Tag: Brigade Road

  • ದೇವಾಲಯಗಳು ಫುಲ್ -ಬ್ರಿಗೇಡ್ ರೋಡ್ ಖಾಲಿ ಖಾಲಿ

    ದೇವಾಲಯಗಳು ಫುಲ್ -ಬ್ರಿಗೇಡ್ ರೋಡ್ ಖಾಲಿ ಖಾಲಿ

    ಬೆಂಗಳೂರು: ಹೊಸ ವರ್ಷ ಇಂದು ಆರಂಭವಾಗಿದ್ದು, 2020ರ ಸ್ವಾಗತಕ್ಕೆ ನೂರಾರೂ ಸಂಖ್ಯೆಯಲ್ಲಿ ಸಾರ್ವಜನಿಕರು ಸಾಕ್ಷಿಯಾದರು. ನಗರದ ಬ್ರಿಗೇಡ್ ರೋಡ್‍ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದರು. ಇಂದು ಬೆಳ್ಳಂಬೆಳಗ್ಗೆ ಆಚರಣೆ ಮುಗಿದ ಬೆನ್ನಲ್ಲೇ ಎಂಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ರಸ್ತೆಗಳು ಬಣಗುಡುತ್ತಿದ್ದವು.

    ಮೋಜು ಮಸ್ತಿ ಮಾಡಿ ರಸ್ತೆ ಅಂದ ಹಾಳು ಮಾಡಿದ್ದನ್ನ ಪೌರಕಾರ್ಮಿಕರು ಸ್ವಚ್ಛತೆಗೊಳಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಜನ ಮುಂಜಾನೆಯೇ ರಸ್ತೆ ಸ್ವಚ್ಛತೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಬಾರಿ ಹೊಸ ವರ್ಷಕ್ಕೆ ಹೊಸ ಟಾಸ್ಕ್ ತೆಗೆದುಕೊಂಡಿತ್ತು.

    ಅದೇನೆಂದರೆ ಎಂಜಿ ರೋಡ್, ಬ್ರಿಗೇಡ್ ರೋಡ್‍ನಲ್ಲಿ ಕಸ ಹುಡುಕಿದವರಿಗೆ ಬಹುಮಾನ ಎಂಬ ಸ್ಪರ್ಧೆ ಸಹ ಆಯೋಸಿತ್ತು. ಅಷ್ಟರ ಮಟ್ಟಿಗೆ ಬಿಬಿಎಂಪಿ ಪೌರಕಾರ್ಮಿಕರು ಸಂಪೂರ್ಣ ಕ್ಲೀನ್ ಮಾಡಿದ್ದಾರೆ ಎಂದು ಆತ್ಮವಿಶ್ವಾಸದಿಂದ ಸ್ಪರ್ಧೆ ಆಯೋಜಿಸಿದವರು ಹೇಳಿದ್ದಾರೆ.

    ಮತ್ತೊಂದೆಡೆ ನಗರದ ದೇವಾಲಯಗಳಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಇದರಿಂದ ದೇವರ ದರ್ಶನ ಮಾಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

  • ಬ್ರಿಗೇಡ್ ರೋಡನ್ನು ಅಬ್ರಾಡ್ ಎಂದುಕೊಂಡಿದ್ದೆ: ಪ್ರಭಾಸ್

    ಬ್ರಿಗೇಡ್ ರೋಡನ್ನು ಅಬ್ರಾಡ್ ಎಂದುಕೊಂಡಿದ್ದೆ: ಪ್ರಭಾಸ್

    ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ತಮ್ಮ ಮುಂಬರುವ ‘ಸಾಹೋ’ ಚಿತ್ರಕ್ಕಾಗಿ ಬೆಂಗಳೂರಿಗೆ ಆಗಮಸಿದ್ದಾರೆ. ಈ ವೇಳೆ ಅವರು ಬ್ರಿಗೇಡ್ ರೋಡ್ ಅನ್ನು ಅಬ್ರಾಡ್ ಎಂದುಕೊಂಡಿದ್ದ ವಿಷಯವನ್ನು ರಿವೀಲ್ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪ್ರಭಾಸ್ ಅವರಿಗೆ ಬೆಂಗಳೂರಿನ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಅವರು, ನನಗೆ 16 ವರ್ಷ ಇದ್ದಾಗ ನನ್ನ ಸ್ನೇಹಿತರು ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದರು. ನಾನು ಕೂಡ ಅವರ ಜೊತೆ ಬಂದಿದ್ದೆ. ಆದರೆ ನಾನು ಪರೀಕ್ಷೆ ಬರೆಯಲು ಬಂದಿರಲಿಲ್ಲ. ಎಂಜಾಯ್ ಮಾಡಲೆಂದು ಬಂದಿದ್ದೆ. ಆಗ ನಾನು ಬ್ರಿಗೇಡ್ ರೋಡಿಗೆ ಹೋಗಿದ್ದೆ. . ಆಗ ಇದು ಭಾರತ ಅಲ್ಲ ವಿದೇಶ ಎಂದು ಅನಿಸುತ್ತಿತ್ತು ಎಂದರು.

    ಬ್ರಿಗೇಡ್ ರೋಡಿನಲ್ಲಿ ಜನರು ಧರಿಸುವ ಉಡುಪು, ಬೈಕ್, ಕಾಫಿ ಶಾಪ್‍ಗಳು ಆ ವಾತಾವರಣ ಅಬ್ರಾಡ್ ರೀತಿ ಇತ್ತು. ಸಂಜೆ 6 ಗಂಟೆ ಆಗುತ್ತಿದ್ದಂತೆ ಮಳೆ ಹನಿ ಬೀಳುತ್ತಿತ್ತು. ಅದು ತುಂಬಾನೇ ಸುಂದರವಾಗಿತ್ತು. ಬೆಂಗಳೂರು ಯಾವಾಗಲೂ ಒಂದು ಸುಂದರ ನಗರವಾಗಿರುತ್ತದೆ. ನಾನು ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದೇನೆ. ಅದು ಕೂಡ ಮಹಾನಗರ. ಆದರೆ ಬೆಂಗಳೂರು ಮಾತ್ರ ಸುಂದರವಾದ ನಗರ ಎಂದು ಹೇಳಿದರು.

    ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

  • ಈ ಬಾರಿಯ ಹೊಸ ವರ್ಷದಲ್ಲೂ ಕಾಮುಕರ ಕಾಟ- ಚರ್ಚ್‍ಸ್ಟ್ರೀಟ್‍ನಲ್ಲಿ ಯುವತಿಯರ ಅನುಚಿತ ವರ್ತನೆ

    ಈ ಬಾರಿಯ ಹೊಸ ವರ್ಷದಲ್ಲೂ ಕಾಮುಕರ ಕಾಟ- ಚರ್ಚ್‍ಸ್ಟ್ರೀಟ್‍ನಲ್ಲಿ ಯುವತಿಯರ ಅನುಚಿತ ವರ್ತನೆ

    ಬೆಂಗಳೂರು: ಬ್ರಿಗೇಡ್ ರೋಡ್‍ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕಾಮುಕನೊಬ್ಬ ವಿದೇಶಿ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿರೋ ಘಟನೆ ನಡೆದಿದೆ.

    ಮಹಿಳೆಯ ಹಿಂಭಾಗಕ್ಕೆ ಹೊಡೆದು ಓಡಿಹೋಗಲು ಯತ್ನಿಸಿದ್ದ ಯುವಕನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದ್ರು. ನಂತ್ರ ಪೊಲೀಸರು ಆ ಯುವಕನನ್ನು ಮಹಿಳೆ ಬಳಿ ಕರೆದುಕೊಂಡು ಹೋದ್ರು. ಅಲ್ಲದೆ ಮಹಿಳೆಯ ಕಾಲು ಹಿಡಿದು ಕ್ಷಮೆ ಕೇಳುವಂತೆ ಹೇಳಿದ್ರು. ಈ ವೇಳೆ ನಡುರಸ್ತೆಯಲ್ಲೆ ಯುವಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾನೆ. ಇದನ್ನೂ ಓದಿ: 2017ಕ್ಕೆ ಗುಡ್ ಬೈ, 2018ಕ್ಕೆ ಸ್ವಾಗತ!

    ಇನ್ನು ರಾತ್ರಿ ಹೊಸವರ್ಷಾಚರಣೆ ವೇಳೆ ಮಹಿಳೆಯೊಬ್ಬರಿಗೆ ಕಿಡಿಗೇಡಿಗಳು ಕಾಟ ಕೊಟ್ಟಿದ್ದಾರೆ. ತಿಪ್ಪಸಂದ್ರ ಮೂಲದ ಬೆನಕ ಎಂಬವರು ತಮ್ಮ ಕುಟುಂಬದೊಂದಿಗೆ ಹೊಸವರ್ಷಾಚರಣೆಗೆ ಎಂಜಿ ರೋಡ್‍ಗೆ ಬಂದಿದ್ರು. ಆದ್ರೆ ಈ ವೇಳೆ ಕಾಮುಕರ ಕಾಟದಿಂದ ವಾಪಸ್ ಹೊರಟ್ರು. ವಾಪಸ್ ಹೋಗುವಾಗಲೂ ಕಾಮುಕನೊಬ್ಬ ಯುವತಿಗೆ ಟಚ್ ಮಾಡಿ ಕಿರುಕುಳ ಕೊಟ್ಟಿದ್ದಾನೆ. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಬೆನಕ, ಪೊಲೀಸರು ಬೆಂಗಳೂರು ಸೇಫ್ ಅಂತಾರೆ ಆದ್ರೆ, ಎಲ್ಲಕ್ಕಿಂತ ಹೆಚ್ಚು ಡೇಂಜರ್ ಈ ಬೆಂಗಳೂರು ಅಂತಾ ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ರಾಜ್ಯದೆಲ್ಲೆಡೆ ಹೊಸ ವರ್ಷದ ಸಂಭ್ರಮ- ಬೆಂಗ್ಳೂರಲ್ಲಿ ಮಾದರಿಯಾದ್ರು ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್

    ಹೊಸವರ್ಷದ ಸಂಭ್ರಮಾಚರಣೆ ವೇಳೆ ಕುಡಿದ ಮತ್ತಿನಲ್ಲಿ ಯುವತಿಯರು ಅನುಚಿತವಾಗಿ ವರ್ತಿಸಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿರೋ ಸೋಸಿಯಲ್ ಹೋಟೆಲ್ ಮುಂಭಾಗದಲ್ಲಿ ಯುವತಿಯರು ಅರೆಪ್ರಜ್ಞಾಸ್ಥೆಯಲ್ಲಿ ಕುಡಿದು ಹೆಚ್ಚಾಗಿ ವಾಂತಿ ಮಾಡುತ್ತಿದ್ದಿದ್ದು ಕಂಡು ಬಂತು. ಜೊತೆಗೆ ಸಂಭ್ರಮಾಚರಣೆ ವೇಳೆ ಪೊಲೀಸರ ಬ್ಯಾರಿಕೇಡ್ ಮುರಿತು ಸಾವಿರಾರು ಜನ ಬ್ರಿಗೇಡ್ ರೋಡ್ ಕಡೆಗೆ ನುಗ್ಗಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಬೇಕಾಯ್ತು. ಇದನ್ನೂ ಓದಿ: ಉಡುಪಿಯಲ್ಲಿ ನ್ಯೂ ಇಯರ್ ಪಾರ್ಟಿ ಬಲು ಜೋರು

    ಯುವಕನೊಬ್ಬ ಪೊಲೀಸರ ಎದುರಲ್ಲೇ ಯುವತಿಯನ್ನು ಚುಡಾಯಿಸಿದ ಘಟನೆ ಬೆಂಗಳೂರಿನ ಗರುಡಾ ಮಾಲ್ ಬಳಿಯ ನೋ ಲಿಮಿಟ್ಸ್ ಕ್ಲಬ್ ಬಳಿ ನಡೆದಿದೆ. ಈ ವೇಳೆ ಯುವತಿಯನ್ನು ಚುಡಾಯಿಸಿದ ಯುವಕನಿಗೆ ಪಾನಮತ್ತ ಯುವಕನೊಬ್ಬ ಥಳಿಸಿದ್ದಾನೆ. ಎಲ್ಲವೂ ಪೊಲೀಸರ ಎದುರೇ ನಡೆದ್ರೂ ಪೊಲೀಸರು ಸುಮ್ಮನೆ ನೋಡುತ್ತಾ ನಿಂತಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿಯ ಪ್ರಿಯಕರ ಬೆಂಗಳೂರು ಪೊಲೀಸರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

  • ಬಿಗಿ ಭದ್ರತೆಯಲ್ಲಿ ಹೊಸ ವರ್ಷಾಚರಣೆ- ಖಾಕಿಗಳಿಗೆ ಕೊಡ್ತಾರಂತೆ ರಿಫ್ಲೆಕ್ಟ್ ಜಾಕೆಟ್

    ಬಿಗಿ ಭದ್ರತೆಯಲ್ಲಿ ಹೊಸ ವರ್ಷಾಚರಣೆ- ಖಾಕಿಗಳಿಗೆ ಕೊಡ್ತಾರಂತೆ ರಿಫ್ಲೆಕ್ಟ್ ಜಾಕೆಟ್

    ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನಲೆ ಪೂರ್ವ ಸಿದ್ಧತೆಯ ಭದ್ರತೆ ವೀಕ್ಷಿಸಲು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆಗೆ ಭೇಟಿ ನೀಡಿದರು.

    ಮುಂಜಾಗ್ರತಾ ಕ್ರಮವಾಗಿ ಎಲ್ಲೆಲ್ಲಿ ಸಿಸಿಟಿವಿ, ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಅನ್ನೋದರ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೇ ಎಷ್ಟು ಸಿಬ್ಬಂದಿ ಭದ್ರತೆ ನಿಯೋಜನೆಗೆ ಸೂಕ್ತ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಿದ್ರು.

    ಇನ್ನು ಭದ್ರತೆಯಲ್ಲಿರುವ ಎಲ್ಲಾ ಪೊಲೀಸರಿಗೆ ಇದೇ ಮೊದಲ ಬಾರಿಗೆ ರಿಫ್ಲೆಕ್ಟ್ ಜಾಕೆಟ್ಸ್, ಹೈ ಡೆಫಿನೇಷನ್ 500 ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ಅನಿವಾರ್ಯ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗುವುದೆಂದು ಅವರು ತಿಳಿಸಿದರು.

  • ಬೆಂಗ್ಳೂರಲ್ಲಿ ಈಗ ಮಹಿಳೆಯರಿಗೆ ಪಾರ್ಕಿಂಗ್ ನಲ್ಲೂ ರಿಸರ್ವೇಷನ್

    ಬೆಂಗ್ಳೂರಲ್ಲಿ ಈಗ ಮಹಿಳೆಯರಿಗೆ ಪಾರ್ಕಿಂಗ್ ನಲ್ಲೂ ರಿಸರ್ವೇಷನ್

    ಬೆಂಗಳೂರು: ಬಸ್ ಸೀಟ್, ಉದ್ಯೋಗ ಮತ್ತು ಟ್ರೈನ್ ಬೋಗಿಯಲ್ಲಿ ಮಹಿಳೆಯರಿಗೆ ರಿಸರ್ವೆಷನ್ ಇದೆ. ಈಗ ಪಾರ್ಕಿಂಗ್ ನಲ್ಲೂ ಮಹಿಳಾ ಚಾಲಕರಿಗೆ ರಿಸರ್ವೆಷನ್ ಸಿಗುತ್ತಿದ್ದು, ಇದರ ಮೊದಲ ಹೆಗ್ಗಳಿಕೆ ನಮ್ಮ ಸಿಲಿಕಾನ್ ಸಿಟಿಗೆ ಸಿಕ್ಕಿದೆ.

    ವೀಕ್ ಎಂಡ್ ಬಂದರೆ ಸಾಕು ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಜ್ ಸ್ಟ್ರೀಟ್ ನಲ್ಲಿ ಪಾರ್ಕಿಂಗ್ ಸಮಸ್ಯೆ ಇರುತ್ತದೆ. ರಜೆ ದಿನಗಳಲ್ಲಿ ಮಹಿಳೆಯರು ಪತಿ ಮತ್ತು ಮಕ್ಕಳ ಜೊತೆ ಸುತ್ತಾಡಿಕೊಂಡು ಶಾಂಪಿಗ್ ಮಾಡಿ, ಊಟ ಮಾಡಿಕೊಂಡು ಬರೋಣ ಅಂದುಕೊಂಡಿರುತ್ತಾರೆ. ಆದ್ರೆ ಸಾಮಾನ್ಯವಾಗಿ ಎಲ್ಲಾ ಕಡೆ ಪಾರ್ಕಿಂಗ್ ಸಮಸ್ಯೆ ಇದ್ದಿದ್ದೇ. ಇದಕ್ಕೆಲ್ಲ ಪರಿಹಾರ ನೀಡಬೇಕೆಂದು ಬಿಬಿಎಂಪಿ, ಮಹಿಳೆಯರಿಗೆ ಪಾರ್ಕಿಂಗ್ ರಿಸರ್ವೇಷನ್ ವ್ಯವಸ್ಥೆಯನ್ನು ನೀಡಲು ಮುಂದಾಗಿದೆ.

    ನಗರದಲ್ಲಿ ಮಹಿಳೆಯರಿಗೆ ವಾಹನ ನಿಲುಗಡೆಯಲ್ಲಿ ಮೀಸಲಾತಿ ನೀಡುವುದಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದ್ದು, ಮೊಟ್ಟ ಮೊದಲ ಬಾರಿಗೆ ಬ್ರಿಗೇಡ್ ರಸ್ತೆಯಲ್ಲಿ ಚಾಲನೆಗೆ ತರಲಾಗಿದೆ. ಬ್ರಿಗೇಡ್ ರಸ್ತೆಯಲ್ಲಿ ಮಹಿಳೆಯರಿಗೆ ಶೇಕಾಡ. 20 ರಷ್ಟು ಪಾರ್ಕಿಂಗ್ ರಿಸರ್ವೆಷನ್ ನೀಡಲಾಗಿದೆ. ಇದರಿಂದ ತುಂಬಾ ಸಂತಸವಾಗಿದೆ ಎಂದು ವಾಹನ ಸವಾರರಾದ ವಿದ್ಯಾ ಹೇಳಿದ್ರು.

    ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪಾರ್ಕಿಂಗ್ ನಲ್ಲಿ ರಿಸರ್ವೇಷನ್ ನೀಡುವ ಯೋಜನೆ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ಭಾಗಗಳಲ್ಲೂ ಈ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆನ್ನುವ ಆಶಾಯವಿದೆ ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಜ್ ತಿಳಿಸಿದ್ರು.