Tag: Brinda Karat

  • ಜಾತ್ಯಾತೀತತೆ ಯುರೋಪಿಯನ್ ಕಾನ್ಸೆಪ್ಟ್: ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ ರವಿ

    ಜಾತ್ಯಾತೀತತೆ ಯುರೋಪಿಯನ್ ಕಾನ್ಸೆಪ್ಟ್: ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ ರವಿ

    ಚೆನ್ನೈ: ಜಾತ್ಯಾತೀತತೆ ಎನ್ನುವುದು ಯುರೋಪಿಯನ್ ದೇಶದ ಪರಿಕಲ್ಪನೆಯಾಗಿದೆ. ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ (Governer R N Ravi) ಹೇಳಿದ್ದಾರೆ. ಸದ್ಯ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

    ಕನ್ಯಾಕುಮಾರಿಯ (Kanyakumari) ತಿರುವಟ್ಟಾರ್‌ನಲ್ಲಿ ನಡೆದ ಹಿಂದೂ ಧರ್ಮದ ವಿದ್ಯಾಪೀಠಂನ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಜಾತ್ಯಾತೀತತೆ (Secularism) ಎನ್ನುವುದು ಪಶ್ಚಿಮದ ದೂರದ ದೇಶದಿಂದ ಬಂದ ಪರಿಕಲ್ಪನೆಯಾಗಿದ್ದು, ಜಾತ್ಯಾತೀತತೆಗೆ ಭಾರತದಲ್ಲಿ ನೆಲೆಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: MUDA Case| ಮಂಗಳವಾರ ಸಿಎಂಗೆ ಬಿಗ್‌ ಡೇ – ತೀರ್ಪು ಬೆನ್ನಲ್ಲೇ ನಡೆಯಲಿದೆ CLP ಸಭೆ

    ಯೂರೋಪಿನಲ್ಲಿ (Europe) ಚರ್ಚ್ ಹಾಗೂ ರಾಜರ ನಡುವೆ ಜಗಳ ಉಂಟಾದಾಗ ಜಾತ್ಯಾತೀತತೆ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದೆ. ಭಾರತದಲ್ಲಿ ಧರ್ಮ ಎಂಬ ಪರಿಕಲ್ಪನೆ ಇರಬೇಕಾದರೆ ಜಾತ್ಯಾತೀತತೆ ಅಗತ್ಯವಿಲ್ಲ. ಅದು ಯೂರೋಪಿನಲ್ಲಿಯೇ ಇರಲಿ. ಈ ದೇಶದ ಜನರ ಮೇಲೆ ಬಹಳಷ್ಟು ವಂಚನೆ ಮಾಡಲಾಗಿದೆ. ಅದರಲ್ಲಿ ಈ ಜಾತ್ಯಾತೀತತೆಯು ಒಂದು. ಇದು ಜನರಿಗೆ ತಪ್ಪು ಕಲ್ಪನೆಯನ್ನು ನೀಡುತ್ತಿದೆ ಎಂದರು.

    ಈ ಹೇಳಿಕೆ ಬೆನ್ನಲ್ಲೇ ವಿಪಕ್ಷಗಳಿಂದ ಭಾರೀ ವಿವಾದ ವ್ಯಕ್ತವಾಗಿದೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ (Communist Party Of  India) ನಾಯಕಿ ಬೃಂದಾ ಕಾರಟ್ (Brinda Karat) ಮಾತನಾಡಿ, ರಾಜ್ಯಪಾಲರಿಗೆ ಸಂವಿಧಾನದ ಮೌಲ್ಯ ಏನು ಎಂದು ತಿಳಿದಿಲ್ಲ. ಸಂವಿಧಾನವು ವಿದೇಶಿ ಪರಿಕಲ್ಪನೆ ಎಂದು ಹೇಳುತ್ತಾರೆ. ಸಂವಿಧಾನದಲ್ಲಿ ನಂಬಿಕೆಯಿಲ್ಲದವರು ಇದನ್ನೆಲ್ಲ ಪ್ರಶ್ನಿಸುತ್ತಾ ರಾಜ್ಯಪಾಲರ ಸ್ಥಾನದಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.

    ತಮಿಳುನಾಡು ಕಾಂಗ್ರೆಸ್ ಸಂಸದ ಮಣಿಕ್ಕಂ ಟಾಗೋರ್ (Manickam Tagore) ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾದ ಹೇಳಿಕೆಯನ್ನು ನೀಡಿದ್ದಾರೆ. ಜಾತ್ಯಾತೀತತೆ ವಿದೇಶಗಳಲ್ಲಿ ವಿಭಿನ್ನವಾಗಿರಬಹುದು. ಭಾರತದಲ್ಲಿ ನಾವು ಪ್ರತಿಯೊಂದು ಧರ್ಮವನ್ನು, ಅವರ ಆಚರಣೆಗಳನ್ನು ಹಾಗೂ ಅವರ ಸಂಪ್ರದಾಯಗಳನ್ನು ಗೌರವಿಸುತ್ತೇವೆ. ಇದು ಭಾರತದಲ್ಲಿರುವ ಜಾತ್ಯಾತೀತದ ಕಲ್ಪನೆಯಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.ಇದನ್ನೂ ಓದಿ: ‘ಬಿಗ್‌ ಬಾಸ್‌ 11’ರಲ್ಲಿ ಸುದೀಪ್‌ ಕಾಸ್ಟ್ಯೂಮ್‌ ಹೇಗಿರುತ್ತೆ?: ಸುಳಿವು ಕೊಟ್ಟ ಕಿಚ್ಚ

  • ಇದು ಕುಸ್ತಿಪಟುಗಳ ಹೋರಾಟ.. ರಾಜಕೀಯ ಮಾಡ್ಬೇಡಿ: ಪ್ರತಿಭಟನೆಗೆ ಬಂದ ಸಿಪಿಐ ನಾಯಕಿಗೆ ತಡೆ

    ಇದು ಕುಸ್ತಿಪಟುಗಳ ಹೋರಾಟ.. ರಾಜಕೀಯ ಮಾಡ್ಬೇಡಿ: ಪ್ರತಿಭಟನೆಗೆ ಬಂದ ಸಿಪಿಐ ನಾಯಕಿಗೆ ತಡೆ

    ನವದೆಹಲಿ: “ಇದು ಕ್ರೀಡಾಪಟುಗಳ ಹೋರಾಟ. ಇದರಲ್ಲಿ ರಾಜಕೀಯ ಬೇಡ” ಎಂದು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್‌ (Brinda Karat) ಅವರಿಗೆ ಪ್ರತಿಭಟನಾನಿರತ ಕುಸ್ತಿಪಟುಗಳು ಕೈಮುಗಿದು ವೇದಿಕೆಯಿಂದ ಕೆಳಗಿಳಿಸಿದ ಪ್ರಸಂಗ ಗುರುವಾರ ನವದೆಹಲಿಯಲ್ಲಿ ನಡೆಯಿತು.

    ಡಬ್ಲ್ಯೂಎಫ್‌ಐ ಅಧ್ಯಕ್ಷ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Charan Singh) ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ 200 ಕುಸ್ತಿಪಟುಗಳು ಪಾಲ್ಕೊಂಡಿದ್ದು, ಗುರುವಾರ ಎರಡನೇ ದಿನ ಪೂರೈಸಿದೆ. ಇದನ್ನೂ ಓದಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಶೋಷಣೆ ಆರೋಪ – WFI ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್‌ ಭೂಷಣ್‌ ರಾಜೀನಾಮೆ ಸಾಧ್ಯತೆ

    ಸಿಂಗ್‌ ರಾಜೀನಾಮೆಗೆ ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಲು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್‌ ಸ್ಥಳಕ್ಕೆ ಬಂದಿದ್ದರು. ಆದರೆ ಇದಕ್ಕೆ ಕುಸ್ತಿಪಟುಗಳು ಒಪ್ಪಲಿಲ್ಲ. ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಹೇಳಿದ್ದಾರೆ.

    “ಮೇಡಂ, ದಯವಿಟ್ಟು ಇದನ್ನು ರಾಜಕೀಯ ಮಾಡಬೇಡಿ ಎಂದು ನಾವು ವಿನಂತಿಸುತ್ತೇವೆ. ಇದು ಕ್ರೀಡಾಪಟುಗಳ ಪ್ರತಿಭಟನೆ” ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಅವರು ಪ್ರತಿಭಟನೆಯ ಎರಡನೇ ದಿನದಂದು ಸ್ಥಳಕ್ಕೆ ಆಗಮಿಸಿದಾಗ ಕಾರಟ್‌ಗೆ ಮನವಿ ಮಾಡಿದರು. ಇದನ್ನೂ ಓದಿ: ರಾಷ್ಟ್ರೀಯ ತರಬೇತುದಾರರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ – ವಿನೇಶ್‌ ಫೋಗಟ್‌ ಗಂಭೀರ ಆರೋಪ

    ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದೆ ಕಾರಟ್‌ ಮಾತನಾಡಿ, “ನಾವು ಯಾವುದೇ ರೀತಿಯ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟದಲ್ಲಿದ್ದೇವೆ. ಯಾವುದೇ ವರ್ಗದ ಮಹಿಳೆಯರನ್ನು ಅವಮಾನಿಸುವ ಯಾವುದೇ ವಿಷಯದ ವಿರುದ್ಧ ನಾವು ಹೋರಾಡುತ್ತೇವೆ. ಆದ್ದರಿಂದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ತಿಳಿಸಿದ್ದಾರೆ.

    ಅವರು (ಕುಸ್ತಿಪಟುಗಳು) ಇಲ್ಲಿಗೆ ಬಂದು ಧರಣಿ ಕುಳಿತಿರುವುದು ಅತ್ಯಂತ ದುರದೃಷ್ಟಕರ. ಸರ್ಕಾರ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು. ವಿಚಾರಣೆಯು ಅಂತಿಮ ತೀರ್ಮಾನಕ್ಕೆ ಬರುವವರೆಗೆ ಆರೋಪಿಯನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗ್ಲಾಸ್‍ನಲ್ಲಿ ಕೈ ಲಾಕ್ ಮಾಡಿ ಕಾರು ಓಡಿಸಿದ – ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಗೆ ಕಿರುಕುಳ

    ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿರುವ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ನೇತೃತ್ವದಲ್ಲಿ ಬುಧವಾರದಿಂದ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. “ವೈಯಕ್ತಿಕವಾಗಿ ಇಂತಹ ದೌರ್ಜನ್ಯ ಎದುರಿಸಿಲ್ಲ. ಆದರೆ ಅನೇಕ ಕುಸ್ತಿಪಟುಗಳು ತಮಗಾಗಿ ಲೈಂಗಿಕ ಶೋಷಣೆ ಕುರಿತು ನನ್ನ ಬಳಿ ನೊಂದು ಮಾತನಾಡಿದ್ದಾರೆ. ಹೀಗಾಗಿ ನಾವು ಹೋರಾಟ ನಡೆಸುತ್ತಿದ್ದೇವೆ” ಫೋಗಟ್‌ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k