Tag: Britain Infection

  • ಬ್ರಿಟನ್‌ ಸೋಂಕು ಪತ್ತೆ – ಬೆಂಗ್ಳೂರಿನ ಅಪಾರ್ಟ್‌ಮೆಂಟ್‌ ಸೀಲ್‌ಡೌನ್‌

    ಬ್ರಿಟನ್‌ ಸೋಂಕು ಪತ್ತೆ – ಬೆಂಗ್ಳೂರಿನ ಅಪಾರ್ಟ್‌ಮೆಂಟ್‌ ಸೀಲ್‌ಡೌನ್‌

    ಬೆಂಗಳೂರು: ಇಬ್ಬರು ಸೋಂಕಿತರಲ್ಲಿ ಬ್ರಿಟನ್‌ ಕೊರೊನಾ ವೈರಸ್‌ ಕಂಡು ಬಂದ ಸಿಲಿಕಾನ್‌ ಸಿಟಿಯ ಅಪಾರ್ಟ್‌ಮೆಂಟ್‌ ಸೀಲ್‌ಡೌನ್‌ ಆಗಿದೆ.

    ಈ ಬಗ್ಗೆ ಡಿಹೆಚ್ ಡಾ. ಸುರೇಶ್ ಪ್ರತಿಕ್ರಿಯಿಸಿ, ಸ್ಥಳೀಯರು ಸಾಂಸ್ಥಿಕ ಕ್ವಾರಂಟೈನ್ ಗೆ ಒಪ್ಪಿರಲಿಲ್ಲ. ಹೀಗಾಗಿ ವಸಂತಪುರದ ಅಪಾರ್ಟ್‌ಮೆಂಟ್‌ ಅನ್ನು ಸೀಲ್ ಡೌನ್ ಮಾಡಲಾಗಿದೆ. 14 ದಿನಗಳ ಕಾಲ ಸೀಲ್ ಡೌನ್ ಪ್ರಕ್ರಿಯೆ ನಡೆಯುತ್ತದೆ ಎಂದು ಹೇಳಿದ್ದಾರೆ.

    ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು 39 ನಿವಾಸಿಗಳು ಇದ್ದು ಮೂವರಿಗೆ ಪಾಸಿಟಿವ್‌ ಬಂದಿದೆ. ಈ ಪೈಕಿ ಇಬ್ಬರಲ್ಲಿ ಹೊಸ ವೈರಸ್‌ ಬಂದಿದೆ. ಉಳಿದ ನಿವಾಸಿಗಳಿಗೆ ಟೆಸ್ಟ್ ಮಾಡಬೇಕಾದ ಕಾರಣ ಅಪಾರ್ಟ್‌ಮೆಂಟ್‌ ಸೀಲ್‌ಡೌನ್‌ ಮಾಡಲಾಗಿದೆ ಎಂದು ತಿಳಿಸಿದರು.

     

    ಅಪಾರ್ಟ್‌ಮೆಂಟ್‌ ಇರುವ ರಸ್ತೆಯನ್ನು ಪಟ್ಟಿ ಕಟ್ಟಿ ಸಂಚಾರವನ್ನು ಬಂದ್‌ ಮಾಡಲಾಗಿದೆ. ಬಿಬಿಎಂಪಿ ಈಗಾಗಲೇ ರಸ್ತೆಯನ್ನು ಸ್ಯಾನಿಟೈಸ್‌ ಮಾಡಿದೆ.ಆರಂಭದಲ್ಲಿ 28 ದಿನಗಳ ಕಾಲ ಸೀಲ್‌ಡೌನ್‌ ಮಾಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈಗ 14 ದಿನಗಳ ಕಾಲ ಸೀಲ್‌ಡೌನ್‌ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.