Tag: bribery

  • ತಹಶೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ – ನಕಲಿ ಅಧಿಕಾರಿಯನ್ನು ನೋಡಿ ದಂಗಾದ ಅಧಿಕಾರಿಗಳು

    ತಹಶೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ – ನಕಲಿ ಅಧಿಕಾರಿಯನ್ನು ನೋಡಿ ದಂಗಾದ ಅಧಿಕಾರಿಗಳು

    ವಿಜಯಪುರ: ದಾಳಿ ವೇಳೆ ನಕಲಿ ಅಧಿಕಾರಿಯೊಬ್ಬ ಸಿಕ್ಕಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

    ಅಧಿಕಾರಿಗಳು ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಂದು ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಗೆ ಎಸಿಬಿ ಅಧಿಕಾರಿಗಳಾದ ಡಿಎಸ್‍ಪಿ ಮಲ್ಲೇಶ್ ಹಾಗೂ ಇನ್ಸ್ ಪೆಕ್ಟರ್ ಸಚಿನ್ ಚಲವಾದಿ ದಾಳಿ ನಡೆಸಿದ್ದಾರೆ. ಈ ವೇಳೆ ಚಂದ್ರಹಾಸ ಹೊಸಮನಿ ನಕಲಿ ಅಧಿಕಾರಿಯಾಗಿ ಅಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

    ಸರ್ಕಾರಿ ಸಿಬ್ಬಂದಿಯಂತೆ ತಹಶೀಲ್ದಾರ್ ಕಚೇರಿಯಲ್ಲೇ ಪ್ರತ್ಯೇಕ ಟೇಬಲ್, ಪ್ರತ್ಯೇಕ ತಿಜೋರಿ ಹೊಂದಿದ್ದ ಹೊಸಮನಿ ಸಿಂಧುತ್ವ ನೀಡಲು ಹಣಮಂತ ರೆಡ್ಡಿ ಎಂಬುವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಹಣಮಂತ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ನಕಲಿ ಅಧಿಕಾರಿ ಅನ್ನೋದು ಬಯಲಾಗಿದೆ.

    ಸಿಂಧುತ್ವ ವಿಭಾಗದ ಅಧಿಕಾರಿ ಎಂದು ಹೇಳಿಕೊಂಡಿದ್ದ ಹೊಸಮನಿ, ಜನರಿಂದ ಸಿಂಧುತ್ವಕ್ಕಾಗಿ ಹಣ ಪಡೆಯುತ್ತಿದ್ದ. ಈ ಚಂದ್ರಹಾಸ ಹೊಸಮನಿ ಮೂಲಕವೇ ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಲಾಗುತಿತ್ತು ಎಂದು ಸಾರ್ವಜನಿಕರ ಆರೋಪ ಮಾಡಿದ್ದಾರೆ. ಹೊಸಮನಿಯನ್ನು ತಹಶೀಲ್ದಾರ್ ಕಚೇರಿಯ ಸರ್ಕಾರಿ ಸಿಬ್ಬಂದಿ ಎಂದು ಭಾವಿಸಿದ್ದ ಜನರು ಮತ್ತು ಎಸಿಬಿ ಅಧಿಕಾರಿಗಳು ನಕಲಿ ಎಂದು ತಿಳಿದು ದಂಗಾಗಿದ್ದಾರೆ.

    ನಕಲಿ ಅಧಿಕಾರಿ ಹೊಸಮನಿಯನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು, 25 ಕ್ಕೂ ಅಧಿಕ ಸಿಂಧುತ್ವ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರದಲ್ಲಿ ತನಿಖೆ ನಡೆಸಿ ಈತನಿಂದ ಹಣ ಪಡೆಯುತ್ತಿದ್ದ ಅಧಿಕಾರಿಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.

  • ಕೋರ್ಟ್ ಆವರಣದಲ್ಲೇ ಲಂಚಾವತಾರ – 5 ಸಾವಿರಕ್ಕೆ ಕೈವೊಡ್ಡಿದ ಪಬ್ಲಿಕ್ ಪ್ರಾಸಿಕ್ಯೂಟರ್

    ಕೋರ್ಟ್ ಆವರಣದಲ್ಲೇ ಲಂಚಾವತಾರ – 5 ಸಾವಿರಕ್ಕೆ ಕೈವೊಡ್ಡಿದ ಪಬ್ಲಿಕ್ ಪ್ರಾಸಿಕ್ಯೂಟರ್

    ಯಾದಗಿರಿ: ನ್ಯಾಯ ದೊರಕಿಸಬೇಕಿದ್ದ ಸರ್ಕಾರಿ ವಕೀಲರೊಬ್ಬರು ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಯಾದಗಿರಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆದಿದೆ.

    ಜಿಲ್ಲಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಹಿರಿಯ ವಕೀಲ ಗೋಪಾಲರಾವ್ ಅವರು ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ನ್ಯಾಯಾಲಯದ ಆವರಣದಲ್ಲಿರುವ ತನ್ನ ಕಚೇರಿಯಲ್ಲಿ, ಕಕ್ಷಿದಾರರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಅಬ್ಬೆ ತುಮಕೂರಿನ ನಿವಾಸಿ ವಿಶಾಲಕ್ಷಿ ಅವರಿಗೆ ಸಂಬಂಧಿಸಿದ ಪ್ರಕರಣ ಸಂಬಂಧ ವಾದಿಸಲು ಜಿಲ್ಲಾ ನ್ಯಾಯಾಲಯ ಗೋಪಾಲರಾವ್ ಅವರನ್ನು ನೇಮಿಸಿತ್ತು. ಸರ್ಕಾರಿ ವಕೀಲರು ಕಕ್ಷಿದಾರರಿಂದ ಯಾವುದೇ ಹಣ ತೆಗೆದುಕೊಳ್ಳಬಾರದೆಂಬ ನಿಯಮವಿದೆ. ಹೀಗಿದ್ದರೂ ವಿಶಾಲಕ್ಷಿ ಅವರ ಪ್ರಕರಣದಲ್ಲಿ ವಾದ ಮಂಡನೆ ಮಾಡಲು ವಕೀಲ ಗೋಪಾಲರಾವ್ 50 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.

    50 ಸಾವಿರ ರೂ. ನೀಡಲು ಇಲ್ಲದ ಕಾರಣ 10 ಸಾವಿರ ರೂ. ನೀಡಲು ವಿಶಾಲಕ್ಷಿ ಒಪ್ಪಿದ್ದರು. ವಕೀಲರಿಗೆ ನೀಡಲು ಹಣ ಇಲ್ಲದ ಸಂದರ್ಭದಲ್ಲಿ ವಿಶಾಲಕ್ಷಿ ಅವರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋಪಾಲರಾವ್ ಈಗಾಗಲೇ ಮುಂಗಡವಾಗಿ 5 ಸಾವಿರ ರೂಪಾಯಿ ಪಡೆದಿದ್ದು, ಇಂದು ಬಾಕಿ ಹಣ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನು ಓದಿ : ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ – ಎಸಿಬಿಗೆ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್

  • ವಾಹನಗಳ ಬ್ರ್ಯಾಂಡ್ ನೋಡಿ ಲಂಚ ಫಿಕ್ಸ್- ದೊಡ್ಡ ಗಾಡಿಗೆ ಜಾಸ್ತಿ ಕೊಡಿ : ಪೊಲೀಸಪ್ಪನ ವಿಡಿಯೋ ವೈರಲ್

    ವಾಹನಗಳ ಬ್ರ್ಯಾಂಡ್ ನೋಡಿ ಲಂಚ ಫಿಕ್ಸ್- ದೊಡ್ಡ ಗಾಡಿಗೆ ಜಾಸ್ತಿ ಕೊಡಿ : ಪೊಲೀಸಪ್ಪನ ವಿಡಿಯೋ ವೈರಲ್

    ಬೆಂಗಳೂರು: ವಾಹನಗಳ ಬ್ರ್ಯಾಂಡ್ ನೋಡಿ ಬೆಂಗಳೂರು ಟ್ರಾಫಿಕ್ ಪೊಲೀಸರು ಲಂಚ ಫಿಕ್ಸ್ ಮಾಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ನಿಮ್ಮ ಕಾರು ಬ್ರ್ಯಾಂಡೆಡ್ ಆಗಿದ್ದರೆ ನೀವು ಹೆಚ್ಚು ಲಂಚ ನೀಡಬೇಕು.

    ಹೌದು. ಆಡಿ ಕಾರಲ್ಲಿ ಬರುತ್ತಿರಾ ದುಡ್ಡು ನೀಡಲು ಆಗುವುದಿಲ್ಲವೇ ಎಂದು ಬಾಯಿ ಬಿಟ್ಟು ಲಂಚ ಕೇಳಿದ್ದಾರೆ ಸಿಲಿಕಾನ್ ಸಿಟಿಯ ಟ್ರಾಫಿಕ್ ಪೊಲೀಸರು. ಹೀಗೆ ಬಾಯಿ ಬಿಟ್ಟು ಲಂಚ ಕೇಳಿದ ಮೈಕೋಲೇಔಟ್ ಪೊಲೀಸರ ವಿಡಿಯೋ ಈಗ ವೈರಲ್ ಆಗಿದೆ.

    ಮೈಕೋಲೇಔಟ್ ಪೊಲೀಸ್ ಠಾಣೆಯ ಪೇದೆ ಜೈಕೃಷ್ಣ ಲಕ್ಷ್ಮಿನಾರಾಯಣ ಎಂಬುವವರ ಕಾರನ್ನು ಅಡ್ಡಗಟ್ಟಿ ನಿಮ್ಮ ಕಾರಿನಲ್ಲಿ ಟಿಟೆಂಡ್ ಗ್ಲಾಸ್ ಇದೆ 2500 ರೂ. ದಂಡ ಕಟ್ಟಿ ಎಂದಿದ್ದಾರೆ. ಫೈನ್ ಏನು ಬೇಡ 500 ಕೊಡಿ ಸಾಕು ಎಂದು ಬಾಯಿ ಬಿಟ್ಟು ಲಂಚ ಕೇಳಿದ್ದಾರೆ.

    ಇದಕ್ಕೆ ಲಕ್ಷ್ಮಿನಾರಾಯಣ ಅವರು 100 ಕೊಡಲು ಹೋದಾಗ ಇಷ್ಟು ದೊಡ್ಡ ಕಾರು ಇಟ್ಕೊಂಡು ಐನೂರು ಕೊಡಲು ಸಾಧ್ಯವಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ನಾವು 5 ಜನ ಇದ್ದೇವೆ ಕಾಫಿ ಕುಡಿದುಕೊಂಡು ಹೋಗುತ್ತೇವೆ ಐನೂರು ಕೊಡಿ ಎಂದು ಬಹಿರಂಗವಾಗಿ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.

  • ಶಿರಾಡಿ ಘಾಟ್ ಸಂಚಾರ ನಿಷೇಧವಿದ್ದರೂ ಹಣ ಪಡೆದು ಲಾರಿ ಬಿಡುತ್ತಿರುವ ಪೊಲೀಸರು

    ಶಿರಾಡಿ ಘಾಟ್ ಸಂಚಾರ ನಿಷೇಧವಿದ್ದರೂ ಹಣ ಪಡೆದು ಲಾರಿ ಬಿಡುತ್ತಿರುವ ಪೊಲೀಸರು

    ಹಾಸನ: ಅನಿರ್ಧಿಷ್ಟಾವಧಿಗೆ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧವಿದ್ದರೂ, ಪೊಲೀಸರು ಹಣ ಪಡೆದು ಲಾರಿಗಳನ್ನು ಬಿಡುತ್ತಿದ್ದಾರೆ. ಇನ್ನು ಇದನ್ನು ಪ್ರಶ್ನಿಸಲು ಹೋದ ಪಂಜಾಬ್ ಚಾಲಕನ ಮೇಲೆಯೇ ಪೊಲೀಸರು ದರ್ಪ ಮೆರೆದಿದ್ದಾರೆ.

    ಸಕಲೇಶಪುರದ ಗುಂಡ್ಯ ಚೆಕ್‍ಪೋಸ್ಟ್ ಬಳಿ ಶಿರಾಡಿ ಘಾಟ್ ಮೂಲಕ 12 ಚಕ್ರದ ಲಾರಿಗಳ ಸಂಚಾರಕ್ಕೆ ಪೊಲೀಸರು ಬಿಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪಂಜಾಬ್ ಮೂಲದ ಲಾರಿ ಚಾಲಕ, ಪೊಲೀಸರು 500 ರೂ. ಪಡೆದ ನಿಷೇಧ ಇದ್ದರೂ ವಾಹನ ಬಿಡುತ್ತಿದ್ದಾರೆ. ನಾವು ಕಳೆದ ಹತ್ತು ದಿನಗಳಿಂದ ಇಲ್ಲಿ ಕಾದು ಕುಳಿತರೂ ಸಂಚಾರಕ್ಕೆ ಬಿಟ್ಟಿಲ್ಲ. ಆದರೆ ಈಗ ಹಣ ಪಡೆದು ಪೊಲೀಸರು ಬಿಡುತ್ತಿದ್ದಾರೆ ಎಂದು ಆರೋಪಿಸುತ್ತಾ ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿದ್ದರು. ಇದನ್ನು ಓದಿ: ಮಂಗಳೂರು-ಶಿರಾಡಿ-ಬೆಂಗಳೂರು ಸಂಚಾರಕ್ಕೆ ಸದ್ಯಕ್ಕೆ ಶುರುವಾಗಲ್ಲ!

    ಪೊಲೀಸರು ಚಾಲಕನಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದು. ಆದರೆ ಆತ ಮೊಬೈಲ್ ನೀಡದೆ, ನಾನು ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆ ಎಂದು ಹೇಳಿದರು. ಆದರೆ ಯಾವುದಕ್ಕೂ ಕ್ಯಾರೆ ಅನ್ನದ ಪೊಲೀಸರು, ಜಿಲ್ಲಾಧಿಕಾರಿ ಅಲ್ಲ ನಿಮ್ಮಪ್ಪಗೂ ಹೇಳು ಎಂದು ಅವಾಚ್ಯ ಪದಗಳಿಂದ ಬೈದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/veR3b6PZiZ0

  • ಕೋರ್ಟ್ ಆವರಣದಲ್ಲಿಯೇ ಖಾಕಿಯ ಲಂಚಾವತಾರ

    ಕೋರ್ಟ್ ಆವರಣದಲ್ಲಿಯೇ ಖಾಕಿಯ ಲಂಚಾವತಾರ

    -ವಾರೆಂಟ್ ಜಾರಿಯಾದ ಆರೋಪಿಯಿಂದ ಲಂಚ

    ಬಳ್ಳಾರಿ: ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಪೊಲೀಸರೇ ಆತನಿಂದಲೇ ಹಣ ಪಡೆದು ನ್ಯಾಯಾಲಯಕ್ಕೆ ಮೋಸ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ನಗರದ ಹನುಮಂತ ಎನ್ನುವ ಆರೋಪಿಗೆ ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಆದರೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಪೊಲೀಸರು ಆರೋಪಿ ಹನುಮಂತ ಊರಿನಲ್ಲಿ ಇಲ್ಲ ಅಂತಾ ನ್ಯಾಯಾಲಯಕ್ಕೆ ಹೇಳಲು ಆತನಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.

    ನ್ಯಾಯಾಲಯದ ಆವರಣದಲ್ಲೆ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯ ಪೇದೆಗಳಾದ ಶ್ರೀನಿವಾಸ್ ಹಾಗೂ ಮುಜೀಬ್ ಎಂಬವರು ಆರೋಪಿಯಿಂದ ನ್ಯಾಯಾಲಯದ ಆವರಣದಲ್ಲೆ ಹಣ ಪಡೆದಿದ್ದಾರೆ. ಈ ಎಲ್ಲ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿವೆ.

    ಆರೋಪಿ ಹನುಮಂತ ನಿಂದ ನ್ಯಾಯಲಯದ ಆವರಣದಲ್ಲಿ ಎರಡು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಪೊಲೀಸ್ ಪೇದೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪೇದೆಗಳ ವಿರುದ್ಧ ಹಿರಿಯ ಅಧಿಕಾರಿಗಳು ಎನೂ ಕ್ರಮ ಕೈಗೊಳ್ಳುತ್ತಾರೆ ಅನ್ನೋದು ಇದೀಗ ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಬಳ್ಳಾಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ!

    ಚಿಕ್ಕಬಳ್ಳಾಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ!

    ಚಿಕ್ಕಬಳ್ಳಾಪುರ: ಗ್ರಾನೈಟ್ ಫ್ಯಾಕ್ಟರಿ ಮ್ಯಾನೇಜರ್ ಬಳಿಯಿಂದ ಲಂಚ ಪಡೆಯುತ್ತಿದ್ದ ಪೊಲೀಸ್ ಪೇದೆಯೋರ್ವರು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಚಂದ್ರಶೇಖರ್ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಿಬ್ಬೂರಹಳ್ಳಿ- ಸಾದಲಿ ಮಾರ್ಗದ ನಡುವೆ ಇರುವ ವಿಶಾಲಾಕ್ಷಿ ಸ್ಟೋನ್ ಆರ್ಟ್ ಗ್ರಾನೈಟ್ ಫ್ಯಾಕ್ಟರಿ ಮ್ಯಾನೇಜರ್ ಶಂಕರ್ ಎಂಬವರ ಬಳಿ 40,000 ಹಣಕ್ಕೆ ಪೇದೆ ಚಂದ್ರಶೇಖರ್ ಬೇಡಿಕೆ ಇಟ್ಟಿದ್ದರು. ಹೀಗಾಗಿ ಪೇದೆ ಫ್ಯಾಕ್ಟರಿ ಮುಂಭಾಗ ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ಚಿಕ್ಕಬಳ್ಳಾಪುರ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲಬುರಗಿಯ ಜಿಲ್ಲಾಧಿಕಾರಿಯಲ್ಲಿ ಕೆಲಸ ಆಗ್ಬೇಕಾ, ಫಟಾಫಟ್ ಕೊಡ್ಬೇಕು ದುಡ್ಡು

    ಕಲಬುರಗಿಯ ಜಿಲ್ಲಾಧಿಕಾರಿಯಲ್ಲಿ ಕೆಲಸ ಆಗ್ಬೇಕಾ, ಫಟಾಫಟ್ ಕೊಡ್ಬೇಕು ದುಡ್ಡು

    ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.

    ಕಚೇರಿಯಲ್ಲಿ ಯಾವುದೇ ಕೆಲಸವಾಗಬೇಕಾದರೂ ಐನೂರರಿಂದ ಸಾವಿರ ರೂಪಾಯಿ ನೀಡಲೇ ಬೇಕು. ಹಣ ಕೊಟ್ಟರೆ ಬೇಗ ಕೆಲಸವಾಗುತ್ತದೆ. ಹಣ ನೀಡದಿದ್ದರೆ ಸಿಬ್ಬಂದಿ ಅಲೆದಾಡಿಸುತ್ತಾರಂತೆ. ಇದಕ್ಕೆ ಸಾಕ್ಷಿಯೆನ್ನುವಂತೆ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಕೆಲ ಸಿಬ್ಬಂದಿ ಹಣ ತಗೆದುಕೊಂಡು ಕೀ ಪ್ಯಾಡ್ ಕೆಳಗೆ ಇಡುತ್ತಿರುವ ದೃಶ್ಯಾವಳಿಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮನೆ, ಆಸ್ತಿ ಖರೀದಿ ಸೇರಿದಂತೆ ನೊಂದಣಿ ಮಾಡಿಸಲು ಬಂದವರಿಂದ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಈ ರೀತಿಯ ಭ್ರಷ್ಟಾಚಾರಗಳು ನಡೆಯುತ್ತಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.

  • ಪಾಸ್‍ಪೋರ್ಟ್ ಕಚೇರಿಯಲ್ಲಿ ಮಧ್ಯವರ್ತಿಗಳ ಲಂಚಬಾಕತನ ಬಯಲು ಮಾಡಿದ್ರು ಮೈಸೂರಿನ ವ್ಯಕ್ತಿ!

    ಪಾಸ್‍ಪೋರ್ಟ್ ಕಚೇರಿಯಲ್ಲಿ ಮಧ್ಯವರ್ತಿಗಳ ಲಂಚಬಾಕತನ ಬಯಲು ಮಾಡಿದ್ರು ಮೈಸೂರಿನ ವ್ಯಕ್ತಿ!

    ಮೈಸೂರು: ಮಕ್ಕಳ ಪಾಸ್‍ಪೋರ್ಟ್ ಮಾಡಿಸಲು ಹೋದ ತಂದೆಯೊಬ್ಬರು ಬೆಂಗಳೂರು ಪಾಸ್‍ಪೋರ್ಟ್ ಕಚೇರಿಯಲ್ಲಿರುವ ಮಧ್ಯಮರ್ತಿಗಳ ದಂಧೆಯನ್ನು ಬಯಲು ಮಾಡಿದ್ದಾರೆ.

    ಪ್ರತಿಭಾನ್ವಿತ ಮಕ್ಕಳನ್ನು ಸ್ಪರ್ಧೆಗೆ ವಿದೇಶಕ್ಕೆ ಕಳುಹಿಸಲು ಹಣಕ್ಕಾಗಿ ಪರದಾಡುತ್ತಿದ್ದ ತಂದೆ, ತನ್ನ ಮಕ್ಕಳ ಪಾಸ್ ಪೋರ್ಟ್ ಮಾಡಿಸಲು ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಹೋದಾಗ ಅಲ್ಲಿನ ಮಧ್ಯವರ್ತಿಗಳು ಸೃಷ್ಟಿ ಮಾಡಿರುವ ವ್ಯವಸ್ಥೆಯನ್ನು ರೆಕಾರ್ಡ್ ಮಾಡಿದ್ದಾರೆ.

    ಮೈಸೂರಿನ ಎಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ನ ಯರಳ್ಳಿ ಗ್ರಾಮದ ಮಂಜು ರಾವ್ ಬೀದಿ ಬೀದಿಯಲ್ಲಿ ಪಾತ್ರೆ ಮಾರಿ ಜೀವನ ಸಾಗಿಸುತ್ತಿದ್ದರು. ಇವರ ಇಬ್ಬರು ಮಕ್ಕಳಾ ಐಶ್ವರ್ಯ ಹಾಗೂ ನಿಖಿಲ್ ಮಲೇಷಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಕರಾಟೆ ಬಾಕ್ಸಿಂಗ್ ಗೆ ಆಯ್ಕೆಯಾಗಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಮಲೇಷಿಯಾಗೆ ಮಕ್ಕಳನ್ನು ಕಳಿಸಲು ಸಾಧ್ಯವಾಗುತ್ತೋ ಇಲ್ವೋ ಅಂತಾ ಮಂಜು ರಾವ್ ಚಿಂತೆಯಲ್ಲಿದ್ದಾರೆ.

    ಈ ನಡುವೆ ಮಕ್ಕಳ ಪಾಸ್ ಪೋರ್ಟ್ ಮಾಡಿಸಲು ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಹೋದಾಗ ಅಲ್ಲಿ ಸಂಪರ್ಕಕ್ಕೆ ಬಂದ ಮಧ್ಯವರ್ತಿ ತುರ್ತಾಗಿ ಮಕ್ಕಳ ಪಾಸ್ ಪೋರ್ಟ್ ಮಾಡಿಸಿ ಕೊಡಲು ಲಂಚ ಕೇಳಿದ್ದಾನೆ. ಐದು ಸಾವಿರ ಹಣ ಕೇಳುವ ಮಧ್ಯವರ್ತಿ ಕೊನೆಗೆ ಪಾಸ್ ಪೋರ್ಟ್ ಅಧಿಕಾರಿಗಳಿಗೆ ಎರಡು ಸಾವಿರ ಕೊಡಬೇಕು ನನಗೆ ಒಂದು ಸಾವಿರ ಎಂದು ಹೇಳಿ ಮೂರು ಸಾವಿರ ರೂಪಾಯಿ ಪಡೆದಿದ್ದಾನೆ. ಅಧಿಕಾರಿ ಲಂಚ ಪಡೆದ ವಿಡಿಯೋ ಮಾಡಿದ್ದು, ಅವರ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಾರೆ.

  • ಲಂಚ ನೀಡದ ಮಟ್ಕಾ ದಂಧೆ ಆರೋಪಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ!

    ಲಂಚ ನೀಡದ ಮಟ್ಕಾ ದಂಧೆ ಆರೋಪಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ!

    ತುಮಕೂರು: ಲಂಚ ನೀಡಲಿಲ್ಲವೆಂದು ಮಟ್ಕಾ ದಂಧೆ ಆರೋಪಿಗೆ ಮೇಲೆ ಆಂಧ್ರ ಪ್ರದೇಶದ ಕಂಬದೂರು ಪೊಲೀಸರು ಮನಬಂದಂತೆ ಥಳಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

    ಪಾವಗಡ ತಾಲೂಕಿನ ಡೊಡ್ಡಹಳ್ಳಿ ಗ್ರಾಮದ ನಿವಾಸಿ ವೀರೇಶ್ ಹಲ್ಲೆಗೆ ಒಳಗಾದ ಆರೋಪಿ. ಮಟ್ಕಾ ಆರೋಪದ ಮೇಲೆ ವೀರೇಶನನ್ನು ಆತನ ಮನೆಯಲ್ಲಿ ಮೇ 29 (ಮಂಗಳವಾರ) ಮಧ್ಯರಾತ್ರಿ ಆಂಧ್ರ ಪ್ರದೇಶದ ಕಂಬದೂರು ಪೆÇಲೀಸರು ಬಂದಿಸಿದ್ದರು. ಕೇಸ್ ವಾಪಾಸ್ ಪಡೆಯುತ್ತೇವೆ 10 ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದ್ದಾರಂತೆ. ಇದಕ್ಕೆ ವೀರೇಶ್ ಒಪ್ಪದಿದ್ದಾಗ ಎರಡು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿರಿಸಿ, ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ ಎಂದು ವೀರೇಶ್ ಹೇಳ್ತಾರೆ.

    ಗುರುವಾರ ಆಂಧ್ರ ಪ್ರದೇಶ ಪೊಲೀಸರಿಗೆ 2.5 ಲಕ್ಷ ರೂ. ನೀಡಿದ್ದರಿಂದ ಅಂದು ರಾತ್ರಿ ವೀರೇಶನನ್ನು ಬಿಟ್ಟು ಕಳುಹಿಸಿದ್ದಾರೆ. ಪೊಲೀಸರ ದೌರ್ಜನ್ಯಕ್ಕೆ ಒಳಗಾದ ವೀರೇಶನ ಸೊಂಟ, ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ವೀರೇಶನ ಸಂಬಂಧಿಕರು ಆಂಧ್ರಪ್ರದೇಶ ಪೊಲೀಸರ ವರ್ತನೆ ಕಂಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಕೊಡಲು ಮುಂದಾಗಿದ್ದಾರೆ.

  • ಶೀಘ್ರದಲ್ಲೇ ಮೋದಿ ಸರ್ಕಾರದಿಂದ ಭ್ರಷ್ಟ ಅಧಿಕಾರಿಗಳ ಬೇಟೆ  ಆರಂಭ

    ಶೀಘ್ರದಲ್ಲೇ ಮೋದಿ ಸರ್ಕಾರದಿಂದ ಭ್ರಷ್ಟ ಅಧಿಕಾರಿಗಳ ಬೇಟೆ ಆರಂಭ

    ನವದೆಹಲಿ: ಕಳಧನಿಕರಿಗೆ ನೋಟ್ ಬ್ಯಾನ್ ಮಾಡಿ ಬಿಸಿ ಮುಟ್ಟಿಸಿದ ಮೋದಿ ಸರ್ಕಾರ ಈಗ ಅಧಿಕಾರಲ್ಲಿದ್ದುಕೊಂಡು ಭ್ರಷ್ಟಾಚಾರ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ.

    ಹೌದು. ಕೇಂದ್ರ ಜಾಗೃತ ಆಯೋಗ ಪ್ರತಿ ಸಚಿವಾಲಯಗಳಿಗೂ ಭ್ರಷ್ಟ ಅಧಿಕಾರಿಗಳ ಕಡತ ಸಿದ್ಧಪಡಿಸುವಂತೆ ಸೂಚಿಸಿದೆ. ಅಗಸ್ಟ್ 15ರ ನಂತರ ಪಟ್ಟಿಯಲ್ಲಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ಮಾಧ್ಯಮವೊಂದು ತಿಳಿಸಿದೆ.

    ಗೃಹ ವ್ಯವಹಾರಗಳ ಸಚಿವಾಲಯವು ಅಧಿಕಾರಿಗಳ ಸೇವಾ ದಾಖಲೆಯ ಆಧಾರದ ಮೇಲೆ ಭ್ರಷ್ಟ ಅಧಿಕಾರಿಗಳ ಕಡತವನ್ನು ರೂಪಿಸಲಿದೆ. ಆಗಸ್ಟ್ 5ರ ಒಳಗಾಗಿ ಅಂತಿಮ ಪಟ್ಟಿ ಸಲ್ಲಿಸುವಂತೆ ವಿವಿಧ ಇಲಾಖೆಗಳಿಗೆ ಮತ್ತು ಅರೆಸೇನಾ ಪಡೆಗಳಿಗೆ ಸಚಿವಾಲಯ ಸೂಚಿಸಿದೆ.

    ಈ ಪಟ್ಟಿಯಲ್ಲಿರುವ ಅಧಿಕಾರಿಗಳು ವೈಯಕ್ತಿಯ ಲಾಭಕ್ಕೆ ಸರ್ಕಾರಕ್ಕೆ ನಷ್ಟ ಎಸಗಿದ್ದಾರೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲಾಗುತ್ತದೆ. ಬಳಿಕ ಆ ಪಟ್ಟಿಯನ್ನು ಕೇಂದ್ರೀಯ ತನಿಖಾ ದಳ ಮತ್ತು ಕೇಂದ್ರ ಜಾಗೃತಾ ಆಯೋಗಕ್ಕೆ ಕಳುಹಿಸಲಾಗುತ್ತದೆ. ಈ ಸಂಸ್ಥೆಗಳು ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿವೆ ಎಂದು ಸಚಿವಾಲಯ ತಿಳಿಸಿದೆ.