Tag: Bridge Collapses

  • ಮೈಸೂರು | ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ

    ಮೈಸೂರು | ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ

    ಮೈಸೂರು: ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಾರಿ (Lorry) ಚಲಿಸುತ್ತಿದ್ದಾಗಲೇ ಸೇತುವೆ ಕುಸಿದುಬಿದ್ದ ಘಟನೆ ಮೈಸೂರು (Mysuru) ಜಿಲ್ಲೆ ಸರಗೂರು ತಾಲೂಕಿನ ಇಟ್ನಾ ಸಮೀಪದ ಕಬಿನಿ ಬಲದಂಡೆ ನಾಲೆ ಬಳಿ ನಡೆದಿದೆ.

    ಪುರದಕಟ್ಟೆ ಮಾರ್ಗವಾಗಿ ನಂಜನಗೂಡಿಗೆ ಭತ್ತ (Paddy) ಹೊತ್ತೊಯ್ಯುತ್ತಿದ್ದ ಲಾರಿ ಸೇತುವೆ ಮೇಲೆ ಸಾಗುತ್ತಿದ್ದಾಗಲೇ ಹಠಾತ್ ಆಗಿ ಸೇತುವೆ ಕುಸಿದಿದೆ. ಇದನ್ನೂ ಓದಿ: ಬೈಕ್‌ ಸಮೇತ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

    ಲಾರಿಯಲ್ಲಿದ್ದ ಲೋಡರ್ಸ್ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಬಿನಿ ಬಲದಂಡೆ ನಿರ್ಮಾಣವಾದಾಗ ಕಟ್ಟಿದ್ದ ಸೇತುವೆ ಇದ್ದಾಗಿದ್ದು ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಶಿಥಿಲಗೊಂಡಿತ್ತು. ಇದನ್ನೂ ಓದಿ: ಹಾವೇರಿ | ಕಾಡಿನಿಂದ ನಾಡಿಗೆ ಬಂದು ಮನೆಯಲ್ಲಿ ಅವಿತ ಚಿರತೆ

    ‌ಲಾರಿಯನ್ನು ಮೇಲೆತ್ತುವುದರ ಜೊತೆಗೆ ಮತ್ತೊಂದು ಲಾರಿ ಮೂಲಕ ಭತ್ತದ ಮೂಟೆಗಳನ್ನ ಕೊಂಡೊಯ್ಯಲು ಸ್ಥಳೀಯರು ನೆರವು ನೀಡಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ- ಸಾಕ್ಷಿದಾರನ ಪರವಾಗಿ ಬರ್ತಾರಾ 6 ಮಂದಿ ಸ್ಥಳೀಯರು?

  • ಗುಜರಾತ್‌| ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಗುಜರಾತ್‌| ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಗಾಂಧೀನಗರ: ಗುಜರಾತ್‌ನ ವಡೋದರಾ (Vadodara) ಜಿಲ್ಲೆಯಲ್ಲಿ ಬುಧವಾರ ಮುಂಜಾನೆ 43 ವರ್ಷದ ಹಳೆಯ ಸೇತುವೆ ಕುಸಿದು (Bridge Collapse) ಬಿದ್ದು ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

    ಸೇತುವೆ ಕುಸಿದು ಮಹಿಸಾಗರ್ ನದಿಗೆ ಹಲವಾರು ವಾಹನಗಳು ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗುಜರಾತ್‌| ಮಧ್ಯದಲ್ಲೇ ಕುಸಿದ ಸೇತುವೆ – 5 ವಾಹನಗಳು ನದಿಗೆ, 8 ಸಾವು

    ಸೇತುವೆ ಕುಸಿದು ಮೃತಪಟ್ಟವರಲ್ಲಿ ರಮೇಶ್ ಪಡಿಯಾರ್, ವೇದಿಕಾ ಪಡಿಯಾರ್, ಮತ್ತು ದರಿಯಾಪುರ ಗ್ರಾಮದ ನೈತಾಯಿಕ್ ಪಾಧಿಯಾರ್, ಮಜತಾನ್‌ನ ಹಸ್ಮುಖ್ ಪರ್ಮಾರ್, ಕಹನ್ವಾ ಗ್ರಾಮದ ವಖತ್ಸಿನ್ಹ್ ಜಾದವ್ ಮತ್ತು ಉಂದೆಲ್ ಗ್ರಾಮದ ಪ್ರವೀಣ್ ಜಾದವ್ ಗುರುತು ಪತ್ತೆಹಚ್ಚಲಾಗಿದೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ, ನದಿಗೆ ಬಿದ್ದವರ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಮೂವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ವಡೋದರಾದ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಭಾರತದ ಹಲವು ರಾಜ್ಯಗಳಿಗೆ ಪ್ರವಾಹ ಎಚ್ಚರಿಕೆ – ಹಿಮಾಚಲ ಪ್ರದೇಶದಲ್ಲಿ ಯೆಲ್ಲೋ ಅಲರ್ಟ್

    ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಪೊಲೀಸರು ತನಿಖೆ ಆರಂಭಿಸಲಿದ್ದಾರೆ ಎಂದು ವಡೋದರಾ ಎಸ್ಪಿ ತಿಳಿಸಿದ್ದಾರೆ. ನಾವು ಜಿಲ್ಲಾಧಿಕಾರಿಗಳಿಂದ ವಿಚಾರಣಾ ವರದಿಯನ್ನು ಸಹ ಪಡೆಯುತ್ತೇವೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಪದ್ರಾ ರೆಫರಲ್ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ಹೇಳಿದ್ದಾರೆ.

    ವಡೋದರಾ ಜಿಲ್ಲೆಯ ಪದ್ರಾ ತಾಲ್ಲೂಕಿನ ಮುಜ್‌ಪುರದಲ್ಲಿರುವ ಈ ಸೇತುವೆ, ಮುಜ್‌ಪುರವನ್ನು ಆನಂದ್ ಜಿಲ್ಲೆಯ ಗಂಭೀರಾಗೆ ಹಾಗೂ ಮಧ್ಯ ಗುಜರಾತ್‌ನಿಂದ ಸೌರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ.

  • 13 ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಬ್ರಿಡ್ಜ್ ಉದ್ಘಾಟನೆಗೂ ಮುನ್ನ ಢಮಾರ್!

    13 ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಬ್ರಿಡ್ಜ್ ಉದ್ಘಾಟನೆಗೂ ಮುನ್ನ ಢಮಾರ್!

    ಪಾಟ್ನಾ: ಬಿಹಾರದ (Bihar) ಬೇಗುಸರಾಯ್‍ನಲ್ಲಿ (Begusarai) ಗಂಡಕ್ ನದಿ (Gandak River) ದಾಟಲು 13 ಕೋಟಿ ರೂ. ಖರ್ಚು ಮಾಡಿ ಕಟ್ಟಲಾಗಿದ್ದ 206 ಮೀಟರ್ ಉದ್ದದ ಬ್ರಿಡ್ಜ್ (Bridge) ಉದ್ಘಾಟನೆಗೂ ಮುನ್ನ ಕುಸಿದು ಬಿದ್ದಿದೆ.

    ಭಾನುವಾರ ಬೆಳಗ್ಗೆ ಬಿಹಾರದ ಬೇಗುಸರಾಯ್‍ನಲ್ಲಿ ಗಂಡಕ್ ನದಿ ಬಳಿ ನಿರ್ಮಿಸಲಾಗಿದ್ದ ಬ್ರಿಡ್ಜ್‌ ಮುಂಭಾಗ ಕುಸಿದು ನದಿ ಪಾಲಾಗಿದೆ. 2016ರಲ್ಲಿ ಮುಖ್ಯಮಂತ್ರಿ ನರ್ಬಾಡ್ ಯೋಜನೆಯಡಿಯಲ್ಲಿ ಈ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆ ಬಳಿಕ 2017ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಉದ್ಘಾಟನೆಗೊಂಡಿರಲಿಲ್ಲ (Inauguration). ಆ ಬಳಿಕ ಕೆಲದಿನಗಳ ಹಿಂದೆ ಸೇತುವೆಯ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇಂದು ಬೆಳಗ್ಗೆ ಕುಸಿದು ಬಿದ್ದಿದೆ. ಇದನ್ನೂ ಓದಿ: ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು

    ಸಾಹೇಬ್‍ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅಹೋಕ್ ಗಂಡಕ್ ಘಾಟ್ ಕಡೆಯಿಂದ ಆಕೃತಿ ತೋಲಾ ಚೌಕಿ ಮತ್ತು ಬಿಶನ್‍ಪುರ ನಡುವೆ ಸಂಪರ್ಕ ಕಲ್ಪಿಸಲು 206 ಮೀಟರ್ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಇದೀಗ ಉದ್ಘಾಟನೆಗೂ ಮುನ್ನ ಕುಸಿದು ಬಿದ್ದ ಪರಿಣಾಮ ದುರಂತವೊಂದು ತಪ್ಪಿದೆ. ಕೆಲ ತಿಂಗಳ ಹಿಂದೆ ಗುಜರಾತ್‍ನ ಮೊರ್ಬಿಯಲ್ಲಿ ದುರಸ್ತಿಗೊಂಡಿದ್ದ ಕೇಬಲ್ ಸೇತುವೆ ಕುಸಿತಗೊಂಡು ಹಲವು ಸಾವು-ನೋವುಗಳು ಸಂಭವಿಸಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಹಾವಳಿ – ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ರೌಡಿ

    Live Tv
    [brid partner=56869869 player=32851 video=960834 autoplay=true]