Tag: breathing

  • ಬೇಯಿಸಿದ ಮೊಟ್ಟೆಯಿಂದ ಪ್ರಾಣ ಬಿಟ್ಟ ಮಹಿಳೆ

    ಬೇಯಿಸಿದ ಮೊಟ್ಟೆಯಿಂದ ಪ್ರಾಣ ಬಿಟ್ಟ ಮಹಿಳೆ

    ಹೈದರಾಬಾದ್: ಊಟದ ವೇಳೆ ಬೇಯಿಸಿದ ಮೊಟ್ಟೆ ತಿನ್ನುವಾಗ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಮಹಿಳೆ ಮೃತಪಟ್ಟಿರುವ ಘಟನೆ ತೆಲಂಗಾಣದ ನೇರಳಪಲ್ಲಿಯಲ್ಲಿ ನಡೆದಿದೆ.

    ನೀಲಮ್ಮ ಮೃತಳು. ಬೇಯಿಸಿದ ಮೊಟ್ಟೆಯನ್ನು ತಿನ್ನಲು ಹೋಗಿ ಅದು ಗಂಟಲಿನಲ್ಲಿ ಸಿಲುಕಿ ಈಕೆ ಸಾವನ್ನಪ್ಪಿದ್ದಾಳೆ. ಒಂದು ಮೊಟ್ಟೆ ಮಹಿಳೆಯ ಜೀವವನ್ನು ತೆಗೆದಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

    ನೀಲಮ್ಮ ಊಟ ಮಾಡುತ್ತಿದ್ದಳು. ಈ ವೇಳೆ ಬೇಯಿಸಿದ ಮೊಟ್ಟೆಯನ್ನು ಕತ್ತರಿಸದೇ, ಹಾಗೇ ದೊಡ್ಡ ಮೊಟ್ಟೆಯನ್ನು ಬಾಯಿಯೊಳಗೆ ಹಾಕಿಕೊಂಡಿದ್ದಾಳೆ. ಈ ವೇಳೆ ಮೊಟ್ಟೆ ನೇರವಾಗಿ ಗಂಟಲಿಗೆ ಹೋಗಿದೆ. ಗಂಟಲಲ್ಲಿ ಮೊಟ್ಟೆ ಸಿಲುಕಿಕೊಂಡಿದೆ. ಆಗ ಮೊಟ್ಟೆ ಗಂಟಲಿನಿಂದ ಕೆಳಗೆ ಜಾರದೇ, ಹೊರಗೆ ಬಾರದೇ ನೀಲಮ್ಮನಿಗೆ ಉಸಿರಾಡಲು ಕಷ್ಟವಾಗಿದೆ. ಈ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಕುಟುಂಬಸ್ಥರು ಆಕೆಯ ಸಾವಿನ ಬಳಿಕ ಮೊಟ್ಟೆಯನ್ನು ಕತ್ತರಿಸಿ ತಿಂದಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ ಎಂದು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಮತ್ತೆ ಸರ್ಜಿಕಲ್‌ ಸ್ಟ್ರೈಕ್‌? – ಪಾಕಿಸ್ತಾನಕ್ಕೆ ಅಮಿತ್‌ ಶಾ ಎಚ್ಚರಿಕೆ

  • ಗೋರಿಯ ಚಾದರ್‌ನಲ್ಲಿ ಉಸಿರಾಟದ ಸುದ್ದಿ – ದರ್ಗಾದತ್ತ ಜನರು

    ಗೋರಿಯ ಚಾದರ್‌ನಲ್ಲಿ ಉಸಿರಾಟದ ಸುದ್ದಿ – ದರ್ಗಾದತ್ತ ಜನರು

    ಶಿವಮೊಗ್ಗ: ದರ್ಗಾದ ಗೋರಿಗೆ ಹೊದಿಸಿರುವ ಚಾದರ್‍ನಲ್ಲಿ ಉಸಿರಾಟದ ಅನುಭವವಾಗಿದೆ ಎನ್ನಲಾದ ಸುದ್ದಿಯೊಂದು ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಹರಿದಾಡಿದೆ. ಈ ಸುದ್ದಿ ಗ್ರಾಮದಲ್ಲಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಶಿರಾಳಕೊಪ್ಪದ ಹಜ್ರತ್ ಸೈಯದ್ ಶಾಹಿದ್ ಅಲಿ ಶಾ ಖಾದ್ರಿ ದರ್ಗಾಕ್ಕೆ ದೌಡಾಯಿಸಿದ್ದಾರೆ.

    ಶಿರಾಳಕೊಪ್ಪದ ಸಂತೆ ಮಾರುಕಟ್ಟೆ ಬಳಿ ಇರುವ ಹಜ್ರತ್ ಸೈಯದ್ ಶಾಹಿದ್ ಅಲಿ ಶಾ ಖಾದ್ರಿ ದರ್ಗಾದಲ್ಲಿ ಈ ವಿಸ್ಮಯ ನಡೆದಿದೆ ಎನ್ನಲಾಗಿದೆ. ಗೋರಿಯ ಮೇಲೆ ಹೊದಿಸಿರುವ ಚಾದರ್‌ನಲ್ಲಿ ಉಸಿರಾಟದ ಅನುಭವವಾಗಿದೆ ಅಂತ ಕೆಲವರು ಹೇಳಿದನ್ನ ಕೇಳಿ ಇದನ್ನು ವೀಕ್ಷಿಸಲು ದರ್ಗಾಗೆ ಜನರು ಭೇಟಿ ನೀಡುತ್ತಿದ್ದಾರೆ.

    ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಕಾರಣದಿಂದ ದರ್ಗಾದ ಬಳಿ ಸಾರ್ವಜನಿಕರು ಬಾರದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ. ಹಜ್ರತ್ ಸೈಯದ್ ಶಾಹಿದ್ ಅಲಿ ಶಾ, ಖಾದ್ರಿ ದರ್ಗಾಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇದೇ ಮೊದಲ ಬಾರಿಗೆ ಈ ರೀತಿಯ ವಿಸ್ಮಯ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ರೋಗಿ ಸಾವು

    ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ರೋಗಿ ಸಾವು

    ವಿಜಯಪುರ: ಜಿಲ್ಲೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವ್ಯಕ್ತಿಯೊಬ್ಬರು ನರಳಾಡಿ ಪ್ರಾಣ ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ.

    ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದ ರೋಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆ ಕಂಡು ಬಂದ ಕೂಡಲೇ ತಡ ರಾತ್ರೀ ವಿಜಯಪುರ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಈ ವೇಳೆ ಖಾಸಗಿ ಹಾಗೂ ಸರ್ಕಾರಿ ವೈದ್ಯರು ವ್ಯಕ್ತಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದರು.

    ರಾತ್ರಿ ಇಡೀ ಅಲೆದು ಕೊನೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ರೋಗಿ ಸಮೇತ ಪೋಷಕರು ಆಗಮಿಸಿದ್ದರು. ಕೊನೆಗೆ ಜಿಲ್ಲಾಧಿಕಾರಿಗಳ ಸೂಚನೆಯ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ತಡ ರಾತ್ರಿ ರೋಗಿ ಮೃತಪಟ್ಟಿದ್ದಾರೆ.

  • ಕೊರೊನಾದಿಂದ್ಲೇ ಚಿಕ್ಕಬಳ್ಳಾಪುರದ ಮಹಿಳೆ ಸಾವು- ಶ್ರೀರಾಮುಲು ದೃಢ

    ಕೊರೊನಾದಿಂದ್ಲೇ ಚಿಕ್ಕಬಳ್ಳಾಪುರದ ಮಹಿಳೆ ಸಾವು- ಶ್ರೀರಾಮುಲು ದೃಢ

    ಬೆಂಗಳೂರು: ಹೋಂ ಕ್ವಾರಂಟೈನ್ ನಲ್ಲಿದ್ದ ಚಿಕ್ಕಬಳ್ಳಾಪು ಜಿಲ್ಲೆಯ ಗೌರಿ ಬಿದನೂರಿನ ಮಹಿಳೆ ಕೊರೊನಾ ವೈರಸ್ ನಿಂದಲೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

    ಮೂಲತಃ ಆಂಧ್ರದ ಹಿಂದೂಪುರ ಮೂಲದ 70 ವರ್ಷದ ಮಹಿಳೆ ಮೆಕ್ಕಾ ಪ್ರವಾಸ ಕೈಗೊಂಡು ಕಳೆದ 9 ದಿನಗಳಿಂದ ಮಗನ ಮನೆಯಲ್ಲೇ ಕ್ವಾರಂಟೈನ್‍ನಲ್ಲಿದ್ದರು. ಮಂಗಳವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿತ್ತು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಶಂಕಿತ ವ್ಯಕ್ತಿ ಸಾವು

    ಪಬ್ಲಿಕ್ ಟಿವಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಪ್ರತಿಕ್ರಿಯಿಸಿ, ಮೆಕ್ಕಾ ಪ್ರವಾಸದಿಂದ ವಾಪಾಸ್ಸಾಗಿ ಮಗನ ಮನೆಯಲ್ಲಿ ಕ್ವಾರಂಟೈನ್ ಗೆ ಓಳಗಾಗಿದ್ದರು. 70 ವರ್ಷದ ಮಹಿಳೆಗೆ ರಕ್ತದೊತ್ತಡ ಇತ್ತು. ಅಷ್ಟೇ ಅಲ್ಲದೇ ಕಾಲಿಗೆ ಬೇರೆ ಗಾಯ ಮಾಡಿಕೊಂಡಿದ್ದರು. ಇದರ ಜೊತೆ ಹೃದಯದ ಸಮಸ್ಯೆ ಸಹ ಇತ್ತು. ಮಂಗಳವಾರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದರು ಎಮದು ತಿಳಿಸಿದ್ದರು.