Tag: brother

  • ತಾನು ಚಿತ್ರ ಚೆನ್ನಾಗಿ ಬಿಡಿಸಲ್ಲ ಅಂತ ಕಲಾ ಪರೀಕ್ಷೆಗೆ ಅಣ್ಣನನ್ನು ಕೂರಿಸಿದ BA ವಿದ್ಯಾರ್ಥಿ

    ತಾನು ಚಿತ್ರ ಚೆನ್ನಾಗಿ ಬಿಡಿಸಲ್ಲ ಅಂತ ಕಲಾ ಪರೀಕ್ಷೆಗೆ ಅಣ್ಣನನ್ನು ಕೂರಿಸಿದ BA ವಿದ್ಯಾರ್ಥಿ

    ಲಕ್ನೋ: ತಾನು ಚಿತ್ರವನ್ನು ಚೆನ್ನಾಗಿ ಬಿಡಿಸುವುದಿಲ್ಲ ಎಂದು ತನ್ನ ಹಿರಿಯ ಸಹೋದರನ (Elder Brother) ಕೈಯಲ್ಲಿ ಬಿಎ (BA) ತರಗತಿಯ ಕಲಾ ಪರೀಕ್ಷೆಯನ್ನು (Art Exam) ಬರೆಸಿರುವ ವಿಚಿತ್ರ ಘಟನೆ ವರದಿಯಾಗಿದೆ.

    ಉತ್ತರ ಪ್ರದೇಶದ (Uttar Pradesh) ಉನ್ನಾವೋ (Unnao) ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಮ್ಮನ (Younger Brother) ಪರವಾಗಿ ಪರೀಕ್ಷೆ ಬರೆಯುತ್ತಿದ್ದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಶೇರ್‌ಪುರ್ ಕಲನ್‌ನ ಶಾದಾಬ್ ಎಂದು ಗುರುತಿಸಲಾಗಿದ್ದು, ಆತ ತನ್ನ ಕಿರಿಯ ಸಹೋದರನಿಗೆ ಚೆನ್ನಾಗಿ ಚಿತ್ರ ಬಿಡಿಸಲು (Drawing) ಬರುವುದಿಲ್ಲ ಎಂಬ ಕಾರಣಕ್ಕೆ ತಾನು ಪರೀಕ್ಷೆಯನ್ನು ಬರೆಯಲು ಮುಂದಾಗಿರುವುದಾಗಿ ತಿಳಿಸಿದ್ದಾನೆ.

    ವರದಿಗಳ ಪ್ರಕಾರ ಶಾದಾಬ್ ಪರೀಕ್ಷೆ ಬರೆಯಲು ಮುಸ್ತಾಫಾಬಾದ್‌ನ ಶಕುಂತಲಾ ದೇವಿ ಕಾಶಿರಾಮ್ ವಿದ್ಯಾಲಯದ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾನೆ. ಪರೀಕ್ಷೆ ಪ್ರಾರಂಭವಾಗಿ ಅರ್ಧ ಗಂಟೆಯ ಬಳಿಕ ಪರೀಕ್ಷಾ ಅಧಿಕಾರಿಗಳು ತಮ್ಮ ತಂಡದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಈ ವೇಳೆ ಪರೀಕ್ಷೆ ಬರೆಯಬೇಕಿದ್ದ ನಿಜವಾದ ಅಭ್ಯರ್ಥಿ ಮುಖೀಮ್ ಬದಲಿಗೆ ಬೇರೊಬ್ಬ ವ್ಯಕ್ತಿ ಪರೀಕ್ಷೆ ಬರೆಯುತ್ತಿರುವುದನ್ನು ಅಧಿಕಾರಿಗಳು ಕಂಡುಹಿಡಿದಿದ್ದಾರೆ. ಇದನ್ನೂ ಓದಿ: ಕೇವಲ 2 ತಿಂಗಳಿನಲ್ಲಿ ಟೆಕ್ ಕಂಪನಿಗಳಿಂದ 1.2 ಲಕ್ಷಕ್ಕೂ ಮಂದಿ ವಜಾ

    ಸಾದಾಬ್‌ನನ್ನು ಪರೀಕ್ಷಾ ಅಧಿಕಾರಿಗಳು ಪ್ರಶ್ನಿಸಿದಾಗ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಬಳಿಕ ಶಾದಾಬ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಾದಾಬ್ ತನ್ನ ಸಹೋದರನ ಬದಲಿಗೆ ಇನ್ನೂ ಬೇರೆ ಯಾವುದಾದರೂ ಪರೀಕ್ಷೆಯಲ್ಲಿ ಹಾಜರಾಗಿದ್ದನೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್‌ನನ್ನು ಅವರ ಆಪ್ತ ವಲಯದವರೇ ಕೊಲ್ತಾರೆ: ಝೆಲೆನ್ಸ್ಕಿ ಭವಿಷ್ಯ

  • ಗ್ರಾಮ ದೈವಗಳೇ ನಮ್ಮ ಊರನ್ನು ಕಾಪಾಡಿವೆ- ಕುಕ್ಕರ್ ಬ್ಲಾಸ್ಟ್ ಆದ ಆಟೋ ಚಾಲಕನ ಸಹೋದರನ ಮಾತು

    ಗ್ರಾಮ ದೈವಗಳೇ ನಮ್ಮ ಊರನ್ನು ಕಾಪಾಡಿವೆ- ಕುಕ್ಕರ್ ಬ್ಲಾಸ್ಟ್ ಆದ ಆಟೋ ಚಾಲಕನ ಸಹೋದರನ ಮಾತು

    ಮಂಗಳೂರು: ದೈವಕ್ಕೆ ಗಂಧಪ್ರಸಾದವನ್ನು ತಯಾರು ಮಾಡಿಕೊಡುವ ಕೆಲಸವನ್ನು ನಮ್ಮ ಕುಟುಂಬ ಮಾಡುತ್ತಿದೆ. ಹೀಗಾಗಿ ಗ್ರಾಮದ ದೈವಗಳೇ ನಮ್ಮ ಊರನ್ನು ಕಾಪಾಡಿವೆ. ಮಂಗಳೂರಿನಲ್ಲಿ ನಡೆಯಬಹುದಾಗಿದ್ದ ಒಂದು ದೊಡ್ಡ ಅನಾಹುತವನ್ನು ತಪ್ಪಿಸಿವೆ ಎಂದು ಕುಕ್ಕರ್ ಬ್ಲಾಸ್ಟ್ (Cooker Blast) ಆದ ಆಟೋ ಚಾಲಕನ ಸಹೋದರ ಹೇಳಿದ್ದಾರೆ.

    ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ (Mangaluru Cooker Bomb Blast) ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಆಟೋ ಚಾಲಕ ಪುರುಷೋತ್ತಮ್ ಸಹೋದರ ನಾಗೇಶ್ ಮಾತನಾಡಿ, ಕುಟುಂಬ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ದೊಡ್ಡ ಮಗಳಿಗೆ ಮೇ ತಿಂಗಳಲ್ಲಿ ಮದುವೆ ಫಿಕ್ಸ್ ಆಗಿದೆ. ಪುರುಷೋತ್ತಮ್ ಹಾರ್ಟ್ ಪೇಷಂಟ್ (Heart Patient) ಅವರಿಗೆ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ ಎಂದರು. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್‌ಗೆ ನಿಷೇಧಿತ PFI ಲಿಂಕ್ – ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೆಚ್

    ಫ್ಯಾಮಿಲಿಯಿಂದ ಒಬ್ಬರನ್ನು ಮಾತ್ರ ಆಸ್ಪತ್ರೆಯ ಒಳಗೆ ಬಿಡುತ್ತಾರೆ. ಪೊಲೀಸ್ ಅಧಿಕಾರಿಗಳ ತನಿಖೆ ಆಗುವ ತನಕ ರಿಕ್ಷಾ ಕೂಡ ವಾಪಸ್ ಸಿಗುವುದು ಕಷ್ಟ. ಪುರುಷೋತ್ತಮ್ ಗೆ ಓಪನ್ ಹಾರ್ಟ್ ಸರ್ಜರಿಯಾಗಿತ್ತು. ಈಗ ಮೂರ್ ನಾಲ್ಕು ತಿಂಗಳಿಂದ ಆಟೋರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಗ್ರಾಮದೈವ ಮಹಾಕಾಳಿ ಮತ್ತು ಕೊರಗಜ್ಜ ನಮ್ಮನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಿದರು.

    ನಮ್ಮ ಕುಟುಂಬ ಸನ್ನಿಧಾನದಲ್ಲಿ ಬೂಳ್ಯ ಕೊಡುವ ಕೆಲಸ ಮಾಡುತ್ತಿದೆ. ದೈವಸ್ಥಾನದ ಚಾಕರಿ ಮಾಡುವ ಕೆಲಸವನ್ನು ಮಾಡುತ್ತಾ ಬರುತ್ತಿದ್ದೇವೆ. ನಮ್ಮನ್ನ ಕಾಪಾಡಿದ್ದು, ದೊಡ್ಡ ಅನಾಹುತವನ್ನು ತಪ್ಪಿಸಿದ್ದು ಕೂಡ ಆ ದೈವಗಳೇ ಎಂದು ನಾಗೇಶ್ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಅಣ್ಣನ ಜೊತೆಗೆ ಗಾಳಿಪಟ ಹಾರಿಸುವಾಗ ಬಿಲ್ಡಿಂಗ್ ಮೇಲಿಂದ ಬಿದ್ದು ತಮ್ಮ ಸಾವು

    ಅಣ್ಣನ ಜೊತೆಗೆ ಗಾಳಿಪಟ ಹಾರಿಸುವಾಗ ಬಿಲ್ಡಿಂಗ್ ಮೇಲಿಂದ ಬಿದ್ದು ತಮ್ಮ ಸಾವು

    ಬೆಳಗಾವಿ: ಗಾಳಿಪಟ (Kite) ಹಾರಿಸುವಾಗ ಆಯತಪ್ಪಿ ಬಿಲ್ಡಿಂಗ್ (Building) ಮೇಲಿಂದ ಬಿದ್ದು 11 ವರ್ಷದ ಬಾಲಕ (Brother) ಸಾವನ್ನಪ್ಪಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

    ಬೆಳಗಾವಿಯ ಉಜ್ವಲ್ ನಗರದ ಸೆಕೆಂಡ್ ಕ್ರಾಸ್ ತಿರಂಗಾ ಕಾಲೋನಿಯ ಅರ್ಮಾನ್ ದಫೆದಾರ್ (11) ಮೃತ ಬಾಲಕ. ನಿನ್ನೆ ಅಶೋಕ ನಗರದ ತಮ್ಮ ಸಂಬಂಧಿಕರ ಮನೆಗೆ ಕುಟುಂಬಸ್ಥರ ಜೊತೆಗೆ ಬಾಲಕ ಬಂದಿದ್ದನು. ತಿಂಡಿ ತಿಂದು ತನ್ನ ಅಣ್ಣನ ಜೊತೆಗೆ ಗಾಳಿಪಟ ಹಾರಿಸಲು ಬಿಲ್ಡಿಂಗ್‍ನ ಟೆರಸ್ ಮೇಲೆ ಹೋಗಿದ್ದಾನೆ. ಈ ವೇಳೆ ಗಾಳಿಪಟ ಹಾರಿಸುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಇದನ್ನೂ ಓದಿ: ಥಾಯ್ಲೆಂಡ್‌ ಡೇ ಕೇರ್‌ ಸೆಂಟರ್‌ನಲ್ಲಿ ಮಕ್ಕಳ ಮಾರಣಹೋಮ – 34 ಮಂದಿಯನ್ನು ಹತ್ಯೆಗೈದ ಪಾಪಿ

    ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅರ್ಮಾನ್ ಇಂದು ಕೊನೆಯುಸಿರೆಳೆದಿದ್ದಾನೆ. ಅರ್ಮಾನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಆಸ್ಪತ್ರೆಯವರು ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಸ್ಕೂಟಿ, ಕಾರಿನ ಮಧ್ಯೆ ಭೀಕರ ಅಪಘಾತ – ಅಣ್ಣ, ತಂಗಿ ದಾರುಣ ಸಾವು

    ಸ್ಕೂಟಿ, ಕಾರಿನ ಮಧ್ಯೆ ಭೀಕರ ಅಪಘಾತ – ಅಣ್ಣ, ತಂಗಿ ದಾರುಣ ಸಾವು

    ಮಂಗಳೂರು: ಸ್ಕೂಟಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ (Accident) ಸಂಭವಿಸಿ, ಸ್ಕೂಟಿಯಲ್ಲಿ ಹೋಗುತ್ತಿದ್ದ ಅಣ್ಣ ಹಾಗೂ ತಂಗಿ (Brother and Sister) ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ (ಜಿಲ್ಲೆ ಸುಳ್ಯ (Sulia) ತಾಲೂಕಿನ ಎಲಿಮಲೆ ಬಳಿ ನಡೆದಿದೆ.

    ಇಂದು ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಕಡಪಾಲ ಬಾಜಿನಡ್ಕ ಗ್ರಾಮದ ದೇವಿದಾಸ್ ಅವರ ಮಕ್ಕಳಾದ ನಿಶಾಂತ್ ಹಾಗೂ ಮೋಕ್ಷಾ ತೀವ್ರವಾಗಿ ಗಾಯಗೊಂಡಿದ್ದರು. ಅವರಿಬ್ಬರನ್ನು ಸ್ಥಳೀಯರು ತಕ್ಷಣವೇ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ನಿಶಾಂತ್ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಮೋಕ್ಷಾಳನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಕೆಯೂ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: 873 ಪೊಲೀಸ್‌ ಅಧಿಕಾರಿಗಳಿಗೆ PFI ಜೊತೆ ನಂಟು: NIA

    ಮೃತ ನಿಶಾಂತ್ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಮೋಕ್ಷಾ ದೇವಚಳ್ಳ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಳು ಎಂಬುದು ತಿಳಿದುಬಂದಿದೆ. ಘಟನೆ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ (Sulya Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಣ ಕೊಡದಿದ್ರೆ ಅಶ್ಲೀಲ ಫೋಟೋ ರಿಲೀಸ್ ಮಾಡೋ ಬೆದರಿಕೆ- ಮನನೊಂದ ಟೆಕ್ಕಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ

    ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ

    ಬೀದರ್: ಅಪ್ರಾಪ್ತ ಸಹೋದರಿ(Sister) ಮೇಲೆ ಸಹೋದರನೇ(Brother) ಅತ್ಯಾಚಾರ ಮಾಡಿದ ಘಟನೆ ಬೀದರ್(Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಾಂಡಯೊಂದರಲ್ಲಿ ನಡೆದಿದೆ.

    ಅತ್ಯಾಚಾರಕ್ಕೆ ಒಳಗಾದ 16 ವರ್ಷದ ಬಾಲಕಿಯ ತಂದೆಗೆ ಇಬ್ಬರು ಪತ್ನಿಯರಿದ್ದು, ಹಿರಿಯ ಪತ್ನಿಯ ಮಗನಿಂದ ಕಿರಿಯ ಪತ್ನಿಯ(Wife) ಮಗಳ ಮೇಲೆ ಅತ್ಯಾಚಾರ ಮಾಡಲಾಗಿದೆ.

    ಮೊದಲನೇಯ ಪತ್ನಿ ಮಗ ಆಗಾಗ ಕೆಲಸಕ್ಕೆಂದು ತನ್ನ ಮನೆಗೆ ಸಹೋದರಿಯನ್ನು ಕರೆದುಕೊಂಡು ಹೋಗುತ್ತಿದ್ದನು. ಈ ವೇಳೆ ಸಹೋದರಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗುತ್ತಿದ್ದಂತೆ ಅತ್ಯಾಚಾರ ಮಾಡಿದ ಸಹೋದರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಈ ಹಿಂದೆ ಹಾವಿನ ಮೊಟ್ಟೆ, ಇದೀಗ ಹಕ್ಕಿ ಗೂಡಿನಿಂದಾಗಿ ರಾ. ಹೆದ್ದಾರಿ ಕೆಲಸ ಸ್ಥಗಿತ!

    POLICE JEEP

    ಪತಿ ಸತ್ತ ಬಳಿಕ ಬಸವಕಲ್ಯಾಣದ ಅದೇ ತಾಂಡದ ಪ್ರತ್ಯೇಕ ಮನೆಯಲ್ಲಿ ಎರಡನೇ ಪತ್ನಿ ತನ್ನ ಮಕ್ಕಳೊಂದಿಗೆ ವಾಸವಿದ್ದರು. ಘಟನೆ ಕುರಿತು ಯಾರಿಗೂ ಹೇಳದಂತೆ ನನ್ನ ಮಗಳಿಗೆ ಬೆದರಿಸಿದ್ದಾನೆ. ಇದಕ್ಕೆ ಇನ್ನಿಬ್ಬರ ಸಹಕಾರವು ಇದೆ ಎಂದು ತಾಯಿ ದೂರು ನೀಡಿದ್ದು, ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿಯಲ್ಲಿ ಪಕರಣ ದಾಖಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಭದ್ರತೆಯಲ್ಲಿ ಲೋಪ- ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿ ಬಂಧನ

    Live Tv
    [brid partner=56869869 player=32851 video=960834 autoplay=true]

  • ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ

    ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ

    ಕಲಬುರಗಿ: ಯುವತಿಯೊಬ್ಬಳ ಮೇಲೆ ಆಕೆಯ ಸ್ನೇಹಿತೆಯ ಸಹೋದರನೇ ಅತ್ಯಾಚಾರ ಎಸಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಆರೋಪಿಯನ್ನು ಸಂದೀಪ್ ಎಂದು ಗುರುತಿಸಲಾಗಿದೆ. ಸ್ನೇಹಿತೆಯ ಮನೆಯ ಬೆಡ್ ರೂಮ್ ನಲ್ಲೆ ಯುವತಿ ಮೇಲೆ ದುಷ್ಕರ್ಮಿ ಕೃತ್ಯ ಎಸಗಿದ್ದಾನೆ. ಸಂತ್ರಸ್ತ ಯುವತಿಯ ಸ್ನೇಹಿತೆ ಕೂಡ ಅತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದಾಳೆ ಎನ್ನಲಾಗಿದೆ. ಯುವತಿ ಕಿರುಚಾಡಿದರೂ ಸಂದೀಪ್ ಬಿಡದೆ ಯುವತಿಯ ಮೇಲೆ ಅತ್ಯಾಚಾರ ಮಾಡುವ ಮೂಲಕ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.

    ಸಂದೀಪ್ ಅತ್ಯಾಚಾರ ಎಸಗೋದನ್ನ ಯುವತಿ ಮದುವೆ ಆಗೋ ಹುಡುಗನ ಸ್ನೇಹಿತ ನೋಡಿದ್ದ.ಈ ಹಿನ್ನೆಲೆಯಲ್ಲಿ ಯುವತಿಗೆ ತನ್ನ ಮದುವೆ ಕ್ಯಾನ್ಸಲ್ ಆಗುತ್ತೆ ಅನ್ನೋ ಭಯ ಕಾಡಿದೆ. ಇದೇ ಭಯದಿಂದ ಆಕೆ ರೈಲ್ವೆ ಟ್ರ್ಯಾಕ್ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    MARRIAGE

    ಆತ್ಮಹತ್ಯೆಯ ವೇಳೆ ರೈಲ್ವೆ ಹಳಿಯ ಮೇಲೆ ಒಂದು ಕಾಲು ಕಟ್ ಆಗಿ ಬಿದ್ದಿದೆ. ಆದರೆ ಯುವತಿ ಭಾರೀ ಅಪಾಯದಿಂದ ಪಾರಾಗಿದ್ದು, ಸದ್ಯ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇತ್ತ ಅತ್ಯಾಚಾರ ಎಸಗಿದ ಬಳಿಕ ಕಾಮುಕ ಸಂದೀಪ್ ಎಸ್ಕೇಪ್ ಆಗಿದ್ದಾನೆ.

    ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‍ರೇಪ್- ಆಕೆಯ ಸಹೋದರನಿಗೆ ಮನಬಂದಂತೆ ಥಳಿಸಿದ ಆರೋಪಿಗಳು

    ಲಕ್ನೋ: 8ನೇ ತರಗತಿಯ ವಿದ್ಯಾರ್ಥಿನಿಯನ್ನು 5 ಜನರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಆಕೆಯ ಸಹೋದರನನ್ನು ಮನ ಬಂದಂತೆ ಥಳಿಸಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಸಂತ್ರಸ್ತೆ ಮತ್ತು ಆಕೆಯ ಸಹೋದರ ದೇವಸ್ಥಾನದಿಂದ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಐವರು ಆರೋಪಿಗಳನ್ನು ಅವರನ್ನು ಅಪಹರಿಸಿದ್ದಾರೆ. ಇದಾದ ನಂತರ ಸಂತ್ರಸ್ತೆಯ ಸಹೋದರನನ್ನು ಕೊಠಡಿಯಲ್ಲಿ ಬಂಧಿಸಿ ಅವನನ್ನು ಥಳಿಸಿದ್ದಾರೆ. ಇದಾದ ಬಳಿಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

    ಅತ್ಯಾಚಾರದ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಘಟನೆ ಬಗ್ಗೆ ತಿಳಿದ ಸಂತ್ರಸ್ತೆಯ ಕುಟುಂಬಸ್ಥರು ಮೋದಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ವಾರದ ಹಿಂದೆಯೇ ಪ್ರವೀಣ್‌ ಹತ್ಯೆಗೆ ಸ್ಕೆಚ್‌ – ಕೇರಳದ 7 ಕಡೆ ಆಶ್ರಯ, ಹಂತಕರು ಕೊನೆಗೂ ಅಂದರ್‌

    POLICE JEEP

    ಘಟನೆ ಸಂಬಂಧಿಸಿ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯಾರೋ ಒಂದಿಬ್ಬರು ಹೇಳಿದ ತಕ್ಷಣ ಸಿಎಂ ಬದಲಾವಣೆ ಆಗುವುದಿಲ್ಲ: ಬಿ.ವೈ ವಿಜಯೇಂದ್ರ

    Live Tv
    [brid partner=56869869 player=32851 video=960834 autoplay=true]

  • 6 ತಿಂಗಳಿನಿಂದ ಮನೆಯಲ್ಲೇ ಕೂಡಿಹಾಕಿದ್ದ ತಂದೆ – ಹೊರಗೆ ಬಿಡಲಿಲ್ಲವೆಂದು ಚಾಕುವಿನಿಂದ ಇರಿದು ಕೊಂದ ಮಗ

    6 ತಿಂಗಳಿನಿಂದ ಮನೆಯಲ್ಲೇ ಕೂಡಿಹಾಕಿದ್ದ ತಂದೆ – ಹೊರಗೆ ಬಿಡಲಿಲ್ಲವೆಂದು ಚಾಕುವಿನಿಂದ ಇರಿದು ಕೊಂದ ಮಗ

    ಮುಂಬೈ: ವ್ಯಕ್ತಿಯೋರ್ವ ತನ್ನ ತಂದೆಯನ್ನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.

    ಆರೋಪಿಯನ್ನು ಗೋವಿಂದ್ ನಗರದ ನಿವಾಸಿ ನಿಖಿಲ್ ಶುಕ್ಲಾ ಎಂದು ಗುರುತಿಸಲಾಗಿದೆ. ನಿಖಿಲ್ ಗಾಂಜಾ ಸೇದುತ್ತಿದ್ದರಿಂದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ನಿಖಿಲ್ ಆಗಾಗ ಎಲ್ಲರೂ ಸಾಯಬೇಕು. ಮತ್ತೆ ಮನುಷ್ಯ ಜೀವನ ಸಿಗುವುದಿಲ್ಲ ಅಂತೆಲ್ಲಾ ಹೇಳುತ್ತಿದ್ದ ಎಂದು ನಿಖಿಲ್ ಅವರ ಕಿರಿಯ ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಿಸಲು ಕ್ರಮ – ಸರ್ಕಾರದಿಂದಲೇ ಯುವಕ, ಯುವತಿಯರಿಗೆ ಆನ್‌ಲೈನ್ ಡೇಟಿಂಗ್ ವ್ಯವಸ್ಥೆ

    ಮಾದಕ ದ್ರವ್ಯ ವ್ಯಸನನಾಗಿದ್ದ ನಿಖಿಲ್ ಅನ್ನು ಆರು ತಿಂಗಳಿನಿಂದ ಮನೆಯಿಂದ ಹೊರಗೆ ಬಿಟ್ಟಿರಲಿಲ್ಲ. ಆದರೆ ತಂದೆಯೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಈ ವೇಳೆ ತಂದೆಯನ್ನು ರಕ್ಷಿಸಲು ಹೋದ ಅಜ್ಜನ ಮೇಲೂ ರಾಡ್‍ನಿಂದ ಹಲ್ಲೆ ನಡೆಸಿದ್ದಾನೆ. ಆದರೆ ಅದೃಷ್ಟವಶಾತ್ ತಾಯಿ ಹಾಗೂ ಸಹೋದರ ನಿಖಿಲ್ ಅನ್ನು ತಡೆದಿದ್ದರಿಂದ ಅಜ್ಜನ ಪ್ರಾಣ ಉಳಿದಿದೆ. ಇದೀಗ ಘಟನೆಯಲ್ಲಿ ಗಾಯಗೊಂಡಿರುವ ನಿಖಿಲ್ ತಾಯಿ ಹಾಗೂ ಅಜ್ಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಮನೀಶ್ ಸೋಂಕರ್ ಹೇಳಿದ್ದಾರೆ.

    ಘಟನೆಯ ನಂತರ ಆರೋಪಿ ಪರಾರಿಯಾಗಿದ್ದು, ಕೃತ್ಯವೆಸಗಲು ಬಳಸಿದ್ದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫೋರೆನ್ಸಿಕ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಿಖಿಲ್ ವಿರುದ್ಧ ಸಹೋದರ ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ಸ್ಥಳಕ್ಕೆ ಭೇಟಿ ನೀಡಿ ಮಾಡಿದ ವರದಿಯಲ್ಲ, ಸಂಪೂರ್ಣ ಅವೈಜ್ಞಾನಿಕ: ಆರ್.ವಿ ದೇಶಪಾಂಡೆ

    Live Tv
    [brid partner=56869869 player=32851 video=960834 autoplay=true]

  • ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸ್ಕೂಲ್ ಬಿಲ್ಡಿಂಗ್ ಮೇಲಿಂದ ಹಾರಿದ ಬಾಲಕಿ

    ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸ್ಕೂಲ್ ಬಿಲ್ಡಿಂಗ್ ಮೇಲಿಂದ ಹಾರಿದ ಬಾಲಕಿ

    ಭುವನೇಶ್ವರ: ದುಷ್ಕರ್ಮಿಗಳ ಅತ್ಯಾಚಾರ ಕೃತ್ಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಬಾಲಕಿ ಶಾಲೆಯ ಕಟ್ಟದ ಮೇಲ್ಛಾವಣಿಯಿಂದ ಕೆಳಗೆ ಹಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಜಾಜ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ಮಳೆ ಬರುತ್ತಿದ್ದ ಕಾರಣ ಶಾಲೆಯಲ್ಲಿಯೇ ಇರುವಂತೆ ಬಾಲಕಿ ಮತ್ತು ಆಕೆಯ ಸಹೋದರನಿಗೆ ಸಲಹೆ ನೀಡಿದ್ದ ಐವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಳಿಂಗನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನ ಪ್ರಾಣ ಅರ್ಪಿಸಲು ಸಿದ್ಧವೆಂದು ಭಯೋತ್ಪಾದನಾ ಗುಂಪಿಗೆ ಬೆಂಬಲ ಸೂಚಿಸಿದ್ದ ವಿದ್ಯಾರ್ಥಿ ಅರೆಸ್ಟ್

    ಭಾನುವಾರ ರಾತ್ರಿ ಒಡಿಶಾದ ಕಿಯೋಂಜಾರ್ ಜಿಲ್ಲೆಯ ನಿವಾಸಿಯಾಗಿರುವ ಬಾಲಕಿ ತನ್ನ ಸಹೋದರನೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಸ್ ಇಳಿದು ಬಂದ ಸಹೋದರ ಮತ್ತು ಬಾಲಕಿಗೆ ಮಳೆ ಬರುತ್ತಿರುವ ಹಿನ್ನೆಲೆ ಶಾಲೆಯ ಕಟ್ಟಡದಲ್ಲಿ ಇರಬಹುದು. ಮಳೆ ನಿಂತ ಬಳಿಕ ತಮ್ಮ ಮನೆಗೆ ಹೊರಡಬಹುದು ಎಂದು ಕಿಡಿಗೇಡಿಗಳ ಗ್ಯಾಂಗ್ ಸಲಹೆ ನೀಡಿತ್ತು. ಮಳೆ ಬರುತ್ತಿರುವ ಹಿನ್ನೆಲೆ ಬಾಲಕಿ ಮತ್ತು ಆಕೆಯ ಸಹೋದರ ಶಾಲೆಯ ಕಟ್ಟದಲ್ಲಿ ಇರಲು ಒಪ್ಪಿಕೊಂಡರು. ಆದರೆ ರಾತ್ರಿ ಹಿಂತಿರುಗಿದ ಐವರು ಆರೋಪಿಗಳು ಬಾಲಕಿಯ ಸಹೋದರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ – ಕುಡಿದ ಮತ್ತಿನಲ್ಲಿ ಹೆಂಡತಿ ಅಂತ ಅತ್ತೆಗೆ ಹೊಡೆದ

    ನಂತರ ಬಾಲಕಿ ಮೇಲೆ ಐವರು ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ, ಶಾಲೆಯ ಮೇಲ್ಛಾವಣಿ ಮೇಲೆ ಓಡಿ ಹೋದ ಬಾಲಕಿ ಅಲ್ಲಿಂದ ಕೆಳಗೆ ಜಿಗಿದು ತೀವ್ರವಾಗಿ ಗಾಯಗೊಂಡಿದ್ದಾಳೆ. ಈ ವೇಳೆ ಸಹಾಯಕ್ಕಾಗಿ ಸಹೋದರನ ಕಿರುಚಾಡುತ್ತಿರುವುದನ್ನು ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಂಬುಲೆನ್ಸ್ ಸಿಗದೇ ತಮ್ಮನ ಶವವನ್ನು ಮಡಿಲಲ್ಲಿಟ್ಟುಕೊಂಡು ಬೀದಿಯಲ್ಲಿ ಕುಳಿತ ಬಾಲಕ

    ಅಂಬುಲೆನ್ಸ್ ಸಿಗದೇ ತಮ್ಮನ ಶವವನ್ನು ಮಡಿಲಲ್ಲಿಟ್ಟುಕೊಂಡು ಬೀದಿಯಲ್ಲಿ ಕುಳಿತ ಬಾಲಕ

    ಭೋಪಾಲ್: ಅಂಬುಲೆನ್ಸ್ ಸಿಗದೇ ಎಂಟು ವರ್ಷದ ಬಾಲಕ ತನ್ನ ಎರಡು ವರ್ಷದ ಕಿರಿಯ ಸಹೋದರನ ಶವವನ್ನು ಮಡಿಲ ಮೇಲೆ ಮಲಗಿಸಿಕೊಂಡು ಮಧ್ಯಪ್ರದೇಶದ ಮೊರೆನಾ ಬೀದಿ ಬದಿಯಲ್ಲಿ ಕುಳಿತುಕೊಂಡಿದ್ದ ಮನಕಲಕುವ ದೃಶ್ಯ ಕಂಡು ಬಂದಿದೆ.

    ಅಂಬಾಹ್‍ನ ಬದ್ಫ್ರಾ ಗ್ರಾಮದ ನಿವಾಸಿಯಾಗಿರುವ ಬಾಲಕನ ತಂದೆ ಪೂಜಾರಾಮ್ ಜಾತವ್ ಅವರು ತಮ್ಮ ಮೃತ ಮಗನ ಶವವನ್ನು ಮನೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್‌ಗಾಗಿ ತೀವ್ರ ಹುಡುಕಾಡುತ್ತಿದ್ದರು. ಈ ವೇಳೆ ರಸ್ತೆಬದಿಯಲ್ಲಿ ಮೃತದೇಹವನ್ನು ಇಟ್ಟುಕೊಂಡು ಕುಳಿತಿದ್ದ ಬಾಲಕನನ್ನು ಗಮನಿಸಿದ ಜನರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲೇ ಅಡುಗೆ ಮಾಡಿ ತಿಂದ ಪ್ರತಿಭಟನಾಕಾರರು

    ಇದ್ದಕ್ಕಿದ್ದಂತೆಯೇ ಪೂಜಾರಾಮ್ ಜಾತವ್ ಅವರ ಎರಡು ವರ್ಷದ ಮಗು ರಾಜನ ಆರೋಗ್ಯ ಹದಗೆಟ್ಟಿತು. ಆರಂಭದಲ್ಲಿ ಮನೆಯಲ್ಲಿಯೇ ಮಗನನ್ನು ಗುಣಪಡಿಸಲು ಪೂಜಾರಾಮ್ ಜಾತವ್ ಪ್ರಯತ್ನಿಸಿದರು. ಆದರೆ ಮಗುವಿಗೆ ಹೊಟ್ಟೆ ನೋವು ತೀವ್ರವಾಗಿದ್ದರಿಂದ, ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೇ ವೇಳೆ ಪೂಜಾರಾಮ್ ಜಾತವ್ ಅವರು ಹಿರಿಯ ಮಗ ಗುಲ್ಶನ್ ಕೂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಂತರ ಮಗುವಿನ ಶವವನ್ನು ಗ್ರಾಮಕ್ಕೆ ಕೊಂಡೊಯ್ಯಲು ಪೂಜಾರಾಮ್ ಅವರು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ನೀಡಲು ಆಸ್ಪತ್ರೆ ಅಧಿಕಾರಿಗಳು ತಿರಸ್ಕರಿಸದ್ದಾರೆ.

    ನಂತರ ಆಸ್ಪತ್ರೆಯಿಂದ ಹೊರಗೆ ಮಗುವಿನ ಶವ ಎತ್ತುಕೊಂಡು ಬಂದ ಪೂಜಾರಾಮ್ ಜಾತವ್ ಅವರು, ವಾಹನಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹೊರಗಿನವರು ಕೇಳಿದಷ್ಟು ಹಣ ನೀಡಲು ಪೂಜಾರಾಮ್ ಜಾತವ್ ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಅವರಿಗೆ ಯಾವುದೇ ವಾಹನಗಳು ಕೂಡ ಸಿಗಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ, ಪೂಜಾರಾಮ್ ಜಾತವ್ ಅವರು ತಮ್ಮ ಹಿರಿಯ ಮಗ ಗುಲ್ಶನ್ ಅವರನ್ನು ಆಸ್ಪತ್ರೆಯ ಹೊರಗೆ ಶವದೊಂದಿಗೆ ಬಿಟ್ಟು ಮನೆಗೆ ಹೊರಡಲು ನಿರ್ಧರಿಸಿ ಹೋದರು. ಇದನ್ನೂ ಓದಿ: ಮೇಘಸ್ಫೋಟದಿಂದ ತಾತ್ಕಾಲಿಕ ಬಂದ್ ಆಗಿದ್ದ ಅಮರನಾಥ ಯಾತ್ರೆ ಪುನಾರಂಭ

    ಗುಲ್ಶನ್ ತನ್ನ ಸತ್ತ ತಮ್ಮನ ತಲೆಯನ್ನು ತನ್ನ ಮಡಿಲಿನಲ್ಲಿ ಇಟ್ಟುಕೊಂಡು ಅರ್ಧ ಗಂಟೆಗೂ ಹೆಚ್ಚು ಕಾಲ ತಂದೆ ಹಿಂದಿರುಗುವವರೆಗೂ ಕಾಯುತ್ತಾ ಬೀದಿ ಬದಿಯಲ್ಲಿ ಕುಳಿತುಕೊಂಡಿದ್ದನು. ಈ ವೇಳೆ ಬಾಲಕನನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಚಾಲಕನನ್ನು ಪೂಜಾರಾಮ್ ಜಾತವ್ ಅವರ ಮನೆಗೆ ತೆರಳುವಂತೆ ಸೂಚಿಸಿದ್ದಾರೆ.

    ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಪೂಜಾರಾಮ್ ಜಾತವ್, ಮಗುವಿನ ತಾಯಿ ಮನೆಯಲ್ಲಿಲ್ಲ, ನಾನು ಬಡವ. ಏನನ್ನು ತಿಂದು ನನ್ನ ಮಗುವಿನ ಆರೋಗ್ಯ ಹದಗೆಟ್ಟಿತು ಎಂದು ನನಗೆ ಗೊತ್ತಿಲ್ಲ. ಹೀಗಾಗಿ ವೈದ್ಯರನ್ನು ಭೇಟಿ ಮಾಡಿದಾಗ ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಕೊನೆಗೆ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಕೇಳಿದಾಗ, ವಾಹನ ವ್ಯವಸ್ಥೆಗೊಳಿಸಲು ಹಣ ಪಾವತಿಸುವಂತೆ ಕೇಳಿದರು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]