Tag: Brindavana Garden

  • 2 ತಿಂಗಳು ಬೃಂದಾವನದಲ್ಲಿ ಪ್ರತ್ಯಕ್ಷವಾಗುತ್ತಿದ್ದ ಚಿರತೆ ಬೋನಿಗೆ

    2 ತಿಂಗಳು ಬೃಂದಾವನದಲ್ಲಿ ಪ್ರತ್ಯಕ್ಷವಾಗುತ್ತಿದ್ದ ಚಿರತೆ ಬೋನಿಗೆ

    ಮಂಡ್ಯ: ಕಳೆದ 2 ತಿಂಗಳಿನಿಂದ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್‌ಎಸ್ ಡ್ಯಾಂ (KRS Dam) ಹಾಗೂ ಬೃಂದಾವನದ (Brindavana Garden) ಸುತ್ತಮುತ್ತ ಪದೇ ಪದೇ ಪ್ರತ್ಯಕ್ಷವಾಗುವ ಮೂಲಕ ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಚಿರತೆ (Leopard) ಕೊನೆಗೂ ಬೋನಿಗೆ ಬಿದ್ದಿದೆ. ಇದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

    ಕೆಆರ್‌ಎಸ್ ಡ್ಯಾಂ ಹಾಗೂ ಬೃಂದಾವನ ವ್ಯಾಪ್ತಿಯಲ್ಲಿ ಕಳೆದ 2 ತಿಂಗಳಿನಿಂದ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಇಲ್ಲಿನ ಜನರು, ಅಧಿಕಾರಿಗಳು ಹಾಗೂ ಪ್ರವಾಸಿಗರು ಆತಂಕಕ್ಕೆ ಒಳಾಗಿದ್ದರು. ಚಿರತೆಯಿಂದ ಯಾವುದೇ ತೊಂದರೆಯಾಗಬಾರದೆಂಬ ಕಾರಣಕ್ಕೆ ಕಾವೇರಿ ನೀರಾವರಿ ನಿಗಮ ಬೃಂದಾವನ ಗಾರ್ಡನ್‌ಗೆ ಪ್ರವಾಸಿಗರನ್ನು ನಿರ್ಬಂಧಿಸಿತ್ತು. ಇದಲ್ಲದೇ ಕೆಆರ್‌ಎಸ್ ಗ್ರಾಮದ ಜನರು ಜಮೀನಿಗೆ ತೆರಳಲು ಭಯ ಪಡುತ್ತಿದ್ದರು. ಇದನ್ನೂ ಓದಿ: ಟ್ರಕ್‍ನಲ್ಲಿ ಅಡಗಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಡ್ಯಾಂ ಹಾಗೂ ಬೃಂದಾವನ ವ್ಯಾಪ್ತಿಯಲ್ಲಿ 4 ಬೋನ್ ಇರಿಸಿ, ಬೋನ್‌ನಲ್ಲಿ ನಾಯಿಯನ್ನು ಕಟ್ಟಿ ಹಾಕಿದ್ದರು. ಕಳೆದ ರಾತ್ರಿ ಬೋನ್‌ನಲ್ಲಿ ಇದ್ದ ನಾಯಿಯನ್ನು ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದಿದೆ.

    ಚಿರತೆ ಬೋನಿಗೆ ಬಿದ್ದಿರುವ ಹಿನ್ನೆಲೆ ಜನರು, ಅಧಿಕಾರಿಗಳು ಹಾಗೂ ಪ್ರವಾಸಿಗರು ನಿಟ್ಟುಸಿರುವ ಬಿಡುವಂತಾಗಿದೆ. ಆದರೆ ಈ ಭಾಗದಲ್ಲಿ ಇನ್ನೊಂದು ಚಿರತೆ ಇರುವ ಅನುಮಾನವನ್ನು ಸ್ಥಳೀಯರು ವ್ಯಕ್ತಡಪಸಿದ್ದು, ಬೋನ್ ಅನ್ನು ಮತ್ತೆ ಇಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಿನಿ ಬಸ್, ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ – 12 ವಿದ್ಯಾರ್ಥಿಗಳಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ – ಬೋನ್‍ನಲ್ಲಿ ನಾಯಿಯನ್ನು ಕಟ್ಟಿ ಹಾಕಿ ಕಾವಲು

    ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ – ಬೋನ್‍ನಲ್ಲಿ ನಾಯಿಯನ್ನು ಕಟ್ಟಿ ಹಾಕಿ ಕಾವಲು

    ಮಂಡ್ಯ: ಕೆಆರ್‌ಎಸ್‌ (KRS)  ಡ್ಯಾಂ (Dam) ಬಳಿ ಪದೇ ಪದೇ ಚಿರತೆ (Leopard) ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆ ವಿಶ್ವ ಪ್ರಸಿದ್ಧ ಬೃಂದಾವನಕ್ಕೆ (Brindavana) ಪ್ರವಾಸಿಗರ ನಿರ್ಬಂಧ ಮುಂದುವರಿದಿದೆ.

     

    ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಲ್ಲಿನ ಸಿಬ್ಬಂದಿ ಡ್ಯಾಂನ ಮೆಟ್ಟಿಲು ಬಳಿ ಗಿಡದ ಗಂಟೆಗಳನ್ನು ಕೀಳುವ ಸಂದರ್ಭದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಅಲ್ಲಿಂದ ಬಂದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನಿನ್ನೆ ಒಂದು ದಿನ ತಾತ್ಕಾಲಿಕವಾಗಿ ಚಿರತೆಯ ಭಯದಿಂದ ಪ್ರವಾಸಿಗರಿಗೆ ಬೃಂದಾವನಕ್ಕೆ ನಿರ್ಬಂಧ ಏರಿದ್ರು. ಆದ್ರೆ ಕಳೆದ ರಾತ್ರಿಯೂ ಅದೇ ಚಿರತೆ ಡ್ಯಾಂನ ಪಕ್ಕದಲ್ಲಿ ಓಡಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಇಂದು ಸಹ ಪ್ರವಾಸಿಗರಿಗೆ ನಿರ್ಬಂಧ ಏರಲಾಗಿದೆ. ಭಾನುವಾರ ಪ್ರವಾಸಿಗರಿಂದ ತುಂಬಿ-ತುಳಕಬೇಕಿದ್ದ ಬೃಂದಾವನ, ಪ್ರವಾಸಿಗರೇ ಇಲ್ಲದೇ ಬಣಗುಡುತ್ತಿದೆ. ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ಸೋಮಣ್ಣ

    ಒಂದು ಕಡೆ ಪ್ರವಾಸಿಗರು ಇಲ್ಲದೇ ಬೃಂದಾವನ ಬಣಗುಡುತ್ತಿದ್ರೆ, ಅತ್ತ ಆಪರೇಷನ್ ಲಿಪರ್ಡ್‍ಗೆ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಮುಂದಾಗಿದೆ. ನಿನ್ನೆ ಕಾಣಿಸಿಕೊಂಡಿರುವ ಸ್ಥಳದಲ್ಲೇ ಬೋನ್ ಇರಿಸಿ ಬೋನ್‍ನಲ್ಲಿ ನಾಯಿಯನ್ನು (Dog) ಕಟ್ಟಿ ಹಾಕಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಈ ಭಾಗದಲ್ಲಿ ಇದೇ ಮೊದಲು ಅಲ್ಲ. ಈ ಹಿಂದೆ ಎರಡು ಬಾರಿ ಚಿರತೆ ಕಾಣಿಸಿಕೊಂಡಿದ್ದು, ಒಂದು ಬಾರಿ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿರುವ ಕಾರಣ ಮುಂದಿನ ಆದೇಶದ ವರೆಗೆ ಪ್ರವಾಸಿಗರ ಹಿತದೃಷ್ಟಿಯಿಂದ ಬೃಂದಾವನಕ್ಕೆ ನಿಷೇಧ ಏರಲಾಗಿದೆ. ಇದನ್ನೂ ಓದಿ: RSSನವರು ಹೆಚ್ಚು ಮಕ್ಕಳನ್ನು ಹುಟ್ಟಿಸಲಿ ನಾವು ಹುಟ್ಟಿಸಲ್ಲ: ಅಸಾದುದ್ದೀನ್ ಓವೈಸಿ

    Live Tv
    [brid partner=56869869 player=32851 video=960834 autoplay=true]