಾವರ್ಕರ್

  • ಒಂದು ವರ್ಷದ ಬಳಿಕ ಅಣ್ಣ ಮೃತಪಟ್ಟ ದಿನವೇ ಸಾವನ್ನಪ್ಪಿದ ತಮ್ಮ

    ಒಂದು ವರ್ಷದ ಬಳಿಕ ಅಣ್ಣ ಮೃತಪಟ್ಟ ದಿನವೇ ಸಾವನ್ನಪ್ಪಿದ ತಮ್ಮ

    ಹಾಸನ: ಅಣ್ಣ ಮೃತಪಟ್ಟ ಒಂದು ವರ್ಷದ ನಂತರ ಅದೇ ದಿನವೇ ತಮ್ಮ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.

    ನೆಟ್ಟೆಕೆರೆ ಗ್ರಾಮದ ಪುಟ್ಟಸ್ವಾಮಿ-ಸರೋಜಾ ದಂಪತಿಗೆ ಶ್ರೀಧರ್ (22), ದಿಲೀಪ್ (21) ಇಬ್ಬರು ಗಂಡು ಮಕ್ಕಳಿದ್ದರು.‌ ಕಳೆದ ವರ್ಷ ಅಂದರೆ 2022ರ ಜ. 9ರಂದು ಹಿರಿಯ ಮಗ ಶ್ರೀಧರ್ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಶ್ರೀಧರ್‌ ಸಹೋದರ ದಿಲೀಪ್ ಇದೇ ಜ.4ರಂದು ಅತಿ ವೇಗವಾಗಿ ಬೈಕ್ ಚಾಲನೆ ಮಾಡಿ ಬೇಲೂರು ತಾಲೂಕಿನ ರಾಯಪುರ ಬಳಿಯ ತಿರುವಿನಲ್ಲಿ ಬೈಕ್ ನಿಯಂತ್ರಣಕ್ಕೆ ಸಿಗದೇ ರಸ್ತೆ ಬದಿಯ ಹೊಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನು.

    ಹೊಲದಲ್ಲಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ದಿಲೀಪ್‌ನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಬಿಜೆಪಿಯಲ್ಲಿ ತ್ರಿಮೂರ್ತಿ ತಂತ್ರ: ಬೆಂಗಳೂರಲ್ಲಿ ಯೋಗಿ ಆದಿತ್ಯನಾಥ್ ಟಾರ್ಗೆಟ್ ಯಾರು!?

    crime

    ಅಣ್ಣ ಸಾವನ್ನಪ್ಪಿದ ಒಂದು ವರ್ಷದ ನಂತರ ಅದೇ ದಿನಾಂಕದಂದು ತಮ್ಮ ದಿಲೀಪ್ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು (ಬುಧವಾರ) ಸ್ವಗ್ರಾಮ ನೆಟ್ಟೆಕೆರೆಯಲ್ಲಿ ದಿಲೀಪ್ ಅಂತ್ಯಕ್ರಿಯೆ ನೆರವೇರಿಸಲಾಯಿತು. ದಿಲೀಪ್ ಬೈಕ್ ಅಪಘಾತದ ವೀಡಿಯೋ ಸಿಸಿಟಿಯಲ್ಲಿ ಸೆರೆಯಾಗಿದ್ದು, ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯದಲ್ಲೇ ಅತಿ ಕಡಿಮೆ ಉಷ್ಣಾಂಶ ಬೀದರ್‌ನಲ್ಲಿ ದಾಖಲು – ಕೊರೆಯುವ ಚಳಿಗೆ ಜನರು ಗಡಗಡ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k