Tag: Brims

  • ಬ್ರಿಮ್ಸ್ ವೈದ್ಯರಿಗೆ 9 ತಿಂಗಳಿಂದ ನೋ ಸ್ಯಾಲರಿ – ಇತ್ತ ನೋಟಿಸ್ ನೀಡದೇ 40 ವೈದ್ಯರು ಕೆಲಸದಿಂದ ವಜಾ

    ಬ್ರಿಮ್ಸ್ ವೈದ್ಯರಿಗೆ 9 ತಿಂಗಳಿಂದ ನೋ ಸ್ಯಾಲರಿ – ಇತ್ತ ನೋಟಿಸ್ ನೀಡದೇ 40 ವೈದ್ಯರು ಕೆಲಸದಿಂದ ವಜಾ

    ಬೀದರ್: ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಕಳೆದ 7-8 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 40ಕ್ಕೂ ಹೆಚ್ಚು ವೈದ್ಯರಿಗೆ ಕಳೆದ 9 ತಿಂಗಳಿನಿಂದ ಸಂಬಳ ನೀಡಿಲ್ಲ, ಇದೀಗ ನೋಟಿಸ್ ನೀಡದೇ ಏಕಾಏಕಿ ವಜಾಗೊಳಿಸಿದ್ದಾರೆ.

    ಕೋವಿಡ್ ಸಮಯದಲ್ಲಿ ಗುತ್ತಿಗೆ ವೈದ್ಯರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಕೆಲಸ ಮಾಡಿದ್ದರು. ಅದರಂತೆ ಪ್ರತಿ ವರ್ಷವೂ ಅವರ ಗುತ್ತಿಗೆ ಮುಗಿದ ಮೇಲೆ ಮತ್ತೆ ಗುತ್ತಿಗೆಯನ್ನು ಎಂದಿನಂತೆ ಮುಂದುವರಿಸುತ್ತಿದ್ದರು. ಆದರೆ ಈ ಬಾರಿ 9 ತಿಂಗಳ ಸಂಬಳವನ್ನೂ ನೀಡದೇ ಏಕಾಏಕಿ 40 ವೈದ್ಯರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದರಿಂದ ವೈದ್ಯರು ಅಕ್ಷರಶಃ ಕಂಗಾಲಾಗಿದ್ದಾರೆ.ಇದನ್ನೂ ಓದಿ: Dharmasthala Case | ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚನೆ, ಈ ತಿಂಗಳೊಳಗೆ ವರದಿ: ಪರಮೇಶ್ವರ್

    ಈಗಾಗಲೇ ಕೆಲವು ವೈದ್ಯರು ಕರ್ತವ್ಯ ಬಿಡುಗಡೆ ಪತ್ರ ತೆಗೆದುಕೊಂಡಿದ್ದು, ಇನ್ನೂ ಕೆಲ ವೈದ್ಯರು ಬಿಡುಗಡೆ ಪತ್ರ ತೆಗೆದುಕೊಳ್ಳದೇ ಬ್ರಿಮ್ಸ್ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ನಮ್ಮಗೆ ಬರೋಬ್ಬರಿ 9 ತಿಂಗಳಿಂದ ಸಂಬಳ ನೀಡಿಲ್ಲ, ಜೊತೆಗೆ ಈಗ ಯಾರಿಗೂ ಹೇಳದೇ, ಕೇಳದೇ ನಮ್ಮನ್ನ ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ವೈದ್ಯರು ಕಿಡಿಕಾರಿದ್ದಾರೆ.ಇದನ್ನೂ ಓದಿ: ದೆಹಲಿಯಿಂದ ಬರಿಗೈಯಲ್ಲಿ ಬೆಂಗಳೂರಿಗೆ ಡಿಕೆಶಿ ವಾಪಸ್‌

  • ಬೀದರ್‌ನಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿ – ಇತ್ತ ಬ್ರಿಮ್ಸ್‌ನಲ್ಲಿ ಫ್ರೀ ಇಂಜೆಕ್ಷನ್ ಕೊಡದೇ ದೋಖಾ

    ಬೀದರ್‌ನಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿ – ಇತ್ತ ಬ್ರಿಮ್ಸ್‌ನಲ್ಲಿ ಫ್ರೀ ಇಂಜೆಕ್ಷನ್ ಕೊಡದೇ ದೋಖಾ

    ಬೀದರ್: ಗಡಿಜಿಲ್ಲೆ ಬೀದರ್‌ನಲ್ಲಿ (Bidar) ಬೀದಿ ಹಾಗೂ ಹುಚ್ಚು ನಾಯಿಗಳ ಹಾವಳಿ ಮಿತಿಮೀರಿದೆ. ಇದರಿಂದ ಮಕ್ಕಳು, ಜನರು ಮನೆಯಿಂದ ಹೊರಬರಲು ಭಯ ಬೀಳುತ್ತಿದ್ದಾರೆ. ಆದರೆ ಇತ್ತ ಬ್ರಿಮ್ಸ್‌ನಲ್ಲಿ ಉಚಿತ ರೇಬಿಸ್ ಇಂಜೆಕ್ಷನ್ (Rabies Injection) ನೀಡದೇ ವೈದ್ಯರು ಜನರಿಗೆ ವಂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಕಳೆದ ಕೆಲವು ದಿನಗಳಲ್ಲೇ ಮಕ್ಕಳು ಹಾಗೂ ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ. ಜಿಲ್ಲೆಯ ಚಿಟಗುಪ್ಪ ತಾಲೂಕಿನ ಮನ್ನಾಎಖೆಳ್ಳಿ ಗ್ರಾಮದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಹತ್ತಾರು ಮಕ್ಕಳಿಗೆ ಬೀದಿ ನಾಯಿಗಳು, ಮುಖ, ಕೈ, ಕಾಲು, ಬೆನ್ನು ಸೇರಿದಂತೆ ಇಡೀ ದೇಹವೇ ರಕ್ತ ಮಯವಾಗುವಂತೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಸದ್ಯ ಮಕ್ಕಳಿಗೆ ಬ್ರಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನುಳಿದ ಮಕ್ಕಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೊತೆಗೆ ಬೀದರ್ ನಗರದ ಮೈಲೂರಿನ ಐದಾರು ಜನರಿಗೆ ಬೀದಿ ನಾಯಿಗಳು ಗಂಭೀರವಾಗಿ ಕಚ್ಚಿ ಗಾಯಗೊಳಿಸಿವೆ. ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ನಮ್ಮ ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸಲು ನಮಗೆ ಭಯವಾಗುತ್ತಿದೆ. ಅಲ್ಲದೇ ಬ್ರಿಮ್ಸ್‌ಗೆ ಬಂದ್ರೆ ರೇಬಿಸ್ ಇಂಜೆಕ್ಷನ್ ನೀಡ್ತಿಲ್ಲ. ನಾವೇ 2 ಸಾವಿರ ರೂ. ಖರ್ಚು ಮಾಡಿ ಹೊರಗಡೆಯಿಂದ ತಂದು ಕೊಟ್ಟಿದ್ದೇವೆ ಎಂದು ಮಗುವಿನ ತಾಯಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಇದನ್ನೂ ಓದಿ: ದೆಹಲಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಬ್ರೇಕ್‌ – ನಿಯಮ ಉಲ್ಲಂಘಿಸಿದರೆ ಬೀಳುತ್ತೆ ಭಾರೀ ದಂಡ!

    ಇದೊಂದು ಕಡೆಯಾದ್ರೆ, ಮತ್ತೊಂದು ಕಡೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಬೇಕಿದ್ದ ರೇಬಿಸ್ ಇಂಜೆಕ್ಷನ್ ಕೊಡದೇ ಜನ್ರಿಗೆ ವಂಚಿಸುತ್ತಿದ್ದಾರೆ. ಮನ್ನಾಎಖೆಳ್ಳಿ ಗ್ರಾಮದಲ್ಲಿ ಓರ್ವ ಮಗುವಿಗೆ ಹುಚ್ಚು ನಾಯಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು. ಈ ವೇಳೆ ಬ್ರಿಮ್ಸ್ ವೈದ್ಯಾಧಿಕಾರಿಗಳು ಮಗುವಿಗೆ ತುರ್ತು ರೇಬಿಸ್ ಇಂಜೆಕ್ಷನ್ ಕೊಡಬೇಕಿತ್ತು. ಆದರೆ ನಮ್ಮ ಬಳಿ ಇಲ್ಲಾ ಹೊರಗಡೆಯಿಂದ ತನ್ನಿ ಎಂದು ಬೇರೆ ಕಡೆಯಿಂದ ತರಿಸಿದ್ದಾರೆ.

    ಇನ್ನು ಓಲ್ಡ್ ಸಿಟಿ, ಚಿದ್ರಿ, ಮೈಲೂರು, ಗುಂಪಾ ಸೇರಿದಂತೆ ಬೀದರ್ ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ರೂ, ನಗರಸಭೆ ಮಾತ್ರ ಕೈಕಟ್ಟಿ ಕುಳಿತಿದೆ. ಬೀದಿ ನಾಯಿಗಳನ್ನು ಹಿಡಿಯಲು ಪ್ರತಿ ವರ್ಷ 10 ರಿಂದ 20 ಲಕ್ಷ ರೂ. ಖರ್ಚು ಮಾಡ್ತಾರೆ. ಆದ್ರೆ ಈ ಬಾರಿ ಬೀದಿ ನಾಯಿಗಳ ಹಾವಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ. ನಾಲ್ಕು ನಾಯಿಗಳನ್ನು ಹಿಡಿದಂತೆ ಮಾಡಿ ಆಮೇಲೆ ಡಾಗ್ ಕ್ಯಾಚರ್ಸ್ ನಾಪತ್ತೆಯಾಗುತ್ತಿದ್ದಾರೆ. ನಗರಸಭೆಯ ಅಧಿಕಾರಿಗಳು ಇದನ್ನ ಗಮನಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.

    ದೆಹಲಿಯಲ್ಲಿ ಬೀದಿ ನಾಯಿ ಹಾವಳಿಗೆ ಶೀಘ್ರವೇ ಬ್ರೇಕ್ ಹಾಕಿ ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಅದೇ ರೀತಿ ಚಾಟಿ ಬೀಸಿದ್ರೆ ಮಾತ್ರ ಬೀದರ್‌ನಲ್ಲೂ ಅಧಿಕಾರಿಗಳು ಎಚ್ಚರಗೊಳ್ತಾರೆ. ಈ ಮೂಲಕ ಬ್ರಿಮ್ಸ್‌ನಲ್ಲಿ ರೇಬಿಸ್ ಚುಚ್ಚುಮದ್ದು ಕಳ್ಳಾಟಕ್ಕೆ ಬ್ರೇಕ್ ಹಾಕುವ ಜೊತೆಗೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.ಇದನ್ನೂ ಓದಿ: ವಿದೇಶಗಳಲ್ಲೂ ಪೊಲೀಸ್ ಸ್ಟೇಷನ್‌ – 53 ದೇಶಗಳಲ್ಲಿ ಚೀನಾದ ಕುತಂತ್ರ!

  • ಬೀದರ್‌ನಲ್ಲಿ ಖಾಸಗಿ ಅಂಬುಲೆನ್ಸ್‌ಗಳದ್ದೇ ಕಾರ್‌ಬಾರ್ – ಬ್ರಿಮ್ಸ್ ಆಸ್ಪತ್ರೆ ಎದುರೇ ಖಾಸಗಿ ಸುಲಿಗೆ

    ಬೀದರ್‌ನಲ್ಲಿ ಖಾಸಗಿ ಅಂಬುಲೆನ್ಸ್‌ಗಳದ್ದೇ ಕಾರ್‌ಬಾರ್ – ಬ್ರಿಮ್ಸ್ ಆಸ್ಪತ್ರೆ ಎದುರೇ ಖಾಸಗಿ ಸುಲಿಗೆ

    – ಅಧಿಕಾರಿಗಳದ್ದು ಜಾಣ ಕುರುಡು

    ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಬ್ರೀಮ್ಸ್ ಗೆ ಬರುವ ಬಡ ರೋಗಿಗಳಿಂದ ಖಾಸಗಿ ಅಂಬುಲೆನ್ಸ್ ಗಳ ವಸೂಲಿ ದಂಧೆ ಜೋರಾಗಿದೆ. ತುರ್ತು ಸೇವೆಯನ್ನೆ ಬಂಡವಾಳ ಮಾಡಿಕೊಂಡ ಖಾಸಗಿ ಅಂಬುಲೆನ್ಸ್ ಗಳು ದಪ್ಪಟ್ಟು ಹಣವನ್ನು ರೋಗಿಗಳಿಂದ ವಸೂಲಿ ಮಾಡುತ್ತಿದ್ದಾರೆ.

    ಬೀದರ್‍ನ ಬ್ರಿಮ್ಸ್ ಆಸ್ಪತ್ರೆ ಬಳಿ ಖಾಸಗಿ ಅಂಬುಲೆನ್ಸ್ ಗಳ ದರ್ಬಾರ್ ಜೋರಾಗಿದೆ. ತಾವು ಆಡಿದ್ದೇ ಆಟ. ಹೇಳೋರಿಲ್ಲ, ಕೇಳೋರಿಲ್ಲ ಅಂತ ಖಾಸಗಿ ಅಂಬುಲೆನ್ಸ್‍ಗಳು ವರ್ತಿಸುತ್ತಿವೆ. ಬ್ರಿಮ್ಸ್ ನಲ್ಲಿ 6 ಸರ್ಕಾರಿ ಅಂಬುಲೆನ್ಸ್ ಗಳು ಇದ್ದರೂ ಜನರ ಸೇವೆಗೆ ಸಿಗ್ತಿಲ್ಲ. ಇದರ ಹಿಂದೆ ಬ್ರಿಮ್ಸ್-ಖಾಸಗಿ ಅಂಬುಲೆನ್ಸ್ ಗಳ ಕರಾಮತ್ತು ಆರೋಪ ಕೇಳಿ ಬಂದಿದೆ. ಖಾಸಗಿ ಅಂಬುಲೆನ್ಸ್ ಚಾಲಕರು ಇದನ್ನೆ ಬಂಡವಾಳ ಮಾಡಿಕೊಂಡಿದ್ದಾರೆ. ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡಿ ದಂಧೆಗೆ ಇಳಿದಿದ್ದಾರೆ. ಖಾಸಗಿಯವರ ಧನದಾಹದ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸ್ತು. ಈ ವೇಳೆ ಎಲ್ಲವೂ ಬಹಿರಂಗವಾಗಿದೆ.

    ಖಾಸಗಿ ಅಂಬುಲೆನ್ಸ್ ಗಳ ಧನದಾಹ..!
    ಪಬ್ಲಿಕ್ ಟಿವಿ: ಬ್ರಿಮ್ಸ್‍ನಿಂದ ರೋಗಿಯನ್ನು ಅಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಬೇಕು.. ಎಷ್ಟಾಗುತ್ತೆ..?
    ಅಂಬುಲೆನ್ಸ್ ಡ್ರೈವರ್: ಪೆಟ್ರೋಲ್ ರೇಟ್ ಜಾಸ್ತಿಯಾಗಿದೆ.. ರೇಟ್ ಜಾಸ್ತಿಯಾಗುತ್ತೆ
    ಪಬ್ಲಿಕ್ ಟಿವಿ: ಎಷ್ಟಾಗುತ್ತೆ..?
    ಡ್ರೈವರ್: ಸಣ್ಣ ಅಂಬುಲೆನ್ಸ್ ಗೆ ವಿತ್ ಆಕ್ಸಿಜನ್ 5,300 ಆಗುತ್ತೆ
    ಡ್ರೈವರ್: ದೊಡ್ಡ ಅಂಬುಲೆನ್ಸ್ ವಿತ್ ವೆಂಟಿಲೇಟರ್ ಗೆ 12,000 ವರೆಗೆ ಆಗುತ್ತೆ

    ಹೀಗೆ ಅಂಬುಲೆನ್ಸ್ ಸೇವೆಯ ಹೆಸರಿನಲ್ಲಿ ಬಡರೋಗಿಗಳಿಂದ ಸಾವಿರಾರು ರೂ. ವಸೂಲಿ ಮಾಡುತ್ತಿರುವ ಖಾಸಗಿ ಅಂಬುಲೆನ್ಸ್ ಚಾಲಕರ ನಿಜ ಬಣ್ಣ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ವೇಳೆ ಎಲ್ಲವೂ ಬಯಲಾಗಿದೆ. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

    ಬ್ರಿಮ್ಸ್ ಜಾಣಕುರುಡು..!
    ಬ್ರಿಮ್ಸ್ ಆಸ್ಪತ್ರೆ ಬಳಿಯೇ ಈ ಖಾಸಗಿ ಅಂಬುಲೆನ್ಸ್ ಗಳ ದಂಧೆ ನಡೀತಿದ್ದು, ಈ ಬಗ್ಗೆ ಬ್ರಿಮ್ಸ್ ಅಧೀಕ್ಷಕರನ್ನು ಕೇಳಿದ್ರೆ ನನಗೇನೂ ಗೊತ್ತಿಲ್ಲ. ನಿಮ್ಮ ವಾಹಿನಿಯಿಂದ ವಿಷಯ ತಿಳಿದಿದೆ. ಎಸ್‍ಪಿ ಹಾಗೂ ಡಿಸಿಗೆ ಈ ಬಗ್ಗೆ ವರದಿ ನೀಡ್ತೇನೆ ಅಂತ ಜಾರಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಎಷ್ಟು ಅಂಬುಲೆನ್ಸ್ ಇದೆ ಅಂತ ಕೇಳಿದ್ರೆ 6 ಇದೆ ಅಂತಾರೆ. ಆದರೆ ಪಬ್ಲಿಕ್ ರಿಯಾಲಿಟಿ ಚೆಕ್ ನಡೆಸಿದಾಗ ಕೇವಲ 2-3 ಅಂಬುಲೆನ್ಸ್ ಗಳು ಮಾತ್ರ ಕಂಡು ಬಂದ್ವು.

    ಗಡಿ ಜಿಲ್ಲೆ ಬೀದರ್‍ನಲ್ಲಿ ಬ್ರೀಮ್ಸ್‍ಗೆ ಬರುವ ಬಡರೋಗಿಗಳಿಂದ ಖಾಸಗಿ ಅಂಬುಲೆನ್ಸ್ ಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿ. ಇನ್ನಾದರೂ ಸರ್ಕಾರ ಎಚ್ಚೆತ್ತು ಅಂಬುಲೆನ್ಸ್ ಚಾಲಕರ ದಂಧೆಗೆ ಬ್ರೇಕ್ ಹಾಕಬೇಕಾಗಿದೆ. ಇದನ್ನೂ ಓದಿ: ಡಿಕೆಶಿಗಾಗಿ ಒಕ್ಕಲಿಗ ಕಾಂಗ್ರೆಸ್ ನಾಯಕರ ಸಭೆ – ಶಿವಕುಮಾರ್ ಟ್ರೆಂಡ್ ಕ್ರಿಯೇಟ್‍ಗೆ ರಣತಂತ್ರ

  • ಕೊರೊನಾ ವಿಚಾರದಲ್ಲೂ ಎಂಇಎಸ್ ಪುಂಡಾಟ- ಆಸ್ಪತ್ರೆಗೆ ನುಗ್ಗಿ ವೀಡಿಯೋ

    ಕೊರೊನಾ ವಿಚಾರದಲ್ಲೂ ಎಂಇಎಸ್ ಪುಂಡಾಟ- ಆಸ್ಪತ್ರೆಗೆ ನುಗ್ಗಿ ವೀಡಿಯೋ

    ಬೆಳಗಾವಿ: ಕೊರೊನಾ ವಿಚಾರದಲ್ಲೂ ಎಂಇಎಸ್ ಪುಂಡಾಟಿಕೆ ಮೆರೆದಿದ್ದು, ಬ್ರಿಮ್ಸ್ ಆಸ್ಪತ್ರೆಗೆ ನುಗ್ಗಿ ಬೆಡ್‍ಗಳ ಬಳಿ ನೀಂತಿ ವೀಡಿಯೋ ಮಾಡಿಕೊಂಡು, ಪೋಸ್ ನೀಡಿದ್ದಾರೆ.

    ನಗರದ ಬಿಮ್ಸ್ ಆಸ್ಪತ್ರೆಗೆ ನುಗ್ಗಿ ಬೆಡ್‍ಗಳ ಪರಿಶೀಲನೆ ನಡೆಸಿದ್ದು, ಬೆಳಗಾವಿ ಲೋಕಸಭಾ ಉಪಚುನಾವಣೆ ಪರಾಜಿತ ಎಂಇಎಸ್ ಅಭ್ಯರ್ಥಿ ಶುಭಂ ಶೆಲ್ಕೆ ನೇತೃತ್ವದಲ್ಲಿ ಪುಂಡರು ಬಿಮ್ಸ್ ಆಸ್ಪತ್ರೆಗೆ ನುಗ್ಗಿದ್ದಾರೆ. ಬಿಮ್ಸ್ ಆಸ್ಪತ್ರೆಯಲ್ಲಿ ನಿರುಪಯುಕ್ತ ಬೆಡ್‍ಗಳ ಬಳಿ ನಿಂತು ವೀಡಿಯೋ ಮಾಡಿಕೊಂಡು ಪೋಸ್ ನಿಡಿದ್ದಾರೆ. ಎಂಇಎಸ್ ಪುಂಡ ಶುಭಂ ಶೆಲ್ಕೆ ಸಹ ವೀಡಿಯೋ ಮಾಡಿ ಪೋಸ್ ಕೊಟ್ಟಿದ್ದಾನೆ.
    ಎಂಇಎಸ್ ಪುಂಡರು ಆಸ್ಪತ್ರೆ ನುಗ್ಗಿದ್ದ ಬಗ್ಗೆ ಜಿಲ್ಲಾಧಿಕಾರಿ ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ದೂರು ನೀಡಿದ್ದಾರೆ.

    ಪುಂಡರ ವರ್ತನೆ ಬಗ್ಗೆ ಬ್ರಿಮ್ಸ್ ನಿರ್ದೇಶಕರು ಡಿಸಿಗೆ ದೂರು ನೀಡಿದ್ದು, ಯಾವ ರೀತಿ ಕ್ರಮ ಕೈಗೊಳ್ಳಿದ್ದಾರೆ ಕಾದು ನೋಡಬೇಕಿದೆ. ಹೀಗೆ ಏಕಾಏಕಿ ಆಸ್ಪತ್ರೆಗೆ ನುಗ್ಗಿ, ಪುಂಡಾಟಿಕೆ ಮೆರೆದರೆ ಐಸಿಯುನಲ್ಲಿರುವ ರೋಗಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ ರೋಗಿಗಳಿಗೆ ಭಾಬರಿಯಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

  • ನಾವು ಹೇಳಿದ ಸೌಲಭ್ಯ ಕೊಡ್ಲಿಲ್ಲ ಅಂದ್ರೆ ನಿಮ್ಗೆ ಕೊರೊನಾ ಹಬ್ಬಿಸ್ತೀವಿ –  ಬ್ರಿಮ್ಸ್ ಸಿಬ್ಬಂದಿಗೆ ತಬ್ಲಿಘಿಗಳ ಬೆದರಿಕೆ

    ನಾವು ಹೇಳಿದ ಸೌಲಭ್ಯ ಕೊಡ್ಲಿಲ್ಲ ಅಂದ್ರೆ ನಿಮ್ಗೆ ಕೊರೊನಾ ಹಬ್ಬಿಸ್ತೀವಿ –  ಬ್ರಿಮ್ಸ್ ಸಿಬ್ಬಂದಿಗೆ ತಬ್ಲಿಘಿಗಳ ಬೆದರಿಕೆ

    ಬೀದರ್: ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಗಿಯಾಗಿದ್ದವರು ಉತ್ತರ ಪ್ರದೇಶದ ಐಸೋಲೇಷನ್ ವಾರ್ಡ್‍ಗಳಲ್ಲಿ ಉದ್ಧಟತನ ತೋರಿದ್ದಂತೆಯೇ ರಾಜ್ಯದಲ್ಲೂ ನಡೆದುಕೊಳ್ಳುತ್ತಿದ್ದಾರೆ. ಬೀದರಿನ ಬ್ರೀಮ್ಸ್ ಐಸೋಲೇಷನ್ ವಾರ್ಡ್‍ನಲ್ಲಿರುವ 10 ಜನ ತಬ್ಲಿಘಿ ಸೋಂಕಿತರು, ಮನೆ ಊಟ-ಹೈಫೈ ಕೊಠಡಿ ಬೇಕು ಅಂತ ಕಿರಿಕಿರಿ ಮಾಡುತ್ತಿದ್ದಾರೆ.
    ನಾವು ಹೇಳುವ ಸೌಲಭ್ಯ ಕೊಡ್ಲಿಲ್ಲ ಅಂದ್ರೆ ವೈದ್ಯರು, ಸಿಬ್ಬಂದಿಗೆ ಕೊರೊನಾ ಹಬ್ಬಿಸುತ್ತೇವೆ ಎಂದು ಬೆದರಿಕೆ ಹಾಕ್ತಿದ್ದಾರೆ. ಈ ಜಮಾತ್ ದೂರ್ತರ ವರ್ತನೆಯಿಂದ ವೈದ್ಯ-ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ.
    ಈ ಬಗ್ಗೆ, ಬೀದರ್ ಆರೋಗ್ಯಾಧಿಕಾರಿ ವಿ.ಜಿ. ರೆಡ್ಡಿ ಅವರು ಪಬ್ಲಿಕ್‍ಟಿವಿ ಜೊತೆ ಮಾತನಾಡಿ ಸೋಂಕು ಹರಡುವ ಸಾಧ್ಯತೆಯಿಂದಾಗಿ ಮನೆಯಿಂದ ಊಟ ನೀಡಲು ಸಾಧ್ಯವಿಲ್ಲ. ಎಲ್ಲರಿಗೂ ಆಸ್ಪತ್ರೆಯ ಊಟವನ್ನೇ ನೀಡಲಾಗುತ್ತಿದೆ ಎಂದು ಹೇಳಿದ್ದೇವೆ. ಅಷ್ಟೇ ಅಲ್ಲದೇ ನಮ್ಮ ವೈದ್ಯಕೀಯ ಸಿಬ್ಬಂದಿಗೂ ತಾಳ್ಮೆಯಿಂದ ವರ್ತಿಸುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ:  ಮತ್ತೆ ತಬ್ಲಿಘಿಗಳ ಹುಚ್ಚಾಟ – ಗಾಜಿಯಾಬಾದ್ ಬಳಿಕ ಕಾನ್ಪುರ, ಲಕ್ನೋದಿಂದ ದೂರು

  • ಮುಗಿಯದ ಬ್ರಿಮ್ಸ್ ಸಮಸ್ಯೆ – ಕುಡಿಯುವ ನೀರಿನ ಘಟಕಗಳಿದ್ದರೂ ಪ್ರಯೋಜನಕ್ಕೆ ಬರಲ್ಲ

    ಮುಗಿಯದ ಬ್ರಿಮ್ಸ್ ಸಮಸ್ಯೆ – ಕುಡಿಯುವ ನೀರಿನ ಘಟಕಗಳಿದ್ದರೂ ಪ್ರಯೋಜನಕ್ಕೆ ಬರಲ್ಲ

    ಬೀದರ್: ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಬ್ರಿಮ್ಸ್) ಗ್ರಹಣ ಬಡಿದಿದ್ದು, ಬ್ರಿಮ್ಸ್ ನ ಸಮಸ್ಯೆಗಳಿಗೆ ಯಾವಾಗ ಮುಕ್ತಿ ಸಿಗುತ್ತದೆ ಎನ್ನುವ ಹಾಗಾಗಿದೆ. ಇಲ್ಲಿ ಕುಡಿಯುವ ನೀರಿನ ಘಟಕಗಳಿದ್ದರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ.

    ಬ್ರಿಮ್ಸ್ ನಲ್ಲಿ ಇರುವ ಸಮಸ್ಯೆಗಳಿಗೆ ಮುಗಿಯದ ಕಥೆಯಾಗಿ ಬಿಟ್ಟಿದೆ. ಒಂದು ಕಡೆ ಸರಿಯಾದ ವೈದ್ಯಕೀಯ ವ್ಯವಸ್ಥೆ ಸಿಗದೇ ಜನ ಪರದಾಡುತ್ತಿದ್ದರೆ, ಇನ್ನೊಂದೆಡೆ ಹೆಸರಿಗೆ ಮಾತ್ರ ಕುಡಿಯುವ ನೀರಿನ ಘಟಕಗಳಿವೆ. ಆದ್ರೆ ಅದರಲ್ಲಿ ನೀರೇ ಬರುತ್ತಿಲ್ಲ.

    ಹೌದು. ಬ್ರಿಮ್ಸ್ ನಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದ್ರೆ 1 ವರ್ಷದಿಂದ ಯಾವುದು ಕೆಲಸ ಮಾಡುತ್ತಿಲ್ಲ. ಈ ವೈದ್ಯಕೀಯ ಸಂಸ್ಥೆಯಲ್ಲಿ 500ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನ ಮಾಡ್ತಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಶುದ್ಧ ನೀರಿನ ಘಟಕಗಳನ್ನು ಹಾಕಲಾಗಿತ್ತು. ಆದರೆ ವರ್ಷದ ನಂತರ ಈ ಘಟಕಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಸರ್ಕಾರ ಅಭಿವೃದ್ಧಿಗೆ ನೀಡಿದ ಹಣ ಎಲ್ಲಿ ಹೋಗುತ್ತಿದೆ? ಬ್ರಿಮ್ಸ್ ಸ್ಥಿತಿ ಯಾವಾಗ ಬದಲಾಗುತ್ತದೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

    ಇತ್ತೀಚಿಗಷ್ಟೇ ಮಳೆಗೆ ವರ್ಷದ ಹಿಂದೆಯಷ್ಟೇ ನಿರ್ಮಿಸಿದ್ದ ಬ್ರಿಮ್ಸ್ ನ ಮುಂಭಾಗ ಕುಸಿದು ಬಿದ್ದಿತ್ತು. ಇದಾದ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ, ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಬ್ರಿಮ್ಸ್ ಗೆ ಭೇಟಿ ನೀಡಿದ್ದರು. ಈ ವೇಳೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸರ್ಕಾರ ಒದಗಿಸಿದ್ದ ಬೆಡ್‍ಗಳನ್ನು ಕೋಣೆಯೊಂದರಲ್ಲಿ ಕೂಡಿಟ್ಟು ಧೂಳು ಹಿಡಿಸಿದ್ದ ವಿಚಾರ ಬಯಲಾಗಿತ್ತು.

    ಬ್ರಿಮ್ಸ್ ದುಸ್ಥಿತಿಯನ್ನು ಕಂಡು ಬೇಸತ್ತ ಸ್ಥಳೀಯರೊಬ್ಬರು ಸಚಿವರ ಭೇಟಿ ವೇಳೆ ಇಂಥ ಸಂಸ್ಥೆ ಯಾಕ್ ಬೇಕು? ಬೀಗ ಹಾಕ್ಕೊಂಡು ಹೋಗಿ ಅಂತ ಆರೋಗ್ಯ ಸಚಿವರ ಕೈಗೆ ಬೀಗ ಕೊಟ್ಟು ಅಸಮಾಧಾನವನ್ನು ಹೊರ ಹಾಕಿದ್ದರು.

  • ಬ್ರೀಮ್ಸ್ ಅವ್ಯವಸ್ಥೆ ನೋಡಿ ನಿರ್ದೇಶಕರನ್ನ ತರಾಟೆ ತಗೆದುಕೊಂಡ ಬಂಡೆಪ್ಪ ಖಾಶೆಂಪೂರ್

    ಬ್ರೀಮ್ಸ್ ಅವ್ಯವಸ್ಥೆ ನೋಡಿ ನಿರ್ದೇಶಕರನ್ನ ತರಾಟೆ ತಗೆದುಕೊಂಡ ಬಂಡೆಪ್ಪ ಖಾಶೆಂಪೂರ್

    ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಇಂದು ಬ್ರೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆ ಕಂಡು ಬ್ರೀಮ್ಸ್ ನಿರ್ದೇಶಕ ಡಾ. ಚನ್ನಣ್ಣನವರ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ.

    ಆಸ್ಪತ್ರೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಹಾಗೂ ಅವ್ಯವಸ್ಥಿತೆಯಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಸ್ಥಳೀಯರು ಸಚಿವರಿಗೆ ದೂರು ನೀಡಿದ್ದರು. ಹೀಗಾಗಿ ಇಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವಪ್ಪ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಬೆಡ್‍ಗಳ ಮೇಲೆ ದೂಳು ಇರುವುದು, ಸ್ವಚ್ಛತೆ ಇಲ್ಲದಿರುವುದು, ಬೆಳಕಿನ ಅಭಾವ ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು.

    ನಿಮ್ಮ ಮನೆಯ ಕೆಲಸಗಾರರು ಸರಿಯಾಗಿ ಕೆಲಸ ಮಾಡದಿದ್ದರೆ ನೀವು ಸುಮ್ಮನೆ ಇರುತ್ತಿರಾ? ಆಸ್ಪತ್ರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ನಿಮಗೇನು ತೊಂದರೆ? ನಿಮ್ಮ ನಿಷ್ಕಾಳಜಿ ರೋಗಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಸಮಸ್ಯೆ ಏನು ಅಂತಾ ಹೇಳಿ ಎಂದು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

    ಸ್ವಚ್ಛತೆ ಕಾಪಾಡಲು ಹಾಗೂ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ನಿಮಗೆ ಏನು ಸವಲತ್ತು ಬೇಕು ಹೇಳಿ, ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ನಿಮಗೆ ಅನುಕೂಲ ಮಾಡಿಕೊಡುತ್ತೇನೆ. ಸಹಾಯ ಮಾಡಲಾಗುತ್ತದೆ ಅಂತಾ ನಾನೇ ಪತ್ರದಲ್ಲಿ ಬರೆದುಕೊಡಬೇಕೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv