Tag: brett lee

  • ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ: ಪ್ರಧಾನಿ ಪತ್ರ ಸ್ವೀಕರಿಸಿದ ಬ್ರೆಟ್ ಲೀ

    ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ: ಪ್ರಧಾನಿ ಪತ್ರ ಸ್ವೀಕರಿಸಿದ ಬ್ರೆಟ್ ಲೀ

    ಕ್ಯಾನ್‍ಬೆರಾ: ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ.

    ಪ್ರಧಾನಿ ಮೋದಿ ಭಾರತದ 73ನೇ ಗಣರಾಜ್ಯೋತ್ಸವದ ಅಂಗವಾಗಿ ಬ್ರೆಟ್ ಲೀ ಅವರಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಬ್ರೆಟ್ ಲೀ ಸ್ವೀಕರಿಸಿದ್ದು, ಪತ್ರದ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ನಲ್ಲಿ ಬ್ರೆಟ್ ಲೀ, ನಾನು ಭಾರತವನ್ನು ಮತ್ತು ಅಲ್ಲಿನ ಜನರನ್ನು ಎಷ್ಟು ಪ್ರೀತಿಸುತ್ತೇನೆ. ಈ ಸುಂದರವಾದ ದೇಶವನ್ನು ನಾನು ಆನಂದಿಸಿದ್ದೇನೆ. ಭಾರತ ಮತ್ತು ನನ್ನ ಸಂಬಂಧ ಇಷ್ಟು ವರ್ಷ ಕಳೆಯಲು ಸಾಧ್ಯವಾಗಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಾನು ಭಾರತವನ್ನು ಇಷ್ಟಪಡುತ್ತೇನೆ ಎಂಬುದು ರಹಸ್ಯವಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

    ಭಾರತದ 73ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ಪ್ರಪಂಚದಾದ್ಯಂತ ಪ್ರಮುಖ ಕ್ರಿಕೆಟ್ ಆಟಗಾರರಾದ ಮ್ಯಾಥ್ಯೂ ಹೇಡನ್, ಜಾಂಟಿ ರೋಡ್ಸ್, ಕ್ರಿಸ್ ಗೇಲ್ ಮತ್ತು ಕೆವಿನ್ ಪೀಟರ್ಸನ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಅವರೆಲ್ಲ ಸ್ವೀಕರಿಸಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ.

    ಈ ದಿಗ್ಗಜರ ಪೈಕಿ, ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಕೂಡ ಮೋದಿ ಅವರಿಂದ ಅಭಿನಂದನಾ ಪತ್ರವನ್ನು ಸ್ವೀಕರಿಸಿದ್ದರು. ಈ ಪತ್ರ ಕಳಿಸಿದ್ದಕ್ಕೆ ಮೋದಿ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಅಣ್ಣಂದಿರ ಕೈ ಮೇಲೆ ಪಾದವಿಟ್ಟು ಮದುವೆ ಮಂಟಪಕ್ಕೆ ನಡೆದುಕೊಂಡು ಬಂದ ವಧು!

    ಬ್ರೆಟ್ ಲೀ ಅವರಿಗೆ ಬರೆದ ಪತ್ರದಲ್ಲಿ ಮೋದಿ ಅವರು, ಭಾರತದ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತವು ಈ ವರ್ಷ ಬ್ರಿಟಿಷ್ ಆಳ್ವಿಕೆಯಿಂದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ ಎಂದು ತಿಳಿಸಿದ್ದು, ನಮ್ಮ ರಾಷ್ಟ್ರದ ಬಗೆಗಿನ ನಿಮ್ಮ ಪ್ರೀತಿಗಾಗಿ ಕೃತಜ್ಞತಾ ಭಾವದಿಂದ ಈ ಪತ್ರವನ್ನು ಬರೆಯಲು ನಿರ್ಧರಿಸಿದ್ದೇನೆ ಎಂದು ಬರೆದಿದ್ದಾರೆ.

  • ಆ ಇಬ್ಬರನ್ನು ಎದುರಿಸಲು ತುಂಬ ಕಷ್ಟ – ಡೆಡ್ಲಿ ಬೌಲರ್ಸ್ ಬಗ್ಗೆ ಹಿಟ್‍ಮ್ಯಾನ್ ಮಾತು

    ಆ ಇಬ್ಬರನ್ನು ಎದುರಿಸಲು ತುಂಬ ಕಷ್ಟ – ಡೆಡ್ಲಿ ಬೌಲರ್ಸ್ ಬಗ್ಗೆ ಹಿಟ್‍ಮ್ಯಾನ್ ಮಾತು

    ಮುಂಬೈ: ಆ ಇಬ್ಬರು ಡೆಡ್ಲಿ ಬೌಲರ್ ಗಳನ್ನು ಎದುರಿಸಲು ತುಂಬ ಕಷ್ಟ ಎಂದು ಹೇಳುವ ಮೂಲಕ ಭಾರತದ ಕ್ರಿಕೆಟ್ ತಂಡ ಉಪನಾಯಕ ರೋಹಿತ್ ಶರ್ಮಾ ಅವರು ತಮ್ಮ ಜೀವನದ ಅಕ್ರಮಣಾಕಾರಿ ಬೌಲರ್ ಗಳ ಬಗ್ಗೆ ಮಾತನಾಡಿದ್ದಾರೆ.

    ಕೊರೊನಾ ಲಾಕ್‍ಡೌನ್ ನಿಂದ ವಿಶ್ವದಲ್ಲೇ ಕ್ರೀಡಾ ಚಟುವಟಿಕೆಗಳು ನಿಂತು ಹೋಗಿದೆ. ಈ ಕಾರಣದಿಂದ ಮನೆಯಲ್ಲೇ ಕುಳಿತಿರುವ ಕ್ರಿಕೆಟ್ ಆಟಗಾರರು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ತಮ್ಮ ಕ್ರೀಡಾ ಅನುಭವವನ್ನು ಹಂಚಿಕೊಳ್ಳಿತ್ತಿದ್ದಾರೆ. ಅಂತಯೇ ರೋಹಿತ್ ಶರ್ಮಾ ಅವರು ಭಾರತದ ವೇಗಿ ಮೊಹಮ್ಮದ್ ಶಮಿ ಅವರ ಜೊತೆ ಲೈವ್ ಬಂದಿದ್ದು, ಈ ವೇಳೆ ತಾನು ಎದುರಿಸಿದ ಬೆಸ್ಟ್ ಬೌಲರ್ ಗಳ ಬಗ್ಗೆ ಮಾತನಾಡಿದ್ದಾರೆ.

    ಲೈವ್‍ನಲ್ಲಿ ಮಾತನಾಡುತ್ತಿದ್ದ ಶಮಿ ಅವರು ರೋಹಿತ್ ಶರ್ಮಾವರನ್ನು ಸದ್ಯದ ಪರಿಸ್ಥಿತಿಯಲ್ಲಿ ನಿಮಗೆ ಇಷ್ಟವಾಗುವ ಇಬ್ಬರು ಬೌಲರ್ ಗಳ ಹೆಸರನ್ನು ತಿಳಿಸಿ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ರೋಹಿತ್ ನನಗೆ ಈ ಪ್ರಸ್ತುತ, ಸೌತ್ ಆಫ್ರಿಕಾದ ವೇಗಿ ಕಗಿಸೊ ರಬಡಾ ಮತ್ತು ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜೆಲ್‍ವುಡ್ ಎಂದರೆ ಇಷ್ಟ ಎಂದಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ಬ್ರೆಟ್ ಲೀ ಮತ್ತು ಸೌತ್ ಆಫ್ರಿಕಾದ ಡೇಲ್ ಸ್ಟೇನ್ ಅವರನ್ನು ಎದುರಿಸುವುದು ಕಷ್ಟ ಎಂದು ತಿಳಿಸಿದ್ದಾರೆ.

    ನಾನು ಭಾರತ ತಂಡಕ್ಕೆ ಆಯ್ಕೆ ಆಗಿ ಬಂದಾಗ ಆಗ ಸದ್ಯಕ್ಕೆ ಬ್ರೆಟ್ ಲೀ ಅವರು ವಿಶ್ವದಲ್ಲೇ ಡೆಡ್ಲಿ ವೇಗದ ಬೌಲರ್ ಆಗಿದ್ದರು. ನಂತರ ನಾನು ಸೌತ್ ಆಫ್ರಿಕಾ ವಿರುದ್ಧ ನನ್ನ ಮೊದಲ ಏಕದಿನ ಸರಣಿ ಆಡಲು ಐರ್ಲೆಂಡ್‍ಗೆ ಹೋಗಿದ್ದೆ. ಆಗ ಡೇಲ್ ಸ್ಟೇನ್ ಅವರ ವಿರುದ್ಧ ಆಡಲು ತುಂಬ ಕಷ್ಟವಾಗಿತ್ತು. ಹಾಗಾಗಿ ನಾನು ಲೀ ಮತ್ತು ಸ್ಟೇನ್ ಅವರನ್ನು ತುಂಬ ಇಷ್ಟಪಡುತ್ತೇನೆ. ಜೊತೆಗೆ ಅವರ ವಿರುದ್ಧ ಬ್ಯಾಟ್ ಬೀಸುವುದು ತುಂಬ ಕಷ್ಟ ಎಂದು ಹಿಟ್‍ಮ್ಯಾನ್ ಹೇಳಿದ್ದಾರೆ.

    ಈಗ ಇರುವ ಪ್ರಸ್ತುತ ಬೌಲರ್ ಗಳಲ್ಲಿ ನನಗೆ ರಬಡಾ ಮತ್ತು ಹ್ಯಾಜೆಲ್‍ವುಡ್ ಬಹಳ ಇಷ್ಟವಾಗುತ್ತಾರೆ. ಏಕೆಂದರೆ ರಬಡಾ ಬಹಳ ಒಳ್ಳೆಯ ಬೌಲರ್ ಜೊತೆಗೆ ಅಕ್ರಮಣಕಾರಿಯಾಗಿ ಬೌಲಿಂಗ್ ಮಾಡುತ್ತಾರೆ. ಅಂತಯೇ ಜೋಶ್ ಹ್ಯಾಜೆಲ್‍ವುಡ್ ಕೂಡ ಒಳ್ಳೆಯ ಬೌಲರ್ ಅವರು ಶಿಶ್ತುಬದ್ಧವಾಗಿ ಬೌಲ್ ಮಾಡುತ್ತಾರೆ ಎಂದು ರೋಹಿತ್ ಶರ್ಮಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಪ್ರಸ್ತುತ ಪೀಳಿಗೆಯ ಅತ್ಯಂತ ಪ್ರತಿಭಾನ್ವಿತ ಬ್ಯಾಟ್ಸ್ ಮನ್ ಎಂದು ಪರಿಗಣಿಸಲ್ಪಟ್ಟ 33 ವರ್ಷದ ರೋಹಿತ್ 2007ರಲ್ಲಿ ಟೀಂ ಇಂಡಿಯಾಗೆ ಪ್ರವೇಶ ಪಡೆದರು. ಆದಾಗ್ಯೂ ಅವರು ಮೊದಲ ಆರು ವರ್ಷಗಳ ಕಾಲ ಉತ್ತಮ ಪ್ರದರ್ಶನ ನೀಡಲು ಹೆಣಗಾಡಿದರು. ಈ ವೇಳೆ ತಂಡದ ನಾಯಕನಾಗಿದ್ದ ಎಂ.ಎಸ್.ಧೋನಿ ಅವರನ್ನು ಓಪನರ್ ಆಗಿ ಮೈದಾನಕ್ಕಿಳಿಸಿದ ಮೇಲೆ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡರು.

    ರೋಹಿತ್ ಅವರು ವೈಟ್-ಬಾಲ್ ಕ್ರಿಕೆಟ್‍ನ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 3 ಬಾರಿ ಏಕದಿನ ದ್ವಿಶತಕ ಗಳಿಸಿದ ಏಕೈಕ ಬ್ಯಾಟ್ಸ್ ಮನ್ ರೋಹಿತ್ ಏಕದಿನ, ಟಿ-20 ಹಾಗೂ ಟೆಸ್ಟ್ ನಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ರೋಹಿತ್ ಶರ್ಮಾ 2013, 2014ರಲ್ಲಿ ಶ್ರೀಲಂಕಾ ಮತ್ತು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಬಾರಿಸಿದ್ದರು. ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ನಂತರ ಈ ಸಾಧನೆ ಮಾಡಿದ ಮೂರನೇ ಭಾರತದ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.

  • ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ?- ಬ್ರೆಟ್ ಲೀ

    ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ?- ಬ್ರೆಟ್ ಲೀ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಬ್ರೆಟ್ ಲೀ, ”ಲಿಟಲ್ ಮಾಸ್ಟರ್ ಸಚಿನ್ ಅವರ ದಾಖಲೆಯನ್ನು ಮುರಿಯುವುದು ಸುಲಭದ ವಿಷಯವಲ್ಲ. ಸಚಿನ್ ಕ್ರಿಕೆಟ್ ದೇವರು. ಹೀಗಾಗಿ ದೇವರಿಗಿಂತ ಯಾರಾದರೂ ಉತ್ತಮವಾಗಬಹುದೇ? ಇದಕ್ಕಾಗಿ ನಾವು ಕಾಯುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ. ಎಲ್ಲವನ್ನೂ ಕಾದು ನೋಡೋಣ” ಎಂದು ಹೇಳಿದ್ದಾರೆ.

    ಅಂಕಿಅಂಶಗಳನ್ನ ಗಮನಿಸಿದರೆ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಏಳರಿಂದ ಎಂಟು ವರ್ಷಗಳ ಕ್ರಿಕೆಟ್‍ನಲ್ಲಿ ಅವರು ಗಳಿಸಿದ ರನ್ ಖಂಡಿತವಾಗಿಯೂ ಸಚಿನ್ ಅವರ ದಾಖಲೆಯನ್ನು ಮುರಿಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ಅವರನ್ನ ಸಚಿನ್‍ಗೆ ಹೋಲಿಕೆಯಾಗಬಹುದೆಂದು ನಾನು ಭಾವಿಸಲು ಮೂರು ಕಾರಣಗಳಿವೆ ಎಂದು ಬ್ರೆಟ್ ಲೀ ಹೇಳಿದರು. ಮೊದಲ ಮತ್ತು ಪ್ರಮುಖ ಕಾರಣವೆಂದರೆ ವಿರಾಟ್ ಖಂಡಿತವಾಗಿಯೂ ಪ್ರತಿಭಾವಂತ ಬ್ಯಾಟ್ಸ್‍ಮನ್. ಎರಡನೆಯ ಕಾರಣ ಅವರ ಫಿಟ್‍ನೆಸ್. ಕೊಹ್ಲಿ 30ನೇ ವಯಸ್ಸಿನಲ್ಲಿಯೂ ಸಾಕಷ್ಟು ಫಿಟ್ ಆಗಿದ್ದಾರೆ. ಮೂರನೆಯ ಕಾರಣವೆಂದರೆ ದೊಡ್ಡ ಗುರಿಗಳನ್ನು ಸಾಧಿಸಲು ಅವರಿಗೆ ಮಾನಸಿಕ ಶಕ್ತಿ ಇದೆ. ಅವರು ತಮ್ಮ ಪ್ರತಿಭೆಯಿಂದ ಸುಲಭವಾಗಿ ಸಾಧನೆ ಮಾಡುತ್ತಾರೆ. ವಿರಾಟ್ ಸದೃಢರಾಗಿದ್ದರೆ ಇದು ಅವರ ಮಾನಸಿಕ ಶಕ್ತಿ ಎಂದು ಹೇಳಬಹುದು ಎಂದು ಬ್ರೆಟ್ ಲೀ ತಿಳಿಸಿದ್ದಾರೆ.

    ಸಚಿನ್ ತೆಂಡೂಲ್ಕರ್ ಅವರ 47ನೇ ಹುಟ್ಟುಹಬ್ಬಕ್ಕೆ ಬ್ರೆಟ್ ಲೀ ಶುಭಕೋರಿದ್ದರು. ”ಜನ್ಮದಿನದ ಶುಭಾಶಯಗಳು ಲೆಜೆಂಡ್. ಈಗ ಮೈದಾನದಲ್ಲಿ ಯುದ್ಧಗಳು ಮುಗಿದಿವೆ. ನಮ್ಮ ಸ್ನೇಹ ಯಾವಾಗಲೂ ಉಳಿಯುತ್ತದೆ. ಸುರಕ್ಷಿತವಾಗಿರಿ ಮತ್ತು ಜನ್ಮದಿನವನ್ನು ಉತ್ತಮವಾಗಿ ಆಚರಿಸಿ” ಎಂದು ಶುಕ್ರವಾರ ಟ್ವೀಟ್ ಮಾಡಿದ್ದರು.

    ಮಾಸ್ಟರ್ ಬ್ಲಾಸ್ಟರ್ ಸಚಿನ್ 49 ಏಕದಿನ ಮತ್ತು 51 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 100 ಶತಕಗಳನ್ನು ಗಳಿಸಿದ ಏಕೈಕ ಆಟಗಾರ ಸಚಿನ್ ಆಗಿದ್ದಾರೆ. ತೆಂಡೂಲ್ಕರ್ ಅವರು 463 ಏಕದಿನ ಇನ್ನಿಂಗ್ಸ್ ಗಳಲ್ಲಿ 18,426 ರನ್ ಗಳಿಸಿ ಏಕದಿನ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್‍ಗಳಿಸಿದ ವಿಶ್ವದ ಸರ್ವಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 44 ಏಕದಿನ ಮತ್ತು 27 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಸಚಿನ್ ಅವರನ್ನು ಹಿಂದಿಕ್ಕಲು ವಿರಾಟ್‍ಗೆ ಇನ್ನೂ 29 ಶತಕಗಳ ಅಗತ್ಯವಿದೆ.

  • ರಾಯಚೂರಿನ ಬಾಲಕಿಯ ಬಾಳಲ್ಲಿ ಬೆಳಕು ತಂದ ಆಸ್ಟ್ರೇಲಿಯಾ ಕ್ರಿಕೆಟಿಗ ಬ್ರೆಟ್ ಲೀ

    ರಾಯಚೂರಿನ ಬಾಲಕಿಯ ಬಾಳಲ್ಲಿ ಬೆಳಕು ತಂದ ಆಸ್ಟ್ರೇಲಿಯಾ ಕ್ರಿಕೆಟಿಗ ಬ್ರೆಟ್ ಲೀ

    ರಾಯಚೂರು: ಆಸ್ಟ್ರೇಲಿಯಾ ಅಲ್‍ರೌಂಡರ್ ಕ್ರಿಕೆಟ್ ಆಟಗಾರ ಬ್ರೆಟ್ ಲೀ ರಾಯಚೂರಿನ ಬಾಲಕಿಗೆ ಹಣದ ಸಹಾಯ ಮಾಡಿ ಆಕೆಯ ಬಾಳಿಗೆ ಬೆಳಕು ನೀಡಿದ್ದಾರೆ.

    ಸಾಕ್ಷಿ ರಾಯಚೂರಿನ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಬಾಲನಗೌಡ ಕವಿತಾ ದಂಪತಿಯ ಪುತ್ರಿಯಾಗಿದ್ದು, ಈಕೆಗೆ ಒಂದು ವರ್ಷದವಳಿದ್ದಾಗಲೇ ಕಿವಿ ಕೇಳಿಸಲ್ಲ ಹಾಗೂ ಮಾತು ಬರಲ್ಲ ಎನ್ನುವುದು ಪೋಷಕರಿಗೆ ಸ್ಪಷ್ಟವಾಗಿತ್ತು. ಆದರೆ ಏನಾದರೂ ಪ್ರಯತ್ನ ಮಾಡಿ ಮಗಳಿಗೆ ಮಾತು ಬರುವ ಹಾಗೇ ಮಾಡಬೇಕು ಅಂತ ಬಾಲನಗೌಡ ಇನ್ನಿಲ್ಲದ ಪ್ರಯತ್ನಗಳನ್ನ ಮಾಡಿದ್ದರು.

    ಮೂರು ವರ್ಷಗಳ ಸತತ ಪ್ರಯತ್ನದಿಂದ ನಾಲ್ಕು ವರ್ಷದ ಸಾಕ್ಷಿ ಈಗ ಮಾತನಾಡುತ್ತಿದ್ದಾಳೆ. ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾಳೆ. ಸಾಕ್ಷಿಯ ಇಂದಿನ ಈ ಖುಷಿಗೆ ಆಸ್ಟ್ರೇಲಿಯನ್ ಕ್ರಿಕೆಟಿಗ ಬ್ರೆಟ್ ಲೀ ಕಾರಣವಾಗಿದ್ದಾರೆ. ಸಾಕ್ಷಿ ಚಿಕಿತ್ಸೆಗೆ ಬ್ರೆಟ್ ಲೀ 16 ಲಕ್ಷ ರೂ. ಸಹಾಯ ಮಾಡಿದ್ದಾರೆ.

    ಮಗಳಿಗೆ ಮಾತು ಬರುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಬಾಲನಗೌಡ ಸಿಂಧನೂರು, ರಾಯಚೂರಿನ ಆಸ್ಪತ್ರೆಗಳಲ್ಲಿ ತೋರಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಮೈಸೂರಿನ ಮಾನಸ ಗಂಗೋತ್ರಿ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಅಲ್ಲಿ ಹಿಯರಿಂಗ್ ಏಡ್ ಅಳವಡಿಸಿದರಾದರೂ ಶೇಕಡಾ 85ರಷ್ಟು ಕಿವುಡುತನ ಹಾಗೇ ಉಳಿದಿತ್ತು.

    ಕೊನೆಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ನೀಡಿದ ಚಿಕಿತ್ಸೆ ಫಲಕಾರಿಯಾಗಿದೆ. ಯೋಜನೆಯಡಿ ಶಿಫಾರಸ್ಸು ಮಾಡಿದ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಿರುವ ಬ್ರೆಟ್ ಲೀ ಶಸ್ತ್ರ ಚಿಕಿತ್ಸೆಯ ಖರ್ಚನ್ನು ಸಂಪೂರ್ಣ ಭರಿಸಿ ಸಾಕ್ಷಿಗೆ ಮಾತು ಕೊಟ್ಟಿದ್ದಾರೆ. ಮೊದಲೆಲ್ಲಾ ಕೇವಲ ಕೈಸನ್ನೆ ಮಾಡುತ್ತಿದ್ದ ಸಾಕ್ಷಿ ಈಗ ಹರಳು ಹುರಿದಂತೆ ಮಾತನಾಡುತ್ತಿದ್ದಾಳೆ.

    ಕಳೆದ ವರ್ಷವೇ ಶಸ್ತ್ರ ಚಿಕಿತ್ಸೆಯಾಗಿದ್ದು ಸಾಕ್ಷಿಗೆ ಮೆದುಳಿನಲ್ಲೊಂದು ಯಂತ್ರವನ್ನು ಅಳವಡಿಸಲಾಗಿದೆ. ಹೊರಗಡೆ ಒಂದು ಯಂತ್ರ ಜೋಡಿಸಲಾಗಿದೆ. ಇತ್ತೀಚೆಗೆ ಸಾಕ್ಷಿಯನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಬ್ರೆಟ್ ಲೀ ಅವಳ ಮಾತುಗಳನ್ನು ಕೇಳಿ ಖುಷಿ ವ್ಯಕ್ತಪಡಿಸಿದ್ದಾರೆ. ಮಗಳ ಸ್ಥಿತಿ ಕಂಡು ಮರಗುತ್ತಿದ್ದ ಪೋಷಕರು ಈಗ ಖುಷಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಯೋವೃದ್ಧನ ವೇಷ ಧರಿಸಿ ಕ್ರಿಕೆಟ್ ಆಡಿದ ಬ್ರೆಟ್ ಲೀ

    ವಯೋವೃದ್ಧನ ವೇಷ ಧರಿಸಿ ಕ್ರಿಕೆಟ್ ಆಡಿದ ಬ್ರೆಟ್ ಲೀ

    ಮುಂಬೈ: ಆರ್‌ಸಿಬಿ  ಸ್ಫೋಟಕ ಆಟಗಾರ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಆಟೋ ಹತ್ತಿ ಬೆಂಗಳೂರು ರೌಂಡ್ ಹೊಡೆದ ಘಟನೆ ಎಲ್ಲರಿಗೂ ತಿಳಿದಿದೆ. ಆದರೆ ಆಸೀಸ್ ಮಾಜಿ ಆಟಗಾರ ಬ್ರೆಟ್ ಲೀ ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟು ವೃದ್ಧನ ವೇಷ ಧರಿಸಿ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿ ಸುದ್ದಿಯಾಗಿದ್ದಾರೆ.

    ಸದ್ಯ ಐಪಿಎಲ್ ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಬ್ರೆಟ್ ಲೀ ಮುಂಬೈ ಶಿವಾಜಿ ಪಾರ್ಕ್ ತೆರಳಿ ಅಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಆಟವಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮದ ಭಾಗವಾಗಿ ಬ್ರೆಟ್ ಲೀ ಅಲ್ಲಿಗೆ ತೆರಳಿದ್ದರು ಎಂದು ವರದಿಯಾಗಿದೆ.

    ಮುಂಬೈನ ಶಿವಾಜಿ ಪಾರ್ಕ್ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರು ಅಭ್ಯಾಸ ನಡೆಸುತ್ತಿದ್ದ ಕಾರಣ ಹೆಚ್ಚು ಫೇಮಸ್. ಅದ್ದರಿಂದಲೇ ಇದೇ ಸ್ಥಳವನ್ನು ಬ್ರೆಟ್ ಲೀ ಆಯ್ಕೆ ಮಾಡಿ ಆಟವಾಡಲು ತೆರಳಿದ್ದರು.

    ವಯೋವೃದ್ಧರ ಹಾಗೇ ವೇಷಧರಿಸಿದ್ದ ಬ್ರೆಟ್ ಲೀ ನೇರವಾಗಿ ಮೈದಾನಕ್ಕೆ ಆಗಮಿಸಿ ಕ್ರಿಕೆಟ್ ಆಡುತ್ತಿದ್ದ ಹುಡುಗರಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಸಲಹೆ ಪಡೆದು ಆಟವಾಡಿದ್ದಾರೆ. ಬಳಿಕ ಭರ್ಜರಿ ಸಿಕ್ಸರ್ ಹಾಗೂ ಬೌಲಿಂಗ್ ಮಾಡಿ ಎಲ್ಲರನ್ನೂ ಅಚ್ಚರಿಗೆ ಗುರಿಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಅಲ್ಲಿನ ಹುಡುಗರು ಕುತೂಹಲದಿಂದ ಅವರ ಬಗ್ಗೆ ಪ್ರಶ್ನಿಸಿದ್ದು ಈ ವೇಳೆ ಬ್ರೆಟ್ ಲೀ ತಮ್ಮ ವೇಷ ತೆಗೆದು ಎಲ್ಲರನ್ನು ಅಚ್ಚರಿಗೆ ಗುರಿಮಾಡಿದ್ದಾರೆ. ಈ ವೇಳೆ ಅಲ್ಲಿನ ಹುಡುಗರೊಂದಿಗೆ ಸೆಲ್ಫಿಗೆ ಪೋಸ್ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ವಿಡಿಯೋವನ್ನು ಖಾಸಗಿ ವಾಹಿನಿ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.

  • ಧೋನಿಯ ಹೆಲಿಕಾಪ್ಟರ್ ಶಾಟ್ ಪ್ರಯತ್ನದಲ್ಲಿ ಸೆಹ್ವಾಗ್, ಬ್ರೇಟ್ ಲೀ ಫೇಲ್: ವಿಡಿಯೋ

    ಧೋನಿಯ ಹೆಲಿಕಾಪ್ಟರ್ ಶಾಟ್ ಪ್ರಯತ್ನದಲ್ಲಿ ಸೆಹ್ವಾಗ್, ಬ್ರೇಟ್ ಲೀ ಫೇಲ್: ವಿಡಿಯೋ

    ಮುಂಬೈ: ವಿರೇಂದ್ರ ಸೆಹ್ವಾಗ್, ಬ್ರೇಟ್ ಲೀ, ವಿವಿಎಸ್ ಲಕ್ಷ್ಮಣ್ ಧೋನಿಯ ಹೆಲಿಕಾಪ್ಟರ್ ಶಾಟ್ ಹೊಡೆಯುವ ಪ್ರಯತ್ನದಲ್ಲಿ ವಿಫಲರಾಗಿರುವ ವಿಡಿಯೋ ಈಗ ವೈರಲ್ ಆಗಿದೆ.

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ಧೋನಿಯ ತವರು ನೆಲ ರಾಂಚಿಯಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರರಾಗಿ ಭಾಗವಹಿಸಿದ್ದ ಟೀಂ ಇಂಡಿಯಾದ ಮಾಜಿ ಆಟಗಾರರಾದ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಆಸ್ಟ್ರೇಲಿಯಾ ಬೌಲರ್ ಬ್ರೇಟ್ ಲೀ ಹೆಲಿಕಾಪ್ಟರ್ ಶಾಟ್ ಹೊಡೆಯುವ ಪ್ರಯತ್ನ ನಡೆಸಿದ್ದಾರೆ.

    ಮೂವರು ಆಟಗಾರರು ಪ್ರಯತ್ನ ಪಟ್ಟರು ಬಾಲ್ ಬೌಂಡರಿ ಗೆರೆ ದಾಟಲಿಲ್ಲ. ಸ್ಟಾರ್ ವಾಹಿನಿ ಈ ಮೂರು ಮಂದಿ ಹೆಲಿಕಾಪ್ಟರ್ ಶಾಟ್ ಹೊಡೆಯುತ್ತಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದು ವೈರಲ್ ಆಗಿದೆ.

    ಕ್ಯಾಪ್ಟನ್ ಕೂಲ್ ಧೋನಿ ಹೆಲಿಕಾಪ್ಟರ್ ಶಾಟ್ ಹಿಂದೆ ನೋವಿನ ಕಥೆಯಿದೆ. ಧೋನಿ ಅವರಿಗೆ ಈ ರೀತಿಯ ಸಿಕ್ಸರ್ ಹೊಡೆಯುವುದನ್ನು ಕಲಿಸಿಕೊಟ್ಟವರು ಸ್ನೇಹಿತ ಮಾಜಿ ರಣಜಿ ಆಟಗಾರ ಸಂತೋಷ್ ಲಾಲ್. ಧೋನಿ ಮತ್ತು ಸಂತೋಷ್ ಲಾಲ್ ಈ ಹಿಂದೆ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಲಾಲ್ ಉತ್ತಮ ಬ್ಯಾಟ್ಸ್ ಮನ್ ಆಗಿದ್ದರು. ಇಬ್ಬರು ಒಟ್ಟಿಗೆ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಧೋನಿಗೆ ಹೆಲಿಕಾಪ್ಟರ್ ಶಾಟ್ ಹೊಡೆಯುವುದನ್ನು ಹೇಳಿಕೊಟ್ಟಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಸಂತೋಷ್ 2013ರ ಜೂನ್‍ನಲ್ಲಿ ಮೃತಪಟ್ಟಿದ್ದಾರೆ.

    https://youtu.be/smMJbz4L6Ho

    https://youtu.be/UtuHRJEGo8I

    https://youtu.be/4PN-Cgkl9aA

    https://youtu.be/Qxw6IKyFr94