Tag: Brokers

  • ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ

    ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ

    ಬೆಂಗಳೂರು: ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರದ ದಾಳಿಯ ಬಳಿಕ ಮೊದಲ ಬಾರಿಗೆ, ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಬೆಳ್ಳಂಬೆಳ್ಳಗ್ಗೆ 100ಕ್ಕೂ ಹೆಚ್ಚು ಅಧಿಕಾರಿಗಳು ಬೆಂಗಳೂರಿನ 9 ಕಡೆ ದಾಳಿ ಮಾಡಿದ್ದಾರೆ.

    ಇತ್ತೀಚೆಗೆ ಬಿಬಿಎಂಪಿ, ಬಿಡಿಎಗೆ ಸಂಬಂಧಿಸಿದ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸಿಕ್ಕ ದಾಖಲೆಗಳ ಅಧಾರದ ಮೇಲೆ ಮಧ್ಯವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಸೇರಿ ಅವ್ಯವಾಹರದಲ್ಲಿ ತೊಡಗಿದ್ದ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ದಾಳಿ ನಡದದಿದೆ.

    ರಘು ಬಿ ಎನ್.ಚಾಮರಾಜಪೇಟೆ, ಮೋಹನ್ ಮನೋರಾಯನಪಾಳ್ಯ, ಮನೋಜ್ ದೊಮ್ಮಲೂರು, ಮುನಿರತ್ನ ರತ್ನವೇಲು ಮಲ್ಲತ್ತಹಳ್ಳಿ, ತೇಜುತೇಜಸ್ವಿ ಆರ್‍ಆರ್ ನಗರ, ಅಶ್ವತ್ ಮುದ್ದಿನಪಾಳ್ಯ, ಲಕ್ಷ್ಮಣ ಚಾಮುಂಡೇಶ್ವರಿ ನಗರ, ಚಿಕ್ಕಹನುಮ್ಮಯ್ಯ ಮುದ್ದಿನಪಾಳ್ಯ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

  • ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!

    ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!

    ದಾವಣಗೆರೆ: ಹರಿಹರ ನಗಾರಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಬೇಡಿಕೆ ಸಮೀಕ್ಷೆ ಮಾಡುವ ಹಿನ್ನೆಲೆಯಲ್ಲಿ ಅರ್ಜಿ ಆಹ್ವಾನಿಸಿದೆ. ಸೂರಿಗಾಗಿ ಆಸೆ ಪಡುತ್ತಿರುವ ಬಡ ಜನರ ಆಸೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲ ದಲ್ಲಾಳಿಗಳು ಒಂದು ಅರ್ಜಿ ಹಾಕಲು ನಾಲ್ಕೈದು ಸಾವಿರ ರೂಪಾಯಿ ಕೀಳುವ ದಂಧೆಗಿಳಿದಿದ್ದಾರೆ. ಇದೀಗ ದಲ್ಲಾಳಿಗಳು ದೂರವಾಣಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಈಗಾಗಲೇ ದೂಡಾ ನಿವೇಶನಗಳ ಬೇಡಿಕೆ ಸಮೀಕ್ಷೆ ನಡೆಸುತ್ತಿದ್ದು, ನಿವೇಶನಕ್ಕಾಗಿ ಅರ್ಜಿ ಕರೆಯಲಾಗಿದೆ. ಹಾಗಾಗಿ ಅರ್ಜಿ ಹಾಕೋಕೆ ಜನ ಮುಗಿ ಬಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ದಲ್ಲಾಳಿಗಳು, ಸರದಿ ಸಾಲಲ್ಲಿ ನಿಲ್ಲದೇ ಅರ್ಜಿ ಹಾಕಲು ನಾಲ್ಕರಿಂದ ಐದು ಸಾವಿರ ರೂಪಾಯಿ ತನಕ ಹಣವನ್ನು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ. ಇದನ್ನೂ ಓದಿ:ಮಗನಿಗೆ ರಾಯನ್ ಹೆಸರಿಟ್ಟಿದ್ದಕ್ಕೆ ಮೇಘನಾ ಸ್ಪಷ್ಟನೆ

    ಅರ್ಜಿದಾರರು ಬಾರದಿದ್ದರೂ ದಾಖಲೆ ನೀಡಿ ಹಣ ಕೊಟ್ಟರೆ, ಅವರ ಹೆಸರಿನಲ್ಲಿ ದಲ್ಲಾಳಿಗಳು ಹಾಗೂ ಅಲ್ಲಿನ ಅಧಿಕಾರಿಗಳ ಅಡ್ಜಸ್ಟ್‍ಮೆಂಟ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಈ ದಲ್ಲಾಳಿಗಳು ಅಧಿಕಾರಿಗಳನ್ನು ಒಳಗೆ ಹಾಕಿಕೊಂಡು, ಸರದಿ ಸಾಲಿನಲ್ಲಿ ನಿಲ್ಲದೆ ಎಲ್ಲಾ ಅರ್ಜಿಗಳನ್ನು ತೆಗೆದುಕೊಂಡು ನೇರವಾಗಿ ದೂಡಾ ಕಚೇರಿಯ ಕೌಂಟರ್ ಗೆ ತೆರಳಿ ಹಣ ನೀಡಿ ಅರ್ಜಿ ಹಾಕಿ ವ್ಯವಹಾರ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಬಾಗಲಕೋಟೆಯಲ್ಲಿ ಭೂ ಕಂಪನದ ಅನುಭವ – ಜನರಲ್ಲಿ ಆತಂಕ

    ದಾವಣಗೆರೆ ನಗರದ ಕುಂದಾವಾಡ ರಸ್ತೆಯ ಬಳಿ ಇರುವ ಜೈನ್ ಕಾಲೋನಿ ಬಳಿ ಈ ವ್ಯವಹಾರ ನಡೆಯುತ್ತಿದೆ. ಅರ್ಜಿ ಹಾಕಲು ಬಯಸುವ ಜನ ಜೈನ್ ಕಾಲೋನಿ ಬಳಿ ಬಂದು ದುಡ್ಡು ಕೊಟ್ಟು ಸಂಜೆಯೊಳಗೆ ಸ್ವೀಕೃತಿ ಪತ್ರ ತೆಗೆದುಕೊಂಡು ಹೋಗಬಹುದು. ಇದು ದೂಡಾದಲ್ಲಿ ನಡೆಯುತ್ತಿರುವ ಡೈರೆಕ್ಟ್ ದಂಧೆ ಎಂಬ ಅನುಮಾನ ಕಾಡುತ್ತಿದೆ.

    20*30 ಅಳತೆಯ ನಿವೇಶನಕ್ಕೆ ಅರ್ಜಿ ಹಾಕಲು 3,000, 30*40 ನಿವೇಶನಕ್ಕೆ 3,500, 30*50 ನಿವೇಶನಕ್ಕೆ 4,300, 40*50 ನಿವೇಶನಕ್ಕೆ 4,800, 50*80 ನಿವೇಶನಕ್ಕೆ ಅರ್ಜಿ ಹಾಕಲು 5,000 ಹಣವನ್ನು ನಿಗದಿ ಮಾಡಲಾಗಿದ್ದು, ಅಮಾಯಕರಿಂದ ದಲ್ಲಾಳಿಗಳು ಹಣ ಪೀಕುತ್ತಿದ್ದಾರೆ. ಇದರಲ್ಲಿ ಬಹು ಪಾಲು ಹಣ ದೂಡಾದ ಕೆಲ ಸಿಬ್ಬಂದಿಗೆ ಹೋಗುತ್ತದೆ ಎಂಬ ಮಾಹಿತಿಯೂ ಆಡಿಯೋದಲ್ಲಿದೆ. ಇದನ್ನೂ ಓದಿ:ಮೈಸೂರಿನ ದರೋಡೆ, ಶೂಟ್‍ಔಟ್ ಪ್ರಕರಣ- ಖತರ್ನಾಕ್ ಬಾಂಬೆ ಬುಡ್ಡಾ ಅಂದರ್