Tag: Britain

  • ಬ್ರಿಟನ್‌ನಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ – ಇಂದೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಸಾಧ್ಯತೆ

    ಬ್ರಿಟನ್‌ನಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ – ಇಂದೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಸಾಧ್ಯತೆ

    – 60 ಶತಕೋಟಿ ಡಾಲರ್‌ ವಹಿವಾಟು ದ್ವಿಗುಣಗೊಳ್ಳುವ ನಿರೀಕ್ಷೆ
    – ಭಾರತೀಯ ಸಮೂಹವನ್ನೂ ಭೇಟಿಯಾಗಿ ಮೋದಿ ಭಾವುಕ

    ಲಂಡನ್‌/ನವದೆಹಲಿ: ನಾಲ್ಕು ದಿನಗಳ ಕಾಲ ಲಂಡನ್‌, ಮಾಲ್ದೀವ್ಸ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಡರಾತ್ರಿ ಬಿಟನ್‌ಗೆ ಬಂದಿಳಿದಿದ್ದಾರೆ. ಈ ವೇಳೆ ಪ್ರಧಾನಿ ಮೋದಿಗೆ (PM Modi) ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾಮರ್‌ (UK PM Keir Starmer) ಸಾಂಪ್ರದಾಯಿಕ ಸ್ವಾಗತ ಕೋರಿದ್ದಾರೆ. ಇದೇ ವೇಳೆ ಅಲ್ಲಿನ ಭಾರತೀಯ ಸಮೂಹವನ್ನು ಭೇಟಿಯಾದ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

    2 ದಿನಗಳ ಕಾಲ ಬ್ರಿಟನ್‌ (Britain) ಪ್ರವಾಸದಲ್ಲಿರುವ ಮೋದಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇಂದು ಕೀರ್‌ ಸ್ಟಾಮರ್‌ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ (Free Trade Deal) ಅಂತಿಮ ಸಹಿ ಹಾಕುವ ಸಾಧ್ಯತೆ ಇದೆ. ಮೂರು ವರ್ಷಗಳ ಚರ್ಚೆಯ ಬಳಿಕ ಮೇ ತಿಂಗಳಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದ್ದು, ಇದು ಭಾರತದ ಶೇ.99 ರಷ್ಟು ರಫ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ. ಇದನ್ನೂ ಓದಿ: 5 ವರ್ಷದ ಬಳಿಕ ಚೀನಿಯರಿಗೆ ಭಾರತ ಪ್ರವಾಸಕ್ಕೆ ಅನುಮತಿ

    ಮುಖ್ಯವಾಗಿ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದರಿಂದ ಪ್ರಸ್ತುತ ಇರುವ 60 ಶತಕೋಟಿ ಡಾಲರ್‌ನಿಂದ ವಹಿವಾಟು ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ. ಜೊತೆಗೆ ಬ್ರಿಟನ್‌ ಉತ್ಪನ್ನಗಳಾದ ವಿಸ್ಕಿ ಮತ್ತು ಆಟೋಮೊಬೈಲ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದೆ.‌ ಇದರೊಂದಿಗೆ ರಕ್ಷಣಾ ವಲಯ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ.  ಇದನ್ನೂ ಓದಿ: ಸೇರ್ಪಡೆಯಾಗಿ 2 ವರ್ಷದ ನಂತ್ರ ಯುನೆಸ್ಕೋದಿಂದ ಹೊರ ಬಂದ ಅಮೆರಿಕ

    ಭಾರತೀಯ ಸಮೂಹ ಭೇಟಿ; ಮೋದಿ ಭಾವುಕ
    ಇನ್ನೂ ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಭಾರತೀಯ ಸಮೂಹವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಭಾವುಕರಾದರು. ಸಾಂಪ್ರದಾಯಿಕ ಸ್ವಾಗತಕ್ಕಾಗಿ ಅಲ್ಲಿನ ಭಾರತೀಯ ಸಮೂಹಕ್ಕೆ ಧನ್ಯವಾದ ಸಲ್ಲಿಸಿದರಲ್ಲದೇ ಭಾರತದ ಪ್ರಗತಿಗೆ ನಿಮ್ಮ ಪ್ರೀತಿ ಮತ್ತು ಬದ್ಧತೆ ನೋಡಿ ಹೃದಯ ತುಂಬಿಬರುತ್ತಿದೆ ಎಂದು ಭಾವುಕರಾದರು.  ಇದನ್ನೂ ಓದಿ: ಅಮೆರಿಕ-ಜಪಾನ್ ನಡುವೆ ವ್ಯಾಪಾರ ಒಪ್ಪಂದ; ಟ್ರಂಪ್‌ ಘೋಷಣೆ

    ಎಸ್‌ & ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಪ್ರಕಾರ, ಈ ಒಪ್ಪಂದವು ಭಾರತಕ್ಕೆ ಗಣನೀಯ ಆರ್ಥಿಕ ಉತ್ತೇಜನ ನೀಡಲಿದೆ. 2024ರಲ್ಲಿ ಯುಕೆಯಿಂದ ಭಾರತಕ್ಕೆ 130 ಬಿಲಿಯನ್ ಡಾಲರ್‌ನಷ್ಟು (ಭಾರತದ ಜಿಡಿಪಿಯ 3.3%) ವಿದೇಶಿ ವಿನಿಮಯ ಹರಿವು ದಾಖಲಾಗಿದ್ದು, ಈ ಒಪ್ಪಂದದಿಂದ ಈ ಹರಿವು ಮತ್ತಷ್ಟು ಹೆಚ್ಚಲಿದೆ. ವಿಶೇಷವಾಗಿ, ಯುಕೆಯಲ್ಲಿ ಕೆಲಸ ಮಾಡುವ ಭಾರತೀಯ ಐಟಿ ವೃತ್ತಿಪರರಿಗೆ ಮೂರು ವರ್ಷಗಳವರೆಗೆ ರಾಷ್ಟ್ರೀಯ ವಿಮೆಯಿಂದ ವಿನಾಯಿತಿ ನೀಡುವ ನಿಬಂಧನೆಯು ಅವರ ಉಳಿತಾಯ ಮತ್ತು ವಿದೇಶಿ ವಿನಿಮಯ ಹರಿವನ್ನು ಹೆಚ್ಚಿಸಲಿದೆ. 2024ರಲ್ಲಿ 56.7 ಬಿಲಿಯನ್ ಡಾಲರ್‌ ಆಗಿರುವ ದ್ವಿಪಕ್ಷೀಯ ವಾಣಿಜ್ಯವನ್ನು 2030ರ ವೇಳೆಗೆ ದ್ವಿಗುಣಗೊಳಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ.

    ಬ್ರಿಟನ್ ಭೇಟಿಯ ಬಳಿಕ, ಪ್ರಧಾನಿ ಮೋದಿ ಜುಲೈ 25-26ರಂದು ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ. ಅಲ್ಲಿ ಅವರು ಮಾಲ್ಡೀವ್ಸ್‌ನ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 1965ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ 60ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಮಾಲ್ಡೀವ್ಸ್, ಈ ಸಂದರ್ಭದಲ್ಲಿ ಮೋದಿಯವರಿಗೆ ಗೌರವಾನ್ವಿತ ಸ್ವಾಗತವನ್ನು ನೀಡಲಿದೆ. ಮಾಲ್ಡೀವ್ಸ್‌ನ ರಾಷ್ಟ್ರಪತಿ ಮೊಹಮ್ಮದ್ ಮುಯಿಝು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಮೋದಿ, ಎರಡೂ ದೇಶಗಳ ನಡುವಿನ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಚರ್ಚಿಸಲಿದ್ದಾರೆ.  ಇದನ್ನೂ ಓದಿ: 4 ವರ್ಷಗಳಲ್ಲಿ 1.9 ಲಕ್ಷ ಕೋಟಿ ಮೌಲ್ಯದ ರೈಲ್ವೆ ಯೋಜನೆಗಳಿಗೆ ಅನುಮೋದನೆ: ಅಶ್ವಿನಿ ವೈಷ್ಣವ್

    ಕಳೆದ ಕೆಲವು ವರ್ಷಗಳಲ್ಲಿ ಭಾರತ-ಮಾಲ್ಡೀವ್ಸ್ ಸಂಬಂಧಗಳು ಕೆಲವು ಏರಿಳಿತಗಳನ್ನು ಕಂಡಿವೆ. 2023ರಲ್ಲಿ ಮುಯಿಝು ಅವರು ‘ಇಂಡಿಯಾ ಔಟ್’ ಚುನಾವಣಾ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಎರಡೂ ದೇಶಗಳು ತಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಲು ಕಾರ್ಯನಿರ್ವಹಿಸಿವೆ. ಭಾರತವು ಮಾಲ್ಡೀವ್ಸ್‌ಗೆ 2024-25ರಲ್ಲಿ 470 ಕೋಟಿ ರೂ.ನಿಂದ 600 ಕೋಟಿ ರೂ.ಗೆ ಹೆಚ್ಚಳವಾದ ಲೈನ್ ಆಫ್ ಕ್ರೆಡಿಟ್ ಮತ್ತು ಕರೆನ್ಸಿ ಸ್ವಾಪ್ ಸೌಲಭ್ಯವನ್ನು ವಿಸ್ತರಿಸಿದೆ. ಇದರಿಂದ ಮಾಲ್ಡೀವ್ಸ್‌ನ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ನೆರವಾಗಿದೆ.

  • ತಿಂಗಳ ಬಳಿಕ ಹಾರಿದ ಬ್ರಿಟನ್‌ ಬಾನಾಡಿ – ಕೇರಳದಿಂದ ಆಸ್ಟ್ರೇಲಿಯಾಗೆ ಜಿಗಿದ F-35B ಜೆಟ್

    ತಿಂಗಳ ಬಳಿಕ ಹಾರಿದ ಬ್ರಿಟನ್‌ ಬಾನಾಡಿ – ಕೇರಳದಿಂದ ಆಸ್ಟ್ರೇಲಿಯಾಗೆ ಜಿಗಿದ F-35B ಜೆಟ್

    ತಿರುವನಂತಪುರಂ: ವಿಶ್ವದ ಅತ್ಯಂತ ದುಬಾರಿ ವಿಮಾನ ಬ್ರಿಟಿಷ್ ರಾಯಲ್ ನೇವಿಯ ಎಫ್-35 ಫೈಟರ್ ಜೆಟ್‌ ಒಂದು ತಿಂಗಳ ನಂತರ ಕೇರಳದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಿದೆ.

    ತುರ್ತು ಲ್ಯಾಂಡಿಂಗ್ ಮಾಡಿದ ಒಂದು ತಿಂಗಳ ನಂತರ, ಬ್ರಿಟಿಷ್ ರಾಯಲ್ ನೇವಿಯ F-35B ಜೆಟ್ ಬೆಳಿಗ್ಗೆ 10:50 ಕ್ಕೆ ಟೇಕಾಫ್‌ ಆಗಿದೆ. ಆಸ್ಟ್ರೇಲಿಯಾದ ಡಾರ್ವಿನ್‌ಗೆ ಜೆಟ್ ಹಾರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ F-35B ವಿಮಾನ ದುರಸ್ತಿ ಪೂರ್ಣ – ಮಂಗಳವಾರ ಯುಕೆಗೆ ವಾಪಸ್

    ಕಳೆದ 5 ವಾರಗಳಿಂದ ಕೇರಳದ ತಿರುವನಂತಪುರ ಏರ್‌ಪೋರ್ಟ್‌ನಲ್ಲಿದ್ದ (Thiruvananthapuram International Airport) ವಿಮಾನವನ್ನು ನಿಲ್ಲಿಸಲಾಗಿತ್ತು. ಯುದ್ಧ ವಿಮಾನದ ಹೈಡ್ರಾಲಿಕ್ ಸಿಸ್ಟಮ್‌ನ ದೋಷದಿಂದ ವಿಮಾನವನ್ನು ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಬ್ರಿಟನ್ ಇಂಜಿನಿಯರುಗಳ ತಂಡ ಈ ದೋಷವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

    ಅಮೆರಿಕ ನಿರ್ಮಿತ, ಅತ್ಯಂತ ಅತ್ಯಾಧುನಿಕ ಫೈಟರ್ ಜೆಟ್ ವಿದೇಶದಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲು. ಇದು ರಾಯಲ್ ನೇವಿ ವಿಮಾನವಾಹಕ ನೌಕೆ HMS ಪ್ರಿನ್ಸ್ ಆಫ್ ವೇಲ್ಸ್‌ನ ಭಾಗವಾಗಿದೆ. ಈ ವಿಮಾನವಾಹಕ ನೌಕೆ ಕೆಲ ದಿನಗಳ ಹಿಂದೆ ಭಾರತೀಯ ನೌಕಾಪಡೆಯೊಂದಿಗೆ ಜಂಟಿಯಾಗಿ ತಾಲೀಮು ನಡೆಸಿತ್ತು.

    ಇಷ್ಟು ದಿನ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ತಂಗಿದ್ದ ವಿಮಾನಕ್ಕೆ, ಅದರ ತೂಕವನ್ನು ಆಧರಿಸಿ ಪಾರ್ಕಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ವರದಿಯಾಗಿದೆ. ಇನ್ನೂ, ಭಾರತೀಯ ಅಧಿಕಾರಿಗಳ ನಿರಂತರ ಬೆಂಬಲ ಮತ್ತು ಸಹಕಾರಕ್ಕಾಗಿ ಬ್ರಿಟಿಷ್ ಹೈಕಮಿಷನ್ ಧನ್ಯವಾದ ತಿಳಿಸಿದೆ. ಇದನ್ನೂ ಓದಿ: ಎಫ್‌ 35ಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಮುಂದಾದ ತಿರುವನಂತಪುರ ಏರ್‌ಪೋರ್ಟ್‌

  • ಜು.23-26ರವರೆಗೆ ಪ್ರಧಾನಿ ಮೋದಿ ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ

    ಜು.23-26ರವರೆಗೆ ಪ್ರಧಾನಿ ಮೋದಿ ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ

    -ವಾಣಿಜ್ಯ ಒಪ್ಪಂದ, ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಒತ್ತು

    ನವದೆಹಲಿ: ಜು.23ರಿಂದ 26ರವರೆಗೆ ಪ್ರಧಾನಿ ಮೋದಿ (PM Modi) ಅವರು ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಈ ಬಾರಿ ಬ್ರಿಟನ್ ಮತ್ತು ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ.

    ಈ ಭೇಟಿಯು ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸ್ವರೂಪ ನೀಡುವುದು ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಮುಖ ಗುರಿಯನ್ನು ಹೊಂದಿದೆ.ಇದನ್ನೂ ಓದಿ: ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ

    ಜು.23-24ರವರೆಗೆ ಪ್ರಧಾನಿ ಮೋದಿ ಬ್ರಿಟನ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ (ಎಫ್‌ಟಿಎ) ಅಂತಿಮ ಸಹಿ ಹಾಕುವ ಸಾಧ್ಯತೆ ಇದೆ. ಮೂರು ವರ್ಷಗಳ ಚರ್ಚೆಯ ಬಳಿಕ ಮೇ ತಿಂಗಳಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದ್ದು, ಇದು ಭಾರತದ ಶೇ.99ರಷ್ಟು ರಫ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ. ಇದರಿಂದ ಬ್ರಿಟಿಷ್ ಉತ್ಪನ್ನಗಳಾದ ವಿಸ್ಕಿ ಮತ್ತು ಆಟೋಮೊಬೈಲ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದೆ.

    ಎಸ್&ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಪ್ರಕಾರ, ಈ ಒಪ್ಪಂದವು ಭಾರತಕ್ಕೆ ಗಣನೀಯ ಆರ್ಥಿಕ ಉತ್ತೇಜನ ನೀಡಲಿದೆ. 2024ರಲ್ಲಿ ಯುಕೆಯಿಂದ ಭಾರತಕ್ಕೆ 130 ಬಿಲಿಯನ್ ಡಾಲರ್‌ನಷ್ಟು (ಭಾರತದ ಜಿಡಿಪಿಯ 3.3%) ವಿದೇಶಿ ವಿನಿಮಯ ಹರಿವು ದಾಖಲಾಗಿದ್ದು, ಈ ಒಪ್ಪಂದದಿAದ ಈ ಹರಿವು ಮತ್ತಷ್ಟು ಹೆಚ್ಚಲಿದೆ. ವಿಶೇಷವಾಗಿ, ಯುಕೆಯಲ್ಲಿ ಕೆಲಸ ಮಾಡುವ ಭಾರತೀಯ ಐಟಿ ವೃತ್ತಿಪರರಿಗೆ ಮೂರು ವರ್ಷಗಳವರೆಗೆ ರಾಷ್ಟ್ರೀಯ ವಿಮೆಯಿಂದ ವಿನಾಯಿತಿ ನೀಡುವ ನಿಬಂಧನೆಯು ಅವರ ಉಳಿತಾಯ ಮತ್ತು ವಿದೇಶಿ ವಿನಿಮಯ ಹರಿವನ್ನು ಹೆಚ್ಚಿಸಲಿದೆ. 2024ರಲ್ಲಿ 56.7 ಬಿಲಿಯನ್ ಡಾಲರ್ ಆಗಿರುವ ದ್ವಿಪಕ್ಷೀಯ ವಾಣಿಜ್ಯವನ್ನು 2030ರ ವೇಳೆಗೆ ದ್ವಿಗುಣಗೊಳಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ.

    ಬ್ರಿಟನ್ ಭೇಟಿಯ ಬಳಿಕ, ಪ್ರಧಾನಮಂತ್ರಿ ಮೋದಿ ಜು.25-26ರವರೆಗೆ ಮಾಲ್ಡೀವ್ಸ್ಗೆ ತೆರಳಲಿದ್ದಾರೆ. ಈ ವೇಳೆ ಅವರು ಮಾಲ್ಡೀವ್ಸ್ನ ಸ್ವಾತಂತ್ರ‍್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 1965ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ‍್ಯ ಪಡೆದ ನಂತರ 60ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಮಾಲ್ಡೀವ್ಸ್, ಈ ಸಂದರ್ಭದಲ್ಲಿ ಮೋದಿಯವರಿಗೆ ಗೌರವಾನ್ವಿತ ಸ್ವಾಗತವನ್ನು ನೀಡಲಿದೆ. ಮಾಲ್ಡೀವ್ಸ್ನ ರಾಷ್ಟ್ರಪತಿ ಮೊಹಮ್ಮದ್ ಮುಯಿಝು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಎರಡೂ ದೇಶಗಳ ನಡುವಿನ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಮೋದಿ ಚರ್ಚಿಸಲಿದ್ದಾರೆ.

    ಕಳೆದ ಕೆಲವು ವರ್ಷಗಳಲ್ಲಿ ಭಾರತ-ಮಾಲ್ಡೀವ್ಸ್ ಸಂಬಂಧಗಳು ಕೆಲವು ಏರಿಳಿತಗಳನ್ನು ಕಂಡಿವೆ. 2023ರಲ್ಲಿ ಮುಯಿಝು ಅವರು “ಇಂಡಿಯಾ ಔಟ್” ಚುನಾವಣಾ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಎರಡೂ ದೇಶಗಳು ತಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಲು ಮುಂದಾಗಿವೆ. ಇನ್ನೂ, ಭಾರತವು ಮಾಲ್ಡೀವ್ಸ್‌ಗೆ 2024-25ರಲ್ಲಿ 470 ಕೋಟಿ ರೂ.ನಿಂದ 600 ಕೋಟಿ ರೂ.ಗೆ ಹೆಚ್ಚಳವಾದ ಲೈನ್ ಆಫ್ ಕ್ರೆಡಿಟ್ ಮತ್ತು ಕರೆನ್ಸಿ ಸ್ವಾಪ್ ಸೌಲಭ್ಯವನ್ನು ವಿಸ್ತರಿಸಿದೆ. ಇದರಿಂದ ಮಾಲ್ಡೀವ್ಸ್ನ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ನೆರವಾಗಿದೆ.ಇದನ್ನೂ ಓದಿ: ಅಪ್ರಾಪ್ತನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ – ಇಬ್ಬರು ಬಾಲಕರು ಅರೆಸ್ಟ್‌

  • ಮತ್ತೆ ಉದ್ಯೋಗಕ್ಕೆ ಮರಳಿದ ರಿಷಿ ಸುನಕ್ – 70 ಗಂಟೆ ಕೆಲ್ಸ ಮಾಡಿ ಎಂದು ನೆಟ್ಟಿಗರ ಅಪಹಾಸ್ಯ

    ಮತ್ತೆ ಉದ್ಯೋಗಕ್ಕೆ ಮರಳಿದ ರಿಷಿ ಸುನಕ್ – 70 ಗಂಟೆ ಕೆಲ್ಸ ಮಾಡಿ ಎಂದು ನೆಟ್ಟಿಗರ ಅಪಹಾಸ್ಯ

    ಬ್ರಿಟನ್‌ನ (Britain) ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್ (Infosis) ಸಂಸ್ಥಾಪಕ ನಾರಾಯಣ ಮೂರ್ತಿ (Narayana murthy) ಅವರ ಅಳಿಯ ರಿಷಿ ಸುನಕ್ (Rishi Sunak) ಮತ್ತೆ ಉದ್ಯೋಗಕ್ಕೆ ಮರಳಿದ್ದಾರೆ.

     ರಿಷಿ ಸುನಕ್ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸುನಕ್ ಗೋಲ್ಡ್‌ಮನ್‌ ಸ್ಯಾಚ್ಸ್‌ನಲ್ಲಿಯೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಇದೀಗ ಮತ್ತೆ ಉದ್ಯೋಗಕ್ಕೆ ಮರಳಿ ಗೋಲ್ಡ್‌ಮನ್‌ ಸ್ಯಾಚ್ಸ್ ಗ್ರೂಪ್‌ನ ಹಿರಿಯ ಸಲಹೆಗಾರರಾಗಿದ್ದಾರೆ.

    ಸ್ವಲ ಸಮಯದ ಹಿಂದೆ ನಾರಾಯಣ ಮೂರ್ತಿ ಅವರು, ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಸದ್ಯ ಅವರ ಹೇಳಿಕೆಯನ್ನೇ ಗುರಿಯಾಗಿಟ್ಟುಕೊಂಡು ನೆಟ್ಟಿಗರು ಟಾರ್ಗೆಟ್ ಮಾಡಿದ್ದಾರೆ. `ರಿಷಿ ಸುನಕ್ ವಾರಕ್ಕೆ 70 ಗಂಟೆಗಳ ಕೆಲಸದ ಕೋಟಾವನ್ನು ಪೂರ್ಣಗೊಳಿಸಲು ಗೋಲ್ಡ್‌ಮನ್‌ ಸ್ಯಾಚ್ಸ್‌ ಸೇರಿದ್ದಾರೆ’ ಅಂತ ಕೆಲವರು ಅಪಹಾಸ್ಯ ಮಾಡಿದ್ದಾರೆ. ಇನ್ನೂ ಕೆಲವರು ಮಾವನ ಇಚ್ಛೆಯನ್ನು ಪೂರೈಸಲು ರಿಷಿ ಕೆಲಸಕ್ಕೆ ಸೇರಿದ್ದಾರೆ ಅಂತ ಕಾಲೆಳೆದಿದ್ದಾರೆ.

  • ವಿಮಾನ ದುರಂತ | ಮೃತಪಟ್ಟ ಬ್ರಿಟನ್ ಪ್ರಜೆಗಳ ಕುಟುಂಬಸ್ಥರಿಂದ ಏರ್‌ ಇಂಡಿಯಾ ವಿರುದ್ಧ ಯುಕೆ, ಯುಎಸ್‍ನಲ್ಲಿ ದೂರು ಸಾಧ್ಯತೆ

    ವಿಮಾನ ದುರಂತ | ಮೃತಪಟ್ಟ ಬ್ರಿಟನ್ ಪ್ರಜೆಗಳ ಕುಟುಂಬಸ್ಥರಿಂದ ಏರ್‌ ಇಂಡಿಯಾ ವಿರುದ್ಧ ಯುಕೆ, ಯುಎಸ್‍ನಲ್ಲಿ ದೂರು ಸಾಧ್ಯತೆ

    ವಾಷಿಂಗ್ಟನ್‌: ಏರ್ ಇಂಡಿಯಾ ದುರಂತದಲ್ಲಿ (Air India Crash) ಮೃತಪಟ್ಟ ಬ್ರಿಟನ್‌ (Britain) ಪ್ರಜೆಗಳ ಕುಟುಂಬಸ್ಥರು ಅಮೆರಿಕ (America) ಹಾಗೂ ಬ್ರಿಟನ್‌ನ (Britain) ನ್ಯಾಯಾಲಯದಲ್ಲಿ (Court) ವಿಮಾನಯಾನ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

    ಜೂ.12 ರಂದು ಅಹಮದಾಬಾದ್‌ನಲ್ಲಿ (Ahmedabad) ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಅಪಘಾತಕ್ಕೆ ಈಡಾಗಿತ್ತು. ಈ ವಿಮಾನದಲ್ಲಿದ್ದ 242 ಜನರಲ್ಲಿ 241 ಜನ ಮೃತಪಟ್ಟು, ಒಬ್ಬರು ಮಾತ್ರ ಬದುಕುಳಿದಿದ್ದರು. ಈ ದುರಂತದಲ್ಲಿ 53 ಬ್ರಿಟನ್ ಪ್ರಜೆಗಳು ಮೃತಪಟ್ಟಿದ್ದರು. ಈ ಅವಘಡಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಬ್ರಿಟನ್‌ನ ಕಾನೂನು ತಂಡಗಳು ಎರಡೂ ದೇಶಗಳಲ್ಲೂ ಮೊಕದ್ದಮೆ ಹೂಡಲು ಸಿದ್ಧತೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

    ಅಂತಾರರಾಷ್ಟ್ರೀಯ ಕಾನೂನು ತಂಡಗಳು ಅಪಘಾತದಲ್ಲಿ ಮೃತಪಟ್ಟ ಬ್ರಿಟನ್‌ ಪ್ರಯಾಣಿಕರ ಕುಟುಂಬಗಳೊಂದಿಗೆ ಮಾತುಕತೆ ನಡೆಸುತ್ತಿವೆ. ಎಲ್ಲಾ ಪುರಾವೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಲಂಡನ್‌ನ ಹೈಕೋರ್ಟ್‌ನಲ್ಲಿ ಏರ್ ಇಂಡಿಯಾ ವಿರುದ್ಧ ಪ್ರಕರಣ ಹಾಗೂ ಅಮೆರಿಕದಲ್ಲಿ ಬೋಯಿಂಗ್ ವಿರುದ್ಧ ಮೊಕದ್ದಮೆ ಹೂಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

    ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಕಾನೂನು ತಜ್ಞರು, ಈ ದೇಶಗಳಲ್ಲಿನ ನ್ಯಾಯಾಲಯಗಳು ಸಾಮಾನ್ಯವಾಗಿ ಮೊಕದ್ದಮೆಗಳನ್ನು ಸಲ್ಲಿಸುವ ಜನರಿಗೆ ಹೆಚ್ಚು ಬೆಂಬಲ ನೀಡುತ್ತವೆ. ಈ ಪ್ರಕರಣಗಳು ನ್ಯಾಯವ್ಯಾಪ್ತಿಯ ಸಮಸ್ಯೆಗಳಿಂದಾಗಿ ವಿಳಂಬ ಆಗಬಹುದು ಎಂದು ಹೇಳಿದ್ದಾರೆ.

    ಪತನಗೊಂಡ ವಿಮಾನದಲ್ಲಿ 169 ಭಾರತೀಯ ಪ್ರಯಾಣಿಕರು, 53 ಬ್ರಿಟನ್‌, 7 ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದ ಪ್ರಯಾಣಿಕರಿದ್ದರು. ಅಲ್ಲದೇ 12 ಸಿಬ್ಬಂದಿ ಇದ್ದರು. ಈ ದುರಂತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರು ಸಾವಿಗೀಡಾಗಿದ್ದರು.

    ಇದೆಲ್ಲದರ ನಡುವೆ ವಿಮಾನ ಉತ್ತಮವಾಗಿ ನಿರ್ವಹಣೆ ಮಾಡಲಾಗಿತ್ತು. ಪೈಲಟ್‌ಗಳಿಗೆ ಸಾಕಷ್ಟು ಅನುಭವವಿತ್ತು ಎಂದು ವಿಮಾನಯಾನ ಸಂಸ್ಥೆ ಹೇಳಿಕೊಂಡಿದೆ. ಇದನ್ನೂ ಓದಿ: ವಿಮಾನ ದುರಂತವಾಗಿ ದಿನಗಳೂ ಕಳೆದಿರಲಿಲ್ಲ – ಪಾರ್ಟಿ ಮೂಡ್‌ನಲ್ಲಿದ್ದ ಉದ್ಯೋಗಿಗಳ ವಜಾಗೊಳಿಸಿದ Air India ವೆಂಚರ್‌

  • ಬ್ರಿಟನ್‌ಗೆ ತೆರಳುತ್ತಿದ್ದ ವಲಸಿಗರ ದೋಣಿ ಮುಳುಗಿ ಮಗು ಸಾವು

    ಬ್ರಿಟನ್‌ಗೆ ತೆರಳುತ್ತಿದ್ದ ವಲಸಿಗರ ದೋಣಿ ಮುಳುಗಿ ಮಗು ಸಾವು

    ಪ್ಯಾರಿಸ್: ಬ್ರಿಟನ್‌ಗೆ (Britain) ತೆರಳುತ್ತಿದ್ದ ವಲಸಿಗರ ದೋಣಿಯೊಂದು ಗುರುವಾರ ರಾತ್ರಿ ಫ್ರಾನ್ಸ್‌ನ (France) ಕರಾವಳಿಯ ಕಾಲುವೆಯಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ ಎಂದು ಫ್ರೆಂಚ್ ಕಡಲ ಅಧಿಕಾರಿಗಳು ತಿಳಿಸಿದ್ದಾರೆ.

    ಅಪಘಾತವು ಫ್ರೆಂಚ್ ಪಟ್ಟಣವಾದ ವಿಸ್ಸಾಂಟ್‌ನಲ್ಲಿ ಸಂಭವಿಸಿದ್ದು, ಕಾಲುವೆ ಮತ್ತು ಉತ್ತರ ಸಮುದ್ರದ ಉಸ್ತುವಾರಿ ನೌಕಾ ಅಧಿಕಾರಿ ಎಎಫ್‌ಪಿಗೆ ತಿಳಿಸಿದರು. ಘಟನೆಯಲ್ಲಿ 65 ಜನರನ್ನು ರಕ್ಷಿಸಲಾಗಿದೆ ಆದರೆ ಒಂದು ಮಗು ಸಾವನ್ನಪ್ಪಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮುಂದಿನ ವಾರ ರಷ್ಯಾಗೆ ಪ್ರಧಾನಿ ಮೋದಿ ಭೇಟಿ

    ಈ ಮೊದಲು ಸೆ. 3 ರಂದು 6 ಮಂದಿ ಸಾವನ್ನಪ್ಪಿದರು. 2018 ರಿಂದ ಈವರೆಗೆ ಕಾಲುವೆಯನ್ನು ದಾಟಲು ಪ್ರಯತ್ನಿಸುವಾಗ ಒಟ್ಟು 52 ಜನ ವಲಸಿಗರು ಸಾವನ್ನಪ್ಪಿದ್ದಾರೆ ಎಂದು ದಾಖಲೆಯಾಗಿದೆ. ಅಧಿಕೃತ ಬ್ರಿಟಿಷ್ ಅಂಕಿಅಂಶಗಳ ಪ್ರಕಾರ, ಬ್ರಿಟನ್‌ಗೆ ದೋಣಿಗಳಲ್ಲಿ ಆಗಮಿಸುವ ವಲಸಿಗರ ಸಂಖ್ಯೆ 2020ಕ್ಕೆ ಹೋಲಿಸಿದರೆ ಈ ವರ್ಷ ಸರಾಸರಿ 53 ಆಗಿದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಭದ್ರತಾ ಸಿಬ್ಬಂದಿಯ ವಿಚಾರಣೆ ನಡೆಸಿದ ಮುಂಬೈ ಪೊಲೀಸರು

    ಯುಕೆ ಹೋಮ್ ಆಫೀಸ್ ಅಂಕಿಅಂಶಗಳ ಪ್ರಕಾರ ಜ.1ರಿಂದ 26,000 ಕ್ಕೂ ಹೆಚ್ಚು ವಲಸಿಗರು ಬ್ರಿಟನ್ ತೀರಕ್ಕೆ ಬಂದಿಳಿದ್ದಾರೆ. ಇದನ್ನೂ ಓದಿ: ಹುಲಿ ದಾಳಿಗೆ ಹಸು ಸಹಿತ ಹೊಟ್ಟೆಯಲ್ಲಿದ್ದ ಕರು ಬಲಿ – ಮುಂದುವರಿದ ವ್ಯಾಘ್ರನ ಅಟ್ಟಹಾಸ

  • ಭಾರತದಿಂದ ಕಳ್ಳತನವಾಗಿದ್ದ 500 ವರ್ಷಗಳ ಪುರಾತನ ವಿಗ್ರಹ ಮರಳಿಸಲು ಮುಂದಾದ ಆಕ್ಸ್‌ಫರ್ಡ್ ವಿವಿ

    ಭಾರತದಿಂದ ಕಳ್ಳತನವಾಗಿದ್ದ 500 ವರ್ಷಗಳ ಪುರಾತನ ವಿಗ್ರಹ ಮರಳಿಸಲು ಮುಂದಾದ ಆಕ್ಸ್‌ಫರ್ಡ್ ವಿವಿ

    ಲಂಡನ್: ತಮಿಳುನಾಡಿನ (Tamil Nadu) ದೇವಸ್ಥಾನದಿಂದ ಕಳ್ಳತನವಾಗಿದ್ದ 500 ವರ್ಷಗಳಷ್ಟು ಹಳೆಯದಾದ ಸಂತ ತಿರುಮಂಕೈ ಆಳ್ವರ (Thirumangai Alvar) ಕಂಚಿನ ವಿಗ್ರಹವನ್ನು ಭಾರತಕ್ಕೆ ಹಿಂದಿರುಗಿಸಲು ಬ್ರಿಟನ್‍ನ (Britain) ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಒಪ್ಪಿಕೊಂಡಿದೆ.

    ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ (Oxford University) ಕೌನ್ಸಿಲ್ ಅಶ್ಮೋಲಿಯನ್ ಮ್ಯೂಸಿಯಂನಿಂದ 15 ನೇ ಶತಮಾನದ ಸಂತ ತಿರುಮಂಕೈ ಆಳ್ವಾರ ಕಂಚಿನ ಶಿಲ್ಪವನ್ನು ಹಿಂದಿರುಗಿಸಲು ಭಾರತೀಯ ಹೈಕಮಿಷನ್‍ನ ಮನವಿಯನ್ನು ವಿಶ್ವವಿದ್ಯಾಲಯವು ಇಂದು ಒಪ್ಪಿಕೊಂಡಿದೆ. ಈ ನಿರ್ಧಾರವನ್ನು ಅನುಮೋದನೆಗಾಗಿ ಚಾರಿಟಿ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ವಿಶ್ವವಿದ್ಯಾನಿಲಯದ ಅಶ್ಮೋಲಿಯನ್ ಮ್ಯೂಸಿಯಂ ತಿಳಿಸಿದೆ. ಇದನ್ನೂ ಓದಿ: ಒಕ್ಕಲಿಗರ ಸಂಘ ದುಬೈಯ ‘ವಿಶ್ವ ಪರಿಸರ ದಿನಾಚರಣೆ’; ಪರಿಸರ ತಜ್ಞ ಆರ್.ಕೆ.ನಾಯರ್‌ಗೆ ಸನ್ಮಾನ

    60 ಸೆಂ.ಮೀ ಎತ್ತರದ ಸಂತ ತಿರುಮಂಕೈ ಆಳ್ವರ ಪ್ರತಿಮೆಯನ್ನು ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಅಶ್ಮೋಲಿಯನ್ ಮ್ಯೂಸಿಯಂ 1967 ರಲ್ಲಿ ಡಾ ಜೆ ಆರ್ ಬೆಲ್ಮಾಂಟ್ (1886-1981) ಎಂಬ ಸಂಗ್ರಾಹಕನ ಸಂಗ್ರಹದಿಂದ ಹರಾಜಿನಲ್ಲಿ ಆಕ್ಸ್‌ಫರ್ಡ್ ಪಡೆದುಕೊಂಡಿತ್ತು. ಪ್ರಪಂಚದ ಅತ್ಯಂತ ಪ್ರಸಿದ್ಧವಾದ ಕೆಲವು ಕಲೆ ಮತ್ತು ಪುರಾತತ್ತ್ವ ಶಾಸ್ತ್ರದ ಕಲಾಕೃತಿಗಳನ್ನು ಹೊಂದಿರುವ ವಸ್ತುಸಂಗ್ರಹಾಲಯವು, 1967 ರಲ್ಲಿ ಈ ವಿಗ್ರಹವನ್ನು ಸದುದ್ದೇಶದಿಂದ ಇಲ್ಲಿ ಇರಿಸಿಕೊಂಡಿತ್ತು.

    ಕಳೆದ ವರ್ಷ ನವೆಂಬರ್‍ನಲ್ಲಿ ಸ್ವತಂತ್ರ ಸಂಶೋಧಕರೊಬ್ಬರು ಪುರಾತನ ಪ್ರತಿಮೆಯ ಮೂಲದ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಭಾರತಕ್ಕೆ ಈ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ಭಾರತ ಬ್ರಿಟನ್‍ಗೆ ವಿಗ್ರಹ ಮರಳಿಸುವಂತೆ ಮನವಿ ಮಾಡಿತ್ತು. ಕಳುವಾದ ಭಾರತೀಯ ಕಲಾಕೃತಿಗಳನ್ನು ಯುಕೆಯಿಂದ ಭಾರತಕ್ಕೆ ತಂದ ಹಲವಾರು ನಿದರ್ಶನಗಳಿವೆ. ಇದನ್ನೂ ಓದಿ: ಭಾರತವು ಅಂಟಾರ್ಟಿಕಾದಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿರುವುದು ಯಾಕೆ?

  • ಬ್ರಿಟನ್ ಮೂರನೇ ಚಾರ್ಲ್ಸ್‌ಗೆ  ಕ್ಯಾನ್ಸರ್ ದೃಢ – ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ ಮೋದಿ

    ಬ್ರಿಟನ್ ಮೂರನೇ ಚಾರ್ಲ್ಸ್‌ಗೆ  ಕ್ಯಾನ್ಸರ್ ದೃಢ – ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ ಮೋದಿ

    ಲಂಡನ್: ಬ್ರಿಟನ್‌ನ ( Great Britain) ರಾಜ 3ನೇ ಚಾರ್ಲ್ಸ್  ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದು, ಅವರು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಾರೈಸಿದ್ದಾರೆ.

    ಕಿಂಗ್ ಚಾರ್ಲ್ಸ್ 3 (King Charles  III. ) ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್ಹ್ಯಾಮ್‌ ಅರಮನೆ (Buckingham  Palace) ಸ್ಪಷ್ಟಪಡಿಸಿದೆ. ಅವರಿಗೆ ಕ್ಯಾನ್ಸರ್ ಇರುವುದರಿಂದ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳದೇ ಇರುವಂತೆ ವೈದ್ಯರು ತಿಳಿಸಿದ್ದಾರೆ. ಹೀಗಿದ್ದರೂ ಈ ಅವಧಿಯಲ್ಲಿ ಅಧಿಕೃತ ಕೆಲಸವನ್ನು ಮುಂದುವರಿಸುತ್ತಾರೆ ಎಂದು ಬಕಿಂಗ್ಹ್ಯಾಮ್‌ ಅರಮನೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ತಿಂಡಿ ಮಾಡದ್ದಕ್ಕೆ ತಾಯಿಯನ್ನು ಹತ್ಯೆಗೈದ ಕೇಸ್‍ಗೆ ಟ್ವಿಸ್ಟ್ – ಕೊಲೆ ಮಾಡಿದ್ದು ಮಗನಲ್ಲ, ತಂದೆಯಿಂದಲೇ ಕೃತ್ಯ

    ಈ ವಿಷಯದ ಬಗ್ಗೆ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ. “3 ಚಾರ್ಲ್ಸ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅವರಿಗೆ ಒಳ್ಳೆ ಆರೋಗ್ಯ ಸಿಗಲಿ. ಅದಕ್ಕೆ ನಾನು ಭಾರತದ ಜನರೊಂದಿಗೆ ಸೇರಿ ಹಾರೈಸುತ್ತೇನೆ” ಎಂದು ಅವರ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಸಿಎಂ ಸಿದ್ದರಾಮಯ್ಯಗೆ 10 ಸಾವಿರ ದಂಡ – ಜನಪ್ರತಿನಿಧಿಗಳ ಕೋರ್ಟ್‌ ಆದೇಶ

    ಜೊತೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಸಹ ಚಾರ್ಲ್ಸ್‌ ಅವರಿಗೆ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದು, ಅವರು ಶೀಘ್ರವೇ ಪೂರ್ಣ ಶಕ್ತಿಯೊಂದಿಗೆ ಮರಳುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ತಿಳಿಸಿ ಹಾರೈಸಿದ್ದಾರೆ. ಇದನ್ನೂ ಓದಿ: ರಾಯಚೂರಿನ ಕೃಷ್ಣಾ ನದಿಯಲ್ಲಿ ಶಿವಲಿಂಗ, ವೆಂಕಟೇಶ್ವರ ಮೂರ್ತಿಗಳು ಪತ್ತೆ

  • ಸ್ವಚ್ಛ ದೇಶವೆಂದು ಕರೆಯಲ್ಪಟ್ಟ ಬ್ರಿಟನ್‌ನಲ್ಲಿ ಇಲಿಗಳ ಕಾಟ

    ಸ್ವಚ್ಛ ದೇಶವೆಂದು ಕರೆಯಲ್ಪಟ್ಟ ಬ್ರಿಟನ್‌ನಲ್ಲಿ ಇಲಿಗಳ ಕಾಟ

    ಲಂಡನ್:‌ ಯುರೋಪಿಯನ್ ದೇಶಗಳನ್ನು ಸ್ವಚ್ಛ ದೇಶಗಳೆಂದು ಪರಿಗಣಿಸಲಾಗಿದೆ. ಅದರಲ್ಲಿ ಬ್ರಿಟನ್ (Britain) ಕೂಡ ಒಂದಾಗಿದೆ. ಆದರೆ ಇಲಿಗಳ ಸಂಖ್ಯೆ ಹೆಚ್ಚಾಗಿದ್ದು, ಸದ್ಯ ಇಲ್ಲಿನ ಸ್ವಚ್ಛತೆಯನ್ನೇ ಪ್ರಶ್ನಿಸುವಂತಾಗಿದೆ.

    ಹೌದು. ಬ್ರಿಟನ್ ತನ್ನ ದೇಶದಲ್ಲಿನ ಹೊಲಸುಗಳಿಂದ ತೊಂದರೆಗೀಡಾಗಿದೆ. ಇದರಿಂದಾಗಿ ಇಲ್ಲಿ ಇಲಿಗಳ (Rat) ಕಾಟ ಜಾಸ್ತಿಯಾಗಿದೆ. ಈ ಇಲಿಗಳು ಸಾಮಾನ್ಯ ಇಲಿಗಳಂತಿಲ್ಲ, ಬದಲಾಗಿ ಗಾತ್ರದಲ್ಲಿ ಅವುಗಳು ದೊಡ್ಡದಾಗಿವೆ. ಏಕಾಏಕಿ ಇಲಿಗಳ ಕಾಟ ಹೆಚ್ಚಾದ ಕಾರಣ ಬ್ರಿಟಿಷರು ಕಂಗಾಲಾಗಿದ್ದಾರೆ. ಇಲ್ಲಿನ ಜನರ ಸಂಖ್ಯೆಗಿಂತ ಇಲಿಗಳ ಸಂಖ್ಯೆ 25 ಕೋಟಿಗೆ ತಲುಪಿದೆ. ಏಕಾಏಕಿ ಇಷ್ಟೊಂದು ಇಲಿಗಳು ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ.

    ಇಲಿಗಳ ಹೆಚ್ಚಳಕ್ಕೆ ಕಾರಣವೇನು?: ಸಮಯಕ್ಕೆ ಸರಿಯಾಗಿ ಕಸದ ತೊಟ್ಟಿಗಳ ಸಂಗ್ರಹ ವಿಳಂಬವೇ ಇಲಿಗಳ ಸಂಖ್ಯೆ ಏಕಾಏಕಿ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ. ಸ್ವಚ್ಛತೆಯ ಕೊರತೆಯಿಂದ ಇಲಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಇಲಿಗಳು ಈಗ ಬ್ರಿಟನ್‌ನ ಮನೆಗಳ ಮೇಲೆ ದಾಳಿ ಮಾಡುತ್ತಿವೆ. ಬ್ರಿಟಿಷ್ ಪೆಸ್ಟ್ ಕಂಟ್ರೋಲ್ ಅಸೋಸಿಯೇಷನ್ ​​(BPCA) ಪ್ರಕಾರ, ಕಳೆದ 90 ದಿನಗಳಲ್ಲಿ ಈ ಸಮಸ್ಯೆಗಳನ್ನು ಎದುರಿಸಲು ಸಹಾಯ ಪಡೆಯುವವರ ಸಂಖ್ಯೆಯು ಹೆಚ್ಚಾಗಿದೆ.

    ಬ್ರಿಟನ್‌ನಲ್ಲಿ ಸುಮಾರು 25 ಕೋಟಿ ಇಲಿಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ಇದೀಗ ಚಳಿಯಿಂದಾಗಿ ಇಲಿಗಳು ಮನೆಗಳ ಒಳಗೆ ನುಗ್ಗಲು ಆರಂಭಿಸಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇದನ್ನೂ ಓದಿ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಾಯಕರ ಕೆಲಸವಲ್ಲ: ಮೋದಿ ವಿರುದ್ಧ ದೀದಿ ವಾಗ್ದಾಳಿ

    ಈ ಸಂಬಂಧ BPCA ಯ ತಾಂತ್ರಿಕ ವ್ಯವಸ್ಥಾಪಕಿ ನಟಾಲಿ ಬಂಗಯ್ ಪ್ರತಿಕ್ರಿಯಿಸಿ,  ಚಳಿಗಾಲದಲ್ಲಿ ಇಲಿಗಳ ಹಾವಳಿ ಹೆಚ್ಚಾಗುವುದು ಸಾಮಾನ್ಯ, ಇಲಿಗಳು ಆಹಾರ ಪದಾರ್ಥಗಳನ್ನು ಹುಡುಕಿಕೊಂಡು ಬೆಚ್ಚಗಿನ ಮತ್ತು ಶುಷ್ಕ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತವೆ. ಹಬ್ಬ ಹರಿದಿನಗಳಲ್ಲಿ ಕಸದ ತೊಟ್ಟಿಗಳನ್ನು ಸಂಗ್ರಹಿಸದಿರುವುದು. ಹಾಗೂ ಕೆಲವೊಮ್ಮೆ ಡಸ್ಟ್‌ಬಿನ್‌ಗಳು ಸಂಪೂರ್ಣ ಭರ್ತಿಯಾದ ಬಳಿಕ ಜನರು ತಮ್ಮ ಕಸವನ್ನು ಅದರ ಬದಿಯಲ್ಲಿ ಇಡುತ್ತಾರೆ ಇದು ಕೂಡ ಕಾರಣವಾಗುತ್ತದೆ ಎಂದು ಹೇಳಿದರು.

  • ಹೋಟೆಲಿನಲ್ಲಿ ಸ್ಕ್ರೂಡ್ರೈವರ್‌ನಿಂದ 41 ಬಾರಿ ಇರಿದು ಪತ್ನಿಯ ಹತ್ಯೆಗೈದ ಪತಿ

    ಹೋಟೆಲಿನಲ್ಲಿ ಸ್ಕ್ರೂಡ್ರೈವರ್‌ನಿಂದ 41 ಬಾರಿ ಇರಿದು ಪತ್ನಿಯ ಹತ್ಯೆಗೈದ ಪತಿ

    ಅಂಕಾರಾ: ಬ್ರಿಟನ್ (Britain) ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ 41 ಬಾರಿ ಸ್ಕ್ರೂಡ್ರೈವರ್‍ನಿಂದ ಇರಿದು ಹತ್ಯೆಗೈದ ಘಟನೆ ಟರ್ಕಿಯ (Turkey) ಇಸ್ತಾಂಬುಲ್‍ನ ಹೋಟೆಲ್‍ನಲ್ಲಿ ನಡೆದಿದೆ.

    ಆರೋಪಿಯನ್ನು ಬಂಧಿಸಲಾಗಿದ್ದು, ಅಹ್ಮತ್ ಯಾಸಿನ್ (28) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಪತ್ನಿಗೆ ಸ್ಕ್ರೂಡ್ರೈವರ್ ಇರಿದು ಹತ್ಯೆಗೈದಿರುವುದು ದೃಢವಾಗಿದೆ. ಮಹಿಳೆಯ ಕಿರುಚಾಟ ಕೇಳಿ ಹೋಟೆಲ್ ಸಿಬ್ಬಂದಿ ಕೊಠಡಿಗೆ ಪ್ರವೇಶಿಸಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಇದನ್ನೂ ಓದಿ: ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ – ಮಗಳ ಮನೆಗೆ ತೆರಳುತ್ತಿದ್ದ ಮಹಿಳೆ ದಾರುಣ ಸಾವು

    ದಂಪತಿ ಇಂಗ್ಲೆಂಡ್‍ನಿಂದ ಬಂದು ಹೊಟೆಲ್‍ನಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ. ಡ್ರಗ್ಸ್ ಸೇವಿಸಿದ ಬಳಿಕ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಹತ್ಯೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಮಹಿಳೆಯ ಹತ್ಯೆಯ ಬಳಿಕ ಆರೋಪಿ ಸ್ಕ್ರೂಡ್ರೈವರ್‍ನ್ನು ಎಸೆದಿದ್ದು, ಸಾಕ್ಷ ನಾಶಕ್ಕೆ ಯತ್ನಿಸಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಸೈನಿಕನಿಗೆ ಗುಂಡಿಕ್ಕಿ ಹತ್ಯೆ – ಆರೋಪಿಗಳನ್ನು ಬಡಿದು ಕೊಂದ ಗ್ರಾಮಸ್ಥರು