Tag: broken rice

  • ಗೋಧಿ ಬಳಿಕ ಇದೀಗ ನುಚ್ಚಕ್ಕಿ ರಫ್ತನ್ನು ನಿಷೇಧಿಸಿದ ಕೇಂದ್ರ

    ಗೋಧಿ ಬಳಿಕ ಇದೀಗ ನುಚ್ಚಕ್ಕಿ ರಫ್ತನ್ನು ನಿಷೇಧಿಸಿದ ಕೇಂದ್ರ

    ನವದೆಹಲಿ: ಕೇಂದ್ರ ಸರ್ಕಾರ ಆಹಾರದ ಬೆಲೆ ಏರಿಕೆಯನ್ನು ನಿಯಂತ್ರಿಸುವ ಹಿನ್ನೆಲೆ ಕಳೆದ ತಿಂಗಳು ಗೋಧಿಯ(Wheat) ರಫ್ತನ್ನು ನಿಷೇಧಿಸಿತ್ತು. ಇದೀಗ ಸರ್ಕಾರ ನುಚ್ಚಕ್ಕಿ(BrokenRice)ಯ ರಫ್ತನ್ನೂ ನಿಷೇಧಿಸಿದೆ.

    ಕೇಂದ್ರ ಸರ್ಕಾರ ನುಚ್ಚಕ್ಕಿ ಮೇಲಿನ ರಫ್ತನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿದೆ. ಆದರೆ ಈಗಾಗಲೇ ಹಡಗುಗಳಲ್ಲಿ ತುಂಬಿ, ರಫ್ತಿಗೆ ಹೊರಟಿರುವ ಅಕ್ಕಿಯನ್ನು ಸೆಪ್ಟೆಂಬರ್ 15ರ ವರೆಗೆ ಸಾಗಿಸಲು ಅನುಮತಿ ನೀಡುವುದಾಗಿ ವಿದೇಶೀ ವ್ಯಾಪಾರದ ಮಹಾನಿರ್ದೇಶನಾಲಯ(DGFT) ತಿಳಿಸಿದೆ. ಇದ್ನನೂ ಓದಿ: ಉಗ್ರರ ತವರು ನೆಲ ಪಾಕಿಸ್ತಾನಕ್ಕೆ ಅಮೆರಿಕದಿಂದ 3,500 ಕೋಟಿ ಸೇನಾ ನೆರವು

    ಈ ವರ್ಷ ಭತ್ತದ ನಾಟಿ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಬಾಸ್ಮತಿ ಹೊರತುಪಡಿಸಿ ಇತರ ಅಕ್ಕಿಗಳ ಮೇಲೆ ಶೇ. 20ರಷ್ಟು ರಫ್ತು ಸುಂಕ ಹೆಚ್ಚಿಸಲಾಗಿತ್ತು. ಇದೀಗ ಸರ್ಕಾರ ನುಚ್ಚಕ್ಕಿ ರಫ್ತನ್ನು ನಿಷೇಧಿಸಿದೆ.

    ಈ ಬಾರಿ ಜೂನ್ ತಿಂಗಳಿನಲ್ಲಿ ಮಳೆ ಸರಿಯಾಗಿ ಬಂದಿರದ ಕಾರಣ ಅನೇಕ ರೈತರು ಭತ್ತದ ನಾಟಿ ಮಾಡಿಲ್ಲ. ಹೀಗಾಗಿ ಆಹಾರ ಭದ್ರತೆಯ ಅಪಾಯವಿದ್ದು, ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದ್ನನೂ ಓದಿ: ಮಹಾತ್ಮ ಗಾಂಧಿ ಮರಿ ಮೊಮ್ಮಗ ಸಲ್ಲಿಸಿದ್ದ ಅರ್ಜಿ ವಜಾ

    ಈ ಹಿಂದೆ ಗೋಧಿ ರಫ್ತು ನಿಷೇಧಿಸಿದ್ದ ಕೇಂದ್ರ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಅಗತ್ಯ ಗೋಧಿ ಪೂರೈಕೆ ಮಾಡುವುದಾಗಿ ಹೇಳಿತ್ತು. ಇದಾದ ಬಳಿಕ ಕೇಂದ್ರ ಗೋಧಿ ಹಿಟ್ಟು, ರವೆ ಮೇಲೆಯೂ ರಫ್ತು ನಿಷೇಧವನ್ನು ಹೇರಿದೆ.

    Live Tv
    [brid partner=56869869 player=32851 video=960834 autoplay=true]