Tag: brother in law

  • ಅಕ್ರಮ ಸಂಬಂಧವಿದೆ ಎಂದು ಅತ್ತಿಗೆ, ಆಕೆಯ ಸಂಬಂಧಿಕರ ಮೇಲೆ ಮೈದುನನಿಂದ ಹಲ್ಲೆ!

    ಅಕ್ರಮ ಸಂಬಂಧವಿದೆ ಎಂದು ಅತ್ತಿಗೆ, ಆಕೆಯ ಸಂಬಂಧಿಕರ ಮೇಲೆ ಮೈದುನನಿಂದ ಹಲ್ಲೆ!

    ದಾವಣಗೆರೆ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನಗೊಂಡು ಮೈದುನ ತನ್ನ ಅತ್ತಿಗೆ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.

    ವೆಂಕಟೇಶ್ ಹಾಗೂ ಸುಶೀಲಾ ಹಲ್ಲೆಗೊಳಗಾದವರಾಗಿದ್ದು, ಮೈದುನ ತಿಮ್ಮೇಶ್ ಸಂತೆಬೆನ್ನೂರಿನಲ್ಲಿ ಪೊಲೀಸ್ ಪೇದೆಯಾಗಿದ್ದಾರೆ. ಸುಶೀಲಾ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಮೊಬೈಲ್ ನಲ್ಲಿ ಬೇರೆಯವರೊಂದಿಗೆ ಬಹಳ ಮಾತನಾಡುತ್ತೀಯಾ ಎಂದು ಅಕ್ರಮ ಸಂಬಂಧ ಇದೆಯೊಂದು ಮೈದುನ ತಿಮ್ಮೇಶ್ ಜಗಳವಾಡಿ ಸಂಬಂಧ ಕಟ್ಟಿದ್ದಾನೆ.

    ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ರಾಜಿ ಸಂಧಾನ ಸಹ ನಡೆದಿತ್ತು. ಆದರೆ ಕಳೆದ ರಾತ್ರಿ ತಿಮ್ಮೇಶ್ ಹಾಗೂ ಆತನ ಅಕ್ಕಂದಿರು ಸೇರಿ ಸುಶೀಲಾ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾದರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರೆ. ಇನ್ನೂ ಮೈದುನ ತಿಮ್ಮೇಶ್ ಹಾಗೂ ಆತನ ಅಕ್ಕಂದಿರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ

  • ಅನುಮಾನಪಟ್ಟಿದ್ದಕ್ಕೆ ಮೈದುನನ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆ!

    ಅನುಮಾನಪಟ್ಟಿದ್ದಕ್ಕೆ ಮೈದುನನ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆ!

    ಲಕ್ನೋ: ಪತ್ನಿಯೊಬ್ಬಳು ತನ್ನ ಮೈದುನ ಜೊತೆ ಸೇರಿ ಪತಿಯನ್ನೇ ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ.

    ದಿನೇಶ್ ಯಾದವ್(30) ಕೊಲೆಯಾದ ವ್ಯಕ್ತಿ. ಸ್ಯೋಯದ್ ಗ್ರಾಮದಲ್ಲಿ ಗುರುವಾರ ಸುಮಾರು 3.45ಕ್ಕೆ ದಿನೇಶ್ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಆಗ ಆತನನ್ನು ಹಿಂದಿನಿಂದ ಗುಂಡಿಕ್ಕಿ ಕೊಲೆ ಮಾಡಿದ್ದರು. ಗುಂಡೇಟಿಗೆ ದಿನೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ದಿನೇಶ್ ತಂದೆ ಈ ಕೊಲೆಗೆ ಸಂಬಂಧಪಟ್ಟಂತೆ ಇಬ್ಬರು ಅಪರಿಚಿತರ ಮೇಲೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಕಮಾಸಿನ್ ಠಾಣೆ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ಈ ಕೇಸ್ ವಿಚಾರಣೆ ಶುರು ಮಾಡಿದ ದಿನದಿಂದ ದಿನೇಶ್ ಪತ್ನಿ ಬಿಜಮಾ ದೇವಿ ಮೇಲೆ ಅನುಮಾನ ಮೂಡಿದೆ.

    ಬಿಜಮಾ ಹಾಗೂ ಆಕೆಯ ಮೈದುನ ಅಕಿಲೇಶ್ ಯಾದವ್ ನನ್ನು ವಿಚಾರಣೆ ಮಾಡಿದ್ದಾಗ ಸತ್ಯಾಂಶ ಹೊರಬಂದಿದೆ ಎಂದು ಬಬೇರೂ ಕ್ಷೇತ್ರದ ಹಿರಿಯ ಪೊಲೀಸ್ ಅಧಿಕಾರಿ ಓಂಪ್ರಕಾಶ್ ಹಾಗೂ ಕಮಾಸಿನ್ ಹಿರಿಯ ಅಧಿಕಾರಿ ರಾಕೇಶ್ ಪಾಂಡೆ ತಿಳಿಸಿದ್ದಾರೆ.

    ಬಿಜಮಾ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ದಿನೇಶ್ ನನ್ನ ಮೇಲೆ ಯಾವಾಗಲೂ ಅನುಮಾನಪಡುತ್ತಿದ್ದ. ಅಷ್ಟೇ ಅಲ್ಲದೇ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದ. ನನಗೆ ಆತನ ತಾತ, ಚಿಕ್ಕಪ್ಪ ಹಾಗೂ ಗ್ರಾಮದ ಹಿರಿಯರ ಜೊತೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸುತ್ತಿದ್ದ. ಇದ್ದರಿಂದ ನಾನು ಬೇಸತ್ತು ಆತನ ಕೊಲೆ ಮಾಡಲು ನಿರ್ಧರಿಸಿದೆ ಎಂದು ಬಿಜಮಾ ಪೊಲೀಸರ ಹತ್ತಿರ ತಿಳಿಸಿದ್ದಾಳೆ.

    ದಿನೇಶ್ ಹಾಗೂ ಬಿಜಮಾ ಮದುವೆಯಾಗಿ ಮೂರು ವರ್ಷವಾಗಿತ್ತು. ಅಖಿಲೇಶ್ ತನ್ನ ಅಣ್ಣನನ್ನು ಕೊಂದು ಆತ ಜೈಲಿಗೆ ಹೋಗಿ ಬಂದ ನಂತರ ಆತನನ್ನು ಮದುವೆಯಾಗುವುದ್ದಾಗಿ ಬಿಜಮಾ ಅಖಿಲೇಶ್‍ಗೆ ತಿಳಿಸಿದ್ದಳು. ಅಖಿಲೇಶ್ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ತನ್ನ ಮನೆಗೆ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಊಟದ ವಿಚಾರಕ್ಕೆ ಜಗಳ- ದೊಣ್ಣೆಯಿಂದ ಹೊಡೆದು ಬಾವನಿಂದ್ಲೇ ನಾದಿನಿಯ ಕೊಲೆ

    ಊಟದ ವಿಚಾರಕ್ಕೆ ಜಗಳ- ದೊಣ್ಣೆಯಿಂದ ಹೊಡೆದು ಬಾವನಿಂದ್ಲೇ ನಾದಿನಿಯ ಕೊಲೆ

    ಬೆಂಗಳೂರು: ಬಾವನಿಂದಲೇ ನಾದಿನಿ ಬರ್ಬರವಾಗಿ ಕೊಲೆಯಾಗಿರೋ ಘಟನೆ ನೆಲಮಂಗಲ ತಾಲೂಕಿನ ಲಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ಮಹಿಳೆಯನ್ನು ಪದ್ಮ(40) ಎಂದು ಗುರುತಿಸಲಾಗಿದೆ. ಈಕೆಯ ಬಾವ ಗಂಗಗುಡ್ಡಯ್ಯ ಈ ಕೃತ್ಯವೆಸಗಿರೋ ಆರೋಪಿ. 20 ವರ್ಷಗಳ ಹಿಂದೆ ಪದ್ಮಾ ಅವರ ಗಂಡ ತೀರಿಕೊಂಡಿದ್ದರಿಂದ ಬಾವನ ಮನೆಯಲ್ಲೇ ವಾಸವಿದ್ದರು.

    ಕಳೆದ ರಾತ್ರಿ ಊಟದ ವಿಚಾರದಲ್ಲಿ ನಾದಿನಿ ಪದ್ಮ ಹಾಗೂ ಗಂಗಗುಡ್ಡಯ್ಯ ನಡುವೆ ಜಗಳ ನಡೆದಿದೆ. ಈ ಗಲಾಟೆ ತಾರಕಕ್ಕೇರಿ ಆರೋಪಿ ಗಂಗಗುಡ್ಡಯ್ಯ ಪದ್ಮ ಅವರನ್ನು ದೊಣ್ಣೆಯಿಂದ ಬಡಿದು ಬರ್ಬರವಾಗಿ ಕೊಲೆಗೈದಿದ್ದಾನೆ.

    ಸದ್ಯ ಆರೋಪಿ ಗಂಗಗುಡ್ಡಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಆಸ್ತಿ ವಿಚಾರಕ್ಕೆ ಜಗಳ ತೆಗೆದು ಅತ್ತಿಗೆಯ ಮೇಲೆ 9 ತಿಂಗಳವರೆಗೆ ಅತ್ಯಾಚಾರವೆಸಗಿದ

    ಮುಂಬೈ: ವ್ಯಕ್ತಿಯೊಬ್ಬ ತನ್ನ ಅಣ್ಣನ ಹೆಂಡತಿಯ ಮೇಲೆ 9 ತಿಂಗಳವರೆಗೆ ನಿರಂತರವಾಗಿ ಅತ್ಯಾಚಾರವೆಸಗಿರೋ ಘಟನೆ ಮುಂಬೈ ಬಳಿಯ ಕಲ್ಯಾಣ್ ನಲ್ಲಿ ನಡೆದಿದೆ.

    ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ 35 ವರ್ಷದ ವ್ಯಕ್ತಿ ಅಣ್ಣನ ಮನೆಗೆ ಆಗಾಗ ಬಂದು ಹೋಗುತ್ತಿದ್ದ. 40 ವರ್ಷದ ಸಂತ್ರಸ್ತೆಯ ಗಂಡ ಅಂದ್ರೆ ಆರೋಪಿಯ ಅಣ್ಣ ಮಾನಸಿಕ ಅಸ್ವಸ್ಥರಾಗಿದ್ದರು ಎಂದು ವರದಿಯಾಗಿದೆ. ಅತ್ಯಾಚಾರವೆಸಗಿದ ಮೈದುನ ಮಹಿಳೆಗೆ ತನ್ನ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದ.

    ಫೆಬ್ರವರಿಯಲ್ಲಿ ಮಹಿಳೆಯ ಗಂಡನನ್ನು ಥಾಣೆಯಲ್ಲಿ ಮೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಒಬ್ಬರೇ ಇದ್ದಾಗ ಆರೋಪಿ ಅವರ ಮನೆಗೆ ಹೋಗಿದ್ದ. ಆಸ್ತಿಯಲ್ಲಿ ತನ್ನ ಪಾಲು ಕೊಡಲು ಕೇಳಿದ್ದ. ಇದಕ್ಕೆ ವಕೀಲರೊಬ್ಬರನ್ನು ನೇಮಿಸುವುದಾಗಿ ಮಹಿಳೆ ಹೇಳಿದ್ದರು. ಇದರಿಂದ ಕೋಪಗೊಂಡು ಆತ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ. ಅಂದಿನಿಂದ ಆರೋಪಿ ಅನೇಕ ಬಾರಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಬೆದರಿಕೆ ಒಡ್ಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

     

    9 ತಿಂಗಳ ನಿಂತರ ಲೈಂಗಿಕ ದೌರ್ಜನ್ಯದ ನಂತರ ಮಹಿಳೆ ಧೈರ್ಯ ಮಾಡಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ನಾವು ಕೂಡಲೇ ಆರೋಪಿಯನ್ನ ಬಂಧಿಸಿದ್ದೇವೆ. ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಮೃತ ಅಣ್ಣನ ಇನ್ಶುರೆನ್ಸ್ ಹಣಕ್ಕೇ ಕಣ್ಣು ಹಾಕಿ ಅತ್ತಿಗೆಯನ್ನು ಹೊರಹಾಕಿದ ಪಾಪಿ ಮೈದುನ!

    ಮೃತ ಅಣ್ಣನ ಇನ್ಶುರೆನ್ಸ್ ಹಣಕ್ಕೇ ಕಣ್ಣು ಹಾಕಿ ಅತ್ತಿಗೆಯನ್ನು ಹೊರಹಾಕಿದ ಪಾಪಿ ಮೈದುನ!

    ರಾಯಚೂರು: ಮದುವೆಯಾಗಿ ಕೆಲವೇ ತಿಂಗಳಲ್ಲಿ ಗಂಡನನ್ನ ಕಳೆದುಕೊಂಡ ಯುವತಿಗೆ ಆಸರೆಯಾಗಬೇಕಾದ ಗಂಡನ ಮನೆಯವರೇ ಯುವತಿಗೆ ವಂಚಿಸಿದ್ದಾರೆ. ಗಂಡನ ಇನ್ಸುರೆನ್ಸ್ ಹಣಕ್ಕಾಗಿ ನಾಲ್ಕು ವರ್ಷ ಹೋರಾಟ ನಡೆಸಿದ ಪತ್ನಿಗೆ ಸಿಕ್ಕಿದ್ದು ಮಾತ್ರ ನಿರಾಸೆ. ಸ್ವಂತ ಮೈದುನನೇ ಅತ್ತಿಗೆಗೆ ಸೇರಬೇಕಾದ ಹಣವನ್ನೇ ಲೂಟಿ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹೌದು. ರಾಯಚೂರಿನ ಲಿಂಗಸುಗೂರು ತಾಲೂಕಿನ ಮಾವಿನಬಾವಿ ಗ್ರಾಮದ ಮಂಜುಳಾ, ರಾಮನಗರದ ಬಿಡದಿಯ ಲಾರಿ ಡ್ರೈವರ್, ಹೂನೂರಪ್ಪ ಎಂಬವರನ್ನು ಮದುವೆ ಆಗಿದ್ದರು. ಆದ್ರೆ ಗಂಡ 4 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ಬಳಿಕ ಇನ್ಸುರೆನ್ಸ್ ಹಣಕ್ಕಾಗಿ ಪತ್ನಿ ವಕೀಲರನ್ನ ನೇಮಿಸಿದ್ರು. ಆದ್ರೆ ಲಿಂಗಸುಗೂರಿನ ವಕೀಲ ಭೂಪನಗೌಡ ಹಾಗೂ ಮೈದುನ ಬಸವರಾಜ್ ಸೇರಿ ಇನ್ಸುರೆನ್ಸ್‍ನಿಂದ ಬಂದ 6 ಲಕ್ಷದ 75 ಸಾವಿರ ಹಣವನ್ನು ಲೂಟಿ ಮಾಡಿದ್ದಾರೆ. ಮೈದುನ ಬಸವರಾಜ್ ತನ್ನ ಪತ್ನಿ ರೇಣುಕಾಳ ನಕಲಿ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಬಳಸಿ, ರೇಣುಕಾಳ ಹೆಸರಿನ ಜಾಗದಲ್ಲಿ ಮಂಜುಳಾ ಅಂತ ತಿದ್ದಿ, ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಿದ್ದಾನೆ.

    ಬಡತನದಲ್ಲಿರೋ ಮಂಜುಳಾಗೆ ತವರಿನಿಂದಲೂ ಯಾವುದೇ ಸಹಾಯ ಸಿಕ್ತಿಲ್ಲ. ಇತ್ತ ಗಂಡನ ಇನ್ಸುರೆನ್ಸ್ ಹಣವೂ ಇಲ್ಲ. ಇದೆಲ್ಲಾ ಗೊತ್ತಿದ್ರೂ ಪೊಲೀಸರು ಕೇಸ್ ದಾಖಲಿಸಿಕೊಳ್ಳದೇ ನ್ಯಾಯಾಲಯದ ಮೆಟ್ಟಿಲೇರಲು ಸಲಹೆ ನೀಡಿದ್ದಾರೆ.

    ಒಟ್ಟಿನಲ್ಲಿ ಅಣ್ಣ ಸತ್ತ ಬಳಿಕ ಅತ್ತಿಗೆಗೆ ಸಹಾಯ ಮಾಡಬೇಕಿದ್ದ ಮೈದುನ ವಂಚನೆ ಮಾಡಿ ಮನೆಯಿಂದ ಹೊರ ಹಾಕಿದ್ದು, ವಂಚಕ ಮೈದುನನಿಗೆ ಕೋರ್ಟ್ ತಕ್ಕ ಪಾಠ ಕಲಿಸಬೇಕಿದೆ.

     

  • ಅತ್ತಿಗೆಯನ್ನು ಎಳೆದಾಡಿ ಥಳಿಸಿದ ಮೈದುನ- ಬಿಡಿಸಲು ಬಂದವರಿಗೆ ಲಾಂಗ್, ಮಚ್ಚು ತೋರಿಸಿ ಧಮ್ಕಿ

    ಅತ್ತಿಗೆಯನ್ನು ಎಳೆದಾಡಿ ಥಳಿಸಿದ ಮೈದುನ- ಬಿಡಿಸಲು ಬಂದವರಿಗೆ ಲಾಂಗ್, ಮಚ್ಚು ತೋರಿಸಿ ಧಮ್ಕಿ

    ಗದಗ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಅಣ್ಣನ ಹೆಂಡತಿಯನ್ನು ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಗದಗ ತಾಲೂಕಿನ ಕಳಸಾಪೂರ ತಾಂಡದಲ್ಲಿ ನಡೆದಿದೆ.

    ಸೋಮವಾರ ಸಂಜೆ ವೇಳೆ ಮೈದುನನ ಅಟ್ಟಹಾಸಕ್ಕೆ ಮಹಿಳೆ ಸಂಗೀತಾ ಲಮಾಣಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ನರಳಾಡುವಂತಾಗಿದೆ. ಘಟನೆಯ ವೇಳೆ ಸಂಗೀತಾ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಮಂಚದಲ್ಲಿ ಮಲಗಿಕೊಂಡಿದ್ದ ವೇಳೆ ಮೈದುನ ಸುರೇಶ್ ಲಮಾಣಿ, ಎದ್ದೇಳಿ ಅಂತಾ ಅತ್ತಿಗೆಗೆ ಹೇಳಿ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ ಎಂದು ಗಾಯಾಳು ಪತಿ ಹಾಗೂ ಅತ್ತೆ ಆರೋಪ ಮಾಡಿದ್ದಾರೆ.

    ಮೈದುನನ ಹಲ್ಲೆಯಿಂದ ಸಂಗೀತಾರ ಬಾಯಿ, ಕೈ, ಬೆನ್ನು, ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಗೀತಾ ಅವರನ್ನು ಬಿಡಿಸಲು ಬಂದವರಿಗೆ ಸುರೇಶ್ ಲಾಂಗ್, ಮಚ್ಚುಗಳನ್ನ ತೋರಿಸಿ ಬೆದರಿಸಿ ರೌಡಿಯಂತೆ ವರ್ತಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

     

  • ಅಳಿಯನ ಕಿರುಕುಳಕ್ಕೆ ಬೇಸತ್ತು ಅತ್ತೆ ಆತ್ಮಹತ್ಯೆ!

    ಅಳಿಯನ ಕಿರುಕುಳಕ್ಕೆ ಬೇಸತ್ತು ಅತ್ತೆ ಆತ್ಮಹತ್ಯೆ!

    ಮೈಸೂರು: ಅಳಿಯನ ಕಿರುಕುಳದಿಂದ ಮನನೊಂದ ಅತ್ತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಬಸವೇಶ್ವರ ರಸ್ತೆಯಲ್ಲಿ ನಡೆದಿದೆ.

    50 ವರ್ಷದ ರಾಜೇಶ್ವರಿ ಮೃತ ದುರ್ದೈವಿ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅಲಗೂಡು ಗ್ರಾಮದ ರವಿಕುಮಾರ್‍ಗೆ ಮಗಳು ಸೌಮ್ಯಶ್ರೀಯನ್ನ ಕೊಟ್ಟು ಮದುವೆ ಮಾಡಲಾಗಿತ್ತು. 4 ತಿಂಗಳ ಕಾಲ ಅನ್ಯೂನ್ಯವಾಗಿಯೇ ಸಂಸಾರ ನಡೆಸಿದ್ದ ರವಿಕುಮಾರ್ ಬಳಿಕ ವರದಕ್ಷಿಣೆಗಾಗಿ ಪತ್ನಿ ಸೌಮ್ಯಶ್ರೀಯನ್ನ ತವರು ಮನೆಗೆ ಕಳುಹಿಸಿದ್ದ. ಕೊನೆಗೆ ನ್ಯಾಯಾಲಯದ ಆದೇಶದಂತೆ ಸೌಮ್ಯಶ್ರೀ ಗಂಡನ ಮನೆಗೆ ಸೇರಿದ್ದರು.

    ಆದರೆ ಮತ್ತೆ ವರದಕ್ಷಿಣೆಗಾಗಿ ಅಳಿಯ ರವಿಕುಮಾರ್ ಪತ್ನಿ ಸೌಮ್ಯಶ್ರೀಯನ್ನ ತವರು ಮನೆಗೆ ಕಳುಹಿಸಿದ್ದ. ಈ ಬಗ್ಗೆ ಸೌಮ್ಯಶ್ರೀ ತಾಯಿ ರಾಜೇಶ್ವರಿ ಅಳಿಯನಿಗೆ ಮೊಬೈಲ್‍ನಲ್ಲಿ ಬುದ್ಧಿವಾದ ಹೇಳಿದ್ರು. ಆದ್ರೆ ಇದನ್ನ ರೆಕಾರ್ಡ್ ಮಾಡಿಕೊಂಡಿದ್ದ ಅಳಿಯ ರವಿಕುಮಾರ್ ಬೆದರಿಕೆ ಹಾಕಿದ್ದಾಗಿ ಅತ್ತೆ ವಿರುದ್ಧ ಅರಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅಲ್ಲದೆ ಅತ್ತೆ ರಾಜೇಶ್ವರಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ರಾಜೇಶ್ವರಿ ಗುರುವಾರ ರಾತ್ರಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ಕನ ಸಾವಿಗೆ ಪತಿಯೇ ಕಾರಣವೆಂದು ಭಾವನನ್ನು ಕೊಚ್ಚಿ ಕೊಂದ ಬಾಮೈದ

    ಅಕ್ಕನ ಸಾವಿಗೆ ಪತಿಯೇ ಕಾರಣವೆಂದು ಭಾವನನ್ನು ಕೊಚ್ಚಿ ಕೊಂದ ಬಾಮೈದ

    ಬೆಂಗಳೂರು: ಅಕ್ಕನನ್ನು ಕೊಂದ ಅನ್ನೋ ದ್ವೇಷಕ್ಕೆ ಬಾಮೈದನೇ ಭಾವನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರಂನ ಚಿಕ್ಕದೇವಸಂದ್ರದಲ್ಲಿ ನಡೆದಿದೆ.

    ಚಲುವರಾಯ(35) ಕೊಲೆಯಾದ ವ್ಯಕ್ತಿ. ಈತನ ಮೊದಲ ಹೆಂಡತಿ ತಮ್ಮ ರಾಜಕುಮಾರನಿಂದ ಈ ಕೃತ್ಯ ನಡೆದಿದೆ. 10 ವರ್ಷಗಳ ಹಿಂದೆ ಚಲುವರಾಯನ ಪತ್ನಿ ಮಂಜುಳ ಆತ್ಮಹತ್ಯೆ ಮಾಡಿಕೊಂಡಿದ್ದು ಈಕೆ ಸಾವಿಗೆ ಪತಿಯೇ ಕಾರಣ ಅಂತಾ ಕುಟುಂಬಸ್ಥರು ದೂರು ನೀಡಿದ್ರು. ಪ್ರಕರಣ ಸಂಬಂಧ ಚಲುವರಾಯ 2 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಗೆ ಬಂದು ಮತ್ತೊಂದು ಮದುವೆಯಾಗಿದ್ದ.

    ಅಕ್ಕನನ್ನು ಕೊಂದ ಅನ್ನೋ ಸೇಡು ಹೊಂದಿದ್ದ ರಾಜಕುಮಾರ ತನ್ನ ಸ್ನೇಹಿತರೊಂದಿಗೆ ಸೇರಿ ಭಾವನ ವಿರುದ್ಧ ಸ್ಕೆಚ್ ಹಾಕಿ ಮನೆಗೆ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

    ಪ್ರಕರಣ ಸಂಬಂಧ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.