Tag: Brij Bhushan Singh

  • ವಿನೇಶ್‌ ಫೋಗಟ್ ಹೋದಲ್ಲೆಲ್ಲ ಸತ್ಯನಾಶವಾಗಲಿದೆ: ಬ್ರಿಜ್ ಭೂಷಣ್ ಶರಣ್ ಸಿಂಗ್

    ವಿನೇಶ್‌ ಫೋಗಟ್ ಹೋದಲ್ಲೆಲ್ಲ ಸತ್ಯನಾಶವಾಗಲಿದೆ: ಬ್ರಿಜ್ ಭೂಷಣ್ ಶರಣ್ ಸಿಂಗ್

    – ಫೋಗಟ್ ಗೆಲುವಿಗೆ ಸಹಕರಿಸಿದ ಮಹಾನ್‌ ವ್ಯಕ್ತಿ ನಾನು!

    ಚಂಡೀಗಢ: ವಿನೇಶ್ ಫೋಗಟ್ (Vinesh Phogat) ಅವರು ಚುನಾವಣೆ ಗೆದ್ದರು, ಆದರೆ ಕಾಂಗ್ರೆಸ್‌ ಸೋಲು ಅನುಭವಿಸಿತು. ಅವರು ಹೋದಲ್ಲೆಲ್ಲ ಸತ್ಯನಾಶವಾಗಲಿದೆ ಎಂದು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಹರಿಯಾಣ (Haryana) ವಿಧಾನಸಭಾ ಚುನಾವಣೆಯಲ್ಲಿ ಜುಲಾನಾ ಕ್ಷೇತ್ರದಿಂದ ವಿನೇಶ್ ಫೋಗಟ್ ಗೆಲುವು ಸಾಧಿಸಿದ್ದಾರೆ. ಅವರು ನನ್ನ ಹೆಸರನ್ನು ಹೇಳಿಕೊಂಡು ಗೆದ್ದಿದ್ದಾರೆ. ಇದರಿಂದಾಗಿ ಅವರ ಗೆಲುವಿಗೆ ಸಹಕರಿಸಿದ ಮಹಾನ್‌ ವ್ಯಕ್ತಿ ನಾನು ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹರಿಯಾಣ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್‌

    ಕಾಂಗ್ರೆಸ್ (Congress) ಪಕ್ಷವನ್ನು ಪ್ರತಿನಿಧಿಸುತ್ತಿರುವ ವಿನೇಶ್ ಫೋಗಟ್ ಬಿಜೆಪಿಯ ಯೋಗೇಶ್ ಕುಮಾರ್ ಅವರನ್ನು 6,000 ಮತಗಳ ಅಂತರದಿಂದ ಸೋಲಿಸಿ ಜೂಲಾನಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಗೆಲುವು ಕಾಂಗ್ರೆಸ್‌ಗೆ ಮಹತ್ವದ ಮೈಲಿಗಲ್ಲಾಗಿದೆ. ಏಕೆಂದರೆ ಇದು 2005ರ ಬಳಿಕ ಈ ಕ್ಷೇತ್ರದಲ್ಲಿ ಅವರ ಮೊದಲ ಗೆಲುವಾಗಿದೆ.

    ಗೆಲುವಿನ ಬಳಿಕ ಪ್ರತಿಕ್ರಿಯಿಸಿದ್ದ ವಿನೇಶ್ ಫೋಗಟ್ ʻಸತ್ಯಕ್ಕೆ ಜಯವಾಗಿದೆ’. ನನ್ನ ರಾಜಕೀಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಕಾಂಗ್ರೆಸ್ (Congress) ಪಕ್ಷಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಸಮಯ ಸರಿಯಿಲ್ಲದೇ ಇರುವಾಗ ಮಾತ್ರ ನಮ್ಮ ಜೊತೆ ಯಾರು ನಿಂತಿದ್ದಾರೆ ಎಂದು ಗೊತ್ತಾಗುತ್ತದೆ. ಬಿಜೆಪಿ (BJP) ಪಕ್ಷವನ್ನು ಹೊರತುಪಡಿಸಿ ಇತರ ಎಲ್ಲಾ ಪಕ್ಷಗಳು ನನ್ನ ನೋವನ್ನು ಹಾಗೂ ನನ್ನ ಕಣ್ಣೀರನ್ನು ಅರ್ಥಮಾಡಿಕೊಂಡಿದ್ದವು ಎಂದಿದ್ದರು.

    ಒಲಿಂಪಿಕ್ಸ್‌ನಲ್ಲಿ ಅನರ್ಹಗೊಳ್ಳುವ ಮೂಲಕ ಸೋಲನ್ನು ಅನುಭವಿಸಿದ್ದರು. ಇದಾದ ಬಳಿಕ ಸೆ.4 ರಂದು ಕಾಂಗ್ರೆಸ್‌ಗೆ ಸೇರಿಕೊಂಡಿದ್ದರು. ಇದನ್ನೂ ಓದಿ: Jammu Kashmir Results | ಚುನಾವಣೆಯಲ್ಲಿ ಸೋತರೂ ಮತಗಳಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

  • ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಸ್ – ಬ್ರಿಜ್ ಭೂಷಣ್‌ಗೆ ಬಿಗ್ ರಿಲೀಫ್

    ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಸ್ – ಬ್ರಿಜ್ ಭೂಷಣ್‌ಗೆ ಬಿಗ್ ರಿಲೀಫ್

    ನವದೆಹಲಿ: ಕುಸ್ತಿಪಟುಗಳ (Wrestlers) ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ (Brij Bhushan Singh) ದೆಹಲಿಯ ರೋಸ್ ಅವೆನ್ಯೂ ಕೋರ್ಟ್ (Delhi’s Rouse Avenue court) ಗುರುವಾರ ಜಾಮೀನು ನೀಡಿದೆ.

    ಎಂಪಿ, ಎಂಎಲ್‌ಎ ವಿಶೇಷ ನ್ಯಾಯಾಧೀಶರಾದ ಹರ್ಜೀತ್ ಸಿಂಗ್ ಅವರು ಜಾಮೀನು ನೀಡಿ ಆದೇಶ ಹೊರಡಿಸಿದ್ದು, ಅನುಮತಿಯಿಲ್ಲದೇ ಬ್ರಿಜ್ ಭೂಷಣ್ ದೇಶ ತೊರೆಯುವಂತಿಲ್ಲ ಹಾಗೂ ತನ್ನ ವಿರುದ್ಧ ಪ್ರಕರಣ ದಾಖಲಿಸಿದವರ ವಿರುದ್ಧ ನೇರವಾಗಿ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕುವಂತಿಲ್ಲ ಎಂದು ಕೋರ್ಟ್ ಎಚ್ಚರಿಕೆ ಕೊಟ್ಟಿದೆ. ಇದನ್ನೂ ಓದಿ: ಬೇಕಂತಲೇ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ, ಹಿಂಬಾಲಿಸುತ್ತಿದ್ದ – ಬ್ರಿಜ್‌ ಭೂಷಣ್‌ ವಿರುದ್ಧ 10 ಕಂಪ್ಲೆಂಟ್‌, 2 FIR

    ಡಬ್ಲ್ಯುಎಫ್‌ಐನ ಮಾಜಿ ಹೆಚ್ಚುವರಿ ಕಾರ್ಯದರ್ಶಿ ವಿನೋದ್ ತೋಮರ್ ಅವರಿಗೂ ನ್ಯಾಯಾಲಯ ಜಾಮೀನು ನೀಡಿದೆ. ಬ್ರಿಜ್ ಭೂಷಣ್ ಹಾಗೂ ವಿನೋದ್ ತೋಮರ್ ಅವರಿಗೆ ತಲಾ 25,000 ರೂ. ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ. ತೋಮರ್, ಬ್ರಿಜ್ ಭೂಷಣ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದರು ಹಾಗೂ ಕುಸ್ತಿ ಸಂಸ್ಥೆಯ ದೈನಂದಿನ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಈ ವರ್ಷದ ಜನವರಿಯಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ವಿನೋದ್ ತೋಮರ್ ಅವರನ್ನ ಅಮಾನತುಗೊಳಿಸಿತ್ತು.

    ಒಲಿಂಪಿಕ್ಸ್ ಪದಕ ವಿಜೇತರಾದ ವಿನೇಶ್ ಫೋಗಟ್ (Vinesh Phogat), ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಅನೇಕ ಅಪ್ರಾಪ್ತೆಯರು ಸೇರಿ 7 ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಆರೋಪ ಹೊರಿಸಿದ್ದರು. ಅಲ್ಲದೇ ಅವರನ್ನು ಬಂಧಿಸಬೇಕು ಹಾಗೂ ಡಬ್ಲ್ಯೂಎಫ್‌ಐ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದರು. ಕಳೆದ ಜೂನ್ ತಿಂಗಳಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿತ್ತು. ಇದನ್ನೂ ಓದಿ: ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟುಗಳ ವಿರುದ್ಧ FIR; ದೇಶದಲ್ಲಿ ಸರ್ವಾಧಿಕಾರ ಆರಂಭವಾಯ್ತಾ – ಸಾಕ್ಷಿ ಮಲಿಕ್‌ ಪ್ರಶ್ನೆ

    ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳ ಆಧಾರದ ಮೇಲೆ ದೆಹಲಿ ಪೊಲೀಸರು 2 ಎಫ್‌ಐಆರ್ ಮತ್ತು 10 ದೂರುಗಳನ್ನ ದಾಖಲಿಸಿದ್ದರು. ಬ್ರಿಜ್ ಭೂಷಣ್ ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆಯಿಟ್ಟಿದ್ದರು, ಅನುಚಿತವಾಗಿ ದೇಹ ಸ್ಪರ್ಶಿಸುವುದು, ಹುಡುಗಿಯರ ಎದೆ ಮೇಲೆ ಕೈ ಹಾಕುವುದು, ಮೈ-ಕೈ ಮುಟ್ಟುವುದು, ಅವರನ್ನು ಹಿಂಬಾಲಿಸುವುದು ಆರೋಪ ಸೇರಿದಂತೆ 10 ದೂರುಗಳನ್ನ ದಾಖಲಿಸಿಕೊಂಡಿದ್ದರು. ಕಳೆದ ಏಪ್ರಿಲ್ 21 ರಂದೇ ದೂರು ದಾಖಲಾಗಿದ್ದು, ಏಪ್ರಿಲ್ 28 ರಂದು ಎರಡು ಈIಖ ದಾಖಲಾಗಿದೆ. ಭೂಷಣ್ ವಿರುದ್ಧ IPC ಸೆಕ್ಷನ್ 354, 354 (ಎ), 354 (ಡಿ) ಹಾಗೂ ಸೆಕ್ಷನ್ 34ರ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಕನಿಷ್ಠ 3 ವರ್ಷ ಜೈಲು ಶಿಕ್ಷೆಗೆ ಒಳಪಡಿಸಬಹುದಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ರಿಜ್ ಭೂಷಣ್ ವಿರುದ್ಧದ ಕಿರುಕುಳ ಆರೋಪ – ತನಿಖೆಗೆ ಎಸ್‍ಐಟಿ ರಚನೆ

    ಬ್ರಿಜ್ ಭೂಷಣ್ ವಿರುದ್ಧದ ಕಿರುಕುಳ ಆರೋಪ – ತನಿಖೆಗೆ ಎಸ್‍ಐಟಿ ರಚನೆ

    ನವದೆಹಲಿ: ಕುಸ್ತಿ ಫೆಡರೇಶನ್ ಮುಖ್ಯಸ್ಥ (WFI) ಬ್ರಿಜ್ ಭೂಷಣ್ ಸಿಂಗ್ (Brij Bhushan Singh) ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ ಎಂದು ದೆಹಲಿ ಪೊಲೀಸರು (Delhi Police) ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ (Special Court) ಮಾಹಿತಿ ನೀಡಿದ್ದಾರೆ.

    ನ್ಯಾಯಾಲಯ ನೀಡಿದ್ದ ಆದೇಶದ ಅನ್ವಯ ಎಸ್‍ಐಟಿ ರಚಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ನಾವು ಎಸ್‍ಐಟಿ ರಚಿಸಿದ್ದೇವೆ. ಎಸ್‍ಐಟಿ ಪ್ರಕರಣದ ತನಿಖೆ ನಡೆಸಲಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ್ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರ ಪೀಠಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನ ನೇಣಿಗಾದ್ರೂ ಹಾಕಿ, ಆದ್ರೆ ಕುಸ್ತಿ ನಿಲ್ಲಿಸಿದ್ರೆ ನಿಮ್ಮ ಭವಿಷ್ಯಕ್ಕೆ ಹಾನಿ – ಬ್ರಿಜ್‌ಭೂಷಣ್ ಭಾವುಕ ಹೇಳಿಕೆ

    ವರದಿಯನ್ನು ದೆಹಲಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ, ಪ್ರಕರಣದ ಸ್ವರೂಪವನ್ನು ಪರಿಗಣಿಸಿ ವರದಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ವಿನಂತಿಸಿದ್ದಾರೆ. ಬಳಿಕ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತು.

    ಅಪ್ರಾಪ್ತೆ ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat), ಸಾಕ್ಷಿ ಮಲ್ಲಿಕ್, ಬಜರಂಗ್ ಪೂನಿಯಾ ಸೇರಿದಂತೆ ಹಲವರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತನಿಖೆಯ ವಿಚಾರಣೆ ಕೋರಿ ಕುಸ್ತಿಪಟುಗಳು ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿತ್ತು.

    ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪೊಲೀಸರು ಪೋಕ್ಸೋ (POCSO) ಸೇರಿದಂತೆ ಎರಡು ಎಫ್‍ಐಆರ್‌ಗಳನ್ನು (FIR) ದಾಖಲಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರಿಗೆ ಬಹುಮತ ಬರಲ್ಲ, ಅದ್ಕೆ ಬೇರೆ ಪಕ್ಷದ ಜೊತೆ ಮಾತಾಡುವ ಪ್ರಯತ್ನ ಮಾಡ್ತಿದ್ದಾರೆ – ಸಿಎಂ