Tag: brother

  • ಅತ್ತಿಗೆಯಾಗಬೇಕಿದ್ದವಳ ಮೇಲೆ ಕಣ್ಣಾಕಿದ್ದ ಸಹೋದರನ ಕತ್ತು ಸೀಳಿದ ಅಣ್ಣ!

    ಅತ್ತಿಗೆಯಾಗಬೇಕಿದ್ದವಳ ಮೇಲೆ ಕಣ್ಣಾಕಿದ್ದ ಸಹೋದರನ ಕತ್ತು ಸೀಳಿದ ಅಣ್ಣ!

    ದಾವಣಗೆರೆ: ಅವರಿಬ್ಬರು ಅಕ್ಕ-ತಂಗಿ ಮಕ್ಕಳು, ಸಂಬಂಧದಲ್ಲಿ ಸಹೋದರರಾಗಬೇಕು. ಇಬ್ಬರ ನಡುವೆ ಹುಡುಗಿಗಾಗಿ ವೈಮನಸ್ಸು ಉಂಟಾಗಿತ್ತು. ತಮ್ಮ ಕಣ್ಣು ಹಾಕಿದ್ದ ಹುಡುಗಿಯೊಂದಿಗೆ ಅಣ್ಣನಿಗೆ ಮದುವೆ ನಿಶ್ಚಿಯವಾಗಿತ್ತು. ಅಣ್ಣ ಮದುವೆಯಾಗಬೇಕಿದ್ದ ಹುಡುಗಿಯ ಮೇಲೆ ಮೈದುನನಿಗೆ ಪ್ರೇಮಾಂಕುರ ಆಗಿತ್ತು. ಹೀಗಾಗಿ ಅತ್ತಿಗೆ ಆಗಬೇಕಾಗಿದ್ದವಳ ಮೇಲೆ ಕಣ್ಣು ಹಾಕಿದ್ದ ಎಂಬ ಒಂದೇ ಕಾರಣಕ್ಕೆ ಕಿರಾತಕ ಅಣ್ಣ ತಮ್ಮನ ಕತ್ತು ಸೀಳಿ ಕಥೆ ಮುಗಿಸಿದ್ದಾನೆ.

    ಹೌದು. ಅವರಿಬ್ಬರು ಚಿಕ್ಕದೊಡ್ಡಮ್ಮನ ಮಕ್ಕಳು. ಅಣ್ಣನ ಮದುವೆ ನಿಶ್ಚಿಯ ಆಗಿದ್ದರಿಂದ ಅಣ್ತಮ್ಮ ಇಬ್ಬರು ಶಾಪಿಂಗ್ ಗೆ ತೆರಳಿದ್ದಾರೆ. ಬೆಳಗಾಗುವುದರಲ್ಲಿ ದುರದೃಷ್ಟ ಅಂದರೆ ಇಬ್ಬರು ಸಹೋದರರಲ್ಲಿ ಒಬ್ಬ ಶವವಾಗಿ ಸಿಕ್ಕದ್ದರೆ, ಮತ್ತೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದನು. ಈ ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಶಾಂಪಿಗ್ ಗೆ ಕರೆದುಕೊಂಡು ಬಂದಿದ್ದ ಅಣ್ಣ ಇಬ್ರಾಹಿಂನೇ ಹುಡುಗಿ ವಿಚಾರವಾಗಿ ಸಹೋದರ ಅಲ್ತಾಫ್ ನ ಕಥೆ ಮುಗಿಸಿದ್ದಾನೆ.

    ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ನಿವಾಸಿ ಮೆಹಬೂಬ್ ಬಾಷಾರವರ ಮಗ ಅಲ್ತಾಫ್ ಇದೇ ತಿಂಗಳು 19ಕ್ಕೆ ದಾವಣಗೆರೆ ಕುಂದವಾಡ ಕೆರೆಯ ಕೂಗಳತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಶವವಾಗಿ ಸಿಕ್ಕಿದ್ದನು. ಇದೀಗ ಅದು ಕೊಲೆ ಎಂದು ದೃಢವಾಗಿದೆ. ಸ್ವತಃ ಅಣ್ಣ ತಮ್ಮನ ಕೊಲೆ ಮಾಡಿದ್ದಾನೆ ಎಂದು ಪೋಲಿಸ್ ತನಿಖೆಯಿಂದ ಸತ್ಯ ಹೊರಬಂದಿದೆ. ಅಣ್ಣ ಇಬ್ರಾಹಿಂ ಮದುವೆ ನಿಶ್ಚಿಯವಾಗಿದ್ದ ಹುಡುಗಿಯ ಮೇಲೆ ತಮ್ಮ ಅಲ್ತಾಫ್ ಕಣ್ ಹಾಕಿದ್ದನಂತೆ. ಇದನ್ನು ಸಹಿಸಿಕೊಳ್ಳದ ಅಣ್ಣ ಇಬ್ರಾಹಿಂ ಇದೇ ತಿಂಗಳು 18ಕ್ಕೆ ಶಾಪಿಂಗ್ ಗಾಗಿ ಕರೆದುಕೊಂಡು ಬಂದಿದ್ದಾನೆ. ಈ ಸಮದರ್ಭದಲ್ಲಿ ಸಹೋದರ ಅಲ್ತಾಫ್ ನ ಕತ್ತು ಸೀಳಿ ಕೊಲೆ ಮಾಡಿ ಕಾಲ್ಕಿತ್ತು, ಇದೀಗ ಪೊಲೀಲಿಸರ ಅಥಿತಿಯಾಗಿದ್ದಾನೆ. ಇದನ್ನೂ ಓದಿ:  ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

    ಆರೋಪಿ ಅಣ್ಣ ಇಬ್ರಾಹಿಂ ಅವರ ಮದುವೆ ಮಾರ್ಚ್ ತಿಂಗಳಲ್ಲಿ ನಿಶ್ಚಯವಾಗಿತ್ತು. ಅದರ ಹಿನ್ನೆಲೆ ಹೆಣ್ಣಿನ ಮನೆಗೆ ನಿಶ್ಚಿತಾರ್ಥದ ಶಾಸ್ತ್ರಕ್ಕೆಂದು ಇಬ್ರಾಹಿಂ ಹಾಗೂ ಅಲ್ತಾಫ್ ಜವಳಿ ಖರೀದಿಗೆಂದು ಜನ.18ಕ್ಕೆ ಸಂಜೆ ದಾವಣಗೆರೆ ಹೋಗಿದ್ದರು. ರಾತ್ರಿ 8.30ರವರೆಗೆ ಫೋನ್ ಸಂಪರ್ಕದಲ್ಲಿದ್ದರು. ನಂತರ ಇದ್ದಕ್ಕಿದ್ದಂತೆ ಒಂದು ಫೋನ್ ಸ್ವಿಚ್ ಆಫ್ ಆಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಆರೋಪಿ ಇಬ್ರಾಹಿಂ ನ ಫೋನ್ ಆನ್ ಇದ್ರೂ ಕಾಲ್ ರೀಸೀವ್ ಮಾಡುತ್ತಿರಲ್ಲ. ತಡರಾತ್ರಿ ಸಹೋದರರಿಬ್ಬರು ಮನೆಗೆ ವಾಪಸ್ ಬಾರದ ಹಿನ್ನೆಲೆ ಕುಟುಂಬದವರು ಹರಿಹರ ನಗರ ಪೊಲೀಸ್ ಠಾಣೆಗೆ ದೂರ ನೀಡಿದ್ರು. ಬುಧವಾರ ಸಂಜೆ ಅಲ್ತಾಫ್ ಶವ ದಾವಣಗೆರೆ ಮಹಾಲಕ್ಷ್ಮೀ ಲೇಔಟ್ ನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇಬ್ರಾಹಿಂ ಹಾಗೂ ಆತನ ಬೈಕ್ ನಾಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಮುಂದುರಿಸಿದ್ದರು. ಇದೀಗ ಹುಡುಗಿ ವಿಚಾರವಾಗಿ ಅಣ್ಣ ಇಬ್ರಾಹಿಂ ಸಹೋದರ ಅಲ್ತಾಫ್ ನ ಕೊಲೆ ಮಾಡಿರುವ ಪ್ರಕರಣವನ್ನು ದಾವಣಗೆರೆ ಪೋಲಿಸರು ಭೇದಿಸಿ ಆರೋಪಿ ಇಬ್ರಾಹಿಂನನ್ನು ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷಿತ್ ಆ್ಯಂಡ್ ಗ್ಯಾಂಗ್‍ನಿಂದ ರಂಪಾಟ

    ಒಟ್ಟಾರೆ ಅಲ್ತಾಫ್ ಕುತ್ತಿಗೆ ಸೀಳಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಆತನ ಮೈ ಮೇಲಿರುವ ಗಾಯಗಳು ಇದು ಕೊಲೆ ಎಂದು ಹೇಳುತ್ತಿದ್ದವು. ಪ್ರಕರಣವನ್ನು ದಾಖಲಿಸಿಕೊಂಡ ವಿದ್ಯಾನಗರ ಠಾಣೆಯ ಪೋಲಿಸರು ಘಟನೆ ನಡೆದ ಒಂದೇ ವಾರದಲ್ಲೀ ಆರೋಪಿ ಇಬ್ರಾಹಿಂ ನ ಹೆಡೆಮುರಿ ಕಟ್ಟಿದ್ದಾರೆ. ಅದೇನೆ ಆಗಲಿ ಹೆಣ್ಣಿನ ವಿಚಾರವಾಗಿ ಮನೆಯಲ್ಲಿ ಕೂತು ದೊಡ್ಡವರ ಸಮ್ಮುಖದಲ್ಲಿ ಬಗಹರಿಸಿಕೊಳ್ಳಬೇಕಾಗಿದ್ದ ವಿಚಾರ ಕೊಲೆಯಲ್ಲಿ ಅಂತ್ಯವಾಗಿರುವುದು ದುರದೃಷ್ಟವೇ ಸರಿ.

    https://www.youtube.com/watch?v=lvZEGrYswyk

  • ಅಣ್ಣ, ತಂಗಿ ಒಂದೇ ಬಾರಿಗೆ ಪಿಎಸ್‌ಐ ಹುದ್ದೆಗೆ ಆಯ್ಕೆ

    ಅಣ್ಣ, ತಂಗಿ ಒಂದೇ ಬಾರಿಗೆ ಪಿಎಸ್‌ಐ ಹುದ್ದೆಗೆ ಆಯ್ಕೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಶಿಹಾಳ ತಾಂಡದ ಅಣ್ಣ, ತಂಗಿ ಇಬ್ಬರೂ ಒಂದೇ ಬಾರಿಗೆ ಪಿಎಸ್‌ಐ ಹುದ್ದೆಗೆ ತೇರ್ಗಡೆಯಾಗುವ ಮೂಲಕ ತಾಂಡದ ಕೀರ್ತಿ ಹೆಚ್ಚಿಸಿದ್ದಾರೆ.

    ಕಾರ್ತಿಕ್ ರಾಠೋಡ್ ಹಾಗೂ ರೂಪಾ ರಾಠೋಡ್ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಸಹೋದರ, ಸಹೋದರಿ. ಇದನ್ನೂ ಓದಿ: ಮುಂಬೈನಲ್ಲಿ ಭಯೋತ್ಪಾದನಾ ನಿಗ್ರಹ ದಳ ಸ್ಥಾಪಿಸಿದ ಮಾಜಿ ಐಪಿಎಸ್ ಅಧಿಕಾರಿ ಇನ್ನಿಲ್ಲ

    ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಸಿವಿಲ್ ಹುದ್ದೆಗಳಿಗೆ 2021ರ ಅಕ್ಟೋಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಕಾರ್ತಿಕ್ ರಾಠೋಡ್ ಹಾಗೂ ರೂಪಾ ರಾಠೋಡ್ ತೇರ್ಗಡೆಯಾಗಿದ್ದಾರೆ. ಬಿಎಸ್ಸಿ ಹಾರ್ಟಿಕಲ್ಚರ್ ಓದಿರುವ ರೂಪಾ ರಾಠೋಡ್ 46 ರ‍್ಯಾಂಕ್, ಬಿಎಸ್ಸಿ ಫಾರೆಸ್ಟ್ ಓದಿರುವ ಕಾರ್ತಿಕ್ ರಾಠೋಡ್ 78 ನೇ ರ‍್ಯಾಂಕ್ ಪಡೆದಿದ್ದಾರೆ.

    ಗುರಗುಂಟಾ ಸರ್ಕಾರಿ ಕಿರಿಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿರುವ ಶಂಕರ್ ರಾಠೋಡ್ ತಮ್ಮ ಮಕ್ಕಳ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

  • ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

    ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

    ಬೆಂಗಳೂರು: ತನ್ನ ಜೊತೆ ಬರಲು ನಿರಾಕರಿಸಿದ ಪ್ರಿಯತಮೆಯ ತಮ್ಮನನ್ನು ಪ್ರೇಮಿಯೊಬ್ಬ ಅಪಹರಿಸಿ ನೀನು ನನ್ನ ಜೊತೆ ಬರದಿದ್ದರೆ ನಿನ್ನ ತಮ್ಮನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವ ಘಟನೆ ನಗರದ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

    kidnap

    ಆರೋಪಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಪ್ರಿಯತಮೆಯ ತಮ್ಮ ವೆಂಕಟೇಶ್‍ನನ್ನು ಆರೋಪಿ ಅಪಹರಿಸಿದ್ದಾನೆ. ಪ್ರಿಯತಮೆ ಬೇರೊಬ್ಬನ ಜೊತೆ ಮದುವೆ ಆಗಿದ್ದಳು. ಆದರೂ ಗಂಡನ ಬಿಟ್ಟು ಪ್ರಿಯಕರನ ಜೊತೆ ಸ್ವಲ್ಪ ದಿನ ಜೀವನ ಮಾಡಿದ್ದಾಳೆ. ಬಳಿಕ ರಾಜಿ ಪಂಚಾಯತಿ ಮಾಡಿ ಗಂಡನ ಮನೆಗೆ ಹೋಗಿದ್ದಾಳೆ. ನಂತರ ಗಂಡನನ್ನೂ ಬಿಟ್ಟು ತವರು ಮನೆ ಬಂದು ಸೇರಿಕೊಂಡಿದ್ದಳು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

    ಪ್ರಿಯತಮೆ ತವರು ಮನೆ ಸೇರಿರುವ ವಿಚಾರ ತಿಳಿದ ಆರೋಪಿ ತನ್ನ ಜೊತೆ ಬರುವಂತೆ ಪೀಡಿಸಿದ್ದಾನೆ. ಈ ವೇಳೆ ಪ್ರಿಯತಮೆ ಬರಲು ಒಪ್ಪದಿದ್ದಾಗ ಆಕೆಯ ತಮ್ಮನ ಕಿಡ್ನಾಪ್ ಮಾಡಿದ್ದಾನೆ. ಅಲ್ಲದೇ ನೀನು ನನ್ನ ಜೊತೆ ಬರದೇ ಹೋದರೆ ನಿನ್ನ ತಮ್ಮನ ಕೊಲೆ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ.  ಇದನ್ನೂ ಓದಿ: ಆನ್‍ಲೈನ್‍ನಲ್ಲಿ ತಾಜ್‍ಮಹಲ್‍ಗೆ ನಕಲಿ ಟಿಕೆಟ್ ಮಾರುತ್ತಿದ್ದ ಟೆಕ್ಕಿ ಅರೆಸ್ಟ್

    kidnap

    ನಂತರ ವೆಂಕಟೇಶ್‍ನನ್ನು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಎಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿಯ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಆತನನ್ನು ಬಂಧಿಸಿ ಪ್ರಿಯತಮೆಯ ತಮ್ಮನ ಜೀವ ಉಳಿಸಿದ್ದಾರೆ.

  • 16ರ ಹುಡುಗಿ ಮೇಲೆ ತಂದೆ, ಸಹೋದರನಿಂದಲೇ 2ವರ್ಷ ನಿರಂತರ ಅತ್ಯಾಚಾರ

    16ರ ಹುಡುಗಿ ಮೇಲೆ ತಂದೆ, ಸಹೋದರನಿಂದಲೇ 2ವರ್ಷ ನಿರಂತರ ಅತ್ಯಾಚಾರ

    ಮುಂಬೈ: 16 ವರ್ಷದ ಹುಡುಗಿಯೊಬ್ಬಳು ತನ್ನ ತಂದೆ ಹಾಗೂ ಸಹೋದರ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ತನ್ನ ಮೇಲೆ ಅತ್ಯಾಚಾರ ವೆಸಗಿರುವುದಾಗಿ ಆರೋಪಿಸಿದ್ದಾಳೆ. ಸದ್ಯ ಪೊಲೀಸರು ತಂದೆ ಹಾಗೂ ಮಗ ಇಬ್ಬರನ್ನು ಬಂಧಿಸಿದ್ದಾರೆ.

    10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ಶಿಕ್ಷಕಿ ಮತ್ತು ಪ್ರಾಂಶುಪಾಲರ ಬಳಿ ಈ ವಿಚಾರವನ್ನು ಹೇಳಿಕೊಂಡಾಗ ಸತ್ಯ ಬಹಿರಂಗಗೊಂಡಿದೆ. ನಂತರ ಶಾಲಾ ಅಧಿಕಾರಿಗಳು ಎನ್‍ಜಿಒ ಸಂಪರ್ಕಿಸಿದ್ದು, ಪೊಲೀಸರಿಗೆ ಘಟನೆ ಕುರಿತಂತೆ ದೂರು ದಾಖಲಿಸುವಂತೆ ಹುಡುಗಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ – ಕಾಳಿಚರಣ್ ಮಹಾರಾಜ್ ಬಂಧನ

    2019ರ ಜನವರಿಯಲ್ಲಿ ತನ್ನ 43 ವರ್ಷದ ತಂದೆ ಮೊದಲ ಬಾರಿಗೆ ಆಕೆ ಒಂಟಿಯಾಗಿ ಮಲಗಿದ್ದನ್ನು ಕಂಡು ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿಸಿದ್ದಾಳೆ. ಬಳಿಕ ಆಕೆಯ 20 ವರ್ಷದ ಸಹೋದರ ಕೂಡ ಕಿರುಕುಳ ನೀಡಿರುದಾಗಿ ತಿಳಿಸಿದ್ದಾಳೆ. ತನ್ನ ತಂದೆ ಹಾಗೂ ಸಹೋದರ ಇದೇ ರೀತಿ ತನ್ನ ತಂಗಿಗೂ ಸಹ ಲೈಂಗಿಕವಾಗಿ ಕಿರುಕುಳ ನೀಡುತ್ತಾರೆ ಎಂಬ ಭಯದಿಂದ ಇದೀಗ ತನ್ನ ಕಷ್ಟವನ್ನು ಶಿಕ್ಷಕಿಯರ ಬಳಿ ಹೇಳಿಕೊಂಡಿರುವುದಾಗಿ ತಿಳಿಸಿದ್ದಾಳೆ.

    ಬಾಲಕಿ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆ ಸಂಬಂಧಿಸಿದ ಸೆಕ್ಷನ್‍ಗಳ ಅಡಿ ಪೊಲೀಸತು ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಗಿಯ ತಂದೆ ಹಾಗೂ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಕೆ

  • ಆಟವಾಡುತ್ತಾ ಚರಂಡಿಗೆ ಬಿದ್ದು ಪ್ರಾಣ ಬಿಟ್ಟ ಅಕ್ಕ, ತಮ್ಮ

    ಆಟವಾಡುತ್ತಾ ಚರಂಡಿಗೆ ಬಿದ್ದು ಪ್ರಾಣ ಬಿಟ್ಟ ಅಕ್ಕ, ತಮ್ಮ

    ಲಕ್ನೋ: ಮನೆಯಿಂದಾಚೆ ಆಟವಾಡುತ್ತಿದ್ದ ಅಕ್ಕ, ತಮ್ಮ ಇಬ್ಬರು ಚರಂಡಿಗೆ ಬಿದ್ದು ಸಾವನ್ನಪಿರುವ ಘಟನೆ ನಡೆದಿದೆ.

    ರುಬೀನಾ (9) ಹತ್ತು ತಿಂಗಳ ಕಿರಿಯ ಸಹೋದರ ಸುಮಿತ್ ಕುಮಾರ್ ಮೃತರಾಗಿದ್ದಾರೆ. ಇಬ್ಬರು ಆಟವಾಡುತ್ತಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ. ಚರಂಡಿ ಸುಮಾರು 15 ಅಡಿ ಆಳವಿದ್ದುದರಿಂದ ಮಕ್ಕಳಿಬ್ಬರು ಸಾವನ್ನಪಿದ್ದಾರೆ.

    ಬಿಹಾರದ ಸಮಸ್ತಿಪುರದ ನಿವಾಸಿ ಶಂಭು ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದಾರೆ. ಸೋಮವಾರ ಸಂಜೆ 4:30ಕ್ಕೆ ಹಿರಿಯ ಮಗಳು ರುಬೀನಾ, ಸುಮಿತ್ ಕುಮಾರ್‍ನ ಜೊತೆ ಮನೆ ಬಳಿ ಆಟವಾಡುತ್ತಿದ್ದರು. ಈ ವೇಳೆ ಇಬ್ಬರೂ ಅನುಮಾನಾಸ್ಪದವಾಗಿ ಚರಂಡಿಗೆ ಬಿದ್ದಿದ್ದಾರೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ಮಕ್ಕಳಿಬ್ಬರು ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಅವರನ್ನು ಹುಡುಕತೊಡಗಿದಾಗ ಸುಮಾರು ಅರ್ಧ ಗಂಟೆಯ ನಂತರ ರುಬೀನಾ ಮತ್ತು ಅವಳ ಸಹೋದರ ಚರಂಡಿಯಲ್ಲಿ ಕಂಡು ಬಂದಿದೆ. ಚರಂಡಿಯಿಂದ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಬ್ಬರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು

  • ಮತಾಂತರವಾಗುವಂತೆ ಅಣ್ಣನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ತಮ್ಮ

    ಮತಾಂತರವಾಗುವಂತೆ ಅಣ್ಣನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ತಮ್ಮ

    ಮೈಸೂರು: ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ತಮ್ಮನೆ ಒಡಹುಟ್ಟಿದ ಅಣ್ಣ ಮತ್ತು ಅಣ್ಣನ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಟೈಗರ್ ಬ್ಲಾಕ್ ನಲ್ಲಿ ನಡೆದಿದೆ.

    ಮನೋಹರ್ ಎಂಬಾತ 20 ವರ್ಷದ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ನನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡಿದ್ದಾರೆ ಎಂದು ಯದುನಂದನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯದುನಂದನ್, ನನ್ನ ತಮ್ಮ ಮನೋಹರ್ ಮತಾಂತರಗೊಂಡು 20 ವರ್ಷವಾಗಿತ್ತು. ಈ ಹಿಂದೆ ಮನೋಹರ್ ಬೇರೆ ಊರಿನಲ್ಲಿ ನೆಲೆಸಿದ್ದ ಆ ಬಳಿಕ 7 ವರ್ಷಗಳ ಹಿಂದೆ ಬಳಿಕ ಈ ಊರಿಗೆ ಬಂದಿದ್ದಾನೆ. ಇಲ್ಲಿಗೆ ಬಂದು ಮತಾಂತರಕ್ಕೆ ಯತ್ನಿಸುತ್ತಿದ್ದಾನೆ. ಆತ ನಮ್ಮ ಹಿಂದೂ ದೇವರ ಫೋಟೋಗಳು ಅಪ್ರಯೋಜಕ. ಏಸು ದೇವರು ಒಬ್ಬರೇ ನಿಜವಾದ ದೇವರು ಎಂದು ನಮಗೆ ಮತಾಂತರವಾಗಲು ನಿರಂತರ ಕಿರುಕುಳ ನೀಡಿದ್ದಾನೆ. ನಾವು ಪ್ರತಿಬಾರಿ ಮತಾಂತರವಾಗಲು ಒಪ್ಪಿಕೊಂಡಿಲ್ಲ. ಹಾಗಾಗಿ ನಮಗೆ ಕಿರುಕುಳ ಕೊಡುತ್ತಿದ್ದಾನೆ. ಕೆಲದಿನಗಳ ಹಿಂದೆ ಮನೋಹರ್ ಏಕಾಏಕಿ ಮನೆಗೆ ಬಂದು ನನಗೆ ಮತ್ತು ನನ್ನ ಹೆಂಡತಿಗೆ ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

    ಮನೋಹರ್ ಎಚ್.ಡಿ. ಕೋಟೆಯಲ್ಲಿ ಹಲವು ಜನರನ್ನು ಮತಾಂತರ ಮಾಡಿದ್ದಾನೆ. ಹಾಗಾಗಿ ಈತನ ಬಗ್ಗೆ ನಾವು ದೂರನ್ನು ನೀಡಿದ್ದೇವೆ ಆದರು ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೆ ಬಲವಂತದ ಮತಾಂತರಕ್ಕೆ ಯತ್ನಿಸಿ ಹಲ್ಲೆ ಮಾಡಿದ ಸಹೋದರ ಮನೋಹರ್ ವಿರುದ್ಧ ಯದುನಂದನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಏಳು ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

  • ರಿಕ್ಷಾ ಕೊಡಿಸೆಂದು ತಾಯಿ ಜೊತೆ ಜಗಳವಾಡ್ತಿದ್ದವ ಸಹೋದರನಿಂದ್ಲೇ ಕೊಲೆಯಾದ!

    ರಿಕ್ಷಾ ಕೊಡಿಸೆಂದು ತಾಯಿ ಜೊತೆ ಜಗಳವಾಡ್ತಿದ್ದವ ಸಹೋದರನಿಂದ್ಲೇ ಕೊಲೆಯಾದ!

    ಶಿವಮೊಗ್ಗ: ಆಟೋ ಕೊಡಿಸಿ ಎಂದು ತಾಯಿ ಜೊತೆ ಜಗಳವಾಡುತ್ತಿದ್ದವನನ್ನು ಸಹೋದರನೇ ಕೊಲೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

    ಗುರುಪ್ರಸಾದ್ (26) ಕೊಲೆಯಾಗಿರುವ ಯುವಕ. ಈ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ. ಗುರುಪ್ರಸಾದ್ ನನ್ನು ಸಹೋದರ ವಿಶ್ವನಾಥ್ ಕೊಲೆ ಮಾಡಿದ್ದಾನೆ.

    ತನಗೆ ಆಟೋ ಕೊಡಿಸಿ ಇಲ್ಲವಾದರೆ ಆಸ್ತಿಯಲ್ಲಿ ಭಾಗ ಮಾಡಿಕೊಡಿ ಎಂದು ಗುರುಪ್ರಸಾದ್ ತನ್ನ ತಾಯಿ ಜೊತೆ ಜಗಳವಾಡುತ್ತಿದ್ದನು. ಈ ವೇಳೆ ಸಹೋದರ ವಿಶ್ವನಾಥ್, ನೀನೇ ದುಡಿದು ಆಟೋ ಕೊಂಡುಕೊಳ್ಳುವಂತೆ ಬುದ್ಧಿಮಾತು ಹೇಳಿದ್ದಾನೆ. ಅಲ್ಲದೆ ಅಮ್ಮ ಏಕೆ ನಿನಗೆ ಆಟೋ ಕೊಡಿಸಬೇಕು ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ವಿಶ್ವನಾಥ್, ಗುರುಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾನೆ.

    ಗಾರೆ ಕೆಲಸಕ್ಕೆ ಬಳಸುವ ಆಯುಧದಿಂದ ಹಲ್ಲೆಗೈದಿದ್ದು, ಈ ವೇಳೆ ಮಟ್ಟಗೋಲು ಆತನ ತಲೆಗೆ ತಾಗಿದೆ. ಪರಿಣಾಮ ತಲೆ ಮತ್ತು ಕಿವಿ ಭಾಗದಲ್ಲಿ ರಕ್ತಸ್ರಾವವಾಗಿ ಗುರುಪ್ರಸಾದ್ ಮೃತಪಟ್ಟಿದ್ದಾನೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಡಿಲು ಬಡಿತದಿಂದ ವ್ಯಕ್ತಿ ಜಸ್ಟ್ ಮಿಸ್ – ಬೆಚ್ಚಿ ಬೀಳಿಸುವ ವೀಡಿಯೋ ವೈರಲ್

    POLICE JEEP

  • ಮನೆಗೆ ತಡವಾಗಿ ಬಂದ ತಮ್ಮನನ್ನು ಅಣ್ಣ ಪ್ರಶ್ನಿಸಿದ್ದೇ ತಪ್ಪಾಯ್ತು!

    ಮನೆಗೆ ತಡವಾಗಿ ಬಂದ ತಮ್ಮನನ್ನು ಅಣ್ಣ ಪ್ರಶ್ನಿಸಿದ್ದೇ ತಪ್ಪಾಯ್ತು!

    ಬೆಂಗಳೂರು: ಮನೆಗೆ ತಡವಾಗಿ ಬಂದಾಗ ಅಣ್ಣ ಪ್ರಶ್ನಿಸಿದ್ದಕ್ಕೆ ತಮ್ಮ ಶೂಟ್ ಮಾಡಿಕೊಳ್ಳಲು ಮುಂದಾದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಈ ಘಟನೆ ಡಿ.20 ರ ಮುಂಜಾನೆ ನಗರದ ಬಿಟಿಎಂ ಲೇಔಟ್ ಮೊದಲನೇ ಹಂತದಲ್ಲಿ ನಡೆದಿದೆ. ಸ್ನೇಹಿತ ಫೈಜಲ್ ಜೊತೆ ಸಲ್ಮಾನ್ ಮನೆಗೆ ತಡವಾಗಿ ಬಂದಿದ್ದಾನೆ. ಹೀಗೆ ತಡವಾಗಿ ಬಂದಿದ್ದನ್ನು ನೋಡಿ ಅಣ್ಣ ಅಮಿನ್ ದಾದ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಅಣ್ಣನ ಲೈಸೆನ್ಸ್ ಪಿಸ್ತೂಲ್ ತೆಗೆದುಕೊಂಡು ಶೂಟ್ ಮಾಡಿಕೊಳ್ಳಲು ಮುಂದಾಗಿದ್ದಾನೆ.

    ಅದನ್ನ ಬಿಡಿಸಲು ಹೋದಾಗ ಮೂರು ರೌಂಡ್ಸ್ ಫೈರ್ ಮಾಡಲಾಗಿದೆ. ಘಟನೆಯಲ್ಲಿ ಸಲ್ಮಾನ್ ಸ್ನೇಹಿತ ಫೈಜಲ್ ಕೈಗೆ ಗುಂಡು ತಗುಲಿದೆ. ಕೂಡಲೇ ಫೈಜಲ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಘಟನೆ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಗಸದಲ್ಲಿ ಕೌತುಕ – ಸರತಿಸಾಲಿನಲ್ಲಿ ಗೋಚರಿಸಿದ ಅಮೆರಿಕದ 52 ಉಪಗ್ರಹಗಳು

  • ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಣ್ಣ ಅರೆಸ್ಟ್

    ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಣ್ಣ ಅರೆಸ್ಟ್

    ಮೈಸೂರು: ಅಣ್ಣನೇ ತಂಗಿಯನ್ನು ಅತ್ಯಾಚಾರ ಮಾಡಿದ ಹೇಯ ಕೃತ್ಯವೊಂದು ಮೈಸೂರಿನಲ್ಲಿ ನಡೆದಿದ್ದು, ಇದೀಗದ ಪ್ರಕರಣ ಸಂಬಂಧ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

    ಹೌದು. ಅರಮನೆ ನಗರಿಯ ಗಿರಿದರ್ಶಿನಿ ನಗರದಲ್ಲಿ ಸ್ವಂತ ಅಣ್ಣನೇ ಅಪ್ರಾಪ್ತ ಸಹೋದರಿಯ ಮೇಲೆ ತನ್ನ ಕಾಮತೃಷೆ ನೀಗಿಸಿಕೊಂಡಿದ್ದಾನೆ. ಆರೋಪಿಯನ್ನು ವಿನಯ್ ಕುಮಾರ್ ಎಂದು ಗುರುತಿಸಲಾಗಿದೆ. ಈತನ ಕಾಮದಾಟಕ್ಕೆ ಇದೀಗ ತಂಗಿ ಗರ್ಭಿಣಿಯಾಗಿದ್ದಾಳೆ.

    ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಯನ್ನ ಕಳೆದುಕೊಂಡಿದ್ದ 16 ವರ್ಷದ ಅಪ್ರಾಪ್ತೆ, ಅಣ್ಣನ ಜೊತೆ ವಾಸವಾಗಿದ್ದಳು. ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ಅಕ್ಕಂದಿರೊಂದಿಗೆ ಜೀವನ ಸಾಗಿಸುತ್ತಿದ್ದಳು. ಅಕ್ಕಂದಿರಿಗೆ ವಿವಾಹವಾದ ಕಾರಣ ಇಬ್ಬರು ಅಣ್ಣಂದಿರ ಜೊತೆ ಆಶ್ರಯ ಪಡೆದಿದ್ದಳು.

    ಕುಡಿತದ ಚಟಕ್ಕೆ ಬಲಿಯಾಗಿದ್ದ ಓರ್ವ ಅಣ್ಣ ಪಾನಮತ್ತನಾದ ಸಮಯದಲ್ಲಿ ಸ್ವಂತ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮೂರು ತಿಂಗಳಿಂದ ಅತ್ಯಾಚಾರವೆಸಗಿದ್ದಾನೆ. ಇದನ್ನೂ ಓದಿ: ಮೈಸೂರು ಗ್ಯಾಂಗ್‌ ರೇಪ್: ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

    POLICE JEEP

    ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಮ್ಮನ ಸಾವಿನ ಸುದ್ದಿ ತಿಳಿದು ನೇಣಿಗೆ ಶರಣಾದ ಅಕ್ಕ

    ತಮ್ಮನ ಸಾವಿನ ಸುದ್ದಿ ತಿಳಿದು ನೇಣಿಗೆ ಶರಣಾದ ಅಕ್ಕ

    ಹಾವೇರಿ: ತಮ್ಮನ ಸಾವಿನ ಸುದ್ದಿ ತಿಳಿದು ಮನೆಗೆ ಬಂದು ಅಕ್ಕನೂ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ವಿನಾಯಕ ನಗರದಲ್ಲಿ ನಡೆದಿದೆ.

    ನಾಗರಾಜ್ ಚಲವಾದಿ(16), ಭಾಗ್ಯಶ್ರೀ(18) ಮೃತರಾಗಿದ್ದಾರೆ. ಸರಿಯಾಗಿ ಶಾಲೆಗೆ ಹೋಗು ಅಂದಿದ್ದಕ್ಕೆ ಬಾಲಕ ನೇಣಿಗೆ ಶರಣಾಗಿದ್ದನು. ತಮ್ಮ ಸಾವಿಗೆ ಸುದ್ದಿ ಕೇಳಿ ಅಕ್ಕನೂ ನೇಣಿಗೆ ಶರಣಾಗಿದ್ದು, ಸಾವಿನಲ್ಲೂ ಅಕ್ಕ, ತಮ್ಮ ಒಂದಾಗಿದ್ದಾರೆ.

    ಸರಿಯಾಗಿ ಶಾಲೆಗೆ ಹೋಗು ಅಂದಿದ್ದಕ್ಕೆ ಮನೆಯ ಮೇಲಿನ ಕೊಠಡಿಯಲ್ಲಿ ಬಾಲಕ ನಾಗರಾಜ್ ನೇಣಿಗೆ ಶರಣಾಗಿದ್ದಾನೆ. ತಮ್ಮನ ಸಾವಿನ ಸುದ್ದಿ ಕೇಳಿದ ಭಾಗ್ಯಶ್ರೀ ಮನೆಗೆ ಬಂದು ಅದೇ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಬ್ಬರ ಮರಣೋತ್ತರ ಪರೀಕ್ಷೆ ನಂತರ ಅಕ್ಕ ತಮ್ಮನ ಅಂತ್ಯಕ್ರಿಯೆ ಕುಟುಂಬಸ್ಥರು ನೆರವೇರಿಸಿದ್ದಾರೆ. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!

    ಬೆಳಿಗ್ಗೆ ನಾಗರಾಜ್ ಮೃತಪಟ್ಟಿದ್ದು, ನಾಗರಾಜನ ಸಾವಿನ ಸುದ್ದಿ ತಿಳಿದು 12 ಗಂಟೆಗೆ ಅಕ್ಕ ಬಾಗ್ಯಶ್ರೀ ಮೃತಪಟ್ಟಿದ್ದಾಳೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಕ್ಕ ತಮ್ಮ ಸಾವಿಗೆ ಈಡೀ ಬ್ಯಾಡಗಿ ಪಟ್ಟಣದ ಜನರು ಹಾಗೂ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.