Tag: Bribe Raichuru

  • ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಕಾಸ್ ಕೊಟ್ರೆ ಮಾತ್ರ ಚಿಕಿತ್ಸೆ – ಸಿಬ್ಬಂದಿ ಲಂಚಾವತಾರ ಬಯಲು

    ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಕಾಸ್ ಕೊಟ್ರೆ ಮಾತ್ರ ಚಿಕಿತ್ಸೆ – ಸಿಬ್ಬಂದಿ ಲಂಚಾವತಾರ ಬಯಲು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ (Hospital) ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಅನ್ನೋದೆ ಕನಸಿನ ಮಾತಾಗಿದೆ. ಪ್ರತಿಯೊಂದಕ್ಕೂ ಇಲ್ಲಿನ ಸಿಬ್ಬಂದಿ ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಸಹಜ ಹೆರಿಗೆಗೂ ಇಲ್ಲಿನ ಸಿಬ್ಬಂದಿ 15 ಸಾವಿರ ರೂಪಾಯಿ ಹಣದ ಡಿಮ್ಯಾಂಡ್ ಮಾಡಿದ್ದಾರೆ. ಇದರಿಂದ ಬೇಸತ್ತ ಗರ್ಭಿಣಿ ಕಡೆಯವರು ನರ್ಸ್ ಲಂಚಾವತಾರವನ್ನು (Bribe) ಬಯಲಿಗೆಳೆದಿದ್ದಾರೆ.

    ತಾಲೂಕು ಆಸ್ಪತ್ರೆ ನರ್ಸ್‍ಗಳಾದ ಅಂಜಲಮ್ಮ, ಗೀತಾ ಐದು ಸಾವಿರ ರೂಪಾಯಿ ಲಂಚ ಪಡೆಯುವ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಧನದಾಹ ಬಯಲಾಗಿದೆ. ಸಹಜ ಹೆರಿಗೆಗೆ ಒಂದು ರೇಟ್ ಮತ್ತು ಸಿಜೇರಿಯನ್ ಹೆರಿಗೆಗೆ ಒಂದು ರೇಟ್‍ನ್ನು ನಿಗದಿ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ರೋಗಿಗಳು ಮೊದಲು ದುಡ್ಡು ಕೊಟ್ಟರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗಳು, ಸ್ಕ್ಯಾನಿಂಗ್ ಸೇರಿ ಪ್ರತಿಯೊಂದಕ್ಕೂ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಇದನ್ನೂ ಓದಿ: ವಿಚ್ಛೇದನ ಪಡೆಯಲು ಪತ್ನಿಗೆ HIV ಸೋಂಕಿತ ರಕ್ತದ ಇಂಜೆಕ್ಷನ್ ಕೊಡಿಸಿದ ಭೂಪ

    ಹಣ ವಸೂಲಿಯಲ್ಲಿ ವೈದ್ಯರ ಪಾತ್ರವೂ ಇರುವುದರಿಂದ ಗ್ರಾಮೀಣ ಭಾಗದಿಂದ ಬರುವ ಬಡರೋಗಿಗಳು ರೋಸಿ ಹೋಗಿದ್ದಾರೆ. ಹೆರಿಗೆ ಮಾಡಲು ಗರ್ಭಿಣಿ ಕಡೆಯವರನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದು 5 ಸಾವಿರ ರೂಪಾಯಿ ಹಣ ಪಡೆಯುವ ನರ್ಸ್ ಅಂಜಲಮ್ಮ ಚಿಕಿತ್ಸೆ ಬಳಿಕ ಉಳಿದ ಹಣ ಕೊಡುವಂತೆ ತಾಕೀತು ಮಾಡಿರುವ ದೃಶ್ಯಾವಳಿ ಈಗ ವೈರಲ್ ಆಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಪಡೆಯುತ್ತಿರುವ ನರ್ಸ್‍ಗಳು ಹಾಗೂ ಇದರಲ್ಲಿ ಭಾಗಿಯಾಗಿರುವ ವೈದ್ಯರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಾಲಕಿಯನ್ನ ಮನೆಗೆ ಕರೆಸಿ ಊಟ ಹಾಕಿ, ಮಗನಿಂದಲೇ ರೇಪ್ ಮಾಡಿಸಿದ್ಳು

    Live Tv
    [brid partner=56869869 player=32851 video=960834 autoplay=true]