Tag: brother

  • ಗ್ರಾಮದ ಯುವತಿಯನ್ನ ಅಣ್ಣ ಪ್ರೀತ್ಸಿದ್ದಕ್ಕೆ ತಂಗಿಯನ್ನ ನಗ್ನಗೊಳಿಸಿ ಮೆರವಣಿಗೆ ಮಾಡಿದ್ರು

    ಗ್ರಾಮದ ಯುವತಿಯನ್ನ ಅಣ್ಣ ಪ್ರೀತ್ಸಿದ್ದಕ್ಕೆ ತಂಗಿಯನ್ನ ನಗ್ನಗೊಳಿಸಿ ಮೆರವಣಿಗೆ ಮಾಡಿದ್ರು

    ಇಸ್ಲಾಮಾಬಾದ್: ಗ್ರಾಮದ ಯುವತಿಯನ್ನ ಯುವಕ ಪ್ರೀತಿಸಿದ್ದಕ್ಕೆ ಆಕೆಯ ತಂಗಿಯನ್ನ ನಗ್ನಗೊಳಿಸಿ 1 ಗಂಟೆ ಕಾಲ ಮೆರವಣಿಗೆ ಮಾಡೋ ಮೂಲಕ ಶಿಕ್ಷಿಸಿರೋ ಅಮಾನವೀಯ ಘಟನೆ ಪಾಕಿಸ್ತಾನದ ಖೈಬರ್ ಫಕ್ತುಂಕ್ವಾ ಪ್ರಾಂತ್ಯದಲ್ಲಿ ನಡೆದಿದೆ.

    ಇಲ್ಲಿನ ದೇರಾ ಇಸ್ಮೈಲ್ ಖಾನ್ ಮಟ್ ಪ್ರದೇಶದಲ್ಲಿ ಅಕ್ಟೋಬರ್ 27ರಂದು ಈ ಘಟನೆ ನಡೆದಿದೆ. 16 ವರ್ಷದ ಬಾಲಕಿ ನೀರು ತೆಗೆದುಕೊಂಡು ಮನೆಗೆ ಹಿಂದಿರುಗುವಾಗ ಕೆಲವರು ಆಕೆಯನ್ನ ಸುತ್ತುವರಿದಿದ್ದಾರೆ. ನಂತರ ಆಕೆಯನ್ನ ವಿವಸ್ತ್ರಗೊಳಿಸಿ ಆ ಪ್ರದೇಶದಲ್ಲಿ ನಡೆಯುವಂತೆ ಮಾಡಿದ್ದಾರೆ. ಈ ವೇಳೆ ಭಯದಿಂದ ಯಾರೊಬ್ಬರೂ ಆಕೆಯ ಸಹಾಯಕ್ಕೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

    ಯುವತಿಯ ಅಣ್ಣ ಸಜ್ಜದ್ ಅದೇ ಗ್ರಾಮದ ಯುವತಿಯನ್ನ ಮೂರು ವರ್ಷಗಳ ಹಿಂದೆ ಪ್ರೀತಿಸುತ್ತಿದ್ದ ಎಂದು ವರದಿಯಾಗಿದೆ. ಗ್ರಾಮದ ಪಂಚಾಯ್ತಿಯಲ್ಲಿ ಈ ವಿಷಯವನ್ನ ಚರ್ಚಿಸಿ ಸಜ್ಜದ್ ಕುಟುಂಬಕ್ಕೆ 1 ಲಕ್ಷ 5 ಸಾವಿರ ರೂ. ದಂಡ ಕೂಡ ವಿಧಿಸಲಾಗಿತ್ತು. ಆದ್ರೆ ಗ್ರಾಮಸ್ಥರು ಸಜ್ಜದ್ ಕುಟುಂಬದ ವಿರುದ್ಧ ದ್ವೇಷ ಇಟ್ಟುಕೊಂಡು ಆಕೆಯ ತಂಗಿಗೆ ಶಿಕ್ಷೆ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ.

    ಬಾಲಕಿಗೆ ಶಿಕ್ಷಿಸಿದ ಹಿನ್ನೆಲೆಯಲ್ಲಿ ಈಗಾಗಲೇ 8 ಆರೋಪಿಗಳನ್ನ ಬಂಧಿಸಲಾಗಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಖೈಬರ್ ಫಕ್ತುಂಕ್ವಾ ಸಿಎಂ ಪರ್ವೇಸ್ ಖಟ್ಟಕ್ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

  • ಭೂಗತ ಪಾತಕಿ ದಾವೂದ್ ಬೇಟೆಯತ್ತ ಹೆಜ್ಜೆ – ಮುಂಬೈನಲ್ಲಿ ಡಾನ್ ತಮ್ಮ ಅರೆಸ್ಟ್

    ಭೂಗತ ಪಾತಕಿ ದಾವೂದ್ ಬೇಟೆಯತ್ತ ಹೆಜ್ಜೆ – ಮುಂಬೈನಲ್ಲಿ ಡಾನ್ ತಮ್ಮ ಅರೆಸ್ಟ್

    ಮುಂಬೈ: ಇಂಗ್ಲೆಂಡ್‍ನಲ್ಲಿರುವ ಆಸ್ತಿ-ಪಾಸ್ತಿ ಜಪ್ತಿ ಬೆನ್ನಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಮತ್ತೊಂದು ಶಾಕ್ ಸಿಕ್ಕಿದೆ. ಸುಲಿಗೆ ಪ್ರಕರಣದಲ್ಲಿ ದಾವೂದ್ ತಮ್ಮ ಇಕ್ಬಲ್ ಕಸ್ಕರ್‍ನನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿದ್ದಾರೆ.

    ಮುಂಬೈನ ನಾಗ್‍ಪಾಡಾದಲ್ಲಿರುವ ಮನೆಯಿಂದ ಎನ್‍ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ನೇತೃತ್ವದ ತಂಡ ಕಸ್ಕರ್ ನನ್ನು ಬಂಧಿಸಿದೆ. ಮುಂಬೈನಲ್ಲಿ ನಾಲ್ಕು ಫ್ಲ್ಯಾಟ್ ನೀಡಿದ್ರೂ ಮತ್ತಷ್ಟು ಫ್ಲ್ಯಾಟ್ ನೀಡುವಂತೆ ಬೆದರಿಕೆ ಹಾಕಿದ್ದ ಅಂತ ಬಿಲ್ಡರೊಬ್ಬರು ನೀಡಿದ್ದ ದೂರಿನ ಮೇಲೆ ಕಸ್ಕರ್‍ನನ್ನು ಜೈಲಿಗಟ್ಟಲಾಗಿದೆ.

    2003ರಲ್ಲಿ ಕಸ್ಕರ್‍ನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಯುಎಇಯಿಂದ ಗಡಿಪಾರು ಮಾಡಲಾಗಿತ್ತು. ಪಾಕಿಸ್ತಾನದ ಕರಾಚಿಯಲ್ಲಿ ಅಡಗಿಕೊಂಡಿರುವ ದಾವೂದ್‍ನನ್ನು ಭಾರತಕ್ಕೆ ಕರೆತರುವಲ್ಲಿ ಆತನ ತಮ್ಮನ ಬಂಧನ ಮಹತ್ವದ ಹೆಜ್ಜೆ ಎಂದೇ ಭಾವಿಸಲಾಗಿದೆ.

    ದಾವೂದ್ ಬಗ್ಗೆ ಈಗ ಮಾತಾಡೋದು ಬೇಡ. ಆ ವಿಷ್ಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಆತನನ್ನು ಸುಮ್ಮನೆ ಬಿಡಲಾಗದು ಎಂದು ಇತ್ತೀಚೆಗಷ್ಟೇ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಹೇಳಿದ್ದರು.

  • ಅಣ್ಣ ಬೈದನೆಂದು ಮನನೊಂದು ತಂಗಿ ನೇಣಿಗೆ ಶರಣು!

    ಅಣ್ಣ ಬೈದನೆಂದು ಮನನೊಂದು ತಂಗಿ ನೇಣಿಗೆ ಶರಣು!

    ನವದೆಹಲಿ: 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದ 24ನೇ ಉತ್ತರ ಪರಗಣದಲ್ಲಿ ನಡೆದಿದೆ.

    ದಿನದಲ್ಲಿ ಅತೀ ಹೆಚ್ಚು ಸಮಯವನ್ನು ಫೇಸ್‍ಬುಕ್ ನಲ್ಲೇ ಕಾಲ ಕಳೆಯುವುದನ್ನು ಸಹೋದರ ಪ್ರಶ್ನಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎನ್ನಲಾಗುತ್ತದೆ.

    ಏನಿದು ಘಟನೆ?: 11 ತರಗತಿ ಓದಿತ್ತಿರೋ ವಿದ್ಯಾರ್ಥಿನಿ ದಿನದಲ್ಲಿ ಅತೀ ಹೆಚ್ಚು ಸಮಯ ಫೇಸ್ ಬುಕ್ ನಲ್ಲಿ ಕಳೆಯುತ್ತಿದ್ದಳು. ಇದನ್ನು ಆಕೆಯ ಸಹೋದರ ಪ್ರಶ್ನಿಸಿದ್ದಾನೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಆಕೆಯ ಬೆಡ್ ರೂಮ್ ನಲ್ಲೇ ತನ್ನ ಬಟ್ಟೆಯಿಂದಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ವಿದ್ಯಾರ್ಥಿನಿ ಕೈಗೆ ಮೊಬೈಲ್ ಬಂದಾಗಿನಿಂದಲೂ ಆಕೆ ಅದರಲ್ಲೇ ದಿನ ಕಳೆಯುತ್ತಿದ್ದಳು. ಸರಿಯಾಗಿ ಊಟನೂ ಸೇವಿಸುತ್ತಿರಲಿಲ್ಲ. ಓದಿನ ಕಡೆಗೂ ಗಮನ ಕೊಡುತ್ತಿರಲಿಲ್ಲ. ಇಷ್ಟು ಮಾತ್ರವಲ್ಲದೇ ಶಾಲೆಗೆ ಹೋಗಲು ಆಸಕ್ತಿಯಿರಲಿಲ್ಲ ಅಂತ ವಿದ್ಯಾರ್ಥಿನಿಯ ತಾಯಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆಯೂ ಆಕೆಯ ಸಹೋದರ ಬೈದಿದ್ದಾನೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಅದೇ ದಿನ ಸಂಜೆ ಮನೆಯವರೆಲ್ಲಾ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ಸಂಬಂಧಿಕರನ್ನು ನೋಡಲೆಂದು ತೆರಳಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊರಗಡೆ ಹೋಗಿದ್ದ ಮನೆಯವರು ಸುಮಾರು 8 ಗಂಟೆಯ ವೇಳೆಗೆ ಮನೆಗೆ ವಾಪಾಸ್ಸಾದ ಸಂದರ್ಭದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಆಕೆ ಇಂತಹ ಕಠಿಣ ನಿರ್ಧಾರಕ್ಕೆ ಬಂದಿದ್ದಾಳೆಂದು ನನಗೆ ಅರ್ಥವಾಗುತ್ತಿಲ್ಲ. ಸಾಯುವುದಕ್ಕೂ ಒಂದು ದಿನ ಮೊದಲೇ ಆಕೆ `I Am Dead’ ಅಂತ ತನ್ನ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾಳೆ. ಅಲ್ಲದೇ ಫೇಸ್ ಬುಕ್ ನಲ್ಲೂ `ಜೀವನದಲ್ಲಿ ಎಲ್ಲಾ ಆಸೆಗಳನ್ನು ಕಳೆದುಕೊಳ್ಳುತ್ತಿದ್ದೇನೆ’ ಅಂತನೂ ಹಾಕಿಕೊಂಡಿದ್ದಳು ಅಂತ ವಿದ್ಯಾರ್ಥಿನಿಯ ಸಹೋದರಿ ಹೇಳಿದ್ದಾರೆ.

    ಸದ್ಯ ಘಟನೆಯ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂಬುವುದಾಗಿ ವರದಿಯಾಗಿದೆ.

  • 22 ವರ್ಷದ ಗರ್ಭಿಣಿ ಪತ್ನಿಯನ್ನ ಕೊಲೆಗೈದ ಪಾಪಿ ಪತಿ!

    22 ವರ್ಷದ ಗರ್ಭಿಣಿ ಪತ್ನಿಯನ್ನ ಕೊಲೆಗೈದ ಪಾಪಿ ಪತಿ!

    ನವದೆಹಲಿ: ಶೀಲ ಶಂಕಿಸಿ 22 ವರ್ಷದ ತನ್ನ ಗರ್ಭಿಣಿ ಪತ್ನಿಯನ್ನ ವ್ಯಕ್ತಿಯೊಬ್ಬ ಕತ್ತು ಹಿಸುಕಿ ಕೊಲೆಗೈದ ಘಟನೆ ದೆಹಲಿಯ ಜಹಾಂಗೀರ್ ನಲ್ಲಿ ನಡೆದಿದೆ.

    ಸಿಮ್ರನ್ ಮೃತ ದುರ್ದೈವಿ ಗರ್ಭಿಣಿಯಾಗಿದ್ದು, ಈಕೆಯನ್ನು ಪತಿ ಆಶುಪಾಲ್ ಕೊಲೆಗೈದಿದ್ದಾನೆ. ಈ ದಂಪತಿಗೆ ಹೆಣ್ಣು ಮಗುವೊಂದಿದೆ.

    ಶನಿವಾರ ಬೆಳಗ್ಗೆ ಸಿಮ್ರನ್ ಸಹೋದರ ಆಕೆಗೆ ಕರೆ ಮಾಡಿದ್ದಾರೆ. ಈ ವೇಳೆ ಸಿಮ್ರನ್ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಆತ ನೇರವಾಗಿ ಸಿಮ್ರನ್ ಮನೆಗೆ ಬಂದಿದ್ದಾರೆ. ಆದ್ರೆ ಅದಾಗಲೇ ಮನೆಗೆ ಬಾಗಿಲು ಹಾಕಿ ಆಶುಪಾಲ್ ಮಾರ್ಕೆಟ್‍ಗೆ ಹೋಗಲು ರೆಡಿಯಾಗುತ್ತಿದ್ದ. ಸಿಮ್ರನ್ ಬಗ್ಗೆ ಸಹೋದರ ವಿಚಾರಿಸಿದಾಗ ಆಕೆಗೆ ಸ್ವಲ್ಪ ಆರೋಗ್ಯ ಸರಿಯಿಲ್ಲ. ಹೀಗಾಗಿ ಮಲಗಿದ್ದಾಳೆ ಅಂತ ಹೇಳಿದ್ದಾನೆ.

    ಸಹೋದರ ಸಿಮ್ರಾನ್ ಗೆ ಮತ್ತೆ ಕರೆ ಮಾಡಿದ್ದು, ಈ ವೇಳೆಯೂ ಆಕೆ ಕರೆ ಸ್ವೀಕರಿಸಲಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡ ಸಹೋದರ ಮನೆಯ ಬಾಗಿಲು ಒಡೆದು ಒಳ ಹೋಗಿದ್ದಾನೆ. ಆಗ ಮನೆಯೊಳಗೆ ಸಿಮ್ರನ್ ಕೊಲೆಯಾಗಿರುವುದನ್ನು ಕಂಡು ಸಹೋದರ ದಂಗಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ, ಶವವನ್ನು ವಶಕ್ಕೆ ಪಡೆದಿದ್ದಾರೆ.

    ತನ್ನ ಪತ್ನಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತ ಸಂಶಯಿಸಿ ಪತಿ ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸಿಮ್ರಾನ್ ಕೊಲೆಯ ಮೊದಲು ಆಶುಪಾಲ್ ಮಗಳನ್ನು ಅಜ್ಜಿಮನೆಗೆ ಕಳುಹಿಸಿದ್ದನು ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆಯ ಬಳಿಕ ಪತಿ ನಾಪತ್ತೆಯಾಗಿದ್ದು. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಮರ್ಯಾದಾ ಹತ್ಯೆ: ಸೋದರಿಯನ್ನ ಚಾಕುವಿನಿಂದ ಚುಚ್ಚಿ..ಚುಚ್ಚಿ ಕೊಂದ ಸಹೋದರ

    ಮರ್ಯಾದಾ ಹತ್ಯೆ: ಸೋದರಿಯನ್ನ ಚಾಕುವಿನಿಂದ ಚುಚ್ಚಿ..ಚುಚ್ಚಿ ಕೊಂದ ಸಹೋದರ

    ಲಾಹೋರ್: ಮನೆಯ ಪೋಷಕರ ನಡುವೆಯೂ ಸಹೋದರಿ ಬೇರೊಬ್ಬ ಯುವಕನನ್ನು ಮದುವೆಯಾಗಿದಕ್ಕೆ ಕುಪಿತಗೊಂಡ ಸಹೋದರ ಹರಿತವಾದ ಚಾಕುವಿನಿಂದ ಆಕೆಯನ್ನು ಹಲವು ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‍ನಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 25 ವರ್ಷದ ಶಾಜಿಯಾ ಸಹೋದರನಿಂದ ಕೊಲೆಯಾದ ದುರ್ದೈವಿ.

    ಕೆಲವು ದಿನಗಳ ಹಿಂದೆ ಶಾಜಿಯಾ ಶೇರಕೋಟಾ ಪ್ರಾಂತದ ಯುವಕನೊಂದಿಗೆ ಪರಾರಿಯಾಗಿದ್ದರು. ಈ ವೇಳೆ ಶಾಜಿಯಾ ಸಹೋದರ ಮೊಹಮ್ಮದ್ ಇಶಾಖ್ ನನ್ನ ಸಹೋದರಿಯನ್ನು ಯುವಕನೊಬ್ಬ ಅಪಹರಿಸಿದ್ದಾನೆ ಎಂದು ನಾಪತ್ತೆ ಮತ್ತು ಅಪಹರಣ ದೂರನ್ನು ದಾಖಲಿಸಿದ್ದನು. ದೂರು ದಾಖಲಾದ ನಂತರ ಶಾಜಿಯಾ ಯುವಕನೊಂದಿಗೆ ಮದುವೆಯಾಗಿ ಹಿಂದುರುಗಿ ಬಂದಿದ್ದರು.

    ಶಾಜಿಯಾ ಹಿಂದುರಿಗಿದ ಕಾರಣ ಎರಡು ಕುಟುಂಬಗಳು ರಾಜಿ ಮೂಲಕ ದೂರನ್ನು ಹಿಂಪಡೆದಿದ್ದವು. ಶಾಜಿಯಾ ಮನೆಯಲ್ಲಿದ್ದಾಗ ಸಹೋದರ ಇಶಾಖ್ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿ ಕುಟುಂಬದ ಮರ್ಯಾದೆಯನ್ನು ತೆಗೆದಿದ್ದಿ ಎಂದು ಹೇಳಿ ಹರಿತವಾದ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ.

    ಶಾಜಿಯಾ ಕೊಲೆಯಾಗುವ ವೇಳೆ ಮನೆಯಲ್ಲಿ ಆಕೆಯ ಪೋಷಕರಿದ್ರು, ಇಶಾಖ್ ನನ್ನನ್ನು ತಡೆಯಲು ಮುಂದಾಗಿಲ್ಲ. ಈ ಸಂಬಂಧ ಶಾಜಿಯಾ ಹಿರಿಯ ಸಹೋದರಿ ಇಶಾಖ್ ಮತ್ತು ಮನೆಯ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.

     

  • ಅಪಘಾತಕ್ಕೆ ಸಹೋದರ ಬಲಿ- ದುಃಖ ತಾಳಲಾರದೆ ವಿಕಲಚೇತನ ಅಣ್ಣ ಆತ್ಮಹತ್ಯೆ

    ಅಪಘಾತಕ್ಕೆ ಸಹೋದರ ಬಲಿ- ದುಃಖ ತಾಳಲಾರದೆ ವಿಕಲಚೇತನ ಅಣ್ಣ ಆತ್ಮಹತ್ಯೆ

    ಹಾಸನ: ರಸ್ತೆ ಅಪಘಾತದಲ್ಲಿ ತಮ್ಮ ಮೃತಪಟ್ಟ ಕಾರಣ ದುಃಖವನ್ನು ತಾಳಲಾರದೆ ಅಣ್ಣ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನ ಜಿಲ್ಲೆಯ ಬೇಲೂರು ತಾಲೂಕು ಬಂಟೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಜುಲೈ 3 ರಂದು ತಮ್ಮ ಚಂದ್ರು(21) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಸೋದರನ ಅಗಲಿಕೆಯಿಂದ ಮನನೊಂದ ಅಣ್ಣ ಮಂಜುನಾಥ್(23) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ವಿಕಲಾಂಗರಾಗಿದ್ದ ಮಂಜುನಾಥ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸದ್ಯ ಇಬ್ಬರೂ ಗಂಡು ಮಕ್ಕಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

  • ಅತ್ತಿಗೆ ಎದುರೇ ಅರೆ ಬೆತ್ತಲೆಯಾಗಿ ಸ್ನಾನ ಮಾಡಿದ ಮಾನಗೇಡಿ ಮೈದುನ

    ಅತ್ತಿಗೆ ಎದುರೇ ಅರೆ ಬೆತ್ತಲೆಯಾಗಿ ಸ್ನಾನ ಮಾಡಿದ ಮಾನಗೇಡಿ ಮೈದುನ

    ಹಾವೇರಿ: ಆಸ್ತಿಗಾಗಿ ಸಹೋದರರ ನಡುವೆ ನಡೆದ ಕಲಹ ಬಚ್ಚಲಲ್ಲಿ ಅನಾವರಣವಾಗಿದೆ. ಅಣ್ಣನ ಮನೆಯ ಅಡುಗೆಮನೆಯಲ್ಲಿ, ಅತ್ತಿಗೆಯ ಮುಂದೆ ಮೈದುನ ಅರೆ ಬೆತ್ತಲೆಯಾಗಿ ಸ್ನಾನ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ನಡೆದಿದೆ.

    ಮಾಲತೇಶ ಬಾರ್ಕಿ ಮತ್ತು ಗಣೇಶ ಬಾರ್ಕಿ ಸಹೋದರರ ಮನೆಗಳು ಅಕ್ಕಪಕ್ಕದಲ್ಲಿ ಇದೆ. ಪ್ರಜ್ಞಾವಂತನಾದ ಗಣೇಶ, ತನ್ನ ಅಣ್ಣ ಮಾಲತೇಶ ಹೆಚ್ಚಿಗೆ ಜಾಗ ಹೊಂದಿದ್ದಾನೆ ಎಂದು ಮಾಲತೇಶನ ಮನೆಗೆ ತೆರಳಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಅತ್ತಿಗೆಯ ಮುಂದೆಯೇ ಅರಬೆತ್ತಲೆಯಾಗಿ ಸ್ನಾನ ಮಾಡಿದ್ದಾನೆ.

    ಈ ದೃಶ್ಯವನ್ನ ಮಾಲತೇಶನ ಮಕ್ಕಳು ಚಿತ್ರಿಕರಿಸಿಕೊಂಡಿದ್ದಾರೆ. ಆದ್ರೆ ಈ ದೃಶ್ಯ ಸೆರೆಹಿಡಿಯುತ್ತಿದ್ದ ಮಕ್ಕಳಿಗೆ ಹೆದರಿಸಿ ಯಾರಿಗೆ ಬೇಕಾದ್ರು ಕೋಡ್ರಿ. ನನಗೇನು ಮಾಡಬೇಕು ಎನ್ನುವುದು ಗೋತ್ತು ಅಂತಾ ಅತ್ತಿಗೆಗೆ ದಬಾಯಿಸಿದ್ದಾನೆ.

    ಅಲ್ಲದೆ ಮನೆಯಲ್ಲಿ ಹಿರಿಯಣ್ಣ ಇಲ್ಲದ ಸಮಯದಲ್ಲಿ ಮಕ್ಕಳಿಗೆ ಹೊಡೆಯುವುದು, ಮನೆಬಿಟ್ಟು ಹೋಗುವಂತೆ ದೌರ್ಜನ್ಯವೆಸಗುತ್ತಿದ್ದಾನೆಂದು ನೊಂದ ಕುಟುಂಬ ಈ ಸತ್ಯವನ್ನ ಮಾಧ್ಯಮದ ಮುಂದೆ ಬಿಚ್ಚಿಟ್ಟಿದೆ.

    ತಮ್ಮನ ಈ ಕೃತ್ಯ ಅಣ್ಣನನ್ನ ತಲೆ ತಗ್ಗಿಸುವಂತೆ ಮಾಡಿದೆ. ಅಲ್ಲದೆ ತಾಯಿ ಸಮಾನಳಾದ ಅತ್ತಿಗೆಯ ಎದುರು, ಅಡುಗೆ ಮನೆಯಲ್ಲಿಯೇ ಈ ರೀತಿ ಅರಬೇತ್ತಲೆಯಾಗಿ ಮನೆ ಬಿಡುವಂತೆ ಸ್ನಾನ ಮಾಡಿರುವುದು ಸಮಾಜವೇ ನಾಚುವಂತಾಗಿದೆ.

     

     

  • ಆಸ್ತಿಗಾಗಿ ತಮ್ಮನ ನಕಲಿ ಮರಣ ಪ್ರಮಾಣಪತ್ರ ತೆಗೆಸಿದ ಅಣ್ಣ!

    ಆಸ್ತಿಗಾಗಿ ತಮ್ಮನ ನಕಲಿ ಮರಣ ಪ್ರಮಾಣಪತ್ರ ತೆಗೆಸಿದ ಅಣ್ಣ!

    ಧಾರವಾಡ: ಕಿರಿಯ ಸಹೋದರನ ನಕಲಿ ಮರಣ ಪ್ರಮಾಣ ಪತ್ರ ತೆಗೆಸಿ ಆಸ್ತಿ ಲಪಟಾಯಿಸಲು ಅಣ್ಣನೊಬ್ಬನು ಹೊಂಚು ಹಾಕಿರೋ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.

    ಧಾರವಾಡ ತಾಲೂಕಿನ ಮಾಳಮಡ್ಡಿಯ ನಿವಾಸಿಯಾದ ನಾನಾಸಾಹೇಬ್ ದೇಶಪಾಂಡೆ ಅವರು 2012 ರಲ್ಲಿ ಉತ್ತರಾಖಂಡ ಪ್ರವಾಸಕ್ಕೆ ಹೋದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ನಾನಾಸಾಹೇಬ ಸಹೋದರ ರಂಗಾರಾವ್ ದೇಶಪಾಂಡೆ 2000ರಲ್ಲಿಯೇ ತಮ್ಮನ ಮರಣ ಪ್ರಮಾಣಪತ್ರ ತೆಗೆಸಿದ್ದಾನೆ.

    ಅಮ್ಮಿನಬಾವಿ ಗ್ರಾಮದ ಬಳಿಯಿರುವ 8 ಎಕರೆ ಜಮೀನು ಲಪಟಾಯಿಸಲು ರಂಗರಾವ್ ಹೊಂಚು ಹಾಕಿದ್ದನು. ಆದರೆ ಇದು ನಾನಾಸಾಹೇಬ ಕುಟುಂಬಸ್ಥರಿಗೆ 2014ರಲ್ಲಿ ಆಸ್ತಿಯನ್ನು ವಿಭಜಿಸುವಾಗ ತಿಳಿದಿದೆ. ಆದ್ರೆ ಇದೂವರೆಗೂ ನಾನಾಸಾಹೇಬ ಪತ್ನಿ ಲಕ್ಷ್ಮೀಬಾಯಿ ಮತ್ತು ಪುತ್ರ ವೆಂಕಟೇಶ್ ಅವರಿಗೆ ಆಸ್ತಿಯನ್ನು ನೀಡಿಲ್ಲ. ಇದೀಗ ರಂಗಾರಾವ್‍ಗೆ ಪಾಲಿಕೆ ಮತ್ತು ತಹಶೀಲ್ದಾರ ಕಚೇರಿಯ ಅಧಿಕಾರಿಗಳು ಹೇಗೆ ನಕಲಿ ಪ್ರಮಾಣ ಪತ್ರ ನೀಡಿದರು ಎಂದು ನಾನಾಸಾಹೇಬ್ ಪುತ್ರ ವೆಂಕಟೇಶ್ ಪ್ರಶ್ನಿಸುತ್ತಾರೆ.

    ಈ ಸಂಬಂಧ ನಾನಾಸಾಹೇಬ ಪುತ್ರ ವೆಂಕಟೇಶ್ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.