Tag: Brick

  • ಎಲ್ಲೆಲ್ಲೂ ರಾಮಜಪ, ಜೈಶ್ರೀರಾಮ್ ಉದ್ಘೋಷ – ಇಟ್ಟಿಗೆಯಲ್ಲೇ ಸಾಕ್ಷಾತ್ ಶ್ರೀರಾಮನ ಕಂಡ ಕುಟುಂಬ!

    ಎಲ್ಲೆಲ್ಲೂ ರಾಮಜಪ, ಜೈಶ್ರೀರಾಮ್ ಉದ್ಘೋಷ – ಇಟ್ಟಿಗೆಯಲ್ಲೇ ಸಾಕ್ಷಾತ್ ಶ್ರೀರಾಮನ ಕಂಡ ಕುಟುಂಬ!

    ತುಮಕೂರು: ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಕೌಂಟ್‌ಡೌನ್ ಶುರುವಾಗಿದ್ದು, ಎಲ್ಲೆಲ್ಲೂ ಸಡಗರ ಮನೆ ಮಾಡಿದೆ. ಈ ನಡುವೆ ಶ್ರೀರಾಮನ ಭಕ್ತಿಯಲ್ಲೇ ಮುಳುಗಿರುವ ತುಮಕೂರಿನ (Tumkur) ಕುಟುಂಬವೊಂದು ವಿಭಿನ್ನ ರೀತಿಯಲ್ಲಿ ತನ್ನ ಭ್ತಕ್ತಿಯನ್ನು ಪ್ರದರ್ಶಿಸಿದೆ.

    ಹೌದು. ತುಮಕೂರಿನ ಕುಟುಂಬವೊಂದು ಇಟ್ಟಿಗೆಯಲ್ಲಿಯೇ (Brick) ಸಾಕ್ಷಾತ್ ಶ್ರೀರಾಮನನ್ನ ಕಾಣುತ್ತಿದೆ. ಹೇಗೆಂದರೆ ಕಳದ 30 ವರ್ಷದಿಂದ ಶ್ರೀರಾಮನ ಮೂಲಗದ್ದುಗೆಯ ಇಟ್ಟಿಗೆಗೆ ಮನೆಯಲ್ಲಿ ಪೂಜೆ ಸಲ್ಲಿಸುತ್ತಿರುವ ಕರ ಸೇವಕ ಕಾಂಡಿಮೆಂಟ್ ಶಿವಣ್ಣರ ಕುಟುಂಬ ಅಣು ಅಣುವಿನಲ್ಲಿಯೂ ರಾಮನನ್ನ ನೆನೆದು ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೆ ಕೌಂಟ್‌ಡೌನ್ – ಬೆಂಗ್ಳೂರಿನಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು ಸೇವೆ, ಇಲ್ಲಿದೆ ಡಿಟೇಲ್ಸ್‌

    ಕಳೆದ 30 ವರ್ಷಗಳಿಂದ ಇಟ್ಟಿಗೆಯನ್ನೇ ಶ್ರೀರಾಮ ಎಂದು ಪೂಜಿಸುತ್ತಾ ಬಂದಿದೆ. ಕಾಂಡಿಮೆಂಟ್ ಶಿವಣ್ಣ ಎರಡು ಬಾರಿ ಕರಸೇವಕರಾಗಿ ಆಯೋಧ್ಯೆಗೆ ಹೋಗಿದ್ದರು. ಬಾಬ್ರಿ ಮಸೀದಿ ಕೆಡವಿದಾಗ ರಾಮನ ಮೂಲ ಗದ್ದುಗೆ ಪತ್ತೆಯಾಗಿತ್ತು. ಆ ಗದ್ದಿಗೆಯ 4 ಇಟ್ಟಿಗೆಯನ್ನು ಶಿವಣ್ಣ ತಮ್ಮ ಮನೆಗೆ ತಂದಿದ್ದಾರೆ. ಇಟ್ಟಿಗೆಯನ್ನು ದೈವ ಸ್ವರೂಪಿ ಎಂದು ನಂಬಿದ ಶಿವಣ್ಣನ ಕುಟುಂಬ ನಿರಂತರವಾಗಿ ಪೂಜಿಸುತ್ತಾ ಬಂದಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಮರುಪರೀಕ್ಷೆ ಪತ್ರಿಕೆ ಲೀಕ್ ಆರೋಪ- ಆಡಿಯೋ ಸೂತ್ರಧಾರ ಎಸ್‍ಐ ಸ್ಫೋಟಕ ಹೇಳಿಕೆ

    ಅಯೋಧ್ಯೆ ಮೂಲಗದ್ದುಗೆಯಿಂದ ತಂದ 4 ಇಟ್ಟಿಗೆಯನ್ನು ಶ್ರೀರಾಮ ಎಂಬ ಉದ್ಘೋಷ ಇರುವ ಮಡಿ ವಸ್ತçದಲ್ಲಿ ಕಟ್ಟಿ ಇಟ್ಟಿದ್ದಾರೆ. ಪ್ರತಿ ದಿನದ ಪೂಜೆ ಮಾಡುವುದರೊಂದಿಗೆ, ಪ್ರತಿವರ್ಷ ರಾಮ ನಮವಿ ಹಬ್ಬದಂದು ವಿಶೇಷ ಪೂಜೆ ಮಾಡಿ ಪಾನಕ ಹಂಚುತ್ತಾರೆ. ರಾಮ ನವಮಿಯಂದು ಬಟ್ಟೆಯಿಂದ ಇಟ್ಟಿಗೆ ಹೊರ ತೆಗೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾದ ರಾಮಮಂದಿರ- ಫೋಟೋಗಳಲ್ಲಿ ನೋಡಿ..  

  • ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಜಗಳ – ತಲೆಗೆ ಇಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

    ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಜಗಳ – ತಲೆಗೆ ಇಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

    ಲಕ್ನೋ: ಕಾರು ಪಾರ್ಕ್ (Car Parking) ಮಾಡಿದ ವಿಚಾರಕ್ಕೆ ಜಗಳ ನಡೆದು, ಅದರಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬನ ತಲೆಗೆ ಇಟ್ಟಿಗೆಯಿಂದ (Brick) ಹೊಡೆದು ಹತ್ಯೆ ನಡೆಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ವರುಣ್ ಎಂದು ಗುರುತಿಸಲಾಗಿದೆ. ಆತ ದೆಹಲಿಯ ನಿವೃತ್ತ ಪೊಲೀಸ್ ಅಧಿಕಾರಿಯ ಮಗ ಎಂಬುದೂ ತಿಳಿದುಬಂದಿದೆ. ಘಟನೆಯ ಭಯಾನಕ ವೀಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು, ಅದರಲ್ಲಿ ವರುಣ್‌ಗೆ 4-5 ಜನರ ಗುಂಪು ಅಮಾನುಷವಾಗಿ ಥಳಿಸುವುದು ಕಂಡುಬಂದಿದೆ.

    ವರದಿಗಳ ಪ್ರಕಾರ ಕಳೆದ ರಾತ್ರಿ ವರುಣ್ ಗಾಜಿಯಾಬಾದ್‌ನ ಉಪಾಹಾರ ಗೃಹದ ಹೊರಗಡೆ ತನ್ನ ಕಾರನ್ನು ನಿಲ್ಲಿಸಿದ್ದ. ಆತ ಪಕ್ಕದ ಕಾರಿನ ಬಾಗಿಲನ್ನು ತೆರೆಯಲು ಸಾಧ್ಯವಾಗದಷ್ಟು ಹತ್ತಿರದಲ್ಲಿ ನಿಲ್ಲಿಸಿದ್ದಾನೆ ಎಂದು ಪಕ್ಕದ ಕಾರಿನ ಮಾಲೀಕ ವರುಣ್‌ನೊಂದಿಗೆ ವಾಗ್ವಾದ ಪ್ರಾರಂಭಿಸಿದ್ದಾನೆ.

    ಇಬ್ಬರ ನಡುವಿನ ಜಗಳ ಸ್ವಲ್ಪ ಸಮಯದಲ್ಲೇ ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ವರುಣ್ ಮೇಲೆ ಆರೋಪಿಗಳ ಗುಂಪು ಅಮಾನುಷವಾಗಿ ಹಲ್ಲೆ ನಡೆಸಿದೆ. ಬಳಿಕ ಆತನ ತಲೆಗೆ ಇಟ್ಟಿಗೆಯಿಂದ ಹೊಡೆದಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ ವರುಣ್‌ನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆತ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ರೈಲು ಡಿಕ್ಕಿ ಹೊಡೆದು ಇಬ್ಬರು ಆರ್‌ಪಿಎಫ್ ಪೊಲೀಸರ ದುರ್ಮರಣ

    ಸಾರ್ವಜನಿಕ ಸ್ಥಳದಲ್ಲಿ ನಡೆದಿರುವ ಈ ಭೀಕರ ಕೊಲೆ ಪ್ರಕರಣ ಗಾಜಿಯಾಬಾದ್‌ನ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಹಾಗೂ ಬೀದಿಗಳಲ್ಲಿ ನಡೆಯುವ ಹಿಂಸಾಚಾರವನ್ನು ಪರಿಶೀಲಿಸುವಲ್ಲಿ ಪೊಲೀಸರ ವೈಫಲ್ಯದ ಬಗ್ಗೆ ಕಳವಳ ಹುಟ್ಟು ಹಾಕಿದೆ. ಮೃತನ ಸಂಬಂಧಿಕರು ಹಾಗೂ ಸ್ಥಳೀಯರು ಪೊಲೀಸರ ಅಸಡ್ಡೆತನಕ್ಕೆ ಪ್ರತಿಭಟನೆ ನಡೆಸಿದ್ದಾರೆ.

    ಇದೀಗ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, 5 ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ತುಂಡರಿಸಿದ ಅರ್ಧ ಕೈ ಪತ್ತೆ -ಸ್ಮಶಾನಗಳತ್ತ ಪೊಲೀಸರ ದೌಡು

    Live Tv
    [brid partner=56869869 player=32851 video=960834 autoplay=true]

  • ತಾಯಿಗೆ ಇಟ್ಟಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ

    ತಾಯಿಗೆ ಇಟ್ಟಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ

    ನವದೆಹಲಿ: 60 ವರ್ಷದ ಮಹಿಳೆ ಮೇಲೆ ಆಕೆಯ ಮಗನೇ ಇಟ್ಟಿಗೆಯಿಂದ ಹಲ್ಲೆ ನಡೆಸಿ, ತನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಭೀತಿಯಿಂದ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಆರೋಪಿ ಕಡಲೆಕಾಯಿ ವ್ಯಾಪಾರಿಯಾಗಿದ್ದು, ಪೋಷಕರನ್ನು ಬಿಟ್ಟು, ತನ್ನ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ಗುರುಗ್ರಾಮ್ ಸೆಕ್ಟರ್ 11ರ ಗಾಂಧಿ ನಗರದಲ್ಲಿ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಇದನ್ನೂ ಓದಿ: ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

    ಆರೋಪಿಯ 30 ವರ್ಷದ ಸಹೋದರಿ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿದ್ದು, ಶುಕ್ರವಾರ ತನ್ನ ಪೋಷಕರ ಮನೆಗೆ ಆಗಮಿಸಿ ತಂಗಿಗೆ ಆಯ್ಕೆ ಮಾಡಿರುವ ವರ ಒಳ್ಳೆಯವನಲ್ಲ ಎಂದು ಜಗಳವಾಡಿದ್ದಾನೆ. ನಂತರ ತನ್ನ ತಾಯಿಯ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿರುವುದಾಗಿ ಆತನ ಸಹೋದರಿ ಆರೋಪಿಸಿದ್ದಾರೆ.

    ನಂತರ ಘಟನೆಯಲ್ಲಿ ಗಾಯಗೊಂಡ ತಾಯಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ಬಂಧನಕ್ಕೊಳಗಾಗುವ ಭಯದಿಂದ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿಯೇ ಆತ ವಿಷ ಸೇವಿಸಿದ್ದಾನೆ. ಇದನ್ನೂ ಓದಿ: ಸ್ವಪಕ್ಷೀಯ ಶಾಸಕರ ವಿರುದ್ಧ ಪ್ರತಾಪ್‍ ಸಿಂಹ ವಾಗ್ದಾಳಿ – ಮುಂದುವರಿದ ಟಾಕ್‌ವಾರ್‌

    ಬಳಿಕ ಆತನನ್ನು ಗುರುಗ್ರಾಮ್‍ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದ್ದರಿಂದ ಬಳಿಕ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತನ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಬಳಕೆ ಮಾಡಿದ ಪ್ಲಾಸ್ಟಿಕ್‍ನಿಂದ ಬ್ರಿಕ್ಸ್ ತಯಾರಿಸಿದ ಯುವಕರು!

    ಬಳಕೆ ಮಾಡಿದ ಪ್ಲಾಸ್ಟಿಕ್‍ನಿಂದ ಬ್ರಿಕ್ಸ್ ತಯಾರಿಸಿದ ಯುವಕರು!

    ಕೋಲಾರ: ಜೀವರಾಶಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಭೂಮಿ ಮೇಲೆ ಸೃಷ್ಟಿಯಾಗಿರುವ ಕಳೆಯಾಗಿದ್ದು, ನಾಶ ಮಾಡೋದು ಅಸಾಧ್ಯ. ಹೀಗಿರುವಾಗ ಕೋಲಾರದಲ್ಲೊಂದು ತಂಡ ಅದನ್ನು ಸಮರ್ಪಕವಾಗಿ ಮರು ಬಳಕೆ ಮಾಡುವ ಜೊತೆಗೆ ನಿರ್ವಹಣೆ ಮಾಡಿ ಪ್ರಕೃತಿಗೆ ಉಸಿರಾಡಲು ದಾರಿ ಮಾಡಿಕೊಟ್ಟಿದ್ದಾರೆ.

    ಪ್ರವಾಸಿ ತಾಣದ ಬೆಟ್ಟಗುಡ್ಡ ಮರಗಿಡಗಳ ನಡುವೆ ಬಿದ್ದಿರುವ ರಾಶಿ ರಾಶಿ ಪ್ಲಾಸ್ಟಿಕ್‍ನ್ನು ಆರಿಸಿಕೊಂಡು ತಂದು ಒಂದೆಡೆ ಸುರಿಯುತ್ತಿರುವ ವಿದ್ಯಾರ್ಥಿಗಳು ನೀರಿನ ಬಾಟಲ್‍ಗಳಿಗೆ ತುಂಬಿಸುತ್ತಿರುವ ಇನ್ನೊಂದು ತಂಡ, ಇದೆಲ್ಲಾ ಕಂಡುಬಂದಿದ್ದು, ಕೋಲಾರದ ದಕ್ಷಿಣ ಕಾಶಿ ಅಂತರಗಂಗೆಯಲ್ಲಿ. ಹೌದು ಪ್ರವಾಸಿ ತಾಣಗಳು ಸೇರಿದಂತೆ ಎಲ್ಲಂದರಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಹೆಚ್ಚಾಗಿದೆ, ಇದರಿಂದ ಕೇವಲ ಪ್ರಕೃತಿಗಷ್ಟೇ ಅಲ್ಲಾ ಮಾನವನಿಗೂ ಮಾರಕವಾಗುತ್ತಿದೆ. ಇದನ್ನೂ ಓದಿ: ಮೋದಿ ಸರ್ಕಾರ ನಿದ್ರಿಸುತ್ತಿದೆ- ಲಾರಿ ಚಿತ್ರ ಹಂಚಿಕೊಂಡ ತರೂರ್

    ಹೀಗಿರುವಾಗ ಅದನ್ನು ನಾಶ ಮಾಡೋದಾದರೂ ಹೇಗೆ ಅನ್ನೋ ಆತಂಕದಲ್ಲಿ ಎಲ್ಲರು ಇರುವಾಗ ಕೋಲಾರದಲ್ಲಿ ಸಮಾನ ಮನಸ್ಕರ ತಂಡವೊಂದು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಕೋಲಾರ ಆಂದೋಲನ ಸಮಿತಿ ರಚನೆ ಮಾಡಿಕೊಂಡು ಸದ್ದಿಲ್ಲದೆ ಪ್ಲಾಸ್ಟಿಕ್‍ನ್ನು ಮರುಬಳಕೆ ಮಾಡುತ್ತಿದ್ದಾರೆ. ಹೀಗೆ ಪ್ರವಾಸಿ ತಾಣಗಳಲ್ಲಿ ಇರುವ ಪ್ಲಾಸ್ಟಿಕ್ ಕವರ್ ಸೇರಿ ಹಲವು ತ್ಯಾಜ್ಯಗಳನ್ನು ಸಂಗ್ರಹಿಸಿ ಅದನ್ನು ನೀರಿನ ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ಬಿಗಿಯಾಗಿ ತುಂಬಿಸಿ ಅದನ್ನು ಪ್ಲಾಸ್ಟಿಕ್ ಇಟ್ಟಿಗೆ ರೂಪ ಕೊಡಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

    ಹೀಗೆ ಕಳೆದ 2 ವರ್ಷದಿಂದ ಸಮಾನ ಮನಸ್ಥಿತಿ ಹೊಂದಿರುವ ವಿವಿಧ ಸಂಘಟನೆಗಳು ಒಂದು ವೇದಿಕೆ ಮಾಡಿಕೊಂಡು ಈವರೆಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ಲಾಸ್ಟಿಕ್ ಬ್ರಿಕ್ಸ್‍ಗಳನ್ನ ತಯಾರಿ ಮಾಡಿದ್ದಾರೆ. ಇಟ್ಟಿಗೆ ರೀತಿಯಲ್ಲಿ ಬಾಟಲ್‍ಗಳಲ್ಲಿ ಪ್ರಕೃತಿಗೆ ಮಾರಕವಾಗುವ ಪ್ಲಾಸ್ಟಿಕ್ ಕವರಗಳನ್ನು ಅದರೊಳಗೆ ಬಿಗಿಯಾಗಿ ತುಂಬಿಡಲಾಗುತ್ತಿದೆ. ಹೀಗೆ ಮಾಡಲಾದ ಪ್ಲಾಸ್ಟಿಕ್ ಬ್ರಿಕ್ಸ್‍ಗಳನ್ನು ಒಂದೆಡೆ ಸಂಗ್ರಹಿಸಿ ನಂತರ ಅದನ್ನು ವಿವಿದ ಕಲಾಕೃತಿ, ಶೌಚಾಲಯ ಕಟ್ಟಡ, ಪಾರ್ಕ್‍ಗಳಲ್ಲಿ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದನ್ನೂ ಓದಿ:  ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ಇಂಥಾದೊಂದು ಕೆಲಸಕ್ಕೆ ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ವಿದ್ಯಾರ್ಥಿ ಸಂಘಟನೆಗಳು, ಸಂಘ ಸಂಸ್ಥೆಗಳು ಕೈಜೋಡಿವೆ. ಈ ಮೂಲಕ ಪ್ಲಾಸ್ಟಿಕ್ ಕವರ್‍ಗಳು ಚರಂಡಿಗಳು, ನೀರಿನ ಕಾಲುವೆಗಳಲ್ಲಿ ತುಂಬಿಕೊಂಡು ಸೃಷ್ಟಿಮಾಡುವ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಕ್ಕಂತಾಗುತ್ತಿದೆ. ಅಷ್ಟೇ ಅಲ್ಲಾ ಪ್ಲಾಸ್ಟಿಕ್‍ನ್ನು ಸಮರ್ಪಕವಾಗಿ ಮರುಬಳಕೆ ಮಾಡಲಾಗುತ್ತಿದೆ ಅನ್ನೋದು ಆಯೋಜಕರ ಮಾತು ಕೂಡ.

     ಪ್ರಕೃತಿಗೆ ಮಾರಕವಾಗುವ ಈ ಪ್ಲಾಸ್ಟಿಕ್‍ನ್ನು ಸುಟ್ಟು ಹಾಕಿದರೂ ಜೀವರಾಶಿಗೆ ಮಾರಕವಾಗುವ ಪರಿಣಾಮ ಮರು ಬಳಕೆ ಮಾಡುವ ಮಹತ್ವದ ಕೆಲಸಕ್ಕೆ ಕೋಲಾರದ ತಂಡ ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಜನರು ಸ್ವಯಂಪ್ರೇರಿತರಾಗಿ ಕೈಜೋಡಿಸಿದ್ದೇ ಆದಲ್ಲಿ ಪ್ಲಾಸ್ಟಿಕ್ ಅನ್ನೋ ವಿಷವನ್ನು ನಿರ್ವಹಣೆ ಮಾಡೋದು ದೊಡ್ಡ ವಿಷಯವಲ್ಲ.

  • ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಕೊಪ್ಪಳ ನಂಟು

    ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಕೊಪ್ಪಳ ನಂಟು

    ಕೊಪ್ಪಳ: ಪಶುವೈದ್ಯೆ ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ (ಎ1) ಮಹಮ್ಮದ್ ಪಾಷಾನಿಗೆ ಕೊಪ್ಪಳದ ಗಂಗಾವತಿ ತಾಲೂಕಿನ ಬಸಾಪಟ್ಟಣದ ನಂಟಿದ್ದು, ಅಮಾನುಷ ಘಟನೆ ಜರುಗುವ 3 ದಿನ ಮುನ್ನ ಬಸಾಪಟ್ಟಣಕ್ಕೆ ಬಂದಿರುವ ಮಾಹಿತಿ ಪೊಲೀಸರಿಗೆ ದೊರೆತಿದೆ.

    ಹೈದರಾಬಾದ್ ಹೊರವಲಯದ ಚೌಟನಪಲ್ಲಿಯಲ್ಲಿ ಜರುಗಿದ ಪಶುವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧ ಪ್ರಮುಖ ಆರೋಪಿ ಮಹ್ಮದ್ ಲಾರಿ ಚಾಲಕನಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರಮುಖ ನಗರಗಳಿಗೆ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ. ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ದೊರೆಯುವ ಹಗುರವಾದ ಇಟ್ಟಿಗೆಗಳಿಗೆ ಹೈದರಾಬಾದ್ ಭಾಗದಲ್ಲಿ ಬೇಡಿಕೆಯಿದ್ದು, ಆರೋಪಿ ಕಳೆದ 2 ವರ್ಷಗಳಿಂದ ಬಸಾಪಟ್ಟಣದಿಂದ ಇಟ್ಟಿಗೆಗಳನ್ನು ಕೊಂಡ್ಯೊಯುತ್ತಿದ್ದ. ಅಮಾನುಷ ಘಟನೆ ನವೆಂಬರ್ 27ರಂದು ಜರುಗಿದ್ದು, ಪ್ರಮುಖ ಆರೋಪಿ ಮಹ್ಮದ್ ಆರೋಪಿ ನವೆಂಬರ್ 24ರಂದು ಬಸಾಪಟ್ಟಣದಲ್ಲಿದ್ದ. ಇದನ್ನು ಓದಿ: ಎನ್‍ಕೌಂಟರ್ ನಡೆಸುವ ವೇಳೆ, ನಡೆಸಿದ ನಂತರ ಯಾವೆಲ್ಲ ಪ್ರಕ್ರಿಯೆ ಮಾಡಬೇಕು? ಸುಪ್ರೀಂ ಕೋರ್ಟ್ ಹೇಳಿದ್ದೇನು?

    ಸ್ಥಳೀಯ ಇಟ್ಟಿಗೆ ಮಾರಾಟದ ದಲ್ಲಾಳಿ ಅಬ್ದುಲ್ ಸೇರಿ ಇತರರನ್ನು ಸಂಪರ್ಕಿಸಿ ಇಟ್ಟಿಗೆಗಳನ್ನು ತನ್ನ ಲಾರಿಗೆ ಲೋಡ್ ಮಾಡಿಕೊಂಡಿದ್ದ. ದಾಸನಾಳದ ಎಡದಂಡೆ ಕಾಲುವೆ ಬಳಿಯಿರುವ ಪ್ರಭು ಎಂಬುವರ ಇಟ್ಟಿಗೆ ಭಟ್ಟಿಯಿಂದಲೇ ಇಟ್ಟಿಗೆಗಳನ್ನು ಲೋಡ್ ಮಾಡಿಕೊಂಡಿದ್ದು, ಹೊರ ರಾಜ್ಯಕ್ಕೆ ತೆರಳುವಾಗ ಟೋಲ್‍ಗೇಟ್‍ನಲ್ಲಿ ಟೋಕನ್ ನೀಡುವ ವ್ಯವಸ್ಥೆಯಿದ್ದು, ಟೋಕನ್ ಇಲ್ಲದಿದ್ದರಿಂದ ಹೈದರಾಬಾದ್ ತಲುಪುವುದು ಒಂದು ದಿನ ತಡವಾಗಿದೆ. ಹೀಗಾಗಿ ಖರೀದಿದಾರ ಆರ್ಡರ್ ಕ್ಯಾನ್ಸಲ್ ಮಾಡಿದ್ದರಿಂದ ಹೊರವಲಯದಲ್ಲಿ ತಂಗಿದ್ದರು. ಹೊಸ ಆರ್ಡರ್ ದೊರೆತಿದ್ದರಿಂದ ದಲ್ಲಾಳಿ ಅಬ್ದುಲ್, ಮಹ್ಮದ್‍ಗೆ ಪೋನಿನ ಮೂಲಕ ಸಂಪರ್ಕಿಸಲು ಯತ್ನಿಸಿದರು. ಇದನ್ನು ಓದಿ: ಎನ್‍ಕೌಂಟರ್ ‘ಯೋಜಿತ ಕೊಲೆ’, ಅಂಗಾಂಗಳ ಮೇಲೆ ಶೂಟ್ ಮಾಡಿದ್ದು ಯಾಕೆ – 4 ಪ್ರಶ್ನೆ ಮುಂದಿಟ್ಟ ಮಾನವಹಕ್ಕುಗಳ ಸಂಸ್ಥೆ

    ಬಸಾಪಟ್ಟಣದ ದಲ್ಲಾಳಿಗಳಿಂದ ಆರೋಪಿಗಳ ದೂರವಾಣಿಗೆ ಕರೆ ಹೋಗಿದೆ. ಇದೇ ಆಧಾರದಡಿ ತೆಲಂಗಾಣದ ಪೊಲೀಸರು ಘಟನೆ ನಡೆದ 2 ದಿನದ ನಂತರ ಬಸಾಪಟ್ಟಣಕ್ಕೆ ಮಫ್ತಿಯಲ್ಲಿ ಆಗಮಿಸಿದ್ದಾರೆ. ಎಎಸ್ಪಿ ನೇತೃತ್ವದ ನಾಲ್ವರು ಪೊಲೀಸರ ತಂಡ ಅಬ್ದುಲ್ ಸೇರಿ ಇತರೆ ದಲ್ಲಾಳಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಸಾಪಟ್ಟಣದಿಂದ ಗಂಗಾವತಿವರೆಗಿನ ರಾಜ್ಯಹೆದ್ದಾರಿಯಲ್ಲಿರುವ ಮೂರು ಪೆಟ್ರೋಲ್ ಬಂಕ್, ಎರಡು ಬೈಕ್ ಶೋರೂಂ ಸೇರಿದಂತೆ ಖಾಸಗಿ ವ್ಯಕ್ತಿಗಳ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಕೆಲವಡೆ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಪಡೆದಿರುವ ಮಾಹಿತಿಯಿದೆ.

    ತೆಲಂಗಾಣ ಪೊಲೀಸರು ಇಟ್ಟಿಗೆ ಭಟ್ಟಿಗೆ ಆಗಮಿಸಿರುವುದನ್ನು ತಯಾರಕರು ಒಪ್ಪಿಕೊಂಡಿದ್ದರೂ, ಈ ಕುರಿತ ಮಾಹಿತಿಯನ್ನು ಬಹಿರಂಗ ಪಡಿಸಲು ಹೆದರುತ್ತಿದ್ದಾರೆ. ಮಹ್ಮದ್ ಆಗಾಗ್ಗೆ ಬರುತ್ತಿರುವ ಬಗ್ಗೆ ತಯಾರಕರ ಗುಂಪಿನ ಪ್ರಮುಖರೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರ ನೆರವಿಲ್ಲದೇ 2 ದಿನ ಬಸಾಪಟ್ಟಣ, ದಾಸನಾಳ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ತೆಲಂಗಾಣ ಪೊಲೀಸರು ಸಂಚರಿಸಿದ್ದು ಅಚ್ಚರಿ ಮೂಡಿಸಿದೆ. ಇದನ್ನು ಓದಿ:  ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ

  • ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಕಾಣಿಕೆ ನೀಡಿದ್ದ ಇಟ್ಟಿಗೆ ವಾಪಸ್ ಪಡೆದ ಬಿಜೆಪಿ ಮುಖಂಡ

    ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಕಾಣಿಕೆ ನೀಡಿದ್ದ ಇಟ್ಟಿಗೆ ವಾಪಸ್ ಪಡೆದ ಬಿಜೆಪಿ ಮುಖಂಡ

    ಚಿಕ್ಕಬಳ್ಳಾಪುರ: ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಕಾಣಿಕೆಯಾಗಿ ಕೊಟ್ಟಿದ್ದ ಇಟ್ಟಿಗೆಗಳನ್ನ ಬಿಜೆಪಿ ಮುಖಂಡನೊಬ್ಬ ವಾಪಸ್ ತೆಗೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ಅರಿಕೆರೆ ಕೃಷ್ಣಾರೆಡ್ಡಿ ಇಟ್ಟಿಗೆಗಳನ್ನು ವಾಪಸ್ ತೆಗೆದುಕೊಂಡು ಹೋಗಿರುವ ಬಿಜೆಪಿ ಮುಖಂಡ. ಕೃಷ್ಣಾರೆಡ್ಡಿ ಎಂಬವರು ಸಮಾಜಸೇವೆ ಹೆಸರಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಕೊಡುಗೆ-ಕಾಣಿಕೆಗಳನ್ನ ನೀಡಿದ್ದರು. ಅಂತೆಯೇ ಪರಗೋಡು ಗ್ರಾಮದ ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ಅಂತ 10,000 ಮಣ್ಣಿನ ಇಟ್ಟಿಗೆಯನ್ನ ಕಾಣಿಕೆ ನೀಡಿದ್ದರು.

    ಇವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಅರಿಕರೆ ಕೃಷ್ಣಾರೆಡ್ಡಿಗೆ ಬಿಜೆಪಿ ಪಕ್ಷ ಮಣೆ ಹಾಕದೆ ಕೊನೆ ಕ್ಷಣದಲ್ಲಿ ನಟ ಸಾಯಿಕುಮಾರ್ ಗೆ ಟಕೆಟ್ ಘೋಷಣೆ ಮಾಡಿತ್ತು. ಹೀಗಾಗಿ ಅಂದು ಶ್ರೀರಾಮ ದೇವಾಲಯದ ನಿರ್ಮಾಣಕ್ಕೆ ಅಂತ ಕೊಟ್ಟಿದ್ದ ಇಟ್ಟಿಗೆಯನ್ನ ವಾಪಸ್ ತೆಗೆದುಕೊಂಡು ಹೋಗಲು ಅರಿಕೆರೆ ಕೃಷ್ಣಾರೆಡ್ಡಿ ಮುಂದಾಗಿದ್ದಾರೆ.

    ಗ್ರಾಮಕ್ಕೆ ಟ್ರ್ಯಾಕ್ಟರ್ ಸಮೇತ ಬಂದು 5,000 ದಷ್ಟು ಇಟ್ಟಿಗೆ ಸಹ ತೆಗೆದುಕೊಂಡು ಹೋಗಿದ್ದಾರೆ. ನನಗೆ ಇಟ್ಟಿಗೆ ಅವಶ್ಯಕತೆಯಿದ್ದು, ಎಲ್ಲೂ ಇಟ್ಟಿಗೆ ಸಿಗದ ಕಾರಣ ಈ ಇಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಪುನಃ ಕೊಡಿಸುತ್ತೀನಿ ಅಂತ ಗ್ರಾಮಸ್ಥರ ಬಳಿ ಸಮಜಾಯಿಷಿ ನೀಡಿದ್ದಾರೆ.

    ಅರಿಕೆರೆ ಕೃಷ್ಣಾರೆಡ್ಡಿಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು ಅವರ ವಿರುದ್ಧ ಹರಿಹಾಯ್ದಿದ್ದಾರೆ. ಅರಿಕೆರೆ ಕೃಷ್ಣಾರೆಡ್ಡಿಗೆ ಮನಸ್ಸೋ ಇಚ್ಛೆ ಬೈದು ಗ್ರಾಮದಿಂದ ಹೊರಕಳುಹಿಸಿದ್ದಾರೆ. ಜೊತೆಗೆ ಇನ್ನೂ ಅಳಿದುಳಿದ ಇಟ್ಟಿಗೆಗಳನ್ನ ಒಡೆದು ಹಾಕಿ ತಮ್ಮ ಆಕ್ರೋಶವನ್ನ ಗ್ರಾಮಸ್ಥರು ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv