Tag: Brinda Acharya

  • ನವರಾತ್ರಿಗೆ `ಮಾರುತ’ ಸಿನಿಮಾದ ಭಕ್ತಿ ಪ್ರಧಾನ ಗೀತೆ – ಚಿತ್ರಕ್ಕೆ ಎಸ್.ನಾರಾಯಣ್ ನಿರ್ದೇಶನ

    ನವರಾತ್ರಿಗೆ `ಮಾರುತ’ ಸಿನಿಮಾದ ಭಕ್ತಿ ಪ್ರಧಾನ ಗೀತೆ – ಚಿತ್ರಕ್ಕೆ ಎಸ್.ನಾರಾಯಣ್ ನಿರ್ದೇಶನ

    ಹೆಸರಾಂತ ನಿರ್ದೇಶಕ ಎಸ್.ನಾರಾಯಣ್ (S Narayan) ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು – ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಚಿತ್ರ ʻಮಾರುತʼ ಚಿತ್ರಕ್ಕಾಗಿ (Marutha Movie) ಎಸ್. ನಾರಾಯಣ್ ಅವರೇ ಬರೆದು ಸಂಗೀತ ಸಂಯೋಜಿಸಿರುವ ʻನಮ್ಮಮ್ಮ ಸವದತ್ತಿ ಎಲ್ಲಮ್ಮʼ ಎಂಬ ಹಾಡು ನವರಾತ್ರಿಯ ಸಂದರ್ಭದಲ್ಲಿ ಬಿಡುಗಡೆಯಾಯಿತು. ಅನನ್ಯ ಭಟ್ ಅವರ ಗಾಯನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಾಯಕಿ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

     

    View this post on Instagram

     

    A post shared by Brinda Acharya (@brinda_acharya)

    ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ನಿರ್ದೇಶಕ ಎಸ್.ನಾರಾಯಣ್ ಅವರು ʻಮಾರುತʼ ಚಿತ್ರಸಾಗಿ ಬಂದ ಬಗ್ಗೆ ಮಾಹಿತಿ ನೀಡಿದರು. ರೈಲಿಗೆ ಎಂಜಿನ್ ಹೇಗೆ ಮುಖ್ಯವೊ ಹಾಗೆ ನಮ್ಮ ಚಿತ್ರದ ಬಹುಮುಖ್ಯ ಪಾತ್ರಕ್ಕೆ ಪ್ರಮುಖ ಕಲಾವಿದರೊಬ್ಬರು ಬೇಕಾಗಿತ್ತು. ಆ ಪಾತ್ರದಲ್ಲಿ ದುನಿಯಾ ವಿಜಯ್ ಅಭಿನಯಿಸಿದ್ದಾರೆ. ವಿಜಯ್ ಅವರು ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ. ಶ್ರೇಯಸ್ ಮಂಜು, ಬೃಂದಾ ಆಚಾರ್ಯ ಅವರ ಅಭಿನಯ ಕೂಡ ಚೆನ್ನಾಗಿದೆ. ಇನ್ನೂ ನಮ್ಮ ಚಿತ್ರದಲ್ಲಿ ತಾರಾ, ರಂಗಾಯಣ ರಘು, ಸಾಧು ಕೋಕಿಲ, ಕಲ್ಯಾಣಿ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾ ಬಳಗವೇ ಇದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ. ʻಮಾರುತ, ನೋಡುಗರಿಗೆ ಬೇಕಾಗಿರುವ ಎಲ್ಲಾ ಅಂಶಗಳನ್ನೊಳಗೊಂಡ ಒಂದು ಕೌಟುಂಬಿಕ ಚಿತ್ರ. ಈ ಚಿತ್ರದಲ್ಲಿ ಇಷ್ಟು ಮಾತ್ರ ಅಲ್ಲ. ಯುವಜನತೆಗೆ ಎಚ್ಚರ ನೀಡುವ ಉತ್ತಮ ಸಂದೇಶ ಸಹ ಇದೆ. ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಿದೆಯೋ, ಅದಕ್ಕಿಂತ ಹೆಚ್ಚು ಅಪಾಯವಿದೆ. ಈ ನಿಟ್ಟಿನಲ್ಲಿ ಪೋಷಕರು ಯುವಜನತೆಯ ಮೇಲೆ ಹೆಚ್ಚು ಗಮನ ನೀಡಬೇಕು ಎಂಬ ಸಂದೇಶ ಸಹ ಇದೆ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಚೆನ್ನಾಗಿದೆ. ನವರಾತ್ರಿ ಸಂದರ್ಭದಲ್ಲಿ ಈ ಹಾಡು ಅನಾವರಣವಾಗಿದೆ.

    ನಿರ್ದೇಶಕ ಎಸ್ ನಾರಾಯಣ್ ಅವರ ಶಿಸ್ತು ಎಲ್ಲರಿಗೂ ಮಾದರಿ. ನಾನು ಅವರಿಂದ ಈ ಚಿತ್ರದಲ್ಲಿ ಸಾಕಷ್ಟು ಕಲಿತಿದ್ದೇನೆ. ಇನ್ನೂ, ಇಂದು ಬಿಡುಗಡೆಯಾಗಿರುವ ಈ ಹಾಡು ತುಂಬಾ ಸುಮಧುರವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ನಾಡಿನ ಜನತೆಗೆ ಒಂದೊಳ್ಳೆ ಭಕ್ತಿಗೀತೆಯನ್ನು ನಿರ್ದೇಶಕರು ನೀಡಿದ್ದಾರೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಟ ಶ್ರೇಯಸ್ ಮಂಜು.

    ನಿರ್ಮಾಪಕ ಕೆ.ಮಂಜು ಮಾತನಾಡಿ, ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಅವರ ಜೊತೆಗೆ ಇದು ನನ್ನ ಮೂರನೇ ಚಿತ್ರ. ನನ್ನ ಸ್ನೇಹಿತರಾದ ರಮೇಶ್ ಯಾದವ್ ಅವರ ಜೊತೆಗೂಡಿ ಈಶಾ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಕಥೆಯನ್ನು ನಿರ್ದೇಶಕರು ಮಾಡಿಕೊಂಡಿದ್ದಾರೆ. ನನ್ನ ಮಗ ಶ್ರೇಯಸ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾನೆ. ನನ್ನ ಮೇಲಿನ ಪ್ರೀತಿಯಿಂದ ದುನಿಯಾ ವಿಜಯ್, ರವಿಚಂದ್ರನ್ ಅವರು ಸೇರಿದಂತೆ ಅನೇಕ ಹಿರಿಯ ಕಲಾವಿದರು. ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ʻನಮ್ಮಮ್ಮ ಸವದತ್ತಿ ಎಲ್ಲಮ್ಮʼ ಹಾಡಿನ ಒಂದು ದಿನದ ಚಿತ್ರೀಕರಣಕ್ಕೆ ಸುಮಾರು 65 ಲಕ್ಷ ಖರ್ಚಾಗಿದೆ. ತೆರೆಯ ಮೇಲೆ ಈ ಹಾಡು ಅದ್ಧೂರಿಯಾಗಿ ಮೂಡಿಬಂದಿದೆ.

    ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವನ್ನು ಕೆ.ಮಂಜು ಅವರ ಜೊತೆಗೂಡಿ ನಿರ್ಮಿಸಿರುವುದಕ್ಕೆ ಬಹಳ ಖುಷಿಯಿದೆ. ಇಂದು ಬಿಡುಗಡೆಯಾಗಿರುವ ʻನಮ್ಮಮ್ಮʼ ಹಾಡು ನಾಡಿನ ಜನರ ಮನ ಗೆದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ರಮೇಶ್ ಯಾದವ್ ತಿಳಿಸಿದರು. ಶಿಸ್ತು, ಸಂಯಮಕ್ಕೆ ಹೆಸರಾದವರು ನಿರ್ದೇಶಕ ಎಸ್. ನಾರಾಯಣ್. ಅವರಿಂದ ನಾನು ಕಲಿತದ್ದು ಬಹಳ. ಇನ್ನೂ ʻನಮ್ಮಮ್ಮʼ ಹಾಡನ್ನು ಎರಡು ದಿನಗಳ ಕಾಲ ಚಿತ್ರಿಸುವುದಾಗಿ ಯೋಜನೆಯಾಗಿತ್ತು. ಆದ್ರೆ ನಿರ್ದೇಶಕರು ಅವಧಿಗೂ ಮುನ್ನ ಚಿತ್ರೀಕರಣ ಮುಗಿಸಿದರು. ನಾನು ಚಿತ್ರವನ್ನು ತೆರೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದರು ನಟಿ ಬೃಂದಾ ಆಚಾರ್ಯ.

  • ದೀಕ್ಷಿತ್ ಶೆಟ್ಟಿ ನಟನೆಯ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ದೀಕ್ಷಿತ್ ಶೆಟ್ಟಿ ನಟನೆಯ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ‘ದಿಯಾ’ (Dia) ಖ್ಯಾತಿಯ ದೀಕ್ಷಿತ್ ಶೆಟ್ಟಿ (Dheekshith Shetty) ಬಹುಭಾಷೆಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸದ್ಯ ಅವರು ನಟಿಸಿರುವ ಕನ್ನಡದ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ (Bank Of Bhagyalakshmi) ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ. ಇದನ್ನೂ ಓದಿ:ಉಪ್ಪಿ ಅಣ್ಣನ ಮಗನ ಸಿನಿಮಾದಲ್ಲಿ ಲವ್ಲಿ ಸ್ಟಾರ್‌- ‘ಸ್ಪಾರ್ಕ್‌’ನಲ್ಲಿ ನೆನಪಿರಲಿ ಪ್ರೇಮ್

    ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಚಿತ್ರದಲ್ಲಿನ ಹರ ಓಂ ಎಂದು ಶಿವನ ಕುರಿತಾದ ಸಾಂಗ್ ರಿಲೀಸ್ ಆಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಹಾಡು ರಿಲೀಸ್ ಆಗಿದೆ. ಕನ್ನಡದಲ್ಲಿ ಸಿಂಗರ್ ಶಿಲ್ಪ ಹಾಡಿದ್ರೆ, ತೆಲುಗಿನಲ್ಲಿ ಖ್ಯಾತ ಗಾಯಕಿ ಮಂಗ್ಲಿ (Mangli) ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಈ ಹಾಡನ್ನು ಲಹರಿ ವೇಲು ಅವರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:‘ಜಾಟ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ – ಸನ್ನಿ ಡಿಯೋಲ್ ಸೇರಿ 7 ಮಂದಿ ವಿರುದ್ಧ FIR

    ದೀಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಬೃಂದಾ ಆಚಾರ್ಯ (Brinda Acharya) ನಟಿಸಿದ್ದಾರೆ. ಮೊದಲ ಬಾರಿಗೆ ಇಬ್ಬರೂ ಜೊತೆಯಾಗಿ ನಟಿಸಿರೋದ್ರಿಂದ ಈ ಸಿನಿಮಾ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

    ‘ರಂಗಿತರಂಗ’ ಸಿನಿಮಾ ಖ್ಯಾತಿಯ ಹೆಚ್.ಕೆ ಪ್ರಕಾಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರೆ, ಅಭಿಷೇಕ್ ಎಂ ಅವರ ನಿರ್ದೇಶನ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

  • ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಿಂಪಲ್ ಸುನಿ ವಿಶ್

    ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಿಂಪಲ್ ಸುನಿ ವಿಶ್

    ಪ್ರತಿಭಾನ್ವಿತ ನಟ ದೀಕ್ಷಿತ್ ಶೆಟ್ಟಿ (Dheekshith Shetty) ಮತ್ತು ಬೃಂದಾ ನಟಿಸಿರುವ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ (Bank Of Bhagyalakshmi) ಚಿತ್ರದ ಪೋಸ್ಟರ್ ಅನ್ನು ಡೈರೆಕ್ಟರ್ ಸಿಂಪಲ್ ಸುನಿ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಮೂಲಕ ‘ಚಮಕ್’ (Chamak) ನಿರ್ದೇಶಕ ಸಿಂಪಲ್‌ ಸುನಿ (Simple Suni) ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

    ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರದ ಶೀರ್ಷಿಕೆಯೇ ಸೂಚಿಸುತ್ತಿರುವಂತೆ ಬ್ಯಾಂಕ್‌ವೊಂದರಲ್ಲಿ ದರೋಡೆ ಮಾಡಲು ಹೊರಟವರ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ಈ ಕಥೆಯನ್ನು ಹಾಸ್ಯ ಪ್ರಧಾನವಾಗಿ ತೆರೆಗೆ ತರಲಾಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಗುರುತಿಸಿಕೊಂಡಿರುವ ದೀಕ್ಷಿತ್ ಶೆಟ್ಟಿ ವಿಭಿನ್ನ ಪಾತ್ರದ ಮೂಲಕ ಬರುತ್ತಿದ್ದಾರೆ.

     

    View this post on Instagram

     

    A post shared by Brinda Acharya (@brinda_acharya)

    ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಗನ್ ಹಿಡಿದು ದೀಕ್ಷಿತ್ ಶೆಟ್ಟಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಬೃಂದಾ ಕೂಡ ಕನ್ನಡಕ ಧರಿಸಿ ಸೀರೆಯುಟ್ಟು ರೆಟ್ರೋ ಲುಕ್‌ನಲ್ಲಿ ಮಿಂಚಿದ್ದಾರೆ. ದೀಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ‘ಪ್ರೇಮಂ ಪೂಜ್ಯಂ’ ನಟಿ ಬೃಂದಾ (Brinda Acharya) ಜೊತೆಯಾಗುತ್ತಿದ್ದಾರೆ.

    ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾಗೆ ಬೆಂಗಳೂರು, ತುಮಕೂರು ಮತ್ತು ಚಿತ್ರದುರ್ಗ ಸುತ್ತಮುತ್ತ ಶೇಕಡ 80ರಷ್ಟು ಚಿತ್ರೀಕರಣ ಮುಗಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಈ ಚಿತ್ರವನ್ನು ಅಭಿಷೇಕ್ ಎಂ. ನಿರ್ದೇಶನ ಮಾಡಿದ್ದಾರೆ.

  • ಆಲ್ಬಂ ಜೊತೆ ಸವಾರಿ ಹೊರಟ ಬೃಂದಾ ಆಚಾರ್ಯ

    ಆಲ್ಬಂ ಜೊತೆ ಸವಾರಿ ಹೊರಟ ಬೃಂದಾ ಆಚಾರ್ಯ

    ನಿಂತ ನಿಲುವಿನಲ್ಲೇ ಆವರಿಸಿಕೊಳ್ಳಬಲ್ಲ ಹಾಡೊಂದಕ್ಕಾಗಿ ಅನುಕ್ಷಣವೂ ಹಾತೊರೆಯುವ ದೊಡ್ಡದೊಂದು ಸಂಗೀತ ಪ್ರೇಮಿಗಳ ದಂಡು ನಮ್ಮ ನಡುವಲ್ಲಿದೆ. ಯಾವ ಸುಳಿವೂ ಕೊಡದೆ ಚೆಂದದ್ದೊಂದು ಹಾಡು ಅಚಾನಕ್ಕಾಗಿ ಕಿವಿ ಸೋಕಿದರೆ ಅವರಿಗೆಲ್ಲ ಅಕ್ಷರಶಃ ರೋಮಾಂಚನ. ಬೃಂದಾ ಆಚಾರ್ಯ (Brinda Acharya) ಮತ್ತು ಭರತ್ ಬೋಪಣ್ಣ (Bharat Bopanna) ನಟಿಸಿರುವ ಆಲ್ಬಂ ಸಾಂಗ್ ಇದೀಗ ಅಂಥಾದ್ದೊಂದು ಅನುಭೂತಿಯನ್ನು ಬೇಷರತ್ತಾಗಿ ಕೊಡಮಾಡಿದೆ. ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲ್ಲಿ’ ಆಲ್ಬಂ ಸಾಂಗ್ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ.

    ಇತ್ತೀಚಿನ ದಿನಮಾನದಲ್ಲಿ ಸಿನಿಮಾಗಳಾಚೆಗೆ ಹಾಡುಗಳು ರೂಪುಗೊಳ್ಳೋದೇ ಅಪರೂಪ. ಆಲ್ಬಂ ಸಾಂಗ್ ಅನ್ನೋ ರೋಮಾಂಚಕ ಪರಿಕಲ್ಪನೆ ಅದೇಕೋ ಬರಬರುತ್ತಾ ನೇಪಥ್ಯಕ್ಕೆ ಸರಿದುಬಿಟ್ಟಿದೆ. ಇಂಥಾ ಹೊತ್ತಲ್ಲಿ `ಸಾವಿರ ಗುಂಗಲ್ಲಿ’ ಎಂಬ ಆಲ್ಬಂ ಸಾಂಗ್ ತನ್ನ ನವಿರು ಶೈಲಿಯೊಂದಿಗೆ ಕೇಳುಗರನ್ನೆಲ್ಲ ಸೋಕುತ್ತಿದೆ. ಮತ್ತಷ್ಟು ಮನಸುಗಳನ್ನು ಆವರಿಸಿಕೊಳ್ಳುತ್ತಾ ಮುಂದುವರೆಯುತ್ತಿದೆ. ಅಂದಹಾಗೆ, ಕೃಷ್ಣ ನಂಜುಂಡಯ್ಯನವರ ಪರಿಕಲ್ಪನೆ, ನಿರ್ದೇಶನದಲ್ಲಿ ಮೂಡಿ ಬಂದಿದೆ. ಬೃಂದಾ ಆಚಾರ್ಯ, ಭರತ್ ಬೋಪಣ್ಣ, ಮಯೂರ್ ಸಾಗರ್, ಕೃತಿಕಾ ಗೌಡ, ಮಾನಿನಿ ಪಿ ರಾವ್ ಮುಂತಾದವರು ಸದರಿ ಆಲ್ಬಂ ಹಾಡಿನ ಭಾಗವಾಗಿದ್ದಾರೆ.

    ಅದೆಲ್ಲದರಲ್ಲಿ ಒಂದಿಡೀ ಹಾಡಿನ ಪ್ರಧಾನ ಆಕರ್ಷಣೆಯಾಗಿ ಬೃಂದಾ ಆಚಾರ್ಯ ಕಾಣಿಸುತ್ತಾರೆ. ಹಾಡಿನ ನೆರಳಲ್ಲಿ ಕಥೆಯೊಂದು ಸರಿಯುವಂತೆ ಭಾಸವಾಗುವ ಈ ಆಲ್ಬಂ ಸಾಂಗ್, ಕೇಳುಗರನ್ನೆಲ್ಲ ಒಂದೇ ಸಲಕ್ಕೆ ಸೆಳೆಯುವಂತಿದೆ. ವಿಶೇಷವೆಂದರೆ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಪ್ರಮೋದ್ ಮರವಂತೆ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದು ಪೃಥ್ವಿ ಭಟ್ ಧ್ವನಿಯಲ್ಲಿ ಮೂಡಿ ಬಂದಿದೆ. ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಈ ಹಾಡು ಅದ್ದೂರಿಯಾಗಿ, ಅರ್ಥವತ್ತಾಗಿ ಮೂಡಿ ಬಂದಿದೆ. ಹೆಚ್ಚಿನ ವೀಕ್ಷಣೆ ಪಡೆಯುತ್ತಾ ಮುಂದುವರೆಯುತ್ತಿರುವ ಸದರಿ ಆಲ್ಬಂ ಸಾಂಗಿನ ಸವಾರಿಯೀಗ ಟ್ರೆಂಡಿಂಗಿನತ್ತ ಮುಖ ಮಾಡಿದೆ. ಆ ಮೂಲಕ ಇದರ ಹಿಂದಿರುವ ಕನಸು, ಶ್ರಮ, ಶ್ರದ್ಧೆಗಳೆಲ್ಲವೂ ಸಾರ್ಥಕವಾದಂತಾಗಿದೆ.

     

    ಬೃಂದಾ ಆಚಾರ್ಯ ಇದೀಗ ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಇಂಥಾದ್ದೊಂದು ನವಿರು ಹಾಡಿಗೆ ಜೀವ ತುಂಬುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೀರಿಯಲ್ ಜಗತ್ತಿನಿಂದ ಬಂದು, ಇದೀಗ ನಾಯಕನಾಗಿ ನೆಲೆಗಾಣುತ್ತಿರುವ ಭರತ್ ಬೋಪಣ್ಣ ಕೂಡಾ ಅಷ್ಟೇ ಚೆಂದಗೆ ನಟಿಸಿದ್ದಾರೆ. ಜೋಯ್ ಕಾಸ್ಟಾ ಸಂಗೀತ ನಿರ್ದೇಶನ, ಎನ್.ಕೆ ರಾಜ್ ಛಾಯಾಗ್ರಹಣ, ತಮಿಳರಸನ್ ಎಂ. ಸಂಕಲನ, ಅನಿಲ್ ಸಹ ನಿರ್ದೇಶನದೊಂದಿಗೆ ಈ ವೀಡಿಯೋ ಸಾಂಗ್ ಕಳೆಗಟ್ಟಿಕೊಂಡಿದೆ. ದಿನದಿಂದ ದಿನಕ್ಕೆ ಈ ಹಾಡು ಹೆಚ್ಚೆಚ್ಚು ಜನರನ್ನು ತಲುಪಿಕೊಳ್ಳುತ್ತಿದೆ. ಪ್ರಚಾರದ ಭರಾಟೆ ಇಲ್ಲದೆಯೂ ಕೇಳುಗರನ್ನು ವಶವಾಗಿಸಿಕೊಳ್ಳುತ್ತಿದೆ. ಸಂಗೀತದ ಧ್ಯಾನದೊಂದಿಗೆ ಇಂಥಾದ್ದೊಂದು ಸಾಹಸ ಮಾಡಿರುವ ಒಂದಿಡೀ ತಂಡದ ಕಣ್ಣಲ್ಲೀಗ ಖುಷಿಯ ಹೊಳಪು ಮಿರುಗಲಾರಂಭಿಸಿದೆ

  • ಯುಗಾದಿಗೆ ಮತ್ತಷ್ಟು ಕಳೆ ತಂದ ನಟಿ ಬೃಂದಾ

    ಯುಗಾದಿಗೆ ಮತ್ತಷ್ಟು ಕಳೆ ತಂದ ನಟಿ ಬೃಂದಾ

    ಯುಗಾದಿ (Ugadi) ಹಬ್ಬಕ್ಕೆ ನಗುವಿನ ಸುಂದರಿ ಬೃಂದಾ ಆಚಾರ್ಯ ಹೊಸ ಕಳೆ ತಂದಿದ್ದಾರೆ. ರೇಷ್ಮೆ ಸೀರೆಯುಟ್ಟು ಸ್ಟೈಲಿಷ್ ಜ್ಯೂಯಲ್ಸ್ ತೊಟ್ಟು ಕ್ಯಾಮರಾಗೆ ಸಖತ್ತಾಗೆ ಪೋಸ್ ಕೊಟ್ಟಿದ್ದಾರೆ.  ಪ್ರೇಮಂ‌ ಪೂಜ್ಯಂ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಸ್ಮೈಲಿ ಕ್ವೀನ್ ಬೃಂದಾ,  ಕರುನಾಡ ಕ್ರಷ್ ಪಟ್ಟಕ್ಕೇರಿ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

    ಈ ನಡುವೆ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಜೊತೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ ನಟಿ ಬೃಂದಾ ಆಚಾರ್ಯ (Brinda Acharya). ಹೊಸ ತಂಡದ ಚೊಚ್ಚಲ ಪ್ರಯತ್ನ ಇದಾಗಿದ್ದು, ಈ ಸಿನಿಮಾದಲ್ಲಿ ಬೃಂದಾ ಸೋಷಿಯಲ್ ಮೀಡಿಯಾ ಇನ್ಫ್ಯೂಲೆಷನರ್  ಪಾತ್ರ ಮಾಡಲಿದ್ದಾರಂತೆ. ಇವರ ಜೊತೆಗೆ ಅಂಕಿತಾ ಅಮರ್ ಕೂಡ ಮತ್ತೊಂದು ಪಾತ್ರವನ್ನು ನಿರ್ವಹಿಸಲಿದ್ದಾರೆ.

    ನಿರೂಪ್ ಭಂಡಾರಿ (Nirup Bhandari) ರಾಜರಥ, ವಿಕ್ರಾಂತ್ ರೋಣ, ಆದಿ ಲಕ್ಷ್ಮಿ ಪುರಾಣ ಮತ್ತು ವಿಂಡೋ ಸೀಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ನಿಭಾಯಿಸುತ್ತಿರುವ ಯುವ ಪ್ರತಿಭೆ ಸಚಿನ್ ವಾಲಿ ಜೊತೆ ಕೈ ಜೋಡಿಸಿದ್ದಾರೆ. ಹೊಸ ಚಿತ್ರಕ್ಕೆ ಸಚಿನ್ ವಾಲಿ ನಿರ್ದೇಶಕ.

    ಕೆಲವೊಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಸಚಿನ್ ವಾಲಿ (Sachin Wali)  ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೇಳಲು ಸಚಿನ್ ಹೊರಟ್ಟಿದ್ದಾರೆ. ಅವರ ಚೊಚ್ಚಲ ಪ್ರಯತ್ನದಲ್ಲಿ ನಾಯಕನಾಗಿ ನಿರೂಪ್ ಭಂಡಾರಿ ಬಣ್ಣ ಹಚ್ಚಲಿದ್ದಾರೆ.

     

    ಅಂಕೆತ್ ಸಿನಿಮಾಸ್‌ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ‌ ನಿರ್ಮಿಸಿಸುತ್ತಿದ್ದು,   ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರ್ (Sachin Basrur) ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

  • ನಿರೂಪ್ ಜೊತೆ ಡ್ಯುಯೆಟ್ ಹಾಡೋಕೆ ಸಜ್ಜಾದ ಬೃಂದಾ

    ನಿರೂಪ್ ಜೊತೆ ಡ್ಯುಯೆಟ್ ಹಾಡೋಕೆ ಸಜ್ಜಾದ ಬೃಂದಾ

    ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಜೊತೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಾರೆ ನಟಿ ಬೃಂದಾ ಆಚಾರ್ಯ (Brinda Acharya). ಹೊಸ ತಂಡದ ಚೊಚ್ಚಲ ಪ್ರಯತ್ನ ಇದಾಗಿದ್ದು, ಈ ಸಿನಿಮಾದಲ್ಲಿ ಬೃಂದಾ ಸೋಷಿಯಲ್ ಮೀಡಿಯಾ ಇನ್ಫ್ಯೂಲೆಷನರ್  ಪಾತ್ರ ಮಾಡಲಿದ್ದಾರಂತೆ. ಇವರ ಜೊತೆಗೆ ಅಂಕಿತಾ ಅಮರ್ ಕೂಡ ಮತ್ತೊಂದು ಪಾತ್ರವನ್ನು ನಿರ್ವಹಿಸಲಿದ್ದಾರೆ.

    ನಿರೂಪ್ ಭಂಡಾರಿ (Nirup Bhandari) ರಾಜರಥ, ವಿಕ್ರಾಂತ್ ರೋಣ, ಆದಿ ಲಕ್ಷ್ಮಿ ಪುರಾಣ ಮತ್ತು ವಿಂಡೋ ಸೀಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ನಿಭಾಯಿಸುತ್ತಿರುವ ಯುವ ಪ್ರತಿಭೆ ಸಚಿನ್ ವಾಲಿ ಜೊತೆ ಕೈ ಜೋಡಿಸಿದ್ದಾರೆ. ಹೊಸ ಚಿತ್ರಕ್ಕೆ ಸಚಿನ್ ವಾಲಿ ನಿರ್ದೇಶಕ.

    ಕೆಲವೊಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಸಚಿನ್ ವಾಲಿ (Sachin Wali)  ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೇಳಲು ಸಚಿನ್ ಹೊರಟ್ಟಿದ್ದಾರೆ. ಅವರ ಚೊಚ್ಚಲ ಪ್ರಯತ್ನದಲ್ಲಿ ನಾಯಕನಾಗಿ ನಿರೂಪ್ ಭಂಡಾರಿ ಬಣ್ಣ ಹಚ್ಚಲಿದ್ದಾರೆ.

     

    ಸ್ಕ್ರಿಪ್ಟ್ ಪೂಜೆ ಮುಗಿಸಿಕೊಂಡಿರುವ ಈ ಸಿನಿಮಾಗೆ ಅಂಕೆತ್ ಸಿನಿಮಾಸ್‌ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ‌ ನಿರ್ಮಿಸಿಸುತ್ತಿದ್ದು,   ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರ್ (Sachin Basrur) ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜನವರಿಯಿಂದ ಶೂಟಿಂಗ್ ಹೊರಡಲು ಸಜ್ಜಾಗಿರುವ ಚಿತ್ರತಂಡ, ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ, ತುಮಕೂರು ಹಾಗೂ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ.

  • ಚಿಕ್ಕಮಗಳೂರಿನಲ್ಲಿ ‘ಒಂದ್ಸಲ ಮೀಟ್ ಮಾಡೋಣ ‘ ಅಂತಿದ್ದಾರೆ ಎಸ್.ನಾರಾಯಣ್

    ಚಿಕ್ಕಮಗಳೂರಿನಲ್ಲಿ ‘ಒಂದ್ಸಲ ಮೀಟ್ ಮಾಡೋಣ ‘ ಅಂತಿದ್ದಾರೆ ಎಸ್.ನಾರಾಯಣ್

    ನ್ನಡದ ಮೇರು ಪ್ರತಿಭೆಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್ (S. Narayan) ನಿರ್ದೇಶನದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ನಟಿಸುತ್ತಿರುವ ‘ಒಂದ್ಸಲ ಮೀಟ್ ಮಾಡೋಣ’ (Ondu Sala Meet Maadona) ಚಿತ್ರ ಆರಂಭವಾಗಿದೆ.  ಚಿಕ್ಕಮಗಳೂರಿನ ಶ್ರೀದೇವಿರಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಶ್ರೇಯಸ್ ಮಂಜು (Shreyas)  ಹಾಗೂ ತಾರಾ ಅನುರಾಧ ಅವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಸ್ಥಳೀಯ ಶಾಸಕರಾದ ಹೆಚ್.ಡಿ.ತಮ್ಮಯ್ಯ ಆರಂಭ ಫಲಕ ತೋರಿದರು. ನಿರ್ಮಾಣ ಸಹಾಯಕ ಮಹಾದೇವ ಕ್ಯಾಮೆರಾ ಚಾಲನೆ ಮಾಡಿದರು.

    ಒಂದ್ಸಲ ಮೀಟ್ ಮಾಡೋಣ ಪ್ರೀತಿಯ ಜರ್ನಿ ಎಂದು ಹೇಳುವ  ನಿರ್ದೇಶಕರು, ಚಿಕ್ಕಮಗಳೂರಿನಿಂದ ಚಿತ್ರೀಕರಣ ಪ್ರಾರಂಭವಾಗಿ, ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಗೋವಾ ಮುಂತಾದ ಕಡೆ ನಡೆಯಲಿದೆ. ಇದೊಂದು ಟ್ರಾವೆಲಿಂಗ್ ಲವ್ ಸ್ಟೋರಿ ಎಂದು ತಿಳಿಸಿದ್ದಾರೆ.  ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಪಿ.ತ್ಯಾಗರಾಜ್ ಅವರು ಅರ್ಪಿಸುತ್ತಿರುವ ಈ ಚಿತ್ರವನ್ನು ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣ‌ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮುಂದೆ ಇವರ ಕಾಂಬಿನೇಶನ್ ನಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲಿದೆ. ಇದನ್ನೂ ಓದಿ:‘ಅರ್ಜುನ್ ರೆಡ್ಡಿ’ ನಿರ್ದೇಶಕನ ಸಿನಿಮಾದಲ್ಲಿ ವಿಜಯ್ ದೇವರಕೊಂಡ

    ನಿರ್ದೇಶಕ ಎಸ್. ನಾರಾಯಣ್ ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿರುವ ಈ ಚಿತ್ರಕ್ಕೆ ಜಸ್ಸಿ ಗಿಫ್ಟ್  ಸಂಗೀತ ನೀಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ, ಸಂತು ನೃತ್ಯ ನಿರ್ದೇಶನ ಹಾಗೂ ಆನಂದ್ ಅವರ ಕಲಾ ನಿರ್ದೇಶನ  ಚಿತ್ರಕ್ಕಿದೆ‌.

    ಶ್ರೇಯಸ್ ಮಂಜು ಅವರಿಗೆ ನಾಯಕಿಯಾಗಿ ಬೃಂದಾ ಆಚಾರ್ (Brinda Acharya) ನಟಿಸುತ್ತಿದ್ದಾರೆ. ತಾರಾ ಅನುರಾಧ, ಶರತ್ ಲೋಹಿತಾಶ್ವ, ಸಾಧುಕೋಕಿಲ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ರಂಗಾಯಣ ರಘು, ಪಾವಗಡ ಮಂಜು, ಜಯರಾಮ್, ಸುಜಯ್ ಶಾಸ್ತ್ರಿ, ಗಿರಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 50 ಕಥೆ ರಿಜೆಕ್ಟ್ ಮಾಡಿ `ಕೌಸಲ್ಯ ಸುಪ್ರಜಾ ರಾಮ’ ಒಪ್ಪಿದ್ದೇಕೆ ಆದಿ-ನಿಧಿ?

    50 ಕಥೆ ರಿಜೆಕ್ಟ್ ಮಾಡಿ `ಕೌಸಲ್ಯ ಸುಪ್ರಜಾ ರಾಮ’ ಒಪ್ಪಿದ್ದೇಕೆ ಆದಿ-ನಿಧಿ?

    ನೀವೆಲ್ಲರೂ ಶಶಾಂಕ್ ನಿರ್ದೇಶಿಸಿರುವ `ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಸಿನಿಮಾ ಮಾಡೋದಕ್ಕೆ ಕಾತುರರಾಗಿರುತ್ತೀರಿ. ಆದಿ ಮತ್ತು ನಿಧಿ ಮತ್ತೆ ಒಂದಾಗಿರುವುದರಿಂದ ಬಿಗ್‍ಸ್ಕ್ರೀನ್‍ನ ಮೇಲೆ ಈ ಕ್ಯೂಟ್ ಕಪಲ್ಸ್ ನ ಕಣ್ತುಂಬಿಕೊಳ್ಳುವುದಕ್ಕೆ ಕುತೂಹಲಭರಿತರಾಗಿರುತ್ತೀರಿ. ಅಚ್ಚರಿ ಏನಪ್ಪ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ಆದಿ ಮತ್ತು ನಿಧಿ ಹತ್ತಲ್ಲ, ಇಪ್ಪತ್ತಲ್ಲ, ಭರ್ತಿ 50 ಪ್ರಾಜೆಕ್ಟ್‍ಗಳನ್ನ ರಿಜೆಕ್ಟ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ನಿಧಿಮಾ ನಮ್ಮೊಟ್ಟಿಗೆ ಮಾತನಾಡಿದ್ದಾರೆ. ಒಂದಿಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

    ಆದಿ ಮತ್ತು ನಿಧಿ ಬೆಳ್ಳಿತೆರೆಯ ಬೊಂಬಾಟ್ ಜೋಡಿ. ಲವ್ ಮಾಕ್ಟೇಲ್ ಚಿತ್ರದ ಮೂಲಕ ಕಿಕ್ಕೇರಿಸಿದ ಈ ಕ್ಯೂಟ್ ಕಪಲ್ಸ್ ಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ನೆಕ್ಸ್ಟ್ ಲೆವೆಲ್ ಫ್ಯಾನ್ ಬೇಸ್ ಜೊತೆಗೆ ಹೊಸದೊಂದು ಕ್ರೇಜ್ ಸೃಷ್ಟಿಸಿ, ಸೆನ್ಸೇಷನ್ ಸೃಷ್ಟಿಸಿರೋ ಈ ತಾರಾ ಜೋಡಿ ಹಿಂದೆ ಅಭಿಮಾನಿಗಳು ಮಾತ್ರವಲ್ಲ ನಿರ್ದೇಶಕರು ಮತ್ತು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಬಿಗ್‍ಸ್ಕ್ರೀನ್‍ಗೆ ಕಿಚ್ಚು ಹಚ್ಚಿ, ಬಾಕ್ಸ್ ಆಫೀಸ್‍ನಲ್ಲಿ ಬಂಗಾರದ ಬೆಳೆ ತೆಗೆಯೋ ಈ ಸ್ಟಾರ್ ಜೋಡಿನಾ ಹಾಕ್ಕೊಂಡು ಪಿಕ್ಚರ್ ಮಾಡಬೇಕು ಅಂತ ಹಪಹಪಿಸುತ್ತಿದ್ದಾರೆ. ಅಚ್ಚರಿ ಅಂದರೆ ಲವ್ ಮಾಕ್ಟೇಲ್ 1 ಹಾಗೂ 2 ಚಿತ್ರಗಳು ತೆರೆಗೆ ಬಂದ್ಮೇಲೆ ಸುಮಾರು 50 ಕಥೆಗಳು ಆದಿ-ನಿಧಿನಾ ಅರಸಿಕೊಂಡು ಬಂದಿವೆಯಂತೆ. ಆದರೆ, ಪುನಃ ಪುನಃ ತೆರೆಮೇಲೆ ಒಂದಾಗಲು ಬಯಸದ ಲವ್‌ ಬರ್ಡ್ಸ್, ಮೊಗ್ಗಿನ ಮನಸ್ಸು ಡೈರೆಕ್ಟರ್ ಕೆತ್ತಿದ ಕಥೆಗೆ ಮನಸೋತಿದ್ದಾರೆ. `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ಅಂದ್ಹಾಗೇ, ಜನ ಆದಿ ಮತ್ತು ನಿಧಿನಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗಂತ, ಪದೇ ಪದೇ ಪೇರ್ ಆಗಿ ನಟಿಸೋದು ಸರಿಯಲ್ಲ ಎನ್ನುವ ಕಾರಣಕ್ಕೆ ಅರಸಿಕೊಂಡು ಬಂದಂತಹ ಸಿನಿಮಾಗಳನ್ನೆಲ್ಲಾ ತಿರಸ್ಕರಿಸಿದ್ದಂತೂ ನಿಜ. ಆದರೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನ ರಿಜೆಕ್ಟ್ ಮಾಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ನಿರ್ದೇಶಕ ಶಶಾಂಕ್ ಅವರು ಅದ್ಭುತವಾದ ಕಥೆನಾ ರಚಿಸಿದ್ದರಿಂದ ಮೊದಲು ಕೃಷ್ಣ ಅವರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟರು. ಡಾರ್ಲಿಂಗ್‍ಗೆ ಪ್ರೇಮಂ ಪೂಜ್ಯಂ ಬ್ಯೂಟಿ ಬೃಂದಾ (Brinda Acharya) ಜೊತೆಯಾದ್ರೂ ಕೂಡ ಆ ರೋಲ್ ಪ್ಲೇ ಮಾಡುವುದಕ್ಕೆ ನಾನು ಒಪ್ಪಿಗೆ ಸೂಚಿಸಿದೆ. ಇದೊಂದು ಸೆನ್ಸಿಬಲ್ ಪಾತ್ರ ಆಗಿದ್ದರಿಂದ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಆರಂಭದಲ್ಲಿ ನಂಗೆ ಭಯ ಇತ್ತು. ಆದರೆ, ಶಶಾಂಕ್‍ರಂತಹ (Shashank) ದೊಡ್ಡ ನಿರ್ದೇಶಕರ ಸಿನಿಮಾ ಕೈಬಿಡುವುದಕ್ಕೆ ನಾನು ಸಿದ್ದಳಿರಲಿಲ್ಲ. ಹೀಗಾಗಿ, ಆ ಕ್ಯಾರೆಕ್ಟರ್ ನ ಚಾಲೆಂಜ್ ಆಗಿ ತೆಗೆದುಕೊಂಡು ನಟಿಸಿದ್ದೇನೆ ಅಂತಾರೇ ನಟಿ ಮಿಲನ ನಾಗರಾಜ್.

    ಅಷ್ಟಕ್ಕೂ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಮಿಲನ ಪಾತ್ರ ಏನು? ಈ ಕುತೂಹಲದ ಪ್ರಶ್ನೆಗೆ ನಿರ್ದೇಶಕರಾಗಲಿ, ಮಿಲನ ಆಗಲಿ ಉತ್ತರ ಕೊಡುತ್ತಿಲ್ಲ. ಕಾರಣ, ಮಿಲನ ಬಹುಮುಖ್ಯವಾದ ಪಾತ್ರ ನಿಭಾಯಿಸಿದ್ದಾರಂತೆ. ಇಲ್ಲಿವರೆಗೂ ಸಿಲ್ವರ್ ಸ್ಕ್ರೀನ್ ಮೇಲೆ ನಾವ್ಯಾರು ನೋಡಿರದ ಲುಕ್ ನಲ್ಲಿ ನಿರ್ದೇಶಕರು ನಿಧಿನಾ ತೋರಿಸಿದ್ದಾರಂತೆ. ಇಂಟ್ರೆಸ್ಟಿಂಗ್ ಮ್ಯಾಟರ್ ಏನಪ್ಪ ಅಂದರೆ ನಿಧಿ ಇಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಎಷ್ಟು ಬೋಲ್ಡ್ ಎಂಬುದಕ್ಕೆ ರಿಲೀಸ್ ಆಗಿರುವ ’90 ಹಾಕು ಕಿಟ್ಟಪ್ಪ’ ಹಾಡು ನೋಡಿದರೆ ಗೊತ್ತಾಗುತ್ತೆ. ಇದು ಜಸ್ಟ್ ಟೀಸರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ ಅಂತ ಅಂದುಕೊಳ್ಳಬಹುದು. ಇನ್ನೊಂದು ವಿಶೇಷ ಅಂದರೆ ಆದಿ-ನಿಧಿ ಫ್ಯಾನ್ಸ್ ಗೆ ನಿರಾಸೆಯಾಗಲ್ಲ. ಯಾಕಂದ್ರೆ, ಕೃಷ್ಣ ಹಾಗೂ ಮಿಲನ ಕಾಂಬಿನೇಷನ್ ದೃಶ್ಯಗಳು ಈ ಚಿತ್ರದಲ್ಲಿವೆ. ಸಿನಿಮಾಪ್ರೇಮಿಗಳಿಗೆ ಕಿಕ್ ಕೊಡುವಂತಹ, ಅಭಿಮಾನಿಗಳು ಹುಚ್ಚೇಳುವಂತಹ ಸನ್ನಿವೇಶಗಳನ್ನ ಡೈರೆಕ್ಟರ್ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಅದೆಲ್ಲವನ್ನೂ ತೆರೆಮೇಲೆ ನೋಡುವುದಕ್ಕೆ  ಕೆಲವೇ ಕೆಲವು ದಿನಗಳು ಬಾಕಿಯಿವೆ.

    ಶಶಾಂಕ್ ನಿರ್ದೇಶನದ ಎಲ್ಲಾ ಸಿನಿಮಾಗಳಂತೆ ಇಲ್ಲಿಯೂ ಒಂದು ಕ್ಯೂಟ್ ಲವ್‍ಸ್ಟೋರಿನಾ ಕಾಣಬಹುದು. ಜೊತೆಗೆ ಫ್ಯಾಮಿಲಿ ವ್ಯಾಲ್ಯೂಸ್, ತಾಯಿ-ಮಗನ ಸೆಂಟಿಮೆಂಟ್ ಈ ಪಿಕ್ಚರ್‍ನಲ್ಲಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಗಂಡಸು ಅನ್ನೋ ಅಹಂಕಾರನ ತಲೆಗೇರಿಸಿಕೊಂಡಿರೋ ಗಂಡಸರ ಮಧ್ಯೆ ಹೆಣ್ಣುಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನ ಸಹಿಸಿಕೊಂಡು ಬದುಕುತ್ತಿದ್ದಾರೆ. ಮೇಲ್ ಇಗೋದಿಂದ ಸ್ತ್ರೀಯರು ಎಷ್ಟು ಸಫರ್ ಆಗ್ತಿದ್ದಾರೆ, ಮೇಲ್ ಇಗೋ ಸಮಾಜವನ್ನ ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಮತ್ತು ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಇದೆಲ್ಲವನ್ನೂ `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಮೂಲಕ ಶಶಾಂಕ್ ಸೊಸೈಟಿಗೆ ತಿಳಿಸುವುದಕ್ಕೆ ಹೊರಟಿದ್ದಾರೆ. ಡಾಲಿಂಗ್ ಕೃಷ್ಣ (Darling Krishna), ಮಿಲನ ನಾಗರಾಜ್ (Milana Nagaraj), ಬೃಂದಾ ಆಚಾರ್ಯ, ರಂಗಾಯಣ ರಘು, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್, ನಾಗಭೂಷಣ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಕೃಷ್ಣ-ಮಿಲನ ಜೋಡಿಯ ಆರನೇ ಕಾಂಬಿನೇಷನ್ ಚಿತ್ರ ಇದಾಗಿದ್ದು, ಲವ್‌ ಬರ್ಡ್ಸ್ ಚಿತ್ರದ ನಂತರ ಈ ಕ್ಯೂಟ್ ಪೇರ್ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

    ಇದೇ ಜುಲೈ 28ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಕುಟುಂಬ ಸಮೇತ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ರೀಚ್ ಆಗುವ ಟೆಕ್ನಿಕಲ್ ಕ್ವಾಲಿಟಿ ಪ್ಲಸ್ ಕ್ವಾಂಟಿಟಿಯನ್ನೊಳಗೊಂಡಿದೆ. ಸಿನಿಮಾಟೋಗ್ರಫಿ ಮೂಲಕ ಕಥೆನಾ ಜನರಿಗೆ ಕನ್ವೆ ಮಾಡುವಂತಹ ಪ್ರಯೋಗಕ್ಕೆ ಶಶಾಂಕ್ ಕೈಹಾಕಿದ್ದು, ಸುಜ್ಞಾನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಇಂಟ್ರೆಸ್ಟಿಂಗ್ ಸಂಗತಿ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೆನಡಾ ಹಾಗೂ ಯುಎಸ್‍ಎನಲ್ಲೂ ಬಿಡುಗಡೆಯಾಗ್ತಿದೆ. ಆರ್‌ ಆರ್ ಆರ್ ನಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ವಿತರಣೆ ಮಾಡಿದಂತಹ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿರುವುದು ವಿಶೇಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕೌಸಲ್ಯ ಸುಪ್ರಜಾ ರಾಮ’ನ ರಾಣಿಯ ಮುಡಿಗೇರಲಿದೆ ಕರ್ನಾಟಕ ಕ್ರಷ್ ಕಿರೀಟ

    ‘ಕೌಸಲ್ಯ ಸುಪ್ರಜಾ ರಾಮ’ನ ರಾಣಿಯ ಮುಡಿಗೇರಲಿದೆ ಕರ್ನಾಟಕ ಕ್ರಷ್ ಕಿರೀಟ

    ದ್ಭುತ ಅಭಿನಯದಿಂದ, ಅಮೋಘ ಸಿರಿಯಿಂದ ಕಲಾರಸಿಕರ ಹೃದಯ ಗೆಲ್ಲುವ ಕೆಲ ನಟಿಮಣಿಯರು, ಅಭಿಮಾನಿಗಳ ಪ್ರೀತಿ ಸಂಪಾದನೆ ಮಾಡುವುದರ ಜೊತೆಗೆ ಕರ್ನಾಟಕ ಕ್ರಷ್ ಪಟ್ಟಕ್ಕೇರಿ ಕರುನಾಡಿನ ಅಂಗಳದಲ್ಲಿ ಮೆರವಣಿಗೆ ಹೋಗಿ ಬರುತ್ತಾರೆ. ಕಳೆದ ವರ್ಷ ಕಾಂತಾರ ಲೀಲಾ ಹೊಸದೊಂದು ಕ್ರೇಜ್ ಸೃಷ್ಟಿಸಿ, ಮುತ್ತಿನ ಪಲ್ಲಕ್ಕಿ ಏರಿ ಕರ್ನಾಟಕ ಮಾತ್ರವಲ್ಲದೇ ಇಡೀ ಜಗತ್ತು ಸುತ್ತಿಬಂದರು. ಅಚ್ಚರಿ ಅಂದರೆ ಈ ನಟಿ ಕರ್ನಾಟಕ ತುಂಬೆಲ್ಲಾ ದಿಬ್ಬಣ ಹೊರಡುವ ಮೊದಲೇ ಸಂಚಲನ ಸೃಷ್ಟಿಸಿದ್ದಾರೆ. ಅದೊಂದು ಹಾಡಿನಿಂದ ಕರ್ನಾಟಕ ಕ್ರಷ್ ಕಿರೀಟ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಅಷ್ಟಕ್ಕೂ, ಆ ನಟಿ ಬೇರಾರು ಅಲ್ಲ ಕೌಸಲ್ಯ ಸುಪ್ರಜಾ ರಾಮನ (Kausalya Supraja Rama) ರಾಣಿ ಬೃಂದಾ ಆಚಾರ್ಯ

    ಬೃಂದಾ ಆಚಾರ್ಯ (Brinda Acharya) ಹೊನ್ನಾವರದ ಹೊನ್ನಿನಂತಹ ಚೆಲುವೆ.  ಅಮರ ಶಿಲ್ಪಿ ಜಕಣಚಾರಿ ಕೆತ್ತಿದ ಶಿಲಾಬಾಲಿಕೆಯಂತಿರೋ ಈ ಬೆಡಗಿ, ನಗುವೆಂಬ ಆಭರಣದಿಂದಲೇ ಕನ್ನಡ ಕಲಾಭಿಮಾನಿಗಳನ್ನ  ಮನಸೂರೆಗೊಳ್ಳುತ್ತಿದ್ದಾರೆ. ತನ್ನ ಸಹಜ ಸೌಂದರ್ಯದಿಂದ ಹರೆಯದ ಹುಡುಗರ  ಹೃದಯ ಕದ್ದು, ಪಡ್ಡೆಹೈಕ್ಳ ನಿದ್ದೆಗೆಡಿಸಿರೋ ಈ ಸುಂದರಿ, `ಕೌಸಲ್ಯೆಯ ಸುಪುತ್ರ ರಾಮ’ನಿಗೆ ಜೊತೆಯಾಗಿ ಕರ್ನಾಟಕ ಕ್ರಷ್ ಆಗುವತ್ತ ಹೊರಟಿದ್ದಾಳೆ. ಈಗಾಗಲೇ ಶಿವಾನಿಯಾಗಿ ಎಲ್ಲರ ಹೃದಯ ಗೆದ್ದಿದ್ದಾಳೆ. ಈಕೆಯ ಜವಾನಿ ಕಂಡು ತಲೆಕೆಡಿಸಿಕೊಂಡಿರೋ ಹುಡುಗರು, ನಾವು ಸೋತೋಗ್ಬಿಟ್ವಲ್ಲೇ ಶಿವಾನಿ ಅಂತ ಹಾಡಿ ಕುಣಿಯುತ್ತಿದ್ದಾರೆ.

    ಇದೇ ಖುಷಿಯಲ್ಲಿ ನಮ್ಮೊಟ್ಟಿಗೆ ಮಾತಿಗಿಳಿದ ಶಿವಾನಿ, ಜುಲೈ 28 ರಿಂದ ನಾನು ಪಡ್ಡೆಹುಡುಗರ ಆಲ್ ಟೈಮ್ ಕ್ರಷ್ ಆಗೋದ್ರಲ್ಲಿ ನೋ ಡೌಟ್ ಎಂದರು. ಅಂದ್ಹಾಗೇ, ಜುಲೈ 28 ರಂದು ಶಿವಾನಿ ನಟಿಸಿರುವ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕರ್ನಾಟಕದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಶಶಾಂಕ್ (Shashank) ನಿರ್ದೇಶನ ಚಿತ್ರಕ್ಕಿದ್ದು, ಡಾರ್ಲಿಂಗ್ ಕೃಷ್ಣಾಗೆ (Darling Krishna) ಶಿವಾನಿ ಅಲಿಯಾಸ್ ಬೃಂದಾ ಆಚಾರ್ಯ ಜೋಡಿಯಾಗಿದ್ದಾರೆ. ಮಿಲನ ನಾಗರಾಜ್ ಕೂಡ ಈ ಸಿನಿಮಾದಲ್ಲಿ ಮಿಂಚಿದ್ದು, ನಿಧಿ ಪಾತ್ರವನ್ನ ಡೈರೆಕ್ಟರ್ ಗುಟ್ಟಾಗಿರಿಸಿದ್ದಾರೆ

    ನಿರ್ದೇಶಕ ಶಶಾಂಕ್ ಅವರು ತಮ್ಮ ಸಿನಿಮಾಗಳಲ್ಲಿ ನಟಿಮಣಿಯರಿಗೆ ಪವರ್ ಫುಲ್ ರೋಲ್ ನ ಸೃಷ್ಟಿ ಮಾಡ್ತಾರೆ. ಫರ್ಪಾಮೆನ್ಸ್ ಗೆ ಸ್ಕೋಪ್ ಇರುವ ಪಾತ್ರ ಕೆತ್ತನೆ ಮಾಡುವುದರಿಂದ ಮೊಗ್ಗಿನ ಮನಸು ಡೈರೆಕ್ಟರ್ ಜೊತೆ ವರ್ಕ್ ಮಾಡುವುದಕ್ಕೆ ನಾಯಕಿಯರು ತುದಿಗಾಲಲ್ಲಿ ನಿಂತಿರ್ತಾರೆ. ಇದಕ್ಕೆ ಬೃಂದಾ ಆಚಾರ್ಯ ಕೂಡ ಹೊರತಾಗಿರಲಿಲ್ಲ. ಯಾವಾಗ ಶಶಾಂಕ್ ಸರ್ ಸಿನಿಮಾದಲ್ಲಿ ಅವಕಾಶ ಸಿಗುತ್ತಪ್ಪ ಅಂತ ಕಾಯ್ತಿದ್ದ ಬೃಂದಾಗೆ, `ಕೌಸಲ್ಯ ಸುಪ್ರಜಾ  ರಾಮ’ ಚಿತ್ರದಲ್ಲಿ ಶಿವಾನಿ ಪಾತ್ರ ಪೋಷಣೆ ಮಾಡುವ ಚಾನ್ಸ್ ಸಿಗ್ತು. ರಿಯಲ್ ಲೈಫ್ ನಲ್ಲೂ ಎಂಜಿನಿಯರ್ ಆಗಿ ವರ್ಕ್ ಮಾಡ್ತಿದ್ದ ಬೃಂದಾಗೆ, ರೀಲ್ ಲೈಫ್ ನಲ್ಲಿ, `ಕೌಸಲ್ಯ ಸುಪ್ರಜಾ ರಾಮ’ದಲ್ಲಿ ಎಂಜಿನಿಯರ್  ಹುಡುಗಿ ಪಾತ್ರ ಪ್ಲೇ ಮಾಡುವ ಅದೃಷ್ಟ ಒದಗಿಬಂತು. ಹೀಗಾಗಿ, ಬೃಂದಾ ದಿಲ್ ಖುಷ್ ಆಗಿದ್ದಾರೆ. ಈ ಸಿನಿಮಾ ರಿಲೀಸ್ ಆದ್ಮೇಲೆ ಎಲ್ಲಾ ಹುಡುಗರು ಶಿವಾನಿ ಥರ ಹುಡುಗಿ ಬೇಕು ಅಂತ ಹಠ ಹಿಡಿಯುತ್ತಾರೆಂದು ಖುಷಿಯಿಂದ ಹೇಳಿಕೊಳ್ತಾರೆ.

    ಈ ಹಿಂದೆ ಬೃಂದಾ ಎರಡು ಸಿನಿಮಾ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಜೊತೆ `ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಕ್ಲಾಸಿಕ್ ಕ್ಯಾರೆಕ್ಟರ್ ಪ್ಲೇ ಮಾಡಿ ಎಲ್ಲರ ಏಂಜೆಲ್ ಆಗಿದ್ದರು. `ಜೂಲಿಯಟ್’ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ಕಲಿತು ಕಿಕ್ಕಿರಿಸಿದ್ದರು. ಈಗ `ಕೌಸಲ್ಯ ಸುಪ್ರಜಾ ರಾಮ’ದಲ್ಲಿ ಶಿವಾನಿಯಾಗಿ ಕಲಾರಸಿಕರನ್ನು ಕ್ಲೀನ್ ಬೋಲ್ಡ್ ಮಾಡಲು ಬರುತ್ತಿದ್ದಾರೆ. ಕಿರುತೆರೆ ಲೋಕದಲ್ಲಿ ಶನಿ ಸೀರಿಯಲ್ ನಲ್ಲಿ ದಾಮಿನಿಯಾಗಿ ಮಿಂಚಿ, ಪ್ರೇಮಂ ಪೂಜ್ಯಂ ಎನ್ನುತ್ತಾ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಟ್ಟ ಬೃಂದಾ, ಒಂದಾದ್ಮೇಲೊಂದು ಸಿನಿಮಾ ಮೂಲಕ ಬೆಳ್ಳಿತೆರೆನಾ ಆವರಿಸಿಕೊಳ್ತಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಭಿನ್ನ- ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಚಿತ್ರಪ್ರೇಮಿಗಳ ದಿಲ್ ಕದಿಯುತ್ತಿದ್ದಾರೆ. ಸ್ಟಾರ್ ನಾಯಕಿಯಾಗುವತ್ತ ಲಗ್ಗೆ ಇಡುತ್ತಿದ್ದಾರೆ. ಆಲ್ ದಿ ಬೆಸ್ಟ್ ಬೃಂದಾ ಆಚಾರ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕೌಸಲ್ಯ ಸುಪ್ರಜಾ ರಾಮ’ ಡಾರ್ಲಿಂಗ್ ಕೃಷ್ಣ ಕರಿಯರ್ ನ ಬಿಗ್ಗೆಸ್ಟ್ ಸಿನಿಮಾ: ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಗ್ಯಾರಂಟಿ ಎಂದ ಡೈರೆಕ್ಟರ್ ಶಶಾಂಕ್

    ‘ಕೌಸಲ್ಯ ಸುಪ್ರಜಾ ರಾಮ’ ಡಾರ್ಲಿಂಗ್ ಕೃಷ್ಣ ಕರಿಯರ್ ನ ಬಿಗ್ಗೆಸ್ಟ್ ಸಿನಿಮಾ: ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಗ್ಯಾರಂಟಿ ಎಂದ ಡೈರೆಕ್ಟರ್ ಶಶಾಂಕ್

    ಬಿಟ್ಟಿ ಬಿಲ್ಡಪ್ ಕೊಡದೇ ಸೈಲೆಂಟಾಗಿಯೇ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಚಲನ ಮೂಡಿಸಿರುವ ಸಿನಿಮಾಗಳ ಪೈಕಿ `ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಚಿತ್ರವೂ ಒಂದು. ನಿರ್ದೇಶಕ ಶಶಾಂಕ್ ಕಲ್ಪನೆಯಲ್ಲಿ ಅರಳಿರುವ ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ (Darling Krishna) ಹೀರೋ. ಪ್ರೇಮಂಪೂಜ್ಯಂ ಸಿನಿಮಾ ಖ್ಯಾತಿಯ ಬೃಂದಾ ಆಚಾರ್ಯ (Brinda Acharya) ಹಾಗೂ ಮಿಲನ ನಾಗರಾಜ್ (Milan Nagaraj) ಇಬ್ಬರು ನಾಯಕಿಯರು. ಆದರೆ, ಯಾರಿಗೆಷ್ಟು ಸ್ಕೋಪು, ಯಾರಿಗೆಷ್ಟು ಸ್ಕ್ರೀನ್ ಸ್ಪೇಸ್ ಇದೆ ಎಂಬುದು ಸದ್ಯಕ್ಕಿರುವ ಕುತೂಹಲ. ಆ ಕುತೂಹಲಕ್ಕೆ ಮತ್ತು `ಕೌಸಲ್ಯ ಸುಪ್ರಜಾ ರಾಮ’ ಕಥನಕ್ಕೆ ಜುಲೈ 28ರಂದು ತೆರೆಬೀಳಲಿದೆ. ಅಂದು ರಾಜ್ಯಾದ್ಯಂತ ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ.

    `ಕೌಸಲ್ಯ ಸುಪ್ರಜಾ ರಾಮ’ ಟೈಟಲ್ ಕೇಳಿದಾಕ್ಷಣ ಸುಪ್ರಭಾತ ನೆನಪಾಗೋದು ಸಹಜ. ಆದರೆ, ನಿರ್ದೇಶಕ ಶಶಾಂಕ್ ಈ ಚಿತ್ರದ ಮೂಲಕ ಸಿನಿಮಾಪ್ರೇಮಿಗಳಿಗೆ ಹಾಗೂ ಸಮಾಜಕ್ಕೆ ಹೇಳಲು ಹೊರಟಿರುವ ಸಂದೇಶವೇ ಬೇರೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಗಂಡಸು ಅನ್ನೋ ಅಹಂಕಾರನ ತಲೆಗೇರಿಸಿಕೊಂಡಿರೋ ಗಂಡಸರ ಮಧ್ಯೆ ಹೆಣ್ಣುಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನ ಸಹಿಸಿಕೊಂಡು ಬದುಕುತ್ತಿದ್ದಾರೆ. ಮೇಲ್ ಇಗೋದಿಂದ ಸ್ತ್ರೀಯರು ಎಷ್ಟು ಸಫರ್ ಆಗ್ತಿದ್ದಾರೆ, ಮೇಲ್ ಇಗೋ ಸಮಾಜವನ್ನ ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಮತ್ತು ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಇದೆಲ್ಲವನ್ನೂ `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಮೂಲಕ ಶಶಾಂಕ್ ಸೊಸೈಟಿಗೆ ತಿಳಿಸುವುದಕ್ಕೆ ಹೊರಟಿದ್ದಾರೆ. ಇದನ್ನೂ ಓದಿ:ಉಪ್ಪಿ ಅಭಿಮಾನಿಗಳಿಗೆ ಗುಡ್ ನ್ಯೂಸ್- ‌’ಬುದ್ಧಿವಂತ 2′ ಬಿಗ್ ಅಪ್‌ಡೇಟ್

    ಅಚ್ಚರಿ ಅಂದರೆ ಈ ಮೇಲ್ ಇಗೋ ಕುರಿತಾದ ಸಿನಿಮಾ ಇಲ್ಲಿತನಕ ತೆರೆಮೇಲೆ ಬಂದೇ ಇಲ್ಲ. ಫಾರ್ ದಿ ಫಸ್ಟ್ ಟೈಮ್ ನಿರ್ದೇಶಕ ಶಶಾಂಕ್ (Shashank) ಅವರು ನಿಜವಾದ ಗಂಡಸು ಅಂದರೆ ಯಾರು ಅನ್ನೋದನ್ನ ಹೇಳುವುದಕ್ಕೆ ಹೊರಟಿದ್ದಾರೆ. ತಾವು ಕಂಡಿದ್ದು ಮತ್ತು ತಮ್ಮ ಅನುಭವಕ್ಕೆ ಬಂದಿದ್ದು ಎಲ್ಲದನ್ನೂ ಸೇರಿಸಿ, ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ನಾನು ಗಂಡಸು ಎನ್ನುವ ಅಹಂ ಅಷ್ಟು ಬೇಗ ನೆತ್ತಿಯಿಂದಿಳಿಯಲು ಸಾಧ್ಯವಿಲ್ಲ. ಆದರೆ, ಈ ಸಿನಿಮಾಗೆ ಸಮಾಜದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುವ ಶಕ್ತಿಯಿದೆ. ನಾನು ಇಲ್ಲಿತನಕ ಡೈರೆಕ್ಟ್ ಮಾಡಿರುವ ಸಿನಿಮಾಗಳಲ್ಲಿ ಇದು ನನ್ನ ಅತ್ಯುತ್ತಮ ಸಿನಿಮಾ. ಈ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗುತ್ತೆ ಎನ್ನುವ ಭರವಸೆ ನಂಗಿದೆ ಎನ್ನುತ್ತಾರೆ ನಿರ್ದೇಶಕ ಶಶಾಂಕ್

    ಅಂದ್ಹಾಗೇ, ಶಶಾಂಕ್ ಇಲ್ಲಿವರೆಗೂ ಹತ್ತು ಸಿನಿಮಾ ಡೈರೆಕ್ಟ್ ಮಾಡಿದ್ದಾರೆ. ಆ ಹತ್ತರಲ್ಲಿ ಆರೇಳು ಚಿತ್ರಗಳು ಬ್ಲಾಕ್‍ಬಸ್ಟರ್ ಹಿಟ್ ಲಿಸ್ಟ್ ಸೇರಿವೆ. ಆ ಸಾಲಿಗೆ `ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಸೇರ್ಪಡೆಯಾಗೋದ್ರಲ್ಲಿ ನೋ ಡೌಟ್ ಎಂದು ಹೇಳಿಕೊಳ್ಳುವ ನಿರ್ದೇಶಕರು, ಇದು ಡಾರ್ಲಿಂಗ್ ಕೃಷ್ಣ ಕರಿಯರ್ ಬಿಗ್ಗೆಸ್ಟ್ ಸಿನಿಮಾ ಅಂತ ಅಷ್ಟೇ ಖುಷಿಯಿಂದ ಹೇಳಿಕೊಂಡರು. ಲವ್‍ಮಾಕ್ಟೇಲ್ ಆದಿನಾ ಮತ್ತು ನಿಧಿನಾ ಇಬ್ಬರನ್ನೂ ಡಿಫರೆಂಟಾಗಿ ತೋರಿಸಿದ್ದೇನೆ. ಮೂರು ವಿಭಿನ್ನ ಶೇಡ್‍ಗಳಲ್ಲಿ ಕೃಷ್ಣ ಕಾಣಿಸಿಕೊಂಡರೆ, ಮಾದಕ ಮದನಾರಿಯಂತೆ ಮಿಲನಾ ಮಿಂಚಿದ್ದಾರೆ. ರಿಲೀಸ್ ಆಗಿರುವ ಟ್ರೇಲರ್ ನೋಡಿದರೆ ಗೊತ್ತಾಗುತ್ತೆ ನಿಧಿ ಎಷ್ಟು ಬೋಲ್ಡ್ ಅಂಡ್ ಬ್ಯೂಟಿಫುಲ್ ಅನ್ನೋದು. ಇನ್ನೊಂದು ವಿಶೇಷ ಅಂದರೆ ನಮ್ಮ ಸಿನಿಮಾ ನಟಿ ಬೃಂದಾ ಮೇಲೆ ಹುಡುಗರಿಗೆ ಕ್ರಷ್ ಆಗುತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ರಿಲೀಸ್ ಆದ್ಮೇಲೆ ಬೃಂದಾ ಕರ್ನಾಟಕದ ಕ್ರಷ್ ಆಗ್ತಾರೆ ಅದ್ರಲ್ಲಿ ಎರಡು ಮಾತಿಲ್ಲ ಎಂದರು.

    ಶಶಾಂಕ್ ನಿರ್ದೇಶನದ ಎಲ್ಲಾ ಸಿನಿಮಾಗಳಂತೆ ಇಲ್ಲಿಯೂ ಒಂದು ಕ್ಯೂಟ್ ಲವ್‍ಸ್ಟೋರಿನಾ ಕಾಣಬಹುದು. ಡಾರ್ಲಿಂಗ್, ಬೃಂದಾ ಫಸ್ಟ್ ಟೈಮ್ ಸ್ಕ್ರೀನ್ ಶೇರ್ ಮಾಡಿದ್ರೂ `ಶಿವಾನಿ’ ಹಾಡಿನ ಮೂಲಕ ಪಡ್ಡೆಹುಡುಗರ ತಲೆಕೆಡಿಸಿದ್ದಾರೆ. ರಂಗಾಯಣ ರಘು ಹಾಗೂ ಸುಧಾ ಬೆಳವಾಡಿಯವರು ಫ್ಯಾಮಿಲಿ ಆಡಿಯನ್ಸ್ ನ ಅಟ್ರ್ಯಾಕ್ಟ್ ಮಾಡ್ತಿದ್ದಾರೆ. ನಾಗಭೂಷಣ್, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಇದೊಂದು ಕುಟುಂಬ ಸಮೇತ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ರೀಚ್ ಆಗುವ ಟೆಕ್ನಿಕಲ್ ಕ್ವಾಲಿಟಿ ಪ್ಲಸ್ ಕ್ವಾಂಟಿಟಿಯನ್ನೊಳಗೊಂಡಿದೆ. ಸಿನಿಮಾಟೋಗ್ರಫಿ ಮೂಲಕ ಕಥೆನಾ ಜನರಿಗೆ ಕನ್ವೆ ಮಾಡುವಂತಹ ಪ್ರಯೋಗಕ್ಕೆ ಶಶಾಂಕ್ ಕೈಹಾಕಿದ್ದು, ಸುಜ್ಞಾನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ.

    ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೆನಡಾ ಹಾಗೂ ಯುಎಸ್‍ಎನಲ್ಲೂ ಬಿಡುಗಡೆಯಾಗ್ತಿದೆ. ಆರ್‌ ಆರ್ ಆರ್ ನಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ವಿತರಣೆ ಮಾಡಿದಂತಹ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಡಿಸ್ಟ್ರಿಬ್ಯೂಷನ್ ಜವಬ್ದಾರಿ ಹೊತ್ತಿದೆ. ಜುಲೈ 28ರಂದು ಭರ್ಜರಿಯಾಗಿ ಚಿತ್ರ ರಿಲೀಸ್ ಮಾಡುವ ಪ್ಲ್ಯಾನ್ ರೂಪಿಸಿದೆ. ಈ ಮಧ್ಯೆ ನಿರ್ದೇಶಕ ಶಶಾಂಕ್ ಅವರಿಗೆ `ಕೆ’ ಅಕ್ಷರ ಕೈ ಹಿಡಿಯುತ್ತಾ ಎನ್ನುವ ಕುತೂಹಲದ ಪ್ರಶ್ನೆಯೊಂದು ಮೂಡಿದೆ. ಕೃಷ್ಣನ್ ಲವ್‍ಸ್ಟೋರಿ, ಕೃಷ್ಣಲೀಲಾ ಕೈ ಹಿಡಿದಂತೆ `ಕೆ’ ಅಕ್ಷರದಿಂದ ಶುರುವಾಗುವ `ಕೌಸಲ್ಯ ಸುಪ್ರಜಾ ರಾಮ’ ಚಿತ್ರವೂ ಕೈ ಹಿಡಿಯಬಹುದಾ? ಮೊಗ್ಗಿನ ಮನಸ್ಸು ಡೈರೆಕ್ಟರ್ ಗೆ ಅದೃಷ್ಟ ಖುಲಾಯಿಸಬಹುದಾ? ಹೀಗೊಂದು ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ. ಅಂದ್ಹಾಗೇ, `ಕೆ’ ಅಕ್ಷರದ ಕೆಜಿಎಫ್, ಕಾಂತಾರ ಸಿನಿಮಾಗಳು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ವು. ಹೀಗಾಗಿ, `ಕೆ’ ಅಕ್ಷರದ `ಕೌಸಲ್ಯ ಸುಪ್ರಜಾ ರಾಮ’ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿ ಕಾಯುವಂತೆ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]