Tag: brother

  • ಮೊಬೈಲ್ ಗೇಮ್ ಆಡಿದ್ದಕ್ಕೆ ಗದರಿದ ಸಹೋದರಿ – ಮನನೊಂದು ಬಾಲಕ ಆತ್ಮಹತ್ಯೆ

    ಮೊಬೈಲ್ ಗೇಮ್ ಆಡಿದ್ದಕ್ಕೆ ಗದರಿದ ಸಹೋದರಿ – ಮನನೊಂದು ಬಾಲಕ ಆತ್ಮಹತ್ಯೆ

    ನವದೆಹಲಿ: ಮೊಬೈಲ್ ಗೇಮ್ (Mobile Game) ಆಡಿದ್ದಕ್ಕಾಗಿ ಅಕ್ಕ ಗದರಿದ್ದಕ್ಕೆ ಮನನೊಂದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ (Delhi) ಆದರ್ಶ ನಗರದಲ್ಲಿ (Adarsh Nagar) ನಡೆದಿದೆ.

    ಆದರ್ಶ್ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆದರ್ಶ್ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ತನ್ನ ಅಧ್ಯಯನವನ್ನು ನಿರ್ಲಕ್ಷಿಸಿ ಮೊಬೈಲ್ ಗೇಮ್ ಆಡಿದ್ದಕ್ಕೆ ಅಕ್ಕ-ತಮ್ಮನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಅಕ್ಕ ತಮ್ಮನನ್ನು ಗದರಿದ್ದಾಳೆ. ಇದರಿಂದ ಮನನೊಂದ ಬಾಲಕ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಹಿಟ್ & ರನ್‌ಗೆ ವಿದ್ಯಾರ್ಥಿನಿ ಬಲಿ – ಟಿಪ್ಪರ್‌ ಚಾಲಕ ಅರೆಸ್ಟ್‌

    ಕೂಡಲೇ ಆದರ್ಶ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಅಷ್ಟು ಹೊತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‌ ಏರ್‌ಪೋರ್ಟ್‌ನಲ್ಲಿ ಎರಡು ವಿಮಾನಗಳ ಡಿಕ್ಕಿ – ವೀಡಿಯೋ ವೈರಲ್‌

  • ಅಣ್ಣ-ತಂಗಿಯರ ಪವಿತ್ರ ಬಂಧವನ್ನು ಸಾರುವ ಹಬ್ಬವೇ ರಕ್ಷಾ ಬಂಧನ !

    ಅಣ್ಣ-ತಂಗಿಯರ ಪವಿತ್ರ ಬಂಧವನ್ನು ಸಾರುವ ಹಬ್ಬವೇ ರಕ್ಷಾ ಬಂಧನ !

    ರಾಖಿ ಹಬ್ಬ (Rakhi Festival) ಬಂತೆಂದರೆ ಸಾಕು ಅಣ್ಣ-ತಂಗಿಯರಿಗೆ ಎಲ್ಲಿಲ್ಲದ ಸಂತೋಷ, ಸಂಭ್ರಮ. ಅಣ್ಣ-ತಂಗಿಯ ಬಾಂಧವ್ಯ ಎಂದರೆ ಅದು ಬೆಲೆಕಟ್ಟಲಾಗದ ಸಂಬಂಧ. ಪ್ರತಿಯೊಬ್ಬ ತಂಗಿಗೆ ಅಣ್ಣ ಶ್ರೀರಕ್ಷೆಯಾಗಿ ನಿಂತರೆ, ತಂಗಿ ಅಣ್ಣನಿಗೆ ಎರಡನೇ ಅಮ್ಮನ ರೀತಿ ಮಮತೆಯನ್ನು ತೋರುತ್ತಾಳೆ. ಇಂತಹ ಪವಿತ್ರ ಬಂಧವನ್ನು ಬೆಸೆಯುವ ಹಬ್ಬವೇ ರಕ್ಷಾ ಬಂಧನ. ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬದ ಬಳಿಕ ಬರುವ ಮತ್ತೊಂದು ಪವಿತ್ರ ಹಬ್ಬ ಈ ರಕ್ಷಾ ಬಂಧನ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನ (Raksha Bandhan) ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದ ಸಂದರ್ಭ ಮಾರುಕಟ್ಟೆಯಲ್ಲಿ ಅನೇಕ ಶೈಲಿಯ ರಾಖಿಗಳು ಕಾಣಸಿಗುತ್ತವೆ. ರಾಖಿ ಅಥವಾ ರಕ್ಷೆಯನ್ನು ಕಟ್ಟುವ ಮೂಲಕ ಪ್ರತಿಯೊಬ್ಬ ಅಣ್ಣ-ತಂಗಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದು ಒಡಹುಟ್ಟಿದವರ ನಡುವಿನ ವಾತ್ಸಲ್ಯ ಮತ್ತು ಪ್ರೀತಿಯನ್ನು ಅಚ್ಚಳಿಯದೆ ಉಳಿಯುವಂತೆ ಮಾಡುತ್ತದೆ.

    ಪುರಾಣದ ಕಥೆ:
    ಪ್ರತಿಯೊಂದು ಹಬ್ಬವೂ ಪುರಾಣದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುತ್ತದೆ. ಅದೇ ರೀತಿ ರಾಖಿ ಹಬ್ಬ ಅಥವಾ ರಕ್ಷಾ ಬಂಧನದ ಬಗ್ಗೆಯೂ ಪುರಾಣದಲ್ಲಿ ಉಲ್ಲೇಖವಿದೆ. ಭಗವಾನ್ ಕೃಷ್ಣನು ಶಿಶುಪಾಲನನ್ನು ಕೊಲ್ಲಲು ತನ್ನ ಸುದರ್ಶನ ಚಕ್ರವನ್ನು ಬಳಸುತ್ತಾನೆ. ಈ ವೇಳೆ ಆತನ ಕೈ ಬೆರಳಿಗೆ ಗಾಯವಾಗುತ್ತದೆ. ಎಲ್ಲರೂ ಕೈಬೆರಳಿಗೆ ಕಟ್ಟಲು ಬಟ್ಟೆಯನ್ನು ತರಲು ಹೋಗುತ್ತಾರೆ. ಆದರೆ ದ್ರೌಪದಿ ತನ್ನ ಸೀರೆಯ ಒಂದು ತುಂಡನ್ನು ಕತ್ತರಿಸಿ ರಕ್ತ ಸುರಿಯುತ್ತಿರುವ ಕೃಷ್ಣನ ಕೈಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಫಲವನ್ನು ನೀಡಿದ ಶ್ರೀಕೃಷ್ಣ ಹಸ್ತಿನಾಪುರದ ಅರಮನೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆದಾಗ ಅದು ಎಳೆದಷ್ಟು ಉದ್ದವಾಗುವಂತೆ ಮಾಡಿ ದ್ರೌಪದಿಯ ಮಾನ ಕಾಪಾಡುತ್ತಾನೆ.

    ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದ್ದಳು. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಭರವಸೆ ನೀಡುತ್ತಾನೆ.

    ಇನ್ನೊಂದು ಕಥೆಯೆಂದರೆ, ಬಲಿ ಚಕ್ರವರ್ತಿಯು ವಿಷ್ಣು ದೇವರನ್ನು ತನ್ನ ಅರಮನೆಗೆ ಆಹ್ವಾನಿಸುತ್ತಾನೆ. ಬಲಿಯ ಅರಮನೆಯಲ್ಲಿ ಉಳಿಯಲು ವಿಷ್ಣು ದೇವರು ಬಯಸುತ್ತಾರೆ. ಆದರೆ ಲಕ್ಷ್ಮೀ ದೇವಿಗೆ ಇದು ಇಷ್ಟವಾಗುವುದಿಲ್ಲ. ಆಕೆ ವಿಷ್ಣು ದೇವರನ್ನು ಹಿಂಬಾಲಿಸಿಕೊಂಡು ಬಂದು ಬಲಿ ಚಕ್ರವರ್ತಿ ಮುಂದೆ ಬಂದು ನಿಲ್ಲುತ್ತಾಳೆ. ಬಲಿ ಚಕ್ರವರ್ತಿಯ ಭಕ್ತಿಯಿಂದ ಪ್ರಸನ್ನಳಾದ ಲಕ್ಷ್ಮೀ ದೇವಿಯು ಆತನನ್ನು ತನ್ನ ಸಹೋದರನೆಂದು ಸ್ವೀಕರಿಸಿ ರಾಖಿ ಕಟ್ಟುತ್ತಾಳೆ. ತನ್ನ ರಾಜ್ಯದಿಂದ ಏನು ಬೇಕಾದರೂ ಕೇಳಬಹುದೆಂದು ಬಲಿ ಚಕ್ರವರ್ತಿಯು ಲಕ್ಷ್ಮೀ ದೇವಿಗೆ ಹೇಳುತ್ತಾನೆ.

    ಮತ್ತೊಮ್ಮೆ ರಾಕ್ಷಸರಿಗೂ, ದೇವತೆಗಳಿಗೂ ಭೀಕರ ಯುದ್ಧವಾಯಿತು. ಯುದ್ಧದಲ್ಲಿ ಅಸುರರೇ ಮೇಲುಗೈ ಪಡೆದು ಗೆಲ್ಲುವ ಸ್ಥಿತಿ ಉಂಟಾಯಿತು. ಇದರಿಂದ ಚಿಂತಾಕ್ರಾಂತನಾದ ಇಂದ್ರ ತನ್ನ ಆಸ್ಥಾನಕ್ಕೆ ಗುರು ಬೃಹಸ್ಪತಿಯನ್ನು ಕರೆಸಿ ಸಲಹೆಯನ್ನು ಕೇಳುತ್ತಾನೆ. ವೇಳೆ ಇಂದ್ರನ ಮಡದಿ ಇಂದ್ರಾಣಿ ಕೂಡ ಅಲ್ಲೇ ಇರುತ್ತಾಳೆ. ಬೃಹಸ್ಪತಿ ಮಾತನಾಡುವುದಕ್ಕೂ ಮೊದಲೇ ಇಂದ್ರಾಣಿ ಎದ್ದುನಿಂತು, ದೇವತೆಗಳನ್ನು ಗೆಲ್ಲಿಸುವ ತಂತ್ರ ನನಗೆ ಗೊತ್ತು. ನಾವೇ ಯುದ್ಧದಲ್ಲಿ ಗೆಲ್ಲುತ್ತೇವೆ ಎಂದು ಭರವಸೆ ನೀಡಿದಳು. ಇದಾದ ಮರುದಿನ ಇಂದ್ರಾಣಿ ಮಂತ್ರ ಪುರಸ್ಸರವಾಗಿ ತಯಾರಿಸಿದ ಒಂದು ರಕ್ಷೆಯನ್ನು ತನ್ನ ಪತಿಯ ಕೈಗೆ ಕಟ್ಟಿದಳು. ರಕ್ಷೆಯನ್ನು ಕಟ್ಟಿಸಿಕೊಂಡು ಇಂದ್ರ ಯುದ್ಧರಂಗಕ್ಕೆ ಕಾಲಿಟ್ಟಿದ್ದೇ ತಡ ಅಸುರರು ಚದುರಿ ಪರಾರಿಯಾದರು. ದೇವತೆಗಳ ಮುಂದೆ ಅಸುರರು ತಲೆ ಬಾಗಿದರು. ಇದರಿಂದ ದೇವತೆಗಳು ಯುದ್ಧವನ್ನು ಗೆದ್ದರು. ಇದೇ ರೀತಿ ಇನ್ನೂ ಅನೇಕ ದಂತಕಥೆಗಳಿವೆ.

    ಆಚರಣೆ ಹೇಗೆ?
    ಮೊದಲಿಗೆ ಸಹೋದರಿ, ಸಹೋದರನ ಹಣೆಗೆ ತಿಲಕವನ್ನು ಇಟ್ಟು, ನೆತ್ತಿಯ ಮೇಲೆ ಅಕ್ಕಿ ಅಥವಾ ಅಕ್ಷತೆಯನ್ನು ಹಾಕಬೇಕು. ಬಳಿಕ ಅಣ್ಣನಿಗೆ ಆರತಿ ಬೆಳಗಬೇಕು. ಕೊನೆಯಲ್ಲಿ ಸಹೋದರನಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು. ತಂಗಿ ರಾಖಿ ಕಟ್ಟಿದ ನಂತರ ಅಣ್ಣ ಪ್ರೀತಿಯ ಸಹೋದರಿಗೆ ಉಡುಗೊರೆ ಕೊಡುತ್ತಾನೆ. ಸಹೋದರಿಯು ತನ್ನ ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ಅವನ ರಕ್ಷಣೆಯನ್ನು ಕೋರುತ್ತಾಳೆ. ಇದು ಸಹೋದರನಿಗೆ ತನ್ನ ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುತ್ತದೆ. ಜೊತೆಗೆ ಸಹೋದರ ಮತ್ತು ಸಹೋದರಿಯರ ನಡುವಿನ ಬಂಧವನ್ನು ಬಲಪಡಿಸುತ್ತದೆ.

  • ವರದಕ್ಷಿಣೆ ಗಲಾಟೆ; ಮೈಸೂರಲ್ಲಿ ತಂಗಿಯ ಎದುರೇ ಅಣ್ಣನನ್ನು ಚುಚ್ಚಿ ಕೊಂದ ಪಾಪಿ ಗಂಡ

    ವರದಕ್ಷಿಣೆ ಗಲಾಟೆ; ಮೈಸೂರಲ್ಲಿ ತಂಗಿಯ ಎದುರೇ ಅಣ್ಣನನ್ನು ಚುಚ್ಚಿ ಕೊಂದ ಪಾಪಿ ಗಂಡ

    ಮೈಸೂರು: ವರದಕ್ಷಿಣೆ (Dowry) ಕಿರುಕುಳ ವಿಚಾರಕ್ಕೆ ಹೆಂಡತಿಯ ಅಣ್ಣನನ್ನೇ (Brother) ಗಂಡ (Husband) ಚುಚ್ಚಿ ಕೊಲೆ ಮಾಡಿದ ಘಟನೆ ಮೈಸೂರಿನ (Mysuru) ಕುವೆಂಪು ನಗರದಲ್ಲಿ (Kuvempu Nagar) ನಡೆದಿದೆ.

    ಅಭಿಷೇಕ್ (27) ಕೊಲೆಯಾದ ಅಣ್ಣ. ರವಿಚಂದ್ರ ಕೊಲೆ ಮಾಡಿದ ಆರೋಪಿ. ಬಾವ ಮತ್ತು ಬಾಮೈದ ನಡುವೆ ವರದಕ್ಷಿಣೆ ವಿಚಾರಕ್ಕೆ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯ ಕಂಡಿದೆ. ರವಿಚಂದ್ರ ಜಿಮ್ ತೆರೆಯಲು 5 ಲಕ್ಷ ಹಣ ಕೇಳಿದ್ದ. ಪ್ರತಿನಿತ್ಯ ಪತ್ನಿ ವಿದ್ಯಾಗೆ ವರದಕ್ಷಿಣೆ ತರುವಂತೆ ರವಿಚಂದ್ರ ಕಿರುಕುಳ ನೀಡುತ್ತಿದ್ದ. ಗಲಾಟೆ ಮಾಡುತ್ತಿದ್ದ ವೇಳೆ ವಿದ್ಯಾ ಅಣ್ಣನಿಗೆ ಕರೆ ಮಾಡಿದ್ದಾಳೆ. ವಿದ್ಯಾ ಅಣ್ಣ ಅಭಿಷೇಕ್ ಮನೆಗೆ ಬರುತ್ತಿದ್ದಂತೆ ಬಾಗಿಲು ಹಾಕಿ ರವಿಚಂದ್ರ ಏಕಾಏಕಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಅಭಿಷೇಕ್ ತಾಯಿ ಭಾಗ್ಯಮ್ಮ, ತಂಗಿಗೂ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಬಿಜೆಪಿಯ ಸಂವಿಧಾನ ವಿರೋಧಿ ನೀತಿಗಳಿಗೆ ಜನ ಎಚ್ಚರಿಕೆ ನೀಡಿದ್ದಾರೆ: ಹೆಚ್.ಸಿ.ಮಹದೇವಪ್ಪ

    ವರದಕ್ಷಿಣೆ ಕೊಟ್ಟು ಪೋಷಕರು 4 ವರ್ಷಗಳ ಹಿಂದೆ ಅದ್ದೂರಿಯಾಗಿ ವಿದ್ಯಾ-ರವಿಚಂದ್ರ ಮದುವೆ ಮಾಡಿದ್ದರು. 6 ತಿಂಗಳ ಬಳಿಕ ಮತ್ತೆ ವರದಕ್ಷಿಣೆ ತರುವಂತೆ ರವಿಚಂದ್ರ ಕಿರುಕುಳ ನೀಡಿದ್ದಾನೆ. ಈ ಹಿನ್ನೆಲೆ ಸಾಕಷ್ಟು ಬಾರಿ ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರೂ ಸ್ಪಂದಿಸಲಿಲ್ಲ ಎಂದು ಆರೋಪಿಸಲಾಗಿದೆ. ಕುವೆಂಪು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಚಿವರ ಮೌಲ್ಯಮಾಪನದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ: ಎಂ.ಬಿ ಪಾಟೀಲ್

  • ಪತಿ, ಮಾವ ಕೈ,ಕಾಲು ಕಟ್ಟಿ ಥಳಿಸಿದ್ದಲ್ಲದೇ ಬಲವಂತವಾಗಿ ಮಹಿಳೆಯ ಬಾಯಿಗೆ ಕೀಟನಾಶಕ ಸುರಿದ್ರು!

    ಪತಿ, ಮಾವ ಕೈ,ಕಾಲು ಕಟ್ಟಿ ಥಳಿಸಿದ್ದಲ್ಲದೇ ಬಲವಂತವಾಗಿ ಮಹಿಳೆಯ ಬಾಯಿಗೆ ಕೀಟನಾಶಕ ಸುರಿದ್ರು!

    – ತಡೆಯಲು ಹೋದ ಸಹೋದರನ ಮೇಲೆಯೂ ಹಲ್ಲೆ

    ಲಕ್ನೋ: ಪತಿ ಮತ್ತು ಮಾವ ಸೇರಿ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ಥಳಿಸಿದ್ದಲ್ಲದೇ ಆಕೆಯ ಬಾಯಿಗೆ ಕೀಟನಾಶಕವನ್ನು ಸುರಿದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ (Uttarpradesh) ಹಾಪುರ ಜಿಲ್ಲೆಯಲ್ಲಿ ನಡೆದಿದೆ.

    ಪತಿ ಮತ್ತು ಮಾವ ಮಹಿಳೆಗೆ ಥಳಿಸಿದ್ದಲ್ಲದೆ, ಆಕೆಯನ್ನು ಕೊಲ್ಲುವ ಉದ್ದೇಶದಿಂದ ಬೆಳೆಗೆ ಬಳಸುವ ಕೀಟನಾಶಕವನ್ನು ಆಕೆಯ ಬಾಯಿಗೆ ಸುರಿದಿದ್ದಾರೆ. ಈ ವೇಳೆ ಸಹೋದರ ವಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಆತನಿಗೂ ಥಳಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಘಟನೆ ವಿವರ: ಹಾಪುರ್ ಜಿಲ್ಲೆಯ ಗರ್ಮುಕ್ತೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬಗದ್‌ಪುರ ಗ್ರಾಮದ ನಿವಾಸಿ ಶೀಲಾ ಅವರು ಗಜ್ರೌಲಾ ಪೊಲೀಸ್ ಠಾಣಾ ವ್ಯಾಪ್ತಿಯ ಫಿರೋಜ್‌ಪುರ ಗ್ರಾಮದ ಸುರೇಂದ್ರ ಎಂಬಾತನನ್ನು ವಿವಾಹವಾಗಿದ್ದರು. ಮಂಗಳವಾರ ರಾತ್ರಿ 8.30ರ ಸುಮಾರಿಗೆ ಪೋಷಕರಿಗೆ ಶೀಲಾಳ ಮೇಲೆ ನಡೆದ ಹಲ್ಲೆಯ ಬಗ್ಗೆ ಮಾಹಿತಿ ಲಭಿಸಿದೆ.

    ವಿಚಾರ ಗೊತ್ತಾಗುತ್ತಿದ್ದಂತೆಯೇ ಶೀಲಾಳ ಸಹೋದರ ಜಯಪ್ರಕಾಶ್ ತನ್ನ ಸ್ನೇಹಿತನ ಜೊತೆ ನೇರವಾಗಿ ಆಕೆಯ ಮನೆಗೆ ಬಂದರು. ಈ ವೇಳೆ ಸಹೋದರನ ಮುಂದೆಯೇ ಪತಿ ಮತ್ತು ಮಾವ ಸೇರಿ ಆಕೆಯ ಕೈಕಾಲು ಕಟ್ಟಿ ಥಳಿಸಿದ್ದಾರೆ. ಇದನ್ನು ಕಣ್ಣಾರೆ ಕಂಡ ಸಹೋದರ ತಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸಹೋದರನ ಸಮ್ಮುಖದಲ್ಲಿಯೇ ಆರೋಪಿಗಳಿಬ್ಬರೂ ಬೆಳೆಗೆ ಬಳಸುವ ಕೀಟನಾಶಕವನ್ನು ಆಕೆಯ ಬಾಯಿಗೆ ಬಲವಂತವಾಗಿ ಸುರಿದಿದ್ದಾರೆ. ಪರಿಣಾಮ ಆಕೆಯ ಸ್ಥಿತಿ ಹದಗೆಟ್ಟಿದೆ. ಇದನ್ನೂ ಓದಿ: ಅಧಿಕಾರಿ ಆತ್ಮಹತ್ಯೆ ಪ್ರಕರಣ: ನಾಗೇಂದ್ರ ರಾಜೀನಾಮೆ, ಕೇಂದ್ರ ಏಜೆನ್ಸಿಯಿಂದ ತನಿಖೆಗೆ ಗೋವಿಂದ ಕಾರಜೋಳ ಆಗ್ರಹ

    ಕೂಡಲೇ ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರಿ ಇನ್ಸ್‌ಪೆಕ್ಟರ್ ಹರೀಶ್ ವರ್ಧನ್ ಸಿಂಗ್ ತಿಳಿಸಿದ್ದಾರೆ.

  • ಕಾಲೇಜಿಗೆ ಹೋಗುವಂತೆ ಬೈದಿದ್ದಕ್ಕೆ ಬಾವಿಗೆ ಜಿಗಿದ ತಂಗಿ- ರಕ್ಷಿಸಲು ಹೋದ ಅಣ್ಣನೂ ಸಾವು

    ಕಾಲೇಜಿಗೆ ಹೋಗುವಂತೆ ಬೈದಿದ್ದಕ್ಕೆ ಬಾವಿಗೆ ಜಿಗಿದ ತಂಗಿ- ರಕ್ಷಿಸಲು ಹೋದ ಅಣ್ಣನೂ ಸಾವು

    ಕಲಬುರಗಿ: ಕ್ಲುಲ್ಲಕ ಕಾರಣಕ್ಕೆ ಬೇಸತ್ತು ಬಾವಿಗೆ ಜಿಗಿದ ತಂಗಿಯನ್ನು ರಕ್ಷಿಸಲು ಹೋಗಿ ಅಣ್ಣ- ತಂಗಿ ಇಬ್ಬರೂ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಮೃತರನ್ನು ಸಂದೀಪ್‌ (21) ಮತ್ತು ನಂದಿನಿ (18) ಎಂದು ಗುರುತಿಸಲಾಗಿದೆ. ಈ ಘಟನೆ ಸೋಮವಾರ ಸಂಜೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಾವಿಗೆ ಹಾರಿದ ತಂಗಿ: ನಂದಿನಿಗೆ ಕಾಲೇಜಿಗೆ ಹೋಗು ಎಂದು ಅಣ್ಣ ಸಂದೀಪ್‌ ಬೈದು ಬುದ್ಧಿವಾದ ಹೇಳಿದ್ದಾನೆ. ಇಷ್ಟಕ್ಕೆ ಬೇಸರಗೊಂಡ ನಂದಿನಿ ಹತ್ತಿರದ ಬಾವಿಗೆ ಹೋಗಿ ಜಿಗಿದಿದ್ದಾಳೆ. ಇತ್ತ ತಂಗಿ ಬಾವಿಗೆ ಹಾರಿದ ವಿಚಾರ ತಿಳಿಯುತ್ತಿದ್ದಂತೆಯೇ ಅಣ್ಣ ಸಂದೀಪ್‌ ಆಕೆಯನ್ನು ರಕ್ಷಣೆ ಮಾಡಲೆಂದು ತಾನೂ ಬಾವಿಗೆ ಹಾರಿದ್ದಾನೆ. ಪರಿಣಾಮ ಈಜು ಬಾರದೆ ತಂಗಿಯ ಜೊತೆ ಆತನೂ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಮೇಯರ್‌ ಚುನಾವಣೆಯಲ್ಲಿ ಸೋಲು- ಗಳಗಳನೇ ಕಣ್ಣೀರಿಟ್ಟ ಎಎಪಿ ಅಭ್ಯರ್ಥಿ

    ಗೊತ್ತಾಗಿದ್ದು ಹೇಗೆ..?: ಬಾವಿಯ ಪಕ್ಕದಲ್ಲಿ ಮೃತ ನಂದಿನಿ ತಲೆಗೆ ಮುಡಿದುಕೊಂಡ ಹೂವು ಬಿದ್ದಿರುವುದನ್ನು ಗಮನಿಸಿದ ಪಾಲಕರಿಗೆ ಅನುಮಾನ ಬಂದು ಹುಡುಕಾಟ ನಡೆಸಿದಾಗ ಅಣ್ಣ-ತಂಗಿಯ ಶವವಾಗಿ ಪತ್ತೆಯಾಗಿದ್ದಾರೆ.

    ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಡಿವೈಎಸ್.ಪಿ ಎಸ್.ಎಸ್ ಹಿರೇಮಠ ತಿಳಿಸಿದ್ದಾರೆ.

  • ತಮ್ಮನ ಪ್ರೇಮ ಪ್ರಕರಣ- ಟವರ್ ಏರಿ ಆತ್ಮಹತ್ಯೆಗೆ ಅಣ್ಣ ಯತ್ನ

    ತಮ್ಮನ ಪ್ರೇಮ ಪ್ರಕರಣ- ಟವರ್ ಏರಿ ಆತ್ಮಹತ್ಯೆಗೆ ಅಣ್ಣ ಯತ್ನ

    ರಾಯಚೂರು: ತಮ್ಮನ ಪ್ರೇಮ ಪ್ರಕರಣದಿಂದ ಬೇಸತ್ತ ಅಣ್ಣ ಮೊಬೈಲ್ ಟವರ್ (Mobile Tower) ಏರಿ ಕುಳಿತ ಪ್ರಸಂಗವೊಂದು ರಾಯಚೂರು (Raichur) ಜಿಲ್ಲೆಯಲ್ಲಿ ನಡೆದಿದೆ.

    ರಾಯಚೂರಿನ ಮಾನ್ವಿ ಪಟ್ಟಣದ ಕುಂಬಾರ ಓಣಿಯಲ್ಲಿ ಈ ಘಟನೆ ನಡೆದಿದೆ. ಟವರ್ ಏರಿದ ಯುವಕನನ್ನು ಅಮ್ಜದ್ ಖಾನ್ ಎಂದು ಗುರುತಿಸಲಾಗಿದ್ದು, ಈತ ಸುಮಾರು ಒಂದು ಗಂಟೆ ಕಾಲ ಟವರ್ ನಲ್ಲೇ ಕಾಲ ಕಳೆದಿದ್ದಾನೆ.

    ಟವರ್ ಏರಿದ್ದು ಯಾಕೆ..?: ಅಮ್ಜದ್ ಖಾನ್ ಸಹೋದರ ಶೋಯಲ್ ಖಾನ್ ತಮ್ಮದೇ ಸಮುದಾಯದ ಯುವತಿಯನ್ನ ಪ್ರೀತಿಸುತ್ತಿದ್ದನು. ಹಲವು ದಿನಗಳಿಂದ ಶೋಯಲ್ ಖಾನ್ ಪ್ರೀತಿಸಿದ ಯುವತಿ ಜೊತೆ ಮದುವೆ ಮಾಡಿಸುವಂತೆ ಮನೆಯವರನ್ನು ಪೀಡಿಸುತ್ತಿದ್ದನು. ತಮ್ಮನ ಮದುವೆ ವಿಚಾರವಾಗಿ ಪರಿಚಯಸ್ಥರು, ಸಮುದಾಯದವರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾ ಬೌಲಿಂಗ್‌ ದಾಳಿಗೆ ಬೆಚ್ಚಿದ ಬಾಂಗ್ಲಾ – ಭಾರತಕ್ಕೆ 257 ರನ್‌ಗಳ ಗುರಿ

    ಈ ನಡುವೆ ಕಳೆದ ಹತ್ತು ದಿನಗಳಿಂದ ಯುವಕ-ಯುವತಿ ನಾಪತ್ತೆಯಾಗಿದ್ದರು. ಇದರಿಂದ ಬೇಸತ್ತ ಅಮ್ಜದ್ ಖಾನ್, ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಟವರ್ ಏರಿ ಕುಳಿತಿದ್ದಾನೆ. ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿ ಮನವೊಲಿಕೆ ಮಾಡಿದರೂ ಆತ ಕೆಳಗಿಳಿಯಲಿಲ್ಲ. ಕೊನೆಗೆ ಮಾನ್ವಿ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಮನವೊಲಿಸಿ ಟವರ್ ನಿಂದ ಕೆಳಗಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಂಗಿಯ ಶಿರಚ್ಛೇದ ಮಾಡಿ ರುಂಡ ಹಿಡಿದು ಹೋಗ್ತಿದ್ದ ಅಣ್ಣನ ಬಂಧನ

    ತಂಗಿಯ ಶಿರಚ್ಛೇದ ಮಾಡಿ ರುಂಡ ಹಿಡಿದು ಹೋಗ್ತಿದ್ದ ಅಣ್ಣನ ಬಂಧನ

    ಲಕ್ನೋ: ಸಹೋದರಿಯ (Sister) ಪ್ರೀತಿಯನ್ನು ವಿರೋಧಿಸಿ ವ್ಯಕ್ತಿಯೋರ್ವ ಆಕೆಯ ಶಿರಚ್ಛೇದವನ್ನು (Behead) ಮಾಡಿದ್ದು, ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಪೊಲೀಸ್ ಆತನನ್ನು ಬಂಧಿಸಿದ ಘಟನೆ ಉತ್ತರಪ್ರದೇಶದ (Uttar Pradesh) ಬಾರಾಬಂಕಿಯಲ್ಲಿ (Barabanki) ನಡೆದಿದೆ.

    ರಿಯಾಜ್ (22) ಬಂಧಿತ ಆರೋಪಿ. ಮೃತ ಸಹೋದರಿ ಆಶಿಫಾ (18) ಎಂದು ಗುರುತಿಸಲಾಗಿದೆ. ಉತ್ತರಪ್ರದೇಶದ ಬಾರಾಬಂಕಿಯ ಫತೇಪುರ್ ಪ್ರದೇಶದ ಮಿಥ್ವಾರ ಗ್ರಾಮದಲ್ಲಿ ಘಟನೆ ನಡೆದಿದೆ. ಆಶಿಫಾ ಇತ್ತೀಚಿಗೆ ಅದೇ ಗ್ರಾಮದ ಚಂದ್ ಬಾಬು ಎಂಬಾತನೊಂದಿಗೆ ಓಡಿಹೋಗಿದ್ದು, ಆಕೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಆಕೆಯನ್ನು ಪತ್ತೆ ಹಚ್ಚಿದ್ದರು. ಅಲ್ಲದೇ ಚಂದ್ ಬಾಬುವನ್ನು ಜೈಲಿಗಟ್ಟಿದ್ದರು. ಇದನ್ನೂ ಓದಿ: ವ್ಯಕ್ತಿಯ ತಲೆ ಕತ್ತರಿಸಿ ಬಿದಿರಿನ ಬೇಲಿಗೆ ನೇತುಹಾಕಿದ್ದ ದುಷ್ಕರ್ಮಿಗಳು – ಮಣಿಪುರದ ಮತ್ತೊಂದು ವೀಡಿಯೋ ವೈರಲ್‌

    ತಂಗಿಯ ಪ್ರೇಮ ಸಂಬಂಧವನ್ನು ರಿಯಾಜ್ ವಿರೋಧಿಸುತ್ತಿದ್ದ. ಈ ವಿಷಯವಾಗಿ ಅಣ್ಣ-ತಂಗಿಯ ನಡುವೆ ಜಗಳ ನಡೆದಿದ್ದು, ಸಿಟ್ಟಿನ ಭರದಲ್ಲಿ ರಿಯಾಜ್ ಹರಿತವಾದ ಆಯುಧದಿಂದ ತನ್ನ ತಂಗಿ ಆಶಿಫಾಳ ಶಿರಚ್ಛೇದ ಮಾಡಿ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ (Arrest) ಎಂದು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅಶುತೋಷ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ವಿದ್ಯಾರ್ಥಿಗಳಿಗೆ ರಹಸ್ಯವಾಗಿ ಡ್ರಗ್ಸ್ ಚಾಕ್ಲೇಟ್ ಮಾರಾಟ- ಇಬ್ಬರು ವಶಕ್ಕೆ

    ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ತಂಡ ಭೇಟಿ ನೀಡಿದ್ದು, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಆರೋಪಿ ರಿಯಾಜ್‌ನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ಪ್ರಮುಖ ಆರೋಪಿ ಮನೆಗೆ ಬೆಂಕಿ ಹಾಕಿ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣನ ಲವ್ ಸ್ಟೋರಿಯಿಂದ ತಮ್ಮ ಆತ್ಮಹತ್ಯೆ

    ಅಣ್ಣನ ಲವ್ ಸ್ಟೋರಿಯಿಂದ ತಮ್ಮ ಆತ್ಮಹತ್ಯೆ

    ಹಾವೇರಿ: ಅಣ್ಣನ ಪ್ರೀತಿ ವಿಚಾರಕ್ಕೆ ತಮ್ಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

    ಪ್ರೀತಿಸಿದ ಹುಡುಗನಿಗೆ ಪ್ರೇಯಸಿ ಸಹೋದರರು ಟಾರ್ಚರ್ ಕೊಟ್ಟಿದ್ದಾರೆ. ಸಹೋದರರ ಕಿರುಕುಳದಿಂದ ಬೇಸತ್ತು ಹಂಸಭಾವಿ (Hansabhavi) ಯಲ್ಲಿ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕಳೆದ 8 ವರ್ಷದಿಂದ ಅಣ್ಣ ಮಂಜು ನಾಯ್ಕ್, ಹಾನಗಲ್ ತಾಲೂಕಿನ ಬಾಳೂರು ತಾಂಡಾದ ಯುವತಿ ರಾಜೇಶ್ವರಿ ನಾಯ್ಕ್ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದ. ಆದರೆ ಇದೀಗ ಯುವತಿ, ಮಂಜು ನಾಯ್ಕ್ ಜೊತೆ ಮದುವೆಗೆ ನಿರಾಕರಿಸಿ ನಾಲ್ಕು ದಿನಗಳ ಹಿಂದೆ ಬೇರೆ ಯುವಕನ ಜೊತೆ ಮದುವೆಯಾಗಿದ್ದಳು. ಪ್ರೀತಿಸಿತ್ತಿರುವ ಸಂದರ್ಭದಲ್ಲಿ ಕೊಟ್ಟಿದ್ದ ಬಂಗಾರ ಮತ್ತು ಹಣವನ್ನು ಮರಳಿಸಲು ಯುವತಿ ನಿರಾಕರಿಸಿದ್ದಳು.

    ಸುರೇಶ್ ನಾಯ್ಕ್ (ಮಾಜಿ ಪ್ರಿಯತಮ) ಕಾಟವನ್ನು ತಾಳಲಾರದೆ ರಾಜೇಶ್ವರಿ ತನ್ನ ಸಹೋದರರಿಗೆ ತಿಳಿಸಿದ್ದಳು. ಅಣ್ಣನ ಹುಡುಕಾಟದಲ್ಲಿದ್ದ ಸಹೋದರರಿಗೆ ತಮ್ಮ ಸಿಕ್ಕಿದ್ದಾನೆ. ಈ ವೇಳೆ ಅಣ್ಣನನ್ನು ಹುಡುಕಿ ಕೋಡುವಂತೆ ಒತ್ತಾಯ ಮಾಡಿದ್ದಾರೆ. ಅಣ್ಣನ ಸಾವಿಗೆ ಪ್ರೇಯಸಿ ಮನೆಯವರು ಕಾರಣವೆಂದು ತಮ್ಮ ಮಂಜು ನಾಯ್ಕ ಆರೋಪ ಮಡಿದ್ದಾರೆ.

    ಈ ಸಂಬಂಧ ಹಂಸಭಾವಿ ಪೊಲೀಸ್ ಠಾಣೆ (Hansabhavi Police Station) ಯಲ್ಲಿ ಪ್ರಕರಣ ದಾಖಲಾಗಿದೆ.

  • ಅಣ್ಣ ಬಹಳ ಕಷ್ಟಪಟ್ಟಿದ್ದಾನೆ, ನಾವ್ಯಾವತ್ತೂ ವಿಧಾನಸೌಧಕ್ಕೆ ಹೋಗಲ್ಲ: ಸಿದ್ದರಾಮಯ್ಯ ಸಹೋದರ

    ಅಣ್ಣ ಬಹಳ ಕಷ್ಟಪಟ್ಟಿದ್ದಾನೆ, ನಾವ್ಯಾವತ್ತೂ ವಿಧಾನಸೌಧಕ್ಕೆ ಹೋಗಲ್ಲ: ಸಿದ್ದರಾಮಯ್ಯ ಸಹೋದರ

    ಮೈಸೂರು: ಈ ಬಾರಿಯೂ ನಮ್ಮ ಅಣ್ಣ ಬಹಳ ಒಳ್ಳೆಯ ಆಡಳಿತ ಮಾಡುತ್ತಾರೆ. ನಮ್ಮ ಅಣ್ಣ ಬಡವರ ಪರ. ನಾವು ಕುಟುಂಬದವರು ಯಾವತ್ತೂ ನಮ್ಮ ಅಣ್ಣನ ಆಡಳಿತದ ಹತ್ತಿರ ಹೋಗಲ್ಲ ಎಂದು ಸಿದ್ದರಾಮಯ್ಯ (Siddaramaiah) ಸಹೋದರ ಸಿದ್ದೇಗೌಡ (Siddegowda)ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮ್ಮ ಅಣ್ಣ ಈ ಸ್ಥಾನಕ್ಕೆ ಬರಲು ಬಹಳ ಕಷ್ಟಪಟ್ಟಿದ್ದಾನೆ. ನಾನು ಅನಕ್ಷರಸ್ಥ. ನಾನು ಏನೂ ಅಂತಾ ಅವನ ಬಳಿ ಹೋಗಿ ಕೇಳಲಿ. ನಾವು ಸಹೋದರರು ಯಾವತ್ತೂ ಫೋನ್ ನಲ್ಲೂ ಮಾತಾಡಲ್ಲ ಎಂದರು. ಇದನ್ನೂ ಓದಿ: Exclusive – ಮತ್ತೆ ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್‌ ಡಿಸಿಎಂ

    ಏನಾದ್ರೂ ಇದ್ದರೆ ಮನೆಗೆ ಹೋಗಿ ಮಾತಾಡಿ ಬರ್ತಿವಿ. ವಿಧಾನಸೌಧ (Vidhanasoudha) ಕ್ಕೆ ಹೋಗೋ ಅಭ್ಯಾಸವೂ ನಮಗೆ ಇಲ್ಲ ಎಂದು ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಹೇಳಿದ್ದಾರೆ.

     ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್‌ (DK Shivakumar) ನಡುವಿನ ಕುರ್ಚಿ ಕದನ ಬಹುತೇಕ ಅಂತ್ಯವಾಗಿದ್ದು, ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ (Chief Minister) ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ.

  • ತಂಗಿಯ ಫಸ್ಟ್ ಪೀರಿಯೆಡ್ ರಕ್ತ ನೋಡಿ ಶಂಕಿಸಿ ಕೊಲೆಗೈದ ಅಣ್ಣ!

    ತಂಗಿಯ ಫಸ್ಟ್ ಪೀರಿಯೆಡ್ ರಕ್ತ ನೋಡಿ ಶಂಕಿಸಿ ಕೊಲೆಗೈದ ಅಣ್ಣ!

    ಮುಂಬೈ: ತಂಗಿಯ ಫಸ್ಟ್ ಪೀರಿಯಡ್‍ (Periods) ನ ರಕ್ತದ ಕಲೆ ನೋಡಿದ ಸಹೋದರ ಅನುಮಾನಗೊಂಡು ಆಕೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರ (Maharastra) ದ ಥಾಣೆಯಲ್ಲಿ ನಡೆದಿದೆ.

    ನಗರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಉಲ್ಲಾಸ್‍ನಗರ ಪ್ರದೇಶದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    12 ವರ್ಷದ ಹುಡುಗಿಗೆ ಕೆಲವು ದಿನಗಳ ಹಿಂದೆ ಋತುಸ್ರಾವ ಆರಂಭವಾಗಿದೆ. ಆದರೆ ಇದು ಅವಳ ಗಮನಕ್ಕೆ ಬಂದಿರಲಿಲ್ಲ. ಅಲ್ಲದೆ ಅವಳ ಬಟ್ಟೆಯಲ್ಲಿ ರಕ್ತದ ಕಲೆಗಳು ಕಾಣುತ್ತಿದ್ದವು. ಇದನ್ನು ಗಮನಿಸಿದ ಸಹೋದರ ಆಕೆಯನ್ನು ಪ್ರಶ್ನಿಸಿದ್ದಾನೆ. ಯಾರ ಜೊತೆಗೋ ಸಂಭೋಗ ನಡೆಸಿದ್ದಾಳೆ ಎಂದು ಆರೋಪಿಸಿದ್ದಾನೆ.

    ಬಾಲಕಿ ತನ್ನ ಅಣ್ಣ ಹಾಗೂ ಅತ್ತಿಗೆ ಜೊತೆ ವಾಸವಾಗಿದ್ದಳು. ಹೀಗಾಗಿ ತನಗೆ ಏನಾಗುತ್ತಿದೆ ಎಂಬುದನ್ನು ಅವರ ಜೊತೆ ಹೇಳಿಕೊಳ್ಳಲು ಹಿಂಜರಿದಿದ್ದಾಳೆ. ಅಲ್ಲದೆ ಋತುಸ್ರಾವದ ಬಗ್ಗೆ ಅವಳಿಗೆ ಯಾವುದೇ ಜ್ಞಾನ ಕೂಡ ಇರಲಿಲ್ಲ. ಇತ್ತ ಸಹೋದರಿ ಬಟ್ಟೆಯಲ್ಲಿ ರಕ್ತದ ಕಲೆಗಳನ್ನು ಕಂಡು ಅನುಮಾನದಿಂದ ಸಿಟ್ಟುಗೊಂಡ ಅಣ್ಣ, ಆಕೆಯ ಬಾಯಿ, ನಾಲಿಗೆ ಹಾಗೂ ದೇಹದ ಇತರೆ ಭಾಗಗಳನ್ನು ಸುಟ್ಟಿದ್ದಾನೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಮಡು ಹೋಗಲಾಯಿತು. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

    ಘಟನೆ ಸಂಬಂಧ ಸಹೋದರನ ವಿರುದ್ಧ ಉಲ್ಲಾಸ್‍ನಗರ ಪೊಲೀಸ್ ಠಾಣೆ (Ulhasnagar police station) ಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಫ್ಲ್ಯಾಟ್‌ನ 10ನೇ ಮಹಡಿಯಿಂದ ಬಿದ್ದು ನೀಟ್ ವಿದ್ಯಾರ್ಥಿ ಸಾವು