Tag: Britain

  • ಬ್ರಿಟನ್‌ನಲ್ಲಿ ಹಿಂದೂ-ಮುಸ್ಲಿಂ ಉದ್ವಿಗ್ನತೆಗೆ ಭಾರತದ 500 ಟ್ವಿಟ್ಟರ್‌ ಖಾತೆಗಳು ಕಾರಣ!

    ಬ್ರಿಟನ್‌ನಲ್ಲಿ ಹಿಂದೂ-ಮುಸ್ಲಿಂ ಉದ್ವಿಗ್ನತೆಗೆ ಭಾರತದ 500 ಟ್ವಿಟ್ಟರ್‌ ಖಾತೆಗಳು ಕಾರಣ!

    ಬ್ರಿಟನ್: ಯುಕೆಯಲ್ಲಿ ಹಿಂದೂ-ಮುಸ್ಲಿಂ (Hindu-Muslim) ಉದ್ವಿಗ್ನತೆ ಸೃಷ್ಟಿಗೆ ಭಾರತದ 500 ಟ್ವಿಟ್ಟರ್‌ ಖಾತೆಗಳು ಕಾರಣವಾಗಿವೆ ಎಂದು ಸಂಶೋಧನೆಯ ರಿಪೋರ್ಟ್‌ವೊಂದನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್‌ ನ್ಯೂಸ್‌ ವರದಿ ಮಾಡಿದೆ.

    ರಟ್ಜರ್ಸ್ ವಿಶ್ವವಿದ್ಯಾನಿಲಯ ಪ್ರಕಾರ, ಲೀಸೆಸ್ಟರ್‌ನಲ್ಲಿ ಗಲಭೆಗಳ ಸಂದರ್ಭದಲ್ಲಿ 500 ಟ್ವಿಟ್ಟರ್‌ (Twitter) ಖಾತೆಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮೀಮ್‌ಗಳು ಮತ್ತು ಬೆಂಕಿಯಿಡುವ ಚಿತ್ರಗಳನ್ನು ಹರಿಬಿಡಲಾಗಿತ್ತು ಎಂದು ತಿಳಿಸಿದೆ. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಆಗಸ್ಟ್ 27 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ನಂತರದ ದಿನಗಳಲ್ಲಿ ನೂರಾರು ಜನರು ಬೀದಿಗಿಳಿದರು. ಕೆಲವು ಗಲಭೆಕೋರರು ಕೋಲುಗಳು ಮತ್ತು ಲಾಠಿಗಳನ್ನು ಹಿಡಿದು ಗಾಜಿನ ಬಾಟಲಿಗಳನ್ನು ಎಸೆದರು. ಘರ್ಷಣೆಯ ಸಮಯದಲ್ಲಿ ಮನೆಗಳು, ಕಾರುಗಳು ಮತ್ತು ಧಾರ್ಮಿಕ ಕಲಾಕೃತಿಗಳನ್ನು ಧ್ವಂಸಗೊಳಿಸಲಾಯಿತು. ಇದು ವಾರಗಳವರೆಗೆ ನಡೆಯಿತು. ಗಲಭೆ ಪ್ರಕರಣದಲ್ಲಿ 47 ಮಂದಿಯನ್ನು ಬಂಧಿಸಲಾಗಿತ್ತು ಎಂದು ಲೀಸೆಸ್ಟರ್‌ಶೈರ್ ಪೊಲೀಸರು ತಿಳಿಸಿದ್ದಾರೆ.

    ಮಸೀದಿಗಳಿಗೆ ಬೆಂಕಿ ಹಚ್ಚುತ್ತಿರುವ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿವೆ. ಅಶಾಂತಿ ವಾತಾವರಣ ಸೃಷ್ಟಿಸುವ ಅನೇಕ ಟ್ವಿಟ್ಟರ್‌ ಖಾತೆಗಳು ಭಾರತದಲ್ಲಿ ಹುಟ್ಟಿಕೊಂಡಿವೆ ಎಂದು ಸಂಶೋಧಕರು ಹೇಳಿದ್ದಾರೆ. ಇದನ್ನೂ ಓದಿ: ಪೋಲೆಂಡ್‌ಗೆ ಕ್ಷಿಪಣಿ ಹಾರಿಸಿ ಉಕ್ರೇನ್ ಎಡವಟ್ಟು

    ಗೂಗಲ್‌ (Google), ಯೂಟ್ಯೂಬ್‌ (YouTube), ಮೆಟಾ ಪ್ಲಾಟ್‌ಫಾರ್ಮ್‌, ಇನ್‌ಸ್ಟಾಗ್ರಾಂ (Instagram), ಟ್ವಿಟ್ಟರ್‌, ಟಿಕ್‌ಟಾಕ್‌ನಿಂದ ಸಂಗ್ರಹಿಸಿದ ಡೇಟಾವನ್ನು ಬಳಸಿಕೊಂಡು ಎನ್‌ಸಿಆರ್‌ಐ ವರದಿಯನ್ನು ಪ್ರಕಟಿಸಿದೆ. ವಿದೇಶಿ ಪ್ರಭಾವಿಗಳು ಸ್ಥಳೀಯ ಮಟ್ಟದಲ್ಲಿ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ಭೇಟಿ ಬೆನ್ನಲ್ಲೇ ಭಾರತೀಯರಿಗೆ 3,000 ವೀಸಾ ಯೋಜನೆಗೆ ಬ್ರಿಟನ್‌ ಪ್ರಧಾನಿ ಚಾಲನೆ

    ಮೋದಿ ಭೇಟಿ ಬೆನ್ನಲ್ಲೇ ಭಾರತೀಯರಿಗೆ 3,000 ವೀಸಾ ಯೋಜನೆಗೆ ಬ್ರಿಟನ್‌ ಪ್ರಧಾನಿ ಚಾಲನೆ

    ಲಂಡನ್‌: ಜಿ20 ಶೃಂಗಸಭೆ (G20 Summit) ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಪ್ರತಿ ವರ್ಷ ಭಾರತದಿಂದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ (Visa) ಚಾಲನೆ ನೀಡಿದ್ದಾರೆ.

    ಇಂದು ಯುಕೆ-ಭಾರತ ಯುವ ವೃತ್ತಿಪರರ ಯೋಜನೆಯನ್ನು ದೃಢೀಕರಿಸಲಾಗಿದೆ. 18-30 ವರ್ಷ ವಯಸ್ಸಿನ ಪದವಿ-ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಯುಕೆಗೆ ಬರಲು ಮತ್ತು ಎರಡು ವರ್ಷಗಳವರೆಗೆ ಕೆಲಸ ಮಾಡಲು 3,000 ವೀಸಾಗಳನ್ನು ನೀಡುತ್ತದೆ ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಇದನ್ನೂ ಓದಿ: ಭಾರತದಲ್ಲಿ ಟ್ವಿಟ್ಟರ್‌ ತುಂಬಾ ನಿಧಾನ – ಎಲಾನ್‌ ಮಸ್ಕ್‌

    17ನೇ ಆವೃತ್ತಿಯ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ ಡೌನಿಂಗ್ ಸ್ಟ್ರೀಟ್ ರೀಡೌಟ್‌ನಲ್ಲಿ ಈ ಪ್ರಕಟಣೆ ಹೊರಬಿದ್ದಿದೆ. ಕಳೆದ ತಿಂಗಳು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟಿಷ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಸಭೆಯಾಗಿದೆ.

    ಈ ಯೋಜನೆಯು ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ಎರಡೂ ದೇಶಗಳ ಆರ್ಥಿಕತೆಯನ್ನು ಬಲಪಡಿಸಲು ಸಹಕಾರಿಯಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಲವಾದ ಸಂಪರ್ಕಗಳನ್ನು ರೂಪಿಸುವ UKಯ ಬದ್ಧತೆಗೆ ಮಹತ್ವದ ಸಾಕ್ಷಿಯಾಗಲಿದೆ ಎಂದು ಡೌನಿಂಗ್ ಸ್ಟ್ರೀಟ್ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮೆಟ್ಟಿಲು ಹತ್ತುವಾಗ ಎಡವಿದ ಜೋ ಬೈಡನ್ – ಮುಂದೇನಾಯ್ತು ಗೊತ್ತಾ?

    ಇಂಡೋ-ಪೆಸಿಫಿಕ್ ಪ್ರದೇಶದ ಇತರೆ ದೇಶಕ್ಕಿಂತ ಯುಕೆ ಭಾರತದೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿದೆ. UKಯಲ್ಲಿರುವ ಎಲ್ಲಾ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಸುಮಾರು ಕಾಲು ಭಾಗದಷ್ಟು ಜನರು ಭಾರತದವರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಭಯ ದೇಶಗಳ ಪಾಲುದಾರಿಕೆಗೆ ಉತ್ಸುಕನಾಗಿದ್ದೇನೆ – ಮೋದಿ ಜೊತೆ ಸುನಾಕ್ ಮಾತು

    ಉಭಯ ದೇಶಗಳ ಪಾಲುದಾರಿಕೆಗೆ ಉತ್ಸುಕನಾಗಿದ್ದೇನೆ – ಮೋದಿ ಜೊತೆ ಸುನಾಕ್ ಮಾತು

    ನವದೆಹಲಿ: ನೂತನ ಬ್ರಿಟನ್ ಪ್ರಧಾನಿಯಾಗಿ (British PM) ಅಧಿಕಾರ ವಹಿಸಿಕೊಂಡಿರುವ ಭಾರತ ಮೂಲದ ರಿಷಿ ಸುನಾಕ್ (Rishi Sunak) ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಶುಭ ಕೋರಿದ್ದಾರೆ. ಇದಕ್ಕೆ ರಿಷಿ ಸುನಾಕ್ ಧನ್ಯವಾದ ಅರ್ಪಿಸಿದ್ದಾರೆ. ಮುಂಬರುವ ದಿನಗಳಲ್ಲಿ ಎರಡೂ ರಾಷ್ಟ್ರಗಳು ಒಟ್ಟಾಗಿ ಯಾವ ಹೊಸ ಹೆಜ್ಜೆಗಳನ್ನು ಇಡಬಹುದು ಎಂಬ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಸುನಾಕ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

    ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಿಷಿ ಸುನಕ್ ಮೊದಲ ಬಾರಿ ನರೇಂದ್ರ ಮೋದಿಯವರೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಇಬ್ಬರೂ ನಾಯಕರು ಮಾತುಕತೆ ನಡೆಸಿದ ಬಳಿಕ ಟ್ವೀಟ್‌ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

    ಇಂದು ರಿಷಿ ಸುನಾಕ್ ಅವರೊಂದಿಗೆ ಮಾತನಾಡಿ ಸಂತೋಷವಾಗಿದೆ. ಯುಕೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಸಮಗ್ರ ಮತ್ತು ಸಮತೋಲಿತ ಮುಕ್ತ ವ್ಯಾಪಾರ ಒಪ್ಪಂದದ (FTA) ಬಗೆಗಿನ ಪ್ರಾಮುಖ್ಯತೆಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನವೆಂಬರ್ 8ಕ್ಕೆ ಜೈಶಂಕರ್ ರಷ್ಯಾ ಭೇಟಿ

    ರಿಷಿ ಸುನಾಕ್ ಟ್ವೀಟ್ ಮಾಡಿ, ನಾನು ನನ್ನ ಹೊಸ ಪಾತ್ರವನ್ನು ಪ್ರಾರಂಭಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ ಸಂತೋಷವಾಗಿದೆ. ಇದಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆ. ಭಾರತ ಹಾಗೂ ಬ್ರಿಟನ್ ಹಲವು ವಿಷಯಗಳನ್ನು ಹಂಚಿಕೊಂಡಿದೆ. ನಾವು ನಮ್ಮ ಭದ್ರತೆ, ರಕ್ಷಣೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಗಾಢವಾಗಿಸುವ ಮೂಲಕ ಎರಡು ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರಗಳು ಮುಂದೆ ಸಾಧಿಸಬಹುದಾದ ವಿಷಯಗಳ ಕುರಿತು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

    ರಿಷಿ ಸುನಾಕ್ ಅವರನ್ನು ಮಂಗಳವಾರ ಬ್ರಿಟನ್ ಪ್ರಧಾನಿಯನ್ನಾಗಿ ನೇಮಿಸಲಾಯಿತು. ಕಳೆದ 6 ವರ್ಷಗಳಲ್ಲಿ ಬ್ರಿಟನ್ ಪ್ರಧಾನಿ ಹುದ್ದೆಗೆ ಆಯ್ಕೆಯಾದ 5ನೇ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಸುನಾಕ್ ಹೊರಹೊಮ್ಮಿದ್ದಾರೆ. ಮಾತ್ರವಲ್ಲದೇ ಸುನಾಕ್ ಬ್ರಿಟನ್ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯೂ ಆಗಿದ್ದಾರೆ. ಇದನ್ನೂ ಓದಿ: ಪಾಕ್‍ಗೆ ಮರ್ಮಾಘಾತ – 1 ರನ್‍ಗಳ ರೋಚಕ ಜಯ ಸಾಧಿಸಿದ ಜಿಂಬಾಬ್ವೆ

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ಪ್ರಧಾನಿಯಾದ ಗಂಟೆಗಳೊಳಗೆ ಸುನಾಕ್ ಹೊಸ ಕ್ಯಾಬಿನೆಟ್‌ಗೆ ಸಿದ್ಧತೆ

    ಬ್ರಿಟನ್ ಪ್ರಧಾನಿಯಾದ ಗಂಟೆಗಳೊಳಗೆ ಸುನಾಕ್ ಹೊಸ ಕ್ಯಾಬಿನೆಟ್‌ಗೆ ಸಿದ್ಧತೆ

    ಲಂಡನ್: ಬ್ರಿಟನ್‌ಗೆ (Britain) ನೂತನ ಪ್ರಧಾನಿಯಾಗಿರುವ (PM) ಭಾರತ ಮೂಲದ ರಿಷಿ ಸುನಾಕ್ (Rishi Sunak) ಅವರು ಇಂದು 3ನೇ ಕಿಂಗ್ ಚಾರ್ಲ್ಸ್ ಅವರನ್ನು ಬೇಟಿಯಾದ ಗಂಟೆಯೊಳಗೆ ತಮ್ಮ ಜವಾಬ್ದಾರಿಯನ್ನು ತಕ್ಷಣವೇ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆಯೇ ಸುನಾಕ್ ತಮ್ಮ ಹೊಸ ಕ್ಯಾಬಿನೆಟ್ (Cabinet) ಅನ್ನು ರಚಿಸಲು ಪೂರ್ವಭಾವಿಯಾಗಿ ಈ ಹಿಂದಿನ ಪ್ರಧಾನಿ ಲಿಜ್ ಟ್ರಸ್ (Liz Truss)  ಅವರ ಮಂತ್ರಿಗಳ ತಂಡವನ್ನು ಕೆಳಗಿಳಿಯುವಂತೆ ಕೇಳಿಕೊಂಡಿದ್ದಾರೆ.

    ಇಂದು ಸಂಜೆಯ ವೇಳೆಗೆ 2 ನಿರ್ಣಾಯಕ ನೇಮಕಾತಿಗಳನ್ನು ಮಾಡಲಾಗಿದೆ. ಉಪ ಪ್ರಧಾನಿಯಾಗಿ ಡೊಮಿನಿಕ್ ರಾಬ್ ಹಾಗೂ ಹಣಕಾಸು ಮಂತ್ರಿಯಾಗಿ ಜೆರೆಮಿ ಹಂಟ್ ಅವರನ್ನು ನೇಮಿಸಲಾಗಿದೆ. ಅಲ್ಲದೇ ಲಿಜ್ ಟ್ರಸ್ ಸಂಪುಟದಲ್ಲಿ ಗೃಹ ಕಾರ್ಯದರ್ಶಿಯಾಗಿ ನಂತರ ರಾಜೀನಾಮೆ ನೀಡಿದ್ದ ಭಾರತ ಮೂಲದ ಸುಯೆಲ್ಲಾ ಬ್ರೇವರ್‌ಮನ್ (Suella Braverman) ಕೂಡ ಮತ್ತೆ ರಿಷಿ ಸುನಾಕ್ ಕ್ಯಾಬಿನೆಟ್ ಸೇರಲಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ಗಿಂತಲೂ ಶ್ರೀಮಂತ

    ಈವರೆಗೆ ನಾಲ್ವರು ಸಚಿವರನ್ನು ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಲಾಗಿದೆ. ಅವರಲ್ಲಿ ವ್ಯಾಪಾರದ ಕಾರ್ಯದರ್ಶಿ ಜಾಕೋಬ್ ರೀಸ್ ಮೊಗ್, ನ್ಯಾಯ ಕಾರ್ಯದರ್ಶಿ ಬ್ರಾಂಡನ್ ಲೂಯಿಸ್, ಪಿಂಚಣಿ ಕಾರ್ಯದರ್ಶಿ ಕ್ಲೋಯ್ ಸ್ಮಿತ್ ಹಾಗೂ ಅಭಿವೃದ್ಧಿ ಸಚಿವ ವಿಕಿ ಫೋರ್ಡ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಬ್ರಿಟನ್ ಪ್ರಧಾನಿಯಾಗಿ ಪಟ್ಟ ಅಲಂಕರಿಸಿದ ರಿಷಿ ಸುನಾಕ್ ತಮ್ಮ ಮೊದಲ ಭಾಷಣದಲ್ಲಿ ದೇಶದ ಆರ್ಥಿಕ ಸ್ಥಿರತೆ ಮತ್ತು ಸಾಮರ್ಥ್ಯವನ್ನು ಬಲಪಡಿಸುವುದಾಗಿ ಭರವಸೆ ನೀಡಿದರು. ಈ ಹಿಂದೆ ರಾಜಕೀಯವಾಗಿ ನಡೆದಿದ್ದ ತಪ್ಪುಗಳನ್ನು ಸರಿಪಡಿಸುವುದು ಹಾಗೂ ಜನರ ನಂಬಿಕೆಯನ್ನು ಕಾಪಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 3ನೇ ಕಿಂಗ್ ಚಾರ್ಲ್ಸ್‌ರಿಂದ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ನೇಮಕ

    Live Tv
    [brid partner=56869869 player=32851 video=960834 autoplay=true]

  • 3ನೇ ಕಿಂಗ್ ಚಾರ್ಲ್ಸ್‌ರಿಂದ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ನೇಮಕ

    3ನೇ ಕಿಂಗ್ ಚಾರ್ಲ್ಸ್‌ರಿಂದ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ನೇಮಕ

    ಲಂಡನ್: ಭಾರತ ಮೂಲದ ರಿಷಿ ಸುನಾಕ್ (Rishi Sunak) ಅವರನ್ನು ಬ್ರಿಟನ್ ಪ್ರಧಾನಿಯಾಗಿ (British Prime Minister) 3ನೇ ಕಿಂಗ್ ಚಾರ್ಲ್ಸ್ (King Charles III) ಅವರು ಮಂಗಳವಾರ ನೇಮಕ ಮಾಡಿದ್ದಾರೆ. ಇದೀಗ ಸುನಾಕ್ ಬ್ರಿಟನ್ ಪ್ರಧಾನಿಯಾದ ಮೊದಲ ಭಾರತೀಯ ವ್ಯಕ್ತಿ ಮಾತ್ರವಲ್ಲದೇ ಅತ್ಯಂತ ಕಿರಿಯ ಯುಕೆ ಪಿಎಂ ಎನಿಸಿಕೊಂಡಿದ್ದಾರೆ.

    ಸುನಾಕ್ ಅವರನ್ನು ಬ್ರಿಟನ್ ಪ್ರಧಾನಿಯಾಗಿ ಆಯ್ಕೆ ಮಾಡಲು ಭಾರೀ ಬೆಂಬಲ ವ್ಯಕ್ತವಾದ ಹಿನ್ನೆಲೆ ಪೆನ್ನಿ ಮೊರ್ಡಂಟ್ ಪ್ರಧಾನಿ ಹುದ್ದೆಯ ರೇಸ್‌ನಿಂದ ಹಿಂದೆ ಸರಿದರು. ಬಳಿಕ ಸುನಾಕ್ ಸೋಮವಾರ ಅಧಿಕೃತವಾಗಿ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದರು.

    ಬ್ರಿಟನ್ ಪ್ರಧಾನಿಯಾಗಿ ನೇಮಕಗೊಂಡ ಬಳಿಕ ದೇಶವನ್ನುದ್ದೇಶಿಸಿ ತಮ್ಮ ಮೊದಲ ಭಾಷಣವನ್ನು ಮಾಡಿದ ಸುನಾಕ್, ಇದೀಗ ನಮ್ಮ ದೇಶವು ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಯುದ್ಧ ಸಾರಿ, ವಿಶ್ವದಾದ್ಯಂತ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿದ್ದಾರೆ. ಲಿಜ್ ಟ್ರಸ್ ಅವರು ಈ ದೇಶದ ಆರ್ಥಿಕ ಗುರಿಗಳಿಗಾಗಿ ಕೆಲಸ ಮಾಡುವುದು ತಪ್ಪಲ್ಲ, ನಾನು ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಕೆಲವು ತಪ್ಪುಗಳನ್ನು ಮಾಡಲಾಗಿದೆ. ಅದು ಕೆಟ್ಟ ಉದ್ದೇಶದಿಂದ ಅಲ್ಲ, ವಾಸ್ತವವಾಗಿ ವಿರುದ್ಧವಾಗಿ, ಅದೇನೇ ಇದ್ದರೂ ತಪ್ಪೇ ಆಗಿದೆ ಎಂದರು. ಇದನ್ನೂ ಓದಿ: ಗುಜರಾತ್‌ನಲ್ಲಿ ಕೋಮು ಘರ್ಷಣೆ, ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ ದಾಳಿ- 19 ಮಂದಿ ವಶ

    ಇದೀಗ ಎಲ್ಲಾ ತಪ್ಪುಗಳನ್ನು ಸರಿಪಡಿಸಲು ನಾನು ಪ್ರಧಾನಿಯಾಗಿ ನೇಮಕಗೊಂಡಿದ್ದೇನೆ. ನಾನು ನಮ್ಮ ದೇಶವನ್ನು ಕೇವಲ ಮಾತಿನಿಂದ ಅಲ್ಲ, ಬದಲಿಗೆ ಕೆಲಸ ಮಾಡುವ ಮೂಲಕ ಒಂದುಗೂಡಿಸುತ್ತೇನೆ. ಇದಕ್ಕಾಗಿ ನಾನು ಹಗಲಿರುಳು ಶ್ರಮಿಸುತ್ತೇನೆ. ಈಗ ನಂಬಿಕೆ ಗಳಿಸಿದ್ದೇನೆ, ಅದನ್ನು ಹಾಗೆಯೇ ಕಾಪಾಡಿಕೊಳ್ಳುತ್ತೇನೆ ಎಂದು ಸುನಾಕ್ ನುಡಿದರು. ಇದನ್ನೂ ಓದಿ: ಪುನಾರಂಭಗೊಂಡ ವಾಟ್ಸಪ್ – ಸೋಶಿಯಲ್ ಮೀಡಿಯಾಗಳಲ್ಲಿ ತರಹೇವಾರು ಮೀಮ್ಸ್

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ನೂತನ ಪ್ರಧಾನಿ ಭಾರತ ಮೂಲದ ರಿಷಿ ಸುನಾಕ್ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳಿವು

    ಬ್ರಿಟನ್ ನೂತನ ಪ್ರಧಾನಿ ಭಾರತ ಮೂಲದ ರಿಷಿ ಸುನಾಕ್ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳಿವು

    ನವದೆಹಲಿ: ಬ್ರಿಟನ್‌ನ (Britain) ಮುಂದಿನ ಪ್ರಧಾನಿಯಾಗಿ (British Prime Minister) ಭಾರತ ಮೂಲದ ರಿಷಿ ಸುನಾಕ್ (Rishi Sunak) ಆಯ್ಕೆಯಾಗಿದ್ದಾರೆ. ಇದೀಗ ಯುಕೆಯ ಪ್ರಧಾನಿಯಾಗಿ ಅಧಿಕಾರವನ್ನು ಅಲಂಕರಿಸಲಿರುವ ಮೊದಲ ಭಾರತೀಯ ವ್ಯಕ್ತಿಯಾಗಿಯೂ ಸುನಾಕ್ ಹೊರಹೊಮ್ಮಿದ್ದಾರೆ.

    ರಿಷಿ ಸುನಾಕ್ ಯಾರು?
    42 ವರ್ಷದ ರಿಷಿ ಸುನಾಕ್ ಭಾರತ ಮತ್ತು ಪೂರ್ವ ಆಫ್ರಿಕಾದಿಂದ ವಲಸೆ ಬಂದ ಶ್ರೀಮಂತ ಹಿಂದೂ ವಂಶಸ್ಥರಾಗಿದ್ದಾರೆ. ಅವರು ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಹಾಗೂ ಸುಧಾ ಮೂರ್ತಿ (Sudha Murthy) ದಂಪತಿಯ ಪುತ್ರಿ ಅಕ್ಷತಾ ಮೂರ್ತಿಯ ಪತಿಯಾಗಿದ್ದಾರೆ.

    ಸುನಾಕ್ ಅವರ ತಂದೆ ಯಶವೀರ್ ಸುನಾಕ್ ಅವರು ರಾಷ್ಟ್ರೀಯ ಆರೋಗ್ಯ ಸೇವೆಯ ಸಾಮಾನ್ಯ ವೈದ್ಯರಾಗಿದ್ದು, ತಾಯಿ ಉಷಾ ಸುನಾಕ್ ಅವರು ರಸಾಯನಶಾಸ್ತ್ರಜ್ಞರ ಅಂಗಡಿಯನ್ನು ನಡೆಸುತ್ತಿದ್ದರು. ತಂದೆ ಹಾಗೂ ತಾಯಿ ಸ್ಥಳೀಯ ಸಮುದಾಯಗಳಿಗೆ ಸೇವೆ ಸಲ್ಲಿಸುವುದನ್ನು ನೋಡುತ್ತಾ ಬೆಳೆದಿದ್ದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೀಗ ಕೆಲಸ ಮಾಡಲು ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಸುನಾಕ್ ಹೇಳಿಕೊಂಡಿದ್ದರು. ಇದನ್ನೂ ಓದಿ: ಭಾರತೀಯ ಸಂಜಾತ, ಸುಧಾಮೂರ್ತಿ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ನೂತನ ಪ್ರಧಾನಿ

    ಸುನಾಕ್ ಅವರು ಕ್ಯಾಲಿಫೋರ್ನಿಯಾದಲ್ಲಿ ಅಧ್ಯಯನ ನಡೆಸುತ್ತಿದ್ದ ವೇಳೆ ಅಕ್ಷತಾ ಮೂರ್ತಿಯವರನ್ನು ಭೇಟಿಯಾಗಿದ್ದರು. ಬಳಿಕ ವೈವಾಹಿಕ ಜೀನವಕ್ಕೆ ಕಾಲಿಟ್ಟ ಸುನಾಕ್ ಹಾಗೂ ಅಕ್ಷತಾ ಮೂರ್ತಿ ದಂಪತಿಗೆ ಇದೀಗ ಕೃಷ್ಣ ಹಾಗೂ ಅನುಷ್ಕಾ ಎಂಬ ಇಬ್ಬರು ಪುತ್ರಿಯರಿದ್ದಾರೆ.

    ಸುನಾಕ್ ಅವರು 2015ರಲ್ಲಿ ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದರು. ಬಳಿಕ 2017 ಹಾಗೂ 2019ರಲ್ಲೂ ಮರು ಆಯ್ಕೆಯಾದರು. 2018ರಲ್ಲಿ ಸಚಿವರಾಗಿ ಸರ್ಕಾರಿ ಸೇವೆಗೆ ಪ್ರವೇಶಿಸಿದ ಸುನಾಕ್ ಅವರನ್ನು 2019ರ ಜುಲೈಯಲ್ಲಿ ಬ್ರಿಟನ್ ಹಣಕಾಸಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಬಳಿಕ 2020ರ ಫೆಬ್ರವರಿಯಲ್ಲಿ ಬ್ರಿಟನ್‌ನ ಹಣಕಾಸು ಸಚಿವರಾಗಿ ನೇಮಕಗೊಂಡರು. ಇದನ್ನೂ ಓದಿ: ಬ್ರಿಟನ್‌ ಪ್ರಧಾನಿ ಚುನಾವಣೆ; ಸುನಾಕ್‌ ಮುನ್ನಡೆ, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮೊರ್ಡಂಟ್‌ಗೆ ಒತ್ತಡ

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ – ರಿಷಿ ಸುನಾಕ್‌ ಘೋಷಣೆ

    ಲಂಡನ್‌: ಲಿಜ್ ಟ್ರಸ್ (Liz Truss) ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಾಕ್ (Rishi Sunak) ಅವರು ಯುಕೆ ಪ್ರಧಾನಿ (UK PM Race) ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸುವುದಾಗಿ ಭಾನುವಾರ ಘೋಷಿಸಿದ್ದಾರೆ.

    ಬೋರಿಸ್‌ ಜಾನ್ಸನ್‌ ಪ್ರಧಾನಿ ಸ್ಥಾನದಿಂದ ಕೆಳಗಿಳಿದ ಸಂದರ್ಭದಲ್ಲಿ ಆ ಸ್ಥಾನಕ್ಕೆ ಸ್ಪರ್ಧಿಸಿ ಲಿಜ್‌ ಟ್ರಸ್‌ ಎದುರು ಸೋಲನುಭವಿಸಿದ್ದ ಭಾರತ ಮೂಲದ ರಿಷಿ ಸುನಾಕ್‌ ಈಗ ಮತ್ತೆ ಸ್ಪರ್ಧೆಗೆ ಮುಂದಾಗಿದ್ದಾರೆ. ಅಲ್ಲದೇ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಶ್ರಮಿಸುವುದಾಗಿ ಭರವಸೆ ಕೂಡ ಕೊಟ್ಟಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ

    ಈ ಕುರಿತು ಟ್ವೀಟ್‌ ಮಾಡಿರುವ ಸುನಾಕ್‌, ಯುನೈಟೆಡ್ ಕಿಂಗ್‌ಡಮ್ ಒಂದು ಶ್ರೇಷ್ಠ ದೇಶವಾಗಿದೆ. ಆದರೆ ನಾವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಆರ್ಥಿಕ ಬಿಕ್ಕಟ್ಟು ಸುಧಾರಿಸುವುದಕ್ಕಾಗಿ ನಿಮ್ಮ ಮುಂದಿನ ಪ್ರಧಾನಿಯಾಗಲು ನಿಂತಿದ್ದೇನೆ ಎಂದು ತಿಳಿಸಿದ್ದಾರೆ.

    ದೇಶದ ಆರ್ಥಿಕತೆಯನ್ನು ಸರಿಪಡಿಸಬೇಕಾಗಿದೆ. ಅಷ್ಟೇ ಅಲ್ಲ ನಮ್ಮ ಪಕ್ಷವನ್ನು ಸಹ ಒಗ್ಗೂಡಿಸುತ್ತೇನೆ. ಅದರ ಪ್ರಯೋಜನವನ್ನು ದೇಶಕ್ಕೆ ನೀಡಲು ಕಾರ್ಯಪ್ರವೃತ್ತನಾಗುತ್ತೇನೆ ಎಂದು ಸುನಾಕ್‌ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಬಿಟ್ಟು ಬನ್ನಿ – ಭಾರತೀಯರಿಗೆ 5 ಬಾರ್ಡರ್ ಕ್ರಾಸಿಂಗ್ ಗುರುತಿಸಿದ ರಾಯಭಾರ ಕಚೇರಿ

    ಪ್ರತಿಪಕ್ಷಗಳು ಸಾರ್ವತ್ರಿಕ ಚುನಾವಣೆಯ ಬೇಡಿಕೆಯನ್ನು ಪುನರುಚ್ಚರಿಸಿದ್ದರಿಂದ ಗುರುವಾರ ಪ್ರಧಾನಿ ಸ್ಥಾನಕ್ಕೆ ಟ್ರಸ್ ರಾಜೀನಾಮೆ ನೀಡಿದರು. ಇದರ ಬೆನ್ನಲ್ಲೇ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಸುನಾಕ್‌ ಘೋಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ

    ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ

    ಲಂಡನ್: ಬ್ರಿಟನ್ (Britain) ರಾಣಿ ಎಲಿಜಬೆತ್ (Elizabeth 11) ಶಕೆ ಇದೀಗ ಅದ್ಧೂರಿಯಾಗಿ ಮುಗಿಯುತ್ತಿದೆ. ಬೆಳಗ್ಗೆ ಆರೂವರೆಯಿಂದ ಸುದೀರ್ಘವಾಗಿ ನಡೆಯುತ್ತಿರುವ ಅಂತ್ಯಕ್ರಿಯೆಯ ಅಂತಿಮ ವಿಧಾನಗಳು ಲಕ್ಷಾಂತರ ಜನರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರುತ್ತಿವೆ. ಭಾರತದ ಕಾಲಮಾನ ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ಅಂತ್ಯಸಂಸ್ಕಾರ (Funeral) ದ ಪ್ರಕ್ರಿಯೆಗಳು ಮುಗಿಯಲಿವೆ.

    1964ರಲ್ಲಿ ವಿನ್‍ಸ್ಟನ್ ಚರ್ಚಿಲ್ (Winston Churchill) ಅಂತ್ಯಕ್ರಿಯೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗಿತ್ತು. ಇದಾದ ನಂತರ ಬ್ರಿಟನ್‍ನಲ್ಲಿ ಇಂತಹ ಕಾರ್ಯಕ್ರಮ ನಡೆದಿರೋದು ಇದೇ ಮೊದಲು. ಬೆಳಗ್ಗೆ ವೆಸ್ಟ್ ಮಿನಿಸ್ಟರ್ ಹಾಲ್‍ (Wet Minister Hall) ನಿಂದ ವೆಸ್ಟ್ ಮಿನಿಸ್ಟರ್ ಅಬೆ ಚರ್ಚ್‍ಗೆ ರಾಣಿ ಎಲಿಜಬೆತ್ ಪಾರ್ಥಿವ ಶರೀರವನ್ನು ರಾಯಲ್ ನೇವಿಯ ಸ್ಟೇಟ್ ಗನ್ ಕ್ಯಾರೇಜ್‍ನಲ್ಲಿ ಕೊಂಡೊಯ್ಯಲಾಯಿತು. ಮಾರ್ಗಮಧ್ಯೆ ಪಾರ್ಲಿಮೆಂಟ್ ವೃತ್ತದಲ್ಲಿ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಯ್ತು. ನಂತರ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.

    ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu), ಅಮೆರಿಕಾ ಅಧ್ಯಕ್ಷ ಜೋ ಬೈಡನ್ (Joe Biden) ಸೇರಿ ವಿಶ್ವದ 2ಸಾವಿರ ಗಣ್ಯರು ರಾಣಿ ಎಲಿಜಬೆತ್‍ಗೆ ಅಂತಿಮ ನಮನ ಸಲ್ಲಿಸಿದ್ರು. 2 ನಿಮಿಷ ಇಡೀ ದೇಶ ಮೌನಾಚರಣೆ ಮೂಲಕ ಗೌರವ ಸಲ್ಲಿಸಿತು. ರಾಣಿ ಎಲಿಜಬೆತ್ 96 ವರ್ಷ ಬದುಕಿದ್ದಕ್ಕೆ ದ್ಯೋತಕವಾಗಿ 96 ಬಾರಿ ಗಂಟೆ ಮೊಳಗಿಸಲಾಯಿತು. ಅಲ್ಲಿಂದ ರಾಣಿಯ ಅಂತಿಮ ಯಾತ್ರೆ ವೆಲ್ಲಿಂಗ್ಟನ್ ಆರ್ಚ್, ನಂತರ ವಿಂಡ್ಸರ್ ಕ್ಯಾಸೆಲ್‍ವರೆಗೆ ಶಾಸ್ತ್ರೋಕ್ತವಾಗಿ ನಡೀತು. ಇದನ್ನೂ ಓದಿ: ಮಹಿಳಾ ಪೇದೆ ಹತ್ಯೆ ಪ್ರಕರಣ – ಠಾಣೆಯಲ್ಲೇ ಇದ್ಳು ಹಂತಕಿ!

    ನಂತರ ಮತ್ತೊಂದು ಸೇವೆಗಾಗಿ ರಾಣಿ ಪಾರ್ಥಿವ ಶರೀರವನ್ನು ಸೇಂಟ್ ಜಾರ್ಜ್ ಚರ್ಚ್‍ಗೆ ಕೊಂಡೊಯ್ಯಲಾಯಿತು. ಇಲ್ಲಿಯೇ ಕೊಹಿನೂರ್ ವಜ್ರ (Kohinoor Diamond) ಸಹಿತ ಕಿರೀಟ ಮತ್ತಿತರ ರಾಜಸತ್ತೆಯ ಲಾಂಛನಗಳನ್ನು ತೆಗೆಯುವ ಪ್ರಕ್ರಿಯೆ ನಡೀತು. ಇನ್ನು ಕೆಲವೇ ಹೊತ್ತಲ್ಲಿ ವೆಸ್ಟ್ ಮಿನಿಸ್ಟರ್ ಡೀನ್ ಡೇವಿಡ್ ಹೋಯಲ್‍ನಲ್ಲಿ ರಾಣಿ ಅಂತ್ಯಕ್ರಿಯೆ ಕೆಲವೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ. ಕಳೆದ ವರ್ಷ ಸಾವನ್ನಪ್ಪಿದ್ದ ಪತಿ ಪ್ರಿನ್ಸ್ ಫಿಲಿಪ್ ಸಮಾಧಿ ಪಕ್ಕದಲ್ಲಿಯೇ ರಾಣಿಯ ಅಂತ್ಯಕ್ರಿಯೆ ನಡೆಯಲಿದೆ. ಸೆಪ್ಟೆಂಬರ್ 8ರಂದು 96 ವರ್ಷದ ರಾಣಿ ಎಲಿಜಬೆತ್ ಇಹಲೋಕ ತ್ಯಜಿಸಿದ್ರು.

    Live Tv
    [brid partner=56869869 player=32851 video=960834 autoplay=true]

  • ಎಲಿಜಬೆತ್ ಅಂತಿಮ ದರ್ಶನಕ್ಕೆ ಚೀನಾ ನಿಯೋಗಕ್ಕಿಲ್ಲ ಅನುಮತಿ

    ಎಲಿಜಬೆತ್ ಅಂತಿಮ ದರ್ಶನಕ್ಕೆ ಚೀನಾ ನಿಯೋಗಕ್ಕಿಲ್ಲ ಅನುಮತಿ

    ಲಂಡನ್: ಬ್ರಿಟನ್‌(Britain)ನ ರಾಣಿ 2ನೇ ಎಲಿಜಬೆತ್(Queen Elizabeth II) ಅವರ ಅಂತ್ಯಕ್ರಿಯೆ(Funeral) ಸೆಪ್ಟೆಂಬರ್ 19ರಂದು ನಡೆಯಲಿದೆ. ಅದಕ್ಕೂ ಮುನ್ನ ಅವರ ಮೃತದೇಹವನ್ನು ಸಂಸತ್ತಿನ ಒಳಗೆ ಅಂತಿಮ ದರ್ಶನಕ್ಕೆಂದು ಇಡಲಾಗಿದೆ. ಆದರೆ ಚೀನಾಗೆ(China) ಅಂತಿಮ ದರ್ಶನದ ಅನುಮತಿಯನ್ನು ನಿರಾಕರಿಸಲಾಗಿದೆ.

    ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ ಉಯಿಘರ್ ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದ ಬ್ರಿಟನ್‌ನ ಐವರು ಸಂಸದರ ಮೇಲೆ ಚೀನಾ ನಿರ್ಬಂಧ ಹೇರಿತ್ತು. ಈ ಹಿನ್ನೆಲೆ ಚೀನಾದ ಪ್ರತಿನಿಧಿಗಳಿಗೆ ಆಹ್ವಾನ ನೀಡುವ ಬಗ್ಗೆ ಬ್ರಿಟನ್ ಕಳವಳ ವ್ಯಕ್ತಪಡಿಸಿದೆ. ಈ ಕಾರಣಕ್ಕೆ ಹೌಸ್ ಆಫ್ ಕಾಮನ್ಸ್‌ನ ಸ್ಪೀಕರ್ ಸರ್ ಲಿಂಡ್ಸೆ ಹೊಯ್ಲ್ ಅವರು ಚೀನಾದ ನಿಯೋಗಕ್ಕೆ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಶಾಸಕ ಜಿಗ್ನೇಶ್ ಮೇವಾನಿಗೆ 6 ತಿಂಗಳು ಜೈಲು

    ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರ ವಕ್ತಾರರು ವಿದೇಶಾಂಗ ಕಚೇರಿಯಿಂದ ಸಲಹೆಯನ್ನು ಪಡೆದು, ಬಳಿಕ ಅತಿಥಿ ಪಟ್ಟಿಯನ್ನು ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ. ಬ್ರಿಟನ್ ಸಂಪ್ರದಾಯದ ಪ್ರಕಾರ, ಬ್ರಿಟನ್ ರಾಜತಾಂತ್ರಿಕ ಸಂಬಂಧ ಹೊಂದಿರುವ ರಾಷ್ಟ್ರಗಳ ಪ್ರತಿನಿಧಿಗಳನ್ನು ಆಹ್ವಾನಿಸುತ್ತದೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದುಂಗುರ ನೀಡಲಿದೆ ಬಿಜೆಪಿ

    ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಚೀನಾ ಭಾಗವಹಿಸಲಿದೆ ಎನ್ನಲಾಗಿದ್ದು, ಚೀನಾದ ಉಪಾಧ್ಯಕ್ಷ ವಾಂಗ್ ಕಿಶನ್ ಚೀನಾವನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ. ರಾಣಿಯ ಅಂತ್ಯಕ್ರಿಯೆಯಲ್ಲಿ ವಿಶ್ವದ ನಾಯಕರು, ರಾಜವಂಶಸ್ಥರು ಮತ್ತು ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಬ್ರಿಟಿಷ್ ವಿದೇಶಾಂಗ ಕಚೇರಿ ಗುರುವಾರ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • 2ನೇ ಎಲಿಜಬೆತ್ ನಿಧನಕ್ಕೆ ಇಂದು ದೇಶಾದ್ಯಂತ ಶೋಕಾಚರಣೆ

    2ನೇ ಎಲಿಜಬೆತ್ ನಿಧನಕ್ಕೆ ಇಂದು ದೇಶಾದ್ಯಂತ ಶೋಕಾಚರಣೆ

    ನವದೆಹಲಿ: ಗುರುವಾರ ನಿಧನರಾದ ಬ್ರಿಟನ್ ರಾಣಿ 2ನೇ ಎಲಿಜಬೆತ್‌ಗೆ ಗೌರವಾರ್ಥವಾಗಿ ಭಾನುವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗಿದೆ. ಬ್ರಿಟನ್‌ನ ರಾಣಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಎಲಿಜಬೆತ್ ಗುರುವಾರ ಸ್ಕಾಟ್ಲೆಂಡ್‌ನಲ್ಲಿ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದರು.

    ಅಗಲಿದ ಗಣ್ಯರಿಗೆ ಗೌರವದ ಸೂಚಕವಾಗಿ ಸೆಪ್ಟೆಂಬರ್ 11ರಂದು ಒಂದು ದಿನದ ಶೊಕಾಚರಣೆಯನ್ನು ಮಾಡಬೇಕೆಂದು ಭಾರತ ಸರ್ಕಾರ ನಿರ್ಧರಿಸಿತ್ತು. ಇದರ ಹಿನ್ನೆಲೆ ಇಂದು ಭಾರತದ ಕೆಂಪು ಕೋಟೆ ಹಾಗೂ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು.

    ಪ್ರಧಾನಿ ನರೇಂದ್ರ ಮೋದಿ ಅವರು ರಾಣಿಯ ಅಗಲಿಕೆಗೆ ಸಂತಾಪ ಸೂಚಿಸಿ, 2015 ಹಾಗೂ 2018ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದ್ದಾಗ ರಾಣಿಯೊಂದಿಗಿನ ಭೇಟಿಯನ್ನು ಸ್ಮರಿಸಿದ್ದರು. ಈ ಬಗ್ಗೆ ಟ್ವೀಟ್‌ನಲ್ಲಿ, ಬ್ರಿಟನ್ ರಾಣಿಯ ಕಾಳಜಿ ಹಾಗೂ ದಯೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಸಭೆಯೊಂದರಲ್ಲಿ ಅವರು ತಮ್ಮ ಮದುವೆಯ ಸಂದರ್ಭ ಮಹಾತ್ಮ ಗಾಂಧಿಯವರು ನೀಡಿದ್ದ ಕರವಸ್ತ್ರವನ್ನು ನನಗೆ ತೋರಿಸಿದ್ದರು. ನಾನು ಅವರ ನಡವಳಿಕೆಗೆ ಯಾವಾಗಲೂ ಋಣಿಯಾಗಿರುತ್ತೇನೆ ಎಂದು ಬರೆದಿದ್ದರು. ಇದನ್ನೂ ಓದಿ: ನಾಳೆಯಿಂದ ಮಳೆಗಾಲದ ಅಧಿವೇಶನ- ಕಾಂಗ್ರೆಸ್ ವಿರುದ್ಧ ರೀಡೂ ಅಸ್ತ್ರಕ್ಕೆ ಬಿಜೆಪಿ ಸಿದ್ಧತೆ

    ಅಗಲಿದ ರಾಣಿಯ ಸರ್ಕಾರಿ ಅಂತ್ಯಕ್ರಿಯೆ ಸೋಮವಾರ ಲಂಡನ್‌ನ ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಅಪ್ಪು ನೆನಪು

     

    Live Tv
    [brid partner=56869869 player=32851 video=960834 autoplay=true]