Tag: Britain

  • ಬ್ರಿಟನ್‌ನಲ್ಲಿ ಸಿಗರೇಟ್ ಬ್ಯಾನ್ ಮಾಡಲಿದ್ದಾರಾ ರಿಷಿ ಸುನಾಕ್?

    ಬ್ರಿಟನ್‌ನಲ್ಲಿ ಸಿಗರೇಟ್ ಬ್ಯಾನ್ ಮಾಡಲಿದ್ದಾರಾ ರಿಷಿ ಸುನಾಕ್?

    ಲಂಡನ್: ಮುಂದಿನ ದಿನಗಳಲ್ಲಿ ಸಿಗರೇಟ್ (Cigarette) ಖರೀದಿಸುವುದನ್ನು ನಿಷೇಧಿಸುವ ಕ್ರಮಗಳನ್ನು ಪರಿಚಯಿಸಲು ಬ್ರಿಟನ್ (Britain) ಪ್ರಧಾನಿ ರಿಷಿ (Rishi Sunak) ಸುನಾಕ್ ಯೋಜಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

    2009ರ ಜನವರಿ 1 ಹಾಗೂ ಅದರ ನಂತರ ಜನಿಸಿದವರು ಯಾರೇ ಆದರೂ ತಂಬಾಕು ಖರೀದಿ ಮಾಡಕೂಡದು ಎಂದು ಕಳೆದ ವರ್ಷ ನ್ಯೂಜಿಲೆಂಡ್ ಘೋಷಿಸಿತ್ತು. ಅದರಂತೆಯೇ ಈಗ ಸುನಾಕ್ ಧೂಮಪಾನವನ್ನು (Smoking) ನಿಷೇಧಿಸುವ ಕ್ರಮಗಳನ್ನು ಜಾರಿಗೆ ತರಲು ಯೋಜಿಸಿದ್ದಾರೆ ಎಂದು ವರದಿಯಾಗಿದೆ.

    2030ರ ವೇಳೆಗೆ ಧೂಮಪಾನವನ್ನು ತ್ಯಜಿಸುವ ನಮ್ಮ ಗುರಿಯನ್ನು ಸಾಧಿಸಲು ನಾವು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುತ್ತಿದ್ದೆವೆ. ಅದಕ್ಕಾಗಿ ನಾವು ಈಗಾಗಲೇ ಧೂಮಪಾನ ಮಾಡುವವರ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಬ್ರಿಟಿಷ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಈ ಕ್ರಮಗಳಲ್ಲಿ ಉಚಿತ ವೇಪ್ ಕಿಟ್‌ಗಳು, ಗರ್ಭಿಣಿಯರು ಧೂಮಪಾನ ತೊರೆಯುವಂತೆ ಪ್ರೋತ್ಸಾಹಿಸಲು ವೋಚರ್ ಯೋಜನೆ ಹಾಗೂ ಸಿಗರೇಟ್ ಪ್ಯಾಕ್‌ಗಳಲ್ಲಿ ಕಡ್ಡಾಯವಾಗಿ ಎಚ್ಚರಿಕೆಯ ಸೂಚನೆಗಳನ್ನು ನೀಡುವುದನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈತ್ರಿ ಅಧಿಕೃತಗೊಂಡರೂ ಸೀಟು ಹಂಚಿಕೆ ಕಗ್ಗಂಟು – ದೋಸ್ತಿಗಳ ಲೆಕ್ಕಾಚಾರ ಏನು?

    ಪರಿಗಣನೆಯಲ್ಲಿರುವ ಈ ನೀತಿಗಳು ಮುಂದಿನ ವರ್ಷದ ನಿರೀಕ್ಷಿತ ಚುನಾವಣೆಗೂ ಮುನ್ನ ಸುನಾಕ್ ತಂಡದ ಹೊಸ ಗ್ರಾಹಕ ಕೇಂದ್ರಿತ ಯೋಜನೆಯ ಭಾಗವಾಗಿರಲಿದೆ ಎಂದು ವರದಿಗಳು ಹೇಳಿವೆ.

    ಚಿಲ್ಲರೆ ವ್ಯಾಪಾರಿಗಳು ಮಕ್ಕಳಿಗೆ ಉಚಿತ ವೇಪ್‌ಗಳ ಮಾದರಿಗಳನ್ನು ನೀಡುವುದನ್ನು ಅನುಮತಿಸುವ ಕೆಲ ಸಡಿಲಿಕೆಗಳನ್ನು ಮುಚ್ಚುವುದಾಗಿ ತಿಳಿಸಿವೆ. ಜುಲೈನಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್‌ನ ಕೌನ್ಸಿಲ್‌ಗಳು ಪರಿಸರ ಹಾಗೂ ಜನರ ಆರೋಗ್ಯದ ಆಧಾರದ ಮೇಲೆ 2024ರ ವೇಳೆಗೆ ಏಕಬಳಕೆಯ ವೇಪ್‌ಗಳ ಮಾರಾಟವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಕರೆ ನೀಡಿವೆ. ಇದನ್ನೂ ಓದಿ: ಚೈತ್ರಾ& ಗ್ಯಾಂಗ್‍ನ ಸಿಸಿಬಿ ಕಸ್ಟಡಿ ಅಂತ್ಯ- ಮತ್ತೆ ಕಸ್ಟಡಿಗಾ?, ಪರಪ್ಪನ ಅಗ್ರಹಾರಕ್ಕಾ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾನಮತ್ತ ಯುವತಿಯನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ – ಭಾರತ ಮೂಲದ ವಿದ್ಯಾರ್ಥಿಗೆ ಬ್ರಿಟನ್‌ನಲ್ಲಿ 6 ವರ್ಷ ಜೈಲು

    ಪಾನಮತ್ತ ಯುವತಿಯನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ – ಭಾರತ ಮೂಲದ ವಿದ್ಯಾರ್ಥಿಗೆ ಬ್ರಿಟನ್‌ನಲ್ಲಿ 6 ವರ್ಷ ಜೈಲು

    ಲಂಡನ್: ಭಾರತ ಮೂಲದ ವಿದ್ಯಾರ್ಥಿಯೊಬ್ಬ (Indian Student) ಬ್ರಿಟನ್‌ನಲ್ಲಿ (Britain) ಕ್ಲಬ್ ಒಂದರಲ್ಲಿ ಭೇಟಿಯಾಗಿದ್ದ ಪಾನಮತ್ತ ಯುವತಿಯನ್ನು ತನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ ಎಸಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

    20 ವರ್ಷದ ಪ್ರೀತ್ ವಿಕಲ್ ಕಳೆದ ವರ್ಷ ಜೂನ್‌ನಲ್ಲಿ ಪಾನಮತ್ತಳಾಗಿ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯನ್ನು ಕಾರ್ಡಿಫ್‌ನಲ್ಲಿರುವ ತನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಯುವತಿಯನ್ನು ಹೊತ್ತುಕೊಂಡು ಹೋಗುತ್ತಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

    ಯುವತಿ ಪ್ರಜ್ಞಾ ಸ್ಥಿತಿಗೆ ಬಂದ ಬಳಿಕ ಆಕೆಗೆ ತನ್ನ ಮೇಲೆ ಅತ್ಯಾಚಾರವಾಗಿರುವುದು ತಿಳಿದುಬಂದಿದೆ. ಆಕೆ ಬಳಿಕ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಾಳೆ. ಅದೇ ದಿನ ಯುವಕನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತ ಯುವತಿ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದ್ದಾಗಿ ತಿಳಿಸಿ, ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಿದ್ದ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮರಕ್ಕೆ ಕಟ್ಟಿ ಹಾಕಿ ಮುಸ್ಲಿಂ ವ್ಯಕ್ತಿಗೆ ಥಳಿತ

    ವಿಕಲ್‌ನನ್ನು ಮೊದಲಿಗೆ ನಿರ್ದೋಷಿ ಎಂದು ಒಪ್ಪಿಕೊಳ್ಳಲಾಗಿತ್ತು. ಆದರೆ ವಿಚಾರಣೆ ವೇಳೆ ಸಂತ್ರಸ್ತೆ ಸಮ್ಮತಿಸಲು ಸಾಧ್ಯವಾಗದಷ್ಟು ಕುಡಿದಿರುವುದು ಸ್ಪಷ್ಟವಾಗಿ ತೋರಿದೆ. ಕೊನೆಗೆ ವಿಕಲ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ವಿಕಲ್‌ಗೆ 6 ವರ್ಷ, 9 ತಿಂಗಳು ಶಿಕ್ಷೆ ವಿಧಿಸಲಾಗಿದೆ. ಮಾತ್ರವಲ್ಲದೇ ಕಾರ್ಡಿಫ್‌ನಲ್ಲಿ ಇಂತಹ ಅಪರಾಧಗಳು ಅಸಾಮಾನ್ಯ ಎಂದು ಪೊಲೀಸರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ವಿಕಲ್ ದೆಹಲಿಯ ಸಣ್ಣ ಹಳ್ಳಿಯವ ಹಾಗೂ ಬಡತನದ ಕುಟುಂಬದವನಾಗಿದ್ದಾನೆ. ಆತ ವಿದ್ಯಾರ್ಥಿ ವೇತನವನ್ನು ಪಡೆದು ಅಧ್ಯಯನವನ್ನು ಮುಂದುವರಿಸಲು ಬ್ರಿಟನ್‌ಗೆ ತೆರಳಿದ್ದ. ಆತ ತನ್ನ ಕುಟುಂಬದಲ್ಲಿ ಹಾಗೂ ತನ್ನ ಹಳ್ಳಿಯಲ್ಲಿಯೇ ಉನ್ನತ ವಿಶ್ವವಿದ್ಯಾಲಯ ಪ್ರವೇಶ ಮಾಡಿದವರಲ್ಲಿ ಮೊದಲಿಗನಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ತುಂಗಾನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಇಬ್ಬರು ಉಪನ್ಯಾಸಕರು

  • ಕೊರೊನಾ ವೇಳೆ ಪಾರ್ಟಿ ಮಾಡಿ ಪಿಎಂ ಸ್ಥಾನ ಕಳೆದುಕೊಂಡಿದ್ದ ಬೋರಿಸ್ ಜಾನ್ಸನ್ ಬ್ರಿಟನ್ ಸಂಸತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ

    ಕೊರೊನಾ ವೇಳೆ ಪಾರ್ಟಿ ಮಾಡಿ ಪಿಎಂ ಸ್ಥಾನ ಕಳೆದುಕೊಂಡಿದ್ದ ಬೋರಿಸ್ ಜಾನ್ಸನ್ ಬ್ರಿಟನ್ ಸಂಸತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ

    ಲಂಡನ್: ಬ್ರಿಟನ್‌ನ (Britain) ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ತಮ್ಮ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    2020ರಲ್ಲಿ ಕೊರೊನಾ (Corona) ಸಮಯದಲ್ಲಿ ಲಾಕ್‌ಡೌನ್ (Lockdown) ನಿಯಮಗಳನ್ನು ಉಲ್ಲಂಘಿಸಿ ಔತಣಕೂಟ ಮಾಡಿದ್ದಕ್ಕೆ ಬೋರಿಸ್ ಜಾನ್ಸನ್ ಈ ಹಿಂದೆ ಬ್ರಿಟನ್‌ನ ಪ್ರಧಾನಿ (Biritain PM) ಹುದ್ದೆಯನ್ನು ಕಳೆದುಕೊಂಡಿದ್ದರು.

    ಪಾರ್ಟಿ ಗೇಟ್ (Partygate) ಹಗರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್ ಮಾಜಿ ಪ್ರಧಾನಿ ಅವರಿಗೆ ಪತ್ರವೊಂದನ್ನು ಬರೆದಿದೆ. ಅಂದು ಔತಣಕೂಟದಲ್ಲಿ ಕೊರೊನಾಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿರುವುದಾಗಿ ಜಾನ್ಸನ್ ಹೇಳಿದ್ದರು. ಈ ಕುರಿತು ಹೌಸ್ ಆಫ್ ಕಾಮನ್ಸ್ ಸಮಿತಿ ಪತ್ರ ಬರೆದು ಸ್ಪಷ್ಟೀಕರಣ ಕೇಳಿರುವ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಸಂಸತ್ ಸದಸ್ಯತ್ವವನ್ನು ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಟರ್ಕಿ ಹಡಗು ಹೈಜಾಕ್- ಕಾರ್ಯಾಚರಣೆಗಿಳಿದ ಇಟಲಿ ಸೇನಾ ಪಡೆ

    ಈ ಬಗ್ಗೆ ತಿಳಿಸಿರುವ ಬೋರಿಸ್, ಹೌಸ್ ಆಫ್ ಕಾಮನ್ಸ್ ಕಳುಹಿಸಿರುವ ಪತ್ರದಿಂದ ತಮಗೆ ಆಘಾತವಾಗಿದೆ ಎಂದು ಹೇಳಿದ್ದಾರೆ. ಬಹುಪಾಲು ಕನ್ಸರ್ವೇಟಿವ್ ಸಂಸದರನ್ನು ಹೊಂದಿರುವ ಸಂಸದ ನೇತೃತ್ವದ ಸಮಿತಿ ಸೋಮವಾರ ತನ್ನ ವಿಚಾರಣೆಯನ್ನು ಮುಕ್ತಾಯಗೊಳಿಸಲಿದೆ. ತನ್ನ ವರದಿಯನ್ನು ಶೀಘ್ರವೇ ಪ್ರಕಟಿಸುವುದಾಗಿ ಹೇಳಲಾಗಿದೆ. ಇದನ್ನೂ ಓದಿ: ರೋಚಕ ಘಟನೆ- ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 4 ಮಕ್ಕಳು

  • ಸಲ್ಮಾನ್ ಖಾನ್ ಗೆ ಬೆದರಿಕೆ: ವಿದ್ಯಾರ್ಥಿ ವಿರುದ್ಧ ನೋಟಿಸ್

    ಸಲ್ಮಾನ್ ಖಾನ್ ಗೆ ಬೆದರಿಕೆ: ವಿದ್ಯಾರ್ಥಿ ವಿರುದ್ಧ ನೋಟಿಸ್

    ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಗೆ ಜೀವ ಬೆದರಿಕೆ (Threat) ಹಾಕುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪೊಲೀಸ್ ಇಲಾಖೆಯು ಅವರಿಗೆ ಭಾರೀ ಭದ್ರತೆ ನೀಡಿದ್ದರೂ, ಅಂಚೆ ಮೂಲಕ, ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಅಂಥದ್ದೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ವಿದ್ಯಾರ್ಥಿಯೊಬ್ಬನಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

    ಸಲ್ಮಾನ್ ಖಾನ್ ಗೆ ಬೆದರಿಕೆಯ ಇ-ಮೇಲ್  ರವಾನಿಸಿದ್ದ ಬ್ರಿಟನ್ (Britain) ನಲ್ಲಿರುವ ಭಾರತದ ವಿದ್ಯಾರ್ಥಿಗೆ (Student) ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್ (Look Out Notice) ಜಾರಿ ಮಾಡಿದ್ದಾರೆ. ಬ್ರಿಟನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಈ ಸ್ಟೂಡೆಂಟ್ ಹರಿಯಾಣದವನು ಎಂದು ಹೇಳಲಾಗುತ್ತಿದೆ. ಜೈಲಿನಲ್ಲಿರುವ ಪಾತಕಿ ಗೋಲ್ಡಿ ಬ್ರಾರ್ ಹೆಸರಿನಲ್ಲಿ ಈತ ಬೆದರಿಕೆ ಒಡ್ಡಿದ್ದ ಎಂದು ವರದಿಯಾಗಿದೆ. ಇದನ್ನೂ ಓದಿ:ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ ಪೊಲೀಸರು ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ.

    salman

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾನೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ. ಹಾಗಾಗಿ ಸಲ್ಮಾನ್ ಖಾನ್ ಗೆ ಸಾಕಷ್ಟು ಭದ್ರತೆಯನ್ನು ನೀಡಲಾಗಿದೆ.

  • ಸ್ವರ್ಗ ಪ್ರಾಪ್ತಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ – ಬ್ರಿಟನ್ ಶಾಲೆಗಳಲ್ಲಿ ಹಿಂದೂಗಳಿಗೆ ಕಿರುಕುಳ

    ಸ್ವರ್ಗ ಪ್ರಾಪ್ತಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ – ಬ್ರಿಟನ್ ಶಾಲೆಗಳಲ್ಲಿ ಹಿಂದೂಗಳಿಗೆ ಕಿರುಕುಳ

    ಲಂಡನ್: ಬ್ರಿಟನ್‌ನ (Britain) ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಇಸ್ಲಾಂ (Islam) ಧರ್ಮಕ್ಕೆ ಮತಾಂತರಿಸುವ (Conversion) ಪ್ರಯತ್ನಗಳು ನಡೆಯುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ಹೆನ್ರಿ ಜಾಕ್ಸನ್ ಸೊಸೈಟಿಯ ವರದಿಗಳು ತಿಳಿಸಿವೆ.

    ಇಸ್ರೇಲ್‌ನ ಕ್ರಮಗಳಿಗೆ ಯಹೂದಿಗಳನ್ನು ಹೊಣೆಗಾರರನ್ನಾಗಿ ಮಾಡಿದ ರೀತಿಯಲ್ಲಿಯೇ ಭಾರತದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಹಿಂದೂ ಮಕ್ಕಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ಶಾರ್ಲೆಟ್ ಲಿಟಲ್‌ವುಡ್ ಬರೆದಿರುವ ‘ಆ್ಯಂಟಿ ಹಿಂದೂ ಹೇಟ್ ಇನ್ ಸ್ಕೂಲ್ಸ್’ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಈ ಪುಸ್ತಕವನ್ನು 998 ಪೋಷಕರ ಸಂದರ್ಶನವನ್ನು ಆಧಾರಿಸಿ ಬರೆಯಲಾಗಿದೆ. ಇದನ್ನೂ ಓದಿ: ಶವವಾಗಿ ಪತ್ತೆಯಾದ 25 ವರ್ಷದ ಖ್ಯಾತ ಪಾಪ್ ಗಾಯಕ: ಮುಂದುವರೆದ ಸರಣಿ ಸಾವು

    CRIME

    ಬ್ರಿಟೀಷ್ ಶಾಲೆಗಳಲ್ಲಿ ಹಿಂದೂ ಧರ್ಮದ ಕುರಿತು ಅತ್ಯಂತ ಕಳಪೆ ಗುಣಮಟ್ಟದ ಶಿಕ್ಷಣವನ್ನು (Education) ನೀಡಲಾಗುತ್ತಿದೆ ಎಂದು ಪೋಷಕರು ದೂರಿದ್ದಾರೆ. ಅಲ್ಲದೇ ಹಿಂದೂ (Hindu) ಧರ್ಮದ ಬಗ್ಗೆ ಬ್ರಿಟನ್ ಶಾಲೆಯಲ್ಲಿ ನೀಡುವ ಶಿಕ್ಷಣವು ಧರ್ಮವನ್ನು ಅಪಹಾಸ್ಯ ಮಾಡುವ ರೀತಿಯಲ್ಲಿರುತ್ತದೆ ಎಂದು ಪೋಷಕರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ನೇಪಾಳದ ಅನ್ನಪೂರ್ಣ ಪರ್ವತವೇರುತ್ತಿದ್ದಾಗ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಜೀವಂತವಾಗಿ ಪತ್ತೆ

    ಬ್ರಿಟಿಷರು 400 ವರ್ಷಗಳ ಕಾಲಾ ಭಾರತವನ್ನು ಆಳ್ವಿಕೆ ಮಾಡಿದರೂ ಸಹ ಅವರಲ್ಲಿ ಹಿಂದೂ ಧರ್ಮದ ಜ್ಞಾನದ ಕೊರತೆಯಿದೆ. ಅವರು ನಮಗೆ ದೇವರ ಮೇಲಿರುವ ನಂಬಿಕೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದರಿಂದಾಗಿ ಹಿಂದೂ ಮಕ್ಕಳು ಬ್ರಿಟನ್ ಶಾಲೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರ ಭೀಕರ ಹತ್ಯೆ – ಈಕ್ವೆಡಾರ್‌ ಬೀಚ್‌ನಲ್ಲಿ ನಡೆದಿದ್ದೇನು?

    ಹಿಂದೂ ಧರ್ಮದ ಆಚರಣೆಗಳನ್ನು, ನಂಬಿಕೆಗಳನ್ನು ಬ್ರಿಟನ್ ಶಾಲೆಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ಹಿಂದೂಗಳು ಗೋಮಾತೆಯನ್ನು ಪವಿತ್ರವೆಂದು ಪೂಜಿಸುತ್ತಾರೆ. ಆದರೆ ಅಲ್ಲಿ ಹಿಂದೂ ಎಂಬ ಕಾರಣಕ್ಕೆ ಒಬ್ಬ ಹೆಣ್ಣುಮಗಳ ಮೇಲೆ ಗೋ ಮಾಂಸವನ್ನು ಎಸೆದಿದ್ದಲ್ಲದೆ, ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಮಾತ್ರ ಈ ದೌರ್ಜನ್ಯ ನಿಲ್ಲುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ. ಈ ರೀತಿಯಾದ ದೌರ್ಜನ್ಯ ಮತ್ತು ಬೆದರಿಕೆಗಳಿಂದಾಗಿ ಹಿಂದೂ ಮಕ್ಕಳು ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

    ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಆರ್ಟಿಕಲ್ 370ನ್ನು ರದ್ದುಗೊಳಿಸಿದ ಬಳಿಕ ಅನೇಕ ಹಿಂದೂ ಮಕ್ಕಳು ಬ್ರಿಟನ್ ಶಾಲೆಗಳಲ್ಲಿ ಹಿಂಸೆಯನ್ನು ಅನುಭವಿಸಿದ್ದಾರೆ. ಅಲ್ಲದೆ ನಿಮಗೆ ಸ್ವರ್ಗ ಲಭಿಸಬೇಕಾದರೇ ನೀವು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು ಎಂದು ಮಕ್ಕಳನ್ನು ಪೀಡಿಸಿದ್ದಾರೆ. ಹಿಂದೂಗಳು ಆನೆಗಳು, ಕೋತಿಗಳು ಮತ್ತು ಮೂರ್ತಿಗಳಂತಹ 33 ಕೋಟಿ ದೇವರುಗಳನ್ನು ಪೂಜಿಸುತ್ತಾರೆ ಎಂದು ಅಪಹಾಸ್ಯ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: US ಜೈಲಿನಲ್ಲಿ ಕೈದಿಯನ್ನ ಜೀವಂತವಾಗಿ ತಿಂದುಮುಗಿಸಿದ ಕೀಟಗಳು!

    ಸಮೀಕ್ಷೆ ನಡೆಸಿದ ಹಿಂದೂ ಪೋಷಕರಲ್ಲಿ ಶೇ.51ರಷ್ಟು ಪೋಷಕರು ತಮ್ಮ ಮಕ್ಕಳು ಹಿಂದೂ ದ್ವೇಷಕ್ಕೆ ತುತ್ತಾಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಮಕ್ಕಳಿಗೆ ಝಾಕಿರ್ ನಾಯ್ಕ್‌ನ ವಿಡಿಯೋ ನೋಡಿ ಇಸ್ಲಾಂಗೆ ಮತಾಂತರವಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸುಡಾನ್ ಸೈನಿಕರ ಸಂಘರ್ಷ – 200ಕ್ಕೆ ಏರಿದ ಸಾವಿನ ಸಂಖ್ಯೆ, ಸಾವಿರಾರು ಜನರಿಗೆ ಗಾಯ

  • ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ – ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ಬ್ರಿಟನ್

    ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ – ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ಬ್ರಿಟನ್

    ಲಂಡನ್: ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ ಸೇರಿದಂತೆ ಹಲವಾರು ಡೇಟಾ ರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಚೀನಾ (China) ಒಡೆತನದ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ಗೆ (TikTok) ಬ್ರಿಟನ್ (Britain) ಸುಮಾರು 16 ಮಿಲಿಯನ್ ಡಾಲರ್ (ಸುಮಾರು 130 ಕೋಟಿ ರೂ.) ದಂಡವನ್ನು ವಿಧಿಸಿದೆ.

    ವರದಿಗಳ ಪ್ರಕಾರ ಟಿಕ್‌ಟಾಕ್ ನಿಯಮಗಳನ್ನು ಉಲ್ಲಂಘಿಸಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 10 ಲಕ್ಷ ಮಕ್ಕಳಿಗೆ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಅವಕಾಶ ನೀಡಿದೆ.

    ಮಂಗಳವಾರ ಮಾಹಿತಿ ಆಯುಕ್ತರ ಕಚೇರಿ (ಐಸಿಒ), ಟಿಕ್‌ಟಾಕ್ ಯಾರು, ಯಾವ ವಯಸ್ಸಿನಲ್ಲಿ ತನ್ನ ಪ್ಲಾಟ್‌ಫಾರ್ಮ್ಅನ್ನು ಬಳಸುತ್ತಾರೆ ಎಂಬುದರ ಬಗ್ಗೆ ಸರಿಯಾಗಿ ಗಮನಹರಿಸಿಲ್ಲ. ಮಾತ್ರವಲ್ಲದೇ ಅಪ್ರಾಪ್ತ ಮಕ್ಕಳನ್ನು ನಿರ್ಬಂಧಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಅದು ವಿಫಲವಾಗಿದೆ. ಬಳಕೆದಾರರ ಡೇಟಾವನ್ನು ಹೇಗೆ ಸಂಗ್ರಹಿಸಲಾಗುತ್ತಿದೆ ಹಾಗೂ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿಯನ್ನು ಒದಗಿಸಿಲ್ಲ. ಇದೀಗ ದಂಡವನ್ನು 2018ರ ಮೇ ಯಿಂದ 2020ರ ಜುಲೈ ನಡುವಿನ ನಿಯಮ ಉಲ್ಲಂಘನೆಗೆ ವಿಧಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ ಬರಲಿದೆ ವಾಟ್ಸಪ್ ಚಾಟ್ ಲಾಕ್ ಮಾಡೋ ಹೊಸ ಫೀಚರ್

    ಮಕ್ಕಳು ಭೌತಿಕ ಜಗತ್ತಿನಲ್ಲಿರುವಂತೆಯೇ ಡಿಜಿಟಲ್ ಜಗತ್ತಿನಲ್ಲಿಯೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕಾನೂನುಗಳಿವೆ. ಆದರೆ ಟಿಕ್‌ಟಾಕ್ ಆ ಕಾನೂನುಗಳಿಗೆ ಬದ್ಧವಾಗಿಲ್ಲ. ಟಿಕ್‌ಟಾಕ್ ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿ, ಉತ್ತಮವಾಗಿ ಕಾರ್ಯನಿರ್ವಹಿಸಬೇಕಿತ್ತು ಎಂದು ಬ್ರಿಟನ್‌ನ ಮಾಹಿತಿ ಆಯುಕ್ತ ಜಾನ್ ಎಡ್ವರ್ಡ್ಸ್ ಹೇಳಿದ್ದಾರೆ.

    ಈಗಾಗಲೇ ಟಿಕ್‌ಟಾಕ್ ಅನ್ನು ಭದ್ರತಾ ದೃಷ್ಟಿಯಿಂದ ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಅವುಗಳಲ್ಲಿ ಭಾರತ, ಆಸ್ಟ್ರೇಲಿಯಾ, ಫ್ರಾನ್ಸ್, ಬ್ರಿಟನ್, ಕೆನಡಾ, ನ್ಯೂಜಿಲೆಂಡ್ ದೇಶಗಳು ಸೇರಿವೆ. ಇದನ್ನೂ ಓದಿ: Twitter logo: ಟ್ವಿಟ್ಟರ್‌ ‘ನೀಲಿ ಹಕ್ಕಿ’ ನಾಯಿ ಮರಿಯಾಯ್ತು!

  • ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ಗಾಯಕಿ ಬಾಂಬೆ ಜಯಶ್ರೀ

    ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ಗಾಯಕಿ ಬಾಂಬೆ ಜಯಶ್ರೀ

    ಖ್ಯಾತ ಗಾಯಕಿ ಬಾಂಬೆ ಜಯಶ್ರೀ (Bombay Jayashree) ಪ್ರಜ್ಞಾಹೀನ (Unconscious) ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬ್ರಿಟನ್ (Britain) ದೇಶದ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆಪ್ತ ಮೂಲಗಳ ಪ್ರಕಾರ ಬಾಂಬೆ ಜಯಶ್ರೀ ಅವರು ಶಸ್ತ್ರ ಚಿಕಿತ್ಸೆಗೆ ಒಳಲಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ಸಿಯಾಗಿ ನೆರವೇರಿದೆ ಎಂದು ಹೇಳಲಾಗುತ್ತಿದೆ.  ನಿನ್ನೆ ರಾತ್ರಿಯೇ ಬಳಲಿದಂತೆ ಕಂಡು ಬಂದಿದ್ದ ಅವರು, ತೀವ್ರ ಕುತ್ತಿಗೆ ನೋವಿನ ಬಗ್ಗೆಯೂ ಮಾತನಾಡಿದ್ದರು ಎಂದು ಆಪ್ತರು ತಿಳಿಸಿದ್ದಾರೆ. ಇದನ್ನೂ ಓದಿ: ಮಗಳ ನಟನೆ ಬಗ್ಗೆ ತಂದೆ-ತಾಯಿಗೆ ಖುಷಿ ಇದ್ಯಾ? ಅಸಲಿ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    ಇಂದು ಬೆಳಗ್ಗೆ ಉಪಹಾರ ಮತ್ತು ಊಟಕ್ಕೆ ಜಯಶ್ರೀ ಅವರು ಬಾರದೇ ಹೋದಾಗ, ಹೋಟೆಲ್ ಕೋಣೆಗೆ ಹೋಗಿ ನೋಡಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆಯ ನಂತರ ಅವರನ್ನು ಚೆನ್ನೈಗೆ ಕರೆತರಲಾಗುತ್ತಿದೆ ಎನ್ನುವ ಮಾಹಿತಿ ಇದೆ.

    ಜಯಶ್ರೀ ಹೆಸರಾಂತ ಕರ್ನಾಟಕಿ ಗಾಯಕಿ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕಾಗಿಯೇ ಅವರು ಬ್ರಿಟನ್ ದೇಶದ ಪ್ರವಾಸದಲ್ಲಿ ಇದ್ದರು. ಪದ್ಮಶ್ರೀ ಸೇರಿದಂತೆ ಹಲವು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ.

  • ಭದ್ರತಾ ಕಾರಣಕ್ಕೆ TikTok ಬ್ಯಾನ್ ಮಾಡಿದ ಬ್ರಿಟಿಷ್ ಸಂಸತ್ತು

    ಭದ್ರತಾ ಕಾರಣಕ್ಕೆ TikTok ಬ್ಯಾನ್ ಮಾಡಿದ ಬ್ರಿಟಿಷ್ ಸಂಸತ್ತು

    ಲಂಡನ್: ಚೀನಾದ (China) ವೀಡಿಯೋ ಅಪ್ಲಿಕೇಶನ್ ಟಿಕ್‌ಟಾಕ್ (TikTok) ಅನ್ನು ಬ್ರಿಟನ್ ಸಂಸತ್ತು (British Parliament) ನಿಷೇಧಿಸಿದೆ.

    ಭದ್ರತಾ ಕಾಳಜಿಯ ಹಿನ್ನೆಲೆ ಬ್ರಿಟನ್ ಸಂಸತ್ತು ತನ್ನ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಸಾಧನಗಳಿಂದಲೂ ಟಿಕ್‌ಟಾಕ್ ಅನ್ನು ನಿರ್ಬಂಧಿಸಿದೆ. ಈ ಹಿಂದೆಯೇ ಭಾರತ ಇಡೀ ದೇಶದಲ್ಲಿ ಟಿಕ್‌ಟಾಕ್ ಅನ್ನು ಬ್ಯಾನ್ ಮಾಡಿದೆ. ಇದೀಗ ಬ್ರಿಟನ್ ಸಂಸತ್ತು ಭದ್ರತಾ ಕಾರಣಕ್ಕೆ ಟಿಕ್‌ಟಾಕ್ ಅನ್ನು ನಿಷೇಧಿಸಿದೆ.

    ಹೌಸ್ ಆಫ್ ಕಾಮನ್ಸ್ ಹಾಗೂ ಲಾರ್ಡ್ಸ್ ಎರಡೂ ಆಯೋಗಗಳು ಟಿಕ್‌ಟಾಕ್ ಅನ್ನು ಎಲ್ಲಾ ಸಂಸದೀಯ ಸಾಧನಗಳು ಹಾಗೂ ಸಂಸದೀಯ ನೆಟ್‌ವರ್ಕ್‌ಗಳಿಂದ ನಿರ್ಬಂಧಿಸಲು ನಿರ್ಧರಿಸಿವೆ ಎಂದು ಸಂಸತ್ತಿನ ವಕ್ತಾರರು ತಿಳಿಸಿದ್ದಾರೆ. ಆದರೆ ಈ ಕ್ರಮವನ್ನು ಟಿಕ್‌ಟಾಕ್ ವಕ್ತಾರರು ವಿರೋಧಿಸಿದ್ದು, ಇದು ಕಂಪನಿಗೆ ಕೆಟ್ಟ ಹೆಸರು ತಂದುಕೊಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಮೆಜಾನ್‌ನಲ್ಲಿ 2ನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭ – 3 ತಿಂಗಳೊಳಗೆ 27 ಸಾವಿರ ಮಂದಿ ಮನೆಗೆ

    ಬ್ರಿಟನ್ ಕಳೆದ ವಾರ ಸರ್ಕಾರಿ ಫೋನ್‌ಗಳಲ್ಲಿ ಚೀನಾದ ಒಡೆತನದ ವೀಡಿಯೊ ಅಪ್ಲಿಕೇಶನ್ ಅನ್ನು ನಿಷೇಧಿಸಿತ್ತು. ಸೈಬರ್ ಭದ್ರತೆಯು ಸಂಸತ್ತಿನ ಪ್ರಮುಖ ಆದ್ಯತೆಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಅಮೆರಿಕ, ಕೆನಡಾ, ಬೆಲ್ಜಿಯಂ ಹಾಗೂ ಯುರೋಪಿಯನ್ ಕಮಿಷನ್ ಈಗಾಗಲೇ ಸರ್ಕಾರಿ ಸಾಧನಗಳಿಂದ ಈ ಅಪ್ಲಿಕೇಶನ್ ಅನ್ನು ನಿಷೇಧಿಸಿವೆ. ಇದನ್ನೂ ಓದಿ: 2 ವರ್ಷ ಬ್ಯಾನ್ ಬಳಿಕ ಫೇಸ್‌ಬುಕ್, ಯೂಟ್ಯೂಬ್‌ಗೆ ಮರಳಿದ ಟ್ರಂಪ್

  • ಕ್ಷಿಪಣಿ ದಾಳಿ ಮಾಡಿ ಕೊಲೆ ಬೆದರಿಕೆ – ಪುಟಿನ್ ವಿರುದ್ಧ ಜಾನ್ಸನ್ ಆರೋಪ

    ಕ್ಷಿಪಣಿ ದಾಳಿ ಮಾಡಿ ಕೊಲೆ ಬೆದರಿಕೆ – ಪುಟಿನ್ ವಿರುದ್ಧ ಜಾನ್ಸನ್ ಆರೋಪ

    ಲಂಡನ್: ಬ್ರಿಟನ್ (Britain) ಅನ್ನು ಹೊಡೆದುರುಳಿಸಲು ಕ್ಷಿಪಣಿಯನ್ನು ಕಳುಹಿಸಬಲ್ಲೆ ಎಂದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ಬಾರಿ ಹೇಳಿಕೆ ನೀಡಿರುವುದಾಗಿ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಹೇಳಿಕೊಂಡಿದ್ದಾರೆ.

    ಈ ವಿಚಾರ ಬಿಬಿಸಿಯ ‘ಪುಟಿನ್ ವಿ ದಿ ವೆಸ್ಟ್’ ಹೆಸರಿನ 3 ಭಾಗಗಳ ಸಾಕ್ಷ್ಯಚಿತ್ರದಲ್ಲಿ ಬಹಿರಂಗವಾಗಿದೆ. ರಷ್ಯಾ-ಉಕ್ರೇನ್ (Russia-Ukraine) ಯುದ್ಧ ಪ್ರಾರಂಭವಾಗುವುದಕ್ಕೂ ಮೊದಲು ಜಾನ್ಸನ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದಾಗ, ಬ್ರಿಟನ್ ಅನ್ನು ಹೊಡೆದುರುಳಿಸಲು ಒಂದೇ ನಿಮಿಷ ಸಾಕು. ನಾವು ಕ್ಷಿಪಣಿ ಕಳುಹಿಸಬಲ್ಲೆವು ಎಂದು ಬೆದರಿಕೆ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಮತ್ತೆ ಖಲಿಸ್ತಾನಿಯರ ಅಟ್ಟಹಾಸ – ತ್ರಿವರ್ಣಧ್ವಜ ಹಿಡಿದ ಭಾರತೀಯರ ಮೇಲೆ ದಾಳಿ

    ಜಾನ್ಸನ್ ಪುಟಿನ್ ಅವರ ಹೇಳಿಕೆಯನ್ನು ಬೆದರಿಕೆ ಎಂದು ಪರಿಗಣಿಸದೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಬೆಂಬಲಿಸಿದ್ದಾರೆ. ಪುಟಿನ್ ಒಂದು ಬಾರಿ ನನಗೆ ಬೆದರಿಕೆ ಹಾಕಿದ್ದರು. ಬೋರಿಸ್, ನಾನು ನಿನ್ನನ್ನು ನೋಯಿಸಲು ಬಯಸುವುದಿಲ್ಲ. ಆದರೆ ಕ್ಷಿಪಣಿ ದಾಳಿ ಮಾಡಿದರೆ ಕೇವಲ 1 ನಿಮಿಷ ಸಾಕು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.

    ಪುಟಿನ್ ಅತ್ಯಂತ ಶಾಂತ ಸ್ವರದಿಂದಲೇ ಈ ಹೇಳಿಕೆಯನ್ನು ನೀಡಿದ್ದರು ಎಂದು ಜಾನ್ಸನ್ ಹೇಳಿದ್ದಾರೆ. ಇದನ್ನೂ ಓದಿ: India China Border Rowː ಚೀನಾ ಗಡಿ ಸಂಘರ್ಷ – ಕೇಂದ್ರದ ನಡೆ ಅತ್ಯಂತ ಅಪಾಯಕಾರಿ ಎಂದ ರಾಗಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಣಿ ಎಲಿಜಬೆತ್ ಸಾವಿಗೆ ವೃದ್ಧಾಪ್ಯವಲ್ಲ, ಕ್ಯಾನ್ಸರ್ ಕಾರಣವಂತೆ!

    ಲಂಡನ್: ಬ್ರಿಟನ್‍ನ (Britain) ರಾಣಿಯಾಗಿದ್ದ ಎಲಿಜಬೆತ್ 2 (Queen Elizabeth II) ಅವರು ತಮ್ಮ ಜೀವನದ ಕೊನೆಯ ಕೆಲವು ವರ್ಷಗಳಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ.

    ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್‍ನಲ್ಲಿ ಇಹಲೋಕ ತ್ಯಜಿಸಿದ್ದ 96 ವರ್ಷದ ರಾಣಿ ಎಲಿಜಬೆತ್ 2 ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿಸಲಾಗಿತ್ತು. ಆದರೆ ಈಗ ಪ್ರಿನ್ಸ್ ಫಿಲಿಪ್ ಅವರ ಸ್ನೇಹಿತ ಗೈಲ್ಸ್ ಬ್ರಾಂಡ್ರೆತ್ ಬರೆದಿರುವ ರಾಣಿಯ ಹೊಸ ಜೀವನ ಚರಿತ್ರೆಯಲ್ಲಿ, ಎಲಿಜಬೆತ್ ಅವರು ಅಸ್ಥಿ ಮಜ್ಜೆಯ ಕ್ಯಾನ್ಸರ್‌ನೊಂದಿಗೆ (Bone Marrow Cancer) ಹೋರಾಟ ನಡೆಸುತ್ತಿದ್ದರು ಎಂದು ಉಲ್ಲೇಖವಾಗಿದೆ.

    ರಾಣಿ ಎಲಿಜಬೆತ್‍ಗೆ ಅಸ್ಥಿ ಮಜ್ಜೆಯ ಕ್ಯಾನ್ಸರ್ ಇತ್ತು. ಇದರಿಂದಾಗಿ ಅವರಿಗೆ ತುಂಬಾ ಆಯಾಸವಾಗುತ್ತಿತ್ತು. ಜೊತೆಗೆ ತೂಕವೂ ಬಹುಬೇಗ ಕಡಿಮೆ ಆಗಿತ್ತು, ಅವರ ಜೀವನದ ಕೊನೆಯ ವರ್ಷಗಳಲ್ಲಿ ಅವರು ಓಡಾಡಲು ಹೆಚ್ಚು ಸಮಸ್ಯೆಯನ್ನು ಪಡುತ್ತಿದ್ದರು ಎಂದು ಬ್ರಾಂಡ್ರೆತ್ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ. ಈ ರೋಗವು ಸಾಮಾನ್ಯವಾಗಿ ವಯಸ್ಸಾದವರ ಮೇಲೆ ಬೀರುವ ಪರಿಣಾಮವಾಗಿದೆ.

    ರಾಣಿ ಎಲಿಜಬೆತ್ ಓಡಾಡಲು ಕಷ್ಟಪಡುತ್ತಿದ್ದರು. ಇಷ್ಟೇ ಅಲ್ಲದೇ ಅನೇಕ ಅಧಿಕೃತ ಕರ್ತವ್ಯಗಳಿಂದಲೂ ಹಿಂದೆ ಸರಿಯುತ್ತಿದ್ದರು. ಕಳೆದ ವರ್ಷ ಏಪ್ರಿಲ್‍ನಲ್ಲಿ ರಾಣಿಯ ಪತಿ, ಪ್ರಿನ್ಸ್ ಫಿಲಿಪ್‍ನ ಮರಣ ನಂತರ ಎಲಿಜಬೆತ್ ಇನ್ನೂ ಕುಗ್ಗಿ ಹೋಗಿದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿ ಬಂದಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ರು: ಎಂಟಿಬಿ ನಾಗರಾಜ್

    ರಾಣಿ ಎಲಿಜಬೆತ್ ಕಳೆದ ವರ್ಷ ಅಕ್ಟೋಬರ್‌ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ವರ್ಷದ ಸೆ. 8ರಂದು ಸ್ಕಾಟ್ಲೆಂಡ್ ಅರಮನೆಯಲ್ಲಿ ಕೊನೆಯುಸಿರೆಳೆದರು. 1923ರಿಂದ ಬ್ರಿಟನ್‍ನ ರಾಣಿಯಾಗಿದ್ದರು. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ

    Live Tv
    [brid partner=56869869 player=32851 video=960834 autoplay=true]