Tag: Britain

  • ಹೆಣ್ಣು ಮಗುವಿಗೆ ಜನ್ಮ ನೀಡಿದ ಬ್ರಿಟನ್ ವ್ಯಕ್ತಿ!

    ಹೆಣ್ಣು ಮಗುವಿಗೆ ಜನ್ಮ ನೀಡಿದ ಬ್ರಿಟನ್ ವ್ಯಕ್ತಿ!

    ಲಂಡನ್: ಬ್ರಿಟನ್ ಮೂಲದ ವ್ಯಕ್ತಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ.

    21 ವರ್ಷದ ಹೇಡನ್ ಕ್ರಾಸ್ ಎಂಬವರು ಬ್ರಿಟನ್ ನಲ್ಲಿ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ವ್ಯಕ್ತಿಯಾಗಿದ್ದಾರೆ. ಜೂನ್ 16ರಂದು ನಗರದ ರಾಯಲ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನನವಾಗಿದೆ. ಸದ್ಯ ಕ್ರಾಸ್ ಮಗುವಿಗೆ `ಟ್ರಿನಿಟಿ ಲೇಘ್ ‘ ಅಂತ ಹೆಸರಿಟ್ಟಿದ್ದಾರೆ.

    `ಟ್ರಿನಿಟಿ ಎಲ್ಲಾ ರೀತಿಯಲ್ಲೂ ಪರಿಪೂರ್ಣಳಾಗಿದ್ದಾಳೆ. ಅವಳು ಆರೋಗ್ಯವಾಗಿದ್ದಾಳೆ. ಮಗಳನ್ನು ಪಡೆದ ನಾನು ತುಂಬಾ ಅದೃಷ್ಟವಂತ’ ಅಂತ ಕ್ರಾಸ್ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

    ಹೇಡಿನ್ ಕ್ರಾಸ್ ಹುಟ್ಟುವಾಗ ಹೆಣ್ಣಾಗಿದ್ದು, ಸಲಿಂಗಿಯಾಗಲು ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಮೂರು ವರ್ಷಗಳ ಕಾಲ ಪುರುಷನಾಗಿದ್ದರು. ಪುರುಷನಾಗಲು ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಈ ಮಧ್ಯೆ ಕ್ರಾಸ್ ಗೆ ತಾನು ಮಗು ಹೊಂದಬೇಕು ಎನ್ನುವ ಹಂಬಲ ಉಂಟಾಯಿತು. ಹೀಗಾಗಿ ಅವರು ಹಾರ್ಮೊನ್ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದರು.

    ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಭೇಟಿಯಾದ ದಾನಿಯೊಬ್ಬರು ವೀರ್ಯ ನೀಡಲು ಮುಂದಾದ್ರು. ಈ ಮೂಲಕ ಕ್ರಾಸ್ ಗರ್ಭ ಧರಿಸಿದ್ದು, ಕಳೆದ ಜನವರಿ ತಿಂಗಳಿನಲ್ಲಿ ಈ ಬಗ್ಗೆ ಪ್ರಕಟಿಸಿದ್ದರು. ಅಂತೆಯೇ ಜೂನ್ 16ರಂದು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಾನು ತಾಯಿ ಅಂತಾ ನಮೂದಿಸಿದ್ದಾರೆ. ಆದ್ರೆ ಮಗುವಿನ ತಂದೆಯ ಹೆಸರನ್ನು ಉಲ್ಲೇಖಿಸಿಲ್ಲ.

    `ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ವೀರ್ಯ ದಾನಿಗಳ ನೆರವಿನಿಂದ ಗರ್ಭ ಧರಿಸಿದ್ದೆ. ಈ ಮೊದಲು ಮಗು ಪಡೆಯಲು ವೀರ್ಯ ದಾನಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಿದ್ದೆ. ಈ ವೇಳೆ ವ್ಯಕ್ತಿಯೊಬ್ಬರು ಸಹಾಯಕ್ಕೆ ಬಂದರು. ಅವರಿಗೆ ನಾನಿನ್ನೂ ಏನೂ ಕೊಟ್ಟಿಲ್ಲ. ಸದ್ಯ ಅವರು ಎಲ್ಲಿದ್ದಾರೆ ಎಂಬುವುದು ತನಗೆ ಗೊತ್ತಿಲ್ಲ’ ಅಂತ ಹೇಳಿದ್ದಾರೆ.

    ಇದೀಗ ಮತ್ತೆ ಲಿಂಗ ರೂಪಾಂತರ ಚಿಕಿತ್ಸೆಯನ್ನು ಮುಂದುವರಿಸಲು ಕ್ರಾಸ್ ತೀರ್ಮಾನಿಸಿದ್ದಾರೆ. ಬ್ರಿಟನ್ ನಲ್ಲಿ ವ್ಯಕ್ತಿಯೊಬ್ಬರಿಗೆ ಮಗು ಜನಿಸಿರೋದು ಇದೇ ಮೊದಲು ಎಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

  • 16ರ ಪೋರನ ಜೊತೆ 31 ವರ್ಷದ ಎರಡು ಮಕ್ಕಳ ತಾಯಿಯ ಲವ್!

    16ರ ಪೋರನ ಜೊತೆ 31 ವರ್ಷದ ಎರಡು ಮಕ್ಕಳ ತಾಯಿಯ ಲವ್!

    ಲಂಡನ್: ಎರಡು ಮಕ್ಕಳ ತಾಯಿಯೊಂದಿಗೆ 16 ವರ್ಷದ ಪೋರನಿಗೆ ಲವ್ ಆಗಿದ್ದು, ಸದ್ಯ ಆತ 9 ತಿಂಗಳ ಮಗುವಿನ ತಂದೆಯಾಗಿದ್ದಾನೆ.

    ಇಂಗ್ಲೆಂಡಿನ ಡರ್ಹಾಮ್ ಸಿಟಿಯ 31 ವರ್ಷದ ಕ್ಯಾಥಲಿನ್ ಮಾರ್ಟಿನಾ ಮತ್ತು 16 ವರ್ಷದ ಜ್ಯಾಕ್ ಕುಸಾಯಿಲ್ ಇಬ್ಬರು ಸಹ ವಯಸ್ಸಿನ ಭೇದ ಮರೆತು ಪ್ರೇಮದ ಬಲೆಯಲ್ಲಿ ಸಿಲುಕಿದ ಜೋಡಿಗಳು. ಮಾರ್ಟಿನಾ 2015ರಲ್ಲಿ ತನ್ನ ಪತಿಯಿಂದ ವಿಚ್ಚೇದನ ಪಡೆದಿದ್ದು, ಆ ವೇಳೆ ಆಕೆ 11 ವರ್ಷದ ಹಾಗು 3 ವರ್ಷದ ಎರಡು ಗಂಡು ಮಕ್ಕಳನ್ನು ಹೊಂದಿದ್ದಳು.

    ಫೇಸ್‍ಬುಕ್‍ನಲ್ಲಿ ಲವ್: ಪತಿಯ ವಿಚ್ಚೇದನ ಬಳಿಕ ಮಾರ್ಟಿನಾನಗೆ ಫೇಸ್‍ಬುಕ್‍ನಲ್ಲಿ ಜ್ಯಾಕ್‍ನ ಪರಿಚಯವಾಗಿದೆ. ಫೇಸ್‍ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಚಾಟಿಂಗ್ ಮಾಡುತ್ತ ಸ್ನೇಹಿತರಾಗಿದ್ದಾರೆ.

    ಒಂದು ದಿನ ಮಾರ್ಟಿನಾ ತನ್ನ ಮನೆಯ ಗಾರ್ಡನ್ ಕೆಲಸಕ್ಕಾಗಿ ಜ್ಯಾಕ್‍ಗೆ ಸಹಾಯ ಕೇಳಿ ಮನೆಗೆ ಬರುವಂತೆ ಹೇಳಿದ್ಳು. ಅಂದು ಇಬ್ಬರೂ ಮೊದಲ ಭೇಟಿಯಾಗಿದ್ದಾರೆ. ಮುಂದೆ ಮಾರ್ಟಿನಾ ಮತ್ತು ಜ್ಯಾಕ್ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ಬದಲಾಗಿತ್ತು.

    ಮನೆಯಲ್ಲಿ ವಿರೋಧ: ಇಬ್ಬರ ಪ್ರೀತಿ ಐದು ತಿಂಗಳ ಆದ್ಮೇಲೆ ಜ್ಯಾಕ್ ತಾಯಿ ಇವರಿಬ್ಬರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಡಿಸಿದ್ದರು. ಜ್ಯಾಕ್ ತಾಯಿಯ ಪ್ರಕಾರ ತಮ್ಮ ಮಗ ಮಾರ್ಟಿನಾಳ ಅರ್ಧ ವಯಸ್ಸಿನವನಾಗಿದ್ದನು. ಈ ಹಿನ್ನೆಲೆಯಲ್ಲಿ ಜ್ಯಾಕ್‍ರ ತಾಯಿ ಇವರಿಬ್ಬರ ಸಂಬಂಧಕ್ಕೆ ವಿರೋಧಿಸಿದ್ದರು. ಕೊನೆಗೆ ಮಾರ್ಟಿನಾ 5 ತಿಂಗಳ ಗರ್ಭೀಣಿ ಎಂದು ತಿಳಿದಾಗ ಜ್ಯಾಕ್ ತಾಯಿ ಒಪ್ಪಿದ್ದಾರೆ.

    ಜ್ಯಾಕ್ ಈಗ 18 ವರ್ಷದವನಾಗಿದ್ದು, 9 ತಿಂಗಳು ಮಗನ ತಂದೆಯಾಗಿದ್ದಾನೆ.

     

  • ಬ್ರಿಟನ್ ಸಂಸತ್ ಮೇಲೆ ದಾಳಿಗೆ ಉಗ್ರನ ವಿಫಲ ಯತ್ನ- ಐವರ ಸಾವು, 40 ಮಂದಿಗೆ ಗಾಯ

    ಬ್ರಿಟನ್ ಸಂಸತ್ ಮೇಲೆ ದಾಳಿಗೆ ಉಗ್ರನ ವಿಫಲ ಯತ್ನ- ಐವರ ಸಾವು, 40 ಮಂದಿಗೆ ಗಾಯ

    ಲಂಡನ್: ಬ್ರಿಟನ್ ಸಂಸತ್ ಭವನದ ಬಳಿ ಉಗ್ರನೊಬ್ಬ ಬುಧವಾರದಂದು ದಾಳಿಗೆ ಯತ್ನ ನಡೆಸಿದ್ದಾನೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಕಾರ್‍ನಲ್ಲಿ ದಾಳಿ ಮಾಡುತ್ತಾ ಬಂದು ಸಂಸತ್ ಭವನಕ್ಕೆ ನುಗ್ಗಲು ಯತ್ನಿಸಿದ ಉಗ್ರನನ್ನ ಭದ್ರತಾ ಪಡೆಯವರು ಹೊಡೆದುರುಳಿಸಿದ್ದಾರೆ. ಇದಕ್ಕೂ ಮುನ್ನಾ ಲಂಡನ್‍ನ ಸಂಸತ್ ಭವನ ಪಕ್ಕದಲ್ಲಿನ ಥೇಮ್ಸ್ ನದಿಗೆ ಅಡ್ಡಲಾಗಿ ಕಟ್ಟಿರೋ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಸಿಕ್ಕಸಿಕ್ಕವರ ಮೇಲೆ ಕಾರ್ ಹತ್ತಿಸಿಕೊಂಡು ಉಗ್ರ ಬಂದಿದ್ದ. ಬಳಿಕ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ಪಕ್ಕದಲ್ಲಿರುವ ಸಂಸತ್ ಭವನದೊಳಗೆ ಉಗ್ರ ನುಗ್ಗಲು ಯತ್ನಿಸಿ ಪೊಲೀಸ್ ಅಧಿಕಾರಿಗೆ ಚಾಕು ಹಾಕಿ ಕೊಂದಿದ್ದಾನೆ. ಕೂಡಲೇ ಉಗ್ರನನ್ನ ಭದ್ರತಾ ಪಡೆಯವ್ರು ಶೂಟ್ ಮಾಡಿ ಕೊಂದುಹಾಕಿದ್ದಾರೆ.

    ಉಗ್ರನ ದಾಳಿ ವೇಳೆ ಸಂಸತ್ ಭವನದಲ್ಲಿ ಬ್ರಿಟನ್ ಪ್ರಧಾನಿ ತೆರೆಸಾ ಮೇ ಕೂಡ ಇದ್ರು. ಈ ಘಟನೆಯನ್ನ ಭಯೋತ್ಪಾದಕ ದಾಳಿ ಅಂತ ಬ್ರಿಟನ್ ಘೋಷಿಸಿದೆ. ಲಂಡನ್‍ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಭಾರತೀಯರಿಗೆ ತೊಂದರೆ ಆಗಿಲ್ಲ ಅಂತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.