Tag: British Airways

  • ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

    ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

    ಲಂಡನ್‌: ತಾಂತ್ರಿಕ ಸಮಸ್ಯೆಯಿಂದ ಚೆನ್ನೈಗೆ (Chennai) ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ (British Airways) ವಿಮಾನ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ (London Heathrow Airport) ಮರಳಿದ ಘಟನೆ ಭಾನುವಾರ ನಡೆದಿದೆ.

    ಫ್ಲೈಟ್‌ರಾಡಾರ್ 24 ನೊಂದಿಗೆ ಲಭ್ಯವಿರುವ ಮಾಹಿತಿಯ ಪ್ರಕಾರ, BA35 ವಿಮಾನವು 36 ನಿಮಿಷಗಳ ವಿಳಂಬದ ಬಳಿಕ ಮಧ್ಯಾಹ್ನ 1:16 ಕ್ಕೆ ಹೀಥ್ರೂ ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗಿದೆ.


    ಬೋಯಿಂಗ್ 787-8 ಡ್ರೀಮ್‌ಲೈನರ್ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಹಿಂತಿರುಗುವ ಮೊದಲು ಡೋವರ್ ಜಲಸಂಧಿಯ ಮೇಲೆ ಹಲವು ಬಾರಿ ಸುತ್ತು ಹಾಕಿತ್ತು. ವಿಮಾನವು ಹಿಂತಿರುಗುವ ಮೊದಲು ಸುಮಾರು 9,000 ಅಡಿಗಳಷ್ಟು ಎತ್ತರಕ್ಕೆ ಕುಸಿದಿತ್ತು.

    ಟೇಕಾಫ್‌ ಆದ ನಂತರ ರೆಕ್ಕೆಗಳಲ್ಲಿರುವ ಫ್ಲಾಪ್‌ನಲ್ಲಿ (Flap Adjustment) ಸಮಸ್ಯೆ ಇರುವುದು ಕ್ಯಾಪ್ಟನ್‌ಗೆ ಗೊತ್ತಾಗಿದೆ. ನಂತರ ಮರಳಿ ಲಂಡನ್‌ಗೆ ಮರಳಲು ನಿರ್ಧರಿಸಿದ ಕ್ಯಾಪ್ಟನ್‌ ಮಧ್ಯಾಹ್ನ 1:52ಕ್ಕೆ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಲ್ಯಾಂಡ್‌ ಮಾಡಿಸಿದ್ದಾರೆ.

  • ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಕರೆ – ಬ್ರಿಟಿಷ್ ಏರ್‌ವೇಸ್ ಟ್ರೈನಿ ಅರೆಸ್ಟ್

    ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಕರೆ – ಬ್ರಿಟಿಷ್ ಏರ್‌ವೇಸ್ ಟ್ರೈನಿ ಅರೆಸ್ಟ್

    ನವದೆಹಲಿ: ಸ್ಪೈಸ್ ಜೆಟ್ ವಿಮಾನಕ್ಕೆ (Spice Jet flight) ಗುರುವಾರ ಬಾಂಬ್ ಕರೆ (Bomb Threat) ನೀಡಿದ್ದ ಬ್ರಿಟಿಷ್ ಏರ್‌ವೇಸ್‌ನ (British Airways) ಟ್ರೈನಿ ಟಿಕೆಟ್ ಏಜೆಂಟ್‌ನನ್ನು ಶುಕ್ರವಾರ ಅಧಿಕಾರಿಗಳು ಬಂಧಿಸಿದ್ದಾರೆ.

    ಗುರುವಾರ ಸಂಜೆ ದೆಹಲಿಯಿಂದ (Delhi) ಪುಣೆಗೆ (Pune) ಹೋಗಬೇಕಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆ ಅಧಿಕಾರಿಗಳು ತೀವ್ರವಾಗಿ ಶೋಧ ನಡೆಸಿದ್ದರು. ಆದರೆ ವಿಮಾನದಲ್ಲಿ ಅಂತಹ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದ ಇನ್ನೆಲೆ ಇದನ್ನು ಹುಸಿ ಬಾಂಬ್ ಕರೆ ಎಂದು ಘೋಷಿಸಲಾಯಿತು.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಕರೆ ಮಾಡಿದ ವ್ಯಕ್ತಿಯ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಿರು. ಬಳಿಕ ಕರೆ ಮಾಡಿದ ವ್ಯಕ್ತಿಯನ್ನು ಬ್ರಿಟಿಷ್ ಏರ್‌ವೇಸ್ ಟಿಕೆಟ್ ಕೌಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಅಭಿನವ್ ಪ್ರಕಾಶ್ (24) ಎಂದು ಗುರುತಿಸಿದ್ದಾರೆ.

    ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆರೋಪಿ ಬಾಂಬ್ ಬೆದರಿಕೆ ಕರೆ ನೀಡಲು ಕಾರಣವೇನು ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ತನ್ನ ಬಾಲ್ಯದ ಗೆಳೆಯರಾದ ರಾಕೇಶ್ ಹಾಗೂ ಕುನಾಲ್ ಸೆಹ್ರಾವತ್‌ಗೆ ತಮ್ಮ ಗೆಳತಿಯರೊಂದಿಗೆ ಇನ್ನಷ್ಟು ಸಮಯ ಕಳೆಯಲು ಅವಕಾಶ ಮಾಡಿಕೊಡುವ ಸಲುವಾಗಿ ಬೆದರಿಕೆ ಕರೆ ಮಾಡಿದ್ದೆ. ಆ ಇಬ್ಬರು ಗೆಳತಿಯರು ಗುರುವಾರ ಬೆದರಿಕೆ ಹಾಕಲಾದ ಸ್ಪೈಸ್ ಜೆಟ್ ವಿಮಾನದಲ್ಲಿಯೇ ಪುಣೆಗೆ ತೆರಳಬೇಕಿತ್ತು ಎಂದು ಬಹಿರಂಗಪಡಿಸಿದ್ದಾನೆ. ಇದನ್ನೂ ಓದಿ: ತಿರುಪತಿಗೆ ಹುಂಡಿಯಿಂದಲೇ 1,450 ಕೋಟಿ ರೂ. ಸಂಗ್ರಹ

    ನನ್ನ ಗೆಳೆಯರು ತಮ್ಮ ಗೆಳತಿಯರೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸಿದ್ದಾಗಿ ಹೇಳಿದ್ದು, ವಿಮಾನವನ್ನು ವಿಳಂಬಗೊಳಿಸಲು ಉಪಾಯ ಹುಡುಕುವಂತೆ ನನ್ನನ್ನು ಒತ್ತಾಯಿಸಿದ್ದರು. ಬಳಿಕ ನಾವು ಸ್ಪೈಸ್ ಜೆಟ್ ಏರ್‌ಲೈನ್ಸ್ನ ಕಾಲ್ ಸೆಂಟರ್‌ಗೆ ಕರೆ ಮಾಡಿ ಹುಸಿ ಬಾಂಬ್ ಬೆದರಿಕೆ ಹಾಕಲು ಸಂಚು ರೂಪಿಸಿದೆವು ಎಂದು ಆರೋಪಿ ತಿಳಿಸಿದ್ದಾನೆ.

    ಗುರುವಾರ ಸಂಜೆ 6:30ಕ್ಕೆ ದೆಹಲಿ-ಪುಣೆ ಸ್ಪೈಸ್ ಜೆಟ್ ವಿಮಾನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು. ಆದರೆ ವಿಮಾನ ಟೇಕ್ ಆಫ್ ಆಗುವುದಕ್ಕೂ ಕೆಲವೇ ನಿಮಿಷಗಳ ಮೊದಲು ಬಾಂಬ್ ಇರುವ ಬಗ್ಗೆ ಕರೆ ಬಂದಿತ್ತು. ತಕ್ಷಣವೇ ಪ್ರಯಾಣಿಕರ ಬೋರ್ಡಿಂಗ್ ಅನ್ನು ನಿಲ್ಲಿಸಿ, ವಿಮಾನದಲ್ಲಿ ತೀವ್ರವಾದ ತಪಾಸಣೆ ಮಾಡಲಾಗಿತ್ತು. ಇದನ್ನೂ ಓದಿ: 15 ಸಿಮ್‌ ಕಾರ್ಡ್‌ ಬದಲಾಯಿಸಿ, ವಿಗ್‌ ತೆಗೆದು, ಮೀಸೆ ಬೋಳಿಸಿದ್ದ ಸ್ಯಾಟ್ರೋ ರವಿ ಕೊನೆಗೂ ಸಿಕ್ಕಿಬಿದ್ದ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಗು ಅತ್ತಿದ್ದಕ್ಕೆ ದಂಪತಿಗೆ Bloody Indians ಎಂದ್ರು- ಕೊನೆಗೆ ವಿಮಾನದಿಂದಲೇ ಕೆಳಗೆ ಇಳಿಸಿದ್ರು!

    ಮಗು ಅತ್ತಿದ್ದಕ್ಕೆ ದಂಪತಿಗೆ Bloody Indians ಎಂದ್ರು- ಕೊನೆಗೆ ವಿಮಾನದಿಂದಲೇ ಕೆಳಗೆ ಇಳಿಸಿದ್ರು!

    ನವದೆಹಲಿ: 3 ವರ್ಷದ ಕಂದಮ್ಮ ಅಳುತ್ತಿದೆ ಅಂತಾ ಭಾರತೀಯ ಪೋಷಕರಿಗೆ ಬ್ಲಡಿ ಇಂಡಿಯನ್ಸ್ ಎಂದು ಅವಾಚ್ಯವಾಗಿ ಬೈದು, ಬಲವಂತವಾಗಿ ಲಂಡನ್‍ನಲ್ಲಿ ವಿಮಾನದಿಂದ ಕೆಳಗಿಸಲಾಗಿದೆ.

    ಜುಲೈ 23 ರಂದು ಲಂಡನ್- ಬರ್ಲಿನ್‍ಗೆ ಪ್ರಯಾಣ ಬೆಳೆಸಿದ್ದ (ಬಿಎ 8495) ಬ್ರಿಟಿಷ್ ಏರ್‍ವೇಸ್‍ನ ವಿಮಾನ ಸಿಬ್ಬಂದಿಯೇ ಹೀಗೆ ಅಮಾನವೀಯವಾಗಿ ನಡೆದುಕೊಂಡಿದೆ. ಈಗ ಜನಾಂಗೀಯ ನಿಂದನೆ ಮೂಲಕ ನಮ್ಮನ್ನು ಅವಮಾನಿಸಿ, ವಿಮಾನದಿಂದ ಕೆಳಗೆ ಇಳಿಸಲಾಗಿದೆ. ವಿಮಾನ ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ತಂದೆ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದಾರೆ.

    ನಡೆದದ್ದು ಏನು?
    ಜುಲೈ 23ರಂದು ಭಾರತೀಯ ದಂಪತಿ ತಮ್ಮ 3 ತಿಂಗಳ ಮಗುವಿನ ಜೊತೆಗೆ ವಿಮಾನದಲ್ಲಿ ಲಂಡನ್‍ನಿಂದ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಟೇಕ್ ಆಫ್ ಆಗುವಾಗ ಸಮಾಧಾನವಾಗಿದ್ದ ಮಗು, ನಂತರ ಅಳಲು ಪ್ರಾರಂಭಿಸಿದೆ. ತಕ್ಷಣವೇ ತಾಯಿ ಮಗುವನ್ನು ಸಮಾಧಾನ ಪಡಿಸುತ್ತಿದ್ದರು. ವಿಮಾನ ಸಿಬ್ಬಂದಿಯೊಬ್ಬರು ಬಂದು, ಮಗುವಿಗೆ ಸೀಟ್ ಬೆಲ್ಟ್ ಕಟ್ಟಿ ಎಂದು ಬೆದರಿಸಿದರು. ಆಗ ಮಗು ಮತ್ತಷ್ಟು ಜೋರಾಗಿ ಅಳಲು ಪ್ರಾರಂಭಿಸಿತ್ತು.

    ಮಗುವಿನ ಅಳು ನಿಲ್ಲಿಸಲು ದಂಪತಿಯ ಹಿಂದಿನ ಸೀಟ್‍ನಲ್ಲಿ ಕುಳಿತ್ತಿದ್ದ ಭಾರತೀಯ ಕುಟುಂಬವೊಂದು ಬಿಸ್ಕೇಟ್ ಗಳನ್ನು ನೀಡಿತ್ತು. ಬಳಿಕ ಮಗುವಿನ ತಾಯಿನ್ನು ಆಸನದಲ್ಲಿ ಕೂರಿಸಿದ್ದಲ್ಲದೆ, ಮಗು ಅಳುತ್ತಿದ್ದಾಗಲೇ ಸೀಟ್ ಬೆಲ್ಟ್ ಹಾಕಿದ್ದರು. ವಿಮಾನ ಸಿಬ್ಬಂದಿ ದಂಪತಿಯ ಬಳಿ ಬಂದು ಸಮ್ಮನೆ ಇರಿ ಇಲ್ಲ ಅಂದರೆ ವಿಮಾನದ ಕಿಟಕಿಯಿಂದ ಹೊರಗೆ ತಳ್ಳಬೇಕಾಗುತ್ತದೆ, ‘ಬ್ಲಡಿ ಇಂಡಿಯನ್ಸ್’ ಎಂದೂ ಅವಾಚ್ಯವಾಗಿ ನಿಂದಿಸಿದ್ದರು. ಮಗು ಅಳು ನಿಲ್ಲಿಸಲಿಲ್ಲ ಅಂತಾ ವಿಮಾನವನ್ನು ಟರ್ಮಿನಲ್‍ಗೆ ತಂದು ದಂಪತಿ, ಅವರ ಮಗು ಹಾಗೂ ಬಿಸ್ಕೇಟ್ ನೀಡಿದ್ದ ಕುಟುಂಬವನ್ನು ಕೆಳಗೆ ಇಳಿಸಿ ಸಿಬ್ಬಂದಿ ಹೋಗಿದ್ದಾರೆ.

    ಪ್ರಕರಣದ ಕುರಿತು ತನಿಖೆ ಕೈಗೊಂಡು, ಬ್ರಿಟಿಷ್ ಏರ್‍ವೇಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ತಂದೆ ಪತ್ರದ ಮೂಲಕ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews