Tag: bribery

  • ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ

    ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ

    ಚಿಕ್ಕಮಗಳೂರು: ಎರಡು ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ ಎಸಿಬಿ ಬಲೆಗೆ ಬಿದ್ದಿರೋ ಘಟನೆ ನಗರದಲ್ಲಿ ನಡೆದಿದೆ.

    ಎಸಿಬಿ ಬಲೆಗೆ ಬಿದ್ದ ಅಧಿಕಾರಿಯನ್ನ ಎಂ.ಸಿ.ಶಿವಕುಮಾರ್ ಎಂದು ಗುರುತಿಸಲಾಗಿದೆ. ಲೇಔಟ್ ನಿರ್ಮಾಣ ವಿಚಾರ ಸಂಬಂಧ ಕಚೇರಿ ಪಕ್ಕದಲ್ಲೇ ಗೋಪಿನಾಥ್ ಅವರಿಂದ ಎರಡು ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ

    ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಲೇಔಟ್ ನಿರ್ಮಾಣದ ಸಂಬಂಧ ಎಂಟು ಲಕ್ಷಕ್ಕೆ ಮಾತುಕತೆ ಮಾಡಿಕೊಂಡು ಮುಂಗಡವಾಗಿ 2 ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ದೂರುದಾರ ಗೋಪಿನಾಥ್ ಬ್ರೋಕರ್ ರಮೇಶ್ ಮೂಲಕ ಶಿವಕುಮಾರ್‌ನನ್ನು ಭೇಟಿ ಮಾಡಿದ್ದರು. ಎರಡು ಲಕ್ಷ ಹಣ ನೀಡುವಾಗ ನೇರವಾಗಿ ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳು ಬ್ರೋಕರ್ ರಮೇಶ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾ ಅಧಿಕಾರಿ ಶಿವಕುಮಾರ್ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಎಸಿಬಿ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದ ತಂಡ ದಾಳಿ ನಡೆಸಿತ್ತು.

  • ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಕಂದಾಯ ಇಲಾಖೆ ಸಿಬ್ಬಂದಿ

    ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಕಂದಾಯ ಇಲಾಖೆ ಸಿಬ್ಬಂದಿ

    ಗದಗ: ಕಂದಾಯ ಇಲಾಖೆ ಕಂಪ್ಯೂಟರ್ ಆಪರೇಟರ್ ಓರ್ವ ಲಂಚ ಪಡೆಯುವ ವೇಳೆ ಎಸಿಬಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಮುಂಡರಗಿಯಲ್ಲಿ ನಡೆದಿದೆ.

    ಗದಗ ಎಸಿಬಿ, ಡಿವೈಎಸ್ಪಿ, ಎಮ್‍ವಿ ಮಲ್ಲಾಪೂರ ನೇತೃತ್ವದಲ್ಲಿ ಬುಧವಾರ ದಾಳಿ ನಡೆದಿದ್ದು, ಈ ವೇಳೆ ಮುಂಡರಗಿ ತಹಶಿಲ್ದಾರ್ ಕಚೇರಿಯ ಕಂದಾಯ ವಿಭಾಗದ ಕಂಪ್ಯೂಟರ್ ಆಪರೇಟರ್ ಎಮ್‍ಐ ಉಪ್ಪಾರಡ್ಡಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಇಡಿಯಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅರೆಸ್ಟ್

    ಆರ್‍ಟಿಸಿ ಕಲಂ 11ರ ಜಮೀನು ಉತಾರದಲ್ಲಿ ಹೆಸರು ಬದಲಾವಣೆಗಾಗಿ ಫಲಾನುಭವಿಯಿಂದ 11 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದರು. ಕಳೆದ ವಾರ ಫಲಾನುಭವಿಯಿಂದ 5 ಸಾವಿರ ರೂ. ಪಡೆದಿದ್ದು, ಇಂದು ಇನ್ನುಳಿದ 6 ಸಾವಿರ ರೂ. ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ನಟ ಚೇತನ್ ಬೆನ್ನಿಗೆ ನಿಂತ ರಮ್ಯಾ

    ಉಪ್ಪಾರಡ್ಡಿಯನ್ನು ಎಸಿಬಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಎಸಿಬಿ ಸಿಪಿಐ ದೇಸಾಯಿ ಹಾಗೂ ಸಿಬ್ಬಂದಿ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಗದಗ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಂಚ ಬೇಡಿಕೆ ಇಟ್ಟ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲು

    ಲಂಚ ಬೇಡಿಕೆ ಇಟ್ಟ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲು

    ಬೆಂಗಳೂರು: ಚಾರ್ಜ್ ಶೀಟ್ ಹಾಕಲು ಲಂಚಕ್ಕೆ ಬೇಡಿಕೆ ಇಟ್ಟ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಎಫ್‌ಐಆರ್ ದಾಖಲಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಇನ್ಸ್ ಪೆಕ್ಟರ್ ಜಯರಾಜ್ ಹಾಗೂ ಎಎಸ್‌ಐ ಶಿವಕುಮಾರ್ ಆರೋಪಿಗಳು. ಜಯರಾಜ್ ಈ ಹಿಂದೆ ಕೆಆರ್ ಪುರಂ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದರು. ಸದ್ಯ ಸಿಐಡಿಯಲ್ಲಿ ಇನ್ಸ್ ಪೆಕ್ಟರ್ ಜಯರಾಜ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಕೌಟುಂಬಿಕ ಕಲಹದಲ್ಲಿ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದರು. ಪತ್ನಿಯ ದೂರಿನನ್ವಯ ಗಂಡ ಸಂಜು ರಾಜನ್‌ನನ್ನು ಕೆಆರ್ ಪುರಂ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಸಂಜು ರಾಜನ್ ಜೈಲಿನಿಂದ ಬಿಡುಗಡೆಯಾಗಿದ್ದರು.

    ಈ ಹಿನ್ನೆಲೆಯಲ್ಲಿ ಪ್ರತಿವಾರ ಠಾಣೆಗೆ ಆಗಮಿಸಿ ಸಹಿ ಮಾಡಲು 500 ರಿಂದ 10 ಸಾವಿರದವರಗೆ ಪೊಲೀಸರು ಲಂಚ ಪಡೆಯುತ್ತಿದ್ದರು. ಬೇಗ ಚಾರ್ಜ್ ಶೀಟ್ ಮಾಡಲು 80 ಸಾವಿರ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಾಜಪೇಯಿ ಜನ್ಮ ದಿನಾಚರಣೆ ಆಚರಿಸಿದ ರಮೇಶ್ ಜಾರಕಿಹೊಳಿ

    MONEY

    ಸಕ್ಷಮ ಪ್ರಾಧಿಕಾರದ ಅನುಮತಿ ಮೇರೆಗೆ ಇನ್ಸ್ಪೆಕ್ಟರ್ ಜಯರಾಜ್ ಹಾಗೂ ಎಎಸ್‌ಐ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿ ಎಸಿಬಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು

  • ಪೊಲೀಸರು ಲಂಚ ಪಡೆದರೆ ಕೆಲ್ಸ ಆಗುತ್ತೆ, ಬೇರೆಯವರು ಹಣ ಪಡೆದ್ರೂ ಏನೂ ಮಾಡಲ್ಲ: ಪೊಲೀಸ್

    ಲಕ್ನೋ: ಉತ್ತರ ಪ್ರದೇಶದ ಪೊಲೀಸ್ ಒಬ್ಬ ಲಂಚವನ್ನು ತೆಗೆದುಕೊಳ್ಳುವ ಬಗ್ಗೆ ಸಮರ್ಥಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ ‘ಪೊಲೀಸ್ ಕೀ ಪಾಠ ಶಾಲಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್‌ ಉಪಗ್ರಹಗಳು? ದರ ಎಷ್ಟು? ನೆಟ್‌ ಹೇಗೆ ಸಿಗುತ್ತೆ?

    ಪೊಲೀಸ್ ಇಲಾಖೆಯವರು ಲಂಚವನ್ನು ತೆಗೆದುಕೊಂಡು ಯಾವುದೇ ಕೆಲಸವಾಗಿರಲಿ ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ. ಆದರೆ ಬೇರೆ ಇಲಾಖೆಯ ಜನ ಲಂಚ ತೆಗೆದುಕೊಂಡರೂ ಸಹ ಯಾವುದೇ ಕೆಲಸ ಮಾಡಿಕೊಡುವದಿಲ್ಲ. ಕೊರೊನಾ ಸಾಂಕ್ರಾಮಿಕ ರೋಗವಿದ್ದರೂ ಸಹ ತಮ್ಮ ಜೀವವನ್ನು ಲೆಕ್ಕಿಸದೇ ಸಾಮಾನ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಐಪಿಎಲ್ 2022 ಹರಾಜು – 5 ವಿದೇಶಿ ವಿಕೆಟ್ ಕೀಪರ್‌ಗಳ ಮೇಲೆ ಫ್ರಾಂಚೈಸಿಗಳ ಕಣ್ಣು

    BRIBE

    ಪೊಲೀಸ್ ಭಾಷಣದ ಈ ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಉನ್ನಾವೋ ಪೊಲೀಸ್ ಸಂಪೂರ್ಣ ವಿಷಯದ ಬಗ್ಗೆ ತನಿಖೆ ನಡೆಸಿ ವರದಿಯನ್ನು ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ ಎಂದು ಟ್ವೀಟ್ ಮಾಡಿದೆ.

  • ಹೋಟೆಲ್‍ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇನ್ಸ್​ಪೆಕ್ಟರ್ ಎಸಿಬಿ ಬಲೆಗೆ!

    ಹೋಟೆಲ್‍ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇನ್ಸ್​ಪೆಕ್ಟರ್ ಎಸಿಬಿ ಬಲೆಗೆ!

    ಹುಬ್ಬಳ್ಳಿ: ರೈತರೊಬ್ಬರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಇನ್ಸ್​ಪೆಕ್ಟರ್ ಹೊಟೇಲ್ ನಲ್ಲಿ ಹಣ ತೆಗೆದುಕೊಳ್ಳುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ. ಕುಂದಗೋಳ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂದಾಯ ನಿರೀಕ್ಷಕ ಸದಾನಂದ ಭೀಮಣ್ಣ ಎನ್ನುವವರು ಶರೇವಾಡ ಗ್ರಾಮದ ರೈತ ಲೋಚನಪ್ಪ ಎಂಬವರ ಜಮೀನಿನ ವಿಷಯ ಬಗೆಹರಿಸುವ ಸಲುವಾಗಿ 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿ:  ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಚಾಲನೆ – ಕಬ್ಬು ನಾಟಿ ಮಾಡಿದ ಕೌರವ

    ಲಂಚಕ್ಕೆ ಬೇಡಿಕೆ ಇಟ್ಟ ಪರಿಣಾಮ ಎಸಿಬಿಗೆ ರೈತರು ದೂರು ನೀಡಿದ್ದರು. ಈ ಪರಿಣಾಮ ರೈತನ ದೂರು ಆಧರಿಸಿ ಎಸಿಬಿ ಅಧಿಕಾರಿಗಳು, ಇಂದು ಹುಬ್ಬಳ್ಳಿಯ ಕಾಮತ್ ಹೊಟೇಲ್ ನಲ್ಲಿ ರೈತ ಲೋಚನಪ್ಪ ಅವರಿಂದ 35,000 ರೂ. ಪಡೆಯುವಾಗ ಎಸಿಬಿ ವಿಭಾಗದ ಡಿವೈಎಸ್‍ಪಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ಮಾಡಿ ಸದಾನಂದ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ಕೆರೆಯ ಬಳಿ ಮದ್ಯಪಾನ ಮಾಡಿ ಗುಂಡಿನ ದಾಳಿ – FSL ತಂಡದಿಂದ ಪರಿಶೀಲನೆ

    ಡಿವೈಎಸ್‍ಪಿ ವೇಣುಗೋಪಾಲ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್​ಪೆಕ್ಟರ್ ಅಧಿಕಾರಿಗಳಾದ ಅಲಿಶೇಖ್, ವಿ.ಎನ್.ಖಡಿ ಇವರೊಂದಿಗೆ ಸಿಬ್ಬಂದಿಗಳಾದ ಲೊಕೇಶ್ ಬೆಂಡಿಕಾಯಿ, ಗಿರೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ವೇಳೆ ಕಂದಾಯ ನಿರೀಕ್ಷಕರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಲಾಗಿದೆ.

  • ಫೋನ್ ಪೇ ಮೂಲಕ ಲಂಚ ಪಡೆದ ಪಿಎಸ್‍ಐ ಅಮಾನತು

    ಫೋನ್ ಪೇ ಮೂಲಕ ಲಂಚ ಪಡೆದ ಪಿಎಸ್‍ಐ ಅಮಾನತು

    ತುಮಕೂರು: ಫೋನ್ ಪೇ ಮೂಲಕ ಲಂಚ ಪಡೆದ ಜಿಲ್ಲೆಯ ಗುಬ್ಬಿ ಟೌನ್ ಠಾಣೆಯ ಪಿಎಸ್ ಐ ಜ್ಞಾನಮೂರ್ತಿಯನ್ನು ಅಮಾನತುಗೊಳಿಸಿ ಎಸ್‍ಪಿ ಆದೇಶಿಸಿದ್ದಾರೆ.

    ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ವೊಂದನ್ನು ತಡೆದು ಚಾಲಕನಿಗೆ ಕಿರುಕುಳ ನೀಡಿದ ಆರೋಪವನ್ನು ಪಿಎಸ್‍ಐ ಎದುರಿಸುತ್ತಿದ್ದರು. ಕ್ಯಾಬ್ ಚಾಲಕನಿಂದ 7 ಸಾವಿರ ರೂ. ಲಂಚವನ್ನು ಫೋನ್ ಪೇ ಮೂಲಕ ಪಿಎಸ್‍ಐ ಪಡೆದುಕೊಂಡಿದ್ದರು. ಜೀಪ್ ಚಾಲಕ ಕರಿಯಪ್ಪರ ಮೊಬೈಲ್ ನಂಬರಿಗೆ ಪಿಎಸ್‍ಐ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡದ್ದರು. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಪಿಎಸ್‍ಐ ದೌರ್ಜನ್ಯ ಖಂಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್‍ಐ ಜ್ಞಾನಮೂರ್ತಿಯನ್ನು ಅಮಾನತ್ತು ಮಾಡಿ ತುಮಕೂರು ಎಸ್‍ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶಿಸಿದ್ದಾರೆ.

  • ಲಂಚ ಪಡೆಯುವಾಗ ತಗ್ಲಾಕೊಂಡ ಅಧಿಕಾರಿ – ಬನಿಯನ್, ಟವೆಲ್ ನಲ್ಲಿಯೇ ಕರ್ಕೊಂಡು ಬಂದ್ರು!

    ಲಂಚ ಪಡೆಯುವಾಗ ತಗ್ಲಾಕೊಂಡ ಅಧಿಕಾರಿ – ಬನಿಯನ್, ಟವೆಲ್ ನಲ್ಲಿಯೇ ಕರ್ಕೊಂಡು ಬಂದ್ರು!

    – ಮನೆಯಲ್ಲಿಯೇ ನಡೀತಾ ಇತ್ತು ಡೀಲ್

    ಲಕ್ನೋ: ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯನ್ನು ಎಸಿಬಿ ಬೇಟೆಯಾಡಿದೆ. ಹಣ ಪಡೆಯುತ್ತಿರುವ ಸಮಯದಲ್ಲಿ ಎಂಟ್ರಿ ಕೊಟ್ಟ ಭ್ರಷ್ಟಾಚರ ನಿಗ್ರಹ ದಳ (ಎಸಿಬಿ) ತಂಡ ಟವೆಲ್, ಬನಿಯನ್ ಮೇಲೆಯೇ ಅಧಿಕಾರಿಯನ್ನು ಕಚೇರಿಗೆ ಕರೆ ತಂದಿದ್ದಾರೆ.

    ಉತ್ತರ ಪ್ರದೇಶದ ಸಂತ ಕಬೀರ್ ನಗರದ ರಾಮ್ ಮಿಲನ್ ಯಾದವ್ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿರುವಾಗ ತಗ್ಲಾಕೊಂಡ ದ್ವಿತೀಯ ದರ್ಜೆಯ ನೌಕರ. ಅಬ್ದುಲ್ ಖಾನ್ ಎಂಬವರ ವರದಿ ಸಿದ್ಧಪಡಿಸಲು ರಾಮ್ ಮಿಲನ್ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಮುಂದಿಟ್ಟಿದ್ದರಿಂದ ಎಸಿಬಿಗೆ ದೂರು ನೀಡಿದ್ದರು. ಇದನ್ನೂ ಓದಿ: ಸವಾಲುಗಳನ್ನು ಮೆಟ್ಟಿಲಾಗಿಸಿಕೊಂಡು ಕೆಲಸ ಮಾಡ್ತೇನೆ: ಸಿಎಂ ಬೊಮ್ಮಾಯಿ

    ಸದ್ಯ ಆರೋಪಿಯನ್ನು ಠಾಣೆಗೆ ಕರೆ ತಂದಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸಿಬಿ ಅಧಿಕಾರಿ ರಾಮಧಾರಿ ಮಿಶ್ರಾ, ದೂರು ಸಲ್ಲಿಕೆಯಾಗಿದ್ದರಿಂದ ಲಂಚ ಪಡೆಯುವ ವೇಳೆ ನಮ್ಮ ತಂಡ ದಾಳಿ ನಡೆಸಿತ್ತು. ಸದ್ಯ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಡ್ಡ ಬಿಟ್ಟಾಗ ಶಿವಾಜಿ, ಈಗ ಬಸವಣ್ಣ: ಶಾಸಕ ಯತ್ನಾಳ್

    ಉಪ ನಿರೀಕ್ಷಕರಾಗಿರುವ ರಾಮ್ ಯಾದವ್ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರು. ಜಮೀನು ವಿಷಯವಾಗಿ ವರದಿ ಸಿದ್ಧಪಡಿಸಲು 10 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದ್ರೆ ನನಗೆ ಹಣ ನೀಡಲು ಇಷ್ಟವಿರಲಿಲ್ಲ. ಹಾಗಾಗಿ ಎಸಿಬಿಗೆ ದೂರು ನೀಡಿದ್ದೆ ಎಂದು ಅಬ್ದುಲ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಒಬ್ಬನೊಂದಿಗೆ ತಾಯಿ-ಮಗಳ ಅಕ್ರಮ ಸಂಬಂಧ – ಗೂಢಚಾರಿಕೆ ನಡೆಸ್ತಿದ್ದವನನ್ನ ಕೊಂದೇ ಬಿಟ್ರು!

  • ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಪಿಡಿಓ

    ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಪಿಡಿಓ

    ಚಿತ್ರದುರ್ಗ: ಲಂಚ ಪಡೆಯುತ್ತಿದ್ದ ಪಿಡಿಓ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾ.ಪಂ ಪಿಡಿಓ ಶ್ರೀನಿವಾಸ್ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಮನೆಯ ಇ-ಸ್ವತ್ತು ಹಾಗೂ ಜಾಬ್ ಕಾರ್ಡ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್‍ನ 20 ಜನ ಸಿಎಂ ಸೂಟ್‍ಗೆ ಆರ್ಡರ್ ಮಾಡಿದ್ದಾರೆ: ಬಡಗಲಪೂರ ನಾಗೇಂದ್ರ

    ಗ್ರಾಮದ ಗುರುಶಾಂತಪ್ಪ ಎಂಬುವರ ಬಳಿ ಪಿಡಿಓ ಶ್ರೀನಿವಾಸ್ ಅವರು, 2ಸಾವಿರ ರೂಪಾಯಿ ಲಂಚ ಕೊಟ್ಟರೆ ಮಾತ್ರ, ತಮ್ಮ ಕೆಲಸ ಮಾಡಿಕೊಡುವುದಾಗಿ ಬೇಡಿಕೆ ಇಟ್ಟಿದ್ದರು. ಇಂದು ಪಿಡಿಓ ಸಾಹೇಬ್ರು ಲಂಚ ಸ್ವೀಕರಿಸುವ ವೇಳೆ  ಗ್ರಾಮಪಂಚಾಯ್ತಿ ಕಚೇರಿ ಮೇಲೆ ಎಸಿಬಿ ಎಸ್ ಐ ಪ್ರವೀಣ್ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ದಾಳಿನಡೆಸಿದ್ದು, ಶ್ರೀನಿವಾಸ್‍ನನ್ನು ವಶಕ್ಕೆ ಪಡೆದು ತನಿಖೆ ನಡೆಸುತಿದ್ದಾರೆ.

    ಭ್ರಷ್ಟಚಾರಕ್ಕೆ ಬ್ರೇಕ್ ಹಾಕಲು ಸರ್ಕಾರ ಹಲವು ತಂತ್ರಜ್ಞಾನಗಳನ್ನು ಜಾರಿಗೊಳಿಸಿದೆ. ಆದರೂ ಅಧಿಕಾರಿಗಳು ಮಾತ್ರ ಅವರ ಕೈ ಕಸುಬನ್ನು ಬಿಟ್ಟಿಲ್ಲ, ಇದಕ್ಕೆ ತಾಜಾ ಉಧಾಹರಣೆಈ ಘಟನೆಯಾಗಿದೆ.

  • ಲಾಕ್‍ಡೌನ್- ಅಂಗಡಿ ತೆರೆಯಲು ಲಂಚ ನೀಡದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    ಲಾಕ್‍ಡೌನ್- ಅಂಗಡಿ ತೆರೆಯಲು ಲಂಚ ನೀಡದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    – ಪೊಲೀಸರ ಮೂಲಕ ಹಲ್ಲೆ ಮಾಡಿಸಿದ ಪೌರಾಯುಕ್ತ
    – ಲಂಚ ನೀಡಿದವರಿಗೆ ಒಂದು ನ್ಯಾಯ, ನೀಡದಿರುವವರಿಗೆ ಒಂದು ನ್ಯಾಯ

    ಯಾದಗಿರಿ: ಅಂಗಡಿ ತೆರೆಯುವುದಕ್ಕೆ ಲಂಚ ನೀಡದ ವ್ಯಾಪಾರಿಯ ಮೇಲೆ ಪೊಲೀಸರ ಮೂಲಕ ಪೌರಾಯುಕ್ತ ಹಲ್ಲೆ ಮಾಡಿಸಿದ ಘಟನೆ ಜಿಲ್ಲೆಯ ಶಹಪುರದಲ್ಲಿ ನಡೆದಿದೆ. ಲಾಕ್‍ಡೌನ ಸಡಿಲಿಕೆ ಹಿನ್ನೆಲೆ ಶಹಪುರದ ಕಿರಾಣಿ ಅಂಗಡಿಗಳಿಗೆ ಪೌರಾಯುಕ್ತ ರಮೇಶ್ ಸಾವಿರಾರು ರೂಪಾಯಿ ಲಂಚದ ಬೇಡಿಕೆ ಇಡುತ್ತಿದ್ದಾರೆ.

    ಲಂಚ ನೀಡಿದವರಿಗೆ ವ್ಯಾಪಾರಕ್ಕೆ ಸಮಯ ಹೆಚ್ಚು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ರಮೇಶ್ ಓರ್ವ ಕಿರಾಣಿ ವ್ಯಾಪಾರಿಗೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಯ ಮಾತಿಗೆ ವ್ಯಾಪಾರಿ ಆಗುವುದಿಲ್ಲ ಎಂದು ಉತ್ತರಿಸಿದ್ದಾರೆ. ಇದರಿಂದಾಗಿ ಪೌರಾಯುಕ್ತ ರಮೇಶ್ ಪೊಲೀಸರಿಗೆ ಕುಮ್ಮಕ್ಕು ನೀಡಿ ನಡು ರಸ್ತೆಯಲ್ಲಿ ಮನ ಬಂದಂತೆ ವ್ಯಾಪಾರಿಗೆ ಥಳಿಸಿದ್ದಾರೆ. ಆಕ್ರೋಶಗೊಂಡ ವ್ಯಾಪಾರಿಗಳು ಶಹಪುರ ನಗರಸಭೆಗೆ ಮುತ್ತಿಗೆ ಹಾಕಿ, ಪೊಲೀಸರ ಮತ್ತು ನಗರಸಭೆ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

    ನಾಳೆಯಿಂದ ಎಲ್ಲ ರೀತಿಯ ವ್ಯಾಪಾರ ವಹಿವಾಟು ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ. ಸುದ್ದಿ ತಿಳಿದ ಸಹಾಯಕ ಆಯುಕ್ತ ಪ್ರಶಾಂತ್, ವ್ಯಾಪಾರಿಗಳ ಸಂಧಾನಕ್ಕೆ ಪ್ರಯತ್ನ ಪಟ್ಟರು. ಆದರೆ ಎಸಿ ಮಾತಿಗೆ ಬಗ್ಗದ ವ್ಯಾಪಾರಸ್ಥರು, ರಮೇಶ್ ಮತ್ತು ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

  • ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ತಹಶೀಲ್ದಾರ್

    ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ತಹಶೀಲ್ದಾರ್

    ಯಾದಗಿರಿ: ಜಿಲ್ಲೆಯ ಗುರುಮಿಠಕಲ್ ತಾಲೂಕಿನ ತಹಶೀಲ್ದಾರ್ ಸಂಗಮೇಶ್ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

    ದೊಡ್ಡಬನ್ನಪ್ಪ ಎಂಬವರ ಜಮೀನು ಮುಟಿಗೇಷನ್ ಮಾಡಿಕೊಡಲು ಸಂಗಮೇಶ್ ಹತ್ತು ಸಾವಿರ ರೂಪಾಯಿ ಲಂಚದ ಬೇಡಿಕೆಯನ್ನಿಟ್ಟಿದರು. ಇಂದು ಸಂಗಮೇಶ್ ತಮ್ಮ ಕಚೇರಿಯಲ್ಲಿ ಐದು ಸಾವಿರ ಮುಂಗಡ ಲಂಚ ಪಡೆಯುತ್ತಿರುವಾಗ ಎಸಿಬಿ ದಾಳಿ ನಡೆಸಿದೆ. ಎಸಿಬಿ ಎಸ್.ಪಿ. ಮಹೇಶ್ ಮೇಘಣ್ಣವರ್ ಮತ್ತು ಡಿವೈಎಸ್ ಪಿ ಉಮಾಶಂಕರ್, ಪಿಎಸ್ ಐ ಗುರುಪಾದ್ ಬಿರಾದಾರ್, ಸಿಬ್ಬಂದಿ ಅಮರ್, ವಿಜಯ್, ಗುತ್ತಪ್ಪ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

    ದೊಡ್ಡ ಬನ್ನಪ್ಪ ಎಂಬವರು ಬಹಳಷ್ಟು ದಿನಗಳಿಂದ ತಮ್ಮ ಜಮೀನು ರೂಪಾಂತರ ಪತ್ರಕ್ಕಾಗಿ ತಹಶೀಲ್ದಾರರ ಕಚೇರಿಗೆ ಅಲೆದಾಡುತ್ತಿದ್ದರು. ತಹಶೀಲ್ದಾರರ ಲಂಚದ ದುರಾಸೆಯಿಂದ ದೊಡ್ಡ ಬನ್ನಪ್ಪನವರ ಕೆಲಸವನ್ನು ಮುಂದೂಡುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಬೇಸತ್ತ ದೊಡ್ಡಬನ್ನಪ ಎಸಿಬಿಯಲ್ಲಿ ದೂರು ದಾಖಲು ಮಾಡಿದ್ದರು. ಈ ವಿಚಾರವಾಗಿ ತಹಶೀಲ್ದಾರರ ಸಂಗಮೇಶ್ ಮೇಲೆ ತೀವ್ರ ನಿಗಾಯಿಟ್ಟಿದ್ದ ಎಸಿಬಿ ತಂಡ, ವಿಶೇಷ ಕಾರ್ಯಾಚರಣೆ ಮೂಲಕ ತಹಶೀಲ್ದಾರರನ್ನು ರೆಡ್ ಹ್ಯಾಂಡಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.