Tag: Broadband

  • ಉಪಗ್ರಹದಿಂದ ಇಂಟರ್‌ನೆಟ್‌ – ದೇಶದಲ್ಲೇ ಫಸ್ಟ್‌, ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್

    ಉಪಗ್ರಹದಿಂದ ಇಂಟರ್‌ನೆಟ್‌ – ದೇಶದಲ್ಲೇ ಫಸ್ಟ್‌, ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್

    ನವದೆಹಲಿ: ಇನ್ನು ಮುಂದೆ ರಿಲಯನ್ಸ್‌ ಜಿಯೋ (Reliance Jio) ಕಂಪನಿಯ ಇಂಟರ್‌ನೆಟ್‌ ಸೇವೆ ಭಾರತದ ಮೂಲೆ ಮೂಲೆಗಳಲ್ಲಿ ಸಿಗಲಿದೆ. ಭಾರತದ ಮೊದಲ ಬಾರಿಗೆ ಉಪಗ್ರಹ ಆಧಾರಿತ ಇಂಟರ್‌ನೆಟ್‌ (Satellite Internet) ಸೇವೆಯನ್ನು ಜಿಯೋ ಅನಾವರಣಗೊಳಿಸಿದೆ.

    ದೆಹಲಿಯಲ್ಲಿ ಇಂದಿನಿಂದ ಆರಂಭಗೊಂಡ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ (Mobile World Congress) ಜಿಯೋಸ್ಪೇಸ್‌ಫೈಬರ್‌ (JioSpaceFiber) ಗಿಗಾಬಿಟ್‌ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಪ್ರದರ್ಶಿಸಿದೆ. ಈ ಸೇವೆಯು ದೇಶದ ಉದ್ದಗಲಕ್ಕೂ ಲಭ್ಯವಿದ್ದು, ದರ ಕೂಡ ಕೈಗೆಟುಕುವ ಮಟ್ಟದಲ್ಲೇ ಇರಲಿದೆ. ಈ ಸೇವೆಯಿಂದ ದೇಶದ ದೂರ ದೂರದ ಭಾಗಗಳಲ್ಲಿ ಜಿಯೋ ಟ್ರೂ 5ಜಿ ಲಭ್ಯತೆ ಮತ್ತು ಪ್ರಮಾಣವನ್ನು ಇನ್ನೂ ಹೆಚ್ಚು ಮಾಡಲಿದೆ.

    ಜಾಗತಿಕ ಮಟ್ಟದಲ್ಲಿ ಇವತ್ತಿಗೆ ಮುಖ್ಯವಾದಂಥ ಮೀಡಿಯಂ ಅರ್ಥ್ ಆರ್ಬಿಟ್ ಉಪಗ್ರಹ ತಂತ್ರಜ್ಞಾನ ಸಂಪರ್ಕಿಸುವುದಕ್ಕೆ ಎಸ್ಇಎಸ್ ಜತೆಗೆ ಜಿಯೋ ಪಾಲುದಾರಿಕೆ ಹೊಂದಿದೆ. ಇದು ವಿಶಿಷ್ಟ ಗಿಗಾಬಿಟ್, ಫೈಬರ್ ತರಹದ ಸೇವೆಗಳನ್ನು ಬಾಹ್ಯಾಕಾಶದಿಂದ ತಲುಪಿಸುವ ಸಾಮರ್ಥ್ಯ ಹೊಂದಿರುವ ಏಕೈಕ ಎಂಇಒ ಸಮೂಹ ಆಗಿದೆ.   ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ

    ದೇಶದಲ್ಲಿ ಈ ತಂತ್ರಜ್ಞಾನದ ಸೇವೆಗಾಗಿ ಅತ್ಯಂತ ದೂರದ ಸ್ಥಳಗಳನ್ನು ಗುಜರಾತ್‌ನ ಗಿರ್, ಛತ್ತೀಸ್‌ಗಢದ ಕೊರ್ಬಾ, ಒಡಿಶಾದ ನಬರಂಗಪುರ, ಅಸ್ಸಾಂನ ಒಎನ್ ಜಿಸಿ- ಜೊರ್ಹಾತ್ ಸಂಪರ್ಕಿಸಲಾಗಿದೆ.

    ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷರಾದ ಆಕಾಶ್ ಅಂಬಾನಿ (Akash Ambani) ಮಾತನಾಡಿ, ಇದೇ ಮೊದಲ ಬಾರಿಗೆ ಹತ್ತಾರು ಲಕ್ಷ ಕುಟುಂಬಗಳು, ವ್ಯವಹಾರಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್‌ನೆಟ್‌ ಅನುಭವ ದೊರೆಯುವಂತೆ ಜಿಯೋ ಮಾಡಿದೆ. ಇನ್ನೂ ಇಂಟರ್‌ನೆಟ್‌ ವ್ಯಾಪ್ತಿಗೆ ಬಾರದವರನ್ನು ಜಿಯೋಸ್ಪೇಸ್ ಫೈಬರ್ ಮೂಲಕ ಸಂರ್ಪಕಿಸಲಾಗುತ್ತದೆ. ಇದು ಸರ್ಕಾರಿ ಆನ್ ಲೈನ್, ಶಿಕ್ಷಣ, ಆರೋಗ್ಯ, ಮತ್ತು ಮನರಂಜನಾ ಸೇವೆಗಳಿಗೆ ಸಂಪರ್ಕ ಪಡೆಯುವುದಕ್ಕೆ ಗಿಗಾಬಿಟ್ ಮೂಲಕ ಹೊಸ ಡಿಜಿಟಲ್ ಸಮಾಜಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು

    ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು

    ನವದೆಹಲಿ: ಇಂಟರ್ನೆಟ್ ಬ್ರಾಡ್‍ಬ್ಯಾಂಡ್ ವೇಗವನ್ನು ಉತ್ತೇಜಿಸಲು ಜನರಿಗೆ ಸರ್ಕಾರ 200 ರೂ. ಕ್ಯಾಶ್‍ಬ್ಯಾಕ್ ಆಫರ್ ನೀಡಬೇಕೆಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ( ಟ್ರಾಯ್) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ಈ ವೇಳೆ ಕನಿಷ್ಠ ಬ್ರಾಡ್‍ಬ್ಯಾಂಡ್ ವೇಗವನ್ನು 512 ಕೆಬಿಪಿಎಸ್(ಕಿಲೋಬೈಟ್ಸ್ ಪರ್ ಸೆಕೆಂಡ್) ನಿಂದ 2 ಎಂಬಿಪಿಎಸ್(ಮೆಗಾಬೈಟ್ಸ್ ಸೆಕೆಂಡ್) ವೇಗಕ್ಕೆ ಏರಿಸಬೇಕು ಎಂದು ಹೇಳಿದೆ.

    ಕೋವಿಡ್ 19 ಹಿನ್ನೆಲೆಯಲ್ಲಿ ಉದ್ಯೋಗಿಗಳು ಮನೆಯಿಂದ ಉದ್ಯೋಗ ಮಾಡುತ್ತಿದ್ದರೆ, ವಿದ್ಯಾರ್ಥಿಗಳು ಆನ್‍ಲೈನ್ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಕನಿಷ್ಠ ಬ್ರಾಡ್‍ಬ್ಯಾಂಡ್ ವೇಗವನ್ನು 2 ಎಂಬಿಪಿಎಸ್ ಗೆ ಹೆಚ್ಚಿಸಬೇಕು ಎಂದು ತಿಳಿಸಿದೆ. ಇದನ್ನೂ ಓದಿ : ಕೆಲವರ ಹಿತಾಸಕ್ತಿಗೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ವಿಳಂಬ – ಕೇಂದ್ರಕ್ಕೆ ಜಿಯೋ ಪತ್ರ

    2 ಎಂಬಿಪಿಎಸ್ ಬ್ರಾಡ್‍ಬ್ಯಾಂಡ್ ದರ ಹೆಚ್ಚಾದರೆ ಗ್ರಾಹಕರಿಗೆ ಹೊರೆಯಾಗಬಹುದು. ಈ ನಿಟ್ಟಿನಲ್ಲಿ ಹೊರೆಯನ್ನು ತಪ್ಪಿಸಲು ಶೇ.50 ರಷ್ಟು ಹಣ ಅಂದರೆ ಪ್ರತಿ ತಿಂಗಳು ಗರಿಷ್ಠ 200 ರೂ. ಹಣವನ್ನು ಸರ್ಕಾರ ಕ್ಯಾಶ್‍ಬ್ಯಾಕ್ ಆಗಿ ನೀಡಬೇಕು. ಈ ಕ್ಯಾಶ್‍ಬ್ಯಾಕ್ ಡಿಬಿಟಿ(ನೇರ ನಗದು ವರ್ಗಾವಣೆ) ರೂಪದಲ್ಲಿ ಗ್ರಾಹಕರ ಖಾತೆಗೆ ಜಮೆಯಾಗಬೇಕು ಎಂದು ಸಲಹೆ ನೀಡಿದೆ.

    ಟ್ರಾಯ್ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯ ಪ್ರಕಾರ ಭಾರತದಲ್ಲಿ ಬ್ರಾಡ್‍ಬ್ಯಾಂಡ್ ಸೇವೆಯನ್ನು ಬೇಸಿಕ್, ಫಾಸ್ಟ್ ಮತ್ತು ಸೂಪರ್ ಫಾಸ್ಟ್ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ‘ಬೇಸಿಕ್’ ನಲ್ಲಿ ಕನೆಕ್ಷನ್ 2 ಎಂಬಿಪಿಎಸ್‍ನಿಂದ 50 ಎಂಬಿಪಿಎಸ್ ಒಳಗಡೆ ಇರಬೇಕು. ‘ಫಾಸ್ಟ್’ ನಲ್ಲಿ 50 ಎಂಬಿಪಿಎಸ್‍ನಿಂದ 300 ಎಂಬಿಪಿಎಸ್ ಇರಬೇಕು. ‘ಸೂಪರ್ ಫಾಸ್ಟ್’ ನಲ್ಲಿ ಕನೆಕ್ಷನ್ ವೇಗ 300 ಎಂಬಿಪಿಎಸ್ ಗಿಂತಲೂ ಹೆಚ್ಚು ಇರಬೇಕು. ಇದನ್ನೂ ಓದಿ : ಜಿಯೋ ಸರ್‍ಪ್ರೈಸ್ ಆಫರನ್ನು ಟ್ರಾಯ್ ಕ್ಯಾನ್ಸಲ್ ಮಾಡಿದ್ದು ಯಾಕೆ?

    ಪ್ರಸ್ತುತ ಈಗ ಗರಿಷ್ಠ ಬ್ರಾಡ್‍ಬ್ಯಾಂಡ್ ವೇಗ 512 ಕೆಬಿಪಿಎಸ್ ಗೆ ಅಪ್‍ಗ್ರೇಡ್ ಮಾಡಲಾಗಿದೆ. ಈ ಮೊದಲು 256 ಕೆಬಿಪಿಎಸ್ ಮತ್ತು 56 ಕೆಬಿಪಿಎಸ್ ಇತ್ತು.

    ತನ್ನ ಶಿಫಾರಸಿನಲ್ಲಿ ಟ್ರಾಯ್ 5ಜಿ ಸೇವೆಗಳಿಗೆ ಸೂಕ್ತವೆಂದು ಪರಿಗಣಿಸಲ್ಪಡುವ ಸ್ಪೆಕ್ಟ್ರಂ ಹರಾಜನ್ನು ತ್ವರಿತಗೊಳಿಸುವಂತೆ ಕೇಳಿದೆ. ಕೋವಿಡ್ ನಂತರದ ಅವಧಿಯಲ್ಲಿ ಹೆಚ್ಚಿದ ಡೇಟಾ ಬಳಕೆಯನ್ನು ಗಮನಿಸಿದರೆ, ಮೊಬೈಲ್ ಬ್ರಾಡ್‍ಬ್ಯಾಂಡ್ ವೇಗವನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದೆ.

  • ಸಿಗಲಿದೆ 4ಕೆ ಟಿವಿ – ಜಿಯೋ ಫೈಬರ್ ಪ್ಯಾಕ್ ದರ ಎಷ್ಟು? ಯಾವ ಪ್ಯಾಕ್‍ನಲ್ಲಿ ಸ್ಪೀಡ್ ಎಷ್ಟು? ಏನು ಸೇವೆ ಸಿಗುತ್ತೆ?

    ಸಿಗಲಿದೆ 4ಕೆ ಟಿವಿ – ಜಿಯೋ ಫೈಬರ್ ಪ್ಯಾಕ್ ದರ ಎಷ್ಟು? ಯಾವ ಪ್ಯಾಕ್‍ನಲ್ಲಿ ಸ್ಪೀಡ್ ಎಷ್ಟು? ಏನು ಸೇವೆ ಸಿಗುತ್ತೆ?

    ಮುಂಬೈ: ಡೇಟಾ ದರ ಸಮರ ಆರಂಭಿಸಿ ಟೆಲಿಕಾಂ ಮಾರುಕಟ್ಟೆಯ ಬುಡವನ್ನೇ ಅಲುಗಾಡಿಸುತ್ತಿರುವ ಜಿಯೋ ಈಗ ಅಧಿಕೃತವಾಗಿ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಇಲ್ಲಿಯವರೆಗೆ ಪರೀಕ್ಷಾರ್ಥ ಪ್ರಯೋಗ ಮಾಡುತ್ತಿದ್ದ ಜಿಯೋ ಗಿಗಾ ಫೈಬರ್ ಇಂದಿನಿಂದ ಎಲ್ಲ ಬಳಕೆದಾರರಿಗೆ ಸಿಗಲಿದೆ.

    ದೇಶದ ಒಟ್ಟು 1600 ನಗರಗಳಲ್ಲಿ ಈ ಸೇವೆ ಆರಂಭಗೊಂಡಿದೆ. ಸದ್ಯ ಭಾರತದಲ್ಲಿ 25 ಎಂಬಿಪಿಎಸ್ ವೇಗದಲ್ಲಿ ಬ್ರಾಡ್ ಬ್ಯಾಡ್ ಸಿಗುತ್ತದೆ. ಅಭಿವೃದ್ಧಿ ಹೊಂದಿರುವ ದೇಶವಾದ ಅಮೆರಿಕದಲ್ಲಿ 90 ಎಂಬಿಪಿಎಸ್ ವೇಗದಲ್ಲಿ ಸಿಕ್ಕಿದರೆ ನಾವು 100 ಎಂಬಿಪಿಎಸ್ ವೇಗದ ಬ್ರಾಡ್‍ಬ್ಯಾಂಡ್ ಕಲ್ಪಿಸುತ್ತೇವೆ. ಪ್ಲಾಟಿನಂ ಮತ್ತು ಟೈಟಾನಿಯಂ ಪ್ಯಾಕ್ ಹಾಕಿಸಿದ ಗ್ರಾಹಕರಿಗೆ 1ಜಿಬಿಪಿಎಸ್ ವೇಗದ ಸಂಪರ್ಕ ನೀಡಲಾಗುವುದು. ಈ ಮೂಲಕ ಭಾರತ ವಿಶ್ವದ ಟಾಪ್ ಬ್ರಾಡ್‍ಬ್ಯಾಂಡ್ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಜಿಯೋ ಹೇಳಿದೆ.

    ಏನು ಸೇವೆ ಸಿಗುತ್ತೆ?
    ಅಲ್ಟ್ರಾ ಹೈ ಸ್ಪೀಡ್ ಬ್ರಾಡ್‍ಬ್ಯಾಂಡ್(1ಜಿಬಿಪಿಎಸ್ ವರೆಗೆ), ದೇಶಿಯ ಕರೆಗಳು ಪೂರ್ಣ ಉಚಿತ, ಟಿವಿ ವಿಡಿಯೋ ಕಾಲಿಂಗ್ ಮತ್ತು ಕಾನ್ಫರೆನ್ಸ್ ಕಾಲರ್, ಒಟಿಟಿ ಅಪ್ಲಿಕೇಶನ್ ಬಳಕೆ, ಗೇಮಿಂಗ್, ಹೋಮ್ ನೆಟ್‍ವರ್ಕಿಂಗ್, ಡಿವೈಸ್ ಸೆಕ್ಯೂರಿಟಿ, ವರ್ಚುಯಲ್ ರಿಯಲಿಟಿ ಅನುಭವ ಸಿಗಲಿದೆ.

    ಪ್ಲಾನ್ ದರ ಎಷ್ಟು?
    ತಿಂಗಳಿಗೆ ಕನಿಷ್ಟ 699 ರೂ. ನಿಂದ ಆರಂಭಗೊಂಡು 8,499 ರೂ. ವರೆಗಿನ ಪ್ಯಾಕ್ ಗಳನ್ನು ಜಿಯೋ ಬಿಡುಗಡೆ ಮಾಡಿದೆ. ಎಲ್ಲ ಪ್ಲಾನ್ ಗಳಲ್ಲಿ ಮೇಲೆ ತಿಳಿಸಿದ ಎಲ್ಲ ಸೇವೆಗಳನ್ನು ಬಳಸಬಹುದಾಗಿದೆ. ಗೇಮಿಂಗ್, ಡಿವೈಸ್ ಸೆಕ್ಯೂರಿಟಿ, ಹೋಮ್ ನೆಟ್‍ವರ್ಕಿಂಗ್, ವಿಆರ್, ವಿಡಿಯೋ ಸೇವೆಗಳು, ವಿಡಿಯೋ ಕಾಲಿಂಗ್ ಮತ್ತು ಕಾನ್ಫರೆನ್ಸ್ ಮಾಡಲು ಬೇಕಾಗಿರುವ ಸಾಧನಗಳನ್ನು ಗ್ರಾಹಕರು ಹಣವನ್ನು ಪಾವತಿಸಿ ಖರೀದಿಸಬೇಕು.

    ಇದರ ಜೊತೆ ಮೂರು, ಆರು ಮತ್ತು ಒಂದು ವರ್ಷದ ಪ್ಲಾನ್ ಇದೆ. ಜಿಯೋ ಬ್ಯಾಂಕ್ ಗಳ ಜೊತೆ ಮಾತುಕತೆ ನಡೆಸಿದ್ದ ವಾರ್ಷಿಕ ಪ್ಲಾನ್ ಖರೀದಿಸಿದವರು ಇಎಂಐ ಮೂಲಕ ಹಣವನ್ನು ಪಾವತಿಸಬಹುದಾಗಿದೆ.

    ಜಿಯೋ ಗಿಗಾ ಫೈಬರ್ ಬ್ರೋಂಜ್, ಸಿಲ್ವರ್, ಗೋಲ್ಡ್, ಡೈಮಡ್, ಪ್ಲಾಟಿನಂ, ಟೈಟಾನಿಯಂ ಒಟ್ಟು ಆರು ಪ್ಲಾನ್ ನಲ್ಲಿ ಸೇವೆ ನೀಡಲಿದೆ. ವಾರ್ಷಿಕವಾಗಿ ಗೋಲ್ಡ್ ನಂತರದ ಪ್ಲಾನ್ ಖರೀದಿಸಿದರೆ 4ಕೆ ಟಿವಿ ನೀಡಲಾಗುವುದು ಎಂದು ಜಿಯೋ ತಿಳಿಸಿದೆ.

    ಜಿಯೋ ಸೇವೆ ಆರಂಭಗೊಂಡಾಗ ಹೇಗೆ ವೆಲಕಂ ಆಫರ್ ಪ್ರಕಟಿಸಿತ್ತೋ ಅದೇ ರೀತಿಯಾಗಿ ವಾರ್ಷಿಕ ಪ್ಲಾನ್ ಖರೀದಿಸುವ ಗ್ರಾಹಕರಿಗೆ ಇಲ್ಲೂ ವೆಲಕಂ ಆಫರ್ ಸಿಗಲಿದೆ.

    ಈ ವೆಲ್ಕಂ ಆಫರಿನಲ್ಲಿ ಜಿಯೋ ಹೋಮ್ ಗೇಟ್‍ವೇ, ಜಿಯೋ 4ಕೆ ಸೆಟ್ ಟಾಪ್ ಬಾಕ್ಸ್, 4ಕೆ ಟಿವಿ ಸೆಟ್(ಗೋಲ್ಡ್, ಡೈಮಂಡ್, ಪ್ಲಾಟಿನಂ, ಟೈಟಾನಿಯಂ ಗ್ರಾಹಕರಿಗೆ ಮಾತ್ರ ಅನ್ವಯ), ಉಚಿತ ಆನ್ ಓವರ್ ದಿ ಟಾಪ್(ಒಟಿಟಿ) ಅಪ್ಲಿಕೇಶನ್, ಅನ್‍ಲಿಮಿಟೆಟ್ ವಾಯ್ಸ್ ಮತ್ತು ಡೇಟಾ ಸೇವೆ ಸಿಗಲಿದೆ.

    ತಿಂಗಳಿಗೆ ಎಷ್ಟು ರೂ? ಎಷ್ಟು ಸ್ಪೀಡ್?
    ಬ್ರೋಂಜ್ – 699 ರೂ., 100 ಎಂಬಿಪಿಎಸ್, 100 ಜಿಬಿ+50 ಜಿಬಿ ಉಚಿತ
    ಸಿಲ್ವರ್ – 849 ರೂ., 100 ಎಂಬಿಪಿಎಸ್, 200 ಜಿಬಿ + 200 ಜಿಬಿ ಉಚಿತ
    ಗೋಲ್ಡ್ -1,299 ರೂ., 250 ಎಂಬಿಪಿಎಸ್, 500 ಜಿಬಿ +250 ಜಿಬಿ ಉಚಿತ
    ಡೈಮಂಡ್ – 2,499 ರೂ., 500 ಎಂಬಿಪಿಎಸ್, 1250 ಜಿಬಿ +250 ಜಿಬಿ ಉಚಿತ
    ಪ್ಲಾಟಿನಂ – 3,999 ರೂ., 1 ಜಿಬಿಪಿಎಸ್, 2500 ಜಿಬಿ
    ಟೈಟಾನಿಯಂ – 8,499 ರೂ., 1 ಜಿಬಿಪಿಎಸ್, 5000 ಜಿಬಿ

    ಜಿಯೋ ಫೈಬರ್ ಪಡೆಯುವುದು ಹೇಗೆ?
    www.jio.com ಅಥವಾ MyJio ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ಜಿಯೋ ಫೈಬರ್ ಸೇವೆ ಸಂಬಂಧ ನೊಂದಣಿ ಮಾಡಿ. ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ಜಿಯೋ ಫೈಬರ್ ಸಿಬ್ಬಂದಿ  ನಿಮ್ಮನ್ನು ಸಂಪರ್ಕಿಸುತ್ತಾರೆ.

     

  • ಆಗಸ್ಟ್ 12ಕ್ಕೆ ಜಿಯೋ ಗಿಗಾ ಫೈಬರ್ ಲಾಂಚ್

    ಆಗಸ್ಟ್ 12ಕ್ಕೆ ಜಿಯೋ ಗಿಗಾ ಫೈಬರ್ ಲಾಂಚ್

    ಮುಂಬೈ: ರಿಲಯನ್ಸ್ ಜಿಯೋ ಕಂಪನಿಯ ಫಿಕ್ಸೆಡ್ ಬ್ರಾಡ್‍ಬ್ಯಾಂಡ್ ಸೆಗ್ಮೆಂಟ್ ಹೊಸ ಕನೆಕ್ಷನ್ ‘ಜಿಯೋಗಿಗಾಫೈಬರ್’ ಸೇವೆ ಆಗಸ್ಟ್ 12ರಂದು ಲಾಂಚ್ ಆಗಲಿದೆ ಎಂದು ವರದಿಯಾಗಿದೆ. ರಿಲಯನ್ಸ್ ಜಿಯೋ ಕಂಪನಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ‘ಜಿಯೋಗಿಗಾಫೈಬರ್’ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

    ಜಿಯೋಗಿಗಾಫೈಬರ್ ಸಂಪರ್ಕ ವಿಶ್ವದ ಅತಿದೊಡ್ಡ ಗ್ರೀನ್ ಫೀಲ್ಡ್ ಫಿಕ್ಸಡ್ ಬ್ರಾಡ್‍ಬ್ಯಾಂಡ್ ಲೈನ್ ಆಗಲಿದೆ. ಭಾರತದ ಸುಮಾರು 1,100 ನಗರಗಳಲ್ಲಿ ಜಿಯೋಗಿಗಾಫೈಬರ್ ಸೇವೆ ಲಭ್ಯವಾಗಲಿದೆ ಎಂದು 2018ರ ಜುಲೈನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ತಿಳಿಸಿದ್ದರು.

    ಬ್ರಾಡ್‍ಬ್ಯಾಂಡ್, ಲ್ಯಾಂಡ್‍ಲೈನ್ ಮತ್ತು ಟಿವಿ ಕಾಂಬೋ ಮೂರು ಸೇವೆಗಳನ್ನು ತಿಂಗಳಿಗೆ 600 ರೂ.ಗೆ ನೀಡಲು ಜಿಯೋ ಮುಂದಾಗಿದೆ. ಜಿಯೋ ಗಿಗಾಫೈಬರ್ ಕಳೆದ ವರ್ಷದಿಂದ ಮುಂಬೈ ಮತ್ತು ದೆಹಲಿಯಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. ಗಿಗಾ ಫೈಬರ್ ಪಡೆದ ಗ್ರಾಹಕರು 100 ಮೆಗಾಬೈಟ್ಸ್ ಪರ್ ಸೆಕೆಂಡ್ (ಎಂಬಿಪಿಎಸ್) ವೇಗದ ಇಂಟರ್ ನೆಟ್ ಸಿಗಲಿದೆ.

    ರೂಟರ್ ಖರೀದಿ:
    ಜಿಯೋ ಗಿಗಾ ಫೂಬರ್ ಒಂದು ವರ್ಷ ಉಚಿತ ಸೇವೆ ಆದರೂ ಗ್ರಾಹಕರು ಆರಂಭದಲ್ಲಿ 4,500 ರೂ. ನೀಡಿ ರೂಟರ್ ಖರೀದಿಸಬೇಕು. ಎಲ್ಲ ಇಂಟರ್ ನೆಟ್ ಸೇವೆಗಳು ಆಪ್ಟಿಕಲ್ ನೆಟ್‍ವರ್ಕ್ ಟರ್ಮಿನಲ್ (ಒಎನ್‍ಟಿ) ಬಾಕ್ಸ್ ರೂಟರ್ ಮೂಲಕ ನಡೆಯಲಿದ್ದು, ಒಂದೇ ಬಾರಿಗೆ ಒಟ್ಟು 40-45 ಡಿವೈಸ್ ಗಳನ್ನು ಕನೆಕ್ಟ್ ಮಾಡಬಹುದು. ಮೊಬೈಲ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಗೇಮಿಂಗ್, ಸಿಸಿಟಿವಿ, ಸ್ಮಾರ್ಟ್ ಹೋಮ್ ಸಿಸ್ಟಂ ಸಹ ಕನೆಕ್ಟ್ ಮಾಡಬಹುದು.

    ಈ ಸೇವೆಯ ಇನ್ನೊಂದು ವಿಶೇಷ ಏನೆಂದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೇರಿದಂತೆ ಇತರ ಡೇಟಾಗಳನ್ನು ಕ್ಲೌಡ್ ಮೂಲಕ ಸೇವ್ ಆಗಲಿದೆ. ಈ ಮೂಲಕ ಎಲ್ಲೇ ಹೋದರೂ ಡೇಟಾಗಳನ್ನು ಗ್ರಾಹಕರು ಚೆಕ್ ಮಾಡಬಹುದು.

  • ಶೀಘ್ರವೇ ಬಿಡುಗಡೆಯಾಗಲಿದೆ ಜಿಯೋ ಗಿಗಾ ಫೈಬರ್: ಏನೆಲ್ಲ ಸೇವೆ ಉಚಿತ ಸಿಗುತ್ತೆ? ಇಲ್ಲಿದೆ ಪೂರ್ಣ ಮಾಹಿತಿ

    ಶೀಘ್ರವೇ ಬಿಡುಗಡೆಯಾಗಲಿದೆ ಜಿಯೋ ಗಿಗಾ ಫೈಬರ್: ಏನೆಲ್ಲ ಸೇವೆ ಉಚಿತ ಸಿಗುತ್ತೆ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಉಚಿತವಾಗಿ ಮೊಬೈಲ್ ಡೇಟಾ ನೀಡಿ ದೇಶದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಈಗ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಎಂಟ್ರಿ ನೀಡಲು ಮುಂದಾಗಿದೆ. ಬ್ರಾಡ್‍ಬ್ಯಾಂಡ್, ಲ್ಯಾಂಡ್‍ಲೈನ್ ಮತ್ತು ಟಿವಿ ಕಾಂಬೋ ಮೂರು ಸೇವೆಗಳನ್ನು ತಿಂಗಳಿಗೆ 600 ರೂ.ಗೆ ನೀಡಲು ಜಿಯೋ ಮುಂದಾಗಿದೆ.

    ಜಿಯೋ ಗಿಗಾಫೈಬರ್ ಕಳೆದ ವರ್ಷದಿಂದ ಮುಂಬೈ ಮತ್ತು ದೆಹಲಿಯಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. 100 ಜಿಬಿ ಡೇಟಾವನ್ನು 100 ಮೆಗಾಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ವೇಗದಲ್ಲಿ ಜಿಯೋ ಗ್ರಾಹಕರಿಗೆ ನೀಡುತ್ತಿದೆ. ಮುಂದಿನ 2 ತಿಂಗಳ ಒಳಗಡೆ ಅಧಿಕೃತವಾಗಿ ಈ ಸೇವೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕಂಪನಿಯ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಆರಂಭದಲ್ಲಿ ಉಚಿತ:
    ಜಿಯೋ ಸೇವೆ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಂಡ ಮೂರು ತಿಂಗಳು ಉಚಿತ ಸೇವೆ ನೀಡಿತ್ತು. ಜಿಯೋ ಫೈಬರ್ ಕೂಡ ಒಂದು ವರ್ಷ ಉಚಿತವಾಗಿ ಸಿಗಲಿದೆ. ಲ್ಯಾಂಡ್‍ಲೈನ್‍ನಲ್ಲಿ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿ ನೀಡಲಿದೆ. ಲ್ಯಾಂಡ್‍ಲೈನ್ ಮತ್ತು ಟಿವಿ ವಾಹಿನಿ ಸೇವೆಗಳು ಮೂರು ತಿಂಗಳಿನಲ್ಲಿ ಸೇರ್ಪಡೆಯಾಗಲಿದೆ. ಈಗಾಗಲೇ ಟಿವಿ ವೀಕ್ಷಣೆಗೆ ಜಿಯೋ ಟಿವಿ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್ ನಲ್ಲಿ ಬರುವ ಎಲ್ಲ ಟಿವಿಗಳನ್ನು ವೀಕ್ಷಿಸಬಹುದಾಗಿದೆ. ಈ ಸೇವೆ ಆರಂಭಗೊಂಡ ದಿನದಿಂದ ಒಂದು ವರ್ಷದವರೆಗೆ ಎಲ್ಲ ಸೇವೆಗಳು ಉಚಿತವಾಗಿ ಸಿಗಲಿದ್ದು, ಒಂದು ವರ್ಷದ ಬಳಿಕ ಗ್ರಾಹಕರು ಬೇಕಾದ ಪ್ಯಾಕ್‍ಗೆ ಅನುಗುಣವಾಗಿ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಸ್ಪೀಡ್ ಎಷ್ಟು?
    ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್) ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಜಿಯೋದ ಡೌನ್‍ಲೋಡ್ ಸ್ಪೀಡ್ 22.2 ಮೆಗಾ ಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ಇದೆ. ಸದ್ಯ ಜಿಯೋ ದೇಶದಲ್ಲಿ ಮೊಬೈಲ್ ಡೇಟಾ ಸ್ಪೀಡ್‍ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಈಗ ಬರುತ್ತಿರುವ ಜಿಯೋ ಫೈಬರ್‍ನಲ್ಲಿ 100 ಎಂಬಿಪಿಎಸ್ ವೇಗದಲ್ಲಿ ಇಂಟರ್‍ನೆಟ್ ಸೇವೆ ಸಿಗಲಿದೆ.

    ರೂಟರ್ ಖರೀದಿಸಬೇಕು:
    ಒಂದು ವರ್ಷ ಉಚಿತ ಸೇವೆ ಆದರೂ ಗ್ರಾಹಕರು ಆರಂಭದಲ್ಲಿ 4,500 ರೂ. ನೀಡಿ ರೂಟರ್ ಖರೀಸಬೇಕು. ಎಲ್ಲ ಇಂಟರ್‍ನೆಟ್ ಸೇವೆಗಳು ಆಪ್ಟಿಕಲ್ ನೆಟ್‍ವರ್ಕ್ ಟರ್ಮಿನಲ್ (ಒಎನ್‍ಟಿ) ಬಾಕ್ಸ್ ರೂಟರ್ ಮೂಲಕ ನಡೆಯಲಿದ್ದು, ಒಂದೇ ಬಾರಿಗೆ ಒಟ್ಟು 40-45 ಡಿವೈಸ್ ಗಳನ್ನು ಕನೆಕ್ಟ್ ಮಾಡಬಹುದು. ಮೊಬೈಲ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಗೇಮಿಂಗ್, ಸಿಸಿಟಿವಿ, ಸ್ಮಾರ್ಟ್ ಹೋಮ್ ಸಿಸ್ಟಂ ಸಹ ಕನೆಕ್ಟ್ ಮಾಡಬಹುದು.

    ಈ ಸೇವೆಯ ಇನ್ನೊಂದು ವಿಶೇಷ ಏನೆಂದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೇರಿದಂತೆ ಇತರ ಡೇಟಾಗಳನ್ನು ಕ್ಲೌಡ್ ಮೂಲಕ ಸೇವ್ ಆಗಲಿದೆ. ಈ ಮೂಲಕ ಎಲ್ಲೇ ಹೋದರೂ ಡೇಟಾಗಳನ್ನು ಗ್ರಾಹಕರು ಚೆಕ್ ಮಾಡಬಹುದು.

    ಎಲ್ಲೆಲ್ಲಿ ಸಿಗುತ್ತೆ?
    ಸದ್ಯ ದೆಹಲಿ ಮತ್ತು ಮುಂಬೈ ನಗರದಲ್ಲಿ ಪರೀಕ್ಷೆಗಳು ನಡೆಯುತ್ತಿದೆ. ದೇಶದ 1,600 ನಗರಗಳಲ್ಲಿ ಜಿಯೋ ಫೈಬರ್ ನೀಡಲು ಕಂಪನಿ ಪ್ಲಾನ್ ಮಾಡಿದೆ. ಕಳೆದ ಆಗಸ್ಟ್ ತಿಂಗಳಿನಿಂದ ಜಿಯೋ ಫೈಬರ್ ಗ್ರಾಹಕರ ನೊಂದಣಿ ಆರಂಭಿಸಿದೆ.

    ಇಲ್ಲಿಯವರೆಗೆ ಕಂಪನಿ ಈ ಪ್ಲಾನ್ ಬಗ್ಗೆ ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿ ಅಧಿಕಾರಿಯೊಬ್ಬರು, ಇಲ್ಲಿಯವರೆಗೂ ಯಾವ ಪ್ಲಾನ್ ಬಗ್ಗೆ ಮಾಹಿತಿ ನಮಗೆ ಇಲ್ಲ. ಜಿಯೋ ಗಿಗಾ ಫೈಬರ್ ಬ್ರಾಂಡ್ ಮಾರುಕಟ್ಟೆಗೆ ಬರಲು ಅಂದಾಜು ಎರಡು ತಿಂಗಳು ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಪ್ರಸ್ತುತ ಭಾರತದಲ್ಲಿ 1.8 ಕೋಟಿ ಜನ ಬ್ರಾಂಡ್ ಬ್ಯಾಂಡ್ ಬಳಕೆ ಮಾಡುತ್ತಿದ್ದರೆ 53 ಕೋಟಿ ಜನ ಮೊಬೈಲ್ ಡೇಟಾ ಬಳಕೆ ಮಾಡುತ್ತಿದ್ದಾರೆ. ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಅಧಿಕೃತವಾಗಿ ಆರಂಭವಾದರೆ ಟೆಲಿಕಾಂ ಕಂಪನಿಗಳಿಗೆ ಹೇಗೆ ಹೊಡೆತ ನೀಡಿತ್ತೋ ಅದೇ ರೀತಿಯಾಗಿ ಬ್ರಾಡ್‍ಬ್ಯಾಂಡ್ ಕಂಪನಿಗಳಿಗೆ ಹೊಡೆತ ನೀಡಬಹುದು ಎನ್ನುವ ವಿಶ್ಲೇಷಣೆ ಈಗಾಗಲೇ ಕೇಳಿ ಬಂದಿದೆ.

  • ಆಗಸ್ಟ್ 15ರಿಂದ ಜಿಯೋ ಬ್ರಾಡ್‍ಬ್ಯಾಂಡ್ ನೋಂದಣಿ ಪ್ರಾರಂಭ: ಬೆಲೆ ಎಷ್ಟು? ಡೇಟಾ ಸ್ಪೀಡ್ ಎಷ್ಟು?

    ಆಗಸ್ಟ್ 15ರಿಂದ ಜಿಯೋ ಬ್ರಾಡ್‍ಬ್ಯಾಂಡ್ ನೋಂದಣಿ ಪ್ರಾರಂಭ: ಬೆಲೆ ಎಷ್ಟು? ಡೇಟಾ ಸ್ಪೀಡ್ ಎಷ್ಟು?

    ಮುಂಬೈ: ಟೆಲಿಕಾಂ ಕಂಪೆನಿಗಳ ಡೇಟಾ ದರ ಸಮರಕ್ಕೆ ಕಾರಣವಾಗಿದ್ದ ಜಿಯೋ ಈಗ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದು, ಇದೇ ಆಗಸ್ಟ್ 15 ರಿಂದ ಅಧಿಕೃತವಾಗಿ ಜಿಯೋ ಫೈಬರ್  ಬ್ರಾಡ್‍ಬ್ಯಾಂಡ್ ಸೇವೆಯು ದೇಶದಲ್ಲಿ ಉದ್ಘಾಟನೆಯಾಗಲಿದೆ.

    ಜಿಯೋ ಬ್ರಾಡ್‍ಬ್ಯಾಂಡ್ ಸೇವೆ ಭಾರತದ ಕೆಲವು ನಗರಗಳಲ್ಲಿ 2016 ರಿಂದಲೂ ಪ್ರಾಯೋಗಿಕವಾಗಿ ಚಾಲನೆಯಲ್ಲಿದ್ದು, ಇದೀಗ ದೇಶಾದ್ಯಂತ ಇರುವ ಒಟ್ಟು 1,100 ನಗರಗಳಿಗೆ ಸೇವೆಯನ್ನು ಒದಗಿಸಲು ಜಿಯೋ ನೋಂದಣಿಯನ್ನು ಪ್ರಾರಂಭಿಸಿದೆ. ಗ್ರಾಹಕರಿಗೆ ಒಟ್ಟಾರೆ 1 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ಡೌನ್‍ಲೋಡ್ ಸ್ಪೀಡ್ ಹಾಗೂ 100 ಎಂಬಿಪಿಎಸ್(ಮೆಗಾ ಬೈಟ್ ಪರ್ ಸೆಕೆಂಡ್) ಅಪ್ಲೋಡ್ ಸ್ಪೀಡ್ ನೀಡಲಿದೆ.

    ಇದೇ ಆಗಸ್ಟ್ 15 ರಿಂದ ಬ್ರಾಡ್‍ಬ್ಯಾಂಡ್ ಸೇವೆ ಆರಂಭಗೊಳ್ಳಲಿದ್ದು, ಈ ಸೇವೆ ಪಡೆಯಬೇಕಾದರೆ ಗ್ರಾಹಕರು ಆನ್‍ಲೈನಲ್ಲಿ ನೋಂದಣಿ ಮಾಡಬೇಕಾಗಿರುತ್ತದೆ.

    ಬೆಲೆ ಎಷ್ಟು?
    ಜಿಯೋ ಬ್ರಾಡ್‍ಬ್ಯಾಂಡ್ ತನ್ನ ಸೇವೆಯನ್ನು 4,500 ರೂ.ಗಳಿಗೆ ನಿಗದಿಪಡಿಸಿದ್ದು, ಈ ಹಣವನ್ನು ಕಂಪೆನಿ ಮರು ಪಾವತಿ ಮಾಡುವುದಾಗಿ ತಿಳಿಸಿದೆ. ಕೇವಲ ತನ್ನ ಗೀಗಾ ರೂಟರ್ ಹಾಗೂ ಇತರೆ ಬಿಡಿಭಾಗಗಳ ಸುರಕ್ಷತೆಯ ದೃಷ್ಟಿಯಿಂದ ಭದ್ರತಾ ಠೇವಣಿಯನ್ನಾಗಿ ಈ ಮೊತ್ತವನ್ನು ಪಡೆದುಕೊಳ್ಳುತ್ತದೆ. ಈ ಹಣವನ್ನು ಪಾವತಿಸಿದ ಗ್ರಾಹಕರಿಗೆ 3 ತಿಂಗಳುಗಳವರೆಗೆ ಅನ್‍ಲಿಮಿಟೆಡ್ ಇಂಟರ್‌ನೆಟ್ ಸೇವೆಯನ್ನು 1 ಜಿಬಿಪಿಎಸ್ ಡೌನ್‍ಲೋಡ್ ಹಾಗೂ 100 ಎಂಬಿಪಿಎಸ್ ಅಪ್‍ಲೋಡ್ ಸ್ಪೀಡ್‍ನೊಂದಿಗೆ ನೀಡಲಿದೆ. ಪ್ರತಿ ತಿಂಗಳ ಪ್ಯಾಕೇಜ್‍ಗಳ ಕುರಿತು ಮಾಹಿತಿಯನ್ನು ಸದ್ಯವೇ ಬಿಡುಗಡೆಮಾಡಲಿದೆ. ನೊಂದಣಿಯನ್ನು ಯಾರು ಬೇಕಾದರೂ ಮಾಡಬಹುದು. ಆದರೆ ನೀವು ನೆಲೆಸಿರುವ ಸ್ಥಳದಲ್ಲಿ ಈ ಸೇವೆ ಆರಂಭದಲ್ಲೇ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಸಿಗಲಿದೆ.

    ಗೀಗಾ ಟಿವಿ:
    ಬ್ಯಾಡ್‍ಬ್ಯಾಂಡ್ ಸೇವೆಯ ಜೊತೆಗೆ ಜಿಯೋ ತನ್ನ ನೂತನ ಜಿಯೋಫೈಬರ್ ಸೇವೆಯೊಂದಿಗೆ ಜಿಯೋ ಗೀಗಾ ಟಿವಿಯ ಸೌಲಭ್ಯವನ್ನು ನೀಡಲಿದೆ. ಗೀಗಾ ರೂಟರ್ ಮನೆ ಹಾಗೂ ಕಚೇರಿಯಲ್ಲಿನ ವಾಲ್-ಟು-ವಾಲ್ ಹೈ ಸ್ಪೀಡ್ ವೈ-ಫೈ ವದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಗೀಗಾ ಟಿವಿಯನ್ನು ಗ್ರಾಹಕರು ತಮ್ಮ ಸ್ಮಾರ್ಟ್ ಟಿವಿಗಳಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ 4ಕೆ ವಿಡಿಯೋ ಹಾಗೂ ಅತ್ಯಾಧುನಿಕ ವಿಡಿಯೋ ಗೇಮ್‍ಗಳನ್ನು ಯಾವುದೇ ಅಡೆತಡೆಯಿಲ್ಲದೆ ಪಡೆಯಬಹುದಾಗಿದೆ.

    ಜಿಯೋ ಸಂಸ್ಥೆಯು ಗಿಗಾ ಟಿವಿ ಸೆಟ್-ಟಾಪ್ ಬಾಕ್ಸ್ ಜೊತೆಗೆ ವಾಯ್ಸ್ ಆಧರಿತ ರಿಮೋಟ್ ಗಳನ್ನು ನೀಡಲಿದೆ. ಈ ರಿಮೋಟ್ ಗಳ ಮೂಲಕ ಗ್ರಾಹಕರು ವಾಯ್ಸ್ ಮೂಲಕವೇ ತಮಗೇ ಬೇಕಾದ ಚಾನಲ್ ಹಾಗೂ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ಗಿಗಾ ಟಿವಿಯಲ್ಲಿ ಸುಮಾರು 600 ಕ್ಕೂ ಹೆಚ್ಚಿನ ಚಾನೆಲ್‍ಗಳು, ಲಕ್ಷಾಂತರ ಹಾಡುಗಳನ್ನು ವೀಕ್ಷಿಸಬಹುದಾಗಿದೆ. ಇದಲ್ಲದೇ ತನ್ನ ಜಿಯೋ ಸಿನಿಮಾ, ಜಿಯೋ ಟಿವಿ ಕಾಲ್, ಜಿಯೋ ಸ್ಮಾರ್ಟ್ ಲಿವಿಂಗ್, ಜಿಯೋ ಕ್ಲೌಡ್, ಮೀಡಿಯಾಶೇರ್ ಮತ್ತು ಜಿಯೋ ಸ್ಟೋರ್ಸ್ ನಂತಹ ಅಪ್ಲಿಕೇಶನ್ ತಮ್ಮ ಟಿವಿಗಳಲ್ಲಿ ಪಡೆದುಕೊಳ್ಳಬಹುದು.

    ಜಿಯೋ ಬ್ರಾಡ್‍ಬ್ಯಾಂಡ್ ನೆಟ್‍ವರ್ಕ್ ಅಡಿಯಲ್ಲಿ ಇಂಟರ್‌ನೆಟ್ ಬಳಕೆಮಾಡಿಕೊಂಡು ಮನೆಯನ್ನು ಸ್ಮಾರ್ಟ್ ಹೋಮ್ ಆಗಿ ಬದಲಾಯಿಸಿಕೊಳ್ಳಬಹುದು. ಮನೆಯಲ್ಲಿನ ಆಡಿಯೊ ಡಾಂಗಲ್, ವಿಡಿಯೋ ಡಾಂಗಲ್, ಸ್ಮಾರ್ಟ್ ಸ್ಪೀಕರ್, ವೈ-ಫೈ ಎಕ್ಸ್ಟೆಂಡರ್, ಸ್ಮಾರ್ಟ್ ಪ್ಲಗ್, ಸೆಕ್ಯುರಿಟಿ ಕ್ಯಾಮೆರಾ ಮತ್ತು ಟಿವಿ ಕ್ಯಾಮೆರಾ ಸೇರಿದಂತೆ ಹಲವು ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ನಿಯಂತ್ರಿಸಬಹುದು. ಮನೆಯ ತಾಪಮಾನ, ಬೆಳಕು, ಗ್ಯಾಸ್ ಮತ್ತು ನೀರಿನ ಸೋರಿಕೆಯನ್ನು ಸ್ಮಾರ್ಟ್ ಫೋನ್ ಬಳಸಿಕೊಂಡು ಗೀಗಾ ಟಿವಿಯೊಂದಿಗೆ ನಿಯಂತ್ರಿಬಹುದು ಎಂದು ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews