Tag: Brindavan

  • ಮಂಡ್ಯ | ಐದು ದಿನಗಳ ಕಾವೇರಿ ಆರತಿಗೆ ತೆರೆ

    ಮಂಡ್ಯ | ಐದು ದಿನಗಳ ಕಾವೇರಿ ಆರತಿಗೆ ತೆರೆ

    ಮಂಡ್ಯ: ಕನ್ನಡ ನಾಡಿ ಜೀವ ನದಿ ಕಾವೇರಿ ಮಾತೆಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಸಂಕೇತಿಕವಾಗಿ ಐದು ದಿನಗಳ ಕಾಲ ಜರುಗಿದ ಕಾವೇರಿ ಆರತಿಗೆ (Cauvery Aarti) ಇಂದು ರಾತ್ರಿ ಯಶಸ್ವಿಯಾಗಿ ತೆರೆಬಿದ್ದಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಐದು ದಿನಗಳಲ್ಲಿ ಸಾವಿರಾರು ಜನರು ಸಾಕ್ಷಿ ಆದರು.

    ಸಕ್ಕರೆನಾಡು ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ (KRS) ಡ್ಯಾಂನ ಬೃಂದಾವನ ಐದು ದಿನಗಳ ಕಾವೇರಿ ಆರತಿಯಿಂದ ಮೇಳೈಸಿತು. ಹಳೆ ಮೈಸೂರು ಭಾಗದ ಜನರಿಗೆ ನೀರುಣಿಸುವ ಕಾವೇರಿ ಮಾತೆಗೆ ನಮನ ಸಲ್ಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಕಾವೇರಿ ಆರತಿ ನೇರವೇರಿಸಬೇಕೆಂಬ ಕನಸು ಕಂಡಿದ್ದರು. ಅದರಂತೆ ಕೆಆರ್‌ಎಸ್ ಡ್ಯಾಂನ ಬೃಂದಾವನವನ್ನು ಸಾಂಕೇತಿಕವಾಗಿ ಕಳೆದ ಐದು ದಿನಗಳ ಕಾಲ ಕಾವೇರಿ ಆರತಿ ಕಾಲ ಜರುಗಿತು. ಈ ಆರತಿಗೆ ಕಳೆದ ಶುಕ್ರವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಗೋಧೂಳಿ ಸಮಯದಲ್ಲಿ ಚಾಲನೆ ನೀಡುವ ಮೂಲಕ ಹೊಸ ಮುನ್ನುಡಿ ಬರೆದರು. ಇದನ್ನೂ ಓದಿ: ನಾಲ್ಕು ದಿನ ಕಳೆದರೂ ಪತ್ತೆಯಾಗದ 4ರ ಮಗು – ಕುಟುಂಬಸ್ಥರ ಭೇಟಿಯಾದ ಸಚಿವ ಶಿವರಾಜ ತಂಗಡಗಿ

    ಬಳಿಕ ಐದು ದಿನಗಳ ಕಾಲ ಬೃಂದಾವನದಲ್ಲಿ ನಡೆದಿದ್ದು ಕಾವೇರಿ ಮಾತೆಗೆ ನಮನ ಸಲ್ಲಿಸುವ ಕಾವೇರಿ ಆರತಿ. ಐದು ದಿನಗಳಲ್ಲೂ ಮೊದಲಿಗೆ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಅರ್ಚಕರ ತಂಡ ವಾತಾಪಿ ಗಣಪತಿಂ ಭಜೆ ಮಂಗಳವಾದ್ಯದಿಂದ ಕಾವೇರಿ ಆರತಿಯನ್ನು ಪ್ರಾರಂಭಿಸಿದರು. ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ ಮಾಡಿ ಬಳಿಕ ಸಂಕಲ್ಪ ಮಾಡಲಾಯಿತು. ನಂತರ ಕಾವೇರಿ ಆರತಿಯೊಂದಿಗೆ ಸಂಪನ್ನ ಮಾಡಲಾಯಿತು. ಇದಾದ ನಂತರ ವಾರಣಾಸಿಯ ವೈದಿಕ ತಂಡದಿಂದ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ನೆರವೇರಿಸಲಾಯಿತು. ಇದನ್ನೂ ಓದಿ: ಚೆನ್ನೈನಲ್ಲಿ ಕಮಾನು ಕುಸಿದು 9 ಮಂದಿ ಸಾವು – 10ಕ್ಕೂ ಹೆಚ್ಚು ಮಂದಿಗೆ ಗಾಯ

    ಕೆಆರ್‌ಎಸ್‌ನ ಬೃಂದಾವನದಲ್ಲಿ ನಡೆದ ಕಾವೇರಿ ಆರತಿಗೆ ಹಲವು ಮಠಗಳ ಸ್ವಾಮೀಜಿಗಳು, ಸಚಿವರು, ಶಾಸಕರು, ಅಧಿಕಾರಿಗಳು, ಸಾವಿರಾರು ಸಂಖ್ಯೆಯ ಜನರು ಸಾಕ್ಷಿಯಾದರು. ಕಾವೇರಿ ಆರತಿಯ ಅಂತಿಮ ದಿನದಂದು ವಿನಯ್ ಗುರೂಜಿ ಸಹ ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಅವರು, ಆಸ್ತಿಕರು ಹಾಗೂ ನಾಸ್ತಿಕರು ಎಲ್ಲರೂ ಸಹ ಕಾವೇರಿಗೆ ನಮನ ಸಲ್ಲಿಸುವುದು ಅವರ ಕರ್ತ್ಯವಾಗಿದೆ. ಕಾವೇರಿಯಿಂದ ಜನರು ಸುಭಿಕ್ಷವಾಗಿದೆ. ರಾಜ್ಯ ಸರ್ಕಾರ ಕಾವೇರಿ ಆರತಿ ಮಾಡುತ್ತಿರುವುದು ತುಂಬ ಒಳ್ಳೆಯ ಕೆಲಸ ಎಂದರು. ಇದನ್ನೂ ಓದಿ: ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಿ ಪೂಜಿಸಿ: ನಾರಾಯಣ ಭಾಂಡಗೆ

  • ಒಂದೇ ಬೃಂದಾವನಕ್ಕೆ ಇಬ್ಬರು ಯತಿಗಳ ಹೆಸರು: ಭಕ್ತರಿಂದ ಪರ-ವಿರೋಧ ವ್ಯಕ್ತ

    ಒಂದೇ ಬೃಂದಾವನಕ್ಕೆ ಇಬ್ಬರು ಯತಿಗಳ ಹೆಸರು: ಭಕ್ತರಿಂದ ಪರ-ವಿರೋಧ ವ್ಯಕ್ತ

    ಕೊಪ್ಪಳ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮ ಸಮೀಪದ ನವಬೃಂದಾವನ ಗಡ್ಡೆಯಲ್ಲಿ ಮೂಲ ಬೃಂದಾವನಕ್ಕೆ ಸಂಬಂಧಪಟ್ಟಂತೆ ಎರಡು ಮಠಗಳ ನಡುವೆ ಮತ್ತೊಂದು ವಿವಾದ ಉಂಟಾಗಿದೆ. ಈ ಬಗ್ಗೆ ಭಕ್ತರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ.

    ವಿಜಯನಗರ ಕಾಲದ ಪೂರ್ವ ಇತಿಹಾಸವನ್ನು ಹೊಂದಿರುವ ನವಬೃಂದಾವನ ಗಡ್ಡೆಯಲ್ಲಿ ಶ್ರೇಷ್ಠ ಯತಿಗಳ ಬೃಂದಾವನಗಳನ್ನು ನಿರ್ಮಾಣ ಮಾಡಲಾಗಿದೆ. ಹಂತ-ಹಂತವಾಗಿ ಕಾಲಘಟ್ಟಗಳಿಗೆ ಅನುಗುಣವಾಗಿ ಆಗಮಿಸಿದ ಒಟ್ಟು 9 ಯತಿಗಳ ಬೃಂದಾವನಗಳನ್ನು ತುಂಗಭದ್ರಾ ನಡುಗಡ್ಡೆಯಲ್ಲಿ ನಿರ್ಮಾಣಗೊಂಡಿರುವುದನ್ನು ಇಲ್ಲಿ ಕಾಣಬಹುದು. ಇದನ್ನೂ ಓದಿ: ಗಲ್ಫ್ ರಾಷ್ಟ್ರಗಳು ಪ್ರವಾದಿ ವಿವಾದದಲ್ಲಿ ಭಾರತದ ನಿಲುವನ್ನು ಅರ್ಥಮಾಡಿಕೊಂಡಿವೆ: ವಿದೇಶಾಂಗ ಕಾರ್ಯದರ್ಶಿ

    ಇಂತಹ ಇತಿಹಾಸ ಇರುವ ನವಬೃಂದಾವನ ಗಡ್ಡೆಯ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸುಮಾರು ವರ್ಷಗಳಿಂದ ರಾಯರಮಠ ಮತ್ತು ಉತ್ತರಾಧಿಮಠಗಳ ನಡುವೆ ಗಲಾಟೆ ನಡೆಯುತ್ತಿದೆ. ಈ ವಿವಾದ ಇನ್ನೂ ಇತ್ಯರ್ಥವನ್ನು ಪಡೆದುಕೊಂಡಿಲ್ಲ. ಇದರ ನಡುವೆಯೇ ಈಗ ಮತ್ತೊಂದು ವಿವಾದ ಎರಡು ಮಠಗಳ ನಡುವೆ ಇದ್ದು, ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ.

    ನವಬೃಂದಾವನ ಗಡ್ಡೆಯಲ್ಲಿ ಇರುವ ಒಂದೇ ಬೃಂದಾವನಕ್ಕೆ ಇಬ್ಬರು ಯತಿಗಳ ಹೆಸರುಗಳನ್ನು ಕರೆಯುವ ಮೂಲಕ ವಿವಾದ ಹುಟ್ಟು ಹಾಕಲಾಗಿದೆ. ಉತ್ತರಾಧಿ ಮಠದವರು ರಘುವರ್ಯ ತೀರ್ಥರ ಬೃಂದಾವನ ಎಂದು ಕರೆದರೆ, ಅದೇ ಬೃಂದಾವನಕ್ಕೆ ರಾಯರ ಮಠದವರು ಜಯತೀರ್ಥರ ಬೃಂದಾವನ ಎಂದು ಕರೆಯುತ್ತಿದ್ದಾರೆ. ಇದು ಭಕ್ತರಲ್ಲಿ ಸಾಕಷ್ಟು ಗೊಂದಲವನ್ನು ಉಂಟುಮಾಡಿದೆ.

    ಪೂಜೆಯಲ್ಲಿ ಗೊಂದಲ
    ನವಬೃಂದಾವನ ಗಡ್ಡೆಯಲ್ಲಿ ಇರುವ 9 ಯತಿಗಳ ಬೃಂದಾವನಗಳಿಗೂ ಅವರ ಬೃಂದಾವನ ಸ್ಥಾನಗೊಂಡಿರುವ ಸಮಯ, ನಕ್ಷತ್ರಕ್ಕೆ ಅನುಗುಣವಾಗಿ ಆರಾಧನೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ರಘುವರ್ಯತೀರ್ಥರ, ಜಯತೀರ್ಥರ ಆರಾಧನೆ ಮಹೋತ್ಸವವನ್ನು ನಡೆಸಲಾಗುತ್ತಿದೆ. ಕಳೆದ ಜೂನ್ 16ರಿಂದ ಮೂರು ದಿನಗಳ ಕಾಲ ಉತ್ತರಾಧಿ ಮಠದ ನೇತೃತ್ವದಲ್ಲಿ ರಘುವರ್ಯ ತೀರ್ಥರ ಆರಾಧನೆ ಮಹೋತ್ಸವವನ್ನು ಹಮ್ಮಿಕೊಂಡು ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

    ಆರಾಧನೆ ಮಹೋತ್ಸವ ಮುಗಿದ ಮಾರನೇ ದಿನ ಅಂದರೆ ಜೂನ್ 19 ರಂದು ಅದೇ ಬೃಂದಾವನಕ್ಕೆ ರಾಯರ ಮಠದವರು ಜಯತೀರ್ಥರ ಅಷ್ಟೋತ್ತರ ಪಾರಾಯಣ ಎಂದು ವಿಶೇಷ ಧಾರ್ಮಿಕ ಪೂಜೆಗಳನ್ನು ಸಲ್ಲಿಸಿ, ಸಾಮೂಹಿಕ ಭಜನೆ ಕಾರ್ಯಕ್ರಮಗಳನ್ನು ನಡೆಸಿದರು. ಅಷ್ಟೇ ಅಲ್ಲದೆ ಮುಂದಿನ ತಿಂಗಳು ರಾಯರ ಮಠದಿಂದ ಜಯತೀರ್ಥರ ಆರಾಧನೆ ಮಹೋತ್ಸವವನ್ನು ನವ ಬೃಂದಾವನ ಗಡ್ಡೆಯಲ್ಲಿ ನಡೆಸಲು ಅದ್ದೂರಿ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಒಂದೇ ಬೃಂದಾವನಕ್ಕೆ ಇಬ್ಬರು ಯತಿಗಳ ಹೆಸರಲ್ಲಿ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಎರಡು ಮಠಗಳ ಭಕ್ತರ ನಡುವೆ ಗೊಂದಲಗಳು ಉಂಟಾಗುತ್ತಿವೆ.

    ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
    ಮೂಲ ಬೃಂದಾವನಕ್ಕೆ ಸಂಬಂಧಪಟ್ಟಂತೆ ಎರಡು ಮಠಗಳ ಭಕ್ತರು ಫೇಸ್‍ಬುಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ನಡೆಸುತ್ತಿದ್ದಾರೆ. ರಾಯರಮಠದವರು ಜಯತೀರ್ಥರ ಮೂಲ ಬೃಂದಾವನ ಆನೆಗೊಂದಿಯಲ್ಲಿ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಕೆಲವರು ಪರವಾಗಿ ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಜಯತೀರ್ಥರ ಬೃಂದಾನವ ಇರುವುದು ಆನೆಗೊಂದಿಯಲ್ಲಿ ಅಲ್ಲ, ಕಲಬುರಗಿಯ ಮಳಖೇಡದಲ್ಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧಗಳು ಚರ್ಚೆಯಾಗುತ್ತಿದ್ದು, ಎರಡು ಮಠಗಳ ಭಕ್ತರು ಮುಸುಕಿನ ಗುದ್ದಾಟವನ್ನು ನಡೆಸಿದ್ದಾರೆ.

    ರಾಯರ ಯತಿಗಳ ಬೃಂದಾನಗಳಿವೆ
    ಇತಿಹಾಸವನ್ನು ಹೊಂದಿರುವ ನವಬೃಂದಾವನ ಗಡ್ಡೆಯಲ್ಲಿ ವಿಜಯನಗರ ಕಾಲದ ಕೃಷ್ಣದೇವರಾಯ ಅರಸರ ಗುರುಗಳು ಆಗಿರುವ ವ್ಯಾಸರಾಜ ತೀರ್ಥರು ಬೃಂದಾವನ ಹಾಗೂ ಕಾಲಘಟ್ಟಗಳಿಗೆ ಅನುಗುಣವಾಗಿ ಆಗಮಿಸಿದ ಪದ್ಮನಾಭ ತೀರ್ಥರು, ಕವೀಂದ್ರ ತೀರ್ಥರು, ವಾಗೀಶ್ ತೀರ್ಥರು, ಶ್ರೀನಿವಾಸ್ ತೀರ್ಥರು, ರಾಮ ತೀರ್ಥರು, ಸುಧೀಂದ್ರ ತೀರ್ಥರು ಮತ್ತು ಗೋವಿಂದ್ ಒಡೆಯರ ಮೂಲ ಬೃಂದಾವನಗಳನ್ನು ಇಲ್ಲಿ ಕಾಣಬಹುದು. ಆದರೆ ಒಂದೇ ಬೃಂದಾವನಕ್ಕೆ ರಘುವರ್ಯ ತೀರ್ಥರು ಮತ್ತು ಜಯತೀರ್ಥರ ಬೃಂದಾವನ ಇರುವುದು ಈಗ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಮಹಿಳಾ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಇನ್ಸ್‌ಪೆಕ್ಟರ್

    ಮಳಖೇಡದಲ್ಲಿ ಎಂದು ವಾದ
    ರಾಯರ ಮಠದವರು ಜಯತೀರ್ಥರು ಬೃಂದಾವನ ಆನೆಗೊಂದಿಯಲ್ಲಿ ನವಬೃಂದಾವನ ಗಡ್ಡೆಯಲ್ಲಿ ಇದೆ ಎಂದು ವಾದ ಮಾಡುತ್ತಿದ್ದಾರೆ. ಅದನ್ನು ಒಪ್ಪದ ಉತ್ತರಾಧಿಮಠದವರು ಜಯತೀರ್ಥರ ಮೂಲ ಬೃಂದಾವನ ಕಲಬುರಗಿಯ ಮಳಖೇಡದಲ್ಲಿದೆ. ಅಲ್ಲಿನ ಭಕ್ತರು ಸುಮಾರು ವರ್ಷಗಳಿಂದ ಜಯತೀರ್ಥರ ಬೃಂದಾವನಕ್ಕೆ ಪೂಜೆಯನ್ನು ಸಲ್ಲಿಸಿ ಬರುತ್ತಿದ್ದಾರೆ.

    ಆನೆಗೊಂದಿಯ ನವಬೃಂದಾವನ ಗಡ್ಡೆಯಲ್ಲಿ ಇರುವುದು ರಘುವರ್ಯ ತೀರ್ಥರ ಬೃಂದಾವನ ಎನ್ನುವುದು ಉತ್ತರಾಧಿ ಮಠದವರ ವಾದವಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಕಲಬುರಗಿ ಹಾಗೂ ಮಳಖೇಡನಲ್ಲಿ ಎರಡು ಮಠಗಳಿಂದ ಪರ-ವಿರೋಧವಾಗಿ ಪ್ರತಿಭಟನೆಗಳು ನಡೆಯುತ್ತಿವೆ.

    Live Tv

  • ಬೃಂದಾವನದಲ್ಲಿ ಅನುಮತಿ ಇಲ್ಲದೇ ರಾತ್ರಿ ಶೂಟಿಂಗ್ – ಯೂಟ್ಯೂಬ್ ಅಡ್ಮಿನ್ ಅರೆಸ್ಟ್

    ಬೃಂದಾವನದಲ್ಲಿ ಅನುಮತಿ ಇಲ್ಲದೇ ರಾತ್ರಿ ಶೂಟಿಂಗ್ – ಯೂಟ್ಯೂಬ್ ಅಡ್ಮಿನ್ ಅರೆಸ್ಟ್

    ನವದೆಹಲಿ: ಒಂದು ವಾರದ ಹಿಂದೆ ಬೃಂದಾವನದಲ್ಲಿ ರಾತ್ರಿಯ ಸಮಯದಲ್ಲಿ ಚಿತ್ರೀಕರಣಕ್ಕೆ ನಿರ್ಬಂಧಿಸಲಾಗಿದ್ದು, ಅದನ್ನು ಮೀರಿ ಶೂಟಿಂಗ್ ಮಾಡಿದ ಯೂಟ್ಯೂಬ್ ಚಾನೆಲ್ ನಿರ್ವಾಹಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಬೃಂದಾವನದ ಧಾರ್ಮಿಕ ತಾಣವಾದ ‘ನಿಧಿವನ್ ರಾಜ್’ ಒಳಗೆ ಯಾರಿಗೂ ವೀಡಿಯೋ ಮಾಡಲು ಅವಕಾಶವಿಲ್ಲ. ಅದರೂ ಸಹ ಗೌರವ್‍ಜೋನ್ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಗೌರವ್ ಶರ್ಮಾ ವೀಡಿಯೋವನ್ನು ಶೂಟ್ ಮಾಡಲಾಗಿದೆ. ಈ ಹಿನ್ನೆಲೆ ಶರ್ಮಾ ಅವರನ್ನು ದೆಹಲಿಯ ಅವರ ನಿವಾಸದಲ್ಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬೃಂದಾವನದ ‘ನಿಧಿವನ್ ರಾಜ್’ ಅಲ್ಲಿ ರಾತ್ರಿಯ ಸಮಯದಲ್ಲಿ ರಾಧೆ ಮತ್ತು ಭಗವಾನ್ ಶ್ರೀಕೃಷ್ಣ ‘ರಾಸ ಲೀಲಾ’ ಆಡುವ ಪವಿತ್ರ ಸ್ಥಳವಾಗಿದೆ. ಅದಕ್ಕೆ ಆ ಸಮಯದಲ್ಲಿ ಯಾರನ್ನು ಸ್ಥಳಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಆದರೆ ಶರ್ಮಾ ಅವರು ಆ ಜಾಗವನ್ನು ಅಪವಿತ್ರ ಮಾಡಿದಲ್ಲದೇ ನವೆಂಬರ್ 9 ರಂದು ಯೂಟ್ಯೂಬ್ ನಲ್ಲಿ ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಾರೆ. ಆದರೆ ಚಿತ್ರೀಕರಣವನ್ನು ಪುರೋಹಿತರು ವಿರೋಧಿಸಿದ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಡಿ, ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷ ವಿಸ್ತರಿಸಿದ ಕೇಂದ್ರ

    ‘ನಿಧಿವನ್ ರಾಜ್’ ಅರ್ಚಕ ರೋಹಿತ್ ಗೋಸ್ವಾಮಿ ಅವರ ದೂರಿನ ಮೇರೆಗೆ ಬೃಂದಾವನ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295 ಎ ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ರ ಅಡಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ಶರ್ಮಾ ಅವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆತನ ಜೊತೆಗಿದ್ದವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

    ನವೆಂಬರ್ 6 ರ ರಾತ್ರಿ ಶೂಟಿಂಗ್ ಮಾಡಿದ್ದು, ಈ ವೇಳೆ ಶರ್ಮಾ ಅವರ ಸೋದರಸಂಬಂಧಿ ಪ್ರಶಾಂತ್, ಸ್ನೇಹಿತರಾದ ಮೋಹಿತ್ ಮತ್ತು ಅಭಿಷೇಕ್ ಅವರೊಂದಿಗೆ ‘ಪವಿತ್ರ’ ಸ್ಥಳದಲ್ಲಿ ವೀಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಹಿಂದೆಯು ಶರ್ಮಾ ಅವರು, ಇದೇ ವರ್ಷದ ಮೇ ತಿಂಗಳಲ್ಲಿ ನಾಯಿ ಡಾಲರ್ ಅನ್ನು ಬಲೂನ್‍ಗಳಿಗೆ ಕಟ್ಟಿ ಗಾಳಿಯಲ್ಲಿ ತೇಲುವಂತೆ ವೀಡಿಯೋವನ್ನು ಮಾಡಿ ತಮ್ಮ ಚಾನೆಲ್‍ನಲ್ಲಿ ಪೋಸ್ಟ್ ಮಾಡಿದರು. ಈ ಪರಿಣಾಮ ಅವರನ್ನು ಬಂಧಿಸಲಾಗಿತ್ತು. ನಂತರ ವೀಡಿಯೋವನ್ನು ಡಿಲೀಟ್ ಮಾಡಿ ತನ್ನ ಕೃತ್ಯಕ್ಕೆ ಕ್ಷಮೆ ಯಾಚಿಸಿದ್ದರು. ಇದನ್ನೂ ಓದಿ: ಇಂದಿನಿಂದ ಶಬರಿಮಲೆ ಯಾತ್ರೆ ಆರಂಭ – 2 ಡೋಸ್ ಲಸಿಕೆ ಕಡ್ಡಾಯ