Tag: brother in law

  • ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ

    ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ

    ನವದೆಹಲಿ: ಆಕಸ್ಮಿಕ ವಿದ್ಯುತ್‌ ಆಘಾತದಿಂದ ದೆಹಲಿಯ ದೋಹ್ರದ ವ್ಯಕ್ತಿ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮೈದುನನ ಜೊತೆ ಸೇರಿಕೊಂಡು ತನ್ನ ಗಂಡನನ್ನೇ ಮಹಿಳೆ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

    ಜು.13 ರಂದು ಕರಣ್ ದೇವ್ (36) ಅವರನ್ನು ಮಾತಾ ರೂಪಾನಿ ಮ್ಯಾಗೊ ಆಸ್ಪತ್ರೆಗೆ ಪತ್ನಿ ಸುಶ್ಮಿತಾ ದಾಖಲಿಸಿದ್ದರು. ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿಕೊಂಡಿದ್ದರು. ವೈದ್ಯಕೀಯ ಪರೀಕ್ಷೆ ನಡೆಸಿದಾಗ, ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮೃತ ವ್ಯಕ್ತಿಯ ವಯಸ್ಸು ಮತ್ತು ಸಾವಿನ ಸಂದರ್ಭವನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದರು. ಇದಕ್ಕೆ ಮೃತ ವ್ಯಕ್ತಿಯ ಪತ್ನಿ ಮತ್ತು ಆತನ ಸೋದರಸಂಬಂಧಿ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದರು.

    ಕೊನೆಗೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಿದರು. ಘಟನೆ ನಡೆದ ಮೂರು ದಿನಗಳ ನಂತರ, ಮೃತ ವ್ಯಕ್ತಿಯ ಕಿರಿಯ ಸಹೋದರ ಕುನಾಲ್ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಕರಣ್‌ನನ್ನು ಆತನ ಪತ್ನಿ ಮತ್ತು ಮೃತನ ಸೋದರಸಂಬಂಧಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸುಶ್ಮಿತಾ ಮತ್ತು ರಾಹುಲ್ ನಡುವಿನ ಇನ್‌ಸ್ಟಾಗ್ರಾಮ್ ಚಾಟ್‌ನ ಪುರಾವೆಗಳನ್ನು ಸಹ ಒದಗಿಸಿದ್ದಾನೆ. ಚಾಟ್‌ನಲ್ಲಿ ಇಬ್ಬರೂ ಕೊಲೆ ಮಾಡುವ ಬಗ್ಗೆ ಸಂಚು ರೂಪಿಸಿರುವುದು ಬಹಿರಂಗವಾಗಿದೆ.

    ಮೃತನ ಪತ್ನಿ ಮತ್ತು ಆಕೆಯ ಮೈದುನನ ನಡುವೆ ಅನೈತಿಕ ಸಂಬಂಧವಿತ್ತು. ಇದರಿಂದಾಗಿ ಇಬ್ಬರೂ ಸೇರಿಕೊಂಡು ಕರಣ್‌ನನ್ನು ಕೊಲ್ಲಲು ನಿರ್ಧರಿಸಿದ್ದರು. ಊಟದ ಸಮಯದಲ್ಲಿ 15 ನಿದ್ರೆ ಮಾತ್ರೆಗಳನ್ನು ನೀಡಿ ಪ್ರಜ್ಞೆ ತಪ್ಪಿಸಿ, ಆಕಸ್ಮಿಕ ಸಾವು ಎಂದು ಬಿಂಬಿಸಲು ಕರಣ್‌ಗೆ ವಿದ್ಯುತ್ ಶಾಕ್ ನೀಡಿದ್ದಾರೆ.

    ಆರೋಪಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಸಮಯದಲ್ಲಿ ಆಕೆ ತನ್ನ ಪ್ರಿಯಕರ ಮೈದುನನ ಜೊತೆ ಸೇರಿಕೊಂಡು ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧನ ಪ್ರಕ್ರಿಯೆ ನಡೆಯುತ್ತಿದೆ ಎಂದು ಡಿಸಿಪಿ ದ್ವಾರಕಾ ಅಂಕಿತ್ ಸಿಂಗ್ ಹೇಳಿದ್ದಾರೆ.

  • ನಾದಿನಿಯ ಮೇಲೆ ಕಣ್ಣಾಕಿ ಹೆಣವಾದ ಬಾವ – ಸಿನಿಮೀಯ ಶೈಲಿಯಲ್ಲಿ ಅಪಹರಿಸಿ ಬರ್ಬರ ಕೊಲೆ

    ನಾದಿನಿಯ ಮೇಲೆ ಕಣ್ಣಾಕಿ ಹೆಣವಾದ ಬಾವ – ಸಿನಿಮೀಯ ಶೈಲಿಯಲ್ಲಿ ಅಪಹರಿಸಿ ಬರ್ಬರ ಕೊಲೆ

    ಬೆಂಗಳೂರು: ಹೆಂಡತಿ (Wife) ಮೇಲೆ ಕಣ್ಣಾಕಿದ್ದ ಬಾವನನ್ನು ಮುಗಿಸುವ ಸಲುವಾಗಿ ಆತನ ಕಾರ್‌ನಲ್ಲೇ ಅಪಹರಿಸಿ ಬರ್ಬರ ಹತ್ಯೆ ಮಾಡಿದ ಘಟನೆ ಹೊಸಕೋಟೆ (Hosakote) ವ್ಯಾಪ್ತಿಯಲ್ಲಿ ನಡೆದಿದೆ.

    ಮೊಹಮದ್ ಅಖ್ತರ್ ಅಲಿ (44) ಕೊಲೆಯಾದ ದುರ್ದೈವಿ. ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕಬ್ಬನ್ ಪೇಟೆಯ ಜುಮ್ಮಾ ಮಸೀದಿ ಬಳಿಯಿಂದ ಮೊಹಮದ್ ಅಖ್ತರ್ ಅಲಿಯನ್ನು ಅಪಹರಿಸಲಾಗಿದ್ದು, ಬಳಿಕ ಆತನ ಕತ್ತು ಬಿಗಿದು ಹತ್ಯೆಗೈದು ಹೊಸಕೋಟೆ ಸಮೀಪದ ಕಾಲುವೆಯಲ್ಲಿ ಶವ ಎಸೆದಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ್ದ ಕಾರನ್ನು ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲೇ ತಂದು ನಿಲ್ಲಿಸಿದ್ದಾರೆ. ಅಕ್ತರ್ ಅಲಿ ಹೆಂಡತಿ ನೀಡಿದ ಮಿಸ್ಸಿಂಗ್ ಕಂಪ್ಲೆಂಟ್‌ನಿಂದ ಕೊಲೆ ರಹಸ್ಯ ರಿವೀಲ್ ಆಗಿದೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದವ್ಳು ಪರಪುರುಷನ ಜೊತೆ ಡೇಟಿಂಗ್- ರೊಚ್ಚಿಗೆದ್ದ ಪತಿ ಮಚ್ಚಿನಿಂದ ಅಟ್ಯಾಕ್

    ಹತ್ಯೆಯಾದ ಮೊಹಮ್ಮದ್ ಅಖ್ತರ್ ಅಲಿಗೆ ಆತನ ನಾದಿನಿಯೊಂದಿಗೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗಿದೆ. ನಾದಿನಿಯ ಪತಿ ಷಹನವಾಜ್‌ನಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಷಹನವಾಜ್ ಸೂಚನೆಯ ಮೇರೆಗೆ ಸೋಮವಾರ ಕಬ್ಬನ್ ಪೇಟೆಯ ಜುಮ್ಮಾ ಮಸೀದಿ ಬಳಿಯಿಂದ ಮೊಹಮದ್ ಅಖ್ತರ್ ಅಲಿಯನ್ನು ಅಪಹರಿಸಿರುವ ಆರೋಪಿಗಳು, ಬಳಿಕ ಚಲಿಸುತ್ತಿದ್ದ ಕಾರಿನಲ್ಲೇ ಆತನ ಕತ್ತು ಬಿಗಿದು ಹತ್ಯೆಗೈದಿದ್ದಾರೆ. ಬಳಿಕ ಹೊಸಕೋಟೆಯ ಬಳಿ ಕಾಲುವೆಯಲ್ಲಿ ಶವವನ್ನು ಎಸೆದು ವಾಪಸ್ಸಾಗಿದ್ದಾರೆ. ಇತ್ತ ಪತಿ ನಾಪತ್ತೆಯಾಗಿರುವುದಾಗಿ ಅಖ್ತರ್ ಅಲಿ ಪತ್ನಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಗೇಟ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ಚಂದಗಾಣಲೆಂದು ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ಮದುಮಗ ದುರ್ಮರಣ!

    ಕೃತ್ಯಕ್ಕೆ ಬಳಸಿದ್ದ ಕಾರಿನಲ್ಲಿ ಮೃತನ ಮೊಬೈಲ್ ಫೋನ್ ಪತ್ತೆಯಾಗಿದ್ದು, ಕೊಲೆ ಆರೋಪಿಗಳು ಯಾರು ಎಂಬುದು ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಸುಪಾರಿ ನೀಡಿದ ನಾದಿನಿಯ ಗಂಡ ಷಹನವಾಜ್ ಸೇರಿದಂತೆ ಎಲ್ಲರಿಗೂ ಡ್ರಿಲ್ ನಡೆಸಲಾಗುತ್ತಿದೆ. ಇದನ್ನೂ ಓದಿ: 84,000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರಿಟ್ಟ ಮಹಿಳಾ ಅಧಿಕಾರಿ

  • ಸಿಪಿವೈ ಬಾವ ಮಹದೇವಯ್ಯ ಹತ್ಯೆ ಕೇಸ್ – ತಮಿಳುನಾಡು ಮೂಲದ ಓರ್ವ ಅರೆಸ್ಟ್

    ಸಿಪಿವೈ ಬಾವ ಮಹದೇವಯ್ಯ ಹತ್ಯೆ ಕೇಸ್ – ತಮಿಳುನಾಡು ಮೂಲದ ಓರ್ವ ಅರೆಸ್ಟ್

    ರಾಮನಗರ: ಬಿಜೆಪಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwar) ಅವರ ಬಾವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಮುರುಗನ್ ಎಂಬಾತನನ್ನು ಪೊಲೀಸರು ತಮಿಳುನಾಡಿನಲ್ಲಿ (TamilNadu) ಬಂಧಿಸಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಮಹದೇವಯ್ಯ (Mahadevaiah) ಅವರ ಪಕ್ಕದ ತೋಟದಲ್ಲಿಯೇ ಕೂಲಿ ಕೆಲಸ ಮಾಡ್ತಿದ್ದ ಮುರುಗನ್. ಮಹದೇವಯ್ಯ ಬಳಿ ಹಣ ಇರೋದನ್ನ ಗಮನಿಸಿದ್ದ. ಹಣಕ್ಕಾಗಿ ಕುಟುಂಬಸ್ಥರ ಜೊತೆ ಸೇರಿ ಮಹದೇವಯ್ಯ ಹತ್ಯೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿತು. ಹಣದ ಅವಶ್ಯಕತೆಯಿದ್ದುದರಿಂದ ಇತರರೊಂದಿಗೆ ಸೇರಿ ಮಹದೇವಯ್ಯನನ್ನ ಹತ್ಯೆ ಮಾಡಿರುವುದು ನಂತರ ಗೊತ್ತಾಗಿದೆ. ಇದೀಗ ಆರೋಪಿ ಮುರುಗನ್‌ನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

    ನಡೆದಿದ್ದೇನು..?:
    ಡಿಸೆಂಬರ್ 1ರ ರಾತ್ರಿ ಮಹದೇವಯ್ಯ ಅವರು ಚನ್ನಪಟ್ಟಣ ತೋಟದ ಮನೆಯಲ್ಲಿದ್ದರು. ಮಧ್ಯರಾತ್ರಿ 12 ಗಂಟೆಗೆ ತೋಟದ ಮನೆಗೆ ನುಗ್ಗಿದ ಮೂವರು ಅಪರಿಚಿತರು, ಬಳಿಕ ಮನೆಯಲ್ಲಿ ಲಾಕರ್ ಓಪನ್ ಮಾಡಿಸಿ ಪತ್ರ ದುಡ್ಡು ಕೊಂಡೊಯ್ದಿರುವ ಶಂಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಕೈ ಜಿಲ್ಲಾಧ್ಯಕ್ಷನ ಮೇಲೆ 50 ಲಕ್ಷ ವಂಚನೆ ಆರೋಪ- ನ್ಯಾಯ ಸಿಗದಿದ್ರೆ ಆತ್ಮಹತ್ಯೆಯ ಎಚ್ಚರಿಕೆ

    ಹಂತಕರು ಮಹದೇವಯ್ಯ ಅವರನ್ನು ಕಾರಿನಲ್ಲೇ ಕರೆದುಕೊಂಡು ಚನ್ನಪಟ್ಟಣದಿಂದ ಚಾಮರಾಜನಗರ ಜಿಲ್ಲೆಗೆ ಬಂದಿದ್ದು, ಬಳಿಕ ಕೊಳ್ಳೇಗಾಲದ ಬಳಿ ಹಂತಕರು ಡಾಬಾದಲ್ಲಿ ಪಾರ್ಟಿ ಮಾಡಿ ನಂತರ ಅದೇ ಮಾರ್ಗದ ಅಂಗಡಿಯಲ್ಲಿ ನೀರಿನ ಬಾಟ್ಲಿ ಖರೀದಿ ಮಾಡಿರುವ ಅನುಮಾನ ಹುಟ್ಟಿತ್ತು. ಇದಾದ ಬಳಿಕ ಹನೂರು ತಾಲೂಕಿ ನಾಲಾರೋಡ್ ಬಳಿಗೆ ಬಂದು ಕೊಲೆ ಮಾಡಿ ಅರಣ್ಯ ಪ್ರದೇಶದಲ್ಲಿ ಬಿಸಾಕಿ, ಬೆಳಗ್ಗೆ 5 ಗಂಟೆಗೆ ಹನೂರಿನ ರಾಮಾಪುರದಲ್ಲಿ ಕಾರು ನಿಲ್ಲಿಸಿರುವ ಹಂತಕರು, ಡಿ.2ರ ಬೆಳಗ್ಗೆ 5.15ಕ್ಕೆ ರಾಮಾಪುರದ ಮುಖ್ಯರಸ್ತೆಯಲ್ಲಿ ಟೀ ಕುಡಿದು ಹೋಗಿರುವ ಶಂಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ನಿರ್ಮಾಣವಾಗದ ಸ್ಕೈವಾಕ್ – ಜೀವ ಭಯದಲ್ಲಿ ರಸ್ತೆ ದಾಟುವ ಸಾರ್ವಜನಿಕರು

    ಪ್ರಕರಣ ಕುರಿತು ಎಲ್ಲಾ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿ ತನಿಖೆ ನಡೆಸುತ್ತಿದ್ದರು. ಇದಾದ ಕೆಲ ದಿನಗಳಲ್ಲಿ ತಮಿಳುನಾಡಿನ ಗಡಿ ಭಾಗದಲ್ಲಿ ಮಹದೇವಯ್ಯ ಶವ ಪತ್ತೆಯಾಗಿತ್ತು. ಮಹದೇವಯ್ಯ ಅವರನ್ನು ಹತ್ಯೆ ಮಾಡಿದ್ದ ಹಂತಕರು ಶವವನ್ನು ಚಾಮರಾಜನಗರ-ತಮಿಳುನಾಡು ಗಡಿ ಭಾಗದ ಅರಣ್ಯ ಪ್ರದೇಶದ ಒಳಗೆ ಬಿಸಾಕಿದ್ದರು. ಇದನ್ನೂ ಓದಿ: ಸಿಪಿವೈ ಬಾವ ನಾಪತ್ತೆ ಪ್ರಕರಣ – ಕಾರು ಪತ್ತೆ, ಕಿಡ್ನ್ಯಾಪ್ ಶಂಕೆಗೆ ಪುಷ್ಠಿ ನೀಡಿದ ರಕ್ತದ ಕಲೆ!

    ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಹದೇವಯ್ಯ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬೆಂಗಳೂರಿನ ಗಿರಿನಗರದಲ್ಲಿ ವಾಸವಿದ್ದ ಮಹದೇವಯ್ಯ ಬೆಂಗಳೂರಿನ (Bengaluru) ಮನೆ ರಿಪೇರಿ ಹಿನ್ನೆಲೆ ಕಳೆದ ಕೆಲ ದಿನಗಳಿಂದ ಚನ್ನಪಟ್ಟಣ ತಾಲೂಕಿನ ವಡ್ಡರದೊಡ್ಡಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಮೆಗಾ ಸಿಟಿ ಡೆವಲಪರ್ಸ್ ನಿರ್ದೇಶಕರಾಗಿದ್ದ ಇವರು ಸಿ.ಪಿ.ಯೋಗೇಶ್ವರ್ ಅವರ ಕೆಲ ಕಂದಾಯದ ವಿಚಾರಗಳನ್ನೂ ನೋಡಿಕೊಳ್ಳುತ್ತಿದ್ದರು. ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದರಿಂದ ಸಾಕಷ್ಟು ಭೂ ವಿವಾದ, ವ್ಯಾಜ್ಯಗಳು ಕೋರ್ಟ್ನಲ್ಲಿ ಇದ್ದವು ಎನ್ನಲಾಗಿದೆ. ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿಯೊಂದರ ಪ್ರಮುಖ ದಾಖಲೆಗಳು ಮಹದೇವಯ್ಯ ಬಳಿ ಇದ್ದಿದ್ದರಿಂದ ಯಾರೋ ಸುಪಾರಿ ಕೊಟ್ಟು ಮಹದೇವಯ್ಯ ಅವರ ಕೊಲೆ ಮಾಡಿಸಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿತ್ತು.

  • ಸಿಪಿವೈ ಬಾವ ನಾಪತ್ತೆ ಪ್ರಕರಣ ದುರಂತ ಅಂತ್ಯ – ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ, ಅಂತ್ಯಕ್ರಿಯೆಗೆ ಸಿದ್ಧತೆ

    ಸಿಪಿವೈ ಬಾವ ನಾಪತ್ತೆ ಪ್ರಕರಣ ದುರಂತ ಅಂತ್ಯ – ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ, ಅಂತ್ಯಕ್ರಿಯೆಗೆ ಸಿದ್ಧತೆ

    ರಾಮನಗರ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwar) ಅವರ ಬಾವ ಮಹದೇವಯ್ಯ (Mahadevaiah) ಅನುಮಾನಸ್ಪದ ನಾಪತ್ತೆ ಪ್ರಕರಣ ದುರಂತ ಅಂತ್ಯ ಕಂಡಿದೆ. ಶುಕ್ರವಾರ ರಾತ್ರಿ ತೋಟದ ಮನೆಯಿಂದ ಕಾಣೆಯಾಗಿದ್ದ ಮಹದೇವಯ್ಯ ಇಂದು ತಮಿಳುನಾಡು ಗಡಿ ಭಾಗದಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ. ಕಂದಕದಲ್ಲಿ ಬಿದ್ದಿದ್ದ ಶವವನ್ನು ಹೊರತೆಗೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಬಾವ ಮಹಾದೇವಯ್ಯ ಚನ್ನಪಟ್ಟಣದ (Channapatna) ವಡ್ಡರದೊಡ್ಡಿಯ ತೋಟದ ಮನೆಯಿಂದ ಶುಕ್ರವಾರ ತಡರಾತ್ರಿ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದರು. ಪ್ರಕರಣದ ಸುತ್ತ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಮಹದೇವಯ್ಯ ಅವರನ್ನು ಕಿಡ್ನ್ಯಾಪ್ (Kidnap)  ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕುಟುಂಬಸ್ಥರು ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಭಾನುವಾರ ಸಂಜೆ ಮಹದೇವಯ್ಯ ಅವರ ಕಾರು ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ರಾಮಾಪುರದ ಬಳಿ ಮಹದೇವಯ್ಯ ಕಾರು ಪತ್ತೆಯಾಗಿದ್ದು, ಕಾರಿನ ಹಿಂಭಾಗ ರಕ್ತದ ಕಲೆ ಇದ್ದ ಹಿನ್ನೆಲೆ ಮಹದೇವಯ್ಯ ಅವರನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಕಾರು ನಿಲ್ಲಿಸಿದ್ದ ಸುತ್ತಮುತ್ತಲಿನ ಸ್ಥಳಗಳ ಸಿಸಿಟಿವಿ ಪರಿಶೀಲಿಸಿದ ಪೊಲೀಸರು, ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳ ಚಲನವಲನಗಳನ್ನು ಆಧರಿಸಿ ರಾಮಾಪುರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ಹಿನ್ನೆಲೆ ಕೊನೆಗೂ ಮಹದೇವಯ್ಯ ಅವರ ಶವ ಪತ್ತೆಯಾಗಿದೆ. ಇದನ್ನೂ ಓದಿ: ಮದುವೆಗೆ ಹೋಗಿ ಬರುತ್ತಿದ್ದವರ ಕಾರು ಅಪಘಾತ – ಇಬ್ಬರು ಸಾವು, ಐವರು ಗಂಭೀರ

    ಮಹದೇವಯ್ಯ ಅವರನ್ನು ಹತ್ಯೆ ಮಾಡಿದ್ದ ಹಂತಕರು ಶವವನ್ನು ಚಾಮರಾಜನಗರ-ತಮಿಳುನಾಡು ಗಡಿ ಭಾಗದ ಅರಣ್ಯ ಪ್ರದೇಶದ ಒಳಗೆ ಬಿಸಾಕಿದ್ದರು. ಸತತ ಐದಾರು ತಾಸು ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಸ್ಥಳ ಮಹಜರ್ ನಡೆಸಿ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ಬಳಿಕ ರಾತ್ರಿ 8 ಗಂಟೆ ಸುಮಾರಿಗೆ ಅರಣ್ಯದಿಂದ ಮೃತ ದೇಹವನ್ನು ಮೇಲಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಶವ ರವಾನೆ ಮಾಡಲಾಯಿತು. ಇದನ್ನೂ ಓದಿ: ಬಿಜೆಪಿ ಟೆಕೆಟ್‌ಗಾಗಿ ಕೋಟಿ ಡೀಲ್‌ – ಚೈತ್ರಾಗೆ ಜಾಮೀನು ಮಂಜೂರು

    ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಹದೇವಯ್ಯ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬೆಂಗಳೂರಿನ ಗಿರಿನಗರದಲ್ಲಿ ವಾಸವಿದ್ದ ಮಹದೇವಯ್ಯ ಬೆಂಗಳೂರಿನ (Bengaluru) ಮನೆ ರಿಪೇರಿ ಹಿನ್ನೆಲೆ ಕಳೆದ ಕೆಲ ದಿನಗಳಿಂದ ಚನ್ನಪಟ್ಟಣ ತಾಲೂಕಿನ ವಡ್ಡರದೊಡ್ಡಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಮೆಗಾ ಸಿಟಿ ಡೆವಲಪರ್ಸ್ ನಿರ್ದೇಶಕರಾಗಿದ್ದ ಇವರು ಸಿ.ಪಿ.ಯೋಗೇಶ್ವರ್ ಅವರ ಕೆಲ ಕಂದಾಯದ ವಿಚಾರಗಳನ್ನೂ ನೋಡಿಕೊಳ್ಳುತ್ತಿದ್ದರು. ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದರಿಂದ ಸಾಕಷ್ಟು ಭೂ ವಿವಾದ, ವ್ಯಾಜ್ಯಗಳು ಕೋರ್ಟ್ನಲ್ಲಿ ಇದ್ದವು ಎನ್ನಲಾಗಿದೆ. ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿಯೊಂದರ ಪ್ರಮುಖ ದಾಖಲೆಗಳು ಮಹದೇವಯ್ಯ ಬಳಿ ಇದ್ದಿದ್ದರಿಂದ ಯಾರೋ ಸುಪಾರಿ ಕೊಟ್ಟು ಮಹದೇವಯ್ಯ ಅವರ ಕೊಲೆ ಮಾಡಿಸಿದ್ದಾರಾ ಎಂಬ ಅನುಮಾನಗಳು ಕೂಡಾ ವ್ಯಕ್ತವಾಗಿವೆ. ಇದನ್ನೂ ಓದಿ: ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

    ಒಟ್ಟಾರೆ ರಿಯಲ್ ಎಸ್ಟೇಟ್ ಉದ್ಯಮಿ ಮಹದೇವಯ್ಯ ಅವರ ಬದುಕು ದುರಂತ ಅಂತ್ಯ ಕಂಡಿದೆ. ಅವರ ಸಾವಿಗೆ ಕಾರಣ ಏನು? ಕಿಡ್ನ್ಯಾಪ್ ಮಾಡಿ ಹತ್ಯೆಗೆ ಸುಪಾರಿ ಕೊಟ್ಟಿದ್ದು ಯಾರು ಎನ್ನುವುರ ಕುರಿತು ತನಿಖೆ ಚುರುಕುಗೊಳಿಸಿರುವ ಪೊಲೀಸರು, ಸಿಸಿಟಿವಿ ವೀಡಿಯೋ ಹಾಗೂ ಪೋನ್ ಲೊಕೇಷನ್ ಆಧಾರದ ಮೇಲೆ ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.  ಇದನ್ನೂ ಓದಿ: ಕಾಡಾನೆ ದಾಳಿಗೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಬಲಿ

  • ಊಟ ನೀಡೋ ವಿಚಾರಕ್ಕೆ ಜಗಳ – ಬಾಮೈದನಿಂದಲೇ ಯೋಧನ ಕೊಲೆ

    ಊಟ ನೀಡೋ ವಿಚಾರಕ್ಕೆ ಜಗಳ – ಬಾಮೈದನಿಂದಲೇ ಯೋಧನ ಕೊಲೆ

    ಬಾಗಲಕೋಟೆ: ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದ ಬಾವನನ್ನು ಬಾಮೈದನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.

    POLICE JEEP

    ಕರಿಸಿದ್ದಪ್ಪ ಕಳಸದ(25) ಮೃತ ಭಾರತೀಯ ಸೇನೆ ಯೋಧರಾಗಿದ್ದು, ಆರೋಪಿಯನ್ನು ಸಿದ್ದನಗೌಡ ದೂಳಪ್ಪ ಎಂದು ಗುರುತಿಸಲಾಗಿದೆ. ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ ಕಳಸದ ಅವರು ರಜೆ ಹಿನ್ನೆಲೆ ನಾಲ್ಕು ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದರು. ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ಮತ್ತಷ್ಟು ಎಲೆಕ್ಟ್ರಿಕ್ ಬಸ್‍ಗಳು – ಆಗಸ್ಟ್ 15ಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

    ಎರಡು ವರ್ಷಗಳ ಹಿಂದೆ ಕರಿಸಿದ್ದಪ್ಪ ಕಳಸದ, ವಿದ್ಯಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಗುರುವಾರ ರಾತ್ರಿ ಊಟ ನೀಡುವ ವೇಳೆ ದಂಪತಿ ನಡುವೆ ಜಗಳವಾಗಿದೆ. ಇದರಿಂದಾಗಿ ವಿದ್ಯಾ ತಮ್ಮ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಸಿದ್ದನಗೌಡ ದೂಳಪ್ಪ ತನ್ನ ಸಹೋದರಿಗೆ ಕಿರುಕುಳ ಕೊಡುತ್ತಿಯಾ ಎಂದು ಚಾಕು ಇರಿದು ಕರಿಸಿದ್ದಪ್ಪ ಕಳಸದರನ್ನು ಕೊಲೆ ಮಾಡಿದ್ದಾನೆ. ಇದೀಗ ಸ್ಥಳಕ್ಕೆ ಕೆರೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗುಂಪು ಘರ್ಷಣೆಗೆ ಇಬ್ಬರು ಬಲಿ – ಕೊಪ್ಪಳದ ಹುಲಿಹೈದರ್ ಗ್ರಾಮದಲ್ಲಿ ನಿಷೇಧಾಜ್ಞೆ

    Live Tv
    [brid partner=56869869 player=32851 video=960834 autoplay=true]

  • ಡ್ರಿಂಕ್ಸ್‌ ಮಾಡಲು ಪತಿಯನ್ನು ಕರೆದುಕೊಂಡು ಹೋಗುತ್ತಿದ್ದನೆಂದು ಬಾವನನ್ನೇ ಕೊಂದಳು!

    ಡ್ರಿಂಕ್ಸ್‌ ಮಾಡಲು ಪತಿಯನ್ನು ಕರೆದುಕೊಂಡು ಹೋಗುತ್ತಿದ್ದನೆಂದು ಬಾವನನ್ನೇ ಕೊಂದಳು!

    ನವದೆಹಲಿ: ಬಾವನ ಕೊಂದ ಆರೋಪದಡಿ 35 ವರ್ಷದ ಮಹಿಳೆ ಮತ್ತು ಆಕೆಯ ಸಹೋದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ದುರ್ದೈವಿಯನ್ನು ಇಕ್ರಾರ್ ಹುಸೇನ್(47) ಎಂದು ಗುರುತಿಸಲಾಗಿದ್ದು, ಈತ ದೆಹಲಿಯ ನಿವಾಸಿ ಸಿಕಂದರ್‍ಪುರದ ಸ್ಕ್ರ್ಯಾಪ್ ಯಾರ್ಡ್‍ನಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಫೆಬ್ರವರಿ 1ರಂದು ಗುರ್ಗಾಂವ್-ಫರಿದಾಬಾದ್ ರಸ್ತೆಯ ಖುಷ್ಬೂ ಚೌಕ್ ಬಳಿಯ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವ್ಯಕ್ತಿಯ ಮರಣೋತ್ತರ ಪರೀಕ್ಷೆ ವೇಳೆ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್

    ಇದೀಗ ಮೃತ ವ್ಯಕ್ತಿಯ ಸಹೋದರನ ದೂರಿನ ಮೇರೆಗೆ ಸುಶಾಂತ್ ಲೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಕ್ರಾನ್ ಅವರನ್ನು ಅವರ ಅತ್ತಿಗೆಯೇ ಸ್ಕ್ರ್ಯಾಪ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಹೀಮ್ ಅಲ್ವಿ ಅಕಾ ಮುಸ್ರಫ್ ಜೊತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    POLICE JEEP

    ಈ ಪ್ರಕರಣ ಕುರಿತಂತೆ ತನಿಖೆ ವೇಳೆ ಮಹಿಳೆ ಇಕ್ರಾರ್ ತಮ್ಮ ವ್ಯವಹಾರಗಳ ಮಧ್ಯೆ ಪ್ರವೇಶಿಸಿದ್ದರಿಂದ ತಾನು ಮತ್ತು ತನ್ನ ಪತಿ ಬೇರೆಯಾಗಿದ್ದೆವು. ತಮ್ಮ ಪತಿ ಕೆಲಸದ ನಿಮಿತ್ತ ಎರಡು ವರ್ಷಗಳ ಕಾಲ ಮನೇಸರ್‌ಗೆ ತೆರಳಿದ್ದರು ಮತ್ತು ಅಪರೂಪಕ್ಕೆ ತನ್ನನ್ನು ಭೇಟಿ ಮಾಡಲು ಬರುತ್ತಿದ್ದರು. ಅಲ್ಲದೇ ತಮ್ಮ ಪತಿಯನ್ನು ಇಕ್ರಾನ್ ಪದೇ, ಪದೇ ಡ್ರಿಂಕ್ಸ್ ಮಾಡುವುದಕ್ಕೆ ಕರೆದುಕೊಂಡು ಹೋಗುತ್ತಿದ್ದ. ಇದರಿಂದ ತಮ್ಮ ಪತಿ ತನ್ನಿಂದ ಮತ್ತಷ್ಟು ದೂರ ಆದರು ಎಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಹಿಜಬ್‍ ಹೆಸರಿನಲ್ಲಿ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಕಸಿದುಕೊಳ್ಳುತ್ತಿದ್ದೇವೆ: ರಾಗಾ

    ಮಹಿಳೆ ಹಾಗೂ ಆಕೆಯ ಪತಿ ಜಗಳವಾಡಿದ್ದರು. ಇದಕ್ಕೆ ಕಾರಣ ತನ್ನ ಬಾವ ಎಂದು ದೂಷಿಸಿ, ಆತನನ್ನು ಕೊಂದರೆ ಪತಿಯ ಜೊತೆಗೆ ಇರಬಹುದು ಎಂದು ಭಾವಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ. ತನ್ನ ಸಹೋದ್ಯೋಗಿ ನಹೀಮ್ ಅವರ ಬಳಿ ಸಹಾಯ ಕೇಳಿದ್ದಾಳೆ. ನಂತರ ನಹೀಮ್ ಮೋಟರ್ ಬೈಕ್‍ನಲ್ಲಿ ಗುರ್ಗಾಂವ್ ಫರೀದಾಬಾದ್ ರಸ್ತೆಗೆ ಇಕ್ರಾನ್‍ರನ್ನು ಕರೆದುಕೊಂಡು ಹೋಗಿ ಮಫ್ಲರ್‌ನಿಂದ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!

    ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!

    ಮುಂಬೈ: ಪತಿಯ ಕುಡಿತದಿಂದ ಬೇಸತ್ತು ಪತ್ನಿ ಸೋದರಮಾವನ ಸಹಾಯದಿಂದ ಕೊಲೆ ಮಾಡಿದ ಘಟನೆಯೊಂದು ಪುಣೆಯಲ್ಲಿ ಬೆಳಕಿಗೆ ಬಂದಿದೆ.

    ಮೃತ ವ್ಯಕ್ತಿಯನ್ನು ಕಪ್ತಾನ್‍ಸಿಂಗ್ ನಾಯಕ್(37) ಎಂದು ಗುರುತಿಸಲಾಗಿದೆ. ಅಂಜಲಿ ಚವ್ಹಾಣ್ ನಾಯಕ್(32) ಮತ್ತು ಸೋದರಮಾವ ಗಜೇಂದ್ರ ಚಿತ್ತಾರಸಿಂಗ್ ನಾಯಕ್(36) ಸೇರಿ ಕಪ್ತಾನ್‍ಸಿಂಗ್ ನಾಯಕ್‍ನನ್ನು ಕೊಂದಿದ್ದಾರೆ. ಪ್ರಸ್ತುತ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!

    POLICE JEEP

    ಕಾರಣವೇನು?
    ಕಪ್ತಾನ್‍ಸಿಂಗ್ ಮತ್ತು ಅವರ ಪತ್ನಿ ಅಂಜಲಿ ಚವ್ಹಾಣ್-ನಾಯಕ್ ಮುಂಡ್ವಾದ ಕೇಶವನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮೃತ ವ್ಯಕ್ತಿ ದೆಹಲಿ ಮೂಲದವರಾಗಿದ್ದು, ಪುಣೆಯಲ್ಲಿ ವಾಸವಾಗಿದ್ದರು. ಕಪ್ತಾನ್‍ಸಿಂಗ್ ದಿನಗೂಲಿ ಕೆಲಸ ಮಾಡುತ್ತಿದ್ದು, ಕುಡಿತದ ಚಟ ಇತ್ತು.

    ಅಲ್ಲದೆ ಕುಡಿದು ಬಂದು ದಿನನಿತ್ಯ ಅಂಜಲಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ಅಂಜಲಿ ಭಾನುವಾರ ಮಧ್ಯಾಹ್ನ, ತನ್ನ ಸಹೋದರಿಯ ಪತಿಯಿಂದ ಸಹಾಯ ಕೇಳಿದ್ದಾಳೆ. ಈ ಸಂಬಂಧ ಇಬ್ಬರು ಸೇರಿ ತಮ್ಮ ಮನೆಯಲ್ಲೇ ಕಪ್ತಾನ್ ಸಿಂಗ್‍ನನ್ನು ಹೊಡೆದು ಕೊಂದಿದ್ದಾರೆ. ಇದನ್ನೂ ಓದಿ: ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್‍ಗೇ ತಂದ!

    ಮುಂಡ್ವಾ ಪೊಲೀಸ್ ಠಾಣೆಯ ಪೊಲೀಸರಿಗೆ ಈ ಮಾಹಿತಿ ತಿಳಿದ ತಕ್ಷಣ ಇಬ್ಬರನ್ನು ಬಂಧಿಸಿದ್ದಾರೆ. ಪ್ರಸ್ತುತ ಇವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಕೊಲೆ) ಮತ್ತು 34 ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

  • ಕೊರೊನಾ ಬಂತು ಅಂತ ವೃದ್ಧ ಅತ್ತೆಯನ್ನೇ ಹೊರ ಹಾಕಿದ ಅಳಿಯ..!

    ಕೊರೊನಾ ಬಂತು ಅಂತ ವೃದ್ಧ ಅತ್ತೆಯನ್ನೇ ಹೊರ ಹಾಕಿದ ಅಳಿಯ..!

    ಮಂಡ್ಯ: ಅತ್ತೆಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅಳಿಯ ಮನೆಗೆ ಸೇರಿಸಲು ಒಪ್ಪದೇ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬೈದು ಕಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಅರೆಚಾಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ವೈದ್ಯರು ಸಿದ್ದಮ್ಮರನ್ನು ಹೋಂ ಐಸೋಲೇಷನ್‍ನಲ್ಲಿ ಇರುವಂತೆ ಸೂಚಿಸಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿದ್ದಮ್ಮ ಅವರನ್ನು ಮನೆಗೆ ಬಿಡಲು ಬಂದಿದ್ದಾರೆ.

    ಈ ವೇಳೆ ಸಿದ್ದಮ್ಮಳ ಅಳಿಯ ಮುತ್ತೇಗೌಡ, ಆಕೆಗೆ ಕೊರೊನಾ ಪಾಸಿಟಿವ್ ಬಂದಿದೆ. ಆಕೆಯನ್ನು ಮನೆ ಸೇರಿಕೊಳ್ಳಲ್ಲ, ಆಕೆಯನ್ನು ಕರೆದುಕೊಂಡು ಹೋಗಿ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬೈದಿದ್ದಾನೆ. ಮುತ್ತೇಗೌಡನನ್ನು ಸಿದ್ದಮ್ಮ ಮನೆ ಅಳಿಯನನ್ನಾಗಿ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಅತ್ತೆಯ ಮನೆಗೆ ಅತ್ತೆಯನ್ನೇ ಬರಬೇಡಾ ಎಂದು ಅಳಿಯ ಹೇಳಿದ್ದಾನೆ.

    ಸದ್ಯ ಸಿದ್ದಮ್ಮ ಅವರನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ಅಕ್ಕನ ಜೊತೆಗೆ ಜಗಳ ತೆಗೆದ ಬಾವನ ಹತ್ಯೆಗೈದ ಬಾಮೈದ

    ಅಕ್ಕನ ಜೊತೆಗೆ ಜಗಳ ತೆಗೆದ ಬಾವನ ಹತ್ಯೆಗೈದ ಬಾಮೈದ

    ಬೆಂಗಳೂರು: ಅಕ್ಕನ ಜೊತೆ ಜಗಳ ತೆಗೆದ ಭಾವನನ್ನ ಭೀಕರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ನಂದಿನಿ ಬಡಾವಣೆಯ ಕಂಠೀರವ ನಗರ ರಸ್ತೆಯಲ್ಲಿ ನಡೆದಿದೆ.

    ಅಜೀಮ್ ಉಲ್ಲಾ ಕೊಲೆಯಾದ ವ್ಯಕ್ತಿ. ಅಜೀಮ್ ಪತ್ನಿಯೊಂದಿಗೆ ನಂದಿನಿ ಬಡಾವಣೆಯಲ್ಲಿ ವಾಸವಾಗಿದ್ದನು. ಆದ್ರೆ ಪದೇ ಪದೇ ಪತ್ನಿ ಜೊತೆ ಅಜೀಮ್ ಜಗಳ ಮಾಡಿಕೊಳ್ಳುತ್ತಿದ್ದನು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಕನ ಕಷ್ಟ ನೋಡದ ತಮ್ಮ ಖಾದರ್ ಭಾನುವಾರ ರಾತ್ರಿ ಬಾವನನ್ನು ಕೊಲೆಗೈದಿದ್ದಾನೆ. ಕೊಲೆಯ ಬಳಿಕ ಖಾದರ್ ಪರಾರಿಯಾಗಿದ್ದಾನೆ.

    ನಡೆದಿದ್ದು ಏನು?: ಸಂಜೆ ಐದು ಗಂಟೆಗೆ ಮನೆಗೆ ಬಂದ ಅಜೀಮ್ ಪತ್ನಿ ಜೊತೆ ಜಗಳ ಮಾಡಲು ಆರಂಭಿಸಿದ್ದನು. ಜಗಳದ ವಿಷಯ ತಿಳಿದ ಖಾದರ್ ಕೂಲಿ ನಗರದಿಂದ ಗೆಳೆಯರ ಜೊತೆ ಅಕ್ಕನ ಮನೆಗೆ ಬಂದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ರಾತ್ರಿ ಸುಮಾರು 11.30ಕ್ಕೆ ಕಲ್ಲಿನಿಂದ ಅಜೀಮ್ ತಲೆಯನ್ನ ಜಜ್ಜಿ ಖಾದರ್ ಕೊಲೆ ಮಾಡಿದ್ದಾನೆ.

    ಸಾರ್ವಜನಿಕರು ಕೊಲೆಯ ವಿಷಯವನ್ನು ನಂದಿನಿ ಲೇಔಟ್ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿದ್ದು, ಎಸ್ಕೇಪ್ ಆಗಿರುವ ಖಾದರ್ ಬಂಧನಕ್ಕೆ ಬಲೆ ಬೀಸಿದ್ದಾರೆ.

  • 10 ಮದ್ವೆಯಾದ್ರೂ ಮಕ್ಕಳಾಗಲಿಲ್ಲ – ಸಾವಿಗೆ ಕಾರಣವಾಯ್ತು ಕೊನೆಯ ನಿರ್ಧಾರ

    10 ಮದ್ವೆಯಾದ್ರೂ ಮಕ್ಕಳಾಗಲಿಲ್ಲ – ಸಾವಿಗೆ ಕಾರಣವಾಯ್ತು ಕೊನೆಯ ನಿರ್ಧಾರ

    – ಕಣ್ಣು ಕೆಂಪಾಗಿಸಿತ್ತು ಮೈದುನನ ನಿರ್ಧಾರ

    ಲಕ್ನೋ: 10 ಮದುವೆಯಾದರೂ ಮಕ್ಕಳಾಗದ ವ್ಯಕ್ತಿ ಅತ್ತಿಗೆಯಿಂದಲೇ ಕೊಲೆಯಾದ ಘಟನೆ ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಬೋಜಿಪುರದಲ್ಲಿ ನಡೆದಿದೆ.

    55 ವರ್ಷದ ಜಗನ್ ಲಾಲ್ ಕೊಲೆಯಾದ ವ್ಯಕ್ತಿ. ಜನವರಿ 20ರಂದು ಜಗನ್ ಕತ್ತು ಹಿಸುಕಿ ಕೊಲೆಗೈಯಲಾಗಿತ್ತು. ಸದ್ಯ ಪ್ರಕರಣವನ್ನ ಭೇದಿಸಿರುವ ಪೊಲೀಸರು ಜಗನ್ ಅತ್ತಿಗೆ ಸೇರಿದಂತೆ ನಾಲ್ವರನ್ನ ಬಂಧಿಸಿದ್ದಾರೆ. ಜಗನ್ 10 ಪತ್ನಿಯರ ಪೈಕಿ ಕೆಲವರು ಮೃತಪಟ್ಟಿದ್ರೆ, ಕೆಲವರು ಈತನಿಂದ ದೂರವಾಗಿದ್ದಾರೆ. ಇಬ್ಬರು ಪತ್ನಿಯರ ಜೊತೆ ಜಗನ್ ಗ್ರಾಮದಲ್ಲಿ ವಾಸವಾಗಿದ್ದನು. ಸಂತಾನಕ್ಕಾಗಿ ಜಗನ್ ಒಟ್ಟು 10 ಮದುವೆಯಾಗಿದ್ದರು.

    ಸಾವಿಗೆ ಕಾರಣ ‘ಆ’ ನಿರ್ಧಾರ: ಯೆಸ್, 10 ಮದುವೆಯಾದ ಜಗನ್ ತನಗೆ ಮಕ್ಕಳಾಗಲ್ಲೆಂಬ ಸತ್ಯ ಅರಿತಕೂಡಲೇ ತನ್ನ ಕೋಟ್ಯಂತರ ರೂ. ಮೌಲ್ಯದ 14 ಎಕರೆ ಜಮೀನು ತಮ್ಮನ್ನ ನೋಡಿಕೊಳ್ಳುತ್ತಿದ್ದ ಸಂಬಂಧಿ ಯುವಕನ ಹೆಸರಿಗೆ ಬರೆಯುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದರು. ಈ ವಿಷಯ ಕೇಳಿದ ಜಗನ್ ಅತ್ತಿಗೆ ಮುನ್ನಿದೇವಿಯ ಚಡಪಡಿಸಿದ್ದಳು. 14 ಎಕರೆ ಜಮೀನು ಬೇರೆಯವರ ಪಾಲಾಗೋದನ್ನ ತಡೆಯಲು ಮೈದುನನ ಕೊಲೆಗೆ ಸುಪಾರಿ ನೀಡಿದ್ದಳು.

    ಆಸ್ತಿಗಾಗಿ ಹಂತಕಿಯಾದ ಅತ್ತಿಗೆ: ತನ್ನ ಪರಿಚಯದ ಕೆಲ ಯುವಕರಿಗೆ ಹಣದಾಸೆ ತೋರಿಸಿದ ಮುನ್ನಿದೇವಿ ಮೈದುನನ ಕೊಲೆಗೆ ಸುಪಾರಿ ನೀಡಿದ್ದಳು. ಜನವರಿ 20ರಂದು ರಾತ್ರಿ ಒಂಟಿಯಾಗಿ ಹೊರಟಿದ್ದ ಜಗನ್ ಕತ್ತು ಹಿಸುಕಿ ಕೊಲ್ಲಲಾಗಿತ್ತು. ಕೊಲೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಕೊಲೆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ತಿಗಾಗಿ ಹಂತಕಿಯಾಗಿದ್ದ ಮುನ್ನಿದೇವಿಯನ್ನ ಕತ್ತಲು ಮನೆಗೆ ಅಟ್ಟಿದ್ದಾರೆ.

    ಕೆಂಪಾಗಿತ್ತು ಮುನ್ನಿದೇವಿ ಕಣ್ಣು: ಪ್ರಕರಣದ ತನಿಖೆ ನಡೆಸಲು ಬೋಜಿಪುರಿ ಠಾಣೆಯ ಇನ್‍ಸ್ಪೆಕ್ಟರ್ ಮನೋಜ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. 10 ಮದುವೆಯಾದರೂ ಮಕ್ಕಳಗಾದ ಕಾರಣ ಜಗನ್ ತಮಗೆ ಆಸರೆಯಾಗಿದ್ದ ಯುವಕನ ಹೆಸರಿಗೆ ಆಸ್ತಿ ಬರೆಯಲು ನಿರ್ಧರಿಸಿದ್ದರು. ಈ ವಿಷಯ ಅತ್ತಿಗೆ ಮುನ್ನಿದೇವಿಯ ಕಣ್ಣು ಕೆಂಪಾಗಿಸಿತ್ತು. ಜಮೀನಿಗಾಗಿ ಮೈದುನ ಕೊಲೆಗೆ ಸುಪಾರಿ ನೀಡಿದ್ದಳು. ಸದ್ಯ ದೇವ್‍ಸಿಂಗ್, ಪ್ರಹ್ಲಾದ್, ದರ್ಶನ್ ಸಿಂಗ್ ಮತ್ತು ಮುನ್ನಿದೇವಿಯನ್ನ ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸ್‍ಎಸ್‍ಪಿ ರೋಹಿತ್ ಸಿಂಗ್ ಹೇಳಿದ್ದಾರೆ.