Tag: bro film

  • ಸಿನಿಮಾ ರೂಪದಲ್ಲಿ ಬರಲಿದೆ ಪವನ್ ಕಲ್ಯಾಣ್ 3 ಮದುವೆ ವಿಚಾರ- ಮಾಜಿ ಪತ್ನಿ ಪ್ರತಿಕ್ರಿಯೆ

    ಸಿನಿಮಾ ರೂಪದಲ್ಲಿ ಬರಲಿದೆ ಪವನ್ ಕಲ್ಯಾಣ್ 3 ಮದುವೆ ವಿಚಾರ- ಮಾಜಿ ಪತ್ನಿ ಪ್ರತಿಕ್ರಿಯೆ

    ಟಾಲಿವುಡ್ (Tollywood) ನಟ ಪವನ್ ಕಲ್ಯಾಣ್ (Pawan Kalyan) ಮೂರು ಮದುವೆಯ (Wedding) ವಿಚಾರದ ಕುರಿತು ಸಿನಿಮಾ ಮಾಡುವುದಾಗಿ ಘೋಷಣೆ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪವನ್ ಮಾಜಿ ಪತ್ನಿ ರೇಣು ದೇಸಾಯಿ (Renu Desai) ಪ್ರತಿಕ್ರಿಯೆ ನೀಡಿದ್ದಾರೆ. ವೈಯಕ್ತಿಕ ಜೀವನವನ್ನ ಸಿನಿಮಾ ಮಾಡಬೇಡಿ ಎಂದು ರೇಣು ರಿಯಾಕ್ಟ್‌ ಮಾಡಿದ್ದಾರೆ.

    ಇತ್ತೀಚೆಗೆ ಪವನ್ ಕಲ್ಯಾಣ ಮೂರು ಮದುವೆಯ ಕುರಿತು ಸಿನಿಮಾ ಮಾಡುವುದಾಗಿ ಸಚಿವ ಅಂಬಾಟಿ ರಾಮ್‌ಬಾಬು (Ambati Rambabu) ಹೇಳಿದ್ದಾರೆ. ಪವನ್ ಕಲ್ಯಾಣ್ ಅಭಿನಯದ ‘ಬ್ರೋ’ (Bro Film) ಚಿತ್ರ ಸೂಪರ್ ಹಿಟ್ ಆದ ಬೆನ್ನಲ್ಲೇ ಅವರ ಬಯೋಪಿಕ್ ಚಿತ್ರ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇದಕ್ಕೆ ಪವನ್ ಮಾಜಿ ಪತ್ನಿ ರೇಣು ದೇಸಾಯಿ ಪ್ರತಿಕ್ರಿಯಿಸಿ, ರಾಜಕೀಯ, ವೈಯಕ್ತಿಕ ದ್ವೇಷಗಳನ್ನು ನೀವು ಮುಂದುವರೆಸಿಕೊಳ್ಳಿ. ಆದರೆ ನಾನೊಬ್ಬ ತಾಯಿಯಾಗಿ ಮನವಿ ಮಾಡುತ್ತಿದ್ದೇನೆ. ನಿಮ್ಮ ರಾಜಕೀಯ, ವೈಯಕ್ತಿಕ ದ್ವೇಷಗಳ ಮಧ್ಯೆ ಮಕ್ಕಳನ್ನು ಎಳೆದು ತರಬೇಡಿ ಎಂದಿದ್ದಾರೆ. ನನ್ನ ಮಕ್ಕಳು ಮಾತ್ರವೇ ಅಲ್ಲ ಬೇರೆ ಇನ್ಯಾವುದೇ ಸೆಲೆಬ್ರಿಟಿಗಳ ಮಕ್ಕಳ ವಿಷಯವನ್ನೂ ರಾಜಕೀಯಕ್ಕೆ ಎಳೆಯಬೇಡಿ ಎಂದಿದ್ದಾರೆ. ಇದನ್ನೂ ಓದಿ:ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರ

    ನಿಮ್ಮ ರಾಜಕೀಯ ದ್ವೇಷಕ್ಕಾಗಿ ನಮ್ಮ ವೈಯಕ್ತಿಕ ಜೀವನವನ್ನು ಕೆಣಕುವುದು ಬೇಡ. ನಮ್ಮ ವೈಯಕ್ತಿಕ ಜೀವನವನ್ನು ಕಳಂಕಗೊಳಿಸುವ ಸಿನಿಮಾ ಮಾಡಬೇಡಿ. ನಮ್ಮ ವಿಚಾರ ಅದೇನೇ ಇದ್ದರೂ, ಆರಂಭದ ದಿನದಿಂದಲೂ ಅವರ ರಾಜಕೀಯ ಪಯಣಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದೇನೆ. ಪವನ್ ಕಲ್ಯಾಣ್‌ಗೆ ಜನರ ಬಗ್ಗೆ ಬಹಳ ಪ್ರೀತಿ- ಗೌರವ ಇದೆ. ಸಮಾಜವನ್ನು, ಜನರ ಜೀವನವನ್ನು ಬದಲಿಸಬೇಕು ಎಂಬ ಗುರಿಯಿದೆ. ಅದನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎಂದಿದ್ದಾರೆ ರೇಣು ದೇಸಾಯಿ. ಈ ಮೂಲಕ ನಮ್ಮ ವೈಯಕ್ತಿಕ ಜೀವನವನ್ನು ಸಿನಿಮಾ ಮಾಡದಂತೆ ರೇಣು ಮನವಿ ಮಾಡಿದ್ದಾರೆ.

    2007ರಲ್ಲಿ ನಂದಿನಿ ಎಂಬುವವರನ್ನು ಪವನ್ ಮದುವೆಯಾದರು. ಬಳಿಕ ಡಿವೋರ್ಸ್ ಮೂಲಕ ದಾಂಪತ್ಯಕ್ಕೆ ಅಂತ್ಯವಾಗಿತ್ತು. 2008ರಲ್ಲಿ ರೇಣು ದೇಸಾಯಿ ಅವರನ್ನ ವಿವಾಹವಾದರು. ನಂತರ ಈ ಮದುವೆ ಕೂಡ ಮುರಿದು ಬಿದ್ದಿತ್ತು. ರಷ್ಯಾದ ಅನ್ನಾ ಲೆಜಿನೇವಾರನ್ನು ಮದುವೆಯಾದರು. ಈ ಜೋಡಿಗೆ ಈಗ ಒಬ್ಬ ಮಗ ಮತ್ತು ಮಗಳಿದ್ದಾರೆ. ಇದನ್ನೂ ಓದಿ:ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರ

    ಮೆಗಾಸ್ಟಾರ್ (Megastar) ಕುಟುಂಬದಲ್ಲಿ ಮದುವೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆಯಿದೆ. ಅದರಲ್ಲೂ ಪವನ್ ಕಲ್ಯಾಣ್ 3 ಮದುವೆ ಮ್ಯಾಟರ್ ಆಗಾಗ ಚಾಲ್ತಿಗೆ ಬರುತ್ತದೆ. ರಾಜಕೀಯದಲ್ಲಿ ಇದನ್ನೇ ಅಸ್ತ್ರವಾಗಿಟ್ಟುಕೊಂಡು, ಪವನ್‌ಗೆ ವಿರೋಧ ಪಕ್ಷದ ರಾಜಕಾರಣಿಗಳು ಕಾಲೆಳೆಯುತ್ತಿರುತ್ತಾರೆ. ಹೀಗಾಗಿ ಇತ್ತೀಚೆಗೆ ಪವನ್ ತಮ್ಮ ಮದುವೆಯ ಬಗ್ಗೆ ಮುಕ್ತವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.

    ಮೊದಲ ಮದುವೆ ಹೊಂದಾಣಿಕೆ ಆಗಲಿಲ್ಲ, ಅದಕ್ಕೇ ಎರಡನೆಯದ್ದು ಆದೆ. ಅದು ಕೂಡ ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿದ್ದವು. ಅದಕ್ಕೆ ಆ ಮದುವೆಗೂ ಅಂತ್ಯ ಹಾಡಿದೆ. ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು. ಅದರಲ್ಲಿ ತಪ್ಪೇನಿದೆ ಅಷ್ಟಕ್ಕೂ ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿಲ್ಲವಲ್ಲ. ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು? ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥರಾಗಿರುವ ಪವನ್ ಕಲ್ಯಾಣ್ ಬೇಸರ ವ್ಯಕ್ತಪಡಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿತ್ರಮಂದಿರದಲ್ಲಿ ಹುಚ್ಚು ಅಭಿಮಾನ ಪ್ರದರ್ಶಿಸಿದ ಪವನ್ ಕಲ್ಯಾಣ್ ಅಭಿಮಾನಿಗಳ ಬಂಧನ

    ಚಿತ್ರಮಂದಿರದಲ್ಲಿ ಹುಚ್ಚು ಅಭಿಮಾನ ಪ್ರದರ್ಶಿಸಿದ ಪವನ್ ಕಲ್ಯಾಣ್ ಅಭಿಮಾನಿಗಳ ಬಂಧನ

    ತೆಲುಗು ಸಿನಿಮಾರಂಗದಲ್ಲಿ ಅಪಾರ ಅಭಿಮಾನಿಗಳ ಬಳಗ ಹೊಂದಿರೋ ನಟ ಅಂದರೆ ಪವನ್ ಕಲ್ಯಾಣ್. ಸಿನಿಮಾ- ರಾಜಕೀಯ ಎರಡು ಕ್ಷೇತ್ರದಲ್ಲೂ ಪವನ್ ಕಲ್ಯಾಣ್ (Pawan Kalyan) ಛಾಪೂ ಮೂಡಿಸುತ್ತಿದ್ದಾರೆ. ಸದ್ಯ ಬ್ರೋ ಸಿನಿಮಾದ ಮೂಲಕ ಪವನ್ ಕಲ್ಯಾಣ್ ಹೈಪ್ ಕ್ರಿಯೆಟ್ ಮಾಡಿದ್ದಾರೆ. ‘ಬ್ರೋ’ (Bro Film) ಸಿನಿಮಾ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಹೀಗಿರುವಾಗ ನಟ ಪವನ್ ಅವರ ಅಭಿಮಾನಿಗಳು ಚಿತ್ರಮಂದಿರದಲ್ಲಿ ಹುಚ್ಚು ಅಭಿಮಾನ ಪ್ರದರ್ಶಿಸಿ ಈಗ ಅರೆಸ್ಟ್ ಆಗಿದ್ದಾರೆ.

    ಆಂಧ್ರ ಪ್ರದೇಶದ ಪಾರ್ವತಿಪುರಂನ ಚಿತ್ರಮಂದಿರದಲ್ಲಿ ಪವನ್ ಕಲ್ಯಾಣ್‌ರ ಅಭಿಮಾನಿಗಳು ‘ಬ್ರೋ’ ಸಿನಿಮಾ ಪ್ರದರ್ಶನದ ವೇಳೆ ಸಿನಿಮಾದ ಸ್ಕ್ರೀನ್‌ಗೆ ಹಾಲಿನ ಅಭಿಷೇಕ ಮಾಡಿ ಸ್ಕ್ರೀನ್ ಅನ್ನು ಹಾಳುಗೆಡವಿದ್ದಾರೆ. ಚಿತ್ರಮಂದಿರದ ಸ್ಕ್ರೀನ್ ಅನ್ನು ಹಾಳು ಮಾಡಿದ ಕಾರಣ ಚಿತ್ರಮಂದಿರದ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಪವನ್ ಕಲ್ಯಾಣ್‌ರ ಕೆಲವು ಕಿಡಿಗೇಡಿ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪವನ್ ಕಲ್ಯಾಣ್ ಅಭಿಮಾನಿಗಳಿಂದ ಚಿತ್ರಮಂದಿರಗಳಿಗೆ ಹಾನಿ ಆಗುತ್ತಿರುವುದು ಇದು ಮೊದಲೇನೂ ಅಲ್ಲ. ವರ್ಷದ ಹಿಂದೆ ಪವನ್‌ರ ಕಮ್‌ಬ್ಯಾಕ್ ಸಿನಿಮಾ ‘ವಕೀಲ್ ಸಾಬ್’ ಬಿಡುಗಡೆ ಆದಾಗಲೂ ಆಂಧ್ರ ಹಾಗೂ ತೆಲಂಗಾಣದಲ್ಲಿ ಪವನ್ ಅಭಿಮಾನಿಗಳು ಅಬ್ಬರ ಜಾಸ್ತಿಯಾಗಿತ್ತು. ಹಲವು ಚಿತ್ರಮಂದಿರಗಳನ್ನು ಪವನ್ ಅಭಿಮಾನಿಗಳು (Fans) ಜಖಂ ಮಾಡಿದ್ದರು.

    ಪವನ್ ಕಲ್ಯಾಣ್‌ಗೆ ಆಂಧ್ರ- ತೆಲಂಗಾಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಸಿನಿಮಾ ಬಿಡುಗಡೆ ಆದಾಗಲೆಲ್ಲ ಅಭಿಮಾನಿಗಳು ಹೀಗೆ ದಾಂಧಲೆ ಮಾಡುವುದು ಸಾಮಾನ್ಯವಾಗಿದೆ. ಇದೀಗ ಪವನ್ ಕಲ್ಯಾಣ್‌ರ ‘ಬ್ರೋ’ ಸಿನಿಮಾ ಬಿಡುಗಡೆ ಆಗಿದೆ. ಬಿಡುಗಡೆ ಆದ ಮೊದಲ ದಿನವೇ ಸುಮಾರು 37 ಕೋಟಿ ರೂಪಾಯಿಗಳನ್ನು ‘ಬ್ರೋ’ ಸಿನಿಮಾ ಗಳಿಕೆ ಮಾಡಿದೆ. ಆದಷ್ಟು ಬೇಗ 100 ಕೋಟಿ ಹಣವನ್ನು ತಲುಪುವ ನಿರೀಕ್ಷೆಯಲ್ಲಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ಸಾಯಿ ಧರಮ್ ತೇಜ್ (Sai Dharam Tej) ಒಟ್ಟಿಗೆ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪಘಾತದಿಂದ ಚೇತರಿಸಿಕೊಂಡ್ರಾ ಸಾಯಿ ಧರಂ ತೇಜ್- ನಟ ಹೇಳೋದೇನು?

    ಅಪಘಾತದಿಂದ ಚೇತರಿಸಿಕೊಂಡ್ರಾ ಸಾಯಿ ಧರಂ ತೇಜ್- ನಟ ಹೇಳೋದೇನು?

    ಟಾಲಿವುಡ್ (Tollywood) ನಟ ಸಾಯಿ ಧರಂ ತೇಜ್ (Sai Dharam Tej) ಅವರು ಸದ್ಯ ‘ವಿರೂಪಾಕ್ಷ’ (Virupaksha) ಸಿನಿಮಾ ಸಕ್ಸಸ್ ಆಗಿರುವ ಖುಷಿಯಲ್ಲಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ. ‘ಬ್ರೋ’ (Bro) ಸಿನಿಮಾದ ಹಾಡಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ತಮ್ಮ ಆರೋಗ್ಯದ ಬಗ್ಗೆ ನಟ ಮಾತನಾಡಿದ್ದಾರೆ. ಇದನ್ನೂ ಓದಿ:ರಚ್ಚು- ಸತೀಶ್ ನೀನಾಸಂ ಕಡೆಯಿಂದ ಗುಡ್ ನ್ಯೂಸ್- ‘ಮ್ಯಾಟ್ನಿ’ ಚಿತ್ರದ ಅಪ್‌ಡೇಟ್

    ಸಾಯಿ ಧರಂ ತೇಜ್(Sai Dharam Tej)- ಸಂಯುಕ್ತಾ ಮೆನನ್ (Samyuktha Menon) ನಟನೆಯ ‘ವಿರೂಪಾಕ್ಷ’ ಸಿನಿಮಾ ಈ ವರ್ಷ 100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸಾಯಿ ಧರಂ ತೇಜ್ ಅವರ ಸಿನಿ ಕೆರಿಯರ್‌ನಲ್ಲಿ ಈ ಹಿಂದಿನ ಎಲ್ಲಾ ಸಿನಿಮಾದ ಕಲೆಕ್ಷನ್ ಮೀರಿ ಗಳಿಸಿದೆ. ಇನ್ನೂ ಸೋದರ ಮಾವ ಪವನ್ ಕಲ್ಯಾಣ್ ಜೊತೆ ‘ಬ್ರೋ’ ಸಿನಿಮಾದಲ್ಲಿ ಸಾಯಿ ಧರಂ ತೇಜ್ ನಟಿಸಿದ್ದಾರೆ. ಚಿತ್ರದ ಸಾಂಗ್ ಕೂಡ ರಿಲೀಸ್ ಆಗಿದ್ದು, ನಟ ಸಾಯಿ ಡ್ಯಾನ್ಸ್‌ಗೆ ನೆಗೆಟಿವ್ ಕಾಮೆಂಟ್ಸ್ ಬಂದಿದೆ. ಯಾಕೆ ಸರಿಯಾಗಿ ಡ್ಯಾನ್ಸ್ ಮಾಡಿಲ್ಲ ಎಂದು ಫ್ಯಾನ್ಸ್‌ ಪ್ರಶ್ನೆಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸುದೀಪ್ ನ ಕರೆಯೋದಿಲ್ಲ, ನಾನೇ ಮಾತಾಡ್ತೀನಿ : ನಟ ರವಿಚಂದ್ರನ್

    2021ರಲ್ಲಿ ಸಾಯಿ ಧರಂಗೆ ಅಪಘಾತವಾಗಿತ್ತು. ಅಂದು ತೀವ್ರವಾಗಿ ಏಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋಮಾದಲ್ಲಿದ್ದರು ಬಳಿಕ ಇದರಿಂದ ಹೊರ ಬಂದು ಕೊಂಚ ಮಟ್ಟಿಗೆ ಚೇತರಿಸಿಕೊಂಡಿದ್ದಾರೆ. ಅಂದಿನ ಚಿಕಿತ್ಸೆಯ ಬಳಿಕ ದೇಹದಲ್ಲಿ ಒಂದಿಷ್ಟು ಸಮಸ್ಯೆಗಳಾಗಿದೆ. ಆದರಿಂದ ಡ್ಯಾನ್ಸ್ ಮಾಡೋದ್ದಕ್ಕೆ ಕಷ್ಟವಾಗುತ್ತಿದೆ ಎಂದು ನಟ ಹೇಳಿದ್ದಾರೆ.

    ಡ್ಯಾನ್ಸ್ ಮಾಡುವುದಕ್ಕೆ ಕಷ್ಟ ಪಡುತ್ತಿರುವ ಸಾಯಿ ಧರಂ ತೇಜ್ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆಲ್ಲ ಅಪಘಾತಗಳಿಂದ ಉಂಟಾದ ಗಾಯಗಳು ಕಾರಣವಲ್ಲ. ಆದರೆ, ಕೋಮಾದಲ್ಲಿ ಇದ್ದಾಗ ಸ್ಟೀರಾಯ್ಡ್ ನೀಡಲಾಗಿತ್ತು. ಅದು ತನ್ನ ದೇಹವನ್ನು ಇಂದಿಗೂ ಬಾಧಿಸುತ್ತಿದೆ ಎಂದು ಸಂದರ್ಶನದಲ್ಲಿ ಸಾಯಿ ಧರಂ ತೇಜ್ ಹೇಳಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]