ಕೆಲ ತಿಂಗಳ ಹಿಂದೆಯಷ್ಟೇ ಕೇಂದ್ರ ಸೆನ್ಸಾರ್ (Censor) ಮಂಡಳಿಯಲ್ಲಿ ಲಂಚ ತಗೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ತಮಿಳು ನಟ ವಿಶಾಲ್ ತಮ್ಮ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಮೂವರು ಅಧಿಕಾರಿಗಳು ಲಕ್ಷ ಲಕ್ಷ ರೂಪಾಯಿ ಲಂಚ ತೆಗೆದುಕೊಂಡಿದ್ದಾರೆ ಎಂದು ಸಾಕ್ಷಿ ಸಮೇತ ಹಿಡಿದುಕೊಟ್ಟಿದ್ದರು. ಸದ್ಯ ಅಧಿಕಾರಿಗಳ ವಿಚಾರಣೆ ನಡೆಯುತ್ತಿದೆ. ಈ ಘಟನೆ ಮಾಸುವ ಮುನ್ನವೇ ಕನ್ನಡದಲ್ಲೂ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ.
ಸಂವಿಧಾನ ಸಿನಿ ಕಂಬೈನ್ಸ್ ನಿರ್ಮಾಣದ ಅಡವಿ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ (Prashant Kumar) ಎನ್ನುವವರು ಹನ್ನೆರಡು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿನ ಸಬ್ ಟೈಟಲ್ ವಿಚಾರವಾಗಿ ಕ್ಯಾತೆ ತೆಗೆದಿದ್ದ ಅಧಿಕಾರಿ ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದ್ದು, ಚಿತ್ರ ನಿರ್ಮಾಪಕ ಟೈಗರ್ ನಾಗ್ (Tiger Naga), ಸಿಬಿಐ (CBI) ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು.
ಟೈಗರ್ ನಾಗ್ ಕೊಟ್ಟ ದೂರಿನನ್ವಯ ಸಿಬಿಐ ಅಧಿಕಾರಿಗಳು ನವೆಂಬರ್ 28ರ ಸಂಜೆ ಆರು ಗಂಟೆಗೆ ಅಧಿಕಾರಿ ಲಂಚ ಪಡೆಯುವ ಸಂದರ್ಭದಲ್ಲೇ ದಾಳಿ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆಯಷ್ಟೇ ಮಲ್ಲೇಶ್ವರಂ ಥಿಯೇಟರ್ ವೊಂದರಲ್ಲಿ ಅಧಿಕಾರಿ ಅಡವಿ ಸಿನಿಮಾವನ್ನು ವೀಕ್ಷಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ತಮಿಳಿನ ಖ್ಯಾತ ನಟ ವಿಶಾಲ್ (Vishal), ತಮ್ಮ ಸಿನಿಮಾಗೆ ಸೆನ್ಸಾರ್ (Censor) ಪ್ರಮಾಣ ಪತ್ರ ಪಡೆಯುವುದಕ್ಕಾಗಿ ಲಂಚ ನೀಡಬೇಕಾಯಿತು ಎನ್ನುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಮುಂಬೈನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್.ಸಿ)ನಲ್ಲಿ ಲಂಚ ಪಡೆದಿದ್ದರು ಎನ್ನುವ ವಿಚಾರವನ್ನು ಸಾಕ್ಷಿ ಸಮೇತ ತಿಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಎಫ್.ಐ.ಆರ್ (FIR) ದಾಖಲಾಗಿದೆ.
ವಿಶಾಲ್ ಅವರ ಭ್ರಷ್ಟಾಚಾರ ಆರೋಪಕ್ಕೆ ಕೂಡಲೇ ಸ್ಪಂದಿಸಿದ್ದ ಸರಕಾರ, ಅಧಿಕಾರಿಯೊಬ್ಬರನ್ನು ನೇಮಿಸಿ ತನಿಖೆಗೆ ಆದೇಶಿಸಿತ್ತು. ಇದೀಗ ಆರೋಪಿಗಳ ಸ್ಥಳ ಮತ್ತು ಮುಂಬೈನ ನಾಲ್ಕ ಕಡೆ ಸಿಬಿಐ ಶೋಧ ಕಾರ್ಯ ನಡೆಸಿದಿ ಎಫ್.ಐ.ಆರ್ ಅನ್ನು ದಾಖಲಿಸಿದೆ.
ಮೊನ್ನೆಯಷ್ಟೇ ವಿಶಾಲ್, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿ.ಬಿ.ಎಫ್.ಸಿ) ಮೇಲೆ ಗುರುತರ ಆರೋಪ ಮಾಡಿದ್ದರು. ತಾವು ತಮ್ಮ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಪಡೆಯುವುದಕ್ಕಾಗಿ 6.50 ಲಕ್ಷ ರೂಪಾಯಿಯನ್ನು ನೀಡಿರುವುದಾಗಿ ಅವರು ಹೇಳಿಕೊಂಡಿದ್ದರು. ಯಾರಿಗೆ ಎಷ್ಟೆಲ್ಲ ಹಣ ನೀಡಲಾಗಿದೆ ಎಂದು ವಿವರ ಸಮೇತ ವಿಡಿಯೋ ಮಾಡಿದ್ದರು. ಸೆನ್ಸಾರ್ ಮಂಡಳಿಯ ಅಧಿಕಾರಿಗಳಾದ ಎಂ.ರಾಜನ್ ಎನ್ನುವವರು ಮೂರು ಲಕ್ಷ ಮತ್ತು ಜೀಜಾ ರಾಮದಾಸ್ ಎನ್ನುವವರಿಗೆ 3.5 ಲಕ್ಷ ರೂಪಾಯಿಯನ್ನು ಬ್ಯಾಂಕ್ ಖಾತೆಗೆ ಹಾಕಿರುವ ವಿವರವನ್ನು ವಿಶಾಲ್ ಹೇಳಿದ್ದರು.
ಸಾಕ್ಷಿ ಸಮೇತವಾಗಿ ವಿಶಾಲ್ ವಿಡಿಯೋ ಮಾಡಿ ಅದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳಿಗೆ ಟ್ಯಾಗ್ ಮಾಡಿದ್ದರು. ಇದರ ಗಂಭೀರತೆಯನ್ನು ಅರಿತ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೂಡಲೇ ತನಿಖೆಗೆ ಆದೇಶ ಮಾಡಿದೆ. ಸಿ.ಬಿ.ಎಫ್.ಸಿಯ ಹಿರಿಯ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ, ತನಿಖೆಗೆ ಆದೇಶ ಮಾಡಿದೆ. ಈ ಕುರಿತು ಇದೊಂದು ದುರಾದೃಷ್ಟ ಸಂಗತಿ ಎಂದು ವಿಷಾದ ವ್ಯಕ್ತ ಪಡಿಸಿತ್ತು.
ಲಂಚಮುಕ್ತ ಆಡಳಿತ ಕೊಡಬೇಕು ಎನ್ನುವುದು ನಮ್ಮ ಗುರಿ. ಆದರೆ, ಇಂತಹ ಬೆಳವಣಿಗೆ ನಡೆದಿದ್ದು ನೋವು ತಂದಿದೆ. ವಿಶಾಲ್ ಅವರು ವಿಡಿಯೋ ಹಾಕಿದ 24 ಗಂಟೆಯೊಳಗೆ ತನಿಖೆಗೆ ಆದೇಶ ಮಾಡಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಸಚಿವಾಲಯ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ. ವಿಶಾಲ್ ಅವರಿಗೆ ಟ್ಯಾಗ್ ಮಾಡಲಾಗಿತ್ತು. ಇದೀಗ ಹಣ ಪಡೆದ ಆರೋಪ ಹೊತ್ತಿರುವ ಅಧಿಕಾರಿಗಳ ಮೇಲೆ ಎಫ್.ಐ.ಆರ್ ದಾಖಲಾಗಿದೆ.
ನಿನ್ನೆಯಷ್ಟೇ ತಮಿಳಿನ ಖ್ಯಾತ ನಟ ವಿಶಾಲ್, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿ.ಬಿ.ಎಫ್.ಸಿ) ಮೇಲೆ ಗುರುತರ ಆರೋಪ ಮಾಡಿದ್ದರು. ತಾವು ತಮ್ಮ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಪಡೆಯುವುದಕ್ಕಾಗಿ 6.50 ಲಕ್ಷ ರೂಪಾಯಿಯನ್ನು ನೀಡಿರುವುದಾಗಿ ಅವರು ಹೇಳಿಕೊಂಡಿದ್ದರು. ಯಾರಿಗೆ ಎಷ್ಟೆಲ್ಲ ಹಣ ನೀಡಲಾಗಿದೆ ಎಂದು ವಿವರ ಸಮೇತ ವಿಡಿಯೋ ಮಾಡಿದ್ದರು. ಸೆನ್ಸಾರ್ ಮಂಡಳಿಯ ಅಧಿಕಾರಿಗಳಾದ ಎಂ.ರಾಜನ್ ಎನ್ನುವವರು ಮೂರು ಲಕ್ಷ ಮತ್ತು ಜೀಜಾ ರಾಮದಾಸ್ ಎನ್ನುವವರಿಗೆ 3.5 ಲಕ್ಷ ರೂಪಾಯಿಯನ್ನು ಬ್ಯಾಂಕ್ ಖಾತೆಗೆ ಹಾಕಿರುವ ವಿವರವನ್ನು ವಿಶಾಲ್ ಹೇಳಿದ್ದರು.
ಸಾಕ್ಷಿ ಸಮೇತವಾಗಿ ವಿಶಾಲ್ ವಿಡಿಯೋ ಮಾಡಿ ಅದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳಿಗೆ ಟ್ಯಾಗ್ ಮಾಡಿದ್ದರು. ಇದರ ಗಂಭೀರತೆಯನ್ನು ಅರಿತ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೂಡಲೇ ತನಿಖೆಗೆ ಆದೇಶ ಮಾಡಿದೆ. ಸಿ.ಬಿ.ಎಫ್.ಸಿಯ ಹಿರಿಯ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ, ತನಿಖೆಗೆ ಆದೇಶ ಮಾಡಿದೆ. ಈ ಕುರಿತು ಇದೊಂದು ದುರಾದೃಷ್ಟ ಸಂಗತಿ ಎಂದು ವಿಷಾದ ವ್ಯಕ್ತ ಪಡಿಸಿದೆ.
#Corruption being shown on silver screen is fine. But not in real life. Cant digest. Especially in govt offices. And even worse happening in #CBFC Mumbai office. Had to pay 6.5 lacs for my film #MarkAntonyHindi version. 2 transactions. 3 Lakhs for screening and 3.5 Lakhs for… pic.twitter.com/3pc2RzKF6l
ಲಂಚಮುಕ್ತ ಆಡಳಿತ ಕೊಡಬೇಕು ಎನ್ನುವುದು ನಮ್ಮ ಗುರಿ. ಆದರೆ, ಇಂತಹ ಬೆಳವಣಿಗೆ ನಡೆದಿದ್ದು ನೋವು ತಂದಿದೆ. ವಿಶಾಲ್ ಅವರು ವಿಡಿಯೋ ಹಾಕಿದ 24 ಗಂಟೆಯೊಳಗೆ ತನಿಖೆಗೆ ಆದೇಶ ಮಾಡಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಸಚಿವಾಲಯ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ. ವಿಶಾಲ್ ಅವರಿಗೆ ಟ್ಯಾಗ್ ಮಾಡಲಾಗಿದೆ.
ಏನಿದು ಪ್ರಕರಣ?
ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್‍ಸಿ) (Censor Board) ಅಥವಾ ಸೆನ್ಸಾರ್ ಮಂಡಳಿಗಳ ಮೇಲೆ ಒಂದಿಲ್ಲೊಂದು ಆರೋಪಗಳು ಬರುತ್ತಲೇ ಇವೆ. ಇದೀಗ ತಮಿಳಿನ (Tamil) ಹೆಸರಾಂತ ನಟ ವಿಶಾಲ್ (Vishal) ಗುರುತರ ಆರೋಪವೊಂದನ್ನು ಮಾಡಿದ್ದರು. ತಮ್ಮ ತಮಿಳು ಚಿತ್ರದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ನೀಡಲು ಮುಂಬೈ ಸಿಬಿಎಫ್‍ಸಿ ಅಧಿಕಾರಿಗಳು ಲಂಚ ಕೇಳಿದ್ದರು ಎಂದು ಆರೋಪ ಮಾಡಿದ್ದರು.
The issue of corruption in CBFC brought forth by actor @VishalKOfficial is extremely unfortunate.
The Government has zero tolerance for corruption and strictest action will be taken against anyone found involved. A senior officer from the Ministry of Information & Broadcasting…
— Ministry of Information and Broadcasting (@MIB_India) September 29, 2023
ತಮಿಳು ನಟನೆಯ ಮಾರ್ಕ್ ಆಂಟೋನಿ (Mark Antony)ರಿಲೀಸ್ ಆಗಿ, ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ಪಡೆಯಲು ಚಿತ್ರತಂಡ ಮುಂದಾಗಿದೆ. ಈ ಸಿನಿಮಾಗೆ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಬರೋಬ್ಬರಿ 6.50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ವಿಶಾಲ್ ಹೇಳಿದ್ದರು. ಈ ಕುರಿತು ಸಾಕ್ಷಿ ಸಮೇತ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಹಿಂದಿಯಲ್ಲಿ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆವು. ತಾಂತ್ರಿಕ ಕಾರಣಗಳಿಂದಾಗಿ ಹಿಂದಿಯಲ್ಲಿ ಚಿತ್ರವನ್ನು ರೆಡಿ ಮಾಡಲು ಕಷ್ಟವಾಯಿತು. ಬಿಡುಗಡೆ ದಿನಾಂಕ ತೀರಾ ಹತ್ತಿರವಿದ್ದ ಕಾರಣದಿಂದಾಗಿ ಬೇಗ ಪ್ರಮಾಣ ಪತ್ರ ನೀಡುವಂತೆ ವಿನಂತಿಸಿದೆವು. ಆದರೆ, ಅಧಿಕಾರಿಗಳು ಬೇಗ ಪ್ರಮಾಣ ಪತ್ರ ಬೇಕು ಅಂದರೆ ಲಂಚ ನೀಡಿ ಎಂದರು ಎಂದು ವಿಶಾಲ್ ಮಾತನಾಡಿದ್ದರು.
ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಚಿತ್ರತಂಡವು ಅವರು ಕೇಳಿದ ಹಣವನ್ನು ಲಂಚದ ರೂಪದಲ್ಲಿ ನೀಡಿರುವುದಾಗಿಯೂ ವಿಶಾಲ್ ಹೇಳಿಕೊಂಡಿದ್ದರು. ತಾವು ಹಣ ಕಳುಹಿಸಿದ ಬ್ಯಾಂಕ್ ಖಾತೆಯ ವಿವರವನ್ನೂ ಅವರು ಹಂಚಿಕೊಂಡಿದ್ದರು. ನಿಮಗೆ ಯಾವುದೇ ದಾರಿ ಕಾಣದೇ ಹಣವನ್ನು ಕೊಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದರು.
ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್‍ಸಿ) (Censor Board) ಅಥವಾ ಸೆನ್ಸಾರ್ ಮಂಡಳಿಗಳ ಮೇಲೆ ಒಂದಿಲ್ಲೊಂದು ಆರೋಪಗಳು ಬರುತ್ತಲೇ ಇವೆ. ಇದೀಗ ತಮಿಳಿನ (Tamil) ಹೆಸರಾಂತ ನಟ ವಿಶಾಲ್ (Vishal) ಗುರುತರ ಆರೋಪವೊಂದನ್ನು ಮಾಡಿದ್ದಾರೆ. ತಮ್ಮ ತಮಿಳು ಚಿತ್ರದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ನೀಡಲು ಮುಂಬೈ ಸಿಬಿಎಫ್‍ಸಿ ಅಧಿಕಾರಿಗಳು ಲಂಚ ಕೇಳಿದ್ದರು ಎಂದು ಆರೋಪ ಮಾಡಿದ್ದಾರೆ.
ತಮಿಳು ನಟನೆಯ ಮಾರ್ಕ್ ಆಂಟೋನಿ (Mark Antony)ರಿಲೀಸ್ ಆಗಿ, ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಕೆ ಪಡೆದುಕೊಂಡಿದೆ. ಈ ಸಿನಿಮಾದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ಪಡೆಯಲು ಚಿತ್ರತಂಡ ಮುಂದಾಗಿದೆ. ಈ ಸಿನಿಮಾಗೆ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಬರೋಬ್ಬರಿ 6.50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ವಿಶಾಲ್ ಹೇಳಿದ್ದಾರೆ. ಈ ಕುರಿತು ಸಾಕ್ಷಿ ಸಮೇತ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಂದಿಯಲ್ಲಿ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆವು. ತಾಂತ್ರಿಕ ಕಾರಣಗಳಿಂದಾಗಿ ಹಿಂದಿಯಲ್ಲಿ ಚಿತ್ರವನ್ನು ರೆಡಿ ಮಾಡಲು ಕಷ್ಟವಾಯಿತು. ಬಿಡುಗಡೆ ದಿನಾಂಕ ತೀರಾ ಹತ್ತಿರವಿದ್ದ ಕಾರಣದಿಂದಾಗಿ ಬೇಗ ಪ್ರಮಾಣ ಪತ್ರ ನೀಡುವಂತೆ ವಿನಂತಿಸಿದೆವು. ಆದರೆ, ಅಧಿಕಾರಿಗಳು ಬೇಗ ಪ್ರಮಾಣ ಪತ್ರ ಬೇಕು ಅಂದರೆ ಲಂಚ ನೀಡಿ ಎಂದರು ಎಂದು ವಿಶಾಲ್ ಮಾತನಾಡಿದ್ದಾರೆ.
#Corruption being shown on silver screen is fine. But not in real life. Cant digest. Especially in govt offices. And even worse happening in #CBFC Mumbai office. Had to pay 6.5 lacs for my film #MarkAntonyHindi version. 2 transactions. 3 Lakhs for screening and 3.5 Lakhs for… pic.twitter.com/3pc2RzKF6l
ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಚಿತ್ರತಂಡವು ಅವರು ಕೇಳಿದ ಹಣವನ್ನು ಲಂಚದ ರೂಪದಲ್ಲಿ ನೀಡಿರುವುದಾಗಿಯೂ ವಿಶಾಲ್ ಹೇಳಿಕೊಂಡಿದ್ದಾರೆ. ತಾವು ಹಣ ಕಳುಹಿಸಿದ ಬ್ಯಾಂಕ್ ಖಾತೆಯ ವಿವರವನ್ನೂ ಅವರು ಹಂಚಿಕೊಂಡಿದ್ದಾರೆ. ನಿಮಗೆ ಯಾವುದೇ ದಾರಿ ಕಾಣದೇ ಹಣವನ್ನು ಕೊಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ವಿಶಾಲ್ ಆಡಿದ ಮಾತುಗಳಿಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಲಂಚ ತೆಗೆದುಕೊಳ್ಳುವುದು ಎಷ್ಟು ಅಪರಾಧವೋ, ಕೊಡುವುದು ಕೂಡ ಅಷ್ಟೇ ಅಪರಾಧ. ಹಾಗಾಗಿ ಕೊಟ್ಟಿರುವ ಚಿತ್ರತಂಡಕ್ಕೆ ಮತ್ತು ತೆಗೆದುಕೊಂಡಿರುವ ಅಧಿಕಾರಿಗಳಿಗೆ ಯಾವ ರೀತಿಯಲ್ಲಿ ಶಿಕ್ಷೆ ಕಾದಿದೆ ನೋಡಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಮಂಡ್ಯ: 40 ಸಾವಿರ ರೂ. ಲಂಚ (Bribery) ಪಡೆಯುತ್ತಿದ್ದ ವೇಳೆ ತಹಶೀಲ್ದಾರ್ (Tehsildar) ಒಬ್ಬರು ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರುವ ಘಟನೆ ಮಂಡ್ಯ (Mandya) ಜಿಲ್ಲೆಯಲ್ಲಿ ನಡೆದಿದೆ. ಪಾಂಡವಪುರ ತಹಶೀಲ್ದಾರ್ ಸೌಮ್ಯಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಿಎ ವರ್ಗಾವಣೆ ವಿಚಾರಕ್ಕೆ ಸೌಮ್ಯಾ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ವಿಎ ಮರಿಸ್ವಾಮಿ ಅವರನ್ನು ಗುಮ್ಮನಹಳ್ಳಿಯಿಂದ ದೊಡ್ಡಮ್ಮನಹಳ್ಳಿಗೆ ವರ್ಗಾವಣೆ ಮಾಡಲು ತಹಶೀಲ್ದಾರ್ ಸೌಮ್ಯಾ ಲಂಚ ಕೇಳಿದ್ದರು. ಈ ಬಗ್ಗೆ ಮರಿಸ್ವಾಮಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದನ್ನೂ ಓದಿ: ಕೋವಿನ್ ಪೋರ್ಟಲ್ ಡೇಟಾ ಲೀಕ್ ಪ್ರಕರಣ – ಅಪ್ರಾಪ್ತ ಸೇರಿ ಇಬ್ಬರ ಬಂಧನ
ಮಡಿಕೇರಿ: 49 ಕೆವಿ ಸಾಮರ್ಥ್ಯದ ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ರೂ. ಲಂಚ (Bribery) ಪಡೆಯುತ್ತಿದ್ದ ವೇಳೆ ಸೆಸ್ಕ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರನ್ನು ಲೋಕಾಯುಕ್ತ ಪೊಲೀಸರು (Lokayukta Police) ಗುರುವಾರ ರಾತ್ರಿ ಬಂಧಿಸಿದ್ದಾರೆ.
ಪ್ರತಾಪ್ ಎಂಬುವವರು ಕೊಡಗಿನ ಕುಶಾಲನಗರದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಕೇಂದ್ರ ತೆರೆಯಲು ಅರ್ಜಿ ಸಲ್ಲಿಸಿದ್ದರು. 49 ಕೆವಿ ಸಾಮರ್ಥ್ಯದ ವಿದ್ಯುತ್ ಸಂಪರ್ಕ ನೀಡಲು ಅಶೋಕ್ 5 ಲಕ್ಷ ರೂ. ಲಂಚ ಕೇಳಿದ್ದರು. ಇದರ ಮೊದಲ ಕಂತಿನ ಹಣವಾಗಿ 2 ಲಕ್ಷ ರೂ. ಪಡೆಯುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಮೈಸೂರು ವಿಭಾಗದ ಎಸ್‌ಪಿ ಸುರೇಶ್ ಬಾಬು ತಿಳಿಸಿದರು. ಇದನ್ನೂ ಓದಿ: ಸಿದ್ದು ಪ್ರಮಾಣವಚನ ವೇಳೆ ವೇದಿಕೆಯಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿ – ತನಿಖೆಗೆ ರಾಜ್ಯಪಾಲರ ಪತ್ರ
ತುಮಕೂರು: ಹೈವೆಯಲ್ಲಿ ಕುರಿ ಸಾಗಿಸುತ್ತಿದ್ದ ಕಂಟೇನರ್ ವಾಹನವನ್ನು ಪೊಲೀಸರು (Police) ಅಡ್ಡಗಟ್ಟಿ ಚಾಲಕನಿಂದ ಹಣ ವಸೂಲಿ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ತುಮಕೂರು (Tumakuru) ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಹೈವೆಯಲ್ಲಿ ಹೋಗುತಿದ್ದ ಕಂಟೇನರ್ ತಡೆದು ಹಣ ಪೀಕುತಿದ್ದ ದೃಶ್ಯವನ್ನು ಸಾರ್ವಜನಿಕರು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಪೊಲೀಸರು ಲಂಚ (Bribery) ಪಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಶಾಲೆಯಲ್ಲಿ ಅಬಯಾ ಧರಿಸಬಾರದು ಎಂದಿದ್ದಕ್ಕೆ ಪ್ರಿನ್ಸಿಪಾಲ್‌ಗೆ ಭಯೋತ್ಪಾದಕರಿಂದ ಬೆದರಿಕೆ
ಕಳ್ಳಂಬೆಳ್ಳ ಠಾಣೆಯ ಎಎಸ್‌ಐ ಚಿದಾನಂದಸ್ವಾಮಿ, ಚಿಕ್ಕಹನುಮಯ್ಯ ಹಣ ವಸೂಲಿ ಮಾಡಿದ ಪೊಲೀಸರು. ಸಾರ್ವಜನಿಕರು ವೀಡಿಯೋ ಸಹಿತ ರೆಡ್ ಹ್ಯಾಂಡ್ ಆಗಿ ಹಿಡಿದಾಗ ನಮ್ಮಿಂದ ತಪ್ಪಾಗಿದೆ ಬಿಟ್ ಬಿಡಿ ಅಣ್ಣಾ ಎಂದು ಕ್ಷಮೆ ಕೇಳಿದ್ದಾರೆ.
ಬೀದರ್: ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಲಂಚಕ್ಕೆ (Bribery) ಬೇಡಿಕೆಯಿಟ್ಟ ತಾಂತ್ರಿಕ ಸಹಾಯಕನನ್ನು (Technical Assistant) ಕೆಲಸದಿಂದ ವಜಾ ಮಾಡಲಾಗಿದೆ.
ಬಸವಕಲ್ಯಾಣ ತಾ.ಪಂ. ತಾಂತ್ರಿಕ ಸಹಾಯಕ ಸೂರ್ಯಕಾಂತ್ ಪಾಟೀಲ್‌ನನ್ನು ಕೆಲಸದಿಂದ ವಜಾಗೊಳಿಸಿ ಬೀದರ್ (Bidar) ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಎಂ ಆದೇಶ ನೀಡಿದ್ದಾರೆ.
ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಎತ್ತುಗಳ ಸಮೇತ ತಾ.ಪಂ.ಗೆ ಬಂದು ರೈತರೊಬ್ಬರು ಆರೋಪ ಮಾಡಿದ್ದರು. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರವಾಗಿರುವ ಹಿನ್ನೆಲೆ ಅಧಿಕಾರಿಗಳಿಂದ ವರದಿ ಪರಿಶೀಲನೆ ಮಾಡಲಾಗಿತ್ತು. ರೈತನ ಬಿಲ್ ಪಾವತಿ ಮಾಡದೆ ಮೇಲ್ನೋಟಕ್ಕೆ ಕರ್ತವ್ಯ ನಿರ್ಲಕ್ಷ್ಯ ತೊರಿದ್ದು ಕಂಡುಬಂದಿದೆ. ಹೀಗಾಗೀ ತಾಂತ್ರಿಕ ಸಹಾಯಕ ಸೂರ್ಯಕಾಂತ್ ಪಾಟೀಲ್‌ನನ್ನು ಸೇವೆಯಿಂದ ವಜಾ ಮಾಡಲಾಗದೆ ಎಂದು ಜಿ.ಪಂ. ಸಿಇಒ ಆದೇಶಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ – ಜಿಲ್ಲಾ ಪ್ರವಾಸ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ವಾಪಸ್
ನರೇಗಾ ಕಾಮಗಾರಿ ಬಿಲ್ ಪಾವತಿ ಮಾಡಲು ರೈತನ ಬಳಿ ಲಂಚ ಕೇಳಿದ್ದ ತಾಲೂಕು ಪಂಚಾಯತ್ ಅಧಿಕಾರಿಗೆ ಲಂಚ ಕೊಡಲು ಹಣವಿಲ್ಲದೆ ತನ್ನ 2 ಎತ್ತುಗಳನ್ನು ನೀಡಲು ರೈತ ಮುಂದಾಗಿದ್ದ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ ರೈತ ಪ್ರಶಾಂತ್ ಬಿರಾದಾರ ಲಂಚ ರೂಪದಲ್ಲಿ ತನ್ನ 2 ಎತ್ತುಗಳನ್ನು ಕೊಡಲು ತಾ.ಪಂ. ಕಚೇರಿಗೆ ಬಂದಿದ್ದ. ಎತ್ತುಗಳ ಸಮೇತ ಬಂದಿದ್ದ ರೈತನನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದರು. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್
ದಕ್ಷಿಣದ ಹೆಸರಾಂತ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಅನೇಕ ಶಾಕಿಂಗ್ ಸುದ್ದಿಗಳನ್ನು ಅಭಿಮಾನಿಗಳಿಗೆ ಕೊಡುತ್ತಿದ್ದಾರೆ. ಅದರಲ್ಲೂ ಕಾಫಿ ವಿತ್ ಕರಣ್ ಶೋನಲ್ಲಿ ಅವರು ಸಾಕಷ್ಟು ಖಾಸಗಿ ಸಂಗತಿಗಳನ್ನು ಹಂಚಿಕೊಂಡಿದ್ದು, ಬಹುತೇಕ ವಿಷಯಗಳು ವಿವಾದಕ್ಕೆ ಕಾರಣವಾಗಿವೆ. ಅದರಲ್ಲೂ ತಮ್ಮ ಡಿವೋರ್ಸ್ ಕುರಿತು ಈ ನಟಿ ಮುಚ್ಚುಮರೆಯಿಲ್ಲದೇ ಎಲ್ಲವನ್ನೂ ಹಂಚಿಕೊಂಡು ಅಚ್ಚರಿಗೆ ಕಾರಣವಾಗಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಡಿವೋರ್ಸ್ ಕುರಿತಾಗಿ ಹಲವು ಅಚ್ಚರಿಯ ವಿಷಯಗಳನ್ನು ಶೋನಲ್ಲಿ ಹಂಚಿಕೊಂಡಿದ್ದ ಸಮಂತಾ, ಇದೀಗ ನಂಬರ್ 1 ತಾರೆಯಾಗಲು ಖಾಸಗಿ ಕಂಪೆನಿಯೊಂದಕ್ಕೆ ಲಂಚ ಕೊಟ್ಟಿರುವ ವಿಷಯವನ್ನು ಬಾಯ್ಬಿಟ್ಟಿದ್ದಾರೆ. ನಾನು ನಂಬರ್ 1 ಆಗಲು ಅವರಿಗೆ ದುಡ್ಡು ಕೊಡಬೇಕಾಯಿತು. ದುಡ್ಡು ಕೊಟ್ಟು ನಂಬರ್ 1 ತಾರೆಯಾದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್
ಸಮಂತಾ ಈ ಕುರಿತು ಮಾತನಾಡುತ್ತಿದ್ದಂತೆಯೇ ನಂಬರ್ 1 ತಾರೆಯರ ನಿಜ ಬಣ್ಣ ಒಂದೊಂದೇ ಬಯಲಾಗುತ್ತಿವೆ. ನಂಬರ್ ಸ್ಥಾನಕ್ಕೆ ಲಂಚ ಬೇರೆ ಕೊಡಬೇಕು ಎನ್ನುವ ಚರ್ಚೆ ಕೂಡ ಸಿನಿಮಾ ರಂಗದಲ್ಲಿ ಶುರುವಾಗಿದೆ. ಅಲ್ಲದೇ, ಸಮಂತಾ ಪ್ರಾಮಾಣಿಕವಾಗಿ ಈ ಕುರಿತು ಒಪ್ಪಿಕೊಂಡಿದ್ದಕ್ಕೆ ಮೆಚ್ಚುಗೆಯನ್ನೂ ಸೂಚಿಸಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ನಾಗೇಂದ್ರ ಬೇಗೂರಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದನು. ಬಿಬಿಎಂಪಿ ಖಾತೆ ಮಾಡಿಸಲು ವ್ಯಕ್ತಿಯೊಬ್ಬರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಈ ಹಿನ್ನೆಲೆ ವ್ಯಕ್ತಿ ಎಸಿಬಿಗೆ ದೂರು ನೀಡಿದ್ದರು.
20 ಸಾವಿರ ಲಂಚ ಪಡೆಯುವಾಗ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿತ್ತು. ಆರೋಪ ಸಾಬೀತಾದ ಹಿನ್ನಲೆ ನ್ಯಾಯಾಲಯವು ನಾಗೇಂದ್ರನಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ಪಾಕಿಸ್ತಾನದ ನೂತನ ಪ್ರಧಾನಿಗೆ ಮೋದಿ ಅಭಿನಂದನೆ