Tag: ​​British Woman

  • 102ನೇ ವಯಸ್ಸಿನಲ್ಲಿ 7,000 ಅಡಿ ಎತ್ತರದಿಂದ ಸ್ಕೈಡೈವ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಅಜ್ಜಿ

    102ನೇ ವಯಸ್ಸಿನಲ್ಲಿ 7,000 ಅಡಿ ಎತ್ತರದಿಂದ ಸ್ಕೈಡೈವ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಅಜ್ಜಿ

    ಲಂಡನ್: ಹುಟ್ಟುಹಬ್ಬದ (Birthday) ಸಲುವಾಗಿ 102 ವರ್ಷ ವಯಸ್ಸಿನ ಇಂಗ್ಲೆಂಡ್‍ನ ಬೆನ್‍ಹಾಲ್ ಗ್ರೀನ್‍ನ ವೃದ್ಧೆಯೊಬ್ಬರು 7,000 ಅಡಿಗಳ ಎತ್ತರದಿಂದ ಸ್ಕೈಡೈವಿಂಗ್ (Skydiver) ಮಾಡಿ ವಿಶೇಷ ದಾಖಲೆ ಮಾಡಿದ್ದಾರೆ. ಈ ಮೂಲಕ ವಯಸ್ಸು ಕೇವಲ ಒಂದು ಸಂಖ್ಯೆ ಎಂಬ ಮಾತನ್ನು ಮತ್ತೆ ಸಾಬೀತು ಮಾಡಿದ್ದಾರೆ.

    ವಿಮಾನದ ಮೇಲಿಂದ ಇಷ್ಟು ಎತ್ತರದಿಂದ ಹೊರಗೆ ನಿರ್ಭೀತಿಯಿಂದ ಜಿಗಿದಿರುವ ಶತಾಯುಷಿ ಮ್ಯಾನೆಟ್ ಬೈಲಿಯವರು (Manette Baillie) 6,900 ಅಡಿಗಳನ್ನು ಪೂರ್ಣಗೊಳಿಸಿದ ಬ್ರಿಟನ್‍ನ ಅತ್ಯಂತ ಹಳೆಯ ಸ್ಕೈಡೈವರ್ ಎಂವ ಹೆಗ್ಗಳಿಕೆಗೆ ಪಾತ್ರರಾದರು.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೃದ್ಧೆಯ ಸ್ಕೈಡೈವಿಂಗ್ ವೀಡಿಯೋದಲ್ಲಿ, ವೃದ್ಧೆ, ತರಬೇತಿದಾರನೊಂದಿಗೆ ವಿಮಾನದಿಂದ ಜಿಗಿಯುವುದನ್ನು ನೋಡಬಹುದಾಗಿದೆ. ಸ್ವಲ್ಪ ಸಮಯದ ನಂತರ, ಅವರು ಸುರಕ್ಷಿತವಾಗಿ ಇಳಿದು ಜನರೊಂದಿಗೆ ಸಂಭ್ರಮಿಸಿದ್ದಾರೆ. ತಮ್ಮ ಅನುಭವ ಅದ್ಭುತವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

    ಆಕಾಶದಲ್ಲಿ ತೇಲುವಾಗ ಉತ್ಸಾಹ ಮತ್ತು ಭಯ ಎರಡನ್ನೂ ಅಅನುಭವಿಸಿದೆ. ಈ ವೇಳೆ ನಾನು ನನ್ನ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿದ್ದೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈ ಮುಲಕ ಬಹು ದಿನಗಳ ಕನಸನ್ನು ನಾನು ಈಡೇರಿಸಕೊಂಡಿದ್ದೇನೆ ಎಂದಿದ್ದಾರೆ.

    ಜನರು ವಯಸ್ಸಾದ ಬಳಿಕ ಸಹ ತಮ್ಮ ಕನಸುಗಳನ್ನು ಮುಂದುವರಿಸಬಹುದು ಎಂದು ಬೈಲ್ಲಿ ಹೇಳಿದ್ದಾರೆ. ಈ ಮೂಲಕ ಯುವ ಜನತೆಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ.

  • ಗೋವಾದಲ್ಲಿ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಅರೆಸ್ಟ್

    ಗೋವಾದಲ್ಲಿ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಅರೆಸ್ಟ್

    ಪಣಜಿ: ಕಳೆದ ವಾರ ಉತ್ತರ ಗೋವಾದ ಅರಂಬೋಲ್ ಸ್ವೀಟ್ ವಾಟರ್ ಬೀಚ್‍ನಲ್ಲಿ ಬ್ರಿಟಿಷ್ ಮಹಿಳೆಯೊಬ್ಬರು ಅತ್ಯಾಚಾರಕ್ಕೊಳಗಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಸ್ಥಳೀಯ ನಿವಾಸಿಯಾಗಿದ್ದು, ಜೂನ್ 2 ರಂದು ಬ್ರಿಟಿಷ್ ಮಹಿಳೆಯೊಬ್ಬರು ಸಮುದ್ರತೀರದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಗಮನಿಸಿದ್ದ ಅವನು ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನೂ ಓದಿ: ಮುಳಬಾಗಿಲು ಗಂಗಮ್ಮ ದೇವಾಲಯ ಮುಂಭಾಗವೇ ಕೈ ನಗರಸಭೆ ಸದಸ್ಯನ ಬರ್ಬರ ಕೊಲೆ

    ಪತಿಯೊಂದಿಗೆ ರಜೆಯ ಮೇಲೆ ಗೋವಾದಲ್ಲಿರುವ ಸಂತ್ರಸ್ತೆ ಸೋಮವಾರ (ಜೂನ್ 6) ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ, ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು

  • ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಮಹಿಳೆಗೆ ಮುಂಬೈ ಕ್ಲಬ್‌ನಲ್ಲಿ ಕಿರುಕುಳ

    ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಮಹಿಳೆಗೆ ಮುಂಬೈ ಕ್ಲಬ್‌ನಲ್ಲಿ ಕಿರುಕುಳ

    ಮುಂಬೈ: ಮುಂಬೈನ ಸಬರ್ಬನ್ ಬಾಂದ್ರಾ ಕ್ಲಬ್‌ನಲ್ಲಿ ಬ್ರಿಟನ್ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ.

    ಬ್ರಿಟನ್ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮಂಗಳವಾರ ರಾತ್ರಿ ತನ್ನ ಪತಿ ಹಾಗೂ ಸ್ನೇಹಿತರೊಂದಿಗೆ ಕ್ಲಬ್‌ಗೆ ತೆರಳಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಶೌಚಾಲಯಕ್ಕೆ ತೆರಳಿದ್ದಾಗ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದು, ಈ ಬಗ್ಗೆ ತಕ್ಷಣ ತನ್ನ ಪತಿ ಹಾಗೂ ಸ್ನೇಹಿತರಿಗೆ ತಿಳಿಸಿದ್ದಾರೆ. ಬಳಿಕ ಆರೋಪಿಯನ್ನು ಆಕೆಯ ಪತಿ ಹಾಗೂ ಸ್ನೇಹಿತರು ಹಿಡಿದ್ದಾರೆ. ಇದನ್ನೂ ಓದಿ: ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್

    ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದಾರೆ. ಮಹಿಳೆಯ ಪತಿ ಹಾಗೂ ಆಕೆಯ ಸ್ನೇಹಿತರು ಆರೋಪಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಆಸ್ತಿಯಲ್ಲಿ ಪಾಲು ಕೊಡದಿದ್ದಕ್ಕೆ ಮೂವರು ಮಕ್ಕಳೊಂದಿಗೆ ಬೆಂಕಿಹಚ್ಚಿಕೊಂಡ ತಾಯಿ

    ಆರೋಪಿಯನ್ನು ಘನಶ್ಯಾಮ್ ಲಾಲ್‌ಚಂದ್ ಯಾದವ್ ಎಂದು ಗುರುತಿಸಲಾಗಿದ್ದು, ಆತ ಎಂಬಿಎ ಪದವೀಧರ ಎಂದು ತಿಳಿದುಬಂದಿದೆ. ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 354, 354ಎ ಹಾಗೂ 509 ಆರೋಪಗಳ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.